Meaningful..thank u..kagga nijawagiyu sagga On Sep 8, 2016 7:04 AM, "csm cbpur" <[email protected]> wrote:
> > > *** This message has been sent using GIONEE M2 *** > > -------- Original Message -------- > Subject: ಬದುಕಿನೊಳಗೊಂದಾಗಿ ಬೆರೆತ ಮಂಕುತಿಮ್ಮನ ಕಗ್ಗದ ಸೊಬಗು: ಸುರೇಶ್ ಮಡಿಕೇರಿ | > ಪಂಜು > From: csm cbpur <[email protected]> > To: csm cbpur <[email protected]> > CC: > > ಬದುಕಿನೊಳಗೊಂದಾಗಿ ಬೆರೆತ ಮಂಕುತಿಮ್ಮನ ಕಗ್ಗದ ಸೊಬಗು: ಸುರೇಶ್ ಮಡಿಕೇರಿ > October 13th, 2014 editor > > ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ > ಕೊರತೆಯೊಂದನು ನೀನು ನೆನೆನೆನೆದು ಕೆರಳಿ > ಧರೆ ಎಲ್ಲವನು ಶಪಿಸಿ ಮನದಿ ನರಕವ ನಿಲಿಸಿ > ನರಳುವುದು ಬದುಕೇನೋ? ಮಂಕುತಿಮ್ಮ > > ಇದೇನೋ ಸೂರಿ ಏನೋ ಬಡಬಡಿಸ್ತಾ ಇದ್ದೀಯಾ? ಯಾರೀ ಮಂಕುತಿಮ್ಮ? ಎಂದು ಪ್ರಶ್ನಿಸಿದ ಸ್ನೇಹಿತನ > ಮೇಲೆ ಕೋಪ ಬಂದರೂ ತೋರ್ಪಡಿಸಿಕೊಳ್ಳದೆ ಏನೂ ಇಲ್ಲ ಕಣೋ ಅದು ಡಿ.ವಿ.ಜಿ ಅವರ ಕಗ್ಗ ಎಂದೆ. > ಹೌದಾ, ಏನಿದರ ಅರ್ಥ ಎಂದ ಅವನಿಗೆ ನನಗೆ ತಿಳಿದ ಮಟ್ಟಿಗೆ ವಿವರಿಸಿದೆ. ಮಂಗ ತನ್ನ ಮೈಮೇಲೆ > ಸ್ವಲ್ಪ ಗಾಯವಾದರೂ ಅದನ್ನು ಕೆರೆದು ಕೆರೆದು ಹೇಗೆ ದೊಡ್ಡದು ಮಾಡುತ್ತದೆಯೋ ಹಾಗೆ > ಮನುಷ್ಯರಾದ ನಾವು ನಮ್ಮ ಸಣ್ಣ ಸಣ್ಣ ದು:ಖ ನೋವನ್ನು ಮತ್ತೆ ಮತ್ತೆ ನೆನೆದು ನರಳುತ್ತೇವಲ್ಲ. > ಅಂತಹ ಬದುಕಿನ ಬಗ್ಗೆ ಡಿ.ವಿ.ಜಿಯವರು ಪ್ರಶ್ನಿಸುತ್ತಾರೆ. > > ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು > ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ > ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ > ಎಲ್ಲರೊಳಗೊಂದಾಗು- ಮಂಕುತಿಮ್ಮ > > ಜೀವನವನ್ನು ನಾವು ಬಂದ ಹಾಗೆ ಎದುರಿಸಬೇಕು. ಕಷ್ಟ ಸುಖ ಬಂದಾಗ ಅದನ್ನು ಸಮಾನವಾಗಿ > ಸ್ವೀಕರಿಸಬೇಕು. ಬೆಟ್ಟದ ಕೆಳಗಿನ ಹುಲ್ಲಿನಂತೆ ವಿನಯ, ವಿಧೇಯತೆಯನ್ನು ಅಳವಡಿಸಿಕೊಂಡು > ಮನೆಗೆ ಸುವಾಸನೆ ಬೀರುವ ಮಲ್ಲಿಗೆಯಂತೆ ಮೃದು ನಡೆ-ನುಡಿಯಿಂದ ಬಾಳಬೇಕು. ಜೀವನದಲ್ಲಿ ವಿಧಿ > ನೀಡುವ ಕಷ್ಟಗಳೆಂಬ ಮಳೆಗೆ ಹೆದರದೆ. ವಿಚಲಿತನಾಗದೆ ಕಲ್ಲಿನಂತಿರಬೇಕು, ನೊಂದವರಿಗೆ, > ಬಡವರಿಗೆ ಬೆಲ್ಲ ಸಕ್ಕರೆಯಂತೆ ಸಿಹಿಯಾಗಿ, ಪ್ರೀತಿಯನ್ನು ತೋರಬೇಕು. ಬಡವ-ಬಲ್ಲಿದರೆನ್ನದೆ > ಎಲ್ಲರಲ್ಲಿ ಒಂದಾಗಿ ಬಾಳಬೇಕು ಎಂಬ ಜೀವನತತ್ವವನ್ನು ಡಿ.ವಿ.ಜಿ ಅವರು ಸಾರುತ್ತಾರೆ. > > ಬದುಕಿನ ಬವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕೆಂದು ಸೂಚ್ಯವಾಗಿ ತಿಳಿಸುತ್ತಾರೆ. ಹೌದು > ಸೂರಿ ನೀನು ಇಷ್ಟೆಲ್ಲ ಹೇಳಿದ ಮೇಲೆ ಶಾಲೆಯಲ್ಲಿ ಓದಿದ ಕಗ್ಗಗಳ ನೆನಪಾಯಿತು. ಹಾಗಿದ್ದರೆ > ಅವರ ಬಗ್ಗೆ ನಿನಗೆ ಇನ್ನೇನು ಗೊತ್ತಿದೆ ಹೇಳು ನೋಡೋಣ ಎಂದೆ. ಇಲ್ಲಪ್ಪ ಅದೆಲ್ಲ ಮರೆತು > ಹೋಗಿದೆ. ಈಗೆಲ್ಲಿ ನೆನಪು, ನಿನಗೆ ಗೊತ್ತಿರುವುದನ್ನು ಹೇಳು ಅಂದ ನನ್ನ ಸ್ನೇಹಿತ. ನನಗೂ > ಡಿ.ವಿ.ಜಿ ಅವರೆಂದರೆ ಬಹಳ ಅಚ್ಚುಮೆಚ್ಚು. ಅವರ ಕಗ್ಗವೆಂದರೆ ಅತಿ ಪ್ರೀತಿ. ಅವರ ಬಗ್ಗೆ > ಹೇಳಲು ತುಂಬಾ ವಿಷಯಗಳಿವೆ. ಸಂಕ್ಷಿಪ್ತವಾಗಿ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳು. > > ಡಿ.ವಿ.ಜಿ ಅವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ೧೮೮೭ರ ಮಾರ್ಚ್ > ೧೭ರಂದು ಈಗಿನ ಕೋಲಾರ ಜಿಲ್ಲೆಯ ಮುಳಿಬಾಗಿಲು ತಾಲೂಕಿ( ಅಗಿನ ಮೈಸೂರು ರಾಜ್ಯ) ನಲ್ಲಿ ಅವರ > ಜನನವಾಯಿತು. ವೆಂಕಟರಮಣಯ್ಯ ಹಾಗೂ ಅಲಮೇಲಮ್ಮ ಅವರ ಮಾತಾಪಿತರು. ಅವರ ಮಾವ ತಿಮ್ಮಪ್ಪ ಹಾಗೂ > ಅಜ್ಜಿ ಸಾಕಮ್ಮ (ತಾಯಿಯ ತಾಯಿ) ಬಾಲ್ಯದಲ್ಲಿ ಇವರ ಮೇಲೆ ಗಾಢವಾದ ಪ್ರಭಾವ > ಬೀರಿದವರು.ಮೈಸೂರಿನ ಮಹಾರಾಜ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದರು. ಮೆಟ್ರಿಕ್ > ಪರೀಕ್ಷೆಯಲ್ಲಿ ಅವರು ತೇರ್ಗಡೆಯಾಗಲಿಲ್ಲ. ಮುಂದೆ ಶಾಲೆಯಲ್ಲಿ ತನ್ನ ಶಿಕ್ಷಣವನ್ನು > ಮುಂದುವರಿಸಲಿಲ್ಲ. ಆದರೆ ಅವರು ಎಂದಿಗೂ ನಿರಾಶವಾದಿಯಲ್ಲ. ಅವರು ಮುಂದೆ ಕಠಿಣ ಪರಿಶ್ರಮದಿಂದ > ಖಾಸಗಿಯಾಯಾಗಿ ವೇದ, ವೇದಾಂತ, ಸಂಸ್ಕ್ರತ, ರಾಮಾಯಣ, ಮಹಾಭಾರತ, ರಾಜ್ಯಶಾಸ್ತ್ರ, > ತತ್ವಶಾಸ್ತ್ರಗಳೊಂದಿಗೆ ದೇಶದ ಇತರ ಭಾಷೆಗಳನ್ನು ಕಲಿತುಕೊಂಡರು. ಇದರಿಂದ ಅಪಾರವಾದ > ಜ್ಞಾನವನ್ನು ಗಳಿಸಿಕೊಂಡರು. ಆದ್ದರಿಂದಲೇ ಡಿ.ವಿ.ಜಿಯವರು ಅಧ್ಯಯನಶೀಲ ಮನಸ್ಸು > ನಮ್ಮದಾಗಬೇಕೆಂದು ಹೇಳುತ್ತಿದ್ದರು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವಂತೆ ಅವರು ಸಲಹೆ > ನೀಡುತ್ತಿದ್ದರು. > > ನಂತರ ಇವರು ಶಿಕ್ಷಕರಾಗಿ, ತದನಂತರ ಕೋಲಾರ ಚಿನ್ನದ ಗಣಿಯಲ್ಲಿ ಜೀವನ ನಿರ್ವಹಣೆಗಾಗಿ ಕೆಲಸ > ಮಾಡುತ್ತಿದ್ದರು. ಬೆಂಗಳೂರಿಗೆ ಬಂದ ಡಿ.ವಿ.ಜಿಯವರು ’ಸೂರ್ಯೋದಯ’ ಪತ್ರಿಕೆಯಲ್ಲಿ > ವರದಿಗಾರರಾಗಿ ಕಾರ್ಯ ನಿರ್ವಹಿಸಿದರು. ಆದರೆ ಕಾರಣಾಂತರದಿಂದ ಆ ಪತ್ರಿಕೆ ಮುಚ್ಚಿಹೋಯಿತು. > ಹಲವಾರು ಪತ್ರಿಕೆಗಳಿಗೆ ಅವರು ಆಗ ಲೇಖನಗಳನ್ನು ಬರೆಯುತ್ತಿದ್ದರು. ಆಂಗ್ಲ ಪತ್ರಿಕೆಗೂ > ಲೇಖನಗಳನ್ನು ಬರೆದರು. ’ಮೈಸೂರು ಟೈಮ್ಸ್’ ಎಂಬ ಆಂಗ್ಲ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ > ಕಾರ್ಯನಿರ್ವಹಿಸಿದ್ದರು. ದಿವಾನ್ ರಂಗಾಚಾರ್ಯರ ಬಗ್ಗೆ ಅವರು ಬರೆದ ಲೇಖನದಿಂದ ಅವರ > ಜೀವನಕ್ಕೆ ಹೊಸ ತಿರುವು ದೊರೆಯಿತು. ನಂತರ ಬರವಣಿಗೆಯನ್ನು ಕೇವಲ ಹವ್ಯಾಸವನ್ನಾಗಿ > ಸ್ವೀಕರಿಸದೆ ವೃತ್ತಿಯನ್ನಾಗಿಸಿಕೊಂಡು ಸತತವಾಗಿ ಅಧ್ಯಯನ, ಬರವಣಿಗೆಯಲ್ಲಿ ತಮ್ಮನ್ನು > ತೊಡಗಿಸಿಕೊಂಡಿಸಿಕೊಂಡರು. ಅನುವಾದ, ಪ್ರಬಂಧ, ರಾಜಕೀಯ ವಿಶ್ಲೇಷಣೆ, ತತ್ವಶಾಸ್ತ್ರ, > ಧಾರ್ಮಿಕ ವಿಚಾರಗಳು, ಮಕ್ಕಳ ಕಥೆ, ಕಾವ್ಯ, ನಾಟಕ, ಧರ್ಮಜಿಜ್ಞಾಸೆ ಮೊದಲಾದ ವಿಷಯಗಳಲ್ಲಿ > ಅಧ್ಯಯನಪೂರ್ಣ ಬರವಣಿಗೆಗೆಳು, ಪುಸ್ತಕಗಳು ಪ್ರಕಟವಾದವು. ’ಬಾಳಿಗೊಂದು ನಂಬಿಕೆ, ದೇವರು, > ರಾಜ್ಯಶಾಸ್ತ್ರ, ಮ್ಯಾಕ್‌ಬೆತ್, ಭಗವದ್ಗೀತಾ ತಾತ್ಪರ್ಯ, ಈಸೋಪನಿಷತ್, ಮಂಕುತಿಮ್ಮನ ಕಗ್ಗ, > ಮರುಳಮುನಿಯನ ಕಗ್ಗ, ಓಮರನ ಹೊಸಗೆ ಮುಂತಾದವು ಪ್ರಮುಖ ಕೃತಿಗಳು. ಮಂಕುತಿಮ್ಮನ ಕಗ್ಗ ಅವರಿಗೆ > ಪ್ರಸಿದ್ಧಿಯನ್ನು ತಂದುಕೊಟ್ಟಿತು. ಇಂತಹ ಮನಸ್ಸನ್ನು ಮುಟ್ಟುವ, ಬುದ್ದಿಯನ್ನು ತಟ್ಟುವ, > ಹೃದಯದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವ ಶಕ್ತಿಯನ್ನೊಳಗೊಂಡ ಕಗ್ಗ ರಚಿಸಿದ ಕೀರ್ತಿ > ಡಿ.ವಿ.ಜಿ ಅವರದ್ದು. ತಾವು ನಂಬಿದ್ದನ್ನು ಅನುಭವಿಸಿದ್ದನ್ನು ಹಾಗೂ ಓದಿ ಕೇಳಿ, > ತಿಳಿದಿದ್ದನ್ನು ತಿಳಿಯಾಗಿ ಎಲ್ಲರಿಗೂ ತಿಳಿಯುವಂತೆ ತಿಳಿಸಿದ ಅವರ ಕಗ್ಗಗಳು > ವಿಶಿಷ್ಟವಾದದ್ದು. ಇವುಗಳ ತುಂಬ ಸ್ಪುರಿಸುವ ಅಧ್ಯಾತ್ಮಿಕ ಹಾಗೂ ಅನುಭಾವಗಳ ಸಂಚಾರ ನೇರವಾಗಿ > ಮನಸ್ಸಿಗೆ ತಟ್ಟುತ್ತವೆ. ಆದ್ದರಿಂದಲೇ ಅದು ಓದುಗನಿಗೆ ಇಷ್ಟವಾಗುತ್ತದೆ. > > ಇದು ಅವರ ಸಾಹಿತ್ಯ ಪರಿಚಾರಿಕೆಯಾದರೆ ಅವರೊಬ್ಬ ಉತ್ತಮ ಸಮಾಜಸೇವಕರೂ ಅಗಿದ್ದರು ಎನ್ನುವುದು > ಬಹುಶ: ನಿನಗೆ ಗೊತ್ತಿರಲಿಕ್ಕಿಲ್ಲ. ಅವರು ೧೯೩೫ರಲ್ಲಿ ’ಗೋಖಲೆ ಸಾರ್ವಜನಿಕ ವಿಚಾರ > ಸಂಸ್ಥೆ’ಯನ್ನು ಆರಂಭಿಸಿದರು. ತಮ್ಮ ಪುಸ್ತಕದಿಂದ ಬಂದ ಆದಾಯ, ತಮಗೆ ದೊರೆತ ಪುರಸ್ಕಾರದ ಹಣ, > ಜೊತೆಗೆ ತಮ್ಮ ಪುಸ್ತಕದ ಹಕ್ಕನ್ನು ತನ್ನ ಪರಿವಾರಕ್ಕೆ ನೀಡದೆ ಅವರು ಈ ಸಂಸ್ಥೆಗೆ ನೀಡಿದ್ದು > ಸಣ್ಣ ಮಾತಲ್ಲ. ಹೌದೇನು? ತನ್ನ ಸರ್ವಸ್ವವನ್ನು ಧಾರೆಯೆರೆದ ಇವರನ್ನು ಸರಕಾರ > ಗೌರವಿಸಲಿಲ್ಲವೇ? ಎಂದು ನನ್ನ ಸ್ನೇಹಿತ ಮತ್ತೆ ಮಧ್ಯೆ ಬಾಯಿ ಹಾಕಿದ. ನೋಡು ಗೆಳೆಯ > ಡಿ.ವಿ.ಜಿ ಅವರು ಎಂದಿಗೂ ಪ್ರಶಸ್ತಿ, ಪುರಸ್ಕಾರದ ಹಿಂದೆ ಬಿದ್ದವರಲ್ಲ. ಅವರ ಮುಖ್ಯ ಧ್ಯೇಯ > ಉನ್ನತ ಜೀವನಾದರ್ಶಗಳೇ ಆಗಿತ್ತು. ಅದನ್ನೇ ಅವರು ತಮ್ಮ ಕಗ್ಗದಲ್ಲಿ ಪಡಿಮೂಡಿಸಿದ್ದಾರೆ. > ಬದುಕಿನಲ್ಲಿ ಉಲ್ಲಾಸ ತುಂಬುವುದು, ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವುದು, ಧೈರ್ಯ > ತುಂಬುವುದು ಅವರ ಕಗ್ಗದ ಮೂಲ ಉದ್ದೇಶವಾಗಿತ್ತು. ಅದನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು > ಕೂಡಾ. ಆದ್ದರಿಂದಲೇ ಅವರನ್ನು ’ಆಧುನಿಕ ಬೃಹ್ಮ’ ಎಂದು ಕರೆದರು. > > ಡಿ.ವಿ.ಜಿ ಅವರು ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ > ಅಧ್ಯಕ್ಷರಾಗಿದ್ದರು. ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾಲಯ ಡಿ.ವಿ.ಜಿ ಅವರ ಸಾಹಿತ್ಯ ಮತ್ತು > ಪತ್ರಿಕೋದ್ಯಮದಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ ಡಿ.ಲಿಟ್ ಪದವಿ ನೀಡಿ ಗೌರವಿಸಿತು. > ೧೯೬೭ರಲ್ಲಿ ಶ್ರೀಮದ್ಭಾಗವತಾ ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ > ಪ್ರಶಸ್ತಿ ನೀಡಿ ಗೌರವಿಸಿತು. ೧೯೭೪ರಲ್ಲಿ ಭಾರತ ಸರಕಾರ ಪದ್ಮಭೂಷಣ ಪ್ರಸಸ್ತಿ ನೀಡಿ > ಗೌರವಿಸಿತು. ೧೯೮೮ರಲ್ಲಿ ಡಿ.ವಿ.ಜಿ ಅವರ ಅಂಚೆಚೀಟಿಯೂ ಬಿಡುಗಡೆಗೊಂಡಿತು. ಬ್ಯೂಗಲ್ > ಪಾರ್ಕಲ್ಲಿ ಅವರ ಪ್ರತಿಮೆಯೂ ಇದೆ. ೧೯೭೦ರಲ್ಲಿ ಆಗಿನ ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ > ಪಾಟೀಲ್ ಅವರು ೯೦,೦೦೦ರೂ ನಗದು ಬಹುಮಾನವನ್ನು ಅವರ ಸಾಹಿತ್ಯ ಸೇವೆಗೆ ಪುರಸ್ಕಾರವಾಗಿ > ನೀಡಿದ್ದರು. ಆದರೆ ಉದಾರಿಯಾದ ಡಿ.ವಿ.ಜಿಯವರು ಆ ಮೊತ್ತವನ್ನು ತಾನು ಸ್ಥಾಪಿಸಿದ ’ಗೋಖಲೆ > ಟ್ರಸ್ಟ್’ಗೆ ದಾನವಾಗಿ ನೀಡಿದ್ದರು. > > ಡಿ.ವಿ.ಜಿ ಅವರ ನಾಲ್ಕು ಸಾಲಿನ ಕಗ್ಗಗಳಲ್ಲಿ ಅಗಾಧವಾದ ಅರ್ಥಗಳು ಅಡಗಿವೆ. > > ಅಕ್ಕಿಯೊಳಗನ್ನವನು ಮೊದಲಾರು ಕಂಡವರು > ಅಕ್ಕರದ ಬರಹಕ್ಕೆ ಮೊದಲಿಗನದಾರು > ಲಿಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ > ದಕ್ಕುವುದೇ ಜಸ ನಿನಗೆ ’ಮಂಕುತಿಮ್ಮ’ > > ಈ ಕಗ್ಗವನ್ನೇ ನೋಡು. ನಾವು ಆಲೋಚಿಸದ ವಿಷಯಗಳ ಕುರಿತು ಅವರು ಬೆಳಕು ಚೆಲ್ಲುತ್ತಾರೆ. > ಅಕ್ಕಿಯನ್ನು ಬೇಯಿಸಿದರೆ ಅದು ಅನ್ನವಾಗಿ ಮಾರ್ಪಡುತ್ತದೆ ಎಂದು ಮೊದಲು ಯಾರು ಕಂಡು > ಹಿಡಿದವರೆಂದು ಯಾರಿಗಾದರೂ ಗೊತ್ತಿದೆಯೋ?, ಅಥವಾ ನಾವು ಬರೆಯುವಂತಹ ನಮ್ಮ ಪ್ರೀತಿಯ > ಅಕ್ಷರಗಳನ್ನು ಮೊದಲು ಬರೆದವನಾರು ಎಂದೇನಾದರೂ ಗೊತ್ತಿದೆಯೇ?, ಈ ಜಗತ್ತಿನಲ್ಲಿ ತನ್ನ > ಬಂಧುಗಳು ಯಾರು ಎಷ್ಟು ಎಂಬುದನ್ನು ಲೆಕ್ಕವಿರಿಸಿದವರು ಎಷ್ಟು ಜನರಿದ್ದಾರೆ ಹೇಳು? ಕೆಲವರು > ಹೆಸರು, ಕೀರ್ತಿಗಾಗಿ ಏನನ್ನೂ ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಅಂತಹವರಿಗೆ ಡಿ.ವಿ.ಜಿ > ಅವರು ಸೂಚ್ಯವಾಗಿ ಬುದ್ಧಿವಾದವನ್ನು ಹೇಳುತ್ತಾರೆ. ಕೀರ್ತಿ ಎನ್ನುವುದು ನಿನಗೆ ಬೇಕೇ? ಅದು > ದೊರೆಯುವುದೂ ಅಷ್ಟು ಸುಲಭವಲ್ಲ. ಅದಕ್ಕಾಗಿ ಸತತ ಪ್ರಯತ್ನ ಮಾಡಬೇಕು ಎಂಬ ತತ್ವ > ಅಡಗಿರುವುದನ್ನು ಎಂದು ನಾವು ಅರ್ಥೈಸಿಕೊಳ್ಳಬಹುದು. > > ’ಮಂಕುತಿಮ್ಮನ ಕಗ್ಗ’ ಎನ್ನುವುದು ಬಹಳ ವಿಸ್ತಾರವಾದ ವಿಷಯ. ಅದರ ಬಗ್ಗೆ ಹೇಳುವುದು, > ಬರೆಯುವುದು ಎಂದರೆ ಅದು ದುಸ್ಸಾಹಸವೇ ಸರಿ. ಅವರು ಬರೆದ ಎಲ್ಲ ಕಗ್ಗಗಳೂ ಸುಲಭದಲ್ಲಿ > ಅರ್ಥವಾಗುವುದಿಲ್ಲ. ಅದರಲ್ಲಿ ಅನೇಕ ಗೂಡಾರ್ಥಗಳೂ ಇವೆ. ಅದನ್ನು ಸರಿಯಾಗಿ ಓದಿ ಮನನ > ಮಾಡಿಕೊಂಡಾಗ ಅರ್ಥೈಸಿಕೊಳ್ಳಬಹುದು. ಇಂದು ಕನ್ನಡ ಓದುವವರು, ಮಾತನಾಡುವವರು > ಕಡಿಮೆಯಾಗುತ್ತಿದ್ದಾರೆ. ಕಗ್ಗದ ಮರ್ಮವನ್ನು ನಮ್ಮ ಮುಂದಿನ ಪೀಳಿಗೆಗೂ ಅರ್ಥೈಸುವಂತೆ > ಮಾಡಬೇಕಾಗಿದೆ. ಕಗ್ಗವನ್ನು ಎಲ್ಲರೂ ಸುಲಭವಾಗಿ ತಿಳಿದುಕೊಳ್ಳುವಂತೆ ಮಾಡುವಲ್ಲಿ ಹಿರಿಯ > ಸಾಹಿತಿಗಳು, ಕವಿಗಳು, ಮೇಧಾವಿಗಳು ಮಾಡಬೇಕಾಗಿದೆ. ನಾವು ಕರ್ನಾಟಕದವರು. ನಾವೇ ಕನ್ನಡ > ಓದಲಿಲ್ಲಾಂದ್ರೆ, ಇಂಥ ಅಮೂಲ್ಯ ಕೃತಿಗಳನ್ನು ಓದುವವರಾರು? ನಮ್ಮಲ್ಲಿ ಇಂದು ಆಂಗ್ಲ ವ್ಯಾಮೋಹ > ಹೆಚ್ಚುತ್ತಿದ್ದು ಕನ್ನಡ ಪರ ಕಾಳಜಿ ಕಡಿಮೆಯಾಗುತ್ತಿರುವುದು ಖೇದನೀಯ ಸಂಗತಿ ಅಲ್ಲವೇನೋ? > ಕನ್ನಡವನ್ನು ಕಲಿಯದೇ ಇದ್ದರೆ ನಮ್ಮ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳನ್ನು ಓದುವುದರಿಂದ > ನಾವು ವಂಚಿತರಾದಂತೆಯೇ. ಮಂಕುತಿಮ್ಮನ ಕಗ್ಗವಂತೂ ಕನ್ನಡದ ಭಗವದ್ಗೀತೆ ಅಂತಾರೆ. ಇದು > ಅರ್ಥೈಸಲು ಕಠಿಣ ಅನಿಸಿದರೆ ಶಿಕ್ಷಕರು ಮಕ್ಕಳಿಗೆ ಅದರ ಸಾರವನ್ನು ತಿಳಿಯಪಡಿಸಬೇಕು. ಆ ಮೂಲಕ > ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಬೇಕು. ಅಷ್ಟೇ ಅಲ್ಲ ನಾವು ಓದಿದ ಒಳ್ಳೆಯ ಪುಸ್ತಕದ > ಬಗ್ಗೆ ಸ್ನೇಹಿತರ, ಕುಟುಂಬದವರ ಜೊತೆ ಚರ್ಚಿಸಬೇಕು. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿದಂತೆ > ನಮ್ಮಲ್ಲಿ ಜ್ಞಾನಶಕ್ತಿ ಹೆಚ್ಚುತ್ತದೆ. ನಮ್ಮಲ್ಲಿ ಧನಾತ್ಮಕ ಅಂಶಗಳು ಹೆಚ್ಚಾಗುತ್ತದೆ. > > ಇರಲಿ ಬಿಡು ಈಗ ನಾವು ಮತ್ತೆ ಕಗ್ಗದ ಕಡೆ ಬರೋಣ. ನಾನು ನಿನ್ನಲ್ಲಿ ಹೇಳಿದೆನಲ್ಲ > ಮಂಕುತಿಮ್ಮನ ಕಗ್ಗ ಅದು ಆದಿ ಪ್ರಾಸದಲ್ಲಿ ಬರೆದಿರೋದು. ಸುಮಾರು ೯೪೫ ಪದ್ಯಗಳು ಅಥವಾ ನಾವು > ಕಗ್ಗ ಅಂತ ಏನು ಕರೆಯುತ್ತೇವೆಯೋ ಅದು ಇದರಲ್ಲಿ ಇದೆ. ಇದನ್ನು ಮುಕ್ತಕಗಳು, ಚೌಪದಿ ಅಂತಾನು > ಅನ್ನುತ್ತಾರೆ. ಡಿ.ವಿ.ಜಿ ಅವರು ಒಂದು ಕಡೆ > > ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ > ಅವನರಿವಿಗೆಟುಕುವೊಲೊಂದಾತ್ಮನಯವ > ಹವಣಿಸಿದನಿದನು ಪಾಮರಜನರ ಮಾತಿನಲಿ > ಕವನ ನೆನಪಿಗೆ ಸುಲಭ-ಮಂಕುತಿಮ್ಮ > > ನಾನು ಕವಿಯಲ್ಲ. ವಿಶೇಷವಾದ ಜ್ಞಾನವುಳ್ಳವನಲ್ಲ. ಈ ಕಗ್ಗವನ್ನು ನಾನು ಸಾಮಾನ್ಯ ಜನರಿಗಾಗಿ > ಬರೆದಿರುವೆನು. ಇದರಲ್ಲಿ ಜೀವನ ಸತ್ಯ, ಸತತ ಓದು ಹಾಗೂ ಅನುಭವದ ಸಾರವಿದೆ ಎಂದು > ಹೇಳಿಕೊಂಡಿದ್ದಾರೆ. ಈ ರೀತಿ ನಾಲ್ಕು ಸಾಲುಗಳಲ್ಲಿ ಬರೆದುದು ಓದಿ ನೆನಪಿಡುವುದು ಕೂಡಾ ಸುಲಭ > ಎಂದು ತಾನು ಆರಿಸಿಕೊಂಡ ಕಗ್ಗದ ಶೈಲಿಯ ಬಗ್ಗೆಯೂ ಹೇಳಿದ್ದಾರೆ. > > ನೋಡು ಈ ನಾಲ್ಕೇ ಸಾಲಿನ ಕಗ್ಗದಲ್ಲಿ ಬಹಳ ಅರ್ಥವ್ಯಾಪ್ತಿ ಅಡಗಿದೆ. ನಾವು ಮತ್ತೆ ಮತ್ತೆ > ಓದಿದಾಗ ಹೊಸ ಹೊಸ ಅರ್ಥಗಳು ಹೊಳೆಯುತ್ತದೆ. ಅಥವಾ ಬೇರೆ ಬೇರೆ ಓದುಗರು ಅದನ್ನು > ಭಿನ್ನವಾಗಿ ಅರ್ಥೈಸಿಕೊಳ್ಳಬಹುದು. ನಮ್ಮ ಅನುಭವ, ಚಿಂತನೆಯನ್ನೇ ಈ ಕಗ್ಗಗಳು > ಬಿಂಬಿಸುತ್ತವೆ. ಈ ಕಗ್ಗವನ್ನೇ ನೋಡು > > ಗಿಡದಿ ನಗುತ್ತಿರುವ ಹೂವು ಪ್ರಕೃತಿಸಖನಿಗೆ ಚಂದ > ಮಡದಿ ಮುಡಿದಿರುವ ಹೂವು ಯುವಕಂಗೆ ಚಂದ > ಗುಡಿಯೊಳಗೆ ಕೊಡುವ ಹೂವು ದೈವಭಕ್ತಗೆ ಚಂದ > ಬಿಡಿಗಾಸು ಹೂವಳಿಗೆ -ಮಂಕುತಿಮ್ಮ > > ಇಲ್ಲಿ ಪ್ರತಿಮೆ ಕೇವಲ ಒಂದು ಹೂವು. ಅದೇ ಹೂವು ಒಂದೊಂದು ಕಡೆಯಲ್ಲಿ ಒಬ್ಬೊಬ್ಬರಿಗೆ ಚಂದ. > ಪ್ರಕೃತಿಪ್ರಿಯರಿಗೆ ಅದು ಗಿಡದಲ್ಲಿ ಚಂದ ಕಂಡರೆ, ಯುವಕ ಅದನ್ನು ತನ್ನ ಮಡದಿಯ ಮುಡಿಯಲ್ಲಿ > ಕಂಡು ಆ ಸಂತೋಷವನ್ನು ಕಾಣುತ್ತಾನೆ. ದೇವರ ಅರ್ಚನೆಯ ನಂತರ ಆ ದೇವರ ಮುಡಿಯಲ್ಲಿನ ಹೂವನ್ನು > ದೈವಭಕ್ತರು ಭಕ್ತಿ ಶ್ರದ್ಧೆಯಿಂದ ಕಾಣುತ್ತಾರೆ. ಆದರೆ ಆ ಹೂವನ್ನು ಮಾರುವ ಹೂವಾಡಗಿತ್ತಿಗೆ > ಅದರಿಂದ ಬರುವ ಬಿಡಿಗಾಸು ಮಾತ್ರ ಮುಖ್ಯವಾಗಿರುತ್ತದೆ. ಅದು ಆಕೆಯ ಜೀವನ ನಿರ್ವಹಣೆಯ > ಮಾರ್ಗವಾಗಿರುತ್ತದೆ.ಇಂತಹ ತುಂಬ ಅರ್ಥ ಕೊಡುವ ನಾಲ್ಕೇ ಸಾಲಿನ ಕಗ್ಗಗಳು ಪ್ರತಿಯೊಬ್ಬರ > ಪ್ರೀತಿಯನ್ನು ಗಳಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ನೀನು ನಿನ್ನ ಜೀವನದ ಜಂಜಾಟದಲ್ಲಿ > ಅದನ್ನು ಮರೆತಿರಬಹುದು. ಆದರೆ ಅದರಲ್ಲಿನ ತತ್ವಗಳನ್ನು ನೀನು, ನಾನು, ಪ್ರತಿಯೊಬ್ಬರೂ > ಅನುಭವಿಸುತ್ತಾರೆ. ನಾನು ಹೇಳಿದ ಈ ಎಲ್ಲಾ ವಿಷಯಗಳಲ್ಲಿ ತಪ್ಪು ಕಂಡರೆ ಕ್ಷಮೆ ಇರಲಿ. ಆ > ತಪ್ಪುಗಳನ್ನು ಮತ್ತೆ ಮತ್ತೆ ಸರಿಪಡಿಸುವ ಭಾಗ್ಯ ದೊರೆಯಲಿ. ಕನ್ನಡ ಸಾಹಿತ್ಯದ ಇಂತಹ ಅಮೂಲ್ಯ > ಕೃತಿಗಳನ್ನು, ಕೃತಿಕಾರರನ್ನು ಸದೈವ ನೆನೆಯುವುದು ನಮ್ಮ ಕರ್ತವ್ಯ. ಒಬ್ಬ ಮಹಾನ್ > ತತ್ವಜ್ಞಾನಿ, ಪತ್ರಕರ್ತ, ಸಾಹಿತಿ, ಸಮಾಜಸೇವಕರಾಗಿದ್ದ ಡಿವಿ.ಜಿ ಅವರು ೧೯೭೫ರ ಅಕ್ಟೋಬರ್ > ೭ರಂದು ಇಹಲೋಕ ತ್ಯಜಿಸಿದರು. > > ನನಗೆ ಏನಾದರೂ ಬೇಸರ ಆದರೆ ನಾನು ಈ ಕಗ್ಗಗಳನ್ನು ನೆನಪಿಸಿಕೊಳ್ಳುತ್ತೇನೆ. ಮನಸ್ಸಿಗೆ > ನೋವಾದಾಗ ಕಗ್ಗಗಳನ್ನು ಮೆಲುಕು ಹಾಕುತ್ತಾ ಅದರಲ್ಲಿ ಅಡಗಿರುವ ತತ್ವವನ್ನು ಜೀವನದಲ್ಲಿ > ಅಳವಡಿಸುವ ಪ್ರಯತ್ನ ಮಾಡುತ್ತೇನೆ. ಹಾಗೆ ಇಂದು ನಿನ್ನಲ್ಲಿ ಈ ಎಲ್ಲಾ ವಿಷಯಗಳನ್ನು > ಹೇಳಿಕೊಂಡೆ ಕಣೋ. ಸಮಯದ ಅರಿವೇ ಆಗಲಿಲ್ಲ. ನಡಿ, ನಮ್ಮ ಕೆಲಸದ ಸಮಯವಾಯಿತು. ನನಗೆ ಸಮಯ > ಸಿಕ್ಕಾಗ ಓದುತ್ತೇನೆ. ನೀನು ಕೂಡಾ ಓದು. ಕನ್ನಡವನ್ನು, ಕನ್ನಡದ ಮಹಾನ್ ಸಾಹಿತಿಗಳನ್ನು > ಮರೆಯದೇ ನೆನಪಿಸಬೇಕಾದುದು ನಮ್ಮ ಕರ್ತವ್ಯ. ಸಿರಿಗನ್ನಡಂ > ಗೆಲ್ಗೆ. > > ***** > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
