ಅಕ್ಷರಶಃ ಸತ್ಯ.
On 9/8/16, Gireesha HP <[email protected]> wrote:
> ಛೇ ನಮ್ಮ ಶಿಕ್ಷಕರಿಂದಲೇ ಕಲಿತವರ ಸ್ಥಿತಿ ಹೀಗಾಯ್ತಲ್ಲ
> On 7 Sep 2016 6:02 pm, "hanumantha raju" <[email protected]> wrote:
>
> ಪಾಪ, ಮೇಷ್ಟ್ರು!
> 4 Sep, 2016
>
> ಮಕ್ಕಳಲ್ಲಿ ಆದರ್ಶ, ಆತ್ಮವಿಶ್ವಾಸ ಹಾಗೂ ಆತ್ಮಘನತೆಯನ್ನು ಬಿತ್ತಬೇಕಾದ ಕರ್ತವ್ಯ
> ಶಿಕ್ಷಕರದು. ಆದರೆ, ಇದೇ ಶಿಕ್ಷಕರು ತಮ್ಮ ಆದರ್ಶಗಳಿಂದ ವಿಮುಖರಾಗಬೇಕಾದ ಹಾಗೂ
> ಆತ್ಮವಿಶ್ವಾಸ – ಆತ್ಮಘನತೆಯನ್ನು ಕಳೆದುಕೊಳ್ಳಬೇಕಾದ ಸಂದರ್ಭ ಇಂದಿನದು. ಭ್ರಷ್ಟಾಚಾರದ
> ರಾಡಿಯಂತಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ ಒಂದು ಬಲಿಪಶು. ಯಾವ ಮೇಷ್ಟ್ರ ಅನುಭವವೂ
> ಆಗಬಹುದಾದ ಇಲ್ಲಿನ ಟಿಪ್ಪಣಿಗಳು ಶಿಕ್ಷಣ ವ್ಯವಸ್ಥೆ ಕೊಳೆತು ನಾರುತ್ತಿರುವುದನ್ನು
> ಸೂಚಿಸುವಂತಿವೆ.
> ಚಿತ್ರ– ಸಿದ್ರಪಾಲ
>
> ಇದು ಪ್ರಾಥಮಿಕ ಶಾಲಾಶಿಕ್ಷಕರ ಸಂಯಮದ ಸತ್ವಪರೀಕ್ಷೆಯ ಕಾಲ. ಕ್ಷಣ ಕ್ಷಣಕ್ಕೂ ಇಲ್ಲಿ
> ಆತ್ಮಾಘಾತಗಳು. ಸವಾಲಿರುವುದು ಕಲಿಸುವುದರಲ್ಲಿ ಅಲ್ಲ, ‘ಕಲಿಸುವವರಾಗಿ’ ಉಳಿಯುವುದರಲ್ಲಿ.
> ಮಕ್ಕಳ ಪಾಲಿನ ಗುರುಗಳು ಅಧಿಕಾರಶಾಹಿಗೆ ಗುಲಾಮರು! ಈ ಕಾರಣದಿಂದಲೇ ಬಹುತೇಕ ಶಿಕ್ಷಕರು
> ‘ಸಾಕಪ್ಪಾ ಈ ಕೆಲಸ’ ಎನ್ನುವ ಹತಾಶ ಮನೋಭಾವದಲ್ಲಿದ್ದಾರೆ. ಕೆಲವರಂತೂ ಪರ್ಯಾಯ ಉದ್ಯೋಗದ
> ಬಗ್ಗೆ ಯೋಚಿಸಿದ್ದಾರೆ. ಯಾವ ಶಿಕ್ಷಕನೂ ಇಂದು ನೆಮ್ಮದಿಯ ಮನೋಭಾವದಲ್ಲಿ ಮಕ್ಕಳಿಗೆ ಕಲಿಸಿ,
> ತೃಪ್ತಿಯಿಂದ ಮನೆಗೆ ಬರುವ ವಾತಾವರಣ ಇಲ್ಲ.
>
> ಘನತೆಯ, ಆತ್ಮತೃಪ್ತಿಯ ಮಹೋನ್ನತ ಸ್ಥಾನ ಎಂದು ನಂಬಿಕೊಂಡು ಶಿಕ್ಷಕ ವೃತ್ತಿಗೆ ಸೇರಿದ ಒಬ್ಬ
> ಶಿಕ್ಷಕರ ಅನುಭವ ಕೇಳಿ. ತಾನು ಕೆಲಸ ಮಾಡುವ ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡು
> ಈ ಮೇಷ್ಟ್ರು, ಹೊಸ ಶಾಲೆಗೆ ಬಂದ ಮೊದಲ ದಿನವೇ ಬಿಇಒ ಅವರಿಂದ ತೊಂದರೆ ಎದುರಿಸಬೇಕಾಯಿತು.
> ‘ಚಾಲನಾ ಆದೇಶಪತ್ರ’ ಕೊಡಲು ದುಡ್ಡು ಕೇಳಿದಾಗ ಮೇಷ್ಟ್ರು ಹೌಹಾರಿದ್ದರು.
>
> ಕ್ಷೇತ್ರ ಶಿಕ್ಷಣಾಧಿಕಾರಿ ಜೇಬಿಗೇ ಕೈಯಿಟ್ಟು ಇದ್ದುದೆಲ್ಲವನ್ನೂ ಕಸಿದುಕೊಂಡಾಗ
> ಅಸಹಾಯಕತೆಯಿಂದ ಒದ್ದಾಡುವ ಸ್ಥಿತಿ ಆ ಶಿಕ್ಷಕರದು. ‘ಅದು ತೀರಾ ಒಬ್ಬಂಟಿತನ ಅನುಭವಿಸಿದ
> ದಿನ. ಹೆತ್ತವರಿಂದ ತುಂಬಾ ದೂರ ಬಂದುಬಿಟ್ಟಿದ್ದೆ. ಕನಿಷ್ಠ ವಿಶ್ವಾಸದಿಂದ ಮಾತನಾಡಿಸಲೂ
> ಯಾರೂ ಇರಲಿಲ್ಲ. ನನ್ನ ಮೈಮೇಲೆ ಬಿದ್ದ ಮನುಷ್ಯನಿಗೆ ನಾನು ಏನೂ ಹೇಳದ ಸ್ಥಿತಿಯಲ್ಲಿದ್ದೆ.
> ಮುಂದಿನ ಎರಡು ದಿನ ತುತ್ತು ಅನ್ನಕ್ಕೂ ಪರದಾಡಿದ್ದೆ’ ಎನ್ನುವಾಗ ಮೇಷ್ಟ್ರ ಮಾತುಗಳಲ್ಲಿ
> ವಿಷಾದ ಸುಳಿದುಹೋಗುತ್ತದೆ.
>
> ತೇಜೋವಧೆ ಮತ್ತು ಲಂಚಾವತಾರ
> ಅಧಿಕಾರ ಎನ್ನುವುದು ವ್ಯವಸ್ಥೆಯ ಸತ್ವವನ್ನು ಹೆಚ್ಚಿಸುವ ಪೋಷಕಾಂಶವಾಗಬೇಕು. ಕೆಳಸ್ತರದ
> ನೌಕರರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಕಾರ್ಯಸಾಧನೆಗೆ ಪ್ರೇರಣೆಯಾಗಬೇಕು. ಆದರೆ, ಶಿಕ್ಷಣ
> ಇಲಾಖೆಯಲ್ಲಿ ಅಧಿಕಾರ ಎನ್ನುವುದು ದರ್ಪದ ಹಾಗೂ ಶಿಕ್ಷಕರ ತೇಜೋವಧೆ ಮಾಡುವ ಮಾರ್ಗವಾಗಿದೆ.
>
> ಮಾರ್ಗದರ್ಶನ ಆಗಬೇಕಿದ್ದ ಅಧಿಕಾರ, ‘ತಪಾಸಣೆ’ ಎನ್ನುವ ಪೊಲೀಸ್ ಪರಿಭಾಷೆಯನ್ನು
> ರೂಢಿಸಿಕೊಂಡಿದೆ. ಈ ತಪಾಸಣೆ ಎನ್ನುವುದು ‘ಶಾಲೆಯಲ್ಲಿ ಇರುವವರೆಲ್ಲ ಈಗಾಗಲೇ ತಪ್ಪು
> ಮಾಡಿದ್ದಾರೆ, ಅವರನ್ನು ಶಿಕ್ಷಿಸಲೇಬೇಕು ಎಂಬ ಪೂರ್ವಕಲ್ಪಿತ ಧೋರಣೆಯೊಂದಿಗೆ ಶಾಲೆಯ ಮೇಲೆ
> ನಡೆಯುವ ‘ದಾಳಿ’. ಸರ್ಕಾರಿ ಭಾಷೆಯಲ್ಲಿ ಇದರ ಹೆಸರು ‘ಮಿಂಚಿನ ಸಂಚಾರ’. ಮಿಂಚು ವಿನಾಶಕಾರಿ,
> ಅದು ಸಂಚರಿಸಿದಲ್ಲೆಲ್ಲ ಫಲವತ್ತಾದ ಭೂಮಿ ಬರಡಾಗುತ್ತದೆ. ಇಲ್ಲಿ ಆಗುತ್ತಿರುವುದೂ ಅದೇ.
>
> ಇಲ್ಲೊಬ್ಬ ವಿಷಯ ಪರಿವೀಕ್ಷಕರಿದ್ದಾರೆ. ವರ್ಷಕ್ಕೊಮ್ಮೆ ಅವರು ಶಾಲೆಗಳಿಗೆ ವಿಶೇಷ
> ಭೇಟಿಗಳನ್ನು ಹಮ್ಮಿಕೊಳ್ಳುತ್ತಾರೆ. ಅವರ ಭೇಟಿಯ ದಿನಾಂಕಗಳು ಬಂದವೆಂದರೆ ಕೆಲ
> ಶಿಕ್ಷಕರಿಗಂತೂ ಜೀವ ಬಾಯಿಗೆ ಬಂದಂತಾಗುತ್ತದೆ. ಏಕೆಂದರೆ ಅವರು ಶಾಲೆಗೆ ಬಂದು ಬರಿಗೈಲಿ
> ವಾಪಸ್ ಹೋಗುವುದಿಲ್ಲ. ಕನಿಷ್ಠ ಮೂರು ಸಾವಿರ ರೂಪಾಯಿಯಾದರೂ ಅವರಿಗೆ ಬೇಕೇಬೇಕು. ದುಡ್ಡಿನ
> ಜೊತೆ ನೆಮ್ಮದಿಯನ್ನೂ ಅವರು ಕೆದಕಿ ಹೋಗುತ್ತಾರೆ.
>
> ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ ಪಾಥಮಿಕ ಶಾಲೆಯಲ್ಲಿ ಸಾವಿರ ಅವಕಾಶಗಳಿವೆ. ಎಲ್ಲವನ್ನೂ
> ನೆಟ್ಟಗಿಟ್ಟುಕೊಂಡಮೇಲೂ ಈ ಮನುಷ್ಯ ಎಲ್ಲಿಯವರೆಗೂ ಕೆದಕುತ್ತಾರೆಂದರೆ, ಹಿಂದೆ ನಡೆದ
> ಪರೀಕ್ಷೆಯ ಉತ್ತರ ಪತ್ರಿಕೆಗಳನ್ನ ತರಿಸಿ, ಆಯಾ ಮಕ್ಕಳನ್ನು ಸರದಿಯಲ್ಲಿ ನಿಲ್ಲಿಸಿ,
> ಪ್ರಶ್ನೆ ಕೇಳಲು ಪ್ರಾರಂಭಿಸುತ್ತಾರೆ! ಇಂಥವರು ಒಂದುಕಡೆಯಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ
> ಇದ್ದಾರೆ.
>
> ಪ್ರತಿ ಶಾಲೆಯಲ್ಲೂ ವಾರ್ಷಿಕ ‘ತಪಾಸಣೆ’ಯ ನಾಟಕಗಳು ನಡೆಯುತ್ತವೆ. ಅಧಿಕಾರಿಗಳು ಬದಲಾದಂತೆ
> ಲಂಚದ ಮೊತ್ತಗಳು ಬದಲಾಗುತ್ತವೆ. ಪರಿಶ್ರಮ ಪಟ್ಟು ಮಕ್ಕಳ ಏಳಿಗೆಗೆ ದುಡಿದವರಿರಲಿ,
> ದುಡಿಯದವರಿರಲಿ – ಎಲ್ಲರೂ ಪಾಲು ಕೊಡಲೇಬೇಕು. ಇದೊಂದು ಮುಕ್ತ ಒಪ್ಪಿತ ಕಹಿಸತ್ಯ.
>
> ತಪ್ಪು ಮಾಡಿದ ಶಿಕ್ಷಕರಿಗೆ ಜ್ಞಾಪನಾ ಪತ್ರ ಬರುವುದು ಒಂದು ಆಡಳಿತಾತ್ಮಕ ಪ್ರಕ್ರಿಯೆ.
> ಇದಕ್ಕೆ ಉತ್ತರ ಬರೆದುಕೊಂಡು, ಜೊತೆಗೆ ದುಡ್ಡೂ ತೆಗೆದುಕೊಂಡು ಹೋದರೆ ಅಲ್ಲಿಗೆ ಆ ಪ್ರಹಸನ
> ಅಂತ್ಯ. ಇಲ್ಲಿ ಮಧ್ಯವರ್ತಿಗಳ ಕಾರ್ಯ ಶ್ಲಾಘನೀಯ! ತಮಾಷೆ ಎಂದರೆ, ಶಿಕ್ಷಕರ ಆತ್ಮಗೌರವವನ್ನು
> ಎತ್ತಿಹಿಡಿಯಬೇಕಾದ ‘ಶಿಕ್ಷಕರ ಸಂಘಟನೆ’ ಇಲ್ಲಿ ಲಂಚ ಕೊಡಿಸಲು ಮಧ್ಯವರ್ತಿಯಾಗಿ ಕೆಲಸ
> ಮಾಡುತ್ತಿದೆ.
>
> ಶಿಕ್ಷಕರಿಗೆ ನ್ಯಾಯವಾಗಿ ದೊರೆಯಬೇಕಾದ ಅನುಕೂಲಗಳನ್ನು ದೊರಕಿಸಿಕೊಡುವುದಕ್ಕಾಗಿ ಸಾಮೂಹಿಕ
> ಲಂಚ ವಸೂಲಾತಿ ಒಮ್ಮೊಮ್ಮೆ ನಡೆಯುತ್ತದೆ. ನಿಕಟಸೇವಾಪೂರ್ವ ಅವಧಿಯನ್ನು ಘೋಷಿಸುವುದಿರಲಿ,
> ವರ್ಗಾವಣೆ ಆದೇಶ ಪಡೆಯುವುದಕ್ಕಿರಲಿ, ಹಾಜರಾಗುವುದಕ್ಕಿರಲಿ, ಇಂಕ್ರಿಮೆಂಟ್ ಇರಲಿ, ಟೈಮ್
> ಬಾಂಡ್ ಇರಲಿ – ಲಂಚ ಎಲ್ಲದಕ್ಕೂ ಕಡ್ಡಾಯ. ಇದು ಆಡಳಿತಾತ್ಮಕ ಬೇನೆಯಾದರೆ, ಸಂಘಟನೆಯದ್ದು
> ಮತ್ತೊಂದು ರೀತಿ.
>
> ಯಾವುದೇ ಒಬ್ಬ ಸೇವಾನಿರತನ ಸಂಬಳದಿಂದ ದುಡ್ಡನ್ನು ಕಡಿತ ಮಾಡಬೇಕಾದರೆ ಸೌಜನ್ಯಕ್ಕಾದರೂ
> ಅವರಿಂದ ಒಪ್ಪಿಗೆ ಪಡೆಯಬೇಕು. ಆದರೆ, ನಮ್ಮ ಶಿಕ್ಷಕರ ಸಂಘಟನೆ ಹಾಗಿಲ್ಲ. ರಾಜ್ಯದ ಲಕ್ಷಾಂತರ
> ಶಿಕ್ಷಕರ ಸಂಬಳದಿಂದ ಸಂಘಟನೆಗೆ ಹಣ ಕಡಿತ ಮಾಡಿಕೊಳ್ಳಲಾಗುತ್ತದೆ.
>
> ಈ ಹಣ ಯಾಕೆ ಎಂದು ಕೇಳಿದರೆ ಯಾರಲ್ಲಿಯೂ ಉತ್ತರವಿಲ್ಲ. ಶಿಕ್ಷಕರ ಒಳಿತಿಗೇ ಈ ಕಡಿತ
> ಎನ್ನುವುದಾದರೂ ಅದನ್ನು ವಿವರಿಸುವ ತಾಳ್ಮೆ ಇಲ್ಲಿಲ್ಲ. ಪ್ರಶ್ನಿಸಿದರೆ ಬೆದರಿಕೆ. ಇಡೀ
> ಶಿಕ್ಷಕ ಸಮುದಾಯ ಅಧಿಕಾರದ ದರ್ಪಕ್ಕೆ ನಲುಗುತ್ತಿರುವಾಗ, ಶಿಕ್ಷಕರು ಸಾಮಾಜಿಕ ಹಲ್ಲೆಗಳಿಗೆ
> ಒಳಗಾದಾಗ, ದೌರ್ಜನ್ಯದ ಕಾರಣಕ್ಕಾಗಿಯೇ ನಮ್ಮ ಶಿಕ್ಷಕರು ಜೀವ ಬಿಟ್ಟಾಗ, ಒಂದೇ ಒಂದು
> ಪ್ರತಿರೋಧದ ದನಿ ಹೊರಡಿಸಲಾಗದ ಸಂಘಟನೆ ನಮಗೆ ಬೇಕೆ? ಅಥವಾ ಇದು ಇರುವುದಾದರೂ ಯಾತಕ್ಕೆ?
>
> ಶಿಕ್ಷಕನ ಮೂಲೆಗುಂಪಾಗಿಸಿದ ‘ನಲಿಕಲಿ’
> ಕಳೆದ ಏಳೆಂಟು ವರ್ಷಗಳಿಂದ ‘ನಲಿಕಲಿ’ ಎಂಬ ವಿಶಿಷ್ಟ ಯೋಜನೆ ಶಾಲೆಗಳಲ್ಲಿ ಜಾರಿಯಲ್ಲಿದೆ. ಈ
> ಯೋಜನೆಯಲ್ಲಿ ಹಿಂದೆಂದೂ ಇರದ ವೇಗದಲ್ಲಿ ಮಕ್ಕಳು ಅದ್ಭುತವಾದ ಭಾಷಾಪ್ರಭುತ್ವವನ್ನು ಪಡೆಯಲು
> ಸಾಧ್ಯವಿದೆ. ಆದರೆ ಇದನ್ನು ಮೇಲ್ವಿಚಾರಕರು ಮತ್ತು ತರಬೇತುದಾರರು ಹಾಳುಮಾಡುತ್ತಿದ್ದಾರೆ.
> ಇಲ್ಲಿ ಮಕ್ಕಳು ಆಶ್ಚರ್ಯವೆನ್ನುವ ರೀತಿಯಲ್ಲಿ ಕಲಿಯುವ, ವಿಕಾಸ ಹೊಂದುವ ಅವಕಾಶವಿದೆ. ಆದರೆ
> ಪ್ರಸ್ತುತ ‘ನಲಿಕಲಿ’ ಬೋಧನಾ ಪದ್ಧತಿಯನ್ನು ಶಿಕ್ಷಕನಿಗೆ, ಶಿಕ್ಷಕನ ಅನನ್ಯತೆಗೆ ಯಾವುದೇ
> ಅವಕಾಶವಿಲ್ಲದಂತೆ ಮಾಡಲಾಗಿದೆ.
>
> ಸಂಕೀರ್ಣವಾಗಿ ರೂಪಾಂತರಗೊಂಡಿರುವ ಈ ಕಲಿಕಾ ಪದ್ಧತಿಯಲ್ಲಿ ಮಕ್ಕಳು ಕಲಿತರೆ ಮಾತ್ರ ಸಾಲದು,
> ಕಲಿತದ್ದನ್ನು ಅವರೇ ದಾಖಲಿಸಬೇಕು. ಇದು ಸಮಯ ಹಾಳು ಮಾಡುವ ದಾಖಲೀಕರಣ. ಶಿಶುಕೇಂದ್ರಿತ
> ಪರಿಕಲ್ಪನೆಯೊಂದಿಗೆ ಜಾರಿಗೆ ಬಂದ ‘ನಲಿಕಲಿ’ ಪ್ರಾಯೋಗಿಕವಾಗಿ ವಿಧಾನಕೇಂದ್ರಿತವಾಯಿತು.
> ಶಿಕ್ಷಕನ ಕಲಿಸುವ ಸೃಜನಶೀಲ ಅವಕಾಶವನ್ನು ಮೂಲೆಗುಂಪಾಗಿಸಿತು.
>
> ಮೇಲ್ವಿಚಾರಣೆ ಎಂಬುದು ಮಕ್ಕಳ ಕಲಿಕೆಯ ಫಲಕ್ಕೆ ಮಹತ್ವ ನೀಡದೆ ಸಂಕೀರ್ಣವಾದ, ಜಟಿಲವಾದ
> ಗೊಂದಲಮಯವಾದ ವಿಧಾನಕ್ಕೆ ಪ್ರಾಶಸ್ತ್ಯ ಕೊಟ್ಟಿತು. ಹಾಗಾಗಿ ಶಿಕ್ಷಕ ಮತ್ತು ವಿದ್ಯಾರ್ಥಿಯ
> ನಡುವೆ ಸೃಜನಶೀಲ ಮಾಧ್ಯಮವಾಗಬೇಕಿದ್ದ ವಿಧಾನ ಹತ್ತಲು ಹೆಣಗಾಡಬೇಕಾದ ಬೆಟ್ಟವಾಯಿತು. ಇದರಿಂದ
> ಎರಡೂ ಕಡೆ ಯಾತನಾದಾಯಕ ದಣಿವಾಯಿತೇ ಹೊರತು ಕಲಿತ ತೃಪ್ತಿ, ಕಲಿಸಿದ ಸಂತೃಪ್ತಿ ದೂರವಾಯಿತು.
> ಶಿಕ್ಷಕರ ಸಾಮರ್ಥ್ಯವನ್ನು ಗೌರವಿಸಿ, ಅವರ ಅನನ್ಯತೆಯನ್ನು ಪೋಷಿಸಿ, ಇರುವ ಕಲಿಕಾ
> ಸಾಮಗ್ರಿಗಳನ್ನು ಬಳಸಿ ತಮ್ಮದೇ ತಿಳಿವಳಿಕೆ ಸಾಮರ್ಥ್ಯ ಉಪಯೋಗಿಸಿ ಕಲಿಸುವ ಪೂರ್ಣ
> ಸ್ವಾತಂತ್ರ್ಯ ಕೊಟ್ಟಿದ್ದೇ ಆದರೆ ನಮ್ಮ ಮಕ್ಕಳಿಗೆ ನಿಜವಾದ ಗುಣಾತ್ಮಕ ಶಿಕ್ಷಣ ಸಿಗಬಹುದು.
>
> ‘ನಲಿಕಲಿ’ಯಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಮಕ್ಕಳಿಗೆ ಒದಗಿಸಿರುವ ಕಲಿಕಾ
> ಸಾಮಗ್ರಿಗಳ ಗುಣಮಟ್ಟ. ‘ಅಭ್ಯಾಸ ಪುಸ್ತಕ’ ಮತ್ತು ‘ಕಾರ್ಡು’ ಇಲ್ಲಿ ಮಗುವಿಗೆ ಸಂಗಾತಿ.
> ಇವುಗಳನ್ನ ಮಗು ಪದೇ ಪದೇ ಬಳಸಬೇಕಾಗುತ್ತದೆ. ಆದರೆ ಅಭ್ಯಾಸ ಪುಸ್ತಕಗಳು ಎಷ್ಟು
> ಕಳಪೆಯಾಗಿವೆಯೆಂದರೆ ಮಗು ಬಳಸಲು ಪ್ರಾರಂಭಿಸಿದ ತಿಂಗಳಲ್ಲೇ ಅವುಗಳ ಗತಿ
> ಅಧೋಗತಿಯಾಗಿರುತ್ತದೆ.
>
> ನಾವು ಇಲ್ಲಿ ಹೊರಟಿರುವುದು ಮಕ್ಕಳ ಭವಿಷ್ಯಕ್ಕೇ ಸವಾಲಾಗಿರುವ ಅಜ್ಞಾನವನ್ನು ಸೋಲಿಸಲಿಕ್ಕೆ.
> ಆದರೆ ನಮ್ಮ ಹತ್ತಿರ ಇರುವುದು ಇದ್ದೂ ಇಲ್ಲದಂತಿರುವ ಕಳಪೆ ಆಯುಧಗಳು. ಆದರೂ ನಾವು ಯುದ್ಧ
> ಗೆಲ್ಲಲೇಬೇಕು. ಕಾರ್ಡ್‌ಗಳು ಒಂದು ತರಗತಿಯ ಹತ್ತು ಮಕ್ಕಳ ಕೈಗೆ ಹೋಗಿ ಬರುವುದರೊಳಗೆ
> ನರಳುತ್ತಿರುತ್ತವೆ, ಮುಂದಿನ ಮಕ್ಕಳು ಅದರಲ್ಲೇ ಕಲಿಕೆಯನ್ನ ಮುಂದುವರೆಸಬೇಕು.
>
> ಶಿಕ್ಷಣಕ್ಕಾಗಿ ಪ್ರತಿ ವರ್ಷ ಸಾವಿರ ಸಾವಿರ ಕೋಟಿ ರೂಪಾಯಿ ಲೆಕ್ಕದಲ್ಲಿ ಮಾತನಾಡುವ ನಮ್ಮ
> ಶಿಕ್ಷಣ ವ್ಯವಸ್ಥೆ ಮಕ್ಕಳು ಓದಲು ಗುಣಮಟ್ಟದ ಪುಸ್ತಕಗಳನ್ನು, ಒಳ್ಳೆಯ ಬಟ್ಟೆಗಳನ್ನು
> ಕೊಡಲಾಗದ ಬಡತನದಲ್ಲಿದೆ.
>
> ಮಕ್ಕಳ ನಾಳೆಗಳ ಮೇಲೆ ಪ್ರಹಾರ
> ‘ಕಡ್ಡಾಯ ಶಿಕ್ಷಣ ಹಕ್ಕು’ ಜಾರಿಯ ಮೂಲಕ ಎಲ್ಲರಿಗೂ ಶಿಕ್ಷಣ ಎನ್ನುವ ಸಂಭ್ರಮವೊಂದು
> ಜಾರಿಯಲ್ಲಿದೆ. ಆದರೆ, ಖಾಸಗಿ ಶಾಲೆಗಳಿಗೆ ವರದಾನವಾದ ಈ ಹಕ್ಕು ಸರ್ಕಾರಿ ಶಾಲೆಗಳಿಗೆ
> ಮರಣಶಾಸನವಾಗಿದೆ. ಇದರಿಂದಾಗಿ ಗಡಿನಾಡು–ನಡುನಾಡು ಎನ್ನದೇ ಹಲವಾರು ಶಾಲೆಗಳು
> ಕಣ್ಣುಮುಚ್ಚಿದವು. ಈ ಶಾಲೆ ಮುಚ್ಚಿದ ಪ್ರದೇಶಗಳ ಮಕ್ಕಳ ನಾಳೆಗಳನ್ನು ಗೊತ್ತಿದ್ದೂ
> ಕೊಲ್ಲಲಾಗಿದೆ. ದಮನಿತ ಮಕ್ಕಳ ಬದುಕು ಬೀದಿಗೆ ಬಿದ್ದಾಗಿದೆ.
>
> ಸಮಾನ ಕಡ್ಡಾಯ ಶಿಕ್ಷಣ ಇಂದಿನ ಅಗತ್ಯ. ಇದ್ದವರಿಗೊಂದು ಶಿಕ್ಷಣ ಮತ್ತು ಪದ್ಧತಿ,
> ಇಲ್ಲದವರಿಗೊಂದು ಶಿಕ್ಷಣ ಮತ್ತು ಪದ್ಧತಿ ಮಾಡಿ ದಮನಿತ ಮಕ್ಕಳ ಬದುಕಿಗೆ ವ್ಯವಸ್ಥೆ
> ವಂಚಿಸುತ್ತಿದೆಯೇ ಹೊರತು ಬೇರೇನಲ್ಲ. ನಮ್ಮ ನಾಡು, ನಮ್ಮ ಸಂಸ್ಕೃತಿ ಎಂದೆಲ್ಲ ಮಾತನಾಡುವ
> ಪ್ರಭುತ್ವ ಶಿಕ್ಷಣದ ವಿಷಯದಲ್ಲಿ ಮಾತ್ರ ‘ನಮ್ಮ ಮಕ್ಕಳು’ ಎಂದು ಇಡೀ ನಾಡಿನ ಮಕ್ಕಳನ್ನು
> ನೋಡುತ್ತಿಲ್ಲ.
>
> ಮಾನವೀಯ ಕಾಳಜಿಯಿಂದ ರೂಪುಗೊಂಡ ‘ಖಾಸಗಿ ಶಿಕ್ಷಣ ಸಂಸ್ಥೆ’ ಪರಿಕಲ್ಪನೆ ಲಾಭಕೋರತನವಾಗಿ
> ಬದಲಾಗಿ ದಶಕಗಳೇ ಆಗಿಹೋಗಿವೆ. ಸರ್ಕಾರ ದುಡ್ಡು ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ
> ಕಳುಹಿಸುತ್ತದೆ, ಆದರೆ ಅದೇ ಸರ್ಕಾರ, ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆಯಾದ ಅಭ್ಯಾಸ
> ಪುಸ್ತಕಗಳನ್ನು ಕೊಡುತ್ತದೆ. ನಮ್ಮ ‘ನಲಿಕಲಿ’ ಮಕ್ಕಳು ಅರ್ಧ ಪುಟ ಬರೆಯುವ ಹೊತ್ತಿಗೆ ಪುಟವೇ
> ಹರಿಯುತ್ತದೆ, ಉಳಿದ ಜಾಗದಲ್ಲಿ ಮತ್ತೆ ಬರೆಯಲು ಪ್ರಯತ್ನಿಸಿದರೆ ಅದೂ ಹರಿಯುತ್ತದೆ. ಹೀಗೆ
> ಪೇಚಾಡುತ್ತಿರುವುದು ನಮ್ಮದೇ ಕನ್ನಡದ ಮಗು. ಇಲ್ಲಿ ಹರಿಯುತ್ತಿರುವುದು ಹಾಳೆಯಲ್ಲ, ಮಕ್ಕಳ
> ಭವಿಷ್ಯ.
>
> ಮಕ್ಕಳಿಗೆ ಒಂದು ಜೊತೆ ಬಟ್ಟೆ ಕೊಡುವ ಸರ್ಕಾಕ್ಕೆ ವಿದ್ಯಾರ್ಥಿಗಳೆಲ್ಲ ಕೃತಜ್ಞರು. ಹೀಗೆ
> ಕೊಟ್ಟ ಒಂದು ಜೊತೆ ಬಟ್ಟೆಯನ್ನ ಮಕ್ಕಳು ವಾರಪೂರ್ತಿ ಹಾಕಿಕೊಂಡು ಬಂದಾಗ, ಆರು ತಿಂಗಳ
> ಹೊತ್ತಿಗೆ ಅವುಗಳ ಗತಿ ಏನು? ಬೂಟು ಕೊಡುವ ಬಗ್ಗೆ ಯೋಚಿಸುತ್ತಿರುವ ಸರ್ಕಾರ, ನಮ್ಮ
> ಮಕ್ಕಳಿಗೆ ಎರಡು ಜೊತೆ ಬಟ್ಟೆ ಕೊಟ್ಟರೆ ಮಹದುಪಕಾರ ಆದೀತೇನೋ.
>
> ಕನ್ನಡ ಶಾಲೆ ಮಾಸ್ತರ ಮೇಲೆ ಗೂಬೆ!
> ಕನ್ನಡ ಶಾಲೆಯ ಮಾಸ್ತರಿಗೆ ಬುದ್ಧಿಯಿಲ್ಲ ಎನ್ನುವುದು ಪುರಾತನವಾದ ಪೂರ್ವಗ್ರಹ. ಹಾಗೆಯೇ
> ಆಧುನಿಕ ಮನಸ್ಸಿನ ಮತ್ತೊಂದು ಕೊಳಕುತನ, ಕನ್ನಡ ಶಾಲೆಯ ಮಕ್ಕಳು ಕಳ್ಳರು–ಕೀಳು ಎಂಬುದು.
> ಮೊದಲನೆಯ ಮಾತಿಗೆ ಉದಾಹರಣೆಯಾಗಿ ನಮ್ಮ ನಿಕಟಪೂರ್ವ ಶಿಕ್ಷಣ ಸಚಿವರ ನಡವಳಿಕೆಯನ್ನು
> ಉದಾಹರಿಸಬಹುದು.
>
> ವರ್ಗಾವಣೆಯ ಕೋರಿಕೆಯೊಂದಿಗೆ ಇಬ್ಬರು ಶಿಕ್ಷರು ಭೇಟಿಯಾದಾಗ ಅವರ ಕೋರಿಕೆಯನ್ನ ಮನ್ನಿಸುವುದೋ
> ತಿರಸ್ಕರಿಸುವುದೋ ಸಚಿವರಿಗೆ ಸಾಧ್ಯವಿತ್ತು. ಆದರೆ, ಅವರು ಶಿಕ್ಷಕರ ಬುದ್ಧಿಮತ್ತೆ
> ಪರೀಕ್ಷಿಸಲು ಮೂರು ಪ್ರಶ್ನೆ ಕೇಳಿದರು. ಈ ಚಿಕ್ಕ ಘಟನೆ ಮಾಧ್ಯಮಗಳ ಮೂಲಕ ಸುದ್ದಿಯಾಯಿತು.
> ವಾಹಿನಿಯೊಂದು ಮೂರು ಲಕ್ಷ ಶಿಕ್ಷಕರ ಆತ್ಮಗೌರವವನ್ನ ‘ಟಿಆರ್‌ಪಿ’ಗಾಗಿ ಬಲಿಕೊಟ್ಟು
> ‘ರಿಯಾಲಿಟಿ ಚೆಕ್’ ಎಂದು ಹೇಳಿಕೊಂಡಿತು. ಇಡೀ ದಿನ ಶಿಕ್ಷಕರನ್ನು ಅದೆಷ್ಟು ಅಜ್ಞಾನಿಗಳಂತೆ
> ಚಿತ್ರಿಸಲಾಯಿತೆಂದರೆ, ಬೋಧಕವರ್ಗವೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲು
> ಹಿಂಜರಿಕೆಯಾಯಿತು.
>
> ಶಾಲೆಗೆ ಬರುವ ಮಕ್ಕಳನ್ನು ತಪ್ಪು ಮಾಡಿದಾಗ ಹೊಡೆಯುವುದಿರಲಿ, ಸಿಟ್ಟಿನಿಂದ ನೋಡಲೂಬಾರದು
> ಎಂಬ ಕಾನೂನು ಮಾಡುವ ವ್ಯವಸ್ಥೆ, ಇಡೀ ಮೂರು ಲಕ್ಷ ಶಿಕ್ಷಕರ ಮಾನವನ್ನು ಹೀಗೆ ಹರಾಜು ಹಾಕಲು
> ಕಾರಣವಾಗಬಹುದೇ? ಕೆಲವು ಶಿಕ್ಷಕ ಶಿಕ್ಷಕಿಯರನ್ನು ಕಿರುತೆರೆಯಲ್ಲಿ ಬಫೂನ್‌ಗಳಂತೆ
> ಚಿತ್ರಿಸಲಾಯಿತು.
>
> ಶಿಕ್ಷಕರ ಮನಸ್ಸಿನ ಮೇಲಾದ ಈ ಆಘಾತಕ್ಕೆ ಮದ್ದು ನೀಡುವವರು ಯಾರು?
> ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಪ್ರೇಮಾ
> (ಮೂಲತಃ ಕೋಲಾರ ಜಿಲ್ಲೆಯವರು) ಎನ್ನುವ ಶಿಕ್ಷಕಿಯೊಬ್ಬರು ಸೀಮೆಎಣ್ಣೆ ಸುರುವಿಕೊಂಡು
> ಬೆಂಕಿಹಚ್ಚಿಕೊಂಡು ಸುಟ್ಟುಹೋದರು.
>
> ಸಾಯುವ ಮುನ್ನ, ಕುಟುಕು ಜೀವ ಹಿಡಿದುಕೊಂಡಿದ್ದ ಅವರು ತಮ್ಮನ್ನ ಭೇಟಿಮಾಡಲು ಬಂದ
> ಮಂತ್ರಿಯೊಬ್ಬರಿಗೆ ‘ದಯಮಾಡಿ ನನ್ನನ್ನ ನಮ್ಮೂರ ಕಡೆ ವರ್ಗಾವಣೆ ಮಾಡಿ ಸಾರ್’ ಎಂದು
> ಕೊನೆಯುಸಿರೆಳೆದರು. ಸಾವಿನ ಸಂದರ್ಭದಲ್ಲೂ ವರ್ಗಾವಣೆಯನ್ನು ಕನವರಿಸಿದ ಆ ಶಿಕ್ಷಕಿಯ
> ಸನ್ನಿವೇಶ ಏನೆಲ್ಲವನ್ನು ಹೇಳುವಂತಿದೆ. ಆದರೆ, ಆ ಸಂಕಷ್ಟ ನಮ್ಮ ಮಂತ್ರಿಗಳಿಗೆ
> ಅರ್ಥವಾಗುತ್ತದೆಯೇ?
>
> ಚಿಕ್ಕೋಡಿ ತಾಲ್ಲೂಕಿನ ದಲಿತ ಶಿಕ್ಷಕರೊಬ್ಬರ ಮೇಲೆ ಅಕ್ಕಿ ಕಳ್ಳತನದ ಆರೋಪ ಹೊರಿಸಲಾಯಿತು.
> ಅವರ ಬೆನ್ನಮೇಲೆ ಮಣಭಾರದ ಚೀಲವನ್ನು ಹೊರಿಸಿ ಊರಲ್ಲಿ ತಿರುಗಿಸಿ ಹಲ್ಲೆ ನಡೆಸಲಾಯಿತು. ಆ
> ಶಿಕ್ಷಕ ತಪ್ಪಿತಸ್ಥನೆಂದಾಗಿದ್ದರೆ ಇಲಾಖೆ ವಿಚಾರಣೆಗ ಒಳಪಡಿಸಬಹುದಿತ್ತು. ಆದರೆ
> ಅದಾಗಲಿಲ್ಲ. ಶಿಕ್ಷಕರ ಸಂಘಟನೆ ಕೂಡ ಹಲ್ಲೆಗೊಳಗಾದ ಶಿಕ್ಷಕನ ನೆರವಿಗೆ ಬರಲಿಲ್ಲ.
>
> ಸಂಘಟನೆಗಳು ನಿದ್ದೆಯಿಂದ ಏಳುವುದು ವೇತನನಿಗದಿ ವಿಚಾರ ಬಂದಾಗ ಮಾತ್ರ. ಇಲ್ಲಾದದ್ದೂ ಅಷ್ಟೇ.
> ಸಂಘಟನೆ ಕೈಕಟ್ಟಿ ನಿಂತು ಅಧಿಕಾರಿಗಳಿಗೆ ಮನವಿ ಅರ್ಪಿಸಿ ಸುಮ್ಮನಾಯಿತು. ನೊಂದ ಶಿಕ್ಷಕರ
> ನೋವು ಮಾತ್ರ ಅವಮಾನಗೊಂಡ ಜಾಗದಲ್ಲಿಯೇ ಸೇವೆ ಮಾಡುತ್ತ ದಿನೇ ದಿನೇ ಹೆಚ್ಚುತ್ತಾ ಹೋಯಿತು.
>
> ಆತ್ಮತೃಪ್ತಿ ಎನ್ನುವ ಮರೀಚಿಕೆ
> ಬೇರೆ ಯಾವ ಕೆಲಸದಲ್ಲೇ ಆದರೂ ಹೊಟ್ಟೆಪಾಡೆಂದು ಸುಮ್ಮನಿದ್ದು ಬಿಡಬಹುದು. ಆದರೆ
> ಶಿಕ್ಷಕರೆಂದರೆ ಇಲ್ಲಿ ಆತ್ಮತೃಪ್ತಿಯೂ ಬೇಕು. ಅದಾವುದಕ್ಕೂ ಅವಕಾಶ ಕೊಡದಷ್ಟು ಕ್ಷುದ್ರಗೊಂಡ
> ವಾತಾವರಣದಲ್ಲಿ ಲಾಬಿಗಳು, ಸ್ವಾರ್ಥಗಳು, ಮೇಲರಿಮೆಗಳು ತಾಂಡವವಾಡುತ್ತಿದ್ದರೆ, ಶಿಕ್ಷಕ
> ಸಮುದಾಯ ಏನೂ ಮಾಡಲಾಗದ ಅಸಹಾಯಕತನದಲ್ಲಿ ಕೀಳರಿಮೆಯನ್ನೇ ತಿಂದುಂಡು ಇಲ್ಲಿ
> ಬದುಕಬೇಕಾಗುತ್ತದೆ.
>
> ಉತ್ತರ ಕರ್ನಾಟಕದ ಶಾಲೆಯೊಂದರಲ್ಲಿ ಕೆಲಸ ಮಾಡುವ ಶಿಕ್ಷಕರು ವಿಷಾದದಿಂದ ಹೇಳುತ್ತಾರೆ:
> ‘ಮಹಾಭ್ರಷ್ಟ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನನಗೆ ಪಶ್ಚಾತ್ತಾಪವಿದೆ.
> ಅರ್ಥಪೂರ್ಣವಾಗಿ ಬದುಕು ಕಟ್ಟಿಕೊಳ್ಳುವ, ಹಲವು ಬದುಕುಗಳನ್ನು ಕಟ್ಟುವ ಅವಕಾಶಗಳಿವೆ ಎನ್ನುವ
> ಸಂತಸದಿಂದ ಇಲ್ಲಿಗೆ ಬಂದೆ. ಆದರೆ ಇಲ್ಲಿನ ದರ್ಪ, ಲಂಚಕೋರತನ, ವ್ಯಕ್ತಿಗತ ಹಿಂಸೆ ಕಂಡು
> ರೋಸಿ ಹೋಗಿರುವೆ. ಇಲ್ಲಿ ಹಣದ ಅವ್ಯವಹಾರ ಮಾತ್ರ ನಡೆಯುತ್ತಿಲ್ಲ – ಪ್ರತಿಯೊಬ್ಬ ಶಿಕ್ಷ
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send an email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
--
With regards
*
****MAHABALESHWAR C BHAGWAT *ASSISTANT MASTER
GHS KEDOORKUNDAPUR TALLUK * b
[email protected]
skype id:bhagwat18
Blog:bhagwatmc.blogspot.com,
School Blog:ghskedoor.blogspot.com
District Blog:socialscienceudupi.blogspot.com
Address,mahabaleshwarbhagwat.hpage.com<http://mahabaleshwarbhagwat.hpage.co
UDUPI DISTRICT.
9449912354
**"AN OUNCE OF PRACTICE IS WORTH MORE THAN TONS OF PREACHING". *
*Mohandas Karamchand Gandhi ***
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.