I also faced above problems On Thursday, September 8, 2016, Gireesha HP <[email protected]> wrote:
> ಛೇ ನಮ್ಮ ಶಿಕ್ಷಕರಿಂದಲೇ ಕಲಿತವರ ಸ್ಥಿತಿ ಹೀಗಾಯ್ತಲ್ಲ > On 7 Sep 2016 6:02 pm, "hanumantha raju" <[email protected] > <javascript:_e(%7B%7D,'cvml','[email protected]');>> wrote: > > ಪಾಪ, ಮೇಷ್ಟ್ರು! > 4 Sep, 2016 > > ಮಕ್ಕಳಲ್ಲಿ ಆದರ್ಶ, ಆತ್ಮವಿಶ್ವಾಸ ಹಾಗೂ ಆತ್ಮಘನತೆಯನ್ನು ಬಿತ್ತಬೇಕಾದ ಕರ್ತವ್ಯ > ಶಿಕ್ಷಕರದು. ಆದರೆ, ಇದೇ ಶಿಕ್ಷಕರು ತಮ್ಮ ಆದರ್ಶಗಳಿಂದ ವಿಮುಖರಾಗಬೇಕಾದ ಹಾಗೂ > ಆತ್ಮವಿಶ್ವಾಸ – ಆತ್ಮಘನತೆಯನ್ನು ಕಳೆದುಕೊಳ್ಳಬೇಕಾದ ಸಂದರ್ಭ ಇಂದಿನದು. ಭ್ರಷ್ಟಾಚಾರದ > ರಾಡಿಯಂತಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ ಒಂದು ಬಲಿಪಶು. ಯಾವ ಮೇಷ್ಟ್ರ ಅನುಭವವೂ > ಆಗಬಹುದಾದ ಇಲ್ಲಿನ ಟಿಪ್ಪಣಿಗಳು ಶಿಕ್ಷಣ ವ್ಯವಸ್ಥೆ ಕೊಳೆತು ನಾರುತ್ತಿರುವುದನ್ನು > ಸೂಚಿಸುವಂತಿವೆ. > ಚಿತ್ರ– ಸಿದ್ರಪಾಲ > > ಇದು ಪ್ರಾಥಮಿಕ ಶಾಲಾಶಿಕ್ಷಕರ ಸಂಯಮದ ಸತ್ವಪರೀಕ್ಷೆಯ ಕಾಲ. ಕ್ಷಣ ಕ್ಷಣಕ್ಕೂ ಇಲ್ಲಿ > ಆತ್ಮಾಘಾತಗಳು. ಸವಾಲಿರುವುದು ಕಲಿಸುವುದರಲ್ಲಿ ಅಲ್ಲ, ‘ಕಲಿಸುವವರಾಗಿ’ ಉಳಿಯುವುದರಲ್ಲಿ. > ಮಕ್ಕಳ ಪಾಲಿನ ಗುರುಗಳು ಅಧಿಕಾರಶಾಹಿಗೆ ಗುಲಾಮರು! ಈ ಕಾರಣದಿಂದಲೇ ಬಹುತೇಕ ಶಿಕ್ಷಕರು > ‘ಸಾಕಪ್ಪಾ ಈ ಕೆಲಸ’ ಎನ್ನುವ ಹತಾಶ ಮನೋಭಾವದಲ್ಲಿದ್ದಾರೆ. ಕೆಲವರಂತೂ ಪರ್ಯಾಯ ಉದ್ಯೋಗದ > ಬಗ್ಗೆ ಯೋಚಿಸಿದ್ದಾರೆ. ಯಾವ ಶಿಕ್ಷಕನೂ ಇಂದು ನೆಮ್ಮದಿಯ ಮನೋಭಾವದಲ್ಲಿ ಮಕ್ಕಳಿಗೆ ಕಲಿಸಿ, > ತೃಪ್ತಿಯಿಂದ ಮನೆಗೆ ಬರುವ ವಾತಾವರಣ ಇಲ್ಲ. > > ಘನತೆಯ, ಆತ್ಮತೃಪ್ತಿಯ ಮಹೋನ್ನತ ಸ್ಥಾನ ಎಂದು ನಂಬಿಕೊಂಡು ಶಿಕ್ಷಕ ವೃತ್ತಿಗೆ ಸೇರಿದ ಒಬ್ಬ > ಶಿಕ್ಷಕರ ಅನುಭವ ಕೇಳಿ. ತಾನು ಕೆಲಸ ಮಾಡುವ ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡು > ಈ ಮೇಷ್ಟ್ರು, ಹೊಸ ಶಾಲೆಗೆ ಬಂದ ಮೊದಲ ದಿನವೇ ಬಿಇಒ ಅವರಿಂದ ತೊಂದರೆ ಎದುರಿಸಬೇಕಾಯಿತು. > ‘ಚಾಲನಾ ಆದೇಶಪತ್ರ’ ಕೊಡಲು ದುಡ್ಡು ಕೇಳಿದಾಗ ಮೇಷ್ಟ್ರು ಹೌಹಾರಿದ್ದರು. > > ಕ್ಷೇತ್ರ ಶಿಕ್ಷಣಾಧಿಕಾರಿ ಜೇಬಿಗೇ ಕೈಯಿಟ್ಟು ಇದ್ದುದೆಲ್ಲವನ್ನೂ ಕಸಿದುಕೊಂಡಾಗ > ಅಸಹಾಯಕತೆಯಿಂದ ಒದ್ದಾಡುವ ಸ್ಥಿತಿ ಆ ಶಿಕ್ಷಕರದು. ‘ಅದು ತೀರಾ ಒಬ್ಬಂಟಿತನ ಅನುಭವಿಸಿದ > ದಿನ. ಹೆತ್ತವರಿಂದ ತುಂಬಾ ದೂರ ಬಂದುಬಿಟ್ಟಿದ್ದೆ. ಕನಿಷ್ಠ ವಿಶ್ವಾಸದಿಂದ ಮಾತನಾಡಿಸಲೂ > ಯಾರೂ ಇರಲಿಲ್ಲ. ನನ್ನ ಮೈಮೇಲೆ ಬಿದ್ದ ಮನುಷ್ಯನಿಗೆ ನಾನು ಏನೂ ಹೇಳದ ಸ್ಥಿತಿಯಲ್ಲಿದ್ದೆ. > ಮುಂದಿನ ಎರಡು ದಿನ ತುತ್ತು ಅನ್ನಕ್ಕೂ ಪರದಾಡಿದ್ದೆ’ ಎನ್ನುವಾಗ ಮೇಷ್ಟ್ರ ಮಾತುಗಳಲ್ಲಿ > ವಿಷಾದ ಸುಳಿದುಹೋಗುತ್ತದೆ. > > ತೇಜೋವಧೆ ಮತ್ತು ಲಂಚಾವತಾರ > ಅಧಿಕಾರ ಎನ್ನುವುದು ವ್ಯವಸ್ಥೆಯ ಸತ್ವವನ್ನು ಹೆಚ್ಚಿಸುವ ಪೋಷಕಾಂಶವಾಗಬೇಕು. ಕೆಳಸ್ತರದ > ನೌಕರರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಕಾರ್ಯಸಾಧನೆಗೆ ಪ್ರೇರಣೆಯಾಗಬೇಕು. ಆದರೆ, ಶಿಕ್ಷಣ > ಇಲಾಖೆಯಲ್ಲಿ ಅಧಿಕಾರ ಎನ್ನುವುದು ದರ್ಪದ ಹಾಗೂ ಶಿಕ್ಷಕರ ತೇಜೋವಧೆ ಮಾಡುವ ಮಾರ್ಗವಾಗಿದೆ. > > ಮಾರ್ಗದರ್ಶನ ಆಗಬೇಕಿದ್ದ ಅಧಿಕಾರ, ‘ತಪಾಸಣೆ’ ಎನ್ನುವ ಪೊಲೀಸ್ ಪರಿಭಾಷೆಯನ್ನು > ರೂಢಿಸಿಕೊಂಡಿದೆ. ಈ ತಪಾಸಣೆ ಎನ್ನುವುದು ‘ಶಾಲೆಯಲ್ಲಿ ಇರುವವರೆಲ್ಲ ಈಗಾಗಲೇ ತಪ್ಪು > ಮಾಡಿದ್ದಾರೆ, ಅವರನ್ನು ಶಿಕ್ಷಿಸಲೇಬೇಕು ಎಂಬ ಪೂರ್ವಕಲ್ಪಿತ ಧೋರಣೆಯೊಂದಿಗೆ ಶಾಲೆಯ ಮೇಲೆ > ನಡೆಯುವ ‘ದಾಳಿ’. ಸರ್ಕಾರಿ ಭಾಷೆಯಲ್ಲಿ ಇದರ ಹೆಸರು ‘ಮಿಂಚಿನ ಸಂಚಾರ’. ಮಿಂಚು ವಿನಾಶಕಾರಿ, > ಅದು ಸಂಚರಿಸಿದಲ್ಲೆಲ್ಲ ಫಲವತ್ತಾದ ಭೂಮಿ ಬರಡಾಗುತ್ತದೆ. ಇಲ್ಲಿ ಆಗುತ್ತಿರುವುದೂ ಅದೇ. > > ಇಲ್ಲೊಬ್ಬ ವಿಷಯ ಪರಿವೀಕ್ಷಕರಿದ್ದಾರೆ. ವರ್ಷಕ್ಕೊಮ್ಮೆ ಅವರು ಶಾಲೆಗಳಿಗೆ ವಿಶೇಷ > ಭೇಟಿಗಳನ್ನು ಹಮ್ಮಿಕೊಳ್ಳುತ್ತಾರೆ. ಅವರ ಭೇಟಿಯ ದಿನಾಂಕಗಳು ಬಂದವೆಂದರೆ ಕೆಲ > ಶಿಕ್ಷಕರಿಗಂತೂ ಜೀವ ಬಾಯಿಗೆ ಬಂದಂತಾಗುತ್ತದೆ. ಏಕೆಂದರೆ ಅವರು ಶಾಲೆಗೆ ಬಂದು ಬರಿಗೈಲಿ > ವಾಪಸ್ ಹೋಗುವುದಿಲ್ಲ. ಕನಿಷ್ಠ ಮೂರು ಸಾವಿರ ರೂಪಾಯಿಯಾದರೂ ಅವರಿಗೆ ಬೇಕೇಬೇಕು. ದುಡ್ಡಿನ > ಜೊತೆ ನೆಮ್ಮದಿಯನ್ನೂ ಅವರು ಕೆದಕಿ ಹೋಗುತ್ತಾರೆ. > > ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ ಪಾಥಮಿಕ ಶಾಲೆಯಲ್ಲಿ ಸಾವಿರ ಅವಕಾಶಗಳಿವೆ. ಎಲ್ಲವನ್ನೂ > ನೆಟ್ಟಗಿಟ್ಟುಕೊಂಡಮೇಲೂ ಈ ಮನುಷ್ಯ ಎಲ್ಲಿಯವರೆಗೂ ಕೆದಕುತ್ತಾರೆಂದರೆ, ಹಿಂದೆ ನಡೆದ > ಪರೀಕ್ಷೆಯ ಉತ್ತರ ಪತ್ರಿಕೆಗಳನ್ನ ತರಿಸಿ, ಆಯಾ ಮಕ್ಕಳನ್ನು ಸರದಿಯಲ್ಲಿ ನಿಲ್ಲಿಸಿ, > ಪ್ರಶ್ನೆ ಕೇಳಲು ಪ್ರಾರಂಭಿಸುತ್ತಾರೆ! ಇಂಥವರು ಒಂದುಕಡೆಯಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ > ಇದ್ದಾರೆ. > > ಪ್ರತಿ ಶಾಲೆಯಲ್ಲೂ ವಾರ್ಷಿಕ ‘ತಪಾಸಣೆ’ಯ ನಾಟಕಗಳು ನಡೆಯುತ್ತವೆ. ಅಧಿಕಾರಿಗಳು ಬದಲಾದಂತೆ > ಲಂಚದ ಮೊತ್ತಗಳು ಬದಲಾಗುತ್ತವೆ. ಪರಿಶ್ರಮ ಪಟ್ಟು ಮಕ್ಕಳ ಏಳಿಗೆಗೆ ದುಡಿದವರಿರಲಿ, > ದುಡಿಯದವರಿರಲಿ – ಎಲ್ಲರೂ ಪಾಲು ಕೊಡಲೇಬೇಕು. ಇದೊಂದು ಮುಕ್ತ ಒಪ್ಪಿತ ಕಹಿಸತ್ಯ. > > ತಪ್ಪು ಮಾಡಿದ ಶಿಕ್ಷಕರಿಗೆ ಜ್ಞಾಪನಾ ಪತ್ರ ಬರುವುದು ಒಂದು ಆಡಳಿತಾತ್ಮಕ ಪ್ರಕ್ರಿಯೆ. > ಇದಕ್ಕೆ ಉತ್ತರ ಬರೆದುಕೊಂಡು, ಜೊತೆಗೆ ದುಡ್ಡೂ ತೆಗೆದುಕೊಂಡು ಹೋದರೆ ಅಲ್ಲಿಗೆ ಆ ಪ್ರಹಸನ > ಅಂತ್ಯ. ಇಲ್ಲಿ ಮಧ್ಯವರ್ತಿಗಳ ಕಾರ್ಯ ಶ್ಲಾಘನೀಯ! ತಮಾಷೆ ಎಂದರೆ, ಶಿಕ್ಷಕರ ಆತ್ಮಗೌರವವನ್ನು > ಎತ್ತಿಹಿಡಿಯಬೇಕಾದ ‘ಶಿಕ್ಷಕರ ಸಂಘಟನೆ’ ಇಲ್ಲಿ ಲಂಚ ಕೊಡಿಸಲು ಮಧ್ಯವರ್ತಿಯಾಗಿ ಕೆಲಸ > ಮಾಡುತ್ತಿದೆ. > > ಶಿಕ್ಷಕರಿಗೆ ನ್ಯಾಯವಾಗಿ ದೊರೆಯಬೇಕಾದ ಅನುಕೂಲಗಳನ್ನು ದೊರಕಿಸಿಕೊಡುವುದಕ್ಕಾಗಿ ಸಾಮೂಹಿಕ > ಲಂಚ ವಸೂಲಾತಿ ಒಮ್ಮೊಮ್ಮೆ ನಡೆಯುತ್ತದೆ. ನಿಕಟಸೇವಾಪೂರ್ವ ಅವಧಿಯನ್ನು ಘೋಷಿಸುವುದಿರಲಿ, > ವರ್ಗಾವಣೆ ಆದೇಶ ಪಡೆಯುವುದಕ್ಕಿರಲಿ, ಹಾಜರಾಗುವುದಕ್ಕಿರಲಿ, ಇಂಕ್ರಿಮೆಂಟ್ ಇರಲಿ, ಟೈಮ್ > ಬಾಂಡ್ ಇರಲಿ – ಲಂಚ ಎಲ್ಲದಕ್ಕೂ ಕಡ್ಡಾಯ. ಇದು ಆಡಳಿತಾತ್ಮಕ ಬೇನೆಯಾದರೆ, ಸಂಘಟನೆಯದ್ದು > ಮತ್ತೊಂದು ರೀತಿ. > > ಯಾವುದೇ ಒಬ್ಬ ಸೇವಾನಿರತನ ಸಂಬಳದಿಂದ ದುಡ್ಡನ್ನು ಕಡಿತ ಮಾಡಬೇಕಾದರೆ ಸೌಜನ್ಯಕ್ಕಾದರೂ > ಅವರಿಂದ ಒಪ್ಪಿಗೆ ಪಡೆಯಬೇಕು. ಆದರೆ, ನಮ್ಮ ಶಿಕ್ಷಕರ ಸಂಘಟನೆ ಹಾಗಿಲ್ಲ. ರಾಜ್ಯದ ಲಕ್ಷಾಂತರ > ಶಿಕ್ಷಕರ ಸಂಬಳದಿಂದ ಸಂಘಟನೆಗೆ ಹಣ ಕಡಿತ ಮಾಡಿಕೊಳ್ಳಲಾಗುತ್ತದೆ. > > ಈ ಹಣ ಯಾಕೆ ಎಂದು ಕೇಳಿದರೆ ಯಾರಲ್ಲಿಯೂ ಉತ್ತರವಿಲ್ಲ. ಶಿಕ್ಷಕರ ಒಳಿತಿಗೇ ಈ ಕಡಿತ > ಎನ್ನುವುದಾದರೂ ಅದನ್ನು ವಿವರಿಸುವ ತಾಳ್ಮೆ ಇಲ್ಲಿಲ್ಲ. ಪ್ರಶ್ನಿಸಿದರೆ ಬೆದರಿಕೆ. ಇಡೀ > ಶಿಕ್ಷಕ ಸಮುದಾಯ ಅಧಿಕಾರದ ದರ್ಪಕ್ಕೆ ನಲುಗುತ್ತಿರುವಾಗ, ಶಿಕ್ಷಕರು ಸಾಮಾಜಿಕ ಹಲ್ಲೆಗಳಿಗೆ > ಒಳಗಾದಾಗ, ದೌರ್ಜನ್ಯದ ಕಾರಣಕ್ಕಾಗಿಯೇ ನಮ್ಮ ಶಿಕ್ಷಕರು ಜೀವ ಬಿಟ್ಟಾಗ, ಒಂದೇ ಒಂದು > ಪ್ರತಿರೋಧದ ದನಿ ಹೊರಡಿಸಲಾಗದ ಸಂಘಟನೆ ನಮಗೆ ಬೇಕೆ? ಅಥವಾ ಇದು ಇರುವುದಾದರೂ ಯಾತಕ್ಕೆ? > > ಶಿಕ್ಷಕನ ಮೂಲೆಗುಂಪಾಗಿಸಿದ ‘ನಲಿಕಲಿ’ > ಕಳೆದ ಏಳೆಂಟು ವರ್ಷಗಳಿಂದ ‘ನಲಿಕಲಿ’ ಎಂಬ ವಿಶಿಷ್ಟ ಯೋಜನೆ ಶಾಲೆಗಳಲ್ಲಿ ಜಾರಿಯಲ್ಲಿದೆ. ಈ > ಯೋಜನೆಯಲ್ಲಿ ಹಿಂದೆಂದೂ ಇರದ ವೇಗದಲ್ಲಿ ಮಕ್ಕಳು ಅದ್ಭುತವಾದ ಭಾಷಾಪ್ರಭುತ್ವವನ್ನು ಪಡೆಯಲು > ಸಾಧ್ಯವಿದೆ. ಆದರೆ ಇದನ್ನು ಮೇಲ್ವಿಚಾರಕರು ಮತ್ತು ತರಬೇತುದಾರರು ಹಾಳುಮಾಡುತ್ತಿದ್ದಾರೆ. > ಇಲ್ಲಿ ಮಕ್ಕಳು ಆಶ್ಚರ್ಯವೆನ್ನುವ ರೀತಿಯಲ್ಲಿ ಕಲಿಯುವ, ವಿಕಾಸ ಹೊಂದುವ ಅವಕಾಶವಿದೆ. ಆದರೆ > ಪ್ರಸ್ತುತ ‘ನಲಿಕಲಿ’ ಬೋಧನಾ ಪದ್ಧತಿಯನ್ನು ಶಿಕ್ಷಕನಿಗೆ, ಶಿಕ್ಷಕನ ಅನನ್ಯತೆಗೆ ಯಾವುದೇ > ಅವಕಾಶವಿಲ್ಲದಂತೆ ಮಾಡಲಾಗಿದೆ. > > ಸಂಕೀರ್ಣವಾಗಿ ರೂಪಾಂತರಗೊಂಡಿರುವ ಈ ಕಲಿಕಾ ಪದ್ಧತಿಯಲ್ಲಿ ಮಕ್ಕಳು ಕಲಿತರೆ ಮಾತ್ರ ಸಾಲದು, > ಕಲಿತದ್ದನ್ನು ಅವರೇ ದಾಖಲಿಸಬೇಕು. ಇದು ಸಮಯ ಹಾಳು ಮಾಡುವ ದಾಖಲೀಕರಣ. ಶಿಶುಕೇಂದ್ರಿತ > ಪರಿಕಲ್ಪನೆಯೊಂದಿಗೆ ಜಾರಿಗೆ ಬಂದ ‘ನಲಿಕಲಿ’ ಪ್ರಾಯೋಗಿಕವಾಗಿ ವಿಧಾನಕೇಂದ್ರಿತವಾಯಿತು. > ಶಿಕ್ಷಕನ ಕಲಿಸುವ ಸೃಜನಶೀಲ ಅವಕಾಶವನ್ನು ಮೂಲೆಗುಂಪಾಗಿಸಿತು. > > ಮೇಲ್ವಿಚಾರಣೆ ಎಂಬುದು ಮಕ್ಕಳ ಕಲಿಕೆಯ ಫಲಕ್ಕೆ ಮಹತ್ವ ನೀಡದೆ ಸಂಕೀರ್ಣವಾದ, ಜಟಿಲವಾದ > ಗೊಂದಲಮಯವಾದ ವಿಧಾನಕ್ಕೆ ಪ್ರಾಶಸ್ತ್ಯ ಕೊಟ್ಟಿತು. ಹಾಗಾಗಿ ಶಿಕ್ಷಕ ಮತ್ತು ವಿದ್ಯಾರ್ಥಿಯ > ನಡುವೆ ಸೃಜನಶೀಲ ಮಾಧ್ಯಮವಾಗಬೇಕಿದ್ದ ವಿಧಾನ ಹತ್ತಲು ಹೆಣಗಾಡಬೇಕಾದ ಬೆಟ್ಟವಾಯಿತು. ಇದರಿಂದ > ಎರಡೂ ಕಡೆ ಯಾತನಾದಾಯಕ ದಣಿವಾಯಿತೇ ಹೊರತು ಕಲಿತ ತೃಪ್ತಿ, ಕಲಿಸಿದ ಸಂತೃಪ್ತಿ ದೂರವಾಯಿತು. > ಶಿಕ್ಷಕರ ಸಾಮರ್ಥ್ಯವನ್ನು ಗೌರವಿಸಿ, ಅವರ ಅನನ್ಯತೆಯನ್ನು ಪೋಷಿಸಿ, ಇರುವ ಕಲಿಕಾ > ಸಾಮಗ್ರಿಗಳನ್ನು ಬಳಸಿ ತಮ್ಮದೇ ತಿಳಿವಳಿಕೆ ಸಾಮರ್ಥ್ಯ ಉಪಯೋಗಿಸಿ ಕಲಿಸುವ ಪೂರ್ಣ > ಸ್ವಾತಂತ್ರ್ಯ ಕೊಟ್ಟಿದ್ದೇ ಆದರೆ ನಮ್ಮ ಮಕ್ಕಳಿಗೆ ನಿಜವಾದ ಗುಣಾತ್ಮಕ ಶಿಕ್ಷಣ ಸಿಗಬಹುದು. > > ‘ನಲಿಕಲಿ’ಯಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಮಕ್ಕಳಿಗೆ ಒದಗಿಸಿರುವ > ಕಲಿಕಾ ಸಾಮಗ್ರಿಗಳ ಗುಣಮಟ್ಟ. ‘ಅಭ್ಯಾಸ ಪುಸ್ತಕ’ ಮತ್ತು ‘ಕಾರ್ಡು’ ಇಲ್ಲಿ ಮಗುವಿಗೆ > ಸಂಗಾತಿ. ಇವುಗಳನ್ನ ಮಗು ಪದೇ ಪದೇ ಬಳಸಬೇಕಾಗುತ್ತದೆ. ಆದರೆ ಅಭ್ಯಾಸ ಪುಸ್ತಕಗಳು ಎಷ್ಟು > ಕಳಪೆಯಾಗಿವೆಯೆಂದರೆ ಮಗು ಬಳಸಲು ಪ್ರಾರಂಭಿಸಿದ ತಿಂಗಳಲ್ಲೇ ಅವುಗಳ ಗತಿ > ಅಧೋಗತಿಯಾಗಿರುತ್ತದೆ. > > ನಾವು ಇಲ್ಲಿ ಹೊರಟಿರುವುದು ಮಕ್ಕಳ ಭವಿಷ್ಯಕ್ಕೇ ಸವಾಲಾಗಿರುವ ಅಜ್ಞಾನವನ್ನು > ಸೋಲಿಸಲಿಕ್ಕೆ. ಆದರೆ ನಮ್ಮ ಹತ್ತಿರ ಇರುವುದು ಇದ್ದೂ ಇಲ್ಲದಂತಿರುವ ಕಳಪೆ ಆಯುಧಗಳು. ಆದರೂ > ನಾವು ಯುದ್ಧ ಗೆಲ್ಲಲೇಬೇಕು. ಕಾರ್ಡ್‌ಗಳು ಒಂದು ತರಗತಿಯ ಹತ್ತು ಮಕ್ಕಳ ಕೈಗೆ ಹೋಗಿ > ಬರುವುದರೊಳಗೆ ನರಳುತ್ತಿರುತ್ತವೆ, ಮುಂದಿನ ಮಕ್ಕಳು ಅದರಲ್ಲೇ ಕಲಿಕೆಯನ್ನ ಮುಂದುವರೆಸಬೇಕು. > > ಶಿಕ್ಷಣಕ್ಕಾಗಿ ಪ್ರತಿ ವರ್ಷ ಸಾವಿರ ಸಾವಿರ ಕೋಟಿ ರೂಪಾಯಿ ಲೆಕ್ಕದಲ್ಲಿ ಮಾತನಾಡುವ ನಮ್ಮ > ಶಿಕ್ಷಣ ವ್ಯವಸ್ಥೆ ಮಕ್ಕಳು ಓದಲು ಗುಣಮಟ್ಟದ ಪುಸ್ತಕಗಳನ್ನು, ಒಳ್ಳೆಯ ಬಟ್ಟೆಗಳನ್ನು > ಕೊಡಲಾಗದ ಬಡತನದಲ್ಲಿದೆ. > > ಮಕ್ಕಳ ನಾಳೆಗಳ ಮೇಲೆ ಪ್ರಹಾರ > ‘ಕಡ್ಡಾಯ ಶಿಕ್ಷಣ ಹಕ್ಕು’ ಜಾರಿಯ ಮೂಲಕ ಎಲ್ಲರಿಗೂ ಶಿಕ್ಷಣ ಎನ್ನುವ ಸಂಭ್ರಮವೊಂದು > ಜಾರಿಯಲ್ಲಿದೆ. ಆದರೆ, ಖಾಸಗಿ ಶಾಲೆಗಳಿಗೆ ವರದಾನವಾದ ಈ ಹಕ್ಕು ಸರ್ಕಾರಿ ಶಾಲೆಗಳಿಗೆ > ಮರಣಶಾಸನವಾಗಿದೆ. ಇದರಿಂದಾಗಿ ಗಡಿನಾಡು–ನಡುನಾಡು ಎನ್ನದೇ ಹಲವಾರು ಶಾಲೆಗಳು > ಕಣ್ಣುಮುಚ್ಚಿದವು. ಈ ಶಾಲೆ ಮುಚ್ಚಿದ ಪ್ರದೇಶಗಳ ಮಕ್ಕಳ ನಾಳೆಗಳನ್ನು ಗೊತ್ತಿದ್ದೂ > ಕೊಲ್ಲಲಾಗಿದೆ. ದಮನಿತ ಮಕ್ಕಳ ಬದುಕು ಬೀದಿಗೆ ಬಿದ್ದಾಗಿದೆ. > > ಸಮಾನ ಕಡ್ಡಾಯ ಶಿಕ್ಷಣ ಇಂದಿನ ಅಗತ್ಯ. ಇದ್ದವರಿಗೊಂದು ಶಿಕ್ಷಣ ಮತ್ತು ಪದ್ಧತಿ, > ಇಲ್ಲದವರಿಗೊಂದು ಶಿಕ್ಷಣ ಮತ್ತು ಪದ್ಧತಿ ಮಾಡಿ ದಮನಿತ ಮಕ್ಕಳ ಬದುಕಿಗೆ ವ್ಯವಸ್ಥೆ > ವಂಚಿಸುತ್ತಿದೆಯೇ ಹೊರತು ಬೇರೇನಲ್ಲ. ನಮ್ಮ ನಾಡು, ನಮ್ಮ ಸಂಸ್ಕೃತಿ ಎಂದೆಲ್ಲ ಮಾತನಾಡುವ > ಪ್ರಭುತ್ವ ಶಿಕ್ಷಣದ ವಿಷಯದಲ್ಲಿ ಮಾತ್ರ ‘ನಮ್ಮ ಮಕ್ಕಳು’ ಎಂದು ಇಡೀ ನಾಡಿನ ಮಕ್ಕಳನ್ನು > ನೋಡುತ್ತಿಲ್ಲ. > > ಮಾನವೀಯ ಕಾಳಜಿಯಿಂದ ರೂಪುಗೊಂಡ ‘ಖಾಸಗಿ ಶಿಕ್ಷಣ ಸಂಸ್ಥೆ’ ಪರಿಕಲ್ಪನೆ ಲಾಭಕೋರತನವಾಗಿ > ಬದಲಾಗಿ ದಶಕಗಳೇ ಆಗಿಹೋಗಿವೆ. ಸರ್ಕಾರ ದುಡ್ಡು ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ > ಕಳುಹಿಸುತ್ತದೆ, ಆದರೆ ಅದೇ ಸರ್ಕಾರ, ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆಯಾದ ಅಭ್ಯಾಸ > ಪುಸ್ತಕಗಳನ್ನು ಕೊಡುತ್ತದೆ. ನಮ್ಮ ‘ನಲಿಕಲಿ’ ಮಕ್ಕಳು ಅರ್ಧ ಪುಟ ಬರೆಯುವ ಹೊತ್ತಿಗೆ ಪುಟವೇ > ಹರಿಯುತ್ತದೆ, ಉಳಿದ ಜಾಗದಲ್ಲಿ ಮತ್ತೆ ಬರೆಯಲು ಪ್ರಯತ್ನಿಸಿದರೆ ಅದೂ ಹರಿಯುತ್ತದೆ. ಹೀಗೆ > ಪೇಚಾಡುತ್ತಿರುವುದು ನಮ್ಮದೇ ಕನ್ನಡದ ಮಗು. ಇಲ್ಲಿ ಹರಿಯುತ್ತಿರುವುದು ಹಾಳೆಯಲ್ಲ, ಮಕ್ಕಳ > ಭವಿಷ್ಯ. > > ಮಕ್ಕಳಿಗೆ ಒಂದು ಜೊತೆ ಬಟ್ಟೆ ಕೊಡುವ ಸರ್ಕಾಕ್ಕೆ ವಿದ್ಯಾರ್ಥಿಗಳೆಲ್ಲ ಕೃತಜ್ಞರು. ಹೀಗೆ > ಕೊಟ್ಟ ಒಂದು ಜೊತೆ ಬಟ್ಟೆಯನ್ನ ಮಕ್ಕಳು ವಾರಪೂರ್ತಿ ಹಾಕಿಕೊಂಡು ಬಂದಾಗ, ಆರು ತಿಂಗಳ > ಹೊತ್ತಿಗೆ ಅವುಗಳ ಗತಿ ಏನು? ಬೂಟು ಕೊಡುವ ಬಗ್ಗೆ ಯೋಚಿಸುತ್ತಿರುವ ಸರ್ಕಾರ, ನಮ್ಮ > ಮಕ್ಕಳಿಗೆ ಎರಡು ಜೊತೆ ಬಟ್ಟೆ ಕೊಟ್ಟರೆ ಮಹದುಪಕಾರ ಆದೀತೇನೋ. > > ಕನ್ನಡ ಶಾಲೆ ಮಾಸ್ತರ ಮೇಲೆ ಗೂಬೆ! > ಕನ್ನಡ ಶಾಲೆಯ ಮಾಸ್ತರಿಗೆ ಬುದ್ಧಿಯಿಲ್ಲ ಎನ್ನುವುದು ಪುರಾತನವಾದ ಪೂರ್ವಗ್ರಹ. ಹಾಗೆಯೇ > ಆಧುನಿಕ ಮನಸ್ಸಿನ ಮತ್ತೊಂದು ಕೊಳಕುತನ, ಕನ್ನಡ ಶಾಲೆಯ ಮಕ್ಕಳು ಕಳ್ಳರು–ಕೀಳು ಎಂಬುದು. > ಮೊದಲನೆಯ ಮಾತಿಗೆ ಉದಾಹರಣೆಯಾಗಿ ನಮ್ಮ ನಿಕಟಪೂರ್ವ ಶಿಕ್ಷಣ ಸಚಿವರ ನಡವಳಿಕೆಯನ್ನು > ಉದಾಹರಿಸಬಹುದು. > > ವರ್ಗಾವಣೆಯ ಕೋರಿಕೆಯೊಂದಿಗೆ ಇಬ್ಬರು ಶಿಕ್ಷರು ಭೇಟಿಯಾದಾಗ ಅವರ ಕೋರಿಕೆಯನ್ನ > ಮನ್ನಿಸುವುದೋ ತಿರಸ್ಕರಿಸುವುದೋ ಸಚಿವರಿಗೆ ಸಾಧ್ಯವಿತ್ತು. ಆದರೆ, ಅವರು ಶಿಕ್ಷಕರ > ಬುದ್ಧಿಮತ್ತೆ ಪರೀಕ್ಷಿಸಲು ಮೂರು ಪ್ರಶ್ನೆ ಕೇಳಿದರು. ಈ ಚಿಕ್ಕ ಘಟನೆ ಮಾಧ್ಯಮಗಳ ಮೂಲಕ > ಸುದ್ದಿಯಾಯಿತು. ವಾಹಿನಿಯೊಂದು ಮೂರು ಲಕ್ಷ ಶಿಕ್ಷಕರ ಆತ್ಮಗೌರವವನ್ನ ‘ಟಿಆರ್‌ಪಿ’ಗಾಗಿ > ಬಲಿಕೊಟ್ಟು ‘ರಿಯಾಲಿಟಿ ಚೆಕ್’ ಎಂದು ಹೇಳಿಕೊಂಡಿತು. ಇಡೀ ದಿನ ಶಿಕ್ಷಕರನ್ನು ಅದೆಷ್ಟು > ಅಜ್ಞಾನಿಗಳಂತೆ ಚಿತ್ರಿಸಲಾಯಿತೆಂದರೆ, ಬೋಧಕವರ್ಗವೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲು > ಹಿಂಜರಿಕೆಯಾಯಿತು. > > ಶಾಲೆಗೆ ಬರುವ ಮಕ್ಕಳನ್ನು ತಪ್ಪು ಮಾಡಿದಾಗ ಹೊಡೆಯುವುದಿರಲಿ, ಸಿಟ್ಟಿನಿಂದ ನೋಡಲೂಬಾರದು > ಎಂಬ ಕಾನೂನು ಮಾಡುವ ವ್ಯವಸ್ಥೆ, ಇಡೀ ಮೂರು ಲಕ್ಷ ಶಿಕ್ಷಕರ ಮಾನವನ್ನು ಹೀಗೆ ಹರಾಜು ಹಾಕಲು > ಕಾರಣವಾಗಬಹುದೇ? ಕೆಲವು ಶಿಕ್ಷಕ ಶಿಕ್ಷಕಿಯರನ್ನು ಕಿರುತೆರೆಯಲ್ಲಿ ಬಫೂನ್‌ಗಳಂತೆ > ಚಿತ್ರಿಸಲಾಯಿತು. > > ಶಿಕ್ಷಕರ ಮನಸ್ಸಿನ ಮೇಲಾದ ಈ ಆಘಾತಕ್ಕೆ ಮದ್ದು ನೀಡುವವರು ಯಾರು? > ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಪ್ರೇಮಾ > (ಮೂಲತಃ ಕೋಲಾರ ಜಿಲ್ಲೆಯವರು) ಎನ್ನುವ ಶಿಕ್ಷಕಿಯೊಬ್ಬರು ಸೀಮೆಎಣ್ಣೆ ಸುರುವಿಕೊಂಡು > ಬೆಂಕಿಹಚ್ಚಿಕೊಂಡು ಸುಟ್ಟುಹೋದರು. > > ಸಾಯುವ ಮುನ್ನ, ಕುಟುಕು ಜೀವ ಹಿಡಿದುಕೊಂಡಿದ್ದ ಅವರು ತಮ್ಮನ್ನ ಭೇಟಿಮಾಡಲು ಬಂದ > ಮಂತ್ರಿಯೊಬ್ಬರಿಗೆ ‘ದಯಮಾಡಿ ನನ್ನನ್ನ ನಮ್ಮೂರ ಕಡೆ ವರ್ಗಾವಣೆ ಮಾಡಿ ಸಾರ್’ ಎಂದು > ಕೊನೆಯುಸಿರೆಳೆದರು. ಸಾವಿನ ಸಂದರ್ಭದಲ್ಲೂ ವರ್ಗಾವಣೆಯನ್ನು ಕನವರಿಸಿದ ಆ ಶಿಕ್ಷಕಿಯ > ಸನ್ನಿವೇಶ ಏನೆಲ್ಲವನ್ನು ಹೇಳುವಂತಿದೆ. ಆದರೆ, ಆ ಸಂಕಷ್ಟ ನಮ್ಮ ಮಂತ್ರಿಗಳಿಗೆ > ಅರ್ಥವಾಗುತ್ತದೆಯೇ? > > ಚಿಕ್ಕೋಡಿ ತಾಲ್ಲೂಕಿನ ದಲಿತ ಶಿಕ್ಷಕರೊಬ್ಬರ ಮೇಲೆ ಅಕ್ಕಿ ಕಳ್ಳತನದ ಆರೋಪ ಹೊರಿಸಲಾಯಿತು. > ಅವರ ಬೆನ್ನಮೇಲೆ ಮಣಭಾರದ ಚೀಲವನ್ನು ಹೊರಿಸಿ ಊರಲ್ಲಿ ತಿರುಗಿಸಿ ಹಲ್ಲೆ ನಡೆಸಲಾಯಿತು. ಆ > ಶಿಕ್ಷಕ ತಪ್ಪಿತಸ್ಥನೆಂದಾಗಿದ್ದರೆ ಇಲಾಖೆ ವಿಚಾರಣೆಗ ಒಳಪಡಿಸಬಹುದಿತ್ತು. ಆದರೆ > ಅದಾಗಲಿಲ್ಲ. ಶಿಕ್ಷಕರ ಸಂಘಟನೆ ಕೂಡ ಹಲ್ಲೆಗೊಳಗಾದ ಶಿಕ್ಷಕನ ನೆರವಿಗೆ ಬರಲಿಲ್ಲ. > > ಸಂಘಟನೆಗಳು ನಿದ್ದೆಯಿಂದ ಏಳುವುದು ವೇತನನಿಗದಿ ವಿಚಾರ ಬಂದಾಗ ಮಾತ್ರ. ಇಲ್ಲಾದದ್ದೂ > ಅಷ್ಟೇ. ಸಂಘಟನೆ ಕೈಕಟ್ಟಿ ನಿಂತು ಅಧಿಕಾರಿಗಳಿಗೆ ಮನವಿ ಅರ್ಪಿಸಿ ಸುಮ್ಮನಾಯಿತು. ನೊಂದ > ಶಿಕ್ಷಕರ ನೋವು ಮಾತ್ರ ಅವಮಾನಗೊಂಡ ಜಾಗದಲ್ಲಿಯೇ ಸೇವೆ ಮಾಡುತ್ತ ದಿನೇ ದಿನೇ ಹೆಚ್ಚುತ್ತಾ > ಹೋಯಿತು. > > ಆತ್ಮತೃಪ್ತಿ ಎನ್ನುವ ಮರೀಚಿಕೆ > ಬೇರೆ ಯಾವ ಕೆಲಸದಲ್ಲೇ ಆದರೂ ಹೊಟ್ಟೆಪಾಡೆಂದು ಸುಮ್ಮನಿದ್ದು ಬಿಡಬಹುದು. ಆದರೆ > ಶಿಕ್ಷಕರೆಂದರೆ ಇಲ್ಲಿ ಆತ್ಮತೃಪ್ತಿಯೂ ಬೇಕು. ಅದಾವುದಕ್ಕೂ ಅವಕಾಶ ಕೊಡದಷ್ಟು ಕ್ಷುದ್ರಗೊಂಡ > ವಾತಾವರಣದಲ್ಲಿ ಲಾಬಿಗಳು, ಸ್ವಾರ್ಥಗಳು, ಮೇಲರಿಮೆಗಳು ತಾಂಡವವಾಡುತ್ತಿದ್ದರೆ, ಶಿಕ್ಷಕ > ಸಮುದಾಯ ಏನೂ ಮಾಡಲಾಗದ ಅಸಹಾಯಕತನದಲ್ಲಿ ಕೀಳರಿಮೆಯನ್ನೇ ತಿಂದುಂಡು ಇಲ್ಲಿ > ಬದುಕಬೇಕಾಗುತ್ತದೆ. > > ಉತ್ತರ ಕರ್ನಾಟಕದ ಶಾಲೆಯೊಂದರಲ್ಲಿ ಕೆಲಸ ಮಾಡುವ ಶಿಕ್ಷಕರು ವಿಷಾದದಿಂದ ಹೇಳುತ್ತಾರೆ: > ‘ಮಹಾಭ್ರಷ್ಟ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನನಗೆ ಪಶ್ಚಾತ್ತಾಪವಿದೆ. > ಅರ್ಥಪೂರ್ಣವಾಗಿ ಬದುಕು ಕಟ್ಟಿಕೊಳ್ಳುವ, ಹಲವು ಬದುಕುಗಳನ್ನು ಕಟ್ಟುವ ಅವಕಾಶಗಳಿವೆ ಎನ್ನುವ > ಸಂತಸದಿಂದ ಇಲ್ಲಿಗೆ ಬಂದೆ. ಆದರೆ ಇಲ್ಲಿನ ದರ್ಪ, ಲಂಚಕೋರತನ, ವ್ಯಕ್ತಿಗತ ಹಿಂಸೆ ಕಂಡು > ರೋಸಿ ಹೋಗಿರುವೆ. ಇಲ್ಲಿ ಹಣದ ಅವ್ಯವಹಾರ ಮಾತ್ರ ನಡೆಯುತ್ತಿಲ್ಲ – ಪ್ರತಿಯೊಬ್ಬ ಶಿಕ್ಷ > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequentl > y_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected] > <javascript:_e(%7B%7D,'cvml','mathssciencestf%[email protected]');> > . > To post to this group, send email to [email protected] > <javascript:_e(%7B%7D,'cvml','[email protected]');>. > Visit this group at https://groups.google.com/group/mathssciencestf. > For more options, visit https://groups.google.com/d/optout. > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected] > <javascript:_e(%7B%7D,'cvml','mathssciencestf%[email protected]');> > . > To post to this group, send email to [email protected] > <javascript:_e(%7B%7D,'cvml','[email protected]');>. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
