Exelent sir. Its real.

2016-09-20 22:15 GMT+05:30 Manjula J <manjulasateeshchan...@gmail.com>:

> Read it
>
> On 15 Jun 2016 10:08 p.m., "Eranna Eras" <eras.era...@gmail.com> wrote:
>
>>
>> ನಿಮ್ಮ ವ್ಯಕ್ತಿತ್ತವೇನು....?
>> ಒಂದು ಚೀನೀ ಪದ್ಧತಿಯ ವಿಶ್ಲೇಷಣೆ.
>>
>> ಬಹುಷಃ ನಿಮಗೂ ಹೋಲಿಕೆಯಾಗಬಹುದು☺😅
>>
>> ಮಾನವನ ವ್ಯಕ್ತಿತ್ವವನ್ನು ಚೀನೀಯರು ಹನ್ನೆರಡು ಮುಖ್ಯ ಬಗೆಗಳಲ್ಲಿ ವಿಂಗಡಿಸಿದ್ದಾರೆ.
>> ಅವುಗಳಿಗೆ ಸಾಂಕೇತಿಕವಾಗಿ ಪ್ರಾಣಿಗಳನ್ನು ಹೆಸರಿಸಿದ್ದಾರೆ. ಇದನ್ನು ಓದಿದಾಗ ಮನುಷ್ಯನು
>> ತಾನೆಂಥ ಪ್ರಾಣಿ ಎಂದು ತಾನೇ ತಿಳಿದುಕೊಳ್ಳಬಹುದು.
>>   ಇದು ಭವಿಷ್ಯವಲ್ಲ, ನಿಮ್ಮ ಒಳಿತು - ಕೆಡುಕು, ಸಾಮರ್ಥ್ಯ - ದೌರ್ಬಲ್ಯಗಳನ್ನು
>> ತಿಳಿಯಬಹುದಾದ ಒಂದು ಕೈಗನ್ನಡಿ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಹುದಾದ
>> ಮಾರ್ಗದರ್ಶಿ. ನೀವು ಹುಟ್ಟಿದ ವರ್ಷದೊಂದಿಗೆ ನೋಡಿ. ಪ್ರತಿ ಗುಂಪಿನಲ್ಲಿ ಎರಡು ಇಸವಿಗಳ
>> ನಡುವೆ ಹನ್ನೆರಡು ವರ್ಷಗಳ ವ್ಯತ್ಯಾಸವಿದೆ. ಇಲ್ಲಿ ನೀವು ಹುಟ್ಟಿದ ಇಸವಿ ಇಲ್ಲದಿದ್ದರೂ
>> ಕಂಡುಹುಡುಕುವುದು ಸುಲಭ.
>> ( ಈ ಬರಹವನ್ನು ತರಂಗ, ಯುಗಾದಿ ವಿಶೇಷಾಂಕ 1986ರಿಂದ ಸಂಗ್ರಹಿಸಲಾಗಿದೆ)
>>
>> 1. ಹುಲಿ.
>> (1902 1914 1926 1938 1950 1962 1974 1986+ಮುಂದಿನ 12ನೇ ವರ್ಷ..)
>>
>> ಇನ್ನೊಬ್ಬರ ತಪ್ಪು ಹುಡುಕುವುದರಲ್ಲಿ ಪ್ರವೀಣರು. ಕ್ರಾಂತಿಕಾರೀ ಗುಣ. ಎಲ್ಲೇ ಹೋಗಲಿ
>> ನೀವೇ ಕೇಂದ್ರಬಿಂದುವಾಗಬೇಕೆಂಬ ಹಠ ನಿಮ್ಮದು. ಸುತ್ತಲಿನವರೂ ನಿಮ್ಮ ಆಕರ್ಷಣೆಯಿಂದ
>> ತಪ್ಪಿಸಿಕೊಳ್ಳಲಾಗದೆ ಹೇಳಿದ್ದಕ್ಕೆ ಜೀ ಹುಕುಂ ಎನ್ನುವವರೆ. ಎಲ್ಲರಿಂದಲೂ ಗೌರವ
>> ಪಡೆಯುತ್ತಾ, ತನ್ನ ಕುದುರೆಗೆ ಮೂರೇ ಕಾಲು ಎಂದು ಸಾಧಿಸುತ್ತಾ, ಅಲ್ಲ ಎಂಬವರೊಡನೆ ಜಗಳ
>> ಕಾಯುತ್ತಾ ಇರುವ ನಿಮಗೆ ತಡೆ ಹಾಕುವವರೇ ಇಲ್ಲ. ಮಹಾ ಒರಟರು. ಸಣ್ಣ ಸಣ್ಣ ವಿಷಯದಲ್ಲಿಯೂ
>> ಸ್ವಾರ್ಥ ಪ್ರದರ್ಶಿಸುವ ನೀವು ಉದಾರಿಯಾದಿರೆಂದರೆ "ದೊಡ್ಡ ಉದಾರಿ"ಗಳ ಸಾಲಿಗೇ
>> ಸೇರಿಬಿಡುವವರು. ಸಾಹಸಿ ಗುಣವೂ ನಿಮಗಿದೆ. ಸೈನ್ಯದ ಮುಖಂಡತ್ವಕ್ಕೆ ಹೇಳಿಸಿದವರು. ಮಹಿಳೆಯರೂ
>> ಹೀಗೆಯೇ. ಎಲ್ಲದರಲ್ಲೂ ಮೊದಲಿಗರಾಗಬೇಕೆಂಬ ಉತ್ಕಟೇಚ್ಛೆ. ಪ್ರೀತಿಗಾಗಿ ಬಹಳ ಬಯಸುವ ವ್ಯಾಘ್ರ
>> ಗುಂಪಿನನವರಿಗೆ ಜಯ ಸಿಗುವುದು ಮಾತ್ರ ವಿರಳ. ಹಗಲಿಗೆ ಹುಟ್ಟಿದವರದೇ ಒಂದು ಜಾಯಮಾನ. ರಾತ್ರಿ
>> ಜನನವಾದವರ ಜಾಯಮಾನವೇ ಬೇರೆ. ದುಡ್ಡೆಂದರೆ ಅಷ್ಟು ಮೋಹವೇನೂ ನಿಮಗಿಲ್ಲ. ಆದರೆ ದುಡ್ಡು
>> ಸಂಪಾದನೆಯ ಮಾರ್ಗದ ಬಗ್ಗೆ ನಿಮಗೆ ಯಾರೂ ಹೇಳಿಕೊಡುವ ಅಗತ್ಯವೇ ಇಲ್ಲ.! ಒಟ್ಟಾರೆ
>> ಹೇಳುವುದಾದರೆ ಬಲು ರೋಮಾಂಚಕ ವ್ಯಕ್ತಿತ್ವ ನಿಮ್ಮದು. ಕುದುರೆ, ಡ್ರ್ಯಾಗನ್ ಮತ್ತು ನಾಯಿ
>> ಗುಂಪಿನಲ್ಲಿ ಜನಿಸಿದವರು ನಿಮಗೆ ಒಳ್ಳೆಯ ಸಂಗಾತಿಯಾಗಬಲ್ಲರು. ಎಂದಿಗೂ ಮಂಗನ ಗುಂಪಿನವರು
>> ಮಾತ್ರ ನಿಮಗೆ ಬೆಡ.
>>
>> ಪ್ರಸಿದ್ಧರು:- ಮಾರ್ಕೊ ಪೋಲೋ, ಐಸೆನ್ ಹೋವರ್, ಕಾರ್ಲ್ ಮಾರ್ಕ್ಸ್, ಹೋ ಚಿ ಮಿನ್,
>> ಮರ್ಲಿನ್ ಮನ್ರೋ, ನರೇಂದ್ರ ಮೋದಿ.
>>
>> 2. ಮೊಲ
>> ( 1903 1915 1927 1939 1951 1963 1975 1987..)
>>
>> ಅಭಿನಂದನೆ..! ವರಪುತ್ರರು ನೀವು..! ಭಾರೀ ಮಹತ್ವಾಕಾಂಕ್ಷಿಗಳು. ಆದರೇನು.!
>> ಗಾಳಿಸುದ್ದಿಗಳಿಗೆ ಕಿವಿಗೊಡುವುದೆಂದರೆ ಎಲ್ಲಿಲ್ಲದ ತವಕ. ಪಟ್ಟಾಂಗಪ್ರಿಯರು.
>> ಗಮ್ಮತ್ತಿನಲ್ಲಿರುವುದೆಂದರೆ ನಿಮಗೆ ಬಹಳ ಇಷ್ಟ. ಶಾಂತವಾಗಿ ಕಾಣುವ ನೀವು ಸುಲಭದಲ್ಲಿ
>> ವಿಚಲಿತರಾಗುವವರಲ್ಲ. ಆದರೆ ಸ್ವಂತ ಸಮಸ್ಯೆಗಳೆಂದರೆ ತುಸು ತೀವ್ರವಾಗಿಯೇ
>> ಕಳವಳಗೊಳ್ಳುತ್ತೀರಿ. ನೀವೆಷ್ಟೇ ಹೇಳಿದರೂ ಅಂತರಾಳದಿಂದ ಸನಾತನಿಗಳು. ಬಹಳ ಜಾಗರೂಕತೆಯಿಂದ
>> ವ್ಯವಹರಿಸುವವರು. ಇನ್ನು ಈ ಗುಂಪಿನ ಮಹಿಳೆಯರೋ ಎಲ್ಲ ರಂಗದಲ್ಲಿಯೂ ಮುಂಚೂಣಿಯಲ್ಲಿರುವವರು.
>> ಸದಭಿರುಚಿಯ ಬುದ್ಧಿವಂತೆಯರು ಮಾತ್ರವಲ್ಲ, ತಮ್ಮ ಜಾಣತನವನ್ನು ಸದಭಿರುಚಿಯನ್ನು
>> ಇನ್ನೊಬ್ಬರೆದುರು ಪ್ರದರ್ಶಿಸುವ ಇಚ್ಛೆಯನ್ನೂ ತಡೆಯಲಾಗದವರು. ರಾಜಕೀಯ ನಾಯಕರ ಮಡದಿಯರಾಗಲು
>> ಯುಕ್ತರಾದವರು. ಶ್ರೇಷ್ಠ ಅತಿಥೇಯರು. ನೀವು ವಾತ್ಸಲ್ಯಪೂರ್ಣ ವ್ಯಕ್ತಿತ್ವದವರಾಗಿದ್ದರೂ
>> ಕುಟುಂಬದೊಳಗೆ ಮಾತ್ರ ಅಷ್ಟೇನೂ ಒಳ್ಳೆಯ ಸದಸ್ಯರಲ್ಲ..! ಅಂದರೆ ಮನೆಮಂದಿಗಿಂತ ಸ್ನೇಹಿತರೇ
>> ನಿಮಗೆ ಹೆಚ್ಚು ಪ್ರಿಯ. ಹೋತದ ಗುಂಪಿನವರು ನಿಮಗೆ ಉತ್ತಮ ಸಂಗಾತಿ. ಎಂದಿಗೂ ಇಲಿಯ
>> ಗುಂಪಿನವರನ್ನು ಮಾತ್ರ  ವಿವಾಹವಾಗಬೇಡಿ.
>>
>> ಪ್ರಸಿದ್ಧರು:- ಕನ್ಫ್ಯೂಶಿಯಸ್, ಅಗಾಥಾ ಕ್ರಿಸ್ತೀ, ಐನ್ಸ್ಟೈನ್, ಗರಿಬಾಲ್ಡಿ, ಸ್ವಾಮಿ
>> ವಿವೇಕಾನಂದ, ಎಲ್ ಕೆ ಆಡ್ವಾಣಿ
>>
>> 3. ಚೀನೀ ಡ್ರ್ಯಾಗನ್.
>> ( 1904 1916 1928 1940 1952 1964 1976 1988 )
>>
>> ಕಟ್ಟುಮಸ್ತಾದ ವ್ಯಕ್ತಿತ್ವ. ನೇರ, ಸರಳ, ಎಲ್ಲ ಸರಿಯೆ. ಉಪಾಯದಿಂದ, ಮುತ್ಸದ್ದಿತನದಿಂದ
>> ಕಾರ್ಯಸಾಧನೆ ಮಾಡುವುದು ಮಾತ್ರ ನಿಮಗೆ ಬಾರದು. ವದಂತಿಗಳಿಂದ ನೀವು ದೂರ ಇರುತ್ತೀರಿ.
>> ಕಪಟನಾಟಕದವರೆಂದರೆ ಉರಿದುಬೀಳುತ್ತೀರಿ. ಭಾರೀ ಆದರ್ಶವಾದಿ. ಅಷ್ಟೇ ಅಲ್ಲ, ಎಲ್ಲದರಲ್ಲೂ
>> ಪರಿಪೂರ್ಣತೆಯತ್ತವೇ ನಿಮ್ಮ ದೃಷ್ಟಿ. ನಿಮ್ಮ ಸುತ್ತಲಿನವರಿಂದ ಬಲು ಅಪೇಕ್ಷಿಸುತ್ತೀರಿ.
>> ಮೂಗಿನ ತುದಿಯಮೇಲೆಯೇ ಸಿಟ್ಟು. ಆದರೆ ನೀವು ಬುದ್ಧಿವಂತರೂ ಹೌದು. ಕಲೆ, ಸೈನ್ಯ, ವೈದ್ಯಕೀಯ,
>> ರಾಜಕೀಯ ರಂಗಗಳಲ್ಲಿ ನೀವು ಬಲುಬೇಗ ಮೇಲೇರುತ್ತೀರಿ. ಒಳ್ಳೆಯದಕ್ಕೇ ಇರಲಿ; ಕೆಟ್ಟದಕ್ಕೇ
>> ಇರಲಿ. ನೀವು ಕೈ ಹಾಕಿದಿರೆಂದರೆ ಅದು ಸರಿಯಾಗಿ ನಡೆಯುವುದೇ ನಿಮ್ಮ ಗುರಿ. ಒಂದೇ ಪ್ರಮಾಣದ
>> ಪರಿಶ್ರಮ, ಉಮೇದು. ನಿಮಗೆ ಸಂಗಾತಿಯಾಗುವವರು ಇಲಿಯ ಪಂಗಡದವರೆ ಅನುಕೂಲ. ಹಾವು, ಕೋಳಿ
>> ಗುಂಪಿನವರಾದರೂ ಆದೀತು. ಆದರೆ ಮಂಗನ ಗುಂಪಿನವರು ಅತ್ಯಂತ ಸೂಕ್ತ ಸಂಗಾತಿಯಾಗಬಲ್ಲರು. ಹುಲಿ
>> ಮತ್ತು ನಾಯಿ ಗುಂಪಿನವರು ಮಾತ್ರ ನಿಮಗೆ ಬೇಡ. ಅದೃಷ್ಟ, ಸಂಪತ್ತು, ಸಮತೋಲನ, ದೀರ್ಘಾಯುಷ್ಯ
>> ಈ ಗುಂಪಿನವರ ಗರಿಮೆ.
>>
>> ಪ್ರಸಿದ್ಧರು:- ಅಧ್ಯಕ್ಷ ಮಿತೆರಾ, ಜೋನ್ ಆಫ್ ಆರ್ಕ್, ಯೇಸುಕ್ರಿಸ್ತ, ಟಿಟೋ, ಬರ್ನಾರ್ಡ್
>> ಶಾ, ಪ್ಲೋರೆನ್ಸ್ ನೈಟಿಂಗೇಲ್.
>>
>> 4. ಹಾವು.
>> (1905 1917 1929 1941 1953 1965 1977 1989...)
>>
>> ವಿವೇಕ, ದೂರದೃಷ್ಟಿ, ಸಜ್ಜನಿಕೆ, ರಸಿಕತೆಯಿಂದ ಕೂಡಿದ ವ್ಯಕ್ತಿತ್ವ ನಿಮ್ಮದು. ಸೋಮಾರಿ
>> ಕಟ್ಟೆಯಿಂದಲೇ ನೀವು ಹರದಾರಿ ದೂರ. ಬುದ್ಧಿಜೀವಿಗಳೂ ವೇದಾಂತಿಗಳೂ ಆಗಿರುವ ನಿಮಗೆ ಹುಡಿ
>> ಪಟ್ಟಾಂಗ ಒಪ್ಪುವುದೂ ಇಲ್ಲವೆನ್ನಿ. ಒಳ್ಳೊಳ್ಳೆಯ ಉಡುಪು ಧರಿಸುವುದೆಂದರೆ ಪಂಚಪ್ರಾಣ.
>> ಮುಂದಾಗುದನ್ನು ಇಂದೇ ಊಹಿಸಬಲ್ಲಿರಿ. ಆರನೆಯ ಇಂದ್ರಿಯವಿದೆ ಎಂಬಷ್ಟು ಚುರುಕು ಮಿದುಳು
>> ನಿಮ್ಮದು. ಕೈಗೆತ್ತಿಕೊಂಡ ಕೆಲಸವನ್ನು ಅರ್ಧದಲ್ಲಿ ಎಂದೂ ಕೈಬಿಡುವವರಲ್ಲ. ಕೊನೆಗದು
>> ಕೆಟ್ಟದಾಗಿ ಅಂತ್ಯಗೊಂಡರೂ ಸರಿಯೆ. ನೀವು ಪೂರ್ಣಗೊಳಿಸಿಯೇ ಬಿಡುವವರು. ಇನ್ನು ನಿಮ್ಮ
>> ಕಾರ್ಯವೈಖರಿಯೋ ಮಿಂಚಿನಂತೆ. ಅಷ್ಟೇ ದೃಢತೆಯಿಂದ ಕೂಡಿದ್ದು.
>> ದುಡ್ಡಿನ ವಿಷಯದಲ್ಲಂತೂ ಯಾವತ್ತೂ ನಿಮಗೆ ಚಿಂತೆ ಕಾಡಿದ್ದಿಲ್ಲ. ಅಗತ್ಯ ಬಿದ್ದಾಗೆಲ್ಲ
>> ಎಲ್ಲಿಂದಾದರೂ ದುಡ್ಡು ತರುವ ಚಾಕಚಕ್ಯತೆ ನಿಮಗೆ ಕರಗತ. ಕೋಣ ಗುಂಪಿನವರು ನಿಮಗೆ ಉತ್ತಮ
>> ಸಂಗಾತಿಯಾಗಬಲ್ಲರು. ಕೋಳಿ ಗುಂಪಿನವರಾದರೂ ಅಡ್ಡಿ ಇಲ್ಲ. ಆದರೆ ನೆನಪಿರಲಿ, ಹಂದಿ
>> ಗುಂಪಿನವರು ನಿಮಗೆ ಸಲ್ಲ. ಹುಲಿ ಗುಂಪಿನವರಂತೂ ಎಂದಿಗೂ ಬೇಡ.
>>
>> ಪ್ರಸಿದ್ಧರು:- ಜಾಕಿಲಿನ್ ಕೆನಡಿ, ಜಾನ್ ಎಫ್ ಕೆನಡಿ, ಪಿಕಾಸೋ, ಅಲೆಗ್ಸಾಂಡರ್
>> ಫ್ಲೆಮಿಂಗ್, ಮಾವೋ ತ್ಸೆ ತುಂಗ್, ಗಾಂಧೀಜಿ, ಇಂದಿರಾ ಗಾಂಧಿ
>>
>> 5. ಕುದುರೆ
>> ( 1906 1918 1930 1942 1954 1966 1978 1990 2002..)
>>
>> ಹರಿತಮತಿಯ ನೀವು ನೋಡಲು ಭಯ ಹುಟ್ಟಿಸುವಂಥ ವ್ಯಕ್ತಿತ್ವದವರು. ಚಂದದ ಉಡುಗೆ ತೊಡುಗೆ
>> ನಿಮ್ಮ ವೈಶಿಷ್ಟ್ಯ. ಪ್ರಣಯಕೇಳಿಯ ಉಮೇದು ಎಂದೂ ಕಳಕೊಳ್ಳದವರು. ಆಟ ವಿನೋದದಲ್ಲಿಯೂ ನಿಮಗೆ
>> ಆಸಕ್ತಿ ಇದೆ. ಹರಟೆಯೇ..? ಮುಂದಾಗಿ ನೀವೇ ಕುಳಿತುಬಿಡುತ್ತೀರಿ. ಸಮೂಹ ಆಕರ್ಷಣೆಯ ಶಕ್ತಿ
>> ನಿಮಗಿರುವುದರಿಂದ ರಾಜಕೀಯ ಬದುಕಿಗೆ ನೀವು ಲಾಯಕ್ಕಾದವರು. ವ್ಯಾವಹಾರಿಕ ಬುದ್ಧಿಯವರು ನೀವು.
>> ಭಾವುಕತೆಯಿಂದ ತೊಳಲಾಡುವವರಲ್ಲ. ಕಾಲ ಬಂದರೆ ಕುತಂತ್ರಿಗಳೂ ಆಗಬಲ್ಲಿರಿ. ಸಣ್ಣ ಸಣ್ಣ
>> ವಿಷಯಕ್ಕೂ ಸಿಟ್ಟಿನಿಂದ ನೆಗೆದು ಹಾರುವ ಗುಣ. ಅಸಹನೆಯ ಸಾಕಾರ ಮೂರ್ತಿ. ಸಿಟ್ಟು ಸೆಡ;
>> ಎಲ್ಲಿಯೂ ಸಾವಧಾನದ ಚಿಂತನೆ ಕೇಳಬೇಡಿ. ಇದರಿಂದಾಗಿಯೇ ಒಳ್ಳೆಯ ಸ್ನೇಹಿತರನ್ನು ಕಳೆದುಕೊಂಡು
>> ಒಬ್ಬಂಟಿಯಾಗಿ ಬಿಡುತ್ತೀರಿ..! ಎಲ್ಲಿದ್ದರೂ ನೀವೇ ಆಕರ್ಷಣೆಯ ಬಿಂದುವಾಗಬೇಕೆಂಬ ಆಸೆ ಬೇರೆ.
>> ಮದುವೆಯಾದರೂ ಮನೆಯ ಆಡಳಿತ ಸೂತ್ರವೆಲ್ಲ ನಿಮ್ಮ ಕೈಯಲ್ಲೇ. ಆದರೆ ನಿಮ್ಮಂತೆ ಮೈಮುರಿದು
>> ದುಡಿಯುವವರು ಎಲ್ಲಿದ್ದಾರೆ.! ಎಷ್ಟೇ ಕೆಲಸವಿರಲಿ, ಎಷ್ಟೇ ದುಡ್ಡಿನ ವ್ಯವಹಾರವಿರಲಿ, ನೀವು
>> ಹಿಂಜರಿಯುವವರಲ್ಲ. ಸಂಗಾತಿಯಾಗಿ ಹೋತ, ಶ್ವಾನ ಅಥವಾ ಹುಲಿ ಗುಂಪಿನವರನ್ನೇ ಆರಿಸಿಕೊಳ್ಳಿ.
>> ಇಲಿಯನ್ನಂತೂ ಸರ್ವಥಾ ಕೂಡದು.
>>
>> ಪ್ರಸಿದ್ಧರು:- ಕ್ರುಶ್ಚೇವ್, ಲೂಯಿ ಪಾಶ್ಚರ್, ನ್ಯೂಟನ್.
>>
>> 6.ಹೋತ
>> ( 1907 1919 1931 1943 1955 1967 1979 1991...)
>>
>> ಪ್ರಕೃತಿ ಪ್ರಿಯರಾದ ನೀವು ಕಲಾತ್ಮಕ ವ್ಯಕ್ತಿತ್ವದವರು. ಮೋಹಕ ರೂಪಿನವರು. ಆದರೆ
>> ನಿರಾಶಾವಾದಿಗಳು. ಭಾರೀ ಹಿಂಜರಿತದ ಸ್ವಭಾವ. ಯಾವಾಗ ಕಂಡರೂ ಉದ್ವೇಗ. ಇನ್ನೊಬ್ಬರ ಮನೆ ತೋಟದ
>> ಹೂ ಚಂದ ಎನ್ನುವ ಜಾತಿ. ನಿಮ್ಮ ಮೇಲೆ ನಿಮಗೆ ಹಿಡಿತವಿಲ್ಲ. ದೂರು ಸ್ವಭಾವ. ಎಲ್ಲರೂ
>> ತನ್ನನ್ನು ಗಮನಿಸಬೇಕೆಂಬ ಆಸೆ ಬೇರೆ.! ಆದರೆ ನಿಮ್ಮ ನಡೆನುಡಿಯ ಮುಂದೆ ಇನ್ನು ಯಾರು..!
>> ತುಂಬ ಸಹೃದಯಿಗಳು. ದಾನ ಧರ್ಮಕ್ಕಾಗಿ ನಿಮ್ಮ ದುಡ್ಡಿನ ಚೀಲ ಖಾಲಿಯಾಗುತ್ತಲೇ ಇರುತ್ತದೆ.
>> ಉತ್ತಮ ಕಲಾಕಾರರಾಗಿದ್ದರೂ ಕೂಡಾ ಮನೋಶಕ್ತಿ ಕಡಿಮೆ ಇರುವ ಕಾರಣ ಸದಾ ಇನ್ನೊಬ್ಬರ
>> ಮಾರ್ಗದರ್ಶನ ನಿಮಗೆ ಬೇಕೇಬೇಕು. ಸುಮ್ಮನೇ ಬಿಟ್ಟರೆ ನೀವು ನಿಮ್ಮ ಯೋಗ್ಯತೆಯ ಪರಿವೆಯೇ
>> ಇಲ್ಲದೇ ಸಮಯವನ್ನು ಸುಮ್ಮನೇ ಹಾಳುಗೆಡವಿ ಬಿಟ್ಟೀರಿ. ಹೆಂಗಸರಿಗೆ ಶ್ರೀಮಂತರನ್ನು
>> ಮದುವೆಯಾಗಬೇಕೆಂಬ ಕನಸು. ಮೊಲದ ಗುಂಪಿನವರನ್ನೇ ಸಂಗಾತಿಯಾಗಿ ಆರಿಸಿಕೊಳ್ಳಿ. ಇಲ್ಲವೇ
>> ಕುದುರೆ, ಹಂದಿ ಗುಂಪಿನವರಾದರೂ ಸರಿ. ಇನ್ನು ಯಾವ ಗುಂಪಿನವರೂ ನಿಮ್ಮೊಂದಿಗೆ
>> ಹೊಂದಿಕೊಳ್ಳಲಾರು ಜೋಕೆ..!
>>
>> ಪ್ರಸಿದ್ಧರು:- ಮುಸೋಲಿನಿ, ಥಾಮಸ್ ಎಡಿಸನ್, ಅಲೆಗ್ಸಾಂಡರ್ ಗ್ರಹಾಂಬೆಲ್, ಜೇನ್ ಆಸ್ಟಿನ್.
>>
>> 7. ಮಂಗ
>> ( 1908 1920 1932 1944 1956 1968 1980 1992 2004...)
>>
>> ತಂಟೆಕೋರ. ಮೇರೆ ಮೀರಿದ ಉತ್ಸಾಹ. ಚೇಷ್ಟೇಯೇ ಚೇಷ್ಟೆ. ಜನರೊಡನೆ ಬೆರೆಯುವ ಗುಣವೂ
>> ನಿಮ್ಮದು.! ನಿಮ್ಮ ಸಂಪರ್ಕಕ್ಕೆ ಬಂದವರು ತುಂಬ ಆತ್ಮೀಯತೆ ಅನುಭವಿಸುತ್ತಾರೆ ನಿಜ. ಆದರೆ ಆ
>> ಆತ್ಮೀಯತೆಯ ಆಯುಷ್ಯ ಮಾತ್ರ ದೀರ್ಘವಲ್ಲ. ಕಾರಣ ನಿಮ್ಮಲ್ಲಿರುವ ಅಹಂಕಾರಿ, ಸ್ವಾರ್ಥ ಗುಣ.
>> ಉಳಿದವರೆಲ್ಲ ನಿಮಗಿಂತ ಕೀಳು ಎಂದೂ ಎಣಿಸುವ ಜಾಣರಯ್ಯಾ ನೀವು..! ಯಾರಿಗೆ ಏನು ಉಪಕಾರ ಮಾಡಲೂ
>> ಸಿದ್ದರಿರುವ ನೀವು ಯಾರನ್ನೂ ನಂಬಲು ಸಿದ್ಧರಿಲ್ಲ..! ಜ್ಞಾನದ ದಾಹ ಬಹಳ ಇರುವವರು. ಪುಸ್ತಕ
>> ಓದುವುದರಲ್ಲಿ ಮೈ ಮರೆಯುವವರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕೆಲಸ ಮಾಡಿ ಮುಗಿಸುವ
>> ಚುರುಕು ನಿಮ್ಮದು..! ಎಂಥಾ ಸಮಸ್ಯೆಗಳನ್ನೂ ಕ್ಷಣ ಮಾತ್ರದಲ್ಲಿ ಬಗೆಹರಿಸುವ ಅಪ್ರತಿಮರು.
>> ಬೇಕಾದ್ದು ಪಡೆಯಬೇಕೆಂದರೆ ಸಾವಿರ ಸುಳ್ಳು ಹೇಳಲೂ ಸಿದ್ಧ. ಇನ್ನೊಬ್ಬರ ಕಣ್ಣಿಗೆ ಬೂದಿ ಎರಚಿ
>> ಕಾರ್ಯ ಸಾಧಿಸಲೂ ಸೈ..! ನೀವು ಯಾವ ಉದ್ಯೋಗಕ್ಕೆ ಹೋದರೂ ಸೋಲೆಂಬುದಿಲ್ಲ. ಹೆಚ್ಚು
>> ಸೂಕ್ತವೆಂದರೆ ರಾಜಕಾರಣ, ವ್ಯಾಪಾರ, ಕೈಗಾರಿಕೋದ್ಯಮ.
>> ನಿಮ್ಮ ಚುರುಕು ಕೇವಲ ಕೆಲಸ ಕಾರ್ಯಕ್ರಮಗಳಲ್ಲಿ ಮಾತ್ರ ಎಂದೆಣಿಸಬೇಡಿ.
>> ಪ್ರೇಮಿಸುವುದರಲ್ಲಿಯೂ ಅವಸರ, ಪ್ರೇಮಿಸಿ ಕೈ ಬಿಡುವುದರಲ್ಲಿಯೂ ಅವಸರ..! ಉತ್ತಮ
>> ಸಂಗಾತಿಯಾಗುವವರೆಂದರೆ ಡ್ರ್ಯಾಗನ್ ಗುಂಪಿನವರು. ಇಲಿ ಗುಂಪಿನವರಾದರೂ ಸರಿಯೆ.
>>
>> ಪ್ರಸಿದ್ಧರು:- ಜೂಲಿಯಸ್ ಸೀಜರ್, ಲಿಯೋನಾರ್ಡೋ ಡಾ ವಿನ್ಸಿ, ಬೈರನ್, ಎಲಿಜಬೆತ್ ಟೇಲರ್,
>> ಅಲೆಗ್ಸಾಂಡರ್ ಡ್ಯುಮಾಸ್, ಮನಮೋಹನ ಸಿಂಗ್, ರಾಜೀವ್ ಗಾಂಧಿ...
>>
>> 8. ಕೋಳಿ
>> ( 1909 1921 1933 1945 1957 1969 1981 1993 2005...)
>>
>> ಬಿಚ್ಚು ಮನಸ್ಸಿನ ಒರಟರು ನೀವು. ಸುತ್ತು ಬಳಸಿ ಮಾತನಾಡುವ ವೈಖರಿ ಒಗ್ಗದು.
>> ಇನ್ನೊಬ್ಬರಿಗೆ ಬೇಸರವಾಗುತ್ತದೆಂದು ನೀವು ಎಣಿಸುವವರೇ ಅಲ್ಲ. ತನ್ನನ್ನು ಎಲ್ಲರೂ
>> ಗಮನಿಸಬೇಕೆಂಬ ಒಳ ಆಸೆ ಇರುವ ನೀವು ಅಂತರಂಗದಲ್ಲಿ ಸನಾತನಿಗಳು. ಆಕಾಶಗೋಪುರದಲ್ಲೇ
>> ವಾಸಿಸುತ್ತ ಕನಸು ಕಾಣುತ್ತಿರುತ್ತೀರಿ. ಧೈರ್ಯ ಸಾಹಸಗಳಿಗೆ ಹೆಸರಾದವರೂ ಕೂಡಾ. ವಾಸ್ತವವಾಗಿ
>> ಇರುವುದಕ್ಕಿಂತ ಹೆಚ್ಚಿಗೆ ಕೊಚ್ಚಿ ಇಳಿಸುತ್ತೀರಿ. ದುಡ್ಡಿನ ವಿಷಯದಲ್ಲಿ ನಿಮ್ಮ ಕತೆ
>> ಸ್ವಾರಸ್ಯದ್ದಲ್ಲ. ದುಡಿಯಬೇಕು ತಿನ್ನಬೇಕು. ಉಳಿಸಲು ಬರುವುದಿಲ್ಲ. ಹಗಲುಗನಸಿನ ಒಡೆಯರಾದ
>> ನೀವು ಆ ಕಾರಣದಿಂದಾಗಿ ತುಸು ಸೋಮಾರಿತನವನ್ನೂ ಮೈಗೂಡಿಸಿಕೊಳ್ಳುತ್ತೀರಿ. ಬೇಸಾಯಕ್ಕೆ
>> ಹೇಳಿಸಿದವರು. ಈ ಗುಂಪಿನ ಗಂಡಸರು ಹೆಂಗಸರ ನಡುವೆಯೇ ಇರಲು ತುಂಬ ಇಷ್ಟಪಡುತ್ತಾರೆ. ಹೆಂಗಸರೂ
>> ಹೆಂಗಸರ ಜೊತೆ ಪಟ್ಟಾಂಗವನ್ನು ಬಯಸುತ್ತಾರೆ.
>> ಪ್ರೀತಿಸುವುದರಲ್ಲಿ ನೀವೂ ಏನೂ ಕಡಿಮೆಯಿಲ್ಲ. ಆದರೇನು ಮಾಡುವುದು ಪಾಪ. ಹುಟ್ಟಾ
>> ಕನಸುಗಾರರಾದ ನೀವು ಆಗಾಗ ಪ್ರೇಮಿಯನ್ನು ನಿರಾಸೆಗೊಳಿಸುತ್ತಲೇ ಇರುತ್ತೀರಿ. ವಾಸ್ತವ
>> ಕನಸಿಗಿಂತ ತುಂಬ ಬೇರೆಯಾಗಿರುತ್ತದೆ ಎಂದು ಇನ್ನಾದರೂ ನಂಬಿ. ನಿಮಗೆ ಸರಿಯಾದ ಸಂಗಾತಿ
>> ಇರುವುದು ಕೋಣನ ಗುಂಪಿನಲ್ಲಿ. ಹಾವಿನ ಪಂಗಡದವರಾದರೂ ಆದೀತು. ಕೊನೆಗೆ ಡ್ರ್ಯಾಗನ್ ಆದರೂ
>> ಅಡ್ಡಿಯಿಲ್ಲ. ಮೊಲ ಮಾತ್ರ ಹೊರಗೇ ಇರಲಿ. ಸಲ್ಲವೇ ಸಲ್ಲ.
>>
>> ಪ್ರಸಿದ್ಧರು:- ಡಿ ಎಚ್ ಲಾರೆನ್ಸ್, ಕಿಪ್ಲಿಂಗ್, ವಿಲಿಯಂ ಫಾಕ್ನರ್.
>>
>> 9. ನಾಯಿ.
>> (1910 1922 1934 1946 1958 1970 1982 1994 2006...)
>>
>> ಆಹಾ..!! ಅಂತರ್ಮುಖಿಗಳಯ್ಯಾ ನೀವು. ಅನಾವಶ್ಯಕವಾಗಿ ಮನಸ್ಸಿನ ಭಾವನೆಗಳನ್ನು
>> ಹೇಳಿಕೊಳ್ಳುವ ಜಾಯಮಾನವೇ ಅಲ್ಲ ನಿಮ್ಮದು. ತುಸು ನಿರಾಶಾವಾದಿಗಳು ಕೂಡಾ ಆಗಿದ್ದೀರಿ,
>> ಹೌದೇ.? ಗುಂಪು ಗುಳಿಯೆಂದರೆ ಭಾರೀ ದೂರ ಇಡುತ್ತೀರಿ. ನಿಮ್ಮ ಯೋಧ ಗುಣಕ್ಕೆ ಬೆಲೆ
>> ಕಟ್ಟುವವರಾರು..? ನಿಮ್ಮ ವಿಧೇಯತೆ, ಪ್ರಾಮಾಣಿಕತೆಗಳಿಗೆ ಸಾಟಿಯುಂಟೇ..! ಕೊಟ್ಟ ಮಾತನ್ನು
>> ತಪ್ಪದ ಹರಿಶ್ಚಂದ್ರ ದೊರೆಗಳೇ ನೀವು. ಸಮಸ್ಯೆಗಳು ಬಂದರೂ ನಿಮ್ಮ ಬಳಿ ಧಾರಾಳವಾಗಿ
>> ತೋಡಿಕೊಂಡು ಹಗುರಾಗಬಹುದು. ನಿಮ್ಮಿಂದ ಅದು ಎಲ್ಲಿಗೂ ಹೋಗುವುದಿಲ್ಲವೆಂದು ಖಾತರಿ..!
>> ನ್ಯಾಯವಂತರು ನೀವು. ನ್ಯಾಯಕ್ಕಾಗಿ ಎಷ್ಟು ಹೋರಾಡಲೂ ತಯಾರು.! ಪರರ ಕಷ್ಟ ಕಂಡರೆ
>> ಪ್ರಾಮಾಣಿಕವಾಗಿ ಮಿಡಿಯುತ್ತೀರಿ.
>> ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಇದ್ದರೆ ಖರ್ಚು ಮಾಡುತ್ತೀರಿ, ಇಲ್ಲವೇ
>> ಸುಮ್ಮನೇ ಕುಳಿತುಬಿಟ್ಟೀರಿ. ಹಣದ ಹೊಳೆಯಲ್ಲಿಯೇ ತೇಲುತಿದ್ದರೂ ನಿಮ್ಮ ಬೇಕುಗಳು ಬಹಳ ವಿರಳ.
>> ಉದ್ಯೋಗದ ಕುರಿತು ಹೇಳಬೇಕೆಂದರೆ ವ್ಯಾಪಾರ ನಿಮಗೆ ಸೂಕ್ತ. ಕಾರ್ಮಿಕ ನೇತಾರನಾಗಲು ಯೋಗ್ಯ.
>> ವಿದ್ಯಾ ಕ್ಷೇತ್ರವೂ ಒಪ್ಪುವಂತಹುದೇ. ನೀವು ಮನಸ್ಸು ಮಾಡಿದರೆ ಸಂತರಾಗಲೂ ಸಾಧ್ಯ.
>> ಸಂಗಾತಿಯಾಗಿ ನೀವು ಕುದುರೆ ಗುಂಪಿನವರನ್ನು ಆರಿಸಿಕೊಳ್ಳುವುದು ಕ್ಷೇಮ. ಹುಲಿ
>> ಗುಂಪಿನವರನ್ನು ಮದುವೆ ಆದಿರೆಂದರೆ ದಿನಾ ಕಾದಾಟದ ಕೂಳು.
>>
>> ಪ್ರಸಿದ್ಧರು:- ವಾಲ್ಟೇರ್, ಸಾಕ್ರೆಟೀಸ್, ಯೂರಿ ಗಾಗರಿನ್, ಬೆಂಜಮಿನ್ ಫ್ರಾಂಕ್ಲಿನ್,
>> ಸೋನಿಯಾ ಗಾಂಧಿ, ಸಂಜಯ ಗಾಂಧಿ..
>>
>> 10. ಹಂದಿ.
>> ( 1911 1923 1935 947 1959 1971 1983 1995 2007...)
>>
>> ನಂಬಬೇಕೆಂದರೆ ನಂಬಬೇಕು ನಿಮ್ಮನ್ನು. ನಿಮ್ಮೊಡನೆ ಹೇಳಿದ ಒಂದು ಮಾತೂ ಆಚೆ ಈಚೆಗೆ
>> ಹೋಗಲಾರದು. ಪೆಟ್ಟಿಗೆಯಲ್ಲಿಟ್ಟು ಬೀಗ ಜಡಿದಂತೆ ಜೋಪಾನ. ಮುಗ್ಧರಾದರೂ ನೀವು ಆತ್ಮವಿಶ್ವಾಸ
>> ಉಳ್ಳವರು. ನಿಮಗೆ ನೀವೇ ರಕ್ಷಕರು. ರಕ್ಷಣೆಗೆ ಇನ್ನು ಬೇರೆ ಯಾರಿಲ್ಲ. ನೀವು ನಂಬಿದವರನ್ನು
>> ತುಂಬ ಸಹನೆಯಿಂದ ನೋಡುತ್ತೀರಿ. ಮೋಸ ಹೋದರೂ ಸರಿಯೆ, ಒಪ್ಪಿಕೊಂಡು ನಿಮ್ಮ ತಪ್ಪುಗಳನ್ನೇ
>> ಹುಡುಕಲು ತೊಡಗುತ್ತೀರಿ. ನೀವು ಬುದ್ಧಿವಂತರೇನೋ ಹೌದು. ಆದರೆ ಪ್ರೇಮಿಗಳ ವಿಷಯದಲ್ಲಿ ನೀವು
>> ಮಹಾ ದಡ್ಡರು. ದುಡ್ಡು ವ್ಯವಹಾರ ನಿಮ್ಮಿಂದಾಗದು. ನಿಮ್ಮ ಸಂಗ ಮಾತ್ರ ಬಲು ಅಪ್ಯಾಯಮಾನ.
>> ಮೋಜು ಮೇಜವಾನಿ ಕೂಟಗಳಲ್ಲಿ ನಿಮ್ಮ ಹೆಸರು ಮಾತ್ರ ಮೊದಲು ಬರುತ್ತದೆ. ಮಾತು ಉದುರಿಸಿ
>> ಕಳೆಯುವವರಲ್ಲ. ನಿಮ್ಮ ಜ್ಞಾನದ ಹಸಿವು, ಬಾಯಾರಿಕೆ ತಣಿಯುವಂಥದೇ ಅಲ್ಲ.
>> ಪೂರಾ ಲೌಕಿಕವಾದಿಯಾಗಿ ಕಾಣುತ್ತೀರಿ. ಮೃದು ಭಾವದ ಹಿಂದೆ ಬಹಳ ಪ್ರಬಲವಾದ ಆತ್ಮಶಕ್ತಿ
>> ಇರುವಂಥವರು ನೀವು. ಯಾವ ಕೆಲಸಕ್ಕೇ ಹೋಗಲಿ, ಜಯ ಕಟ್ಟಿಟ್ಟದ್ದು. ಕಷ್ಟಪಟ್ಟು ದುಡಿಯುವ
>> ಜಾಯಮಾನ ನಿಮ್ಮದು. ಎಂದಿಗೂ ಹಿತ್ತಾಳೆ ಕಿವಿಯವರಲ್ಲ. ಈ ಗುಂಪಿನ ಮಹಿಳೆಯರು ಒಳ್ಳೆಯ
>> ತಾಯಂದಿರು. ಮೊಲದ ಗುಂಪಿನವರನ್ನೇ ಸಂಗಾತಿಯಾಗಿ ಆರಿಸಿಕೊಳ್ಳಿ. ಹಾವು ಮತ್ತು ಹೋತ
>> ಗುಂಪಿನವರು ಬೇಡ.
>>
>> ಪ್ರಸಿದ್ಧರು:- ಆರ್ನೆಸ್ಟ್ ಹೆಮಿಂಗ್ವೇ, ಬಿಸ್ಮಾರ್ಕ್, ಒಲಿವರ್ ಕಾಮ್ವೆಲ್, ಅಬ್ದುಲ್
>> ಕಲಾಂ...
>>
>> 11. ಇಲಿ
>> (1900 1912 1924 1936 1948 1960 1972 1984 1996...)
>>
>> ಮೋಹಕತೆಯೆಂದರೆ ಈ ಗುಂಪಿನವರದು. ಹಾಗೆಯೇ ಆಕ್ರಮಣಶೀಲ ವ್ಯಕ್ತಿತ್ತವೂ ಸಹ. ನೋಡಲೇನೋ ನೀವು
>> ಬಲು ಶಾಂತರಾಗಿ, ಖುಷಿಯಲ್ಲಿರುವಂತೆ ಕಾಣುತ್ತೀರಿ. ಆದರೆ ಒಳ ಮಾತೇ ಬೇರೆ. ಈ ಶಾಂತತೆಯ ಪದರದ
>> ಕೆಳಗೆ ಭಾರೀ ಸಿಟ್ಟಿನ ಜ್ವಾಲಾಮುಖಿ ಇದೆ. ವಿಶ್ರಾಂತಿಯರಿಯದ ಚೇತನವಿದೆ. ಕೂಟಪ್ರಿಯರಾದ
>> ನೀವು ಹರಟೆ, ಗಾಳಿಮಾತುಗಳನ್ನು ಚಪ್ಪರಿಸಿ ಕೇಳುತ್ತೀರಿ. ಅಷ್ಟೇ ಅಲ್ಲ, ಹೌಹಾರುವಂಥ ಪ್ರಸಂಗ
>> ಸೃಷ್ಟಿಸಿ ಸಂತೋಷ ಪಡುವುದೆಂದರೆ ಎಲ್ಲಿಲ್ಲದ ಉಮೇದು. ಅನುಕೂಲಸಿಂಧು ನಿಮ್ಮ ಸೂತ್ರ.
>> ಒಟ್ಟಾರೆ ಊಹನೆಯಲ್ಲಿಯೇ ಗುಂಡು ಹೊಡೆದು ಬಿಡುತ್ತೀರಿ. ಸರಿಯೋ ತಪ್ಪೋ ಯೋಚನೆ ಇಲ್ಲ. ಅಪ್ಪ,
>> ಅಮ್ಮ, ಸ್ನೇಹಿತರು, ಬಂಧುಗಳು ಯಾರೇ ಇರಲಿ, ಅವರಿಂದೇನಾದರೂ ನಿಮಗೆ ಲಾಭವಿದೆಯಾದರೆ ಮಾತ್ರ
>> ಅವರ ಹಿಂದೆ ಇರುತ್ತೀರಿ. ಯಾವುದಾದರೂ ಕಾರ್ಯವನ್ನು ಕೈಗೊಂಡಿರೆಂದರೆ ಕೊನೆಗದು ದೊಡ್ಡ ಸೋಲೇ
>> ಆಗಿರಲಿ; ತುದಿಮುಟ್ಟದೆ ಬಿಡುವವರಲ್ಲ. ಪ್ರೀತಿಸುವವರಿಗೆ ಏನು ಮಾಡಲೂ ಹಿಂಜರಿಯದ ಉದಾರಿಗಳು.
>> ಈ ಗುಂಪಿನ ಹೆಂಗಸರು ಬೇಡದ್ದನ್ನೆಲ್ಲ ಸಂಗ್ರಹಿಸಿ ಇಡುವ ಚಟದವರು..! ಯಾವತ್ತಾದರೂ ಒಂದು ದಿನ
>> ಪ್ರಯೋಜನಕ್ಕೆ ಬಂದೀತು ಎಂಬ ಗ್ರಹಿಕೆ ಇವರದು. ಉತ್ತಮ ಸಂಗಾತಿ ಎಂದರೆ ಡ್ರ್ಯಾಗನ್
>> ಗುಂಪಿನವರು. ಕೋಣನ ಗುಂಪಿನವರಾದರೂ ಸರಿ. ಕುದುರೆ ಗುಂಪಿನವರ ಸುದ್ದಿ ಮಾತ್ರ ನಿಮಗೆ ಬೇಡ.
>>
>> ಪ್ರಸಿದ್ಧರು:- ಷೇಕ್ಸ್ಪಿಯರ್, ಲೂಯಿಸ್ ಆರ್ಮ್ ಸ್ಟ್ರಾಂಗ್, ವಿನ್ಸ್ಟನ್ ಚರ್ಚಿಲ್,
>> ಪ್ರಿನ್ಸ್ ಚಾರ್ಲ್ಸ್, ಅಟಲ್ ಬಿಹಾರಿ ವಾಜಪೇಯಿ
>>
>> 12. ಕೋಣ.
>> ( 1901 1913 1925 1937 1949 1961 1973 1985 1997 2009...)
>>
>> ಸೌಮ್ಯ, ಕರಾರುವಾಕ್ಕಾದ ನಡವಳಿಕೆ. ಸ್ವಂತ ಹಾಗೂ ಬುದ್ಧಿವಂತ ಮನೋಪ್ರಕೃತಿ.
>> ಇನ್ನೊಬ್ಬರಲ್ಲಿಯೂ ಆತ್ಮವಿಶ್ವಾಸವನ್ನು ಎಚ್ಚರಿಸುವಲ್ಲಿ ನೀವು ನಿಸ್ಸೀಮರು. ಏಕಾಕಿತನವನ್ನೂ
>> ಇಷ್ಟಪಡುತ್ತೀರಿ. ಚಿಂತನಶೀಲ ಮನಸ್ಸು. ಕೆಲವೊಮ್ಮೆ ಭಾರೀ ನಿಂದೆಗೆ, ಟೀಕೆಗೆ ಗುರಿಯಾಗುವುದೂ
>> ಉಂಟು.
>> ನೀವು ಶಾಂತ ವ್ಯಕ್ತಿತ್ವದವರೇನೋ ಹೌದು. ಆದರೆ ನಿಮಗೆ ಸಿಟ್ಟು ಬಂತೆಂದರೆ ಶುದ್ಧ ಒರಟರು.
>> ಅಪಾಯಕಾರಿ. ಆಗ ನೀವಿದ್ದ ಜಾಗವನ್ನೇ ಉಳಿದವರು ಬಿಟ್ಟು ಓಡುವುದು ಲೇಸು.
>> ನೀವು ಆಧುನಿಕತೆಯ ಪ್ರಿಯರು. ಬದಲಾವಣೆಗಾಗಿ ಹಪಹಪಿಸುವವರು. ಮಿನಿಸ್ಕರ್ಟ್ ವಿಷಯವೇ, ಪಾಪ್
>> ಸಂಗೀತವೇ, ಮತ್ತೆ ಯಾವುದೇ ಹೊಸ ವಿಚಾರಗಳೇ- ನಿಮ್ಮಷ್ಟು ಮುಕ್ತವಾಗಿ ಸ್ವಾಗತಿಸುವವರು ಬೇರೆ
>> ಇಲ್ಲ. ಕಷ್ಟಪಟ್ಟು ದುಡಿಯುವ ಕಲೆ ನಿಮಗಿದೆ. ಸಾರ್ವಜನಿಕ ಸೇವೆ ಇತ್ಯಾದಿ ಕಾರ್ಯ ನಿಮಗೆ
>> ಹಿಡಿಸದು. ಸರ್ಜನ್ ಆಗಲು ಬಲು ಯೋಗ್ಯರು ನೀವು. ಈ ಗುಂಪಿನ ಮಹಿಳೆಯರಿಗಂತೂ ಮನೆಯೊಳಗೆ
>> ಇರುವುದೆಂದರೆ ಬಲು ಪ್ರೀತಿ.
>> ನೀವು ಬಲು ಕುಟುಂಬ ಪ್ರಿಯರು. ಕುಟುಂಬಕ್ಕಾಗಿ ಏನು ತ್ಯಾಗ ಮಾಡಲಿಕ್ಕೂ ತಯಾರಿರುವವರು.
>> ಆದರೆ ಉಳಿದವರೆಲ್ಲರೂ ವಿಧೇಯರಾಗಿದ್ದಷ್ಟೂ ಸಾಲದು ಎಂಬ ಗುಣ.
>> ಸುಕೋಮಲ ಮನದವರಾದರೂ ಪ್ರಣಯ ಪ್ರಕರಣಗಳಲ್ಲಿ ಆಸಕ್ತಿ ಇಲ್ಲ. ನಿಮಗೆ ಪರಿಪೂರ್ಣ
>> ಜೋಡಿಯೆಂದರೆ ಕೋಳಿ ಗುಂಪಿನವರು. ಮಂಗನ ಗುಂಪಿನವರೆಂದರೆ ತುಸು ಹೆಚ್ಚಿನ ವಾಂಛೆ ನಿಮಗೆ. ಇಲಿ
>> ಗುಂಪಿನವರೂ ನಿಮಗೆ ಪರವಾಗಿಲ್ಲ.
>>
>> ಪ್ರಸಿದ್ಧರು:- ನೆಪೋಲಿಯನ್, ಹಿಟ್ಲರ್, ಚಾರ್ಲಿ ಚಾಪ್ಲಿನ್, ಸಚಿನ್ ತೆಂಡೂಲ್ಕರ್
>>
>> ಸಂಪಾದನೆ:- #ಮಂಜು
>> ವಿಶೇಷ ಕೃತಜ್ಞತೆ:- B N Devika ಅವರಿಗೆ.
>> Via: ಕಿಶೋರ್. ಎಮ್.ಎನ್
>>
>> Regards
>>
>> ERANNA V
>>
>> --
>> 1. If a teacher wants to join STF, visit http://karnatakaeducation.org.
>> in/KOER/en/index.php/Become_a_STF_groups_member
>> 2. For STF training, visit KOER - http://karnatakaeducation.org.
>> in/KOER/en/index.php
>> 4. For Ubuntu 14.04 installation, visit http://karnatakaeducation.org.
>> in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to