http://m.prajavani.net/article/2016_11_17/452604

17 Nov, 2016

ಯು.ಬಿ. ಪವನಜ

<https://www.facebook.com/sharer/sharer.php?u=https%3A%2F%2Fgoo.gl%2FaUHnRK>
<https://twitter.com/intent/tweet?text=%E0%B2%B5%E0%B2%BF%E0%B2%93%E0%B2%8E%E0%B2%B2%E0%B3%8D%E2%80%8C%E0%B2%9F%E0%B2%BF%E0%B2%87+%28VoLTE%29+%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8%E0%B3%81%3F+%E0%B2%B0%E0%B2%BF%E0%B2%B2%E0%B2%AF%E0%B2%A8%E0%B3%8D%E0%B2%B8%E0%B3%8D+%E0%B2%9C%E0%B2%BF%E0%B2%AF%E0%B3%8A+%E0%B2%B9%E0%B3%87%E0%B2%97%E0%B3%86+%E0%B2%95%E0%B3%86%E0%B2%B2%E0%B2%B8+%E0%B2%AE%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%3F+https%3A%2F%2Fgoo.gl%2FaUHnRK>
<whatsapp://send?text=%E0%B2%B5%E0%B2%BF%E0%B2%93%E0%B2%8E%E0%B2%B2%E0%B3%8D%E2%80%8C%E0%B2%9F%E0%B2%BF%E0%B2%87+%28VoLTE%29+%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8%E0%B3%81%3F+%E0%B2%B0%E0%B2%BF%E0%B2%B2%E0%B2%AF%E0%B2%A8%E0%B3%8D%E0%B2%B8%E0%B3%8D+%E0%B2%9C%E0%B2%BF%E0%B2%AF%E0%B3%8A+%E0%B2%B9%E0%B3%87%E0%B2%97%E0%B3%86+%E0%B2%95%E0%B3%86%E0%B2%B2%E0%B2%B8+%E0%B2%AE%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%3F+-+%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF.++++https%3A%2F%2Fgoo.gl%2FaUHnRK>
<https://plus.google.com/share?url=https%3A%2F%2Fgoo.gl%2FaUHnRK>
<http://www.pinterest.com/pin/find/?url=https%3A%2F%2Fgoo.gl%2FaUHnRK>
<http://www.linkedin.com/shareArticle?mini=true&title=%E0%B2%B5%E0%B2%BF%E0%B2%93%E0%B2%8E%E0%B2%B2%E0%B3%8D%E2%80%8C%E0%B2%9F%E0%B2%BF%E0%B2%87+%28VoLTE%29+%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8%E0%B3%81%3F+%E0%B2%B0%E0%B2%BF%E0%B2%B2%E0%B2%AF%E0%B2%A8%E0%B3%8D%E0%B2%B8%E0%B3%8D+%E0%B2%9C%E0%B2%BF%E0%B2%AF%E0%B3%8A+%E0%B2%B9%E0%B3%87%E0%B2%97%E0%B3%86+%E0%B2%95%E0%B3%86%E0%B2%B2%E0%B2%B8+%E0%B2%AE%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%3F+&url=https%3A%2F%2Fgoo.gl%2FaUHnRK>

₹500 ಮತ್ತು ₹1000 ನೋಟುಗಳನ್ನು ಬದಲಿಸಲು ಜನರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಲ್ಲುವ
ಮೊದಲು ಜನರು ಇದೇ ರೀತಿ ಸಾಲು ನಿಂತಿದ್ದು ರಿಲಯನ್ಸ್ ಜಿಯೊ ಸಿಮ್ ಪಡೆಯಲು. ಇದರ ಪ್ರಮುಖ
ಆಕರ್ಷಣೆ ಎಂದರೆ ಡಿಸೆಂಬರ್ 31ರ ತನಕ ಎಲ್ಲ ಕರೆ ಮತ್ತು ಅಂತರಜಾಲ ಸಂಪರ್ಕ ಸಂಪೂರ್ಣ ಉಚಿತ.
ಅಷ್ಟೇ ಆಗಿದ್ದರೆ ಅದರ ಬಗೆ ಒಂದು ಅಂಕಣ ಬರೆಯಬೇಕಾಗಿರಲಿಲ್ಲ. ಈ ಸಂಚಿಕೆಯಲ್ಲಿ ರಿಲಯನ್ಸ್
ಜಿಯೊ ವ್ಯವಹಾರದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಿಗೆ ಅದು ಬಳಸುತ್ತಿರುವ, ಭಾರತಕ್ಕೆ
ಹೊಸದಾಗಿರುವ, ವಿಓಎಲ್‌ಟಿಇ (VoLTE) ತಂತ್ರಜ್ಞಾನದ ಬಗ್ಗೆ ಸ್ವಲ್ಪ ವಿವರ ತಿಳಿಯಲು
ಪ್ರಯತ್ನಿಸೋಣ.

ಗ್ಯಾಜೆಟ್‌ಲೋಕದ ಮಾರ್ಚ್ 5, 2015ರ ಸಂಚಿಕೆಯಲ್ಲಿ 4ಜಿ ತಂತ್ರಜ್ಞಾನದ ಬಗ್ಗೆ
ಬರೆಯಲಾಗಿತ್ತು. ಅದರಲ್ಲಿ ಇತರೆ ತಂತ್ರಜ್ಞಾನಗಳ ಬಗೆಗೂ ಚುಟುಕಾಗಿ ವಿವರಿಸಲಾಗಿತ್ತು.
ಗ್ಯಾಜೆಟ್‌ಲೋಕದ ಹಳೆಯ ಸಂಚಿಕೆಗಳನ್ನು bitly.com/gadgetloka ಜಾಲತಾಣದಲ್ಲಿ ಓದಬಹುದು.
ಆದರೂ ಚುಟುಕಾಗಿ ಕೆಲವು ವಿಷಯಗಳನ್ನು ಇನ್ನೊಮ್ಮೆ ಪ್ರಸ್ತಾಪಿಸುತ್ತಿದ್ದೇನೆ.

ಮೊಬೈಲ್ ಫೋನ್ ಮೂಲಕ ಬಳಸುವ ಅಂತರಜಾಲ ಸಂಪರ್ಕದಲ್ಲಿ ಹಲವು ತಲೆಮಾರುಗಳಿವೆ. 2ಜಿ ಎಂದರೆ
ಎರಡನೆಯ ತಲೆಮಾರು (2G=second generation), 3ಜಿ ಎಂದರೆ ಮೂರನೆಯ ಮತ್ತು 4ಜಿ ಎಂದರೆ
ನಾಲ್ಕನೆಯ ತಲೆಮಾರು ಎಂದು ಅರ್ಥ. 3ಜಿಯಲ್ಲಿ ಸುಮಾರು 21 ಎಂಬಿಪಿಎಸ್ (mbps=mega bits
per second) ತನಕ ಮಾಹಿತಿಪ್ರವಾಹದ (ಡೌನ್‌ಲೋಡ್) ವೇಗ ದೊರೆಯಬೇಕು. ಸಾಮಾನ್ಯವಾಗಿ
ದೊರೆಯುವುದು ಸುಮಾರು 2-7 ಎಂಬಿಪಿಎಸ್. 4ಜಿ ಎಂದರೆ ನಾಲ್ಕನೆಯ ತಲೆಮಾರಿನ ಸಂಪರ್ಕ. ಇದರ
ಡೌನ್‌ಲೋಡ್ ವೇಗ 100 ಎಂಬಿಪಿಎಸ್ ತನಕ ಇರಬಹುದು. ಆದರೆ ಪ್ರಾಯೋಗಿಕವಾಗಿ ಸುಮಾರು 35
ಎಂಬಿಪಿಎಸ್ ತನಕದ ವೇಗ ದೊರೆಯುತ್ತದೆ. 4ಜಿಗೆ ಹಲವು ಮಾನಕಗಳಿವೆ. ಸದ್ಯ ಭಾರತದಲ್ಲಿರುವ 4ಜಿ
ಎಲ್‌ಟಿಇ (LTE = long term evolution) ಆಗಿದೆ. ಭಾರತದಲ್ಲಿ ಏರ್‌ಟೆಲ್ ಅಲ್ಲದೆ ಇತರೆ
ಕೆಲವು ಕಂಪೆನಿಗಳೂ 4ಜಿ ಸಂಪರ್ಕ ನೀಡಲು ಪರವಾನಗಿ ಪಡೆದಿವೆ.

ವಿಓಎಲ್‌ಟಿಇ ಎಂದರೆ Voice over LTE ಎಂದು ಅರ್ಥ. ಇದು ಬಹುಮಟ್ಟಿಗೆ ವಿಓಐಪಿಗೆ (VOIP=
Voice Over Internet Protocol) ಸಮೀಪವಾಗಿದೆ. ವಿಓಐಪಿಯಲ್ಲಿ ಅಂತರಜಾಲದ ಮೂಲಕ
ಕರೆಗಳನ್ನು ಹಾಗೂ ವಿಡಿಯೊ ಕರೆಗಳನ್ನು ಮಾಡಬಹುದು. ಸ್ಕೈಪ್ ಇದಕ್ಕೆ ಉತ್ತಮ ಉದಾಹರಣೆ.
ಇಲ್ಲೂ ಎರಡು ನಮೂನೆಗಳಿವೆ. ಎರಡು ಬದಿಗಳಲ್ಲೂ ಸ್ಕೈಪ್ ಬಳಸಿ ಕರೆ ಮಾಡುವುದು ಅಥವಾ ವಿಡಿಯೊ
ಚಾಟ್ ಮಾಡುವುದು. ಇನ್ನೊಂದು ನಮೂನೆಯಲ್ಲಿ ಸ್ಕೈಪ್ ಮೂಲಕ ಮಾಮೂಲಿ ದೂರವಾಣಿಗೆ
(ಸ್ಥಿರವಾಣಿಗೆ) ಕರೆ ಮಾಡುವುದು. ವಿಓಎಲ್‌ಟಿಇ ಮೂಲಕ ಕರೆ ಅಥವಾ ವಿಡಿಯೊ ಕರೆ ಮಾಡುವುದೂ
ಅಂತರಜಾಲದ ಮೂಲಕವೇ. ಒಂದು ವಿಓಎಲ್‌ಟಿಇ ಫೋನಿನಿಂದ ಇನ್ನೊಂದು ವಿಓಎಲ್‌ಟಿಇ ಫೋನಿಗೆ ಅಥವಾ
ಮಾಮೂಲಿ ಫೋನಿಗೆ ಕರೆ ಮಾಡಬಹುದು. ಎರಡು ಬದಿಗಳಲ್ಲೂ ವಿಓಎಲ್‌ಟಿಇ ಇದ್ದಲ್ಲಿ ಕರೆಯ ಗುಣಮಟ್ಟ
ಅತ್ಯುತ್ತಮವಾಗಿರುತ್ತದೆ. ಇದಕ್ಕೆ ತಾಂತ್ರಿಕ ಪರಿಭಾಷೆಯಲ್ಲಿ HD ಎಂದರೆ ಹೈಡೆಫಿನಿಶನ್ ಕರೆ
ಎನ್ನುತ್ತಾರೆ.

ರಿಲಯನ್ಸ್ ಜಿಯೊ ಬಳಸುವುದು ವಿಓಎಲ್‌ಟಿಇ ಅನ್ನು. ವಿಓಎಲ್‌ಟಿಇ ಸೌಲಭ್ಯ ಎಲ್ಲ ಫೋನ್‌ಗಳಲ್ಲೂ
ಇರುತ್ತದೆಯಾ? ಇಲ್ಲ. ಹಾಗಿದ್ದರೆ ವಿಓಎಲ್‌ಟಿಇ ಸೌಲಭ್ಯ ಇಲ್ಲದ ಫೋನ್‌ಗಳಲ್ಲಿ ಜಿಯೊ ಸಿಮ್
ಬಳಸುವ ಹಾಗಿಲ್ಲವಾ? ಉತ್ತರ ಹೌದು ಮತ್ತು ಇಲ್ಲ. ನಿಮ್ಮ ಫೋನ್‌ನಲ್ಲಿ 4ಜಿ ಎಲ್‌ಟಿಇ (4G
LTE) ಇದ್ದಲ್ಲಿ ನೀವು ಜಿಯೊ ಸಿಮ್ ಬಳಸಬಹುದು. ಆದರೆ ಕರೆಗಳನ್ನು ಮಾಡಲು ನೀವು Jio4GVoice
ಎಂಬ ಆ್ಯಪ್ ಅನ್ನು ಹಾಕಿಕೊಳ್ಳಬೇಕು. ಈ  ಆ್ಯಪ್ ಅನ್ನು ಯಾವಾಗಲೂ ಆನ್ ಆಗಿ
ಇಟ್ಟುಕೊಳ್ಳಬೇಕು. ನಿಮ್ಮ ಫೋನ್‌ನಲ್ಲಿ 4ಜಿ ಇಲ್ಲವಾದಲ್ಲಿ ಜಿಯೊ ಸಿಮ್ ಕೆಲಸ ಮಾಡಲಾರದು.

ವಿಓಎಲ್‌ಟಿಇ ತಂತ್ರಜ್ಞಾನ ಕರೆಗಳ ಗುಣಮಟ್ಟವನ್ನು ಮಾತ್ರ ಹೆಚ್ಚಿಸುವುದಲ್ಲ. ಅಂತರಜಾಲ
ಸಂಪರ್ಕದ ವೇಗವೂ ಉತ್ತಮವಾಗಿರುತ್ತದೆ. ಆದರೆ ಸದ್ಯ ಭಾರತದಲ್ಲಿ ರಿಲಯನ್ಸ್ ಜಿಯೊ ಇನ್ನೂ
ಪೂರ್ತಿಯಾಗಿ ತನ್ನ ಗುಣಮಟ್ಟವನ್ನು ಸ್ಥಿರಗೊಳಿಸಿಲ್ಲ. ಕರ್ನಾಟಕದಲ್ಲಂತೂ ಅದು ತುಂಬ
ಕೆಳಮಟ್ಟದಲ್ಲಿದೆ. ಮುಂಬಯಿಯಲ್ಲಿ 70 ಎಂಬಿಪಿಎಸ್ ತನಕ ಡೌನ್‌ಲೋಡ್ ವೇಗ ಪಡೆಯುತ್ತಿದ್ದಾರೆ.
ಕರ್ನಾಟಕದಲ್ಲಿ ನನಗೆ 7 ಎಂಬಿಪಿಎಸ್‌ಗಿಂತ ಮೇಲೆ ಹೋಗಿಲ್ಲ. ಕರೆಗಳೂ ಅಷ್ಟೆ. ದಿನದ ಕೆಲವು
ಸಮಯಗಳಲ್ಲಿ ಮಾತ್ರ ಜಿಯೊ ಅಲ್ಲದ ಇತರೆ ಫೋನ್‌ಗಳಿಗೆ ಕರೆ ಮಾಡಲು ಸಾಧ್ಯವಾಗುತ್ತದೆ.
ಜಿಯೊದಿಂದ ಇನ್ನೊಂದು ಜಿಯೊಗೆ ಯಾವ ಸಮಯದಲ್ಲೂ ಕರೆ ಮಾಡಲು ಸಾಧ್ಯವಾಗುತ್ತಿದೆ. ವಿಓಎಲ್‌ಟಿಇ
ಮತ್ತು ಇತರೆ ಮೊಬೈಲ್ ತಂತ್ರಜ್ಞಾನಗಳಿಗೆ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ
ವಿಓಎಲ್‌ಟಿಇನಲ್ಲಿ ಎಲ್ಲವೂ ಅಂತರಜಾಲದ ಮೂಲಕವೇ ಆಗುತ್ತವೆ. 2/3/4ಜಿ ತಂತ್ರಜ್ಞಾನಗಳಲ್ಲಿ
ಕರೆ ಮತ್ತು ಮಾಹಿತಿ ಪ್ರತ್ಯೇಕವಾಗಿರುತ್ತವೆ. ವಿಓಎಲ್‌ಟಿಇ ಬಳಸುವ ಜಿಯೊ ಸಿಮ್‌ನಲ್ಲಿ ನೀವು
ಅಂತರಜಾಲಕ್ಕೆ ಮಾತ್ರ ಹಣ ನೀಡಬೇಕು. ಕರೆಗಳು ಉಚಿತ.  ಇವು ಸದ್ಯದ ಪರಿಸ್ಥಿತಿ. ಅವರ
ಜಾಲತಾಣದಲ್ಲಿ ಆ ರೀತಿ ಬರೆದಿದ್ದಾರೆ. ಆದರೆ ಜನವರಿಯಿಂದ ಯಾವ ರೀತಿ ದರ ನಿಗದಿ ಮಾಡುತ್ತಾರೆ
ಎಂಬ ಬಗ್ಗೆ ಭರವಸೆಯಿಲ್ಲ.

*ವಿಓಎಲ್‌ಟಿಇ ತಂತ್ರಜ್ಞಾನದ ಸಾಧಕಗಳು*
1. ಹೈಡೆಫಿನಿಶನ್ ಕರೆಗಳು. ಕರೆಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತವೆ. ಎರಡು ಬದಿಗಳಲ್ಲೂ
ವಿಓಎಲ್‌ಟಿಇ ಇದ್ದಾಗ ಮಾತ್ರ ಇದು ಸಾಧ್ಯ.
2. ಅಂತರಜಾಲಾಧರಿತ ಹಲವು ಸೇವೆಗಳ ಲಭ್ಯತೆ. ಉದಾಹರಣೆ ವಿಡಿಯೊ ಕರೆ, ಫೈಲ್ ವರ್ಗಾವಣೆ,
ಚಾಟ್, ದೂರದರ್ಶನ ಪ್ರಸಾರ, ಇತ್ಯಾದಿ.
3. ಕರೆ ಮಾಡುವಾಗ ಕೂಡಲೇ ಸಂಪರ್ಕ ಸಾಧ್ಯ. ದೂರವಾಣಿ ಸಂಖ್ಯೆಯನ್ನು ಒತ್ತಿದ ಕೂಡಲೇ ಸಂಪರ್ಕ
ಆಗುತ್ತದೆ. ಎರಡು ಬದಿಗಳಲ್ಲೂ ವಿಓಎಲ್‌ಟಿಇ ಇದ್ದಾಗ ಮಾತ್ರ ಇದು ಸಾಧ್ಯ.
4. ಬ್ಯಾಟರಿ ಹೆಚ್ಚು ಸಮಯ ಬಾಳುತ್ತದೆ.
5. ಸುಧಾರಿತ ವೈಫೈ ಸವಲತ್ತುಗಳು. ಕೆಲವು ಸ್ಥಳಗಳಲ್ಲಿ ವೈಫೈ ಹಾಟ್‌ಸ್ಪಾಟ್ ಮಾಡಿ ಹೆಚ್ಚಿನ
ಸೇವೆಗಳನ್ನು ನೀಡಬಹುದು. ಜಿಯೊದವರು ಇನ್ನೂ ಈ ಸವಲತ್ತುಗಳನ್ನು ಎಲ್ಲ ಕಡೆ ನೀಡಿಲ್ಲ.
6. ಎಲ್ಲ ಟೆಲಿಕಾಂ ಸೇವೆ ನೀಡುವವರೂ ವಿಓಎಲ್‌ಟಿಇಗೆ ಬದಲಾದಾಗ ಒಂದು ಕಂಪೆನಿಯ ಸೇವೆ
ಪಡೆಯುತ್ತಿರುವವರು ಇನ್ನೊಂದು ಕಂಪೆನಿಯ ಸೇವೆ ಪಡೆಯುತ್ತಿರುವವರ ಜೊತೆ ಸುಲಭವಾಗಿ,
ಉತ್ತಮವಾಗಿ ಕರೆ, ವಿಡಿಯೊ ಕರೆ ಮಾಡಬಹುದು. ಭಾರತದಲ್ಲಿ ಇದು ಸಾಧ್ಯವಾಗಲು ಹಲವು ವರ್ಷಗಳು
ಬೇಕಾಗಬಹುದು.

Hareeshkumar K
GHS Huskuru
Malavalli TQ
Mandya Dt
9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to