thanks
2016-11-17 6:48 GMT+05:30 HAREESHKUMAR K Agasanapura <[email protected]> : > http://m.prajavani.net/article/2016_11_17/452604 > > 17 Nov, 2016 > > ಯು.ಬಿ. ಪವನಜ > > > <https://www.facebook.com/sharer/sharer.php?u=https%3A%2F%2Fgoo.gl%2FaUHnRK> > <https://twitter.com/intent/tweet?text=%E0%B2%B5%E0%B2%BF%E0%B2%93%E0%B2%8E%E0%B2%B2%E0%B3%8D%E2%80%8C%E0%B2%9F%E0%B2%BF%E0%B2%87+%28VoLTE%29+%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8%E0%B3%81%3F+%E0%B2%B0%E0%B2%BF%E0%B2%B2%E0%B2%AF%E0%B2%A8%E0%B3%8D%E0%B2%B8%E0%B3%8D+%E0%B2%9C%E0%B2%BF%E0%B2%AF%E0%B3%8A+%E0%B2%B9%E0%B3%87%E0%B2%97%E0%B3%86+%E0%B2%95%E0%B3%86%E0%B2%B2%E0%B2%B8+%E0%B2%AE%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%3F+https%3A%2F%2Fgoo.gl%2FaUHnRK> > <https://plus.google.com/share?url=https%3A%2F%2Fgoo.gl%2FaUHnRK> > <http://www.pinterest.com/pin/find/?url=https%3A%2F%2Fgoo.gl%2FaUHnRK> > <http://www.linkedin.com/shareArticle?mini=true&title=%E0%B2%B5%E0%B2%BF%E0%B2%93%E0%B2%8E%E0%B2%B2%E0%B3%8D%E2%80%8C%E0%B2%9F%E0%B2%BF%E0%B2%87+%28VoLTE%29+%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8%E0%B3%81%3F+%E0%B2%B0%E0%B2%BF%E0%B2%B2%E0%B2%AF%E0%B2%A8%E0%B3%8D%E0%B2%B8%E0%B3%8D+%E0%B2%9C%E0%B2%BF%E0%B2%AF%E0%B3%8A+%E0%B2%B9%E0%B3%87%E0%B2%97%E0%B3%86+%E0%B2%95%E0%B3%86%E0%B2%B2%E0%B2%B8+%E0%B2%AE%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%3F+&url=https%3A%2F%2Fgoo.gl%2FaUHnRK> > > ₹500 ಮತ್ತು ₹1000 ನೋಟುಗಳನ್ನು ಬದಲಿಸಲು ಜನರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಲ್ಲುವ > ಮೊದಲು ಜನರು ಇದೇ ರೀತಿ ಸಾಲು ನಿಂತಿದ್ದು ರಿಲಯನ್ಸ್ ಜಿಯೊ ಸಿಮ್ ಪಡೆಯಲು. ಇದರ ಪ್ರಮುಖ > ಆಕರ್ಷಣೆ ಎಂದರೆ ಡಿಸೆಂಬರ್ 31ರ ತನಕ ಎಲ್ಲ ಕರೆ ಮತ್ತು ಅಂತರಜಾಲ ಸಂಪರ್ಕ ಸಂಪೂರ್ಣ ಉಚಿತ. > ಅಷ್ಟೇ ಆಗಿದ್ದರೆ ಅದರ ಬಗೆ ಒಂದು ಅಂಕಣ ಬರೆಯಬೇಕಾಗಿರಲಿಲ್ಲ. ಈ ಸಂಚಿಕೆಯಲ್ಲಿ ರಿಲಯನ್ಸ್ > ಜಿಯೊ ವ್ಯವಹಾರದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಿಗೆ ಅದು ಬಳಸುತ್ತಿರುವ, ಭಾರತಕ್ಕೆ > ಹೊಸದಾಗಿರುವ, ವಿಓಎಲ್‌ಟಿಇ (VoLTE) ತಂತ್ರಜ್ಞಾನದ ಬಗ್ಗೆ ಸ್ವಲ್ಪ ವಿವರ ತಿಳಿಯಲು > ಪ್ರಯತ್ನಿಸೋಣ. > > ಗ್ಯಾಜೆಟ್‌ಲೋಕದ ಮಾರ್ಚ್ 5, 2015ರ ಸಂಚಿಕೆಯಲ್ಲಿ 4ಜಿ ತಂತ್ರಜ್ಞಾನದ ಬಗ್ಗೆ > ಬರೆಯಲಾಗಿತ್ತು. ಅದರಲ್ಲಿ ಇತರೆ ತಂತ್ರಜ್ಞಾನಗಳ ಬಗೆಗೂ ಚುಟುಕಾಗಿ ವಿವರಿಸಲಾಗಿತ್ತು. > ಗ್ಯಾಜೆಟ್‌ಲೋಕದ ಹಳೆಯ ಸಂಚಿಕೆಗಳನ್ನು bitly.com/gadgetloka ಜಾಲತಾಣದಲ್ಲಿ ಓದಬಹುದು. > ಆದರೂ ಚುಟುಕಾಗಿ ಕೆಲವು ವಿಷಯಗಳನ್ನು ಇನ್ನೊಮ್ಮೆ ಪ್ರಸ್ತಾಪಿಸುತ್ತಿದ್ದೇನೆ. > > ಮೊಬೈಲ್ ಫೋನ್ ಮೂಲಕ ಬಳಸುವ ಅಂತರಜಾಲ ಸಂಪರ್ಕದಲ್ಲಿ ಹಲವು ತಲೆಮಾರುಗಳಿವೆ. 2ಜಿ ಎಂದರೆ > ಎರಡನೆಯ ತಲೆಮಾರು (2G=second generation), 3ಜಿ ಎಂದರೆ ಮೂರನೆಯ ಮತ್ತು 4ಜಿ ಎಂದರೆ > ನಾಲ್ಕನೆಯ ತಲೆಮಾರು ಎಂದು ಅರ್ಥ. 3ಜಿಯಲ್ಲಿ ಸುಮಾರು 21 ಎಂಬಿಪಿಎಸ್ (mbps=mega bits > per second) ತನಕ ಮಾಹಿತಿಪ್ರವಾಹದ (ಡೌನ್‌ಲೋಡ್) ವೇಗ ದೊರೆಯಬೇಕು. ಸಾಮಾನ್ಯವಾಗಿ > ದೊರೆಯುವುದು ಸುಮಾರು 2-7 ಎಂಬಿಪಿಎಸ್. 4ಜಿ ಎಂದರೆ ನಾಲ್ಕನೆಯ ತಲೆಮಾರಿನ ಸಂಪರ್ಕ. ಇದರ > ಡೌನ್‌ಲೋಡ್ ವೇಗ 100 ಎಂಬಿಪಿಎಸ್ ತನಕ ಇರಬಹುದು. ಆದರೆ ಪ್ರಾಯೋಗಿಕವಾಗಿ ಸುಮಾರು 35 > ಎಂಬಿಪಿಎಸ್ ತನಕದ ವೇಗ ದೊರೆಯುತ್ತದೆ. 4ಜಿಗೆ ಹಲವು ಮಾನಕಗಳಿವೆ. ಸದ್ಯ ಭಾರತದಲ್ಲಿರುವ 4ಜಿ > ಎಲ್‌ಟಿಇ (LTE = long term evolution) ಆಗಿದೆ. ಭಾರತದಲ್ಲಿ ಏರ್‌ಟೆಲ್ ಅಲ್ಲದೆ ಇತರೆ > ಕೆಲವು ಕಂಪೆನಿಗಳೂ 4ಜಿ ಸಂಪರ್ಕ ನೀಡಲು ಪರವಾನಗಿ ಪಡೆದಿವೆ. > > ವಿಓಎಲ್‌ಟಿಇ ಎಂದರೆ Voice over LTE ಎಂದು ಅರ್ಥ. ಇದು ಬಹುಮಟ್ಟಿಗೆ ವಿಓಐಪಿಗೆ (VOIP= > Voice Over Internet Protocol) ಸಮೀಪವಾಗಿದೆ. ವಿಓಐಪಿಯಲ್ಲಿ ಅಂತರಜಾಲದ ಮೂಲಕ > ಕರೆಗಳನ್ನು ಹಾಗೂ ವಿಡಿಯೊ ಕರೆಗಳನ್ನು ಮಾಡಬಹುದು. ಸ್ಕೈಪ್ ಇದಕ್ಕೆ ಉತ್ತಮ ಉದಾಹರಣೆ. > ಇಲ್ಲೂ ಎರಡು ನಮೂನೆಗಳಿವೆ. ಎರಡು ಬದಿಗಳಲ್ಲೂ ಸ್ಕೈಪ್ ಬಳಸಿ ಕರೆ ಮಾಡುವುದು ಅಥವಾ ವಿಡಿಯೊ > ಚಾಟ್ ಮಾಡುವುದು. ಇನ್ನೊಂದು ನಮೂನೆಯಲ್ಲಿ ಸ್ಕೈಪ್ ಮೂಲಕ ಮಾಮೂಲಿ ದೂರವಾಣಿಗೆ > (ಸ್ಥಿರವಾಣಿಗೆ) ಕರೆ ಮಾಡುವುದು. ವಿಓಎಲ್‌ಟಿಇ ಮೂಲಕ ಕರೆ ಅಥವಾ ವಿಡಿಯೊ ಕರೆ ಮಾಡುವುದೂ > ಅಂತರಜಾಲದ ಮೂಲಕವೇ. ಒಂದು ವಿಓಎಲ್‌ಟಿಇ ಫೋನಿನಿಂದ ಇನ್ನೊಂದು ವಿಓಎಲ್‌ಟಿಇ ಫೋನಿಗೆ ಅಥವಾ > ಮಾಮೂಲಿ ಫೋನಿಗೆ ಕರೆ ಮಾಡಬಹುದು. ಎರಡು ಬದಿಗಳಲ್ಲೂ ವಿಓಎಲ್‌ಟಿಇ ಇದ್ದಲ್ಲಿ ಕರೆಯ ಗುಣಮಟ್ಟ > ಅತ್ಯುತ್ತಮವಾಗಿರುತ್ತದೆ. ಇದಕ್ಕೆ ತಾಂತ್ರಿಕ ಪರಿಭಾಷೆಯಲ್ಲಿ HD ಎಂದರೆ ಹೈಡೆಫಿನಿಶನ್ ಕರೆ > ಎನ್ನುತ್ತಾರೆ. > > ರಿಲಯನ್ಸ್ ಜಿಯೊ ಬಳಸುವುದು ವಿಓಎಲ್‌ಟಿಇ ಅನ್ನು. ವಿಓಎಲ್‌ಟಿಇ ಸೌಲಭ್ಯ ಎಲ್ಲ > ಫೋನ್‌ಗಳಲ್ಲೂ ಇರುತ್ತದೆಯಾ? ಇಲ್ಲ. ಹಾಗಿದ್ದರೆ ವಿಓಎಲ್‌ಟಿಇ ಸೌಲಭ್ಯ ಇಲ್ಲದ ಫೋನ್‌ಗಳಲ್ಲಿ > ಜಿಯೊ ಸಿಮ್ ಬಳಸುವ ಹಾಗಿಲ್ಲವಾ? ಉತ್ತರ ಹೌದು ಮತ್ತು ಇಲ್ಲ. ನಿಮ್ಮ ಫೋನ್‌ನಲ್ಲಿ 4ಜಿ > ಎಲ್‌ಟಿಇ (4G LTE) ಇದ್ದಲ್ಲಿ ನೀವು ಜಿಯೊ ಸಿಮ್ ಬಳಸಬಹುದು. ಆದರೆ ಕರೆಗಳನ್ನು ಮಾಡಲು > ನೀವು Jio4GVoice ಎಂಬ ಆ್ಯಪ್ ಅನ್ನು ಹಾಕಿಕೊಳ್ಳಬೇಕು. ಈ ಆ್ಯಪ್ ಅನ್ನು ಯಾವಾಗಲೂ ಆನ್ > ಆಗಿ ಇಟ್ಟುಕೊಳ್ಳಬೇಕು. ನಿಮ್ಮ ಫೋನ್‌ನಲ್ಲಿ 4ಜಿ ಇಲ್ಲವಾದಲ್ಲಿ ಜಿಯೊ ಸಿಮ್ ಕೆಲಸ > ಮಾಡಲಾರದು. > > ವಿಓಎಲ್‌ಟಿಇ ತಂತ್ರಜ್ಞಾನ ಕರೆಗಳ ಗುಣಮಟ್ಟವನ್ನು ಮಾತ್ರ ಹೆಚ್ಚಿಸುವುದಲ್ಲ. ಅಂತರಜಾಲ > ಸಂಪರ್ಕದ ವೇಗವೂ ಉತ್ತಮವಾಗಿರುತ್ತದೆ. ಆದರೆ ಸದ್ಯ ಭಾರತದಲ್ಲಿ ರಿಲಯನ್ಸ್ ಜಿಯೊ ಇನ್ನೂ > ಪೂರ್ತಿಯಾಗಿ ತನ್ನ ಗುಣಮಟ್ಟವನ್ನು ಸ್ಥಿರಗೊಳಿಸಿಲ್ಲ. ಕರ್ನಾಟಕದಲ್ಲಂತೂ ಅದು ತುಂಬ > ಕೆಳಮಟ್ಟದಲ್ಲಿದೆ. ಮುಂಬಯಿಯಲ್ಲಿ 70 ಎಂಬಿಪಿಎಸ್ ತನಕ ಡೌನ್‌ಲೋಡ್ ವೇಗ ಪಡೆಯುತ್ತಿದ್ದಾರೆ. > ಕರ್ನಾಟಕದಲ್ಲಿ ನನಗೆ 7 ಎಂಬಿಪಿಎಸ್‌ಗಿಂತ ಮೇಲೆ ಹೋಗಿಲ್ಲ. ಕರೆಗಳೂ ಅಷ್ಟೆ. ದಿನದ ಕೆಲವು > ಸಮಯಗಳಲ್ಲಿ ಮಾತ್ರ ಜಿಯೊ ಅಲ್ಲದ ಇತರೆ ಫೋನ್‌ಗಳಿಗೆ ಕರೆ ಮಾಡಲು ಸಾಧ್ಯವಾಗುತ್ತದೆ. > ಜಿಯೊದಿಂದ ಇನ್ನೊಂದು ಜಿಯೊಗೆ ಯಾವ ಸಮಯದಲ್ಲೂ ಕರೆ ಮಾಡಲು ಸಾಧ್ಯವಾಗುತ್ತಿದೆ. ವಿಓಎಲ್‌ಟಿಇ > ಮತ್ತು ಇತರೆ ಮೊಬೈಲ್ ತಂತ್ರಜ್ಞಾನಗಳಿಗೆ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ > ವಿಓಎಲ್‌ಟಿಇನಲ್ಲಿ ಎಲ್ಲವೂ ಅಂತರಜಾಲದ ಮೂಲಕವೇ ಆಗುತ್ತವೆ. 2/3/4ಜಿ ತಂತ್ರಜ್ಞಾನಗಳಲ್ಲಿ > ಕರೆ ಮತ್ತು ಮಾಹಿತಿ ಪ್ರತ್ಯೇಕವಾಗಿರುತ್ತವೆ. ವಿಓಎಲ್‌ಟಿಇ ಬಳಸುವ ಜಿಯೊ ಸಿಮ್‌ನಲ್ಲಿ ನೀವು > ಅಂತರಜಾಲಕ್ಕೆ ಮಾತ್ರ ಹಣ ನೀಡಬೇಕು. ಕರೆಗಳು ಉಚಿತ. ಇವು ಸದ್ಯದ ಪರಿಸ್ಥಿತಿ. ಅವರ > ಜಾಲತಾಣದಲ್ಲಿ ಆ ರೀತಿ ಬರೆದಿದ್ದಾರೆ. ಆದರೆ ಜನವರಿಯಿಂದ ಯಾವ ರೀತಿ ದರ ನಿಗದಿ ಮಾಡುತ್ತಾರೆ > ಎಂಬ ಬಗ್ಗೆ ಭರವಸೆಯಿಲ್ಲ. > > *ವಿಓಎಲ್‌ಟಿಇ ತಂತ್ರಜ್ಞಾನದ ಸಾಧಕಗಳು* > 1. ಹೈಡೆಫಿನಿಶನ್ ಕರೆಗಳು. ಕರೆಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತವೆ. ಎರಡು ಬದಿಗಳಲ್ಲೂ > ವಿಓಎಲ್‌ಟಿಇ ಇದ್ದಾಗ ಮಾತ್ರ ಇದು ಸಾಧ್ಯ. > 2. ಅಂತರಜಾಲಾಧರಿತ ಹಲವು ಸೇವೆಗಳ ಲಭ್ಯತೆ. ಉದಾಹರಣೆ ವಿಡಿಯೊ ಕರೆ, ಫೈಲ್ ವರ್ಗಾವಣೆ, > ಚಾಟ್, ದೂರದರ್ಶನ ಪ್ರಸಾರ, ಇತ್ಯಾದಿ. > 3. ಕರೆ ಮಾಡುವಾಗ ಕೂಡಲೇ ಸಂಪರ್ಕ ಸಾಧ್ಯ. ದೂರವಾಣಿ ಸಂಖ್ಯೆಯನ್ನು ಒತ್ತಿದ ಕೂಡಲೇ ಸಂಪರ್ಕ > ಆಗುತ್ತದೆ. ಎರಡು ಬದಿಗಳಲ್ಲೂ ವಿಓಎಲ್‌ಟಿಇ ಇದ್ದಾಗ ಮಾತ್ರ ಇದು ಸಾಧ್ಯ. > 4. ಬ್ಯಾಟರಿ ಹೆಚ್ಚು ಸಮಯ ಬಾಳುತ್ತದೆ. > 5. ಸುಧಾರಿತ ವೈಫೈ ಸವಲತ್ತುಗಳು. ಕೆಲವು ಸ್ಥಳಗಳಲ್ಲಿ ವೈಫೈ ಹಾಟ್‌ಸ್ಪಾಟ್ ಮಾಡಿ ಹೆಚ್ಚಿನ > ಸೇವೆಗಳನ್ನು ನೀಡಬಹುದು. ಜಿಯೊದವರು ಇನ್ನೂ ಈ ಸವಲತ್ತುಗಳನ್ನು ಎಲ್ಲ ಕಡೆ ನೀಡಿಲ್ಲ. > 6. ಎಲ್ಲ ಟೆಲಿಕಾಂ ಸೇವೆ ನೀಡುವವರೂ ವಿಓಎಲ್‌ಟಿಇಗೆ ಬದಲಾದಾಗ ಒಂದು ಕಂಪೆನಿಯ ಸೇವೆ > ಪಡೆಯುತ್ತಿರುವವರು ಇನ್ನೊಂದು ಕಂಪೆನಿಯ ಸೇವೆ ಪಡೆಯುತ್ತಿರುವವರ ಜೊತೆ ಸುಲಭವಾಗಿ, > ಉತ್ತಮವಾಗಿ ಕರೆ, ವಿಡಿಯೊ ಕರೆ ಮಾಡಬಹುದು. ಭಾರತದಲ್ಲಿ ಇದು ಸಾಧ್ಯವಾಗಲು ಹಲವು ವರ್ಷಗಳು > ಬೇಕಾಗಬಹುದು. > > Hareeshkumar K > GHS Huskuru > Malavalli TQ > Mandya Dt > 9880328224 > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
