https://www.vishwavani.news/political-devil-dint-leave-science/

*ವಿಜ್ಞಾನವನ್ನೂ ಬಿಟ್ಟಿಲ್ಲ ರಾಜಕೀಯದ ಭೂತ!*

 Tuesday, 22.11.2016     ಶಾಂತಾರಾಮ್‌
<https://www.vishwavani.news/author/shantaram/>     No Comments

<https://www.vishwavani.news/#facebook>
<https://www.vishwavani.news/#twitter>
<https://www.vishwavani.news/#google_gmail>
<https://www.vishwavani.news/#whatsapp>Share
<https://www.addtoany.com/share#url=https%3A%2F%2Fwww.vishwavani.news%2Fpolitical-devil-dint-leave-science%2F&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%B5%E0%B2%A8%E0%B3%8D%E0%B2%A8%E0%B3%82%20%E0%B2%AC%E0%B2%BF%E0%B2%9F%E0%B3%8D%E0%B2%9F%E0%B2%BF%E0%B2%B2%E0%B3%8D%E0%B2%B2%20%E0%B2%B0%E0%B2%BE%E0%B2%9C%E0%B2%95%E0%B3%80%E0%B2%AF%E0%B2%A6%20%E0%B2%AD%E0%B3%82%E0%B2%A4!>

Posted In : ಸಂಗಮ <https://www.vishwavani.news/category/samputa/sangama/>,
ಸಾಗರೋತ್ತರ <https://www.vishwavani.news/category/columns/saagarottara/>

ಯಾವ ದೇಶದಲ್ಲಿಯೇ ಆಗಲಿ ಅಥವಾ ಯಾವುದೇ ಸಮಯದಲ್ಲಾಗಲಿ ರಾಜಕಾರಣಿಗಳಿಗೆ ಹಾಗೂ ಜನ
ಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅಂದರೆ ಅಸಡ್ಡೆ. 21ನೆ ಶತಮಾನದ ಅತ್ಯಂತ
narrow but highly specialized ಯುಗದಲ್ಲಿ ಒಂದು ವಿಷಯದ ವಿಜ್ಞಾನಿ, ವಿಜ್ಞಾನದ
ಇನ್ನೊಂದು ವಿಷಯದ ಬಗ್ಗೆ ಅರ್ಥೈಸಿಕೊಳ್ಳುವುದೇ ಕಷ್ಟವಾಗುತ್ತಿರುವಾಗ, ಜನರನ್ನು ಆ ಕುರಿತು
ಕೇಳಲೇಬಾರದು. ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದ ಜೀವನವನ್ನು ಊಹಿಸುವುದೂ
ಅಸಾಧ್ಯವಾಗಿದ್ದರೂ ಯಾರಾದರು ಆಧುನಿಕ ತಂತ್ರಜ್ಞಾನವನ್ನು ದೂರಿದರೆ, ನಿಜ ಎಂದು ಜನ
ತಲೆದೂಗುತ್ತಾರೆ.

ಕಬ್ಬಿಣದ ಕಡಲೆಯಂತಿರುವ ವಿಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸುವಲ್ಲಿ ವಿಜ್ಞಾನಿಗಳು
ಸೋತಿದ್ದಾರೆ. ಜನರಿಗೆ ವಿಜ್ಞಾನದ ಮಾಹಿತಿಯನ್ನು ತಲುಪಿಸುವುದಕ್ಕೆ ವಿಜ್ಞಾನಿಗಳು
ಮುಂದಾಗಬೇಕು. ರಾಜಕಾರಣಿಗಳಂತೂ ವಿಜ್ಞಾನದ ಬಗ್ಗೆ ಮಾತನಾಡಿದರೆ ಮುಖ ಕಿವುಚುತ್ತಾರೆ. ಆದರೆ
ತಂತ್ರಜ್ಞಾನವನ್ನು ವಿರೋಧಿಸಿ ಬೀದಿಗಿಳಿಯುವ ಅಜ್ಞಾನಿಗಳ ಮಾತಿಗೆ ಹೂಗುಡುತ್ತಾರೆ. ಇನ್ನು
ವಿಜ್ಞಾನಿಗಳಂತೂ ಬೀದಿಗಿಳಿದು ಹೋರಾಡುವುದೇ ಇಲ್ಲ. ಅದು ಅವರ ಜಾಯಮಾನವೂ ಅಲ್ಲ. ಹಾಗಾಗಿ,
ವಿಜ್ಞಾನಿಗಳ ಮಾತುಗಳನ್ನು ಯಾವ ರಾಜಕಾರಣಿಯೂ ಕೇಳಿಸಿಕೊಳ್ಳುವುದಿಲ್ಲ. ವಿಜ್ಞಾನಿಗಳು ಮತ
ಭಂಡಾರವೂ ಅಲ್ಲ. ವಿಜ್ಞಾನದ ಏಳಿಗೆಗೆ ಬೇಕಾದ ಹಣ ಮತ್ತು ಪ್ರೋತ್ಸಾಹವನ್ನು ಸರಕಾರವೇ
ಕೊಡಬೇಕು.

ಭಾರತದಂಥ ದೇಶದಲ್ಲಿ ಶೇ.95ರಿಂದ ಶೇ.98ರಷ್ಟು ವಿಜ್ಞಾನಿಗಳು ಸರಕಾರಿ ಸಂಸ್ಥೆಗಳಲ್ಲೇ ಕೆಲಸ
ಮಾಡಬೇಕು ಮತ್ತು ಪ್ರತಿಭಟನೆ ನಡೆಸಲೂ ಸರಕಾರದಿಂದ ಅನುಮತಿ ಪಡೆಯಬೇಕು. ವಿಜ್ಞಾನದ
ವಿರೋಧಿಗಳಿಗೆ ಈ ವಿಚಾರ ಚೆನ್ನಾಗಿಯೇ ಗೊತ್ತು. ಹಾಗಾಗಿ ವಿರೋಧಿ ಗುಂಪುಗಳು ವಿಜ್ಞಾನದ
ಬಗ್ಗೆ ನಿರಕ್ಷರಕುಕ್ಷಿಗಳಾದ ರಾಜಕಾರಣಿಗಳನ್ನು ತಮ್ಮಿಷ್ಟಕ್ಕೆ ಬಂದಂತೆ ಕುಣಿಸುತ್ತಾರೆ.
ವಿಜ್ಞಾನದ ಅಜ್ಞಾನ ಯಾವ ಪಂಥದ ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಬಿಜೆಪಿ, ಕಾಂಗ್ರೆಸ್,
ಸಮಾಜವಾದಿ ಪಕ್ಷ ಅಥವಾ ಕಮ್ಯುನಿಸ್ಟ್‌ರಾಗಲಿ ಅಣುತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ
ಬಗೆಗಿರುವ ರಾಜಕೀಯ ಪ್ರೇರಿತ ಅಭಿಪ್ರಾಯಗಳನ್ನು ಏನಾದರೂ ಬದಲಿಸಿಕೊಳ್ಳುವುದಿಲ್ಲ.
ಸಮಾಜವಾದಿಗಳು ಒಂದು ರೀತಿಯಲ್ಲಿ ಅಘೋಷಿತ ಅಥವಾ ಬಹಿರಂಗ ಕಮ್ಯುನಿಸ್ಟರು. ಯಾವ ರೀತಿ
ವಾಮಪಂಥೀಯ ಸಂಘಟನೆಗಳು ಕೋಡಂಕುಲಂ ಅಣು ಸ್ಥಾವರವನ್ನು ವಿರೋಧಿಸಿ ಗಬ್ಬೆಬ್ಬಿಸಿದರೆಂದು
ಗೊತ್ತೇ ಇದೆ. ಕುಲಾಂತರಿ ತಂತ್ರಜ್ಞಾನವನ್ನೂ ಇದೇ ರೀತಿ ವಾಮಪಂಥದ ಕಡೆಗೆ ತಿರುಗಿಸಿ
ಕುಲಾಂತರಿ ಬೆಳೆಗಳನ್ನು ಬೆಳೆಯುವುದಕ್ಕೆ ಅವಕಾಶವನ್ನೇ ಕೊಟ್ಟಿಲ್ಲ.

ಈಗ ಕೇರಳದ ಕಮ್ಯುನ್ಟ್‌ ಸರಕಾರದ ವಿತ್ತ ಮಂತ್ರಿ, ‘ಕುಲಾಂತರಿ ಅಂದರೆ Monsanto, Monsanto
ಅಂದರೆ ಕುಲಾಂತರಿ. Monsanto ಕಮ್ಯುನಿಸ್ಟರ ಪರಮ ವೈರಿಯಾದ ಅಮೆರಿಕದ ಬಹುರಾಷ್ಟ್ರೀಯ
ಕಂಪನಿ. ಹಾಗಾಗಿ ನಮಗೆ ಕುಲಾಂತರಿ ತಂತ್ರಜ್ಞಾನ ಬೇಡವೇ ಬೇಡ’ ಎಂದಿದ್ದಾರೆ! ಚೀನಾದವರು
ಜೈವಿಕ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ Syngenta ವನ್ನು ಖರೀದಿಸಿ ಕುಲಾಂತರಿ
ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಸಚಿವರ ಪ್ರಕಾರ ಇದು ನಮಗೆ ಬೇಡವಾದ ವಿಷಯ.
ಇದೇ ನೋಡಿ ಈ ಕಮ್ಯುನಿಸ್ಟರ ದ್ವಂದ್ವ ನೀತಿ. ಉಳಿದೆಲ್ಲಾ ರಾಜಕೀಯ ವಿಷಯಗಳಿಗೆ ಚೀನಾದ
ಕಮ್ಯುನಿಸಂನ ಉತ್ತೇಜನ ಬೇಕು. ವೈಜ್ಞಾನಿಕವಾಗಿ ಮಾತ್ರ ಚೀನಾ ಮಾದರಿಯಲ್ಲ! ಬಹುತೇಕ
ರಾಷ್ಟ್ರಗಳಲ್ಲಿ ರಾಜಕೀಯದಲ್ಲಿ ವಿಜ್ಞಾನದ ಜ್ಞಾನವುಳ್ಳವರು ಬಹು ವಿರಳ. ನಮ್ಮ
ಅದೃಷ್ಟವೆಂದರೆ ಪ್ರಧಾನಿ ನೆಹರು ನಂತರ ಪ್ರಧಾನಿ ಮೋದಿಯವರಿಗೆ ವಿಜ್ಞಾನ ಮತ್ತು
ತಂತ್ರಜ್ಞಾನದ ಬಗ್ಗೆ ಅತ್ಯಂತ ಕಾಳಜಿ ಇದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ವಿಜ್ಞಾನ
ಮಂತ್ರಿಯಾಗಿದ್ದ ಡಾ. ಮುರಳಿಮೋಹನ ಜೋಶಿಯವರಿಗಿದ್ದ ವೈಜ್ಞಾನಿಕ ಸಂತುಲನದ ಬಗ್ಗೆ
ವಿಶಿಷ್ಟವಾಗಿ ಹೇಳಬೇಕಿಲ್ಲ.

ಇವೆಲ್ಲದರ ಮಧ್ಯೆ ವಿಜ್ಞಾನ ವಿರೋಧಿ ಗುಂಪುಗಳು ತಮ್ಮದೇ ಆದ ಒಂದು ಸಮಾನಾಂತರ ವಿಜ್ಞಾನವನ್ನು
ರೂಪಿಸಿಕೊಂಡು ನೈಜ ವಿಜ್ಞಾನಕ್ಕೆ ಸೆಡ್ಡು ಹೊಡೆಯುತ್ತಿವೆ. ಕಳೆದ ತಿಂಗಳು ಕುಲಾಂತರಿ
ವಿರೋಧಿಗಳು ದೆಹಲಿಯಲ್ಲಿ ಫ್ರಾನ್ಸನ ಎರಿಕ್ ಸೆರಾಲಿನಿ ಎಂಬ ವಿಜ್ಞಾನಿಯನ್ನು ಕರೆಸಿದ್ದರು.
ಯಾಕೆ ಕುಲಾಂತರಿ ಸಾಸಿವೆಯನ್ನು ಬೆಳೆಯಬಾರದೆಂದು ಆತ ಹತ್ತಾರು ರಾಜಕಾರಣಿಗಳ ಕಿವಿಯೂದಿ
ಹೋಗಿದ್ದಾನೆ. ಬಾಸುದೇಬ ಆಚಾರಿಯ ಎಂಬ ಕಮ್ಯುನ್ಟ್‌ ಸಂಸದ ತಾನು ಕೃಷಿ ಕ್ಷೇತ್ರದ ಸಂಸದೀಯ
ಕಮಿಟಿ ಅಧ್ಯಕ್ಷನಾಗಿದ್ದಾಗ ‘ಗ್ರೀನ್ ಪೀಸ್’ ಎಂಬ ವಿರೋಧಿ ಗುಂಪಿನ ಕೈಯಲ್ಲಿ 400 ಪೇಜಿನ
ವರದಿಯನ್ನು ಬರೆಸಿ ತನ್ನ ಕಮಿಟಿಯ 30 ಸಂಸದರಿಂದ ಸಹಿ ಹಾಕಿಸಿ ಸಂಸತ್ತಿಗೆ ಸಲ್ಲಿಸಿಯೇ
ಬಿಟ್ಟ. ಸಂಸದ ಮಹಾಶಯರು ಆ ವರದಿಯನ್ನು ಓದದೆಯೇ ಸಹಿ ಹಾಕಿದ್ದನ್ನು ಸ್ವತಃ
ಒಪ್ಪಿಕೊಂಡಿದ್ದಾರೆ. ಅವರೆಲ್ಲರ ಪ್ರಕಾರ, ವಿಜ್ಞಾನದ ವರದಿಯನ್ನು ಓದಿದರೆ ತಲೆ ಚಿಟ್ಟು
ಹಿಡಿಯುತ್ತದೆ. ಕಮಿಟಿಯ ಅಧ್ಯಕ್ಷರು ಏನು ಹೇಳುತ್ತಾರೋ ಅದಕ್ಕೆ ಕಣ್ಣು ಮುಚ್ಚಿಕೊಂಡು ಸಹಿ
ಹಾಕುತ್ತಾರೆ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಅನಾಹುತಗಳು ನಡೆಯುತ್ತವೆ.

ವಿರೋಧಿಗಳು ಹೇಳುವುದೇನೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ಏನೇ ನಿರ್ಧಾರ
ತೆಗೆದುಕೊಳ್ಳಬೇಕಾದರೂ ಜನಪ್ರತಿನಿಧಿಗಳಿಂದ ಒಮ್ಮತ ಪಡೆದು ತೆಗೆದುಕೊಳ್ಳಬೇಕು. ವಿಜ್ಞಾನಿಗಳ
ಸಲಹೆಯನ್ನು ಅಗತ್ಯವಿದ್ದರಷ್ಟೇ ತೆಗೆದುಕೊಂಡರೆ ಸಾಕು. ಅದರಲ್ಲೂ, ರಾಜಕಾರಣಿಗಳು ತಮಗೆ
ಬೇಕಾದ (ವಿರೋಧಿಗಳಿಗೆ ಬೇಕಾದ) ವಿಜ್ಞಾನಿಗಳಿಂದ ಮಾತ್ರ ಸಲಹೆ ಪಡೆಯುತ್ತಾರೆ.

ಆದರೆ ಜನರ ಅಧಿಕಮತಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ನಿರ್ಧಾರ
ತೆಗೆದುಕೊಳ್ಳುವುದು ಸಾಧುವಲ್ಲ. ವಿಜ್ಞಾನಿಗಳಿಂದ ಅಭಿಪ್ರಾಯ ಪಡೆದು ದೇಶದ ಒಳಿತನ್ನು ಮತ್ತು
ಸಾಧಕ-ಬಾಧಕಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಡಾ.
ಮನಮೋಹನ್ ಸಿಂಗ್ ಸರಕಾರ ಕೂಡಂಕುಲಂ ಅಣು ಸ್ಥಾವರದ ಬಗ್ಗೆ ಖಚಿತವಾದ ನಿರ್ಧಾರವನ್ನು
ತೆಗೆದುಕೊಂಡಿತು. ಅದೇ ರೀತಿ ಡಾ. ಸಿಂಗ್ ಕುಲಾಂತರಿ ಬಗ್ಗೆ ಸಾಕಷ್ಟು ಬಾರಿ ಜೈರಾಮ್
ರಮೇಶ್‌ಗೆ ತಿಳಿವಳಿಕೆ ನೀಡಿದರೂ ಆ ಮನುಷ್ಯ ಪರಿಸರವಾದಿಗಳನ್ನು ಮತ್ತು ಸೋನಿಯಾ ಗಾಂಧಿಯನ್ನು
ಮೆಚ್ಚಿಸಲು ತನ್ನ ನಿಲುವನ್ನು ಬದಲಿಸಲೇ ಇಲ್ಲ.

ಇದಕ್ಕೆಲ್ಲಾ ಮುಖ್ಯ ಕಾರಣ NAC ಎಂಬ ಸೂಪರ್ ಕ್ಯಾಬಿನೆಟ್ ನಡೆಸುತ್ತಿದ್ದ ಸೋನಿಯಾ ಗಾಂಧಿ.
ಆಕೆಯನ್ನು ಓಲೈಸುವುದಕ್ಕೋಸ್ಕರ ಜೈರಾಮ್ ರಮೇಶ್ ಮತ್ತು ಜಯಂತಿ ನಟರಾಜನ್ ಎಂಬ ಗೋಸುಂಬೆ
ರಾಜಕಾರಣಿಗಳು ಕುಲಾಂತರಿಯ ಬಗ್ಗೆ ತಮ್ಮ ನಿರ್ಧಾರವನ್ನು ಬದಲಿಸಕೊಳ್ಳಲೇ ಇಲ್ಲ. ದೆಹಲಿಯಲ್ಲಿ
ರಾಜಕಾರಣಿಯಾಗಬೇಕಿದ್ದರೆ ತನ್ನ ಪಾರ್ಟಿಯ ಅಧಿನಾಯಕಿಯನ್ನು ಒಲಿಸಿಕೊಳ್ಳಬೇಕು. ವೈಜ್ಞಾನಿಕ
ಅಭಿಪ್ರಾಯವೇನೇ ಇದ್ದರೂ ಅಧಿನಾಯಕಿಯ ಗುಲಾಮನಾಗಲೇಬೇಕು. ಈ ರೀತಿಯ ರಾಜಕೀಯದಿಂದ ದೇಶಕ್ಕೆ
ನಷ್ಟವೇ ಹೊರತು ಇನ್ಯಾರಿಗೂ ಅಲ್ಲ.

ಮೋದಿಯವರಿಗೆ ನಿಜವಾಗಿಯೂ ವಿಜ್ಞಾನ, ತಂತ್ರಜ್ಞಾನದ ಮೇಲೆ ಆಸಕ್ತಿಯಿದೆ. ಅಣು ಸ್ಥಾವರಗಳನ್ನು
ಸ್ಥಾಪಿಸಲು ಅಮೆರಿಕ, ಫ್ರಾನ್ಸ್ ಮತ್ತು ಜಪಾನ್‌ಗಳೊಂದಿಗೆ ಒಪ್ಪಂದ ಮಾಡಲಾಗಿದೆ. ಆದರೆ
ಇನ್ನೂ ಕೆಲಸಗಳು ಆರಂಭವಾಗಿಲ್ಲ. ಕುಲಾಂತರಿ ಬಗ್ಗೆ ಮೋದಿಯವರಿಗೂ ಮತ್ತು ಪ್ರಕಾಶ್
ಜಾವೇಡ್ಕರ್‌ಗೂ ಸದಭಿಪ್ರಾಯವಿತ್ತು, ಆದರೂ ಅದಕ್ಕೆ ಅನುಮತಿ ಕೊಡಲಾಗಲಿಲ್ಲ. ಸದರಿ ಪರಿಸರ
ಮಂತ್ರಿಗಳು ಕಮಿಟಿಗಳ ಮೇಲೆ ಕಮಿಟಿಗಳನ್ನು ಮಾಡಿ ಕಾಲ ತಳ್ಳುತ್ತಿದ್ದಾರೆ. ಬಿಜೆಪಿಗೆ ಇರುವ
ದೊಡ್ಡ ಅಡಚಣೆ ಅಂದರೆ ಆರ್‌ಎಸ್‌ಎಸ್, ಪಾರ್ಟಿಗೆ ಹತ್ತಿರವಿರುವ ಭಾರತೀಯ ಕಿಸಾನ್ ಸಂಘ ಮತ್ತು
ಸ್ವದೇಶಿ ಜಾಗರಣ ಮಂಚ್. ಈ ಸಂಘಟನೆಗಳಿಗೆ ಯಾರು ತಲೆ ಕೆಡಿಸಿದರೋ ಗೊತ್ತಿಲ್ಲ, ಅವುಗಳು
ಕುಲಾಂತರಿ ತಂತ್ರಜ್ಞಾನವನ್ನು ಬಲವಾಗಿ ವಿರೋಧಿಸುತ್ತಿವೆ.

ಇವಕ್ಕೆ ಎಲ್ಲ ತಂತ್ರಜ್ಞಾನಗಳೂ ಸ್ವದೇಶಿಯಾಗಿರಬೇಕೆಂಬ ಹಠ. ಬಿ.ಟಿ ಬದನೆ, ಕುಲಾಂತರಿ
ಸಾಸಿವೆ ಭಾರತದಲ್ಲೇ ತಯಾರಾದವು ಎಂಬ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಆದರೆ ವಿರೋಧಿಗಳ
ಗುಂಪು ಈ ಎರಡು ಕುಲಾಂತರಿ ಸಸ್ಯಗಳು ನಮ್ಮವೇ ಆದರೂ ಅವುಗಳ ವೈಜ್ಞಾನಿಕ ತಿಳಿವಳಿಕೆ
ವಿದೇಶದಿಂದ ಬಂದದ್ದು ಎಂದು ಕಿವಿ ಊದಿವೆ. ಈ ದಡ್ಡತನದಿಂದ ನಮ್ಮ ರೈತರಿಗೆ ತಾನೇ ನಷ್ಟ. ರೈತ
ಸಂಘದ ನಾಯಕರೂ ಈ ಕುಲಾಂತರಿ ಬೀಜವನ್ನು ವಿರೋಧಿಸುವ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನಿರಕ್ಷರಕುಕ್ಷಿ ರಾಜಕಾರಣಿಗಳಿಗೂ, ಈ ರೈತ ನಾಯಕರಿಗೂ ಯಾವುದೇ ವ್ಯತ್ಯಾಸವಿಲ್ಲ.

ಇನ್ನು ಅಮೆರಿಕದ ರಾಜಕಾರಣಿಗಳನ್ನು ನೋಡಿದರೆ, ರಿಪಬ್ಲಿಕನ್ ಪಾರ್ಟಿಗೆ ಸೇರಿದ
ರಾಜಕಾರಣಿಗಳೆಲ್ಲ ಬೈಬಲ್ ಹಿಡಿದು ಓಡಾಡುವವರು. ಈ ಜಗತ್ತು ಏಳು ಸಾವಿರ ವರ್ಷಗಳ ಹಿಂದೆ
ನಿರ್ಮಾಣವಾದದ್ದೆಂದು ಅವರ ನಂಬಿಕೆ. ಸಕಲವನ್ನೂ ದೇವರೇ ನಿರ್ಮಿಸಿದ್ದಾನೆ ಎಂದು ನಂಬಿದ ಮೇಲೆ
ಡಾರ್ವಿನ್‌ನ ಜೀವ ವಿಕಾಸಕ್ಕೆಲ್ಲಿದೆ ಬೆಲೆ? ಪ್ರೆಸಿಡೆಂಟ್ ಬುಶ್ ಕಾಲದಲ್ಲಿ STEM CELL
ಬಗ್ಗೆ ಸಂಶೋಧನೆ ಮಾಡಬಾರದೆಂದು ಸುಗ್ರೀವಾಜ್ಞೆ ಹೊರಡಿಸಿದ್ದ. ಒಬಾಮ ಅಧಿಕಾರಕ್ಕೆ ಬಂದ ಮೇಲೆ
ಮಾಡಿದ ಮೊದಲ ಕೆಲಸವೆಂದರೆ ಆ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿದ್ದು. ಈ ರಿಪಬ್ಲಿಕನ್
ದಡ್ಡ ರಾಜಕಾರಣಿಗಳು ಜಗತ್ತಿನಲ್ಲೇ ಎಲ್ಲರೂ ಒಪ್ಪಿಕೊಂಡ ವಿಶ್ವ ಸುಕ್ಹೋಷ್ಣವಾದದಲ್ಲೂ
ನಂಬಿಕೆಯಿಲ್ಲ. ಡೊನಾಲ್ಡ್ ಟ್ರಂಪ್ ಸಹ ಅದನ್ನು ಒಪ್ಪುವುದಿಲ್ಲ. ಕಳೆದ ವಾರ ಚೀನಾ CRISPR
ತಂತ್ರಜ್ಞಾನವನ್ನು ಮಾನವ ಜೀವಕೋಶಗಳ ಮೇಲೆ ಪ್ರಯೋಗ ಮಾಡೇಬಿಟ್ಟರು. ಈ ತಂತ್ರಜ್ಞಾನದಲ್ಲಿ
ಚೀನಾ ಖಂಡಿತವಾಗಿಯೂ ಅಮೆರಿಕವನ್ನು ಮೀರಿ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ.

ಕರ್ನಾಟಕದಲ್ಲೂ ಯಾವುದೇ ಪಕ್ಷದ ಸರಕಾರವಿರಲಿ, ವಿಜ್ಞಾನಿಗಳಿಗೆ ಕೇರ್ ಮಾಡಿದ್ದೆ ಇಲ್ಲ.
ಎಲ್ಲ ಪಕ್ಷಗಳ ತಲೆ ಕೆಡಿಸುವುದು ಪರಿಸರವಾದಿಗಳು ಮತ್ತು ರೈತ ನಾಯಕರು. ಪ್ರಾಮಾಣಿಕವಾಗಿ
ವಿಜ್ಞಾನವನ್ನು ಅಭ್ಯಸಿಸಿ ಅದರಿಂದ ಯಾವ ರೀತಿ ಅಭಿವೃದ್ಧಿ ಹೊಂದಬಹುದು ಎಂದು ಯೋಚಿಸುವ
ಒಬ್ಬನೇ ಒಬ್ಬ ಪ್ರಜ್ಞಾವಂತ ರಾಜಕಾರಣಿಯೂ ನಮ್ಮಲ್ಲಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಡೆಂಘೀ
ಮತ್ತು ಚಿಕೂನ್‌ಗುನ್ಯ ಪ್ರಕರಣಗಳು ದಾಖಲಾಗಿವೆ. ಈ ರೋಗ ಹರಡುವ ಸೊಳ್ಳೆಗಳ ನಿರ್ಮೂಲನಕ್ಕೆ
ಒಂದು ಕುಲಾಂತರಿ ಗಂಡು ಬಂಜೆ ಸೊಳ್ಳೆ ತಯಾರಾಗಿದೆ. ಈ ಕುಲಾಂತರಿ ಸೊಳ್ಳೆ, ಮಲೇರಿಯ ಮತ್ತು
ಝೀಕಾ ಹರಡುವ ಸೊಳ್ಳೆಗಳನ್ನು ನಿರ್ಮೂಲನೆ ಮಾಡಿರುವ ಅಧಿಕೃತ ಮಾಹಿತಿ ಇದೆ. ಆದರೆ ಅದಕ್ಕೆ
ಭಾರತ ಅನುಮತಿ ಕೊಟ್ಟಿಲ್ಲ. ಅದರ ಬಗ್ಗೆ ರಾಜ್ಯದ ಯಾವ ರಾಜಕಾರಣಿಗೂ ಮಾಹಿತಿಯಿಲ್ಲ.
ಗೊತ್ತಿದ್ದರೆ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಸಾಂಕ್ರಾಮಿಕ ರೋಗಗಳನ್ನು
ನಿವಾರಿಸಬಹುದು. ಆದರೆ ಕೇಳುವವರಾರು?

ಒಂದು ಮಾತಂತೂ ನಿಜ. ಎಲ್ಲಿಯವರೆಗೆ ನಮ್ಮ ರಾಜಕಾರಣಿಗಳು ವಿಜ್ಞಾನವನ್ನು
ಅರಿತುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ದೇಶ ಪ್ರಗತಿ ಸಾಧಿಸಲಾರದು. ವಿಜ್ಞಾನ ಮತ್ತು
ತಂತ್ರಜ್ಞಾನದಲ್ಲಿ ರಾಜಕೀಯ ಸುತರಾಂ ಸಲ್ಲ.

*ಡಾ. ಶಾಂತು ಶಾಂತಾರಾಮ್, ಮೇರಿಲ್ಯಾಂಡ್ ವಿವಿ*

Hareeshkumar K
GHS Huskuru
Malavalli TQ
Mandya Dt
9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to