happy makara sankranthi- 2017

2017-01-14 7:42 GMT+05:30 HAREESHKUMAR K Agasanapura <[email protected]>
:

> http://m.prajavani.net/article/2017_01_12/465171
>
> *ಮುರಿದು ಕಟ್ಟಬನ್ನಿ ಹೊಸ ನಾಳೆಗಳನು*
>
> 12 Jan, 2017
>
> ನಾಗೇಶ್ ಹೆಗಡೆ
>
>
> <https://www.facebook.com/sharer/sharer.php?u=https%3A%2F%2Fgoo.gl%2FDTOSKf>
> <https://twitter.com/intent/tweet?text=%E0%B2%AE%E0%B3%81%E0%B2%B0%E0%B2%BF%E0%B2%A6%E0%B3%81+%E0%B2%95%E0%B2%9F%E0%B3%8D%E0%B2%9F%E0%B2%AC%E0%B2%A8%E0%B3%8D%E0%B2%A8%E0%B2%BF+%E0%B2%B9%E0%B3%8A%E0%B2%B8+%E0%B2%A8%E0%B2%BE%E0%B2%B3%E0%B3%86%E0%B2%97%E0%B2%B3%E0%B2%A8%E0%B3%81+https%3A%2F%2Fgoo.gl%2FDTOSKf>
> <https://plus.google.com/share?url=https%3A%2F%2Fgoo.gl%2FDTOSKf>
> <http://www.pinterest.com/pin/find/?url=https%3A%2F%2Fgoo.gl%2FDTOSKf>
> <http://www.linkedin.com/shareArticle?mini=true&title=%E0%B2%AE%E0%B3%81%E0%B2%B0%E0%B2%BF%E0%B2%A6%E0%B3%81+%E0%B2%95%E0%B2%9F%E0%B3%8D%E0%B2%9F%E0%B2%AC%E0%B2%A8%E0%B3%8D%E0%B2%A8%E0%B2%BF+%E0%B2%B9%E0%B3%8A%E0%B2%B8+%E0%B2%A8%E0%B2%BE%E0%B2%B3%E0%B3%86%E0%B2%97%E0%B2%B3%E0%B2%A8%E0%B3%81+&url=https%3A%2F%2Fgoo.gl%2FDTOSKf>
>
> ಬೆಳಕು ನೀಡುವ ಮರಗಳ ಬಗ್ಗೆ ಗೊತ್ತೆ? ಬೀದಿಯ ಎರಡೂ ಬದಿಗೆ ಅಂಥದ್ದೇ ಮರಗಳನ್ನು ಬೆಳೆಸಿದರೆ
> ವಿದ್ಯುತ್ ದೀಪಗಳೇ ಬೇಕಾಗಿಲ್ಲ. ವಿಜ್ಞಾನಿಗಳು ಇಪ್ಪತ್ತು ವರ್ಷಗಳ ಹಿಂದೆಯೇ ಪುಟ್ಟ ಸಸ್ಯಗಳ
> ಮೇಲೆ ಈ ಪ್ರಯೋಗವನ್ನು ನಡೆಸಿದ್ದರು. ಮಿಂಚು ಹುಳದ ಗುಣಾಣುವನ್ನು ತೆಗೆದು ಅದನ್ನು ತಂಬಾಕಿನ
> ಸಸ್ಯದ ಡಿಎನ್‌ಎಯೊಳಕ್ಕೆ ತೂರಿಸಿ ಕತ್ತಲಲ್ಲೂ ಪಳಪಳಿಸಬಲ್ಲ ಹೊಸ ಸಸ್ಯಗಳನ್ನು ರೂಪಿಸಿದ್ದರು.
>
> ಅಷ್ಟೇಕೆ, ಕೋತಿಯ ಭ್ರೂಣಕ್ಕೂ ಅದೇ ಜೀನನ್ನು ಸೇರಿಸಿ ಮರಿಕೋತಿಯನ್ನೂ ಮಿನುಗಿಸಿದ್ದರು. ಈಗ
> ಅದೇ ತಂತ್ರವನ್ನು ಇನ್ನಷ್ಟು ಸುಧಾರಿಸಿ, ಹೂಕುಂಡಗಳಲ್ಲಿ ಬೆಳೆಸಬಹುದಾದ ವಿವಿಧ ಸಸ್ಯಗಳಲ್ಲಿ
> ಬೆಳಕು ಮಿಂಚುವಂತೆ ಮಾಡಿದರು. ಎಲೆ, ಮೊಗ್ಗುಗಳಷ್ಟೇ ಅಲ್ಲ, ಹೂಗಳೂ ಕತ್ತಲಲ್ಲಿ
> ಮಿನುಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ. ಕುಂಡಗಳಿಗೆ ಬಂದ ಚಂದ ಆಮೇಲೆ ಮರಗಳಿಗೆ
> ಬಾರದೆ?
>
> ಎತ್ತರ ಬೆಳೆಯಬಲ್ಲ ವೃಕ್ಷಗಳ ಜೀವಕೋಶದಲ್ಲೂ ಮಿಂಚುಹುಳದ ಲೂಸಿಫೆರೇಸಿ ಜೀನನ್ನು
> ತೂರಿಸಿದರೆ, ಅಹಾ, ಕೊಂಬೆರೆಂಬೆಗಳಲ್ಲಿ ತಾರಾಲೋಕ. ಮಿನುಗುವ ಕೋತಿಗಳನ್ನೂ ಅಂಥ ಮರಕ್ಕೇರಿಸಿ
> ಸ್ವಪ್ನನಗರಿಯನ್ನೇ ನಿರ್ಮಿಸಬಹುದು. ಕತ್ತಲಲ್ಲಿ ಬೀದಿ ಬೆಳಗಿಸಿ ವಿದ್ಯುತ್ ವೆಚ್ಚವನ್ನು
> ಉಳಿಸಿ, ಕಳ್ಳಕಾಕರ ಮತ್ತು ಬೀದಿ ಕಾಮಣ್ಣರ ಕನಸುಗಳನ್ನೆಲ್ಲ ಮಣ್ಣುಪಾಲು ಮಾಡಬಹುದು.
>
> ಇಂಥ ಹೊಸ ಹೊಸ ಐಡಿಯಾಗಳಿಗೆ ‘ಮುರಿದು ಕಟ್ಟುವ ತಂತ್ರಜ್ಞಾನ’ (ಡಿಸ್ರಪ್ಟಿವ್ ಇನ್ನೊವೇಶನ್)
> ಎನ್ನುತ್ತಾರೆ. ಬೀದಿಬದಿಯ ಹಳೇ ಮರಗಳನ್ನೆಲ್ಲ ಮುರಿದು ಕೆಡವಿ ಹೊಸ ಮರಗಳನ್ನು ಬೆಳೆಸುವ
> ವಿಷಯ ಇಲ್ಲಿ ಉದಾಹರಣೆಯಾಗಿ ಬಂದಿದೆ ಅಷ್ಟೆ. ವಿಜ್ಞಾನ ತಂತ್ರಜ್ಞಾನ ಲೋಕದಲ್ಲಿ ಹೀಗೆ
> ಮುರಿದು ಕಟ್ಟುವ ಸಾಹಸಗಳು ಚರಿತ್ರೆಯುದ್ದಕ್ಕೂ ಕಾಣಸಿಗುತ್ತವೆ.
>
> 1879ರಲ್ಲಿ ಕಾರ್ಲ್ ಬೆಂಝ್ ಎಂಬಾತ ಮೋಟಾರು ಗಾಡಿಗೆ ಪೇಟೆಂಟ್ ಪಡೆದಿದ್ದೇ ಕುದುರೆಗಾಡಿ,
> ಸಾರೋಟುಗಳು ಮೂಲೆಗುಂಪಾದವು. ಕಂಪ್ಯೂಟರ್ ಬಂದಮೇಲೆ ಟೈಪ್‌ರೈಟರ್‌ಗಳ ಇತಿಶ್ರೀಯಾಯಿತು;
> ಇಂಟರ್‌ನೆಟ್ ಬಂದಮೇಲೆ ಅಂಚೆಪೆಟ್ಟಿಗೆಗಳು ಕಾಣೆಯಾದವು.
>
> ಸ್ಮಾರ್ಟ್ ಫೋನ್ ಬಂದಮೇಲೆ ರೇಡಿಯೊ, ಹ್ಯಾಮ್ ರೇಡಿಯೊ, ಅಲಾರ್ಮ್ ಗಡಿಯಾರ, ಡೈರಿ,
> ಕ್ಯಾಲೆಂಡರು, ಕೊನೆಗೆ ಕಂಪ್ಯೂಟರೂ ನಿರುಪಯುಕ್ತ ಎನ್ನುವಲ್ಲಿಗೆ ಬಂದು ಮುಟ್ಟಿದೆ
> (1876ರಲ್ಲಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಎಂಬಾತ ಟೆಲಿಫೋನನ್ನು ರೂಪಿಸಿ ಸಂಪರ್ಕ
> ಕ್ರಾಂತಿಗೆ ನಾಂದಿ ಹಾಡಿದ್ದು, 1903ರಲ್ಲಿ ರೈಟ್ ಸಹೋದರರು ಹಾರುವ ಯಂತ್ರವನ್ನು ರೂಪಿಸಿ
> ಇಡೀ ಮನುಕುಲಕ್ಕೇ ರೆಕ್ಕೆ ಮೂಡಿಸಿದ್ದು- ಇವೆಲ್ಲ ಕ್ರಾಂತಿಕಾರಿ ಸಂಗತಿಗಳೇ ಹೌದಾದರೂ ಇವು
> ಆಗ ಅಸ್ತಿತ್ವದಲ್ಲಿದ್ದ ಯಾವುದನ್ನೂ ಭಗ್ನ ಮಾಡಲಿಲ್ಲ; ಹಾಗಾಗಿ ಮುರಿದು ಕಟ್ಟಿದ ಶ್ರೇಯ
> ಅವಕ್ಕಿಲ್ಲ). ಈಗಂತೂ ತಂತ್ರಜ್ಞಾನಕ್ಕೆ ಅದೆಂಥ ವೇಗ ಬಂದಿದೆ ಎಂದರೆ ಭವಿಷ್ಯ ನಮ್ಮ ಮೇಲೆ
> ಹೇಗೆ ಮುಗಿಬೀಳಲಿದೆ ಎಂದು ಊಹಿಸಲೂ ಸಾಧ್ಯವಿಲ್ಲ.
>
> ಅದಕ್ಕೇ ಕಳೆದವಾರ ತಿರುಪತಿಯಲ್ಲಿ ನಡೆದ 104ನೇ ಸೈನ್ಸ್ ಕಾಂಗ್ರೆಸ್ ಮೇಳದಲ್ಲಿ ಪ್ರಧಾನಿ
> ಮೋದಿಯವರು ‘ಅಂಥ ಭಗ್ನಕಾರಕ ತಂತ್ರಜ್ಞಾನದ ಮೇಲೆ ಕಣ್ಣಿಡಿ’ ಎಂದು ಭಾರತೀಯ ವಿಜ್ಞಾನಿಗಳಿಗೆ
> ಸಲಹೆ ನೀಡಿದರು (ಅವರೇ ಸ್ವತಃ ನಿರ್ಮನೀಕರಣದ ಮಂತ್ರದಂಡವನ್ನು ಪ್ರಯೋಗಿಸಿ ಇಡೀ ದೇಶದ
> ಗೃಹಿಣಿಯರ ಒಬ್ಬಜ್ಜಿ ಉಳಿತಾಯಗಳನ್ನೆಲ್ಲ ಭಗ್ನ ಮಾಡಿದ್ದನ್ನು ಇಲ್ಲಿ ಕಡೆಗಣಿಸೋಣ). ಇಂದಿನ
> ಗಣಕ ತಂತ್ರಶಕ್ತಿ ಮತ್ತು ಯಂತ್ರಜಗತ್ತು- ಈ ಎರಡರ ವಿರಾಟ್ ಬೆಸುಗೆಯ ಬಗ್ಗೆ
> ಎಚ್ಚರಾಗಿರಬೇಕೆಂದು ಅಲ್ಲಿ ನೆರೆದಿದ್ದ ಆರು ಸಾವಿರ ವಿಜ್ಞಾನ ಪ್ರತಿನಿಧಿಗಳಿಗೆ ಕರೆ
> ಕೊಟ್ಟರು.
>
> ಅವರು ಅಲ್ಲಿ ಈ ಮಾತುಗಳನ್ನು ಹೇಳುತ್ತಿರುವಾಗ ಅಮೆರಿಕದ ಲಾಸ್ ವೆಗಾಸ್ ನಗರದಲ್ಲಿ ನಾಳಿನ
> ತಂತ್ರಜ್ಞಾನಗಳ ವಿಶ್ವಮೇಳ ಅದೇ ತಾನೆ ಆರಂಭವಾಗಿತ್ತು. ಜಗತ್ತಿನ ಎಲ್ಲ ಹೈಟೆಕ್ ಕಂಪನಿಗಳು
> ತಂತಮ್ಮ ಸಾಧನ ಸಲಕರಣೆಗಳನ್ನು ಅಲ್ಲಿ ಪ್ರದರ್ಶನಕ್ಕೆ ತಂದಿದ್ದರು. ಅಲ್ಲೊಂದು ಮಾಯಾವಾಸ್ತವ,
> ಅತಿವಾಸ್ತವ ಲೋಕವೇ ಮೈದಳೆದಿತ್ತು. ಕ್ಯಾಲೆಂಡಿರನ ಹಾಗೆ ಸುರುಳಿ ಬಿಚ್ಚಿ ತೂಗು ಹಾಕಬಹುದಾದ
> ಟಿ.ವಿ ಇತ್ತು.
>
> ಓಡಾಡುತ್ತ ಮಾತಾಡುವ ಫ್ರಿಜ್ ಇತ್ತು. ‘ನುಗ್ಗೇಕಾಯಿ ಕೂಟು ಮಾಡುವುದು ಹೇಗೆ?’ ಎಂದು ನೀವು
> ಕೂತಲ್ಲೇ ಆ ತಂಗಳು ಪೆಟ್ಟಿಗೆಯತ್ತ ತಿರುಗಿ ಕೇಳಿದರೆ ಸಾಕು, ಅದು ತಾನಾಗಿ ಜಾಲತಾಣಗಳನ್ನು
> ಹುಡುಕಿ, ರಿಸಿಪಿ ತೆಗೆದು ಉತ್ತರ ಹೇಳುತ್ತದೆ ಅಥವಾ ಬೇಕಿದ್ದ ಸಾಮಗ್ರಿ ಏನೇನೆಂದು ಪಟ್ಟಿ
> ಮಾಡಿ ತನ್ನ ಬಾಗಿಲ ಮೇಲೆಯೇ ಮೂಡಿಸುತ್ತದೆ. ಪೆಟ್ಟಿಗೆಯೊಳಗೆ ನುಗ್ಗೇಕಾಯಿ ಇದೆಯೊ ಇಲ್ಲವೊ,
> ಉದ್ದಿನ ಬೇಳೆಯ ಸ್ಟಾಕ್ ಎಷ್ಟಿದೆ ಎಂಬುದನ್ನು ಹೇಳುತ್ತದೆ. ಅಷ್ಟರಲ್ಲಿ ನಿಮ್ಮ ಮೂಡ್
> ಬದಲಾಗಿದ್ದರೆ ಸಮೀಪದ ದರ್ಶಿನಿ ಹೊಟೆಲ್‌ನ ನಂಬರನ್ನು ಡಯಲ್ ಮಾಡುತ್ತಿತ್ತೇನೊ.
>
> ಲಾಸ್‌ವೆಗಾಸ್‌ನ ಸಿಇಎಸ್ ಮೇಳದಲ್ಲಿ ಪ್ರದರ್ಶನಕ್ಕಿರುವ ತರಾವರಿ ರೋಬಾಟ್‌ಗಳಂತೂ
> ಕೇಳಲೇಬೇಡಿ. ತೊಟ್ಟಿಲ ಮಗುವಿನಿಂದ ಹಿಡಿದು ಲಕ್ವ ಹೊಡೆದ ಅಜ್ಜನವರೆಗೆ ಎಲ್ಲರ ಸೇವೆ
> ಮಾಡಬಲ್ಲ, ಕತೆ ಹೇಳಿ ರಂಜಿಸಬಲ್ಲ, ನೀರು-ವಿದ್ಯುತ್ತಿನ ಬಿಲ್ ಸಂದಾಯ ಮಾಡಬಲ್ಲ
> ರೋಬಾಟ್‌ಗಳು. ಇವೆಲ್ಲವುಗಳ ಜೊತೆ, ನಾಳಿನ ಬುದ್ಧಿವಂತ ಮನೆಗಳೂ ಅಲ್ಲಿದ್ದವು.
>
> ಅದರೊಳಕ್ಕೆ ಹೋಗಿ ಅಲ್ಲಿದ್ದ ಒಂದೇ ಒಂದು ರಿಮೋಟ್‌ನಿಂದ ಮನೆಯೊಳಗಿನ ಎಲ್ಲವಕ್ಕೂ ಚಾಲನೆ
> ಕೊಡುವ ವ್ಯವಸ್ಥೆ ಇತ್ತು. ಟಿ.ವಿ, ಮಿಕ್ಸಿ, ಫ್ರಿಜ್, ದೀಪದ ಬಲ್ಬ್, ಕಿಟಕಿ ಪರದೆ, ಕೊನೆಗೆ
> ಮುಚ್ಚಿದ ಬಾಗಿಲತ್ತ ಅದೇ ರಿಮೋಟ್ ಹಿಡಿದರೆ ಹೊರಗಡೆಯ ತಾಪಮಾನ ಎಷ್ಟಿದೆ, ಯಾರು ಭೇಟಿಗೆ
> ಬಂದಿದ್ದಾರೆ ಎಲ್ಲವೂ ಗೊತ್ತಾಗುತ್ತಿತ್ತು.
>
> ಇನ್ನು ತೊಡುವ, ಧರಿಸುವ ಕಂಪ್ಯೂಟರ್‌ಗಳ ಕತೆಯೇ ಬೇರೆ. ವಾಚು, ಅಂಗಿಬಟನ್ನು, ಪಾದರಕ್ಷೆ,
> ತೋಳಿನ ತ್ವಚೆಗೇ ಅಂಟಿಕೂರಬಲ್ಲ ಪ್ಯಾಚು ಎಲ್ಲವೂ ಡಿಜಿಟಲ್ ಆಗಿರುತ್ತವೆ. ಕನ್ನಡಕದ ಫ್ರೇಮಿನ
> ಮೂಲೆಯಲ್ಲೇ ಪುಟ್ಟ ಬಿಂದುವಿನಂತೆ ಕೂತು ನಿಮ್ಮ ಕಣ್ಣಿನ ಅಕ್ಷಿಪಟದ ಹಿಂದಿನ ರಕ್ತನಾಳಗಳನ್ನೂ
> ಗಮನಿಸುತ್ತ ನಿಮ್ಮ ಆರೋಗ್ಯದ ಮೇಲೆ ಕಣ್ಣಿಡುವ (ಕಣ್‌ಡಾಕ್ಟರ್) ಬೇಕೆ?
>
> ನಿಮಗೆ ಬೇಡವಾಗಿದ್ದರೆ ಮನೆಯಲ್ಲಿ ಒಬ್ಬಳೇ ಕೂತಿರಬೇಕಾದ ನಿಮ್ಮ ಅಸ್ವಸ್ಥ ಅಮ್ಮನಿಗೆ
> ಅದನ್ನು ತೊಡಿಸಿ ನೀವು ಕೆಲಸಕ್ಕೆ ಹೋಗಬಹುದಲ್ಲ? ಅಥವಾ ಸರಿರಾತ್ರಿಯಲ್ಲಿ ವಾಹನ ಓಡಿಸಬೇಕಾದ
> ಚಾಲಕ ತಾನು ಕೂತಲ್ಲೇ ತೂಕಡಿಸದ ಹಾಗೆ ಎಚ್ಚರಿಸಲು ಅಂಥ ಕನ್ನಡಕ ಬೇಕಲ್ಲ?
>
> ನೀವು ಕಚೇರಿಯಲ್ಲಿ ಯಾವುದೋ ವರದಿಯನ್ನು ಟೈಪ್ ಮಾಡುತ್ತ ಕೂತಿರುವಾಗ ನಿಮ್ಮ ಬೆರಳ ತುದಿಯ
> ತಾಪಮಾನವನ್ನು, ರಕ್ತ ಪರಿಚಲನೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ನಿಮ್ಮದೇ ಆರೋಗ್ಯದ
> ವರದಿಯನ್ನು ಕೊಡಬಲ್ಲ ಕೀಲಿಮಣೆ ಬೇಕಲ್ಲ?
>
> ನಮ್ಮೆಲ್ಲರ ನಾಳೆಗಳನ್ನು ಬದಲಿಸಬಹುದಾದ ಆ ಜಗತ್ತಿಗಾಗಿ ಭಾರತೀಯರು ಹೇಗೆ ಸಜ್ಜಾಗಬೇಕು?
> ಕಿರಿಯರಿಗೆ ನೀಡಬೇಕಾದ ಸಲಹೆ, ಉಪದೇಶ, ಮಾರ್ಗದರ್ಶನ, ಶಿಕ್ಷಣ ಎಲ್ಲವೂ ನಾಳೆ ಅವರು ತೊಡುವ
> ಯಂತ್ರಗಳಿಂದಲೇ ಬರುತ್ತವೆ. ಶಿಕ್ಷಕರು, ಡಾಕ್ಟರು, ಹಿರಿಯರು, ಗುರುಗಳು, ಸ್ನೇಹಿತರು
> ಎಲ್ಲರೂ ನಗಣ್ಯರಾಗಿ ಕೊನೆಗೆ ಸ್ವಾಮಿಭಕ್ತ ನಾಯಿಯೂ ಇಂಟೆಲಿಜೆಂಟ್ ಯಂತ್ರವೇ ಆಗಿರುತ್ತದೆ.
>
> ಅಂಥ ಹೈಟೆಕ್ ಪ್ರಪಂಚದ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಮಾತಿನ ಸಂದೇಶ
> ಸ್ಪಷ್ಟವಾಗಿತ್ತು: ನಮ್ಮ ದೇಶದ ಸಶಕ್ತ, ಸುಶಿಕ್ಷಿತ ಯುವಕೋಟಿಯೇ ನಮ್ಮ ಹೆಮ್ಮೆಯ
> ಆಸ್ತಿಯೆಂದು ನಾವು ಈಚೀಚೆಗಷ್ಟೇ ಎದೆಯುಬ್ಬಿಸಿ ಹೇಳತೊಡಗಿದ್ದೆವು. ಜನಸಂಖ್ಯೆ
> ಕಮ್ಮಿಯಾಗುತ್ತಿರುವ ದೇಶಗಳಿಗೆಲ್ಲ ನಮ್ಮವರನ್ನೇ ರಫ್ತು ಮಾಡಿ ಡಾಲರ್ ಗಳಿಸಬಹುದೆಂದು
> ಹೇಳುತ್ತಿದ್ದೆವು. ಆದರೆ ಅಲ್ಲಿನ ಲೋಕದಲ್ಲಿ ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಹೆಚ್ಚಾದಷ್ಟೂ
> ಭಾರತದ ಹಿತಾಸಕ್ತಿಗೆ ಧಕ್ಕೆ ಆದೀತೆಂಬ ಆತಂಕ ಮೋದಿಯವರ ಮಾತಿನಲ್ಲಿ ವ್ಯಕ್ತವಾಗಿತ್ತು.
>
> ಅಂಥ ಭಗ್ನಕಾರಿ ತಂತ್ರಜ್ಞಾನ ನಮಗಲ್ಲವೆಂದು ಬೆನ್ನು ತಿರುಗಿಸುವ ಬದಲು, ನಮ್ಮ ಅನುಕೂಲಕ್ಕೆ
> ತಕ್ಕಂತೆ ಅದನ್ನು ತಿರುಗಿಸಬೇಕೆಂಬುದು ಅವರ ಇಂಗಿತವಾಗಿತ್ತು. ಆರೋಗ್ಯ, ಶಕ್ತಿ ಉತ್ಪಾದನೆ,
> ಸಂಚಾರ, ಶಿಕ್ಷಣ, ನೀರಾವರಿ, ಕೃಷಿ ಹೀಗೆ ಎಲ್ಲ ರಂಗಗಳಲ್ಲೂ ಕೃತಕ ಬುದ್ಧಿಮತ್ತೆ ಮತ್ತು
> ಜೈವಿಕ ಎಂಜಿನಿಯರಿಂಗ್ ಮಿಲನದ ಸಾಧ್ಯತೆಯನ್ನು ಹುಡುಕಬೇಕು; ‘ಅದಕ್ಕೆ ಬೇಕಿದ್ದ
> ಸಂಸ್ಥೆಗಳನ್ನು ಕಟ್ಟೋಣ, ಬಂಡವಾಳ ಹೂಡೋಣ’ ಎಂದು ಅವರು ಎಂದಿನಂತೆ ಘಂಟಾಘೋಷಣೆ ಮಾಡಿದರು.
>
> ಹೂಡೋಣವೆ? ಈಗಿನ್ನೂ 19ನೇ ಶತಮಾನವನ್ನೇ ಬಿಟ್ಟು ಹೊರಡಲಾಗದ ಜನರಿಗೆ 21ನೇ ಶತಮಾನದ
> ಝಲಕನ್ನೂ ನಗರಗಳ ಮಾಯಾಕಂಕಣವನ್ನೂ ತೊಡಿಸೋಣವೆ? ಗ್ರಾಮವಾಸಿಗಳ, ಅರಣ್ಯವಾಸಿಗಳ, ಕೊಳೆಗೇರಿಗಳ
> ಕಟುವಾಸ್ತವಕ್ಕೂ ಸೈಬರ್ ಲೋಕದ ಅತಿವಾಸ್ತವಕ್ಕೂ ನಡುವೆ ಸೇತುವೆ ಕಟ್ಟುವುದು ಹೇಗೆ? ಅವರ
> ಶಿಥಿಲ ನಾಳೆಗಳಿಗೆ ತುಸು ಬಣ್ಣ ತುಂಬುವುದು ಹೇಗೆ?
>
> ಈ ಪ್ರಶ್ನೆಗೆ ಒಂದು ಉತ್ತರ ಇದೀಗ ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿಯಿಂದ ಬಂದಿದೆ: ಅಲ್ಲಿನ
> ಬಯೊಇಂಜಿನಿಯರ್ ಮನು ಪ್ರಕಾಶ್ ಎಂಬ ಭಾರತೀಯ ಯುವಕ ನಿಜಕ್ಕೂ ಬೆರಳು ಕಚ್ಚುವಂಥ ಸಂಶೋಧನೆ
> ಮಾಡಿದ್ದಾರೆ. ಎರಡು ಕೈಗಳ ಎರಡು ಬೆರಳುಗಳ ನಡುವೆ ದಾರಕ್ಕೆ ಪೋಣಿಸಿದ ಪುಟ್ಟ ಚಕ್ರವೊಂದನ್ನು
> ತಿರುಗಿಸುತ್ತ ಅವರು ಅದನ್ನೊಂದು ವೈದ್ಯಕೀಯ ಸಲಕರಣೆಯಾಗಿ ಪರಿವರ್ತಿಸಿದ್ದಾರೆ.
>
> ಅದರ ವಿವರ ಹೀಗಿದೆ: ಮಲೇರಿಯಾ, ಏಡ್ಸ್, ಚಿಕುನ್‌ಗುನ್ಯದಂಥ ಹತ್ತಾರು ರೋಗಗಳ ಪತ್ತೆಗೆ
> ರಕ್ತಪರೀಕ್ಷೆ ಮಾಡುವುದು ನಮಗೆಲ್ಲ ಗೊತ್ತಿದೆ. ರೋಗಿಯ ಅರ್ಧ ಚಮಚೆಯಷ್ಟು ರಕ್ತವನ್ನು ಒಂದು
> ಶೀಶೆಯಲ್ಲಿಟ್ಟು ದೊಡ್ಡ ಯಂತ್ರದೊಳಕ್ಕೆ ಜೋರಾಗಿ ತಿರುಗಿಸುತ್ತಾರೆ. ನಿಮಿಷಕ್ಕೆ ಲಕ್ಷ
> ಸುತ್ತು ತಿರುಗುವಾಗ ರಕ್ತದಲ್ಲಿನ ನೀರಿನಂಥ ಪ್ಲಾಸ್ಮಾ ಬೇರೆಯಾಗುತ್ತದೆ. ಕೆಂಪು ಕಣಗಳ ಗಸಿ
> ತಳಕ್ಕಿಳಿಯುತ್ತದೆ.
>
> ಅದನ್ನೇ ಸೂಕ್ಷ್ಮದರ್ಶಕದಲ್ಲಿ ಇಟ್ಟು ರಕ್ತಗುಣವನ್ನು, ರೋಗಕ್ಕೆ ಕಾರಣವಾಗುವ
> ಸೂಕ್ಷ್ಮಾಣುವನ್ನು ಪತ್ತೆ ಹಚ್ಚಬಹುದು. ಆದರೆ ಈ ಪರೀಕ್ಷೆಗೆ ಬೇಕಾದ ‘ಸೆಂಟ್ರಿಫ್ಯೂಜ್’ ಎಂಬ
> ತಿರುಗಣೆ ಯಂತ್ರಕ್ಕೆ ಲಕ್ಷಾಂತರ ರೂಪಾಯಿ ಬೇಕು, ಜೊತೆಗೆ ಸದಾಕಾಲ ವಿದ್ಯುತ್ ಇರಬೇಕು. ಅದರ
> ಬದಲು ಪುಟ್ಟ ಕೊಳವೆಗೆ ನಾಲ್ಕು ಹನಿ ರಕ್ತ ಹಾಕಿ ಮಕ್ಕಳ ಈ ಆಟಿಗೆಗೆ ಜೋಡಿಸಿದರೆ ಅದು
> ನಿಮಿಷಕ್ಕೆ ಒಂದೂವರೆ ಲಕ್ಷ ಬಾರಿ ತಿರುಗುತ್ತದೆ.
>
> ಒಂದೆರಡು ನಿಮಿಷಗಳಲ್ಲಿ ಪರೀಕ್ಷೆಗೆ ಬೇಕಾದ ಪ್ಲಾಸ್ಮಾ ದ್ರವ ಮತ್ತು ಗಸಿ ಅಲ್ಲೇ
> ಬೇರ್ಪಡುತ್ತದೆ. ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದವರೂ ಇನ್ನು ಮೇಲೆ ರಕ್ತ
> ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಕಾನಪುರ ಐಐಟಿಯಲ್ಲಿ ಓದಿದ ಈ ಮೀರಠ್ ಹುಡುಗ ಕಳೆದ ವರ್ಷ
> ರಟ್ಟಿನ ಕಾಗದದಲ್ಲೇ ಹತ್ತು ರೂಪಾಯಿ ವೆಚ್ಚದ ಮೈಕ್ರೊಸ್ಕೋಪ್ ತಯಾರಿಸಿ ವಿಜ್ಞಾನಲೋಕಕ್ಕೆ
> ಅಚ್ಚರಿ ಮೂಡಿಸಿದವರು.
>
> ಎರಡು ವರ್ಷಗಳ ಹಿಂದೆ ಮಕ್ಕಳಿಗಾಗಿ ಪಂಚ್ ಕಾರ್ಡ್ ದ್ರವಪರೀಕ್ಷಾ ಸಾಧನವನ್ನು ನಿರ್ಮಿಸಿ
> ಅರ್ಧಲಕ್ಷ ಡಾಲರ್ ಬಹುಮಾನ ಮತ್ತು ಪ್ರತಿಷ್ಠಿತ ‘ಮೆಕಾರ್ಥರ್ ಜೀನಿಯಸ್ ಗ್ರಾಂಟ್’ ಪಡೆದವರು.
> ಇದೀಗ ದಾರದ ಚಕ್ರವನ್ನೇ ರಕ್ತಪರೀಕ್ಷೆಯ ಅಗ್ಗದ ಸಲಕರಣೆಯನ್ನಾಗಿ ಪರಿವರ್ತಿಸಿ ಮೊನ್ನೆ,
> ನಿನ್ನೆ ಜಾಗತಿಕ ಮಟ್ಟದ ಎಲ್ಲ ವಿಜ್ಞಾನ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿದ್ದಾರೆ.
>
> ನಮ್ಮ ದೇಶದಲ್ಲಿ ಸೆಂಟ್ರಿಫ್ಯೂಜ್ ಯಂತ್ರಗಳ ಖರೀದಿಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು
> ಗೋಲ್‌ಮಾಲ್ ಮಾಡುವವರಿಗೆ ಅಡ್ಡಗಾಲು ಹಾಕಿ, ಭಾರತದ ಮಟ್ಟಿಗೆ ‘ಭಗ್ನಕಾರಕ ತಂತ್ರಜ್ಞಾನ’
> ಎಂದರೆ ಹೇಗಿರಬೇಕು ಎಂದು ತೋರಿಸಿದ್ದಾರೆ.
>
> ಅಂದಹಾಗೆ, ಬೆಳಕು ಮಿನುಗಿಸುವ ಬೀದಿವೃಕ್ಷಗಳು ನಿಜಕ್ಕೂ ಬರುತ್ತಿವೆಯೆ? ಇಲ್ಲ, ಅಮೆರಿಕದ
> ಕಿಕ್‌ಸ್ಟಾರ್ಟರ್ ಹೆಸರಿನ ಕಂಪನಿಯೊಂದು ಕುಂಡಗಳಲ್ಲಿ ಮಿಂಚುಸಸ್ಯಗಳನ್ನು ಮಾರುತ್ತೇನೆಂದು
> ವಿಜ್ಞಾನಿಗಳ ಶಿಫಾರಸಿನಿಂದ ಹಣ ಸಂಗ್ರಹಿಸಿದ್ದು ನಿಜ. ಭಗ್ನಕಾರಿ ತಂತ್ರಜ್ಞಾನದ ಬದಲು ಅದು
> 2016ರ ವಿಫಲ ಸಂಶೋಧನೆಗಳ ಸಾಲಿಗೆ ಸೇರಿ, ಹೂಡಿಕೆದಾರರ ಕನಸನ್ನು ಭಗ್ನ ಮಾಡಿತು ಅಷ್ಟೆ.
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to