Its scientific attitude On 14-Jan-2017 3:06 PM, "prakash bailurkar" <[email protected]> wrote:
> Science is always better... > > On 14-Jan-2017 7:42 am, "HAREESHKUMAR K Agasanapura" < > [email protected]> wrote: > >> http://m.prajavani.net/article/2017_01_12/465171 >> >> *ಮುರಿದು ಕಟ್ಟಬನ್ನಿ ಹೊಸ ನಾಳೆಗಳನು* >> >> 12 Jan, 2017 >> >> ನಾಗೇಶ್ ಹೆಗಡೆ >> >> >> <https://www.facebook.com/sharer/sharer.php?u=https%3A%2F%2Fgoo.gl%2FDTOSKf> >> <https://twitter.com/intent/tweet?text=%E0%B2%AE%E0%B3%81%E0%B2%B0%E0%B2%BF%E0%B2%A6%E0%B3%81+%E0%B2%95%E0%B2%9F%E0%B3%8D%E0%B2%9F%E0%B2%AC%E0%B2%A8%E0%B3%8D%E0%B2%A8%E0%B2%BF+%E0%B2%B9%E0%B3%8A%E0%B2%B8+%E0%B2%A8%E0%B2%BE%E0%B2%B3%E0%B3%86%E0%B2%97%E0%B2%B3%E0%B2%A8%E0%B3%81+https%3A%2F%2Fgoo.gl%2FDTOSKf> >> <https://plus.google.com/share?url=https%3A%2F%2Fgoo.gl%2FDTOSKf> >> <http://www.pinterest.com/pin/find/?url=https%3A%2F%2Fgoo.gl%2FDTOSKf> >> <http://www.linkedin.com/shareArticle?mini=true&title=%E0%B2%AE%E0%B3%81%E0%B2%B0%E0%B2%BF%E0%B2%A6%E0%B3%81+%E0%B2%95%E0%B2%9F%E0%B3%8D%E0%B2%9F%E0%B2%AC%E0%B2%A8%E0%B3%8D%E0%B2%A8%E0%B2%BF+%E0%B2%B9%E0%B3%8A%E0%B2%B8+%E0%B2%A8%E0%B2%BE%E0%B2%B3%E0%B3%86%E0%B2%97%E0%B2%B3%E0%B2%A8%E0%B3%81+&url=https%3A%2F%2Fgoo.gl%2FDTOSKf> >> >> ಬೆಳಕು ನೀಡುವ ಮರಗಳ ಬಗ್ಗೆ ಗೊತ್ತೆ? ಬೀದಿಯ ಎರಡೂ ಬದಿಗೆ ಅಂಥದ್ದೇ ಮರಗಳನ್ನು >> ಬೆಳೆಸಿದರೆ ವಿದ್ಯುತ್ ದೀಪಗಳೇ ಬೇಕಾಗಿಲ್ಲ. ವಿಜ್ಞಾನಿಗಳು ಇಪ್ಪತ್ತು ವರ್ಷಗಳ ಹಿಂದೆಯೇ >> ಪುಟ್ಟ ಸಸ್ಯಗಳ ಮೇಲೆ ಈ ಪ್ರಯೋಗವನ್ನು ನಡೆಸಿದ್ದರು. ಮಿಂಚು ಹುಳದ ಗುಣಾಣುವನ್ನು ತೆಗೆದು >> ಅದನ್ನು ತಂಬಾಕಿನ ಸಸ್ಯದ ಡಿಎನ್‌ಎಯೊಳಕ್ಕೆ ತೂರಿಸಿ ಕತ್ತಲಲ್ಲೂ ಪಳಪಳಿಸಬಲ್ಲ ಹೊಸ >> ಸಸ್ಯಗಳನ್ನು ರೂಪಿಸಿದ್ದರು. >> >> ಅಷ್ಟೇಕೆ, ಕೋತಿಯ ಭ್ರೂಣಕ್ಕೂ ಅದೇ ಜೀನನ್ನು ಸೇರಿಸಿ ಮರಿಕೋತಿಯನ್ನೂ ಮಿನುಗಿಸಿದ್ದರು. >> ಈಗ ಅದೇ ತಂತ್ರವನ್ನು ಇನ್ನಷ್ಟು ಸುಧಾರಿಸಿ, ಹೂಕುಂಡಗಳಲ್ಲಿ ಬೆಳೆಸಬಹುದಾದ ವಿವಿಧ >> ಸಸ್ಯಗಳಲ್ಲಿ ಬೆಳಕು ಮಿಂಚುವಂತೆ ಮಾಡಿದರು. ಎಲೆ, ಮೊಗ್ಗುಗಳಷ್ಟೇ ಅಲ್ಲ, ಹೂಗಳೂ ಕತ್ತಲಲ್ಲಿ >> ಮಿನುಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ. ಕುಂಡಗಳಿಗೆ ಬಂದ ಚಂದ ಆಮೇಲೆ ಮರಗಳಿಗೆ >> ಬಾರದೆ? >> >> ಎತ್ತರ ಬೆಳೆಯಬಲ್ಲ ವೃಕ್ಷಗಳ ಜೀವಕೋಶದಲ್ಲೂ ಮಿಂಚುಹುಳದ ಲೂಸಿಫೆರೇಸಿ ಜೀನನ್ನು >> ತೂರಿಸಿದರೆ, ಅಹಾ, ಕೊಂಬೆರೆಂಬೆಗಳಲ್ಲಿ ತಾರಾಲೋಕ. ಮಿನುಗುವ ಕೋತಿಗಳನ್ನೂ ಅಂಥ ಮರಕ್ಕೇರಿಸಿ >> ಸ್ವಪ್ನನಗರಿಯನ್ನೇ ನಿರ್ಮಿಸಬಹುದು. ಕತ್ತಲಲ್ಲಿ ಬೀದಿ ಬೆಳಗಿಸಿ ವಿದ್ಯುತ್ ವೆಚ್ಚವನ್ನು >> ಉಳಿಸಿ, ಕಳ್ಳಕಾಕರ ಮತ್ತು ಬೀದಿ ಕಾಮಣ್ಣರ ಕನಸುಗಳನ್ನೆಲ್ಲ ಮಣ್ಣುಪಾಲು ಮಾಡಬಹುದು. >> >> ಇಂಥ ಹೊಸ ಹೊಸ ಐಡಿಯಾಗಳಿಗೆ ‘ಮುರಿದು ಕಟ್ಟುವ ತಂತ್ರಜ್ಞಾನ’ (ಡಿಸ್ರಪ್ಟಿವ್ >> ಇನ್ನೊವೇಶನ್) ಎನ್ನುತ್ತಾರೆ. ಬೀದಿಬದಿಯ ಹಳೇ ಮರಗಳನ್ನೆಲ್ಲ ಮುರಿದು ಕೆಡವಿ ಹೊಸ ಮರಗಳನ್ನು >> ಬೆಳೆಸುವ ವಿಷಯ ಇಲ್ಲಿ ಉದಾಹರಣೆಯಾಗಿ ಬಂದಿದೆ ಅಷ್ಟೆ. ವಿಜ್ಞಾನ ತಂತ್ರಜ್ಞಾನ ಲೋಕದಲ್ಲಿ >> ಹೀಗೆ ಮುರಿದು ಕಟ್ಟುವ ಸಾಹಸಗಳು ಚರಿತ್ರೆಯುದ್ದಕ್ಕೂ ಕಾಣಸಿಗುತ್ತವೆ. >> >> 1879ರಲ್ಲಿ ಕಾರ್ಲ್ ಬೆಂಝ್ ಎಂಬಾತ ಮೋಟಾರು ಗಾಡಿಗೆ ಪೇಟೆಂಟ್ ಪಡೆದಿದ್ದೇ ಕುದುರೆಗಾಡಿ, >> ಸಾರೋಟುಗಳು ಮೂಲೆಗುಂಪಾದವು. ಕಂಪ್ಯೂಟರ್ ಬಂದಮೇಲೆ ಟೈಪ್‌ರೈಟರ್‌ಗಳ ಇತಿಶ್ರೀಯಾಯಿತು; >> ಇಂಟರ್‌ನೆಟ್ ಬಂದಮೇಲೆ ಅಂಚೆಪೆಟ್ಟಿಗೆಗಳು ಕಾಣೆಯಾದವು. >> >> ಸ್ಮಾರ್ಟ್ ಫೋನ್ ಬಂದಮೇಲೆ ರೇಡಿಯೊ, ಹ್ಯಾಮ್ ರೇಡಿಯೊ, ಅಲಾರ್ಮ್ ಗಡಿಯಾರ, ಡೈರಿ, >> ಕ್ಯಾಲೆಂಡರು, ಕೊನೆಗೆ ಕಂಪ್ಯೂಟರೂ ನಿರುಪಯುಕ್ತ ಎನ್ನುವಲ್ಲಿಗೆ ಬಂದು ಮುಟ್ಟಿದೆ >> (1876ರಲ್ಲಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಎಂಬಾತ ಟೆಲಿಫೋನನ್ನು ರೂಪಿಸಿ ಸಂಪರ್ಕ >> ಕ್ರಾಂತಿಗೆ ನಾಂದಿ ಹಾಡಿದ್ದು, 1903ರಲ್ಲಿ ರೈಟ್ ಸಹೋದರರು ಹಾರುವ ಯಂತ್ರವನ್ನು ರೂಪಿಸಿ >> ಇಡೀ ಮನುಕುಲಕ್ಕೇ ರೆಕ್ಕೆ ಮೂಡಿಸಿದ್ದು- ಇವೆಲ್ಲ ಕ್ರಾಂತಿಕಾರಿ ಸಂಗತಿಗಳೇ ಹೌದಾದರೂ ಇವು >> ಆಗ ಅಸ್ತಿತ್ವದಲ್ಲಿದ್ದ ಯಾವುದನ್ನೂ ಭಗ್ನ ಮಾಡಲಿಲ್ಲ; ಹಾಗಾಗಿ ಮುರಿದು ಕಟ್ಟಿದ ಶ್ರೇಯ >> ಅವಕ್ಕಿಲ್ಲ). ಈಗಂತೂ ತಂತ್ರಜ್ಞಾನಕ್ಕೆ ಅದೆಂಥ ವೇಗ ಬಂದಿದೆ ಎಂದರೆ ಭವಿಷ್ಯ ನಮ್ಮ ಮೇಲೆ >> ಹೇಗೆ ಮುಗಿಬೀಳಲಿದೆ ಎಂದು ಊಹಿಸಲೂ ಸಾಧ್ಯವಿಲ್ಲ. >> >> ಅದಕ್ಕೇ ಕಳೆದವಾರ ತಿರುಪತಿಯಲ್ಲಿ ನಡೆದ 104ನೇ ಸೈನ್ಸ್ ಕಾಂಗ್ರೆಸ್ ಮೇಳದಲ್ಲಿ ಪ್ರಧಾನಿ >> ಮೋದಿಯವರು ‘ಅಂಥ ಭಗ್ನಕಾರಕ ತಂತ್ರಜ್ಞಾನದ ಮೇಲೆ ಕಣ್ಣಿಡಿ’ ಎಂದು ಭಾರತೀಯ ವಿಜ್ಞಾನಿಗಳಿಗೆ >> ಸಲಹೆ ನೀಡಿದರು (ಅವರೇ ಸ್ವತಃ ನಿರ್ಮನೀಕರಣದ ಮಂತ್ರದಂಡವನ್ನು ಪ್ರಯೋಗಿಸಿ ಇಡೀ ದೇಶದ >> ಗೃಹಿಣಿಯರ ಒಬ್ಬಜ್ಜಿ ಉಳಿತಾಯಗಳನ್ನೆಲ್ಲ ಭಗ್ನ ಮಾಡಿದ್ದನ್ನು ಇಲ್ಲಿ ಕಡೆಗಣಿಸೋಣ). ಇಂದಿನ >> ಗಣಕ ತಂತ್ರಶಕ್ತಿ ಮತ್ತು ಯಂತ್ರಜಗತ್ತು- ಈ ಎರಡರ ವಿರಾಟ್ ಬೆಸುಗೆಯ ಬಗ್ಗೆ >> ಎಚ್ಚರಾಗಿರಬೇಕೆಂದು ಅಲ್ಲಿ ನೆರೆದಿದ್ದ ಆರು ಸಾವಿರ ವಿಜ್ಞಾನ ಪ್ರತಿನಿಧಿಗಳಿಗೆ ಕರೆ >> ಕೊಟ್ಟರು. >> >> ಅವರು ಅಲ್ಲಿ ಈ ಮಾತುಗಳನ್ನು ಹೇಳುತ್ತಿರುವಾಗ ಅಮೆರಿಕದ ಲಾಸ್ ವೆಗಾಸ್ ನಗರದಲ್ಲಿ ನಾಳಿನ >> ತಂತ್ರಜ್ಞಾನಗಳ ವಿಶ್ವಮೇಳ ಅದೇ ತಾನೆ ಆರಂಭವಾಗಿತ್ತು. ಜಗತ್ತಿನ ಎಲ್ಲ ಹೈಟೆಕ್ ಕಂಪನಿಗಳು >> ತಂತಮ್ಮ ಸಾಧನ ಸಲಕರಣೆಗಳನ್ನು ಅಲ್ಲಿ ಪ್ರದರ್ಶನಕ್ಕೆ ತಂದಿದ್ದರು. ಅಲ್ಲೊಂದು ಮಾಯಾವಾಸ್ತವ, >> ಅತಿವಾಸ್ತವ ಲೋಕವೇ ಮೈದಳೆದಿತ್ತು. ಕ್ಯಾಲೆಂಡಿರನ ಹಾಗೆ ಸುರುಳಿ ಬಿಚ್ಚಿ ತೂಗು ಹಾಕಬಹುದಾದ >> ಟಿ.ವಿ ಇತ್ತು. >> >> ಓಡಾಡುತ್ತ ಮಾತಾಡುವ ಫ್ರಿಜ್ ಇತ್ತು. ‘ನುಗ್ಗೇಕಾಯಿ ಕೂಟು ಮಾಡುವುದು ಹೇಗೆ?’ ಎಂದು ನೀವು >> ಕೂತಲ್ಲೇ ಆ ತಂಗಳು ಪೆಟ್ಟಿಗೆಯತ್ತ ತಿರುಗಿ ಕೇಳಿದರೆ ಸಾಕು, ಅದು ತಾನಾಗಿ ಜಾಲತಾಣಗಳನ್ನು >> ಹುಡುಕಿ, ರಿಸಿಪಿ ತೆಗೆದು ಉತ್ತರ ಹೇಳುತ್ತದೆ ಅಥವಾ ಬೇಕಿದ್ದ ಸಾಮಗ್ರಿ ಏನೇನೆಂದು ಪಟ್ಟಿ >> ಮಾಡಿ ತನ್ನ ಬಾಗಿಲ ಮೇಲೆಯೇ ಮೂಡಿಸುತ್ತದೆ. ಪೆಟ್ಟಿಗೆಯೊಳಗೆ ನುಗ್ಗೇಕಾಯಿ ಇದೆಯೊ ಇಲ್ಲವೊ, >> ಉದ್ದಿನ ಬೇಳೆಯ ಸ್ಟಾಕ್ ಎಷ್ಟಿದೆ ಎಂಬುದನ್ನು ಹೇಳುತ್ತದೆ. ಅಷ್ಟರಲ್ಲಿ ನಿಮ್ಮ ಮೂಡ್ >> ಬದಲಾಗಿದ್ದರೆ ಸಮೀಪದ ದರ್ಶಿನಿ ಹೊಟೆಲ್‌ನ ನಂಬರನ್ನು ಡಯಲ್ ಮಾಡುತ್ತಿತ್ತೇನೊ. >> >> ಲಾಸ್‌ವೆಗಾಸ್‌ನ ಸಿಇಎಸ್ ಮೇಳದಲ್ಲಿ ಪ್ರದರ್ಶನಕ್ಕಿರುವ ತರಾವರಿ ರೋಬಾಟ್‌ಗಳಂತೂ >> ಕೇಳಲೇಬೇಡಿ. ತೊಟ್ಟಿಲ ಮಗುವಿನಿಂದ ಹಿಡಿದು ಲಕ್ವ ಹೊಡೆದ ಅಜ್ಜನವರೆಗೆ ಎಲ್ಲರ ಸೇವೆ >> ಮಾಡಬಲ್ಲ, ಕತೆ ಹೇಳಿ ರಂಜಿಸಬಲ್ಲ, ನೀರು-ವಿದ್ಯುತ್ತಿನ ಬಿಲ್ ಸಂದಾಯ ಮಾಡಬಲ್ಲ >> ರೋಬಾಟ್‌ಗಳು. ಇವೆಲ್ಲವುಗಳ ಜೊತೆ, ನಾಳಿನ ಬುದ್ಧಿವಂತ ಮನೆಗಳೂ ಅಲ್ಲಿದ್ದವು. >> >> ಅದರೊಳಕ್ಕೆ ಹೋಗಿ ಅಲ್ಲಿದ್ದ ಒಂದೇ ಒಂದು ರಿಮೋಟ್‌ನಿಂದ ಮನೆಯೊಳಗಿನ ಎಲ್ಲವಕ್ಕೂ ಚಾಲನೆ >> ಕೊಡುವ ವ್ಯವಸ್ಥೆ ಇತ್ತು. ಟಿ.ವಿ, ಮಿಕ್ಸಿ, ಫ್ರಿಜ್, ದೀಪದ ಬಲ್ಬ್, ಕಿಟಕಿ ಪರದೆ, ಕೊನೆಗೆ >> ಮುಚ್ಚಿದ ಬಾಗಿಲತ್ತ ಅದೇ ರಿಮೋಟ್ ಹಿಡಿದರೆ ಹೊರಗಡೆಯ ತಾಪಮಾನ ಎಷ್ಟಿದೆ, ಯಾರು ಭೇಟಿಗೆ >> ಬಂದಿದ್ದಾರೆ ಎಲ್ಲವೂ ಗೊತ್ತಾಗುತ್ತಿತ್ತು. >> >> ಇನ್ನು ತೊಡುವ, ಧರಿಸುವ ಕಂಪ್ಯೂಟರ್‌ಗಳ ಕತೆಯೇ ಬೇರೆ. ವಾಚು, ಅಂಗಿಬಟನ್ನು, ಪಾದರಕ್ಷೆ, >> ತೋಳಿನ ತ್ವಚೆಗೇ ಅಂಟಿಕೂರಬಲ್ಲ ಪ್ಯಾಚು ಎಲ್ಲವೂ ಡಿಜಿಟಲ್ ಆಗಿರುತ್ತವೆ. ಕನ್ನಡಕದ ಫ್ರೇಮಿನ >> ಮೂಲೆಯಲ್ಲೇ ಪುಟ್ಟ ಬಿಂದುವಿನಂತೆ ಕೂತು ನಿಮ್ಮ ಕಣ್ಣಿನ ಅಕ್ಷಿಪಟದ ಹಿಂದಿನ ರಕ್ತನಾಳಗಳನ್ನೂ >> ಗಮನಿಸುತ್ತ ನಿಮ್ಮ ಆರೋಗ್ಯದ ಮೇಲೆ ಕಣ್ಣಿಡುವ (ಕಣ್‌ಡಾಕ್ಟರ್) ಬೇಕೆ? >> >> ನಿಮಗೆ ಬೇಡವಾಗಿದ್ದರೆ ಮನೆಯಲ್ಲಿ ಒಬ್ಬಳೇ ಕೂತಿರಬೇಕಾದ ನಿಮ್ಮ ಅಸ್ವಸ್ಥ ಅಮ್ಮನಿಗೆ >> ಅದನ್ನು ತೊಡಿಸಿ ನೀವು ಕೆಲಸಕ್ಕೆ ಹೋಗಬಹುದಲ್ಲ? ಅಥವಾ ಸರಿರಾತ್ರಿಯಲ್ಲಿ ವಾಹನ ಓಡಿಸಬೇಕಾದ >> ಚಾಲಕ ತಾನು ಕೂತಲ್ಲೇ ತೂಕಡಿಸದ ಹಾಗೆ ಎಚ್ಚರಿಸಲು ಅಂಥ ಕನ್ನಡಕ ಬೇಕಲ್ಲ? >> >> ನೀವು ಕಚೇರಿಯಲ್ಲಿ ಯಾವುದೋ ವರದಿಯನ್ನು ಟೈಪ್ ಮಾಡುತ್ತ ಕೂತಿರುವಾಗ ನಿಮ್ಮ ಬೆರಳ ತುದಿಯ >> ತಾಪಮಾನವನ್ನು, ರಕ್ತ ಪರಿಚಲನೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ನಿಮ್ಮದೇ ಆರೋಗ್ಯದ >> ವರದಿಯನ್ನು ಕೊಡಬಲ್ಲ ಕೀಲಿಮಣೆ ಬೇಕಲ್ಲ? >> >> ನಮ್ಮೆಲ್ಲರ ನಾಳೆಗಳನ್ನು ಬದಲಿಸಬಹುದಾದ ಆ ಜಗತ್ತಿಗಾಗಿ ಭಾರತೀಯರು ಹೇಗೆ ಸಜ್ಜಾಗಬೇಕು? >> ಕಿರಿಯರಿಗೆ ನೀಡಬೇಕಾದ ಸಲಹೆ, ಉಪದೇಶ, ಮಾರ್ಗದರ್ಶನ, ಶಿಕ್ಷಣ ಎಲ್ಲವೂ ನಾಳೆ ಅವರು ತೊಡುವ >> ಯಂತ್ರಗಳಿಂದಲೇ ಬರುತ್ತವೆ. ಶಿಕ್ಷಕರು, ಡಾಕ್ಟರು, ಹಿರಿಯರು, ಗುರುಗಳು, ಸ್ನೇಹಿತರು >> ಎಲ್ಲರೂ ನಗಣ್ಯರಾಗಿ ಕೊನೆಗೆ ಸ್ವಾಮಿಭಕ್ತ ನಾಯಿಯೂ ಇಂಟೆಲಿಜೆಂಟ್ ಯಂತ್ರವೇ ಆಗಿರುತ್ತದೆ. >> >> ಅಂಥ ಹೈಟೆಕ್ ಪ್ರಪಂಚದ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಮಾತಿನ ಸಂದೇಶ >> ಸ್ಪಷ್ಟವಾಗಿತ್ತು: ನಮ್ಮ ದೇಶದ ಸಶಕ್ತ, ಸುಶಿಕ್ಷಿತ ಯುವಕೋಟಿಯೇ ನಮ್ಮ ಹೆಮ್ಮೆಯ >> ಆಸ್ತಿಯೆಂದು ನಾವು ಈಚೀಚೆಗಷ್ಟೇ ಎದೆಯುಬ್ಬಿಸಿ ಹೇಳತೊಡಗಿದ್ದೆವು. ಜನಸಂಖ್ಯೆ >> ಕಮ್ಮಿಯಾಗುತ್ತಿರುವ ದೇಶಗಳಿಗೆಲ್ಲ ನಮ್ಮವರನ್ನೇ ರಫ್ತು ಮಾಡಿ ಡಾಲರ್ ಗಳಿಸಬಹುದೆಂದು >> ಹೇಳುತ್ತಿದ್ದೆವು. ಆದರೆ ಅಲ್ಲಿನ ಲೋಕದಲ್ಲಿ ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಹೆಚ್ಚಾದಷ್ಟೂ >> ಭಾರತದ ಹಿತಾಸಕ್ತಿಗೆ ಧಕ್ಕೆ ಆದೀತೆಂಬ ಆತಂಕ ಮೋದಿಯವರ ಮಾತಿನಲ್ಲಿ ವ್ಯಕ್ತವಾಗಿತ್ತು. >> >> ಅಂಥ ಭಗ್ನಕಾರಿ ತಂತ್ರಜ್ಞಾನ ನಮಗಲ್ಲವೆಂದು ಬೆನ್ನು ತಿರುಗಿಸುವ ಬದಲು, ನಮ್ಮ >> ಅನುಕೂಲಕ್ಕೆ ತಕ್ಕಂತೆ ಅದನ್ನು ತಿರುಗಿಸಬೇಕೆಂಬುದು ಅವರ ಇಂಗಿತವಾಗಿತ್ತು. ಆರೋಗ್ಯ, ಶಕ್ತಿ >> ಉತ್ಪಾದನೆ, ಸಂಚಾರ, ಶಿಕ್ಷಣ, ನೀರಾವರಿ, ಕೃಷಿ ಹೀಗೆ ಎಲ್ಲ ರಂಗಗಳಲ್ಲೂ ಕೃತಕ ಬುದ್ಧಿಮತ್ತೆ >> ಮತ್ತು ಜೈವಿಕ ಎಂಜಿನಿಯರಿಂಗ್ ಮಿಲನದ ಸಾಧ್ಯತೆಯನ್ನು ಹುಡುಕಬೇಕು; ‘ಅದಕ್ಕೆ ಬೇಕಿದ್ದ >> ಸಂಸ್ಥೆಗಳನ್ನು ಕಟ್ಟೋಣ, ಬಂಡವಾಳ ಹೂಡೋಣ’ ಎಂದು ಅವರು ಎಂದಿನಂತೆ ಘಂಟಾಘೋಷಣೆ ಮಾಡಿದರು. >> >> ಹೂಡೋಣವೆ? ಈಗಿನ್ನೂ 19ನೇ ಶತಮಾನವನ್ನೇ ಬಿಟ್ಟು ಹೊರಡಲಾಗದ ಜನರಿಗೆ 21ನೇ ಶತಮಾನದ >> ಝಲಕನ್ನೂ ನಗರಗಳ ಮಾಯಾಕಂಕಣವನ್ನೂ ತೊಡಿಸೋಣವೆ? ಗ್ರಾಮವಾಸಿಗಳ, ಅರಣ್ಯವಾಸಿಗಳ, ಕೊಳೆಗೇರಿಗಳ >> ಕಟುವಾಸ್ತವಕ್ಕೂ ಸೈಬರ್ ಲೋಕದ ಅತಿವಾಸ್ತವಕ್ಕೂ ನಡುವೆ ಸೇತುವೆ ಕಟ್ಟುವುದು ಹೇಗೆ? ಅವರ >> ಶಿಥಿಲ ನಾಳೆಗಳಿಗೆ ತುಸು ಬಣ್ಣ ತುಂಬುವುದು ಹೇಗೆ? >> >> ಈ ಪ್ರಶ್ನೆಗೆ ಒಂದು ಉತ್ತರ ಇದೀಗ ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿಯಿಂದ ಬಂದಿದೆ: >> ಅಲ್ಲಿನ ಬಯೊಇಂಜಿನಿಯರ್ ಮನು ಪ್ರಕಾಶ್ ಎಂಬ ಭಾರತೀಯ ಯುವಕ ನಿಜಕ್ಕೂ ಬೆರಳು ಕಚ್ಚುವಂಥ >> ಸಂಶೋಧನೆ ಮಾಡಿದ್ದಾರೆ. ಎರಡು ಕೈಗಳ ಎರಡು ಬೆರಳುಗಳ ನಡುವೆ ದಾರಕ್ಕೆ ಪೋಣಿಸಿದ ಪುಟ್ಟ >> ಚಕ್ರವೊಂದನ್ನು ತಿರುಗಿಸುತ್ತ ಅವರು ಅದನ್ನೊಂದು ವೈದ್ಯಕೀಯ ಸಲಕರಣೆಯಾಗಿ >> ಪರಿವರ್ತಿಸಿದ್ದಾರೆ. >> >> ಅದರ ವಿವರ ಹೀಗಿದೆ: ಮಲೇರಿಯಾ, ಏಡ್ಸ್, ಚಿಕುನ್‌ಗುನ್ಯದಂಥ ಹತ್ತಾರು ರೋಗಗಳ ಪತ್ತೆಗೆ >> ರಕ್ತಪರೀಕ್ಷೆ ಮಾಡುವುದು ನಮಗೆಲ್ಲ ಗೊತ್ತಿದೆ. ರೋಗಿಯ ಅರ್ಧ ಚಮಚೆಯಷ್ಟು ರಕ್ತವನ್ನು ಒಂದು >> ಶೀಶೆಯಲ್ಲಿಟ್ಟು ದೊಡ್ಡ ಯಂತ್ರದೊಳಕ್ಕೆ ಜೋರಾಗಿ ತಿರುಗಿಸುತ್ತಾರೆ. ನಿಮಿಷಕ್ಕೆ ಲಕ್ಷ >> ಸುತ್ತು ತಿರುಗುವಾಗ ರಕ್ತದಲ್ಲಿನ ನೀರಿನಂಥ ಪ್ಲಾಸ್ಮಾ ಬೇರೆಯಾಗುತ್ತದೆ. ಕೆಂಪು ಕಣಗಳ ಗಸಿ >> ತಳಕ್ಕಿಳಿಯುತ್ತದೆ. >> >> ಅದನ್ನೇ ಸೂಕ್ಷ್ಮದರ್ಶಕದಲ್ಲಿ ಇಟ್ಟು ರಕ್ತಗುಣವನ್ನು, ರೋಗಕ್ಕೆ ಕಾರಣವಾಗುವ >> ಸೂಕ್ಷ್ಮಾಣುವನ್ನು ಪತ್ತೆ ಹಚ್ಚಬಹುದು. ಆದರೆ ಈ ಪರೀಕ್ಷೆಗೆ ಬೇಕಾದ ‘ಸೆಂಟ್ರಿಫ್ಯೂಜ್’ ಎಂಬ >> ತಿರುಗಣೆ ಯಂತ್ರಕ್ಕೆ ಲಕ್ಷಾಂತರ ರೂಪಾಯಿ ಬೇಕು, ಜೊತೆಗೆ ಸದಾಕಾಲ ವಿದ್ಯುತ್ ಇರಬೇಕು. ಅದರ >> ಬದಲು ಪುಟ್ಟ ಕೊಳವೆಗೆ ನಾಲ್ಕು ಹನಿ ರಕ್ತ ಹಾಕಿ ಮಕ್ಕಳ ಈ ಆಟಿಗೆಗೆ ಜೋಡಿಸಿದರೆ ಅದು >> ನಿಮಿಷಕ್ಕೆ ಒಂದೂವರೆ ಲಕ್ಷ ಬಾರಿ ತಿರುಗುತ್ತದೆ. >> >> ಒಂದೆರಡು ನಿಮಿಷಗಳಲ್ಲಿ ಪರೀಕ್ಷೆಗೆ ಬೇಕಾದ ಪ್ಲಾಸ್ಮಾ ದ್ರವ ಮತ್ತು ಗಸಿ ಅಲ್ಲೇ >> ಬೇರ್ಪಡುತ್ತದೆ. ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದವರೂ ಇನ್ನು ಮೇಲೆ ರಕ್ತ >> ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಕಾನಪುರ ಐಐಟಿಯಲ್ಲಿ ಓದಿದ ಈ ಮೀರಠ್ ಹುಡುಗ ಕಳೆದ ವರ್ಷ >> ರಟ್ಟಿನ ಕಾಗದದಲ್ಲೇ ಹತ್ತು ರೂಪಾಯಿ ವೆಚ್ಚದ ಮೈಕ್ರೊಸ್ಕೋಪ್ ತಯಾರಿಸಿ ವಿಜ್ಞಾನಲೋಕಕ್ಕೆ >> ಅಚ್ಚರಿ ಮೂಡಿಸಿದವರು. >> >> ಎರಡು ವರ್ಷಗಳ ಹಿಂದೆ ಮಕ್ಕಳಿಗಾಗಿ ಪಂಚ್ ಕಾರ್ಡ್ ದ್ರವಪರೀಕ್ಷಾ ಸಾಧನವನ್ನು ನಿರ್ಮಿಸಿ >> ಅರ್ಧಲಕ್ಷ ಡಾಲರ್ ಬಹುಮಾನ ಮತ್ತು ಪ್ರತಿಷ್ಠಿತ ‘ಮೆಕಾರ್ಥರ್ ಜೀನಿಯಸ್ ಗ್ರಾಂಟ್’ ಪಡೆದವರು. >> ಇದೀಗ ದಾರದ ಚಕ್ರವನ್ನೇ ರಕ್ತಪರೀಕ್ಷೆಯ ಅಗ್ಗದ ಸಲಕರಣೆಯನ್ನಾಗಿ ಪರಿವರ್ತಿಸಿ ಮೊನ್ನೆ, >> ನಿನ್ನೆ ಜಾಗತಿಕ ಮಟ್ಟದ ಎಲ್ಲ ವಿಜ್ಞಾನ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿದ್ದಾರೆ. >> >> ನಮ್ಮ ದೇಶದಲ್ಲಿ ಸೆಂಟ್ರಿಫ್ಯೂಜ್ ಯಂತ್ರಗಳ ಖರೀದಿಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು >> ಗೋಲ್‌ಮಾಲ್ ಮಾಡುವವರಿಗೆ ಅಡ್ಡಗಾಲು ಹಾಕಿ, ಭಾರತದ ಮಟ್ಟಿಗೆ ‘ಭಗ್ನಕಾರಕ ತಂತ್ರಜ್ಞಾನ’ >> ಎಂದರೆ ಹೇಗಿರಬೇಕು ಎಂದು ತೋರಿಸಿದ್ದಾರೆ. >> >> ಅಂದಹಾಗೆ, ಬೆಳಕು ಮಿನುಗಿಸುವ ಬೀದಿವೃಕ್ಷಗಳು ನಿಜಕ್ಕೂ ಬರುತ್ತಿವೆಯೆ? ಇಲ್ಲ, ಅಮೆರಿಕದ >> ಕಿಕ್‌ಸ್ಟಾರ್ಟರ್ ಹೆಸರಿನ ಕಂಪನಿಯೊಂದು ಕುಂಡಗಳಲ್ಲಿ ಮಿಂಚುಸಸ್ಯಗಳನ್ನು ಮಾರುತ್ತೇನೆಂದು >> ವಿಜ್ಞಾನಿಗಳ ಶಿಫಾರಸಿನಿಂದ ಹಣ ಸಂಗ್ರಹಿಸಿದ್ದು ನಿಜ. ಭಗ್ನಕಾರಿ ತಂತ್ರಜ್ಞಾನದ ಬದಲು ಅದು >> 2016ರ ವಿಫಲ ಸಂಶೋಧನೆಗಳ ಸಾಲಿಗೆ ಸೇರಿ, ಹೂಡಿಕೆದಾರರ ಕನಸನ್ನು ಭಗ್ನ ಮಾಡಿತು ಅಷ್ಟೆ. >> >> Hareeshkumar K >> GHS Huskuru >> Malavalli TQ >> Mandya Dt >> 9880328224 >> >> -- >> 1. If a teacher wants to join STF, visit http://karnatakaeducation.org. >> in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org. >> in/KOER/en/index.php >> 4. For Ubuntu 14.04 installation, visit http://karnatakaeducation.org. >> in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequentl >> y_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
