http://m.prajavani.net/article/2017_05_06/489619# *ಬುದ್ಧಿಮತ್ತೆ ಪರೀಕ್ಷೆ: ಐನ್‌ಸ್ಟೀನ್, ಹಾಕಿಂಗ್‌ರನ್ನು ಹಿಂದಿಕ್ಕಿದ ಭಾರತದ ಬಾಲಕಿ*
6 May, 2017 ಪಿಟಿಐ <https://www.facebook.com/sharer/sharer.php?u=https%3A%2F%2Fgoo.gl%2FciYtyK> <https://twitter.com/intent/tweet?text=+%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%AE%E0%B2%A4%E0%B3%8D%E0%B2%A4%E0%B3%86+%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%3A+%E0%B2%90%E0%B2%A8%E0%B3%8D%E2%80%8C%E0%B2%B8%E0%B3%8D%E0%B2%9F%E0%B3%80%E0%B2%A8%E0%B3%8D%E2%80%8C%2C+%E0%B2%B9%E0%B2%BE%E0%B2%95%E0%B2%BF%E0%B2%82%E0%B2%97%E0%B3%8D%E2%80%8C%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%BF%E0%B2%82%E0%B2%A6%E0%B2%BF%E0%B2%95%E0%B3%8D%E0%B2%95%E0%B2%BF%E0%B2%A6+%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B2%E0%B2%95%E0%B2%BF+https%3A%2F%2Fgoo.gl%2FciYtyK> <whatsapp://send?text=+%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%AE%E0%B2%A4%E0%B3%8D%E0%B2%A4%E0%B3%86+%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%3A+%E0%B2%90%E0%B2%A8%E0%B3%8D%E2%80%8C%E0%B2%B8%E0%B3%8D%E0%B2%9F%E0%B3%80%E0%B2%A8%E0%B3%8D%E2%80%8C%2C+%E0%B2%B9%E0%B2%BE%E0%B2%95%E0%B2%BF%E0%B2%82%E0%B2%97%E0%B3%8D%E2%80%8C%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%BF%E0%B2%82%E0%B2%A6%E0%B2%BF%E0%B2%95%E0%B3%8D%E0%B2%95%E0%B2%BF%E0%B2%A6+%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B2%E0%B2%95%E0%B2%BF+-+%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF.++++https%3A%2F%2Fgoo.gl%2FciYtyK> <https://plus.google.com/share?url=https%3A%2F%2Fgoo.gl%2FciYtyK> <http://www.pinterest.com/pin/find/?url=https%3A%2F%2Fgoo.gl%2FciYtyK> <http://www.linkedin.com/shareArticle?mini=true&title=+%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%AE%E0%B2%A4%E0%B3%8D%E0%B2%A4%E0%B3%86+%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%3A+%E0%B2%90%E0%B2%A8%E0%B3%8D%E2%80%8C%E0%B2%B8%E0%B3%8D%E0%B2%9F%E0%B3%80%E0%B2%A8%E0%B3%8D%E2%80%8C%2C+%E0%B2%B9%E0%B2%BE%E0%B2%95%E0%B2%BF%E0%B2%82%E0%B2%97%E0%B3%8D%E2%80%8C%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%BF%E0%B2%82%E0%B2%A6%E0%B2%BF%E0%B2%95%E0%B3%8D%E0%B2%95%E0%B2%BF%E0%B2%A6+%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B2%E0%B2%95%E0%B2%BF+&url=https%3A%2F%2Fgoo.gl%2FciYtyK> *ಲಂಡನ್: *ಇಂಗ್ಲೆಂಡಿನ ಬ್ರಿಟೀಷ್ ಮೆನ್ಸಾ ಸಂಸ್ಥೆ ನಡೆಸುವ ಬುದ್ಧಿಮತ್ತೆ ಪರೀಕ್ಷೆಯಲ್ಲಿ 162 ಅಂಕ ಪಡೆಯುವ ಮೂಲಕ ಭಾರತ ಮೂಲದ 12ವರ್ಷದ ಬಾಲಕಿ ರಾಜ್‌ಗೌರಿ ಪವಾರ್ ಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೀನ್ ಹಾಗೂ ವಿಜ್ಞಾನಿ ಸ್ಟೀಫನ್ ಹಾಕಿಂಗ್‌ರನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ. ಕಳೆದ ತಿಂಗಳು ನಡೆದಿದ್ದ ಪರೀಕ್ಷೆಯಲ್ಲಿ ಪವಾರ್ 162 ಅಂಕಗಳನ್ನು ಪಡೆದಿದ್ದರು. ಇದು 18 ವರ್ಷಕ್ಕಿಂತ ಕೆಳವಯಸ್ಸಿನವರಲ್ಲಿ ಕಂಡು ಬರಬಹುದಾದ ಗರಿಷ್ಟ ಬುದ್ಧಿಮತ್ತೆಗೆ ಸಮಾನವಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸುವ ನೂರರಲ್ಲಿ ಒಬ್ಬ ವಿದ್ಯಾರ್ಥಿಯಷ್ಟೇ ಈ ಸಾಧನೆ ಮಾಡಲು ಸಾಧ್ಯವಿದ್ದು, ಅಂತಹ ಅಪರೂಪದ ಸಾಧನೆಯನ್ನು ಚೆಷೈರ್ ಜಿಲ್ಲೆಯಿಂದ ಭಾಗವಹಿಸಿದ್ದ ಪವಾರ್ ಮಾಡಿದ್ದಾರೆ. ಅತ್ಯಂತ ಪ್ರತಿಭಾಶಾಲಿಯಾದವರು ತನ್ನ 140ನೇ ವಯಸ್ಸಿನಲ್ಲಿ ಗಳಿಸಲು ಸಾಧ್ಯವಿರುವ 162 ಅಂಕಗಳನ್ನು ಇವರು ಕೇವಲ 12ರ ಹರೆಯದಲ್ಲೇ ಗಳಿಸಿದ್ದು, ಇದು ಆಲ್ಬರ್ಟ್ ಐನ್‌ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ ಅವರು ಗಳಿಸಿದ್ದಕ್ಕಿಂತಲೂ ಎರಡು ಅಂಕ ಹೆಚ್ಚಾಗಿದೆ. ಈ ಸಾಧನೆಯನ್ನು ಮಾಡಲು ವಿಶ್ವದಾದ್ಯಂತ ಇರುವ ಕೇವಲ 20,000 ಜನರಿಗಷ್ಟೇ ಸಾಧ್ಯ ಎಂದು ಮೆನ್ಸಾ ಸಂಸ್ಥೆ ಹೇಳಿಕೊಂಡಿದೆ. ‘ಪರೀಕ್ಷೆಗೂ ಮೊದಲು ಸ್ವಲ್ಪ ಗಾಬರಿಯಾಗಿದ್ದೆ. ಆದರೆ ಅತ್ಯುತ್ತಮವಾಗಿ ಪರೀಕ್ಷೆ ಮುಗಿಸಿರುವುದಕ್ಕೆ ಬಹಳ ಸಂತಸವಾಗಿದೆ’ ಎಂದು ಪರೀಕ್ಷೆ ನಂತರ ಪವಾರ್ ಹೇಳಿಕೊಂಡಿದ್ದಾರೆ. ಪವಾರ್ ಸಾಧನೆಯ ಬಗ್ಗೆ ಮಾತನಾಡಿರುವ ಆಕೆಯ ತಂದೆ ಸುರಾಜ್‌ಕುಮಾರ್ ಪವಾರ್, ‘ನನ್ನ ಮಗಳು ಪ್ರತಿದಿನ ಶಾಲೆಯಲ್ಲಿ ಸಂತಸದಾಯಕವಾಗಿ ಕಲಿಯಲು ಆಕೆಯ ಶಿಕ್ಷಕರು ವಹಿಸಿದ ಶ್ರಮ ಮತ್ತು ಪ್ರೋತ್ಸಾಹ ನೀಡದೆ ಇದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಬಾಲಕಿ ಅಲ್ಟ್ರಿಂಚಮ್ ಬಾಲಕಿಯರ ವ್ಯಾಕರಣ ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲೆಯ ಶಿಕ್ಷಕ ವರ್ಗದಿಂದಲೂ ಪವಾರ್ ಸಾಧನೆಗೆ ಹರ್ಷ ವ್ಯಕ್ತವಾಗಿದೆ. ‘ಎಲ್ಲರಿಗೂ ಸಂತಸವಾಗಿದೆ. ಪವಾರ್ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದು ನಾವು ಆಕೆಯಿಂದ ಇನ್ನಷ್ಟು ಶ್ರೇಷ್ಟ ಸಾಧನೆಗಳನ್ನು ಬಯಸುತ್ತೇವೆ’ ಎಂದು ಶಾಲೆಯ ಗಣಿತ ಶಿಕ್ಷಕ ಆ್ಯಂಡ್ರೋ ಬ್ಯಾರ್ರಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾಧನೆಯ ಬಳಿಕ ಪವಾರ್‌ಗೆ ಬ್ರಿಟಿಷ್ ಮೆನ್ಸಾ ಬುದ್ಧಿಮತ್ತೆ ಸಂಸ್ಥೆಯಲ್ಲಿ ಗಣ್ಯ ಸದಸ್ಯತ್ವ ಸ್ಥಾನಮಾನ ಕಲ್ಪಿಸಲಾಗಿದೆ. Hareeshkumar K GHS Huskuru Malavalli TQ Mandya Dt 9880328224 -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
