Soooper concept sir

On Thu, 12 Apr 2018, 7:18 pm Shubhamangala A.G, <ag.shubhamang...@gmail.com>
wrote:

> Pls check any one concerned that I am not getting mail from last one month
> On 18-Dec-2017 11:22 am, "Hareeshkumar K" <harihusk...@gmail.com> wrote:
>
>> ತೂಕ - ಕೌತುಕ!
>> *ವಿನಾಯಕ ಕಾಮತ್*
>>
>>
>> <https://1.bp.blogspot.com/-jd1myQ808Ao/WjbLf0EjrXI/AAAAAAAAnwE/y0AzBNY_y0syd06lHigbnB0Du7J-ITuoACLcBGAs/s1600/scale.jpg>
>>
>> ಒಂದು ಸರಳ ಪ್ರಶ್ನೆ.
>>
>> ಎರಡು ವಸ್ತುಗಳಿವೆ. ಒಂದು ಭೂಮಿಯ ಮೇಲಿದ್ದರೆ, ಇನ್ನೊಂದು ಚಂದ್ರನ ಮೇಲಿದೆ. ಆದರೆ ಎರಡೂ
>> ವಸ್ತುಗಳ ತೂಕ (weight) ಒಂದೇ! ಹಾಗಿದ್ದರೆ, ಯಾವುದಕ್ಕೆ ಹೆಚ್ಚಿನ ದ್ರವ್ಯರಾಶಿ (mass)
>> ಇರುತ್ತದೆ? ಮೇಲಿನ ಪ್ರಶ್ನೆಗೆ ನಿಮ್ಮ ಉತ್ತರ, 'ತೂಕ ಒಂದೇ ಎಂದ ಮೇಲೆ ದ್ರವ್ಯರಾಶಿಯೂ ಒಂದೇ
>> ಇರಬೇಕಲ್ಲವೇ?' ಅಥವಾ 'ತೂಕ ಮತ್ತು ದ್ರವ್ಯರಾಶಿಯ ನಡುವೆ ವ್ಯತ್ಯಾಸ ವಿದೆಯೇ?'
>> ಎಂಬುದಾಗಿದ್ದರೆ, ನೀವು ಈ ಲೇಖನವನ್ನು ಖಂಡಿತ ಓದಬೇಕು!
>>
>> ವೈಜ್ಞಾನಿಕವಾಗಿ ತೂಕ ಮತ್ತು ದ್ರವ್ಯರಾಶಿ ಬೇರೆಯದೇ ಆಗಿರುವ ಎರಡು ಭೌತಿಕ ಪರಿಮಾಣಗಳು.
>> ಆದರೆ ದೈನಂದಿನ ಜೀವನದಲ್ಲಿ ನಾವು ಇವೆರಡನ್ನೂ ಒಂದೇ ಎನ್ನುವ ಭಾವದಲ್ಲಿ ಬಳಸಿಬಿಡುತ್ತೇವೆ.
>> ವಿಜ್ಞಾನ ವಿಷಯದ ಬೋಧನೆಯಲ್ಲಿಯೂ ಈ ತಪ್ಪು ಅತ್ಯಂತ ಸಹಜವಾಗಿಬಿಟ್ಟಿದೆ. ಕಿಲೋಗ್ರಾಂ ('kg')
>> ಎಂಬ ಏಕಮಾನದ ಮೂಲಕ ನಾವು ದ್ರವ್ಯರಾಶಿಯನ್ನು ಸೂಚಿಸುತ್ತಿದ್ದರೂ, ಅದನ್ನು weight ಎಂದು
>> ತಪ್ಪಾಗಿ ಕರೆದುಬಿಡುತ್ತೇವೆ. ಅಥವಾ ವಸ್ತುವಿನ ತೂಕವನ್ನು ಮಾಪಕದ ಮೂಲಕ ಅಳೆದು,
>> ದ್ರವ್ಯರಾಶಿಯನ್ನೇ ಅಳೆದಿರುವುದಾಗಿ ಭಾವಿಸಿಬಿಟ್ಟಿರುತ್ತೇವೆ. ಇದಕ್ಕೆಲ್ಲ ಕಾರಣ, ನಮಗೆ ಈ
>> ಎರಡೂ ಪರಿಮಾಣಗಳ ಬಗ್ಗೆ ಇರಬೇಕಾದ ಸ್ಪಷ್ಟ ಕಲ್ಪನೆಯ ಕೊರತೆ.
>>
>> ದ್ರವ್ಯರಾಶಿ ಅಥವಾ mass ಎಂಬುದು, ನಮ್ಮಲ್ಲಿರುವ ವಸ್ತುವಿನ ಪ್ರಮಾಣವನ್ನು
>> ಸೂಚಿಸುವಂಥದ್ದು‌. ನಮ್ಮಲ್ಲಿರುವ ವಸ್ತುವಿನ ಪ್ರಮಾಣ ಹೆಚ್ಚಿದಂತೆಲ್ಲ ಅದರ ದ್ರವ್ಯರಾಶಿ
>> ಹೆಚ್ಚಾಗುತ್ತಿರುತ್ತದೆ. ಆದರೆ, ಒಂದು ಕೊಟ್ಟ ವಸ್ತುವಿನ ದ್ರವ್ಯರಾಶಿ, ವಿಶ್ವದಾದ್ಯಂತ
>> ಒಂದೇ ಆಗಿರುತ್ತದೆ. ಉದಾಹರಣೆಗೆ, ಒಬ್ಬ ಮನುಷ್ಯನ ದ್ರವ್ಯರಾಶಿ ಭೂಮಿಯ ಮೇಲೆ 60 kg
>> ಆಗಿದ್ದರೆ, ಅದು ಚಂದ್ರನ ಮೇಲೆಯೂ 60 kg ಯಾಗಿರಬೇಕು, ಗುರು ಗ್ರಹದ ಮೇಲೆಯೂ 60 kg
>> ಯಾಗಿರಬೇಕು. ವಸ್ತು ಯಾವುದೇ ಪ್ರತಿಕ್ರಿಯೆಗೆ ಒಳಪಡದಿದ್ದರೆ, ಅದರ ದ್ರವ್ಯರಾಶಿ ವಿಶ್ವದ
>> ಯಾವುದೇ ಮೂಲೆಗೆ ಹೋದರೂ ಬದಲಾಗುವುದಿಲ್ಲ.
>>
>> ಮೇಲೆ kg ಎಂದೆನಷ್ಟೇ? kg ಅಥವಾ 'ಕಿಲೋ ಗ್ರಾಂ' ಎಂಬುದು ದ್ರವ್ಯರಾಶಿಯ ಅಂತಾರಾಷ್ಟ್ರೀಯ
>> ಏಕಮಾನ. (ಇದನ್ನು Kg, KG ಅಥವಾ kG ಎಂದೆಲ್ಲಾ ಬರೆಯಬಹುದಾದರೂ, ಇದರ ಸರಿಯಾದ ಹೃಸ್ವರೂಪ
>> kg). kg ಎಂಬ ಏಕಮಾನಕ್ಕೆ ಒಂದು ನಿರ್ದಿಷ್ಟವಾದ, ನೈಸರ್ಗಿಕವಾದ ಆಧಾರವಿಲ್ಲ. ಬದಲಾಗಿ, kg
>> ಯನ್ನು 'ಫ್ರಾನ್ಸ್ ದೇಶದ ಅಂತಾರಾಷ್ಟೀಯ ಬ್ಯುರೋದಲ್ಲಿರುವ kg ಯ ಮೂಲಾಧಾರದ (prototype)
>> ದ್ರವ್ಯರಾಶಿಯಷ್ಟು' ಎಂದು ವ್ಯಾಖ್ಯಾನಿಸುತ್ತಾರೆ. International Prototype of kg
>> (IPK) ಎಂದು ಕರೆಯಲ್ಪಡುವ ಪ್ಲಾಟಿನಂ(90%)-ಇರಿಡಿಯಂ(10%) ಮಿಶ್ರಲೋಹದ ಸಿಲಿಂಡರ್, ನಮ್ಮ
>> ಸದ್ಯದ kg ಮೂಲಮಾನಕ್ಕೆ ಆಧಾರ. ಆದರೆ ಈ ನೈಸರ್ಗಿಕ ಆಧಾರವಿಲ್ಲದ ಏಕಮಾನವನ್ನು ಬದಲಾಯಿಸುವ
>> ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ, kg ಯ ಜೊತೆ ಇನ್ನೂ
>> ಕೆಲವು  ಏಕಮಾನಗಳನ್ನು, ನೈಸರ್ಗಿಕ ಆಧಾರವುಳ್ಳ ಸ್ಥಿರಮೌಲ್ಯದ  ಏಕಮಾನಗಳಿಗೆ ಬದಲಾಯಿಸುವ
>> ಕುರಿತು ಅಂತಿಮ ನಿರ್ಣಯ ಹೊರಬೀಳಲಿದೆ.
>>
>> ನೇರವಾಗಿ ದ್ರವ್ಯರಾಶಿಯನ್ನೇ ಅಳೆಯಬೇಕಾದರೆ ನಾವು ಬಳಸಬೇಕಾದ್ದು, ನಮ್ಮ ಸಾಂಪ್ರದಾಯಿಕವಾದ
>> ಎರಡು ಪರಡಿಗಳ ತೂಗು-ತಕ್ಕಡಿಗಳನ್ನೇ ಹೊರತು, ಸ್ಪ್ರಿಂಗ್ ತಕ್ಕಡಿಗಳನ್ನಾಗಲಿ ಅಥವಾ ಆಧುನಿಕ
>> digital ತಕ್ಕಡಿಗಳನ್ನಾಗಲಿ ಖಂಡಿತ ಅಲ್ಲ. ಹಾಗಿದ್ದರೆ, ರದ್ದಿ-ಪತ್ರಿಕೆ ಅಂಗಡಿಗಳ
>> ಸ್ಪ್ರಿಂಗ್ ತಕ್ಕಡಿಗಳು, ಕಿರಾಣಿ ಅಂಗಡಿಯ ಅಥವಾ ಬಂಗಾರದಂಗಡಿಯ ಆಧುನಿಕ digital
>> ತಕ್ಕಡಿಗಳಿಂದ ನಾವು ಮೋಸ ಹೋಗುತ್ತಿದ್ದೇವೆಯೇ? ಇದನ್ನು ತಿಳಿದುಕೊಳ್ಳಲು ನಮಗೆ weight
>> ಅಥವಾ ತೂಕದ ಪರಿಕಲ್ಪನೆ ಅತ್ಯವಶ್ಯ.
>>
>> ತೂಕ ಎಂದರೆ, ದ್ರವ್ಯರಾಶಿಯ ಮೇಲೆ ಗುರುತ್ವಾಕರ್ಷಣ ಶಕ್ತಿಯ ಕಾರಣದಿಂದ
>> ವ್ಯಕ್ತವಾಗುತ್ತಿರುವ ಬಲ. ಗಣಿತೀಯವಾಗಿ ಇದನ್ನು w = m×g ಎಂದು ಬರೆಯಬಹುದು. ಇಲ್ಲಿ w
>> ಎಂದರೆ ತೂಕ, m ಎನ್ನುವುದು ವಸ್ತುವಿನ ದ್ರವ್ಯರಾಶಿ ಹಾಗೂ g ಎಂದರೆ ಗುರುತ್ವ-ವೇಗೋತ್ಕರ್ಷ
>> (acceleration due to gravity). g ಯ ಬೆಲೆ, ಭೂಮಿಯ ಮೇಲೆ ಸರಾಸರಿ 9.8 m/s2.
>> ಆದ್ದರಿಂದ  ತೂಕದ ಅಂತಾರಾಷ್ಟ್ರೀಯ ಏಕಮಾನ kg m/s2 ಎಂದಾಗುತ್ತದೆ. ಇದನ್ನೇ ನ್ಯೂಟನ್ (N)
>> ಎಂದೂ ಕರೆಯುತ್ತಾರೆ. ಹೀಗಾಗಿ ಒಂದು ವಸ್ತುವಿನ ತೂಕ 1kg ಎಂದು ನಾವು ತಪ್ಪಾಗಿ
>> ಸೂಚಿಸಿದರೆ,  ಅದರ ನಿಜವಾದ ತೂಕ (ವೈಜ್ಞಾನಿಕವಾಗಿ) 1 × 9.8 = 9.8 N ಆಗಿರುತ್ತದೆ. ತೂಕ,
>> ಗುರುತ್ವಾಕರ್ಷಣ ಬಲದ ಮೇಲೆ ನಿರ್ಧಾರಿತವಾಗುತ್ತದೆ ಎಂದೆನಷ್ಟೇ? ಹೀಗಾಗಿ ತೂಕ, ಗ್ರಹದ
>> ಗುರುತ್ವಾಕರ್ಷಣ ಶಕ್ತಿಯ ಮೇಲಿನಿಂದಲೂ ನಿರ್ಧರಿಸಲ್ಪಟ್ಟಿರುತ್ತದೆ.  ಚಂದ್ರನ
>> ಗುರುತ್ವಾಕರ್ಷಣ ಶಕ್ತಿ, ಭೂಮಿಯದಕ್ಕಿಂತ ಸುಮಾರು ಆರು ಪಟ್ಟು ಕಡಿಮೆ. ಹಾಗೆಯೇ ಗುರುಗ್ರಹದ
>> ಗುರತ್ವಾಕರ್ಷಣ ಬಲ ಭೂಮಿಯದಕ್ಕಿಂತ ಸುಮಾರು ಎರಡು ವರೆ ಪಟ್ಟು ಹೆಚ್ಚು. ಇದನ್ನು ಸುಲಭವಾಗಿ
>> ಹೀಗೆ ಅರ್ಥೈಸಬಹುದು. ಒಬ್ಬ  ಗಗನಯಾತ್ರಿಗೆ ಭೂಮಿಯ ಮೇಲೆ ತನ್ನ ತೂಕ ಸುಮಾರು 60 kg ಎಂದು
>> ಭಾಸವಾಗುತ್ತಿದ್ದರೆ, ಚಂದ್ರನ ಮೇಲೆ ಆತನಿಗೆ  ತನ್ನ ತೂಕ 10 kg ಎನಿಸುತ್ತದೆ. ಅದೇ
>> ಗಗನಯಾತ್ರಿಗೆ ಗುರುಗ್ರಹದ ಮೇಲೆ ತನ್ನ ತೂಕ ಸುಮಾರು 150 kg ಯಷ್ಟು ಎಂದು
>> ಭಾಸವಾಗುತ್ತಿರುತ್ತಿದೆ! ಗುರುತ್ವಾಕರ್ಷಣೆ ಬಹಳ ಕಡಿಮೆ ಇರುವ ಅಂತರಿಕ್ಷದಲ್ಲಿ, ಗಗನ
>> ಯಾತ್ರಿಗಳು ಏಕೆ ತೇಲುತ್ತಿರುತ್ತಾರೆ ಎಂಬುದು ನಿಮಗೀಗ ಗೊತ್ತಾಗಿರಬಹುದು. ಹೌದು,
>> ಅಂತರಿಕ್ಷದಲ್ಲಿ ಅವರು ತೂಕರಹಿತರಾಗುವುದರಿಂದ ತೇಲುತ್ತಿರುತ್ತಾರೆ.
>>
>> ತೂಕ ಗ್ರಹದಿಂದ ಗ್ರಹಕ್ಕೆ ಬದಲಾಗುವುದರಲ್ಲಿ ಅನುಮಾನವಿಲ್ಲ. ಆದರೆ ಒಂದೇ ಗ್ರಹದ ಮೇಲೆ
>> (ಉದಾಹರಣೆಗೆ ಭೂಮಿಯ ಮೇಲೆ) ಒಂದು ವಸ್ತುವಿನ ತೂಕ ಎಲ್ಲೆಡೆಯಲ್ಲೂ ನಿರ್ದಿಷ್ಟವಾಗಿ ಒಂದೇ
>> ತೆರನಾಗಿರುತ್ತದೆಯೇ? ನಿಮಗೆ ಆಶ್ಚರ್ಯವಾಗಬಹುದು, ಆದರೆ ಅದು ಒಂದೇ ತೆರನಾಗಿರುವುದಿಲ್ಲ.
>> 9.8 m/s2 ಎಂಬುದು ಭೂಮಿಯ ಸರಾಸರಿ ಗುರುತ್ವವೇಗೋತ್ಕರ್ಷವೇ ಹೊರತು, ಅದೇ ಪರಮಸತ್ಯವಲ್ಲ.
>> ಭೂಮಿಯ ಧ್ರುವದ ಹತ್ತಿರ ಗುರುತ್ವ ಭೂಮಿಯ ಬೇರೆಡೆಗಿಂತ ಸ್ವಲ್ಪ ಹೆಚ್ಚು. ಗುರುತ್ವಾಕರ್ಷಣೆ
>> ಹೆಚ್ಚಾದಂತೆಲ್ಲ ತೂಕವು ಹೆಚ್ಚಾಗಲೇಬೇಕಲ್ಲ! ಆದರೆ ಈ ತೂಕದಲ್ಲಿನ ಬದಲಾವಣೆ ಎರಡು ಗ್ರಹಗಳ
>> ನಡುವಿನ ತೂಕದಲ್ಲಿನ ಬದಲಾವಣೆಗೆ ಹೋಲಿಸಿದರೆ, ನಿರ್ಲಕ್ಷಿಸಬಹುದಾದಷ್ಟು ಕಡಿಮೆ ಇರುತ್ತದೆ.
>>
>> ಈಗ ಬೇಕಾದರೆ, ಲೇಖನವನ್ನು ಮಗದೊಮ್ಮೆ ಪರಾಮರ್ಶಿಸಿ, ಲೇಖನದ ಪ್ರಾರಂಭದಲ್ಲಿ ಕೇಳಿದ
>> ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು!
>>
>> ಲೇಖನವನ್ನು ಮತ್ತೆರಡು ಪ್ರಶ್ನೆಗಳ ಮೂಲಕವೇ ಮುಗಿಸೋಣ.
>>
>> ತೂಗುತಕ್ಕಡಿಯಲ್ಲೂ ಪರಡಿಗಳ ಮೇಲೆ ಗುರುತ್ವದ ಪ್ರಯೋಗವಾಗುತ್ತದೆ. ಆದ್ದರಿಂದ ಅಲ್ಲಿ
>> ಅಳೆಯಲ್ಪಡಬೇಕಾದ್ದು ತೂಕ. ಆದಾಗಿಯೂ ಅಲ್ಲಿ ನಿಖರವಾಗಿ ದ್ರವ್ಯರಾಶಿಯನ್ನೇ ಅಳೆಯಬಹುದು.
>> ಹೇಗೆ?
>>
>> ಸ್ಪ್ರಿಂಗ್ ತಕ್ಕಡಿಯಾಗಲೀ ಇಂದಿನ ಡಿಜಿಟಲ್ ತಕ್ಕಡಿಯಾಗಲೀ ವಾಸ್ತವದಲ್ಲಿ ಅಳೆಯುವುದು
>> ತೂಕವನ್ನು. ಆದಾಗಿಯೂ ಅಲ್ಲಿ ನಮಗೆ kg ಏಕಮಾನದಲ್ಲಿ ದ್ರವ್ಯರಾಶಿಯೇ ನೇರವಾಗಿ
>> ದೊರೆಯುತ್ತದೆ, ಹೇಗೆ?
>>
>> Hareeshkumar K
>> GHS Huskuru
>> Malavalli TQ
>> Mandya Dt
>> 9880328224
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to