Fine On Apr 12, 2018 7:18 PM, "Shubhamangala A.G" <ag.shubhamang...@gmail.com> wrote:
> Pls check any one concerned that I am not getting mail from last one month > On 18-Dec-2017 11:22 am, "Hareeshkumar K" <harihusk...@gmail.com> wrote: > >> ತೂಕ - ಕೌತುಕ! >> *ವಿನಾಯಕ ಕಾಮತ್* >> >> >> <https://1.bp.blogspot.com/-jd1myQ808Ao/WjbLf0EjrXI/AAAAAAAAnwE/y0AzBNY_y0syd06lHigbnB0Du7J-ITuoACLcBGAs/s1600/scale.jpg> >> >> ಒಂದು ಸರಳ ಪ್ರಶ್ನೆ. >> >> ಎರಡು ವಸ್ತುಗಳಿವೆ. ಒಂದು ಭೂಮಿಯ ಮೇಲಿದ್ದರೆ, ಇನ್ನೊಂದು ಚಂದ್ರನ ಮೇಲಿದೆ. ಆದರೆ ಎರಡೂ >> ವಸ್ತುಗಳ ತೂಕ (weight) ಒಂದೇ! ಹಾಗಿದ್ದರೆ, ಯಾವುದಕ್ಕೆ ಹೆಚ್ಚಿನ ದ್ರವ್ಯರಾಶಿ (mass) >> ಇರುತ್ತದೆ? ಮೇಲಿನ ಪ್ರಶ್ನೆಗೆ ನಿಮ್ಮ ಉತ್ತರ, 'ತೂಕ ಒಂದೇ ಎಂದ ಮೇಲೆ ದ್ರವ್ಯರಾಶಿಯೂ ಒಂದೇ >> ಇರಬೇಕಲ್ಲವೇ?' ಅಥವಾ 'ತೂಕ ಮತ್ತು ದ್ರವ್ಯರಾಶಿಯ ನಡುವೆ ವ್ಯತ್ಯಾಸ ವಿದೆಯೇ?' >> ಎಂಬುದಾಗಿದ್ದರೆ, ನೀವು ಈ ಲೇಖನವನ್ನು ಖಂಡಿತ ಓದಬೇಕು! >> >> ವೈಜ್ಞಾನಿಕವಾಗಿ ತೂಕ ಮತ್ತು ದ್ರವ್ಯರಾಶಿ ಬೇರೆಯದೇ ಆಗಿರುವ ಎರಡು ಭೌತಿಕ ಪರಿಮಾಣಗಳು. >> ಆದರೆ ದೈನಂದಿನ ಜೀವನದಲ್ಲಿ ನಾವು ಇವೆರಡನ್ನೂ ಒಂದೇ ಎನ್ನುವ ಭಾವದಲ್ಲಿ ಬಳಸಿಬಿಡುತ್ತೇವೆ. >> ವಿಜ್ಞಾನ ವಿಷಯದ ಬೋಧನೆಯಲ್ಲಿಯೂ ಈ ತಪ್ಪು ಅತ್ಯಂತ ಸಹಜವಾಗಿಬಿಟ್ಟಿದೆ. ಕಿಲೋಗ್ರಾಂ ('kg') >> ಎಂಬ ಏಕಮಾನದ ಮೂಲಕ ನಾವು ದ್ರವ್ಯರಾಶಿಯನ್ನು ಸೂಚಿಸುತ್ತಿದ್ದರೂ, ಅದನ್ನು weight ಎಂದು >> ತಪ್ಪಾಗಿ ಕರೆದುಬಿಡುತ್ತೇವೆ. ಅಥವಾ ವಸ್ತುವಿನ ತೂಕವನ್ನು ಮಾಪಕದ ಮೂಲಕ ಅಳೆದು, >> ದ್ರವ್ಯರಾಶಿಯನ್ನೇ ಅಳೆದಿರುವುದಾಗಿ ಭಾವಿಸಿಬಿಟ್ಟಿರುತ್ತೇವೆ. ಇದಕ್ಕೆಲ್ಲ ಕಾರಣ, ನಮಗೆ ಈ >> ಎರಡೂ ಪರಿಮಾಣಗಳ ಬಗ್ಗೆ ಇರಬೇಕಾದ ಸ್ಪಷ್ಟ ಕಲ್ಪನೆಯ ಕೊರತೆ. >> >> ದ್ರವ್ಯರಾಶಿ ಅಥವಾ mass ಎಂಬುದು, ನಮ್ಮಲ್ಲಿರುವ ವಸ್ತುವಿನ ಪ್ರಮಾಣವನ್ನು >> ಸೂಚಿಸುವಂಥದ್ದು. ನಮ್ಮಲ್ಲಿರುವ ವಸ್ತುವಿನ ಪ್ರಮಾಣ ಹೆಚ್ಚಿದಂತೆಲ್ಲ ಅದರ ದ್ರವ್ಯರಾಶಿ >> ಹೆಚ್ಚಾಗುತ್ತಿರುತ್ತದೆ. ಆದರೆ, ಒಂದು ಕೊಟ್ಟ ವಸ್ತುವಿನ ದ್ರವ್ಯರಾಶಿ, ವಿಶ್ವದಾದ್ಯಂತ >> ಒಂದೇ ಆಗಿರುತ್ತದೆ. ಉದಾಹರಣೆಗೆ, ಒಬ್ಬ ಮನುಷ್ಯನ ದ್ರವ್ಯರಾಶಿ ಭೂಮಿಯ ಮೇಲೆ 60 kg >> ಆಗಿದ್ದರೆ, ಅದು ಚಂದ್ರನ ಮೇಲೆಯೂ 60 kg ಯಾಗಿರಬೇಕು, ಗುರು ಗ್ರಹದ ಮೇಲೆಯೂ 60 kg >> ಯಾಗಿರಬೇಕು. ವಸ್ತು ಯಾವುದೇ ಪ್ರತಿಕ್ರಿಯೆಗೆ ಒಳಪಡದಿದ್ದರೆ, ಅದರ ದ್ರವ್ಯರಾಶಿ ವಿಶ್ವದ >> ಯಾವುದೇ ಮೂಲೆಗೆ ಹೋದರೂ ಬದಲಾಗುವುದಿಲ್ಲ. >> >> ಮೇಲೆ kg ಎಂದೆನಷ್ಟೇ? kg ಅಥವಾ 'ಕಿಲೋ ಗ್ರಾಂ' ಎಂಬುದು ದ್ರವ್ಯರಾಶಿಯ ಅಂತಾರಾಷ್ಟ್ರೀಯ >> ಏಕಮಾನ. (ಇದನ್ನು Kg, KG ಅಥವಾ kG ಎಂದೆಲ್ಲಾ ಬರೆಯಬಹುದಾದರೂ, ಇದರ ಸರಿಯಾದ ಹೃಸ್ವರೂಪ >> kg). kg ಎಂಬ ಏಕಮಾನಕ್ಕೆ ಒಂದು ನಿರ್ದಿಷ್ಟವಾದ, ನೈಸರ್ಗಿಕವಾದ ಆಧಾರವಿಲ್ಲ. ಬದಲಾಗಿ, kg >> ಯನ್ನು 'ಫ್ರಾನ್ಸ್ ದೇಶದ ಅಂತಾರಾಷ್ಟೀಯ ಬ್ಯುರೋದಲ್ಲಿರುವ kg ಯ ಮೂಲಾಧಾರದ (prototype) >> ದ್ರವ್ಯರಾಶಿಯಷ್ಟು' ಎಂದು ವ್ಯಾಖ್ಯಾನಿಸುತ್ತಾರೆ. International Prototype of kg >> (IPK) ಎಂದು ಕರೆಯಲ್ಪಡುವ ಪ್ಲಾಟಿನಂ(90%)-ಇರಿಡಿಯಂ(10%) ಮಿಶ್ರಲೋಹದ ಸಿಲಿಂಡರ್, ನಮ್ಮ >> ಸದ್ಯದ kg ಮೂಲಮಾನಕ್ಕೆ ಆಧಾರ. ಆದರೆ ಈ ನೈಸರ್ಗಿಕ ಆಧಾರವಿಲ್ಲದ ಏಕಮಾನವನ್ನು ಬದಲಾಯಿಸುವ >> ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ, kg ಯ ಜೊತೆ ಇನ್ನೂ >> ಕೆಲವು ಏಕಮಾನಗಳನ್ನು, ನೈಸರ್ಗಿಕ ಆಧಾರವುಳ್ಳ ಸ್ಥಿರಮೌಲ್ಯದ ಏಕಮಾನಗಳಿಗೆ ಬದಲಾಯಿಸುವ >> ಕುರಿತು ಅಂತಿಮ ನಿರ್ಣಯ ಹೊರಬೀಳಲಿದೆ. >> >> ನೇರವಾಗಿ ದ್ರವ್ಯರಾಶಿಯನ್ನೇ ಅಳೆಯಬೇಕಾದರೆ ನಾವು ಬಳಸಬೇಕಾದ್ದು, ನಮ್ಮ ಸಾಂಪ್ರದಾಯಿಕವಾದ >> ಎರಡು ಪರಡಿಗಳ ತೂಗು-ತಕ್ಕಡಿಗಳನ್ನೇ ಹೊರತು, ಸ್ಪ್ರಿಂಗ್ ತಕ್ಕಡಿಗಳನ್ನಾಗಲಿ ಅಥವಾ ಆಧುನಿಕ >> digital ತಕ್ಕಡಿಗಳನ್ನಾಗಲಿ ಖಂಡಿತ ಅಲ್ಲ. ಹಾಗಿದ್ದರೆ, ರದ್ದಿ-ಪತ್ರಿಕೆ ಅಂಗಡಿಗಳ >> ಸ್ಪ್ರಿಂಗ್ ತಕ್ಕಡಿಗಳು, ಕಿರಾಣಿ ಅಂಗಡಿಯ ಅಥವಾ ಬಂಗಾರದಂಗಡಿಯ ಆಧುನಿಕ digital >> ತಕ್ಕಡಿಗಳಿಂದ ನಾವು ಮೋಸ ಹೋಗುತ್ತಿದ್ದೇವೆಯೇ? ಇದನ್ನು ತಿಳಿದುಕೊಳ್ಳಲು ನಮಗೆ weight >> ಅಥವಾ ತೂಕದ ಪರಿಕಲ್ಪನೆ ಅತ್ಯವಶ್ಯ. >> >> ತೂಕ ಎಂದರೆ, ದ್ರವ್ಯರಾಶಿಯ ಮೇಲೆ ಗುರುತ್ವಾಕರ್ಷಣ ಶಕ್ತಿಯ ಕಾರಣದಿಂದ >> ವ್ಯಕ್ತವಾಗುತ್ತಿರುವ ಬಲ. ಗಣಿತೀಯವಾಗಿ ಇದನ್ನು w = m×g ಎಂದು ಬರೆಯಬಹುದು. ಇಲ್ಲಿ w >> ಎಂದರೆ ತೂಕ, m ಎನ್ನುವುದು ವಸ್ತುವಿನ ದ್ರವ್ಯರಾಶಿ ಹಾಗೂ g ಎಂದರೆ ಗುರುತ್ವ-ವೇಗೋತ್ಕರ್ಷ >> (acceleration due to gravity). g ಯ ಬೆಲೆ, ಭೂಮಿಯ ಮೇಲೆ ಸರಾಸರಿ 9.8 m/s2. >> ಆದ್ದರಿಂದ ತೂಕದ ಅಂತಾರಾಷ್ಟ್ರೀಯ ಏಕಮಾನ kg m/s2 ಎಂದಾಗುತ್ತದೆ. ಇದನ್ನೇ ನ್ಯೂಟನ್ (N) >> ಎಂದೂ ಕರೆಯುತ್ತಾರೆ. ಹೀಗಾಗಿ ಒಂದು ವಸ್ತುವಿನ ತೂಕ 1kg ಎಂದು ನಾವು ತಪ್ಪಾಗಿ >> ಸೂಚಿಸಿದರೆ, ಅದರ ನಿಜವಾದ ತೂಕ (ವೈಜ್ಞಾನಿಕವಾಗಿ) 1 × 9.8 = 9.8 N ಆಗಿರುತ್ತದೆ. ತೂಕ, >> ಗುರುತ್ವಾಕರ್ಷಣ ಬಲದ ಮೇಲೆ ನಿರ್ಧಾರಿತವಾಗುತ್ತದೆ ಎಂದೆನಷ್ಟೇ? ಹೀಗಾಗಿ ತೂಕ, ಗ್ರಹದ >> ಗುರುತ್ವಾಕರ್ಷಣ ಶಕ್ತಿಯ ಮೇಲಿನಿಂದಲೂ ನಿರ್ಧರಿಸಲ್ಪಟ್ಟಿರುತ್ತದೆ. ಚಂದ್ರನ >> ಗುರುತ್ವಾಕರ್ಷಣ ಶಕ್ತಿ, ಭೂಮಿಯದಕ್ಕಿಂತ ಸುಮಾರು ಆರು ಪಟ್ಟು ಕಡಿಮೆ. ಹಾಗೆಯೇ ಗುರುಗ್ರಹದ >> ಗುರತ್ವಾಕರ್ಷಣ ಬಲ ಭೂಮಿಯದಕ್ಕಿಂತ ಸುಮಾರು ಎರಡು ವರೆ ಪಟ್ಟು ಹೆಚ್ಚು. ಇದನ್ನು ಸುಲಭವಾಗಿ >> ಹೀಗೆ ಅರ್ಥೈಸಬಹುದು. ಒಬ್ಬ ಗಗನಯಾತ್ರಿಗೆ ಭೂಮಿಯ ಮೇಲೆ ತನ್ನ ತೂಕ ಸುಮಾರು 60 kg ಎಂದು >> ಭಾಸವಾಗುತ್ತಿದ್ದರೆ, ಚಂದ್ರನ ಮೇಲೆ ಆತನಿಗೆ ತನ್ನ ತೂಕ 10 kg ಎನಿಸುತ್ತದೆ. ಅದೇ >> ಗಗನಯಾತ್ರಿಗೆ ಗುರುಗ್ರಹದ ಮೇಲೆ ತನ್ನ ತೂಕ ಸುಮಾರು 150 kg ಯಷ್ಟು ಎಂದು >> ಭಾಸವಾಗುತ್ತಿರುತ್ತಿದೆ! ಗುರುತ್ವಾಕರ್ಷಣೆ ಬಹಳ ಕಡಿಮೆ ಇರುವ ಅಂತರಿಕ್ಷದಲ್ಲಿ, ಗಗನ >> ಯಾತ್ರಿಗಳು ಏಕೆ ತೇಲುತ್ತಿರುತ್ತಾರೆ ಎಂಬುದು ನಿಮಗೀಗ ಗೊತ್ತಾಗಿರಬಹುದು. ಹೌದು, >> ಅಂತರಿಕ್ಷದಲ್ಲಿ ಅವರು ತೂಕರಹಿತರಾಗುವುದರಿಂದ ತೇಲುತ್ತಿರುತ್ತಾರೆ. >> >> ತೂಕ ಗ್ರಹದಿಂದ ಗ್ರಹಕ್ಕೆ ಬದಲಾಗುವುದರಲ್ಲಿ ಅನುಮಾನವಿಲ್ಲ. ಆದರೆ ಒಂದೇ ಗ್ರಹದ ಮೇಲೆ >> (ಉದಾಹರಣೆಗೆ ಭೂಮಿಯ ಮೇಲೆ) ಒಂದು ವಸ್ತುವಿನ ತೂಕ ಎಲ್ಲೆಡೆಯಲ್ಲೂ ನಿರ್ದಿಷ್ಟವಾಗಿ ಒಂದೇ >> ತೆರನಾಗಿರುತ್ತದೆಯೇ? ನಿಮಗೆ ಆಶ್ಚರ್ಯವಾಗಬಹುದು, ಆದರೆ ಅದು ಒಂದೇ ತೆರನಾಗಿರುವುದಿಲ್ಲ. >> 9.8 m/s2 ಎಂಬುದು ಭೂಮಿಯ ಸರಾಸರಿ ಗುರುತ್ವವೇಗೋತ್ಕರ್ಷವೇ ಹೊರತು, ಅದೇ ಪರಮಸತ್ಯವಲ್ಲ. >> ಭೂಮಿಯ ಧ್ರುವದ ಹತ್ತಿರ ಗುರುತ್ವ ಭೂಮಿಯ ಬೇರೆಡೆಗಿಂತ ಸ್ವಲ್ಪ ಹೆಚ್ಚು. ಗುರುತ್ವಾಕರ್ಷಣೆ >> ಹೆಚ್ಚಾದಂತೆಲ್ಲ ತೂಕವು ಹೆಚ್ಚಾಗಲೇಬೇಕಲ್ಲ! ಆದರೆ ಈ ತೂಕದಲ್ಲಿನ ಬದಲಾವಣೆ ಎರಡು ಗ್ರಹಗಳ >> ನಡುವಿನ ತೂಕದಲ್ಲಿನ ಬದಲಾವಣೆಗೆ ಹೋಲಿಸಿದರೆ, ನಿರ್ಲಕ್ಷಿಸಬಹುದಾದಷ್ಟು ಕಡಿಮೆ ಇರುತ್ತದೆ. >> >> ಈಗ ಬೇಕಾದರೆ, ಲೇಖನವನ್ನು ಮಗದೊಮ್ಮೆ ಪರಾಮರ್ಶಿಸಿ, ಲೇಖನದ ಪ್ರಾರಂಭದಲ್ಲಿ ಕೇಳಿದ >> ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು! >> >> ಲೇಖನವನ್ನು ಮತ್ತೆರಡು ಪ್ರಶ್ನೆಗಳ ಮೂಲಕವೇ ಮುಗಿಸೋಣ. >> >> ತೂಗುತಕ್ಕಡಿಯಲ್ಲೂ ಪರಡಿಗಳ ಮೇಲೆ ಗುರುತ್ವದ ಪ್ರಯೋಗವಾಗುತ್ತದೆ. ಆದ್ದರಿಂದ ಅಲ್ಲಿ >> ಅಳೆಯಲ್ಪಡಬೇಕಾದ್ದು ತೂಕ. ಆದಾಗಿಯೂ ಅಲ್ಲಿ ನಿಖರವಾಗಿ ದ್ರವ್ಯರಾಶಿಯನ್ನೇ ಅಳೆಯಬಹುದು. >> ಹೇಗೆ? >> >> ಸ್ಪ್ರಿಂಗ್ ತಕ್ಕಡಿಯಾಗಲೀ ಇಂದಿನ ಡಿಜಿಟಲ್ ತಕ್ಕಡಿಯಾಗಲೀ ವಾಸ್ತವದಲ್ಲಿ ಅಳೆಯುವುದು >> ತೂಕವನ್ನು. ಆದಾಗಿಯೂ ಅಲ್ಲಿ ನಮಗೆ kg ಏಕಮಾನದಲ್ಲಿ ದ್ರವ್ಯರಾಶಿಯೇ ನೇರವಾಗಿ >> ದೊರೆಯುತ್ತದೆ, ಹೇಗೆ? >> >> Hareeshkumar K >> GHS Huskuru >> Malavalli TQ >> Mandya Dt >> 9880328224 >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. For more options, visit https://groups.google.com/d/optout.