Very nice sir. But maintenance is important. Hope the villagers of your place 
are very supportive l think. Very lucky to have them. Congratulations 

Saraswathi KH, GHS . Shreedhargadda. BALLARI

-----Original Message-----
From: "Hareeshkumar K" <harihusk...@gmail.com>
Sent: ‎03-‎11-‎2018 11:04
To: "mathssciencestf@googlegroups.com" <mathssciencestf@googlegroups.com>
Subject: [ms-stf '86091'] ಹುಸ್ಕೂರು: ಹೈಟೆಕ್‌ ಸರ್ಕಾರಿ ಪ್ರೌಢಶಾಲೆ

28ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು, ಇ–ಕಲಿಕಾ ಕೇಂದ್ರ, ಕಂಪ್ಯೂಟರ್‌ ಕಲಿಕೆ ವಿಶೇಷ
ಹುಸ್ಕೂರು: ಹೈಟೆಕ್‌ ಸರ್ಕಾರಿ ಪ್ರೌಢಶಾಲೆ

ಮಳವಳ್ಳಿ ತಾಲ್ಲೂಕು ಹುಸ್ಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ 
ವಿಜ್ಞಾನ ಮಾದರಿಗಳು

ಪ್ರೌಢಶಾಲೆಯಲ್ಲಿರುವ ಪ್ರಯೋಗಾಲಯ
ಎನ್.ಪುಟ್ಟಸ್ವಾಮಾರಾಧ್ಯ
ಮಳವಳ್ಳಿ: 28ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು. ಇ–ಕಲಿಕಾ ಕೇಂದ್ರ, ಉತ್ತಮ ಸಭಾಂಗಣ, ರಂಗಮಂಟಪ, 
ಕಂಪ್ಯೂಟರ್ ಕಲಿಕೆ, ಉತ್ತಮ ಶಿಕ್ಷಕರು, ಸಕಲ ಸೌಲಭ್ಯಗಳಿಂದ ಗಮನ ಸೆಳೆಯುತ್ತಿರುವ ತಾಲ್ಲೂಕಿನ 
ಹುಸ್ಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಈ ಭಾಗದ ಹೈಟೆಕ್‌ ಶಾಲೆ ಎಂದೇ ಪ್ರಸಿದ್ಧಿ ಪಡೆದಿದೆ.
ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಸಕಲ ಸೌಲಭ್ಯಗಳು ಈ ಸರ್ಕಾರಿ ಪ್ರೌಢಶಾಲೆಯಲ್ಲಿವೆ. 
2004ರಲ್ಲಿ ಆರಂಭವಾದ ಶಾಲೆ 2013ರವರೆಗೂ ಕಟ್ಟಡದ ಕೊರತೆ ಎದುರಿಸುತ್ತಿತ್ತು. ನಂತರ ಸುಸಜ್ಜಿತ 
ಕಟ್ಟಡ ನಿರ್ಮಾಣಗೊಂಡು ಅಲ್ಲಿಗೆ ಸ್ಥಳಾಂತರವಾಯಿತು.
ಅಲ್ಲಿಂದ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಯಿತು. ಕರ್ನಾಟಕ ವಿಜ್ಞಾನ ಮತ್ತು 
ತಂತ್ರಜ್ಞಾನ ಅಕಾಡೆಮಿ ವತಿಯಿಂದ 2015ರಲ್ಲಿ ಭೌತ ವಿಜ್ಞಾನಕ್ಕೆ ಸಂಬಂಧಿಸಿದ 28 ಮಾದರಿಗಳ 
ಪ್ರಯೋಗಾಲಯ ರೂಪಿಸಲಾಯಿತು. ಶಾಲೆಯಲ್ಲಿ ಮಾದರಿಗಳ ಮೂಲಕವೇ ಬೋಧನೆ ಮಾಡಲಾಗುತ್ತದೆ.
ತೂಕ ಮತ್ತು ಜಡತ್ವ, ದೂರ ದೃಷ್ಟಿ , ತರಂಗಗಳ ಚಲನೆ, ಜೋಡಿ ಜೋಕಾಲಿ, ಬಣ್ಣಗಳ ಲಕ್ಷಣ, ಒತ್ತಡಗಳ 
ಘರ್ಷಣೆ ಕುರಿತ ಮಾದರಿಗಳು ಈ ಶಾಲೆಯಲ್ಲಿವೆ. ಶಾಲೆಯಲ್ಲಿ ದೂರದರ್ಶಕವೂ ಇದ್ದು ಈಚೆಗೆ ಉಂಟಾದ 
ಸೂರ್ಯ ಹಾಗೂ ಚಂದ್ರಗ್ರಹಣವನ್ನು ವಿದ್ಯಾರ್ಥಿಗಳು ನೋಡಿ ಖುಷಿಪಟ್ಟಿದ್ದಾರೆ.
ಇದು ಮಾದರಿ ಶಾಲೆಯಾಗಿದ್ದು ವಿಜ್ಞಾನ ಕಲಿಕೆಯತ್ತ ಮಕ್ಕಳನ್ನು ಆಕರ್ಷಿಸುವ ಈ ಭಾಗದ ಏಕೈಕ 
ಪ್ರೌಢಶಾಲೆಯಾಗಿದೆ.
ಇ–ಕಲಿಕಾ ಕೇಂದ್ರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಮಂಡಳಿ, ವಿಜ್ಞಾನ ಹಾಗೂ 
ತಂತ್ರಜ್ಞಾನ ಸೊಸೈಟಿ ಸಹಕಾರದಲ್ಲಿ ಸರ್‌.ಸಿ.ವಿ.ರಾಮನ್ ಇ–ಕಲಿಕಾ ಕೇಂದ್ರವನ್ನು ಈ ಶಾಲೆಯ 
ಆವರಣದಲ್ಲಿ ಸ್ಥಾಪನೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು 
ನೀಡಲಾಗುತ್ತದೆ. ಪ್ರೊಜೆಕ್ಟರ್‌ನಿಂದ ಬೃಹತ್ ಪರದೆ ಮೇಲೆ ಪಠ್ಯ ಬೋಧನೆ ಮಾಡಲಾಗುತ್ತದೆ.
ಶಾಲೆ ಆವರಣದಲ್ಲಿ ರಂಗಮಂಟಪ ಇದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ 
ಮಾಡಲಾಗುತ್ತದೆ.
ಜೊತೆಗೆ ಶಾಲೆಯಲ್ಲಿ ಟಿವಿ ಇದ್ದು ಶಿಕ್ಷಣಕ್ಕೆ ಸಂಬಂಧಿಸಿ ಕಾರ್ಯಕ್ರಮಗಳನ್ನು ಮಕ್ಕಳು ವೀಕ್ಷಣೆ 
ಮಾಡುತ್ತಾರೆ.
ಟಿವಿ ನೋಡಲು 150 ವಿದ್ಯಾರ್ಥಿಗಳು ಕೂರುವ ಪ್ರತ್ಯೇಕ ಕೊಠಡಿ ಇದೆ.
2017–18ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ. 
ಶಾಲೆಯಲ್ಲಿ ಈಗ 108 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈ ಪ್ರೌಢಶಾಲೆ ಯಾವುದೇ ಹೈಟೆಕ್ ಖಾಸಗಿ ಶಾಲೆಗೇನೂ ಕಡಿಮೆ ಇಲ್ಲ. ಸರ್ಕಾರಿ ಶಾಲೆಗಳನ್ನೂ 
ಮಾದರಿಯಾಗಿ ರೂಪಿಸಬಹುದು ಎಂಬುದಕ್ಕೆ ಈ ಶಾಲೆ ಉತ್ತಮ ಉದಾಹರಣೆಯಾಗಿದೆ.
ನಮ್ಮ ಶಾಲೆಯಲ್ಲಿರುವ ವಿಜ್ಞಾನ ಪ್ರಯೋಗಾಲಯವನ್ನು ತಾಲ್ಲೂಕಿನ ಬೇರೆ ಶಾಲೆಯ ಶಿಕ್ಷಕರೂ 
ಬಳಸಿಕೊಳ್ಳಬಹುದು
-ಎಂ.ಎಸ್‌.ರವಿ, ಮುಖ್ಯಶಿಕ್ಷಕ
-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send email to mathssciencestf@googlegroups.com.
For more options, visit https://groups.google.com/d/optout.

To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to