ಸರ್ ಈ ಲೇಖನ ತಮ್ಮ ಚಿಂತನೆಯೇ ಸರ್
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-02-17 23:31 GMT+05:30 Siddaramappa s m Sri <[email protected]>: > > ಬೌದ್ಧಿಕ ಜವಾಬ್ದಾರಿ > > > - > > ಅಮೆರಿಕಾದ ಭಾಷಾವಿಜ್ಞಾನಿ,ರಾಜಕೀಯ ಚಿಂತಕ,ಮನೋವಿಜ್ಞಾನಿ ನೋಮ್ ಚಾಮ್ಸ್ಕಿ ಅವರು ಬರಹಗಾರನ > ಬೌದ್ಧಿಕ ಜವಾಬ್ದಾರಿಯ ಬಗ್ಗೆ ಹೇಳಿರುವ ವಿಚಾರಗಳಲ್ಲಿ ಪ್ರಮುಖವಾದ ವಿಚಾರಗಳನ್ನು ಹೀಗೆ > ಪಟ್ಟಿಮಾಡಬಹುದು : 1. ಬರಹಗಾರರು/ಬುದ್ಧಿಜೀವಿಗಳು ತಮ್ಮ ಅಭಿವ್ಯಕ್ತಿಮಾದ್ಯಮಗಳೊಂದಿಗೆ > ಪ್ರಭುತ್ವ ವ್ಯವಸ್ಥೆಯ ಭಟ್ಟಂಗಿಗಳಾಗಿ ಅಥವಾ ಕೈಗೊಂಬೆಗಳಾಗಿ > ವತರ್ಿಸುತ್ತಿರುವ ಸಾಧ್ಯತೆಗಳು ಇಂದಿನ ಸಮಾಜಗಳಲ್ಲಿ ಹೆಚ್ಚಾಗುತ್ತಿವೆ. > 2. ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ ವಿಷಯಗಳ > ಬಗ್ಗೆ ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು. > 3. ಸತ್ಯಾಂಶ ತಿಳಿಸುವುದು ಎಂದರೆ ಕುಕೃತ್ಯಗಳನ್ನು ಕೇವಲ ಖಂಡಿಸುವುದು ಮಾತ್ರವಲ್ಲ ; > ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ > ಯಾವ ಮಹತ್ವವು ಇರುವುದಿಲ್ಲ. > 4. ಪೌರಾತ್ಯವಾದಿ ಎಡ್ವರ್ಡ್ ಸೈದ್ ಹೇಳುವಂತೆ 'ಅಧಿಕಾರಸ್ಥರ ಮುಖಕ್ಕೆ ಸತ್ಯವನ್ನು ಹೇಳಿ' > ಎಂಬ ಮಾತು ಅರ್ಥವಿಲ್ಲದ್ದು. ಅಧಿಕಾರಸ್ಥರಿಗೆ ಎಲ್ಲ ತಿಳಿದಿರುವುದೇ. ಆದ್ದರಿಂದ ಅವರಿಗೆ > ತಿಳಿಸುವುದರಿಂದ ಆತ್ಮತೃಪ್ತಿ ಹೊರತು ಮತ್ತೇನು ಸಿಗಲಾರದು. ಹಾಗಾಗಿ, ಜನರಿಗೆ ಸತ್ಯವನ್ನು > ಹೇಳಬೇಕು; ವಿಶೇಷವಾಗಿ ಜನರಜೊತೆ ಸತ್ಯವನ್ನು ಹೇಳಬೇಕು. > 5. ತಮ್ಮದೇ ಪ್ರಭುತ್ವದ ಕ್ರಿಮಿನಲ್ ಕೆಲಸಗಳನ್ನು ಮುಚ್ಚಿಟ್ಟರೆ ಅಥವಾ ಸಮಥರ್ಿಸಿಕೊಂಡರೆ > ಆಗ ಅವರೂ ಕ್ರಿಮಿನಲ್ಗಳಾಗುತ್ತಾರೆ. ಇಂಥವರು ಬೇರೊಂದು ವ್ಯವಸ್ಥೆಯ ಬಗ್ಗೆ ಟೀಕಿಸಿದರೆ > ಅದಕ್ಕೆ ಯಾವ ಮಹತ್ವವು ಇರುವುದಿಲ್ಲ. > ಚಾಮಸ್ಕಿ, ಇವಿಷ್ಟು ವಿಚಾರಗಳನ್ನು ಜಗತ್ತಿನಾದ್ಯಂತ ನಡೆದ ಪಾತಕಗಳಿಗೆ (ಮುಖ್ಯವಾಗಿ ಈಸ್ಟ್ > ತೈಮೂರ್, ಖ್ಹೆಮರ್ ರೂಜ್,ಕಂಬೋಡಿಯ, ವಿಯಟ್ನಾಮ್, ಲ್ಯಾಟಿನ್ ಅಮೆರಿಕದ ವಿದ್ಯಾಮಾನಗಳು) > ಪಶ್ಚಿಮದ ಬುದ್ಧಿಜೀವಿಗಳು ಮತ್ತು ಅವರನ್ನು ಅವಲಂಬಿಸಿದ ಮಾದ್ಯಮಗಳು ನೀಡಿದ > ಪ್ರತಿಕ್ರಿಯೆಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ. > ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ,ಬುದ್ಧಿಜೀವಿಗಳು ಹಾಗೂ ಮಾದ್ಯಮಗಳು ನಿಜವಾದ ನೈತಿಕ > ಮದ್ಯವತರ್ಿಗಳಾಗದೆ ರಾಕ್ಷಸರ ಹಾಗೆ ವತರ್ಿಸುತ್ತ್ತಿರುವುದನ್ನು ಪ್ರಸ್ತಾಪಿಸಿ ನಾವೆಲ್ಲ > ಕೆಟ್ಟ ಕಾಲದಲ್ಲಿ ಬದುಕುತ್ತಿರುವ ಬಗ್ಗೆ ಎಚ್ಚರಿಸುತ್ತಾರೆ. ಇನ್ನೂ ಆಘಾತಕಾರಿ ಸಂಗತಿ > ಎಂದರೆ ಇಂಥ ಪರಿಸ್ಥಿತಿ ಸವರ್ಾಧಿಕಾರಿ ಪ್ರಭುತ್ವಗಳ ಆಳ್ವಿಕೆಗೆ ಒಳಗಾಗಿರುವ ಸಮಾಜಗಳಲ್ಲಿ > ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಮುಕ್ತ ಸಮಾಜಗಳಲ್ಲಿಯೂ > ಕಂಡುಬರುತ್ತಿರುವುದು. ಅಧಿಕಾರಶಾಹಿಯೇ(ಅದು ಸವರ್ಾಧಿಕಾರಿ ಪ್ರಭುತ್ವವಾಗಲಿ, > ಪ್ರಜಾಪ್ರಭುತ್ವವಾಗಲಿ) ಜನಹಿತದ ಹೆಸರಲ್ಲಿ ಮಾನವ ಹಕ್ಕುಗಳನ್ನು ದಮನಸಿ ಸ್ವಾರ್ಥವನ್ನು > ಮೆರೆಯುವಂತಹ ಸ್ಥಿತಿಯಾಗಿದೆ. > ತನ್ನ ವ್ಯವಸ್ಥೆಯ ಕ್ರಿಮಿನಲ್ ಕೃತ್ಯಗಳ ಬಗೆಗೆ ಮೌನತಾಳುವುದು ಕೂಡ ಮತ್ತೊಂದು ಕ್ರಿಮಿನಲ್ > ಎಂದು ನಂಬಿರುವ ಚಾಮ್ಸ್ಕಿ ಅಮೆರಿಕಾವು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಎಂಥಂಥ ಕ್ರೂರ > ಪಾತಕಗಳನ್ನೆಸಗಿದೆ ಎಂಬುದರ ಬಗ್ಗೆ ನಿಷ್ಠುರವಾಗಿ ಚಚರ್ಿಸುತ್ತಾರೆ. ಇದು ಚಾಮ್ಸ್ಕಿ > ಅವರಲ್ಲಿರುವ ತಾತ್ವಿಕ ಬದ್ಧತೆಗೆ ನಿದರ್ಶನವಾಗಿದೆ. ಈತ, ಅಮೆರಿಕಾದ ಇಂಥ ಕ್ರೂರತೆಗಳ ಬಗ್ಗೆ > ಖಂಡಿಸಿದ ಮೊದಲ ಅಮೆರಿಕಾ ಬುದ್ಧಿಜೀವಿ ಎಂಬುದು ಇಲ್ಲಿ ಗಮನಾರ್ಹ ಸಂಗತಿ . ಅಮೆರಿಕ, > ಜಗತ್ತಿನ ದೊಡ್ಡಣ್ಣನಾಗಿ ನಡೆಸಿದ ಕೃತ್ಯಗಳಿಗೂ, ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳು > ನಡೆಸುವ ಪಾತಕಗಳಿ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿದೆಯಾದರೂ ಆಳದಲ್ಲಿನ ಕ್ರೂರತೆ > ಮಾತ್ರ ಒಂದೇ. ಈ ಹಿನ್ನಲೆಯೊಳಗೆ ಚಾಮ್ಸ್ಕಿ ಅವರ ವಿಚಾರಗಳೊಡನೆ ನಮ್ಮ ನೆಲದ > ವಿದ್ಯಾಮಾನಗಳನ್ನು ವಿಶ್ಲೇಷಿಸಿಕೊಳ್ಳಬೇಕಿದೆ. ಇಂಥ ಪ್ರಯತ್ನವಾಗಿ ಇಲ್ಲಿ ಒಂದೆರಡು > ವಿಚಾರಗಳನ್ನು ಗಮನಿಸಬಹುದಾಗಿದೆ. > 1. ಕನ್ನಡದ ಬರಹಗಾರರು ಹಾಗೂ ಮಾದ್ಯಮಗಳು ಸಮಾಜದ ಸತ್ಯಗಳನ್ನು ಯಾರಿಗೆ ಹೇಳುತ್ತಿದ್ದೇವೆ > ಎಂಬುದರ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವವದನ್ನು ಕಾಣಬಹುದಾಗಿದೆ. ಉದಾ : ನಮ್ಮ > ಬಹುತೇಕ ಬರಹಗಾರರು ತಮಗನಿಸಿದ್ದನ್ನು ಪ್ರಕಟಪಡಿಸುವುದರ ಬಗೆಗೆ ಇರುವಷ್ಟು ಆಸಕ್ತಿ ; > ಅದನ್ನು ಯಾರಿಗೆ? ಹೇಗೆ ? ತಲುಪಿತು ಅಥವಾ ತಲುಪಿತೆ, ತಲುಪಲಿಲ್ಲವೇ ಎಂಬುದರ ಬಗ್ಗೆ ಇಲ್ಲ. > ಹಾಗೆಯೇ ಸಮಸ್ಯೆಗಳನ್ನು ಅವುಗಳ ಹೊರವಲಯದಲ್ಲಿ ನಿಂತು ವಿಶ್ಲೇಷಿಸಿರುವುದೇ ಹೆಚ್ಚು. > ಚಾಮ್ಸ್ಕಿ ಹೇಳುವಂತೆ 'ಜನರ ಜೊತೆ ಸತ್ಯವನ್ನು ಹೇಳುವ' ಪ್ರಯತ್ನಗಳು ತುಂಬಾ ಅಪರೂಪವೆಂದೆ > ಹೇಳಬೇಕು. ಅಂದರೆ ಒಂದು ಸಮಸ್ಯೆ ನಮ್ಮದಲ್ಲ ಎನ್ನುವ ಭಾವನೆ ಇಂಥಲ್ಲಿ > ಪ್ರಧಾನವಾಗಿರುತ್ತದೆ.ಇದಕ್ಕೆ ಹತ್ತು ಹಲವು ಕಾರಣಗಳನ್ನು ಗುರುತಿಸಬಹುದಾಗಿದ್ದು ಅವುಗಳಲ್ಲಿ > ಬರೆಹವನ್ನು ಕೇವಲ ಒಂದು ಪ್ಯಾಶನ್ ಎಂಬಂತೆ ಭಾವಿಸಿರುವುದು ಹಾಗೂ ಶೈಕ್ಷಣಿಕ ಒತ್ತಡದ > ಭಾಗವಾಗಿ ಬರಹ ಮೂಡಿಬರುತ್ತಿರುವುದು. ಇವು ಮುಖ್ಯವಾಗಿ ಕಂಡುಬರುತ್ತವೆ. > 2. ನಮ್ಮ ಬರಹಗಳಲ್ಲಿ ಸಮಸ್ಯೆಗಳ / ಕ್ರೂರತೆಗಳ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ > ಸಮಸ್ಯೆಗಳ ಪರಿಹಾರದ ಬಗ್ಗೆ ಸೂಚನೆಗಳಿರುವುದಿಲ್ಲ . ಹೆಚ್ಚೆಂದರೆ ಖಂಡನೆ ಇರುತ್ತದೆ. > ಚಾಮ್ಸ್ಕಿ ಹೇಳುವಂತೆ 'ಸಮಸ್ಯೆಗೆ ಪರಿಹಾರದ ಸೂಚನೆಗಳಿರದ ಅಭಿವ್ಯಕ್ತಿಗಳಿಗೆ ಯಾವುದೇ > ಮಹತ್ವವಿರುವುದಿಲ್ಲ' ಎನ್ನುವ ಮಾತಿನಂತೆ ನಮ್ಮ ಬರಹಗಳು ತಮ್ಮ ಮಹತ್ವವನ್ನು > ಕಳೆದುಕೊಳ್ಳುತ್ತವೆ.ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕಾದ ಸಂಗತಿಯೆಂದರೆ ಆಧುನಿಕ ಕನ್ನಡ > ಸಾಹಿತರ್ಯದ ಚಚರ್ೆಗಳ ಸಂದರ್ಭದಲ್ಲಿ 'ಒಂದು ಸಾಹಿತ್ಯ ಕೃತಿ ಒಂದು ಸಮಸ್ಯೆಯನ್ನು > ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವ ಜವಾಬ್ದಾರಿ ಹೊಂದಿರುತ್ತದೆ. ಅಲ್ಲಿ ನಾವು ಪರಿಹಾರ > ಸೂತ್ರಗಳನ್ನು ನಿರೀಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಕೃತಿಯೊಂದು ಸಮಸ್ಯೆಗೆ ಪರಿಹಾರ > ಸೂಚಿಸಬಾರದೆಂಬ ಚಚರ್ೆಗಳನ್ನು ನಾವಿಲ್ಲಿ ಸ್ಮರಿಸಬೇಕು.ಈ ಚರ್ಚೆಗಳೊಂದಿಗೆ ಚಾಮ್ಸ್ಕಿ ಅವರ > ಮೇಲಿನ ಮಾತನ್ನು ಮುಖಾ-ಮುಖಿಗೊಳಿಸಬೇಕಿರುವುದು ನಮ್ಮ ಇಂದಿನ ತುರ್ತಾಗಿದೆ. > ಇವುಗಳನ್ನು ಗಮನಿಸದ ನಂತರ ಕನ್ನಡ ಸಂದರ್ಭದೊಳಗೆ ನಾವು ಗಮನಿಸಲೇಬಾಕಾದ ಪ್ರಮುಖ ಅಂಶವೆಂದರೆ > ನಮ್ಮ ಬಹುತೇಕ ಬರಹಗಳು ಸಮಸ್ಯೆಗಳನ್ನು ಚಚರ್ಿಸುವಾಗ ಪ್ರಭುತ್ವದ ಪಾತ್ರದ ಬಗ್ಗೆ ಹೆಚ್ಚಿನ > ಗಮನಕೊಡದೇ ಇರುವುದು ಎದ್ದು ಕಾಣುತ್ತದೆ.ವಿಶೇಷವೆಂದೆ ಪತ್ರಿಕೆಗಳಲ್ಲಿ ಆಯಾ ಸಂದರ್ಭದ > ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬರುವ ಲೇಖನಗಳನ್ನು ಹೊರತುಪಡಿಸಿದರೆ ಇನ್ನುಳಿದ > ಬುದ್ಧಿಜೀವಿಗಳ ಬಹುತೇಕ ಬರಹಗಳು ತಾವು ಚಿಂತಿಸಿದ ಸಂಗತಿಗಳು ಸಮಕಾಲೀನ ಮಹತ್ವವನ್ನು > ಕಳೆದುಕೊಂಡ ನಂತರ ಪ್ರಕಟಗೊಳ್ಳುತ್ತವೆ.ಇದಕ್ಕೆ ಚಾಮ್ಸ್ಕಿ ಹೇಳುವಂತೆ ಇದೊಂದು ಪ್ರಭುತ್ವದ > ಹುನ್ನಾರ ಎಂದು ಹೇಳಲು ಬರುವುದಿಲ್ಲವೇನೋ.ಹಾಗಾಗಿ ಬರಹಗಾರ ಬುದ್ಧಿಜೀವಿಗಳು ಇದರ ನೇರ > ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. > ಕೊನೆಯದಾಗಿ ಹೇಳಬೇಕೆಂದರೆ ನಮ್ಮಲ್ಲಿ ಎಚ್ಚರದಿಂದ ಇರುವ > ಕೆಲವು ಬುದ್ಧಿವಿಗಳು ನೇರವಾಗಿ ಪ್ರಭುತ್ವದ ಕ್ರೂರ ನಡೆಗಳ ಬಗ್ಗೆ ಖಂಡಿಸಿ ಬರೆಯುವವರು ಒಂದು > ಕಡೆ ಇದ್ದಾರೆ.ಇನ್ನೋಂದು ಕಡೆ ಪ್ರಭುತ್ವದ ಪಾತಕಗಳನ್ನು ಅಭಿವೃದ್ಧಿಯ ನಡೆಗಳೆಂದು ಪ್ರಶಂಸಿ > ಬರೆಯುವ ಮುಖವಾಡದ ಬುದ್ಧಿಜೀವಿಗಳುಇದ್ದಾರೆ.ಈ ಎರಡೂ ಗುಂಪಿನ ಬರಹಗಾರರಿಗೆ-ಸರಕಾರಗಳು > ಮೊದಲನೇ ಗುಂಪಿನ್ನು ಮನಸ್ಸಿನ ಅಂತರಾಳದಲ್ಲಿ ಶತೃಗಳೆಂದು ಭಾವಿಸಿ ಅವರನ್ನು ಕಾನೂನಿನ > ಬೆಂಬಲದಿಂದ ಶಿಕ್ಷೆಗಳ ಮುಖಾಂತರ ಮಟ್ಟಹಾಕುತ್ತಿವೆ.ಎರಡನೇ ಗುಂಪಿನ ಮುಖವಾಡದ > ಬುದ್ಧಿಜೀವಿಗಳಿಗೆ ಹಾರ-ತುರಾಯಿ ಪದವಿ-ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿವೆ. ಇಂಥ > ಸಂದರ್ಭದೊಳಗೆ ನಿಜವಾದ ಬುದ್ಧಿಜೀವಿಗಳಿಗೆ ತಮ್ಮ ಅಭಿವ್ಯಕ್ತಿ ಸಾಮಥ್ಯಕ್ಕೆ ಸ್ವಯಂ > ನಿರ್ಬಂಧಗಳನ್ನು ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂಥ ಈ ಕಾಲದೊಳಗೆ ಚಾಮ್ಸ್ಕಿ > ನಿರೀಕ್ಷಿಸುವ ಬೌದ್ಧಿಕ ಜವಾಬ್ದಾರಿಗಳನ್ನು ಪ್ರಕಟಪಡಿಸಲು ಇರುವ ಸವಾಲುಗಳ ಬಗ್ಗೆ > ನಾವೆಲ್ಲರೂ ಮತ್ತೊಮ್ಮೆ ತಣ್ಣಗೆ ಚಿಂತಿಸುವ ಅಗತ್ಯವಿದೆ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAJCvfyU_DOObJ5zHM_by1zuewnsj01FXti3zALKkMq_gG%3Dqg7w%40mail.gmail.com > <https://groups.google.com/d/msgid/socialsciencestf/CAJCvfyU_DOObJ5zHM_by1zuewnsj01FXti3zALKkMq_gG%3Dqg7w%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUUPFKBsKhhfXg68eRJDzFRB1WQqmxcjz0O0X75kWXP5oA%40mail.gmail.com. For more options, visit https://groups.google.com/d/optout.
