ರಾಮಚಂದ್ರ ಸರ್ JNU ನ ಭಾಷಣದಲ್ಲಿ ದೇಶದ್ರೋಹದ ಮಾತುಗಳು ಎಲ್ಲಿವೆ ತಿಳಿಸಿ
ನನ್ನ ಪ್ರಕಾರ ಸಂವಿಧಾನದ ಹಕ್ಕುಗಳನ್ನು ಪ್ರಶ್ನಿಸಲಾಗಿದೆ
ಅಭಿಪ್ರಾಯ ತಿಳಿಸಲು ಪ್ರಶ್ನಿಸಲು ಎಲ್ಲರಿಗೂ ಅಧಿಕಾರವಿದೆ

ಈ ದೇಶದ ರಾಜಕಾರಣಿಗಳು ಮಾಡುವ ಭಾಷಣದಲ್ಲಿ ಸಾವಿರಾರು ದೇಶದ್ರಹದ ಮಾತುಗಳು ಇದ್ದರೂ ಅವರ
ಮೇಲೆ ಒಂದೂ ದಾವೆ ದಾಖಲಾಗಲಿಲ್ಲ.  ವಿಮರ್ಶಾತ್ಮಕವಾಗಿ ಆಲೋಚಿಸುವ ವಿದ್ಯಾರ್ಥಿಗಳನ್ನು
ಜೈಲಿಗೆ  ?

ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಬದ್ಧ ಹಕ್ಕು

ಅದನ್ನು ಹತ್ತಿಕ್ಕಲು ಪ್ರಯತ್ನಿಸುವವರು ನಿಜವಾದ ದೇಶದ್ರೋಹಿಗಳು

ಯಾರು ಪ್ರಶ್ನಿಸದೆ ಅವರಡಿ ತಲೆತಗ್ಗಿಸಿ ಹೇಳಿದನ್ನೆಲ್ಲ ಹೇಳಿದರೆ ದೇಶಾಭಿಮಾನಿ

ಪ್ರೌಢಶಾಲೆಯಲ್ಲಿಯ ವಿದ್ಯಾರ್ಥಿಗಳೇ ವಿಮರ್ಶಾತ್ಮಕವಾಗಿ ಆಲೋಚಿಸುತ್ತಾರೆ ಅಂದಮೇಲೆ ಮುಂದಿನ
ಪೀಳಿಗೆ
On 19-Feb-2016 5:56 pm, "Ramachandra Karur Seenappa" <[email protected]>
wrote:

> ಬಸವರಾಜ್ ಸರ್ ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವಾ. ದೇಶದ್ರೋಹಿಗಳು ಕುರಿತು ವಕಾಲತ್ತು
> ವಹಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. JNU ಘಟನೆ ಪೂರ್ಣವಾಗಿ ನೋಡಿ. ನಿಮ್ಮ hakeಗೆ ಅದರ
> ವೀಡಿಯೋ ಲೋಕಕ್ಕೆ ಕಳುಹಿಸಿದ್ದೇನೆ. ABVP ಬಗ್ಗೆ ವಿರೋದಿಸಲು ದೇಶವಿರೋದಿಗಳಿಗೆ ಹೆಗಲು
> ಕೊಡುತ್ತೀರಾ
> On Feb 19, 2016 2:05 PM, "Basavaraja Naika H.D." <
> [email protected]> wrote:
>
>> ರಾಷ್ಟ್ರದ್ರೋಹದ ಆಪಾದನೆಯ ಮೇಲೆ   ಜೈಲಿನಲ್ಲಿರುವ JNU ವಿದ್ಯಾರ್ಥಿ ನಾಯಕ ಕನ್ಹಯ್ಯ
>> ಕುಮಾರ್ ಫೆ.11 ರಂದು ಬಂಧನಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ್ದ
>> “ದೇಶದ್ರೋಹಿ” ಭಾಷಣದ ಪೂರ್ಣಪಾಠ ಇಲ್ಲಿದೆ. ಇಂದು The Indian EXPRESS ಪತ್ರಿಕೆಯಲ್ಲಿ
>> ಇದು ಇಂಗ್ಲಿಷ್ ನಲ್ಲಿ ಪ್ರಕಟವಾಗಿದೆ.
>>
>> ಕನ್ನಡಕ್ಕೆ:  'ಸತ್ಯ'.
>>
>> ಗೆಳೆಯರೆ,
>>
>> ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿದ ಜನ ಅವರು; ಬ್ರಿಟಿಷರೆದುರು
>> ಕ್ಷಮೆಯಾಚಿಸಿದ ಸಾವರ್ಕರನ ಚೇಲಾಗಳು ಅವರು. ಈಗ, ಹರ್ಯಾಣದಲ್ಲಿ ಕಟ್ಟರ್ ಸರ್ಕಾರವನ್ನು
>> ನಡೆಸುತ್ತಿದ್ದು ಭಗತ್ ಸಿಂಗ್ ಹೆಸರಿನಲ್ಲಿದ್ದ ಒಂದು ವಿಮಾನ ನಿಲ್ದಾಣಕ್ಕೆ ಸಂಘಿಯೊಬ್ಬನ
>> ಹೆಸರಿಟ್ಟಿರುವವರು ಅವರು. ನಮಗೆ RSS ನಿಂದ ದೇಶಭಕ್ತಿಯ ಸರ್ಟಿಫಿಕೇಟ್ ಬೇಕಾಗಿಲ್ಲ. RSS
>> ಬಂದು ನಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಗುರುತಿಸಿ ಹೇಳಬೇಕಾಗಿಲ್ಲ. ನಾವು ಈ ದೇಶದ
>> ಪ್ರಜೆಗಳಾಗಿದ್ದು ನಮ್ಮ ದೇಶದ ನೆಲವನ್ನು ಪ್ರೀತಿಸುವವರು. ಈ ದೇಶದ ಶೇಡಕಾ 80 ರಷ್ಟು
>> ಬಡವರಿಗಾಗಿ ನಾವು ಹೋರಾಡುತ್ತೇವೆ. ನಮ್ಮ ದೃಷ್ಟಿಯಲ್ಲಿ ದೇಶಭಕ್ತಿ ಅಂದರೆ  ಇದೇ.
>> ಬಾಬಾಸಾಹೇಬರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ದೇಶದ ಸಂವಿಧಾನದಲ್ಲಿ ನಮಗೆ ಸಂಪೂರ್ಣ
>> ವಿಶ್ವಾಸವಿದೆ. ನಾವು ಗಟ್ಟಿದನಿಯಲ್ಲಿ ಹೇಳಬಯಸುವುದೇನೆಂದರೆ ಅವನು ಸಂಘಿಯಾಗಲೀ, ಮತ್ಯಾವನೇ
>> ಆಗಲೀ ಈ ದೇಶದ ಸಂವಿದಾನದ ವಿರುದ್ಧ  ಬೆರಳು ತೋರಿಸಿದ್ದೇ ಆದಲ್ಲಿ ಯಾವ ಕಾರಣಕ್ಕೂ ನಾವು
>> ಸಹಿಸಿಕೊಂಡು ಸುಮ್ಮನೇ ಕೂರುವುದಿಲ್ಲ. ನಮಗೆ ಸಂವಿಧಾನದಲ್ಲಿ ನಂಬಿಕೆಯಿದೆ. ಆದರೆ
>> ಜಾಂಡೇವಾಲನ್ ನಲ್ಲಿ (ದೆಹಲಿಯ ಆರೆಸ್ಸೆಸ್ ಕಚೇರಿ) ಹೇಳಿಕೊಡಲಾಗುವ ಸಂವಿಧಾನದ ಬಗ್ಗೆ ನಮಗೆ
>> ಎಳ್ಳಷ್ಟೂ ನಂಬಿಕೆಯಿಲ್ಲ. ಮನುಸ್ಮೃತಿಯಲ್ಲಿ ನಮಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಆಳಕ್ಕೆ
>> ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲ.  ನಾವು ನಂಬಿಕೆ ಇಟ್ಟಿರುವ
>> ಅದೇ ಸಂವಿಧಾನದಲ್ಲಿ ನಾವು ನಂಬಿರುವ ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು
>> ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ತಿಳಿಸಿದ್ದಾರೆ. ಅದೇ ಬಾಬಾಸಾಹೇಬ್ ಡಾ. ಭೀಮರಾವ್
>> ಅಂಬೇಡ್ಕರ್ ಅವರು ಮರಣದಂಡನೆಯನ್ನು ಈ ದೇಶದಲ್ಲಿ ರದ್ದು ಮಾಡಬೇಕೆಂದು ಹೇಳಿದ್ದಾರೆ. ಅದೇ
>> ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ
>> ಹೇಳಿದ್ದಾರೆ. ಈ ಸಂವಿಧಾನವನ್ನು ನಾವು ಎತ್ತಿಹಿಡಿದಿದ್ದೇವೆ. ನಾವು ನಮ್ಮ ಮೂಲ ಹಕ್ಕನ್ನು,
>> ನಮ್ಮ ಸಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಬಯಸುತ್ತೇವೆ.
>>
>> ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ಅತ್ಯಂತ ದುಃಖದ ಸಂಗತಿಯೆಂದರೆ ಇಂದು ಈ ABVP
>> ತನ್ನ ಪರವಾದ ಮೀಡಿಯಾಗಳನ್ನು ಕರೆತಂದು ಒಂದು ಸುಳ್ಳು ಪ್ರಚಾರ ನಡೆಸುತ್ತಿದೆ. ನೈಜ
>> ವಿಷಯಗಳನ್ನು ದಿಕ್ಕುತಪ್ಪಿಸುತ್ತಿದೆ. ನೆನ್ನೆಯಷ್ಟೇ ABVP ಸಹಕಾರ್ಯದರ್ಶಿ ನಾವು ಫೇಲೋಶಿಪ್
>> ಗೆ ಹೋರಾಟ ನಡೆಸ್ತೀವಿ ಎನ್ನುವ ಹೇಳಿಕೆ ನೀಡಿದ. ಇದೆಂತಹ ಹಾಸ್ಯಾಸ್ಪದ ಮಾತು ನೋಡಿ. ಅಲ್ಲಿ
>> ಅವರದೇ ಸರ್ಕಾರವಿದ್ದು, ಮೇಡಂ ಮನು-ಸ್ಮೃತಿ ಇರಾನಿ ಅಲ್ಲಿ ಕುಳಿತುಕೊಂಡು ಫೆಲೋಶಿಪ್ ಗಳನ್ನು
>> ಕಡಿತಗೊಳಿಸುತ್ತಿದ್ದಾರೆ. ಇಲ್ಲಿ ABVP “ನಾವು ಫೆಲೋಶಿಪ್ ಗಾಗಿ ಹೋರಾಡುತ್ತೇವೆ” ಅಂತ
>> ಬಜಾಯಿಸುತ್ತದೆ. ನಾಲ್ಕು ವರ್ಷಗಳಾದರೂ ನಮ್ಮ ಹಾಸ್ಟೆಲ್ ಕಟ್ಟಿ ಆಗಿಲ್ಲ. ಈ ಕ್ಷಣದವರೆಗೂ
>> ವೈ-ಫೈ ಸೌಲಭ್ಯ ನಮಗೆ ನೀಡಿಲ್ಲ. BHEL ನಮಗೆ ಒಂದು ಬಸ್ ಸೌಲಭ್ಯ ಕಲ್ಪಿಸಿದೆ. ಆದರೆ ಅದಕ್ಕೂ
>> ಇಂಧನ ತುಂಬಿಸೋಕೆ ನಮ್ಮ ಆಡಳಿತಾಂಗದ ಬಳಿ ದುಡ್ಡಿಲ್ಲ. ಈ ABVPಯ ಮಂದಿ ರೋಲರುಗಳ ಮುಂದೆ
>> ನಿಂತುಕೊಂಡು ದೇವಾನಂದನ ರೀತಿ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು “ನಾವು ಹಾಸ್ಟೆಲ್
>> ಕಟ್ಟಿಸ್ತೀವಿ, ವೈಫೈ ಕೊಡಿಸ್ತೀವಿ, ಫೇಲೋಶಿಪ್ ಹೆಚ್ಚಿಸ್ತೀವಿ” ಅಂತ ಬಡಾಯಿ
>> ಕೊಚ್ಚುತ್ತಾರೆ. ಅವರ ಸುಳ್ಳುಗಳು ಬಯಲಾಗಲಿವೆ. ಗೆಳೆಯರೇ, ಈ ದೇಶದಲ್ಲಿ ದೇಶದ ಮೂಲಭೂತ
>> ಪ್ರಶ್ನೆಗಳ ಕುರಿತು ಏನಾದರೂ ಒಂದು ಚರ್ಚೆ ನಡೆಸಿದ್ದೇ ಆದರೆ, JNU ವಿದ್ಯಾರ್ಥಿಗಳು ಅತ್ಯಂತ
>> ಮೂಲಭೂತ ಪ್ರಶ್ನೆಗಳನ್ನು ಎತ್ತುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಹೆಮ್ಮೆಯಿಂದ
>> ಹೇಳುತ್ತೇನೆ.
>>
>> ಆ (ಸುಬ್ರಹ್ಮಣಿಯನ್) ಸ್ವಾಮಿ ಎನ್ನುವ ಮನುಷ್ಯ, JNU ನಲ್ಲಿ ಜಿಹಾದಿಗಳಿದ್ದಾರೆ,
>> JNUನಲ್ಲಿ ಹಿಂಸೆ ಪ್ರಚೋದಿಸುವ ಜನ ಇದ್ದಾರೆ ಅಂತ ಬಡಕೊಳ್ಳುತ್ತಾನೆ. ಬನ್ನಿ ನಾವು ಹಿಂಸೆಯ
>> ಪರಿಕಪಲ್ಪನೆ ಬಗ್ಗೆ ಚರ್ಚೆ ಮಾಡಲಿಕ್ಕೆ ಬಯಸುತ್ತೇವೆ. ನಾವು ನಿಮಗೆ ಪ್ರಶ್ನೆ ಕೇಳಲಿಕ್ಕೆ
>> ಇಚ್ಛಿಸುತ್ತೇವೆ. ಈ ABVP ಘೋಷಣೆ ಹಾಕುತ್ತದೆಯಲ್ಲಾ -“ಖೂನ್ ಸೇ ತಿಲಕ್ ಕರೇಂಗೇ,
>> ಗೋಲಿಯೋಂಸೆ ಆರತಿ” (ರಕ್ತದಿಂದ ಸಿಂಧೂರ ಇಡ್ತೀವಿ, ಬುಲೆಟ್ಟುಗಳಿಂದ ಆರತಿ ಬೆಳಗ್ತೀವಿ”) –
>> ನಾವು ಕೇಳ್ತೀವಿ, ಈ ದೇಶದಲ್ಲಿ ಯಾರ ರಕ್ತ ಹರಿಸಲಿಕ್ಕೆ ನೀವು ಹೊರಟಿದ್ದೀರಿ? ಬ್ರಿಟಿಷರ
>> ಜೊತೆಯಾಗಿ ನಿಂತುಕೊಂಡು ಭಾರತೀಯರೆ ಮೇಲೆ ಬುಲೆಟ್ ಹಾರಿಸಿದ ಜನ ನೀವು, ದೇಶದ
>> ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದೇಶಪ್ರೇಮಿಗಳ ವಿರುದ್ಧ ಬುಲೆಟ್ ಹಾರಿಸಿದ ಜನ
>> ನೀವಲ್ಲವೇ? ಉತ್ತರ ಕೊಡಿ.
>>
>> ಈ ದೇಶದ ಬಡವರು ಹೊಟ್ಟೆಗೆ ಅನ್ನ ಕೇಳುತ್ತಿರುವಾಗ, ಹಸಿವಿನಿಂದ ಜನರು ಸಾಯುತ್ತಿರುವಾಗ,
>> ಜನರು ತಮ್ಮ ಹಕ್ಕುಗಳನ್ನು ಕೇಳುವಾಗ ನೀವು ಅವರ ಅವರ ವಿರುದ್ಧ ಬುಲೆಟ್ ಪ್ರಯೋಗಿಸುತ್ತೀರಿ.
>> ನೀವು ಮುಸ್ಲಿಮರ ವಿರುದ್ಧ ಬುಲೆಟ್ ಉಪಯೋಗಿಸಿದ್ದೀರಿ. ಹಾಗೆಯೇ ಮಹಿಳೆಯರು ಅವರ ಹಕ್ಕುಗಳ
>> ಬಗ್ಗೆ ಮಾತಾಡಿದಾಗ ಅವರ ಮೇಲೆ ನೀವು ಬುಲೆಟ್ ಹಾರಿಸಿದ್ದೀರಿ. ಕೈಯಲ್ಲಿನ ಐದೂ ಬೆರಳೂ
>> ಸಮವಾಗಿರುವುದಿಲ್ಲ ಅಂತ ಹೇಳುತ್ತಾ ಮಹಿಳೆಯರು ಸೀತೆಯ ಹಾಗೆ ಇರಬೇಕು, ಸೀತೆಯ ಹಾಗೆ
>> ಅಗ್ನಿಪರೀಕ್ಷೆಗೆ ಒಳಗಾಗಬೇಕು ಎಂದು ತಾಕೀತು ಮಾಡುತ್ತೀರಿ. ಆದರೆ ತಿಳಿದುಕೊಳ್ಳಿ, ಈ
>> ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ಈ ಪ್ರಜಾಪ್ರಭುತ್ವ ಪ್ರತಿಯೊಬ್ಬ ಮನುಷ್ಯನೂ ಸಮಾನ
>> ಎಂದಿದೆ. ಒಬ್ಬ ವಿದ್ಯಾರ್ಥಿಯಾಗಿರಲಿ, ಪೌರಕಾರ್ಮಿಕನಾಗಿರಲಿ, ಕಾರ್ಮಿಕ, ರೈತನೇ ಆಗಿರಲಿ,
>> ಯಾರೋ ಬಡ ಬೋರೇಗೌಡನಾಗಿರಲಿ, ಶ್ರೀಮಂತ ಕುಳ ಅಂಬಾನಿ, ಅದಾನಿಯೇ ಆಗಿರಲಿ, ಎಲ್ಲರಿಗೂ ಸಮಾನ
>> ಹಕ್ಕುಗಳಿವೆ. ಹೀಗಾಗಿ ನಾವು ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡಿದೊಡನೆ ಅವರು ನಾವು ಭಾರತದ
>> ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದೇವೆ ಎಂದು ಗೂಬೆ ಕೂರಿಸುತ್ತಾರೆ. ನಾವು ಈ ಶೋಷಣೆ,
>> ಜಾತೀವಾದ, ಮನುವಾದ ಮತ್ತು ಬ್ರಾಹ್ಮಣವಾದದ ಪರಂಪರೆಗಳನ್ನು ಕಸದ ಬುಟ್ಟಿಗೆಸೆಯಬಯಸಿದ್ದೇವೆ.
>>
>> ಈ ದೇಶದ ಜನ ಪ್ರಜಾಪ್ರಭುತ್ವದ ಬಗ್ಗೆ ಮಾತಾಡಲು ಶುರು ಮಾಡಿದ ಕೂಡಲೇ ಆ ಜನರಿಗೆ ಸಮಸ್ಯೆ
>> ಶುರುವಾಗುತ್ತದೆ. ಜನರು ಲಾಲ್ ಸಲಾಂ ಜೊತೆಗೆ ನೀಲಾ ಸಲಾಂ ಮಾಡಿದರೆ, ಮಾರ್ಕ್ಸ್ ಜೊತೆಗೆ
>> ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಮಾತಾಡಿದರೆ, ಹುತಾತ್ಮ ರಾಮ್ ಪ್ರಸಾದ್
>> ಬಿಸ್ಮಿಲ್ ಜೊತೆಯಲ್ಲೇ ನೇಣಿಗೇರಿದ ಅಶ್ಫಾಖ್ ಉಲ್ಲಾಖಾನ್ ಬಗ್ಗೆ ಮಾತಾಡಿಬಿಟ್ಟರೆ ಅವರಿಗೆ
>> ಉರಿ ಶುರುವಾಗುತ್ತದೆ. ಅವರು ಕುತಂತ್ರಿಗಳು. ಅವರು ಬ್ರಿಟಿಷರ ಚೇಲಾಗಳು. ಬನ್ನಿ, ನನ್ನ
>> ಮೇಲೆ ಮಾನನಷ್ಟ ಮೊಕ್ಕದ್ದಮೆ ಹೂಡಿ. ನಾನು ಹೇಳ್ತೇನೆ, RSSನ ಚರಿತ್ರೆ ಅಂದರೆ ಬ್ರಿಟಿಷರ
>> ಜೊತೆ ರಾಜಿ ಮಾಡಿಕೊಂಡು ಭಾರತೀಯರ ವಿರುದ್ಧವೇ ನಿಂತ ಚರಿತ್ರೆ ಎಂದು ಕೂಗಿ ಹೇಳುತ್ತೇನೆ. ಈ
>> ದೇಶಕ್ಕೆ ಅಂದು ದ್ರೋಹ ಬಗೆದವರು ಇಂದು ದೇಶಭಕ್ತಿಯ ಸರ್ಟಿಫಿಕೇಟ್ ಹಂಚುತ್ತಿದ್ದಾರೆ. ನನ್ನ
>> ಮೊಬೈಲ್ ಚೆಕ್ ಮಾಡಿನೋಡಿ. ಗೆಳೆಯರೇ, ಅವರು ನನ್ನ ತಾಯಿ ಮತ್ತು ನನ್ನ ಸಹೋದರಿಯ ಬಗ್ಗೆ
>> ಕೆಟ್ಟದಾಗಿ ಬೈದು ಕಳಿಸಿದ ಮೆಸೇಜುಗಳಿವೆ. ನನ್ನ ತಾಯಿ ಭಾರತಮಾತೆಯ ಭಾಗವಾಗಿಲ್ಲವವೇ?
>> ಹಾಗಾದರೆ ಇವರು ಹೇಳುವ ಭಾರತ ಮಾತೆ ಯಾರು? ನನ್ನವ್ವ ಒಬ್ಬಳು ಅಂಗನವಾಡಿ ಕಾರ್ಯಕರ್ತೆ.
>> ತಿಂಗಳಿಗೆ 3,000 ರೂಪಾಯಿಯಲ್ಲಿ ನನ್ನ ಕುಟುಂಬ ಬದುಕು ನಡೆಸುತ್ತಿದೆ. ಇವರು ನನ್ನ
>> ತಾಯಿಯನ್ನು ನಿಂದಿಸುತ್ತಾರೆ. ಈ ದೇಶದಲ್ಲಿ ಬಡವರ, ಕಾರ್ಮಿಕರ, ದಲಿತರ, ರೈತರ ತಾಯಿಯಂದಿರು
>> ಭಾರತಮಾತೆಯ ಭಾಗವಲ್ಲದಿದ್ದರೆ ಅದೆಂತಹ ನಾಚಿಕೆಗೇಡಿನ ವಿಷಯವಲ್ಲವೇ?. ಭಾರತದ ಹಲವು
>> ಮಾತೆಯರಿಗೆ, ತಂದೆಯರಿಗೆ, ಸಹೋದರಿಯರಿಗೆ, ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ,
>> ಆದಿವಾಸಿಗಳಿಗೆ ಜಯವಾಗಲಿ ಎಂದು ನಾನು ಹೆಳುತ್ತೇನೆ. ತಾಕತ್ತಿದ್ದರೆ ಅವರು ಹೇಳಿ ಬಿಡಲಿ
>> ಇಂಕ್ವಿಲಾಬ್ ಝಿಂದಾಬಾದ್ ಎಂದು. ಅವರಿಗೆ ದಮ್ಮಿದ್ದರೆ ಭಗತ್ ಸಿಂಗ್ ಚಿರಾಯುವಾಗಲಿ,
>> ಸುಖದೇವ್ ಚಿರಾಯುವಾಗಲಿ, ಆಶ್ಪಾಖುಲ್ಲಾಖಾನ್ ಚಿರಾಯುವಾಗಲಿ ಎಂದು ಹೇಳಿಬಿಡಲಿ. ಆಗ ಅವರಿಗೆ
>> ಈ ದೇಶದ ಮೇಲೆ ನಿಜಕ್ಕೂ ವಿಶ್ವಾಸವಿದೆ ಎಂದು ನಾನು ಒಪ್ಪುತ್ತೇನೆ.
>>
>> ಬಾಬಾಸಾಹೇಬರ 125ನೇ ಜನ್ಮದಿನಾಚರಣೆ ಆಚರಿಸುವ ನಾಟಕ ಮಾಡ್ತೀರಿ. ಬನ್ನಿ. ನಿಮಗೆ
>> ತಾಕತ್ತಿದ್ದರೆ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಎತ್ತಿದ್ದ ಪ್ರಶ್ನೆಗಳನ್ನು ಎತ್ತಿ
>> ನೋಡೋಣ. ಈ ದೇಶದಲ್ಲಿ ಜಾತಿವಾದ ಅತಿದೊಡ್ಡ ಸಮಸ್ಯೆ. ಬನ್ನಿ ಇಲ್ಲಿ. ಜಾತಿವಾದದ ಬಗ್ಗೆ
>> ಮಾತಾಡಿ. ಮೀಸಲಾತಿ ತರಲು ಬನ್ನಿ. ನಿಮಗೆ ತಾಕತ್ತಿದ್ದರೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ
>> ತನ್ನಿ ನೋಡೋಣ.
>>
>> ಈ ದೇಶ ಯಾವತ್ತೂ ನಿಮ್ಮದಾಗಿರಲಿಲ್ಲ, ಯಾವತ್ತೂ ಆಗಿರುವುದೂ ಇಲ್ಲ. ಒಂದು ರಾಷ್ಟ್ರ
>> ರೂಪಿಸಲ್ಪಟ್ಟಿರುವುದು ಅದರ ಜನರಿಂದ. ಒಂದು ರಾಷ್ಟ್ರದಲ್ಲಿ ಹಸಿದವರ, ಬಡವರ, ಕಾರ್ಮಿಕರ
>> ಮಾತುಗಳಿಗೆ ಬೆಲೆ ಇಲ್ಲ ಅಂತಾದರೆ ಅದು ರಾಷ್ಟ್ರವೇ ಅಲ್ಲ. ನೆನ್ನೆ ಇದೇ ಮಾತನ್ನು ನಾನು
>> ಒಂದು ಟಿವಿ ಸಂವಾದದಲ್ಲಿ ದೀಪಕ್ ಚೌರಾಸಿಯವರಿಗೆ ಹೇಳುತ್ತಿದ್ದೆ. ಈ ದೇಶದಲ್ಲಿ
>> ಹರಡುತ್ತಿರುವ ಫ್ಯಾಸಿಸಂ ಇದೇ ರೀತಿ ಬೆಳೆಯಲು ಬಿಟ್ಟರೆ ಮೀಡಿಯಾ ಕೂಡಾ
>> ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದೆ. RSS ಕಚೇರಿಗಳಲ್ಲಿ ತಯಾರಾಗುವ ಸ್ಕ್ರಿಪ್ಟ್
>> ಗಳನ್ನು ತಂದು ನಿಮ್ಮ ಬಳಿ ಓದಿಸುತ್ತಾರೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್
>> ಕಚೇರಿಗಳಲ್ಲಿ ಸ್ಕ್ರಿಪ್ಟುಗಳು ತಯಾರಾಗುತ್ತಿದ್ದವಂತಲ್ಲಾ ಹಾಗೆ.
>>
>> ನಿಮಗೆ ನಿಜಕ್ಕೂ ನಿಮ್ಮ ದೇಶಭಕ್ತಿಯನ್ನು ತೋರಿಸಲೇಬೇಕು ಅಂತಿದ್ದರೆ, ಇದನ್ನು
>> ನೆನಪಿಟ್ಟುಕೊಳ್ಳಿ. ಕೆಲವು ಮಾದ್ಯಮದವರು ಹೇಳುತ್ತಿದ್ದರು. JNU ತೆರಿಗೆದಾರರ ಹಣದಲ್ಲಿ
>> ನಡೆಯುತ್ತದೆ ಎಂದು. ಹೌದು. ಇದು ನಿಜವೇ. JNU ನಡೆಯುವುದು ತೆರಿಗೆದಾರರ ಹಣದಿಂದ,
>> ಸಬ್ಸಿಡಿಯಿಂದ. ಆದರೆ ಇಲ್ಲಿ ಪ್ರಶ್ನೆ ಬರುತ್ತದೆ. ವಿಶ್ವವಿದ್ಯಾಲಯ ಇರುವುದು ಯಾತಕ್ಕೆ?
>> ವಿಶ್ವವಿದ್ಯಾಲಯಗಳು ಇರುವುದು ಸಮಾಜದ ಸಾಮಾನ್ಯ ಪ್ರಜ್ಞೆಯನ್ನು ವಿಮರ್ಶಾತ್ಮಕವಾಗಿ
>> ವಿಶ್ಲೇಸಿಸುವ ಕೆಲಸ ಮಾಡಲು. ವಿಮರ್ಶಾತ್ಮಕ ಆಲೋಚನಾ ದೃಷ್ಟಿಯನ್ನು ಬೆಳೆಸುವ ಕೆಲಸವನ್ನು
>> ವಿಶ್ವವಿದ್ಯಾಲಯಗಳು ಮಾಡಬೇಕು. ಈ ಕರ್ತವ್ಯದಲ್ಲಿ ವಿಶ್ವವಿದ್ಯಾಲಯಗಳು ವಿಫಲವಾದರೆ ಆಗ
>> ರಾಷ್ಟ್ರವೇ ಇರುವುದಿಲ್ಲ ಮಾತ್ರವಲ್ಲ ಅಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಇರುವುದಿಲ್ಲ. ಆಗ
>> ದೇಶ ಅನ್ನುವುದು ಬಂಡವಾಳಶಾಹಿಗಗಳು ತಿನ್ನುವ ಮೇವಷ್ಟೇ ಆಗಿಬಿಡುತ್ತದೆ. ಶೋಷಣೆ ಮತ್ತು
>> ಲೂಟಿಗೆ ದೇಶ ಈಡಾಗುತ್ತದೆ. ಜನರ ಸಂಸ್ಕೃತಿ, ಮೌಲ್ಯಗಳು, ಹಕ್ಕುಗಳು ಇವೆಲ್ಲ ಇರದೇ ಹೋದರೆ
>> ದೇಶ ಇರುವುದೇ ಇಲ್ಲ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿದ ದೇಶದ ಪರವಾಗಿ
>> ನಾವಿದ್ದೇವೆ. ಸರ್ವರಿಗೂ ಸಮಪಾಲು- ಸಮಬಾಳು ಎಂಬ ಕನಸಿನ ಪರವಾಗಿ, ಸರ್ವರ ಬದುಕುವ ಹಕ್ಕಿನ
>> ಪರವಾಗಿ, ಎಲ್ಲರಿಗೂ ಗಂಜಿ, ನೀರು ಮತ್ತು ಸೂರು ಪಡೆಯುವ ಹಕ್ಕಿನ ಪರವಾಗಿ ನಾವು
>> ನಿಲ್ಲುತ್ತೇವೆ. ಈ ಕನಸುಗಳ ಪರವಾಗಿ ನಾವೆಲ್ಲ ನಿಲ್ಲಬೇಕೆಂದು ರೋಹಿತ್ ವೇಮುಲ ತನ್ನ ಅಮೂಲ್ಯ
>> ಜೀವವನ್ನೇ ಅರ್ಪಿಸಿದ್ದಾನೆ. ಆದರೆ ಈ ಸಂಘಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ.
>> ನಾಚಿಕೆಯಾಗಬೇಕು ನಿಮ್ಮ ಸರ್ಕಾರಕ್ಕೆ ಎಂದು. ಕೇಂದ್ರ ಸರ್ಕಾರಕ್ಕೆ ಸವಾಲೆಂದರೆ, ರೋಹಿತ್
>> ಪ್ರಕರಣೆದಲ್ಲಿ ನೀವು ಏನೇನು ಮಾಡಿದ್ದಿರೋ ಅದನ್ನು ಮಾಡಲು JNU ನಲ್ಲಿ ನಾವು ಬಿಡುವುದಿಲ್ಲ.
>> ರೋಹಿತ್ ನ ಬಲಿದಾನವನ್ನು ಸ್ಮರಿಸಿಕೊಂಡು ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ
>> ದೃಢವಾಗಿ ನಿಂತೇ ನಿಲ್ಲುತ್ತೇವೆ.
>>
>> ಪಾಕಿಸ್ತಾನ, ಬಾಂಗ್ಲಾದೇಶ ಬಿಟ್ಟಾಕಿ, ನಾವು ಹೇಳುತ್ತೇವೆ ಇಡೀ ಜಗತ್ತಿನ ಬಡವರೆಲ್ಲಾ
>> ಒಂದಾಗಬೇಕು, ಶ್ರಮಿಕರೆಲ್ಲಾ ಒಂದಾಗಬೇಕು.  ನಾವು ಪ್ರಪಂಚದ ಮಾನವತೆಗೆ, ಭಾರತದ ಮಾನವತೆಗೆ
>> ಶಿರಭಾಗುತ್ತೇವೆ. ಇಂದು ಮಾನವತೆಯ ವಿರುದ್ಧ ನಿಂತಿರುವ ಸಮೂಹ ಯಾವುದು ಎಂಬುದನ್ನು
>> ಕಂಡುಕೊಂಡಿದ್ದೇವೆ. ಇದು ಇಂದು ನಮ್ಮೆದುರಿನ ಗಂಭೀರ ವಿಷಯ. ಇದನ್ನು ನಾವು ಮರೆಯಕೂಡದು.
>> ಜಾತಿವಾದದ ಆ ಮುಖವನ್ನು, ಮನುವಾದದ ಆ ಮುಖವನ್ನು ಹಾಗೂ ಬ್ರಾಹ್ಮಣವಾದ-  ಬಂಡವಾಳವಾದದ
>> ನಡುವಿನ ಮೈತ್ರಿಯ ಆ ಮುಖವನ್ನು ನಾವು ಮರೆಯಕೂಡದು. ಈ ಮುಖಗಳನ್ನು ನಾವು ಬಯಲುಗೊಳಿಸಬೇಕು.
>> ನಾವು ಈ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ
>> ವ್ಯಕ್ತಿಯ ಸ್ವಾತಂತ್ರ್ಯಗಳನ್ನು ಸ್ಥಾಪಿಸಬೇಕಾಗಿದೆ. ಅಂತಹ ಸ್ವಾತಂತ್ರ್ಯ ಬರುತ್ತದೆ. ಅದು
>> ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವಗಳೊಂದಿಗೆ ಬರುತ್ತದೆ. ಈ ಕಾರಣದಿಂದಾಗಿಯೇ ನಾನು
>> ನನ್ನ ಮಿತ್ರರಲ್ಲಿ ವಿನಂತಿಸುವುದೇನೆಂದರೆ ಎಲ್ಲರೂ ನಿಮ್ಮ ನಿಮ್ಮ ನಡುವಿನ
>> ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಡಿ. ನಾವು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ನಮ್ಮ
>> ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾಗಿದೆ. ನಮ್ಮ ಈ ದೇಶವನ್ನು ಉಳಿಸಿಕೊಳ್ಳಬೇಕಿದೆ. ನಮ್ಮ
>> ದೇಶ ಒಂದಾಗಿರಲು ನಾವು ಮೊದಲು ಒಗ್ಗಟ್ಟಾಗಿರಬೇಕಾಗಿದೆ. ಆ ಮೂಲಕವೇ ಇಲ್ಲಿ ಭಯೋತ್ಪಾದಕರಿಗೆ,
>> ಭಯೋತ್ಪಾದನೆಗೆ ಆಶ್ರಯತಾಣ ಒದಗಿಸುವ ವಿಧ್ವಂಸಕಾರಿ ಶಕ್ತಿಗಳನ್ನು ವಿರೋಧಿಸಲು ನಾವು
>> ಐಕ್ಯತೆಯಿಂದ ಇರಬೇಕಾಗಿದೆ.
>>
>> ಕಸಬ್ ಯಾರು? ಅಫ್ಜಲ್ ಗುರು ಯಾರು? ತಮ್ಮನ್ನು ತಾವೇ ಉಡಾಯಿಸಿಕೊಳ್ಳುವ ಮಟ್ಟಕ್ಕೆ ತಲುಪುವ
>> ಇವರೆಲ್ಲಾ ಯಾರು? ಈ ಪ್ರಶ್ನೆಯನ್ನು ಒಂದು ವಿಶ್ವವಿದ್ಯಾಲಯದಲ್ಲಿ ಎತ್ತಲಾಗದಿದ್ದರೆ ನನ್ನ
>> ಪ್ರಕಾರ ಆ ವಿಶ್ವವಿದ್ಯಾಲಯವನ್ನು ಇಟ್ಟುಕೊಂಡಿರುವುದರಲ್ಲಿ ಅರ್ಥವಿಲ್ಲ.
>> ಹಿಂಸೆಯ ಅರ್ಥ ನಮಗೆ ಸರಿಯಾಗಿ ಆಗದಿದ್ದರೆ ನಾವು ಅದನ್ನು ನೋಡುವುದು ಹೇಗೆ? ಬಂದೂಕುಗಳಿಂದ
>> ಜನರನ್ನು ಕೊಲ್ಲುವುದು ಮಾತ್ರ ಹಿಂಸೆಯಲ್ಲ. JNU ಆಡಳಿತಾಂಗವು ಸಂವಿಧಾನದಲ್ಲಿ ದಲಿತರಿಗೆ
>> ನೀಡಿರುವ ಹಕ್ಕುಗಳನ್ನು ಗೌರವಿಸಲು ನಿರಾಕರಿಸಿದರೆ ಅದೂ ಹಿಂಸೆಯೇ ಆಗುತ್ತದೆ. ಇದನ್ನೇ
>> ಸಾಂಸ್ಥಿಕ ಹಿಂಸೆ ಎಂದು ಹೇಳುವುದು. ಈ ಮಂದಿ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಯಾವುದು
>> ನ್ಯಾಯ ಎಂದು ತೀರ್ಮಾನಿಸುವುದು ಯಾರು? ಬ್ರಾಹ್ಮಣ್ಯ ಪ್ರಾಬಲ್ಯ ಪಡೆದಿದ್ದಾಗ ದಲಿತರಿಗೆ
>> ದೇಗುಲ ಪ್ರವೇಶವಿರಲಿಲ್ಲ. ಆ ಕಾಲದಲ್ಲಿ ಅದೇ ನ್ಯಾಯವಾಗಿತ್ತು. ಬ್ರಿಟಿಷರ  ವಸಾಹತುಶಾಗಿ
>> ಆಳ್ವಿಕೆಯ ಕಾಲದಲ್ಲಿ  ನಾಯಿಗಳಿಗೂ, ಭಾರತೀಯರಿಗೂ ಹೊಟೆಲುಗಳ ಒಳಗೆ ಪ್ರವೇಶವಿರಲಿಲ್ಲ. ಆಗ
>> ಅದೇ ಅವರಿಗೆ ನ್ಯಾಯ. ಅವರ ಈ ನ್ಯಾಯಕ್ಕೆ ನಾವು ಸವಾಲೊಡ್ಡಿದೆವು. ಹಾಗೆಯೇ ಇಂದೂ ಸಹ RSS
>> ಮತ್ತು ABVPಗಳ ನ್ಯಾಯದ ವ್ಯಾಖ್ಯಾನಕ್ಕೆ ನಾವು ಸವಾಲು ಹಾಕುತ್ತಿದ್ದೇವೆ. ನೀವು ಹೇಳುವ
>> ನ್ಯಾಯ ನಾವು ಹೇಳುವ ನ್ಯಾಯದ ಅರ್ಥಕ್ಕೆ ಸರಿಹೊಂದದಿದ್ದರೆ ನಿಮ್ಮ ನ್ಯಾಯವನ್ನು ನಾವು
>> ಒಪ್ಪುವುದಿಲ್ಲ. ನಿಮ್ಮ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಒಪ್ಪುವುದಿಲ್ಲ. ಈ
>> ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಸಂವಿಧಾನದ ಹಕ್ಕುಗಳು ಸಿಕ್ಕಿದ ದಿನವೇ ನಾವು ಈ ದೇಶ
>> ಸ್ವತಂತ್ರಗೊಂಡಿದೆ ಎಂದು ಒಪ್ಪಿಕೊಳ್ಳುವುದು. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ
>> ಸಂವಿಧಾನದಡಿ ಸಮಾನ ಎಂದು ಗುರುತಿಸಲ್ಪಟ್ಟಾಗ ಮಾತ್ರ ಅಲ್ಲಿ ನ್ಯಾಯಸ್ಥಾಪನೆಯಾಗಿದೆ ಎಂದು
>> ಒಪ್ಪುತ್ತೇವೆ.
>>
>> JNUSU ಯಾವುದೇ ಹಿಂಸೆಯನ್ನಾಗಲೀ ಯಾವುದೇ ಭಯೋತ್ಪಾದಕನನ್ನಾಗಲೀ, ಯಾವುದೇ ಭಯೋತ್ಪಾದಕ
>> ದಾಳಿಯನ್ನಾಗಲೀ ಅಥವಾ ಯಾ
>>
>> ಆ ಸಿಕ್ ಮ್ಯಾನ್ ಅಭಿವ್ಯಕ್ತಿ ಸ್ವತಂತ್ರ್ಯ ಹೆಸರಲ್ಲಿ ದೇಶದ್ರೋಹವನ್ನು
>> ಖಂಡಿಸುತ್ತಿರುವುದು ಸರ್. ಸಂವಿಧಾನ ಇರುವುದು ರಾಷ್ಟ್ರದ ಸಮಗ್ರತೆ ರಕ್ಷಿಸಲು. ಅದರ
>> ಚೌಕಟ್ಟಿನಲ್ಲೇ ನಾವು ಮೂಲಭೂತ ಹಕ್ಕುಗಳನ್ನು ಅನುಭವಿಸಬೇಕು. ಹಕ್ಕುಗಳ ಹೆಸರಿನಲ್ಲಿ
>> ಸಮಗ್ರತೆಗೆ ದಕ್ಕೆ ತರುವುದು ದೇಶದ್ರೋಹಿ.
>> On Feb 18, 2016 11:45 AM, "Kanthesha Ajp" <[email protected]> wrote:
>>
>>> ಬಹುಷಃ ಭಾರತದಲ್ಲಿನ ನಾಗರೀಕರು ಹೊಂದಿರುವಷ್ಟು ಅಭಿವ್ಯಕ್ತಿ ಸ್ವಾತಂತ್ರ ವನ್ನು
>>> ಪ್ರಪಂಚದಲ್ಲಿ ಎಲ್ಲೂ ಕಾಣಲಾರಿರಿ,  ಕೆಲವು ಬಾರಿ ಈ ಅಭಿವ್ಯಕ್ತಿ ಸ್ವಾತಂತ್ರ ವನ್ನು
>>> ಕೆಲವರು ದುರುಪಯೋಗ ಪಡಿಸಿಕೊಂಡಿರುವುದು ಉಂಟು ಇದನ್ನೇ ಕೆಲವರು ರಾಜಕೀಯವಾಗಿ
>>> ಬಳಸಿಕೊಂಡಿದ್ದಾರೆ,ಬಹು ವೈವಿಧ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಅಭಿವ್ಯಕ್ತಿ
>>> ಸ್ವಾತಂತ್ರಕ್ಕಿಂತ,  ಹೊಂದಾಣಿಕೆ, ರಾಷ್ಟ್ರೀಯತೆ ,ದೇಶಪ್ರೇಮ ಮುಂತಾದ ಗುಣಗಳನ್ನು
>>> ಬೆಳೆಸಿಕೊಳ್ಳಬೇಕಾಗಿದೆ .
>>>
>>> ಕೆಲವರು ಕೇವಲ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಆದರೆ  ಬಹು ಮುಖ್ಯ ಕರ್ತವ್ಯವಾದ
>>> ದೇಶದ ಸಂಸ್ಕ್ರತಿ ರಕ್ಷಣೆ,ಗೌರವ ಕಾಪಾಡುವುದು ಮುಂತಾದುವುಗಳಿಗೆ ಬೆಲೆ ಕೊಡದವುದರ ಬಗ್ಗೆ
>>> ಮಾತನಾಡುವುದಿಲ್ಲ
>>>
>>> ಕೆಲವು ಬುದ್ಧಿಜೀವಿಗಳು! ಅಭಿವ್ಯಕ್ತಿ ಸ್ವಾತಂತ್ರದ ನೆಪದಲ್ಲಿ ಅನಗತ್ಯವಾಗಿ ಸಮಾಜದ
>>> ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು ,ಹಾಗೂ ಬಿಟ್ಟಿ ಪ್ರಚಾರಕ್ಕಾಗಿ ಕೆಲವರು
>>> ಪ್ರಯತ್ನಿಸುತ್ತಿದ್ದಾರೆ
>>> On Feb 17, 2016 10:55 AM, "Basavaraja Naika H.D." <
>>> [email protected]> wrote:
>>>
>>>> ಈ ದೇಶದಲ್ಲಿ  ಸಂವಿಧಾನದ ಆಶಯ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು
>>>> ಹತ್ತಿಕ್ಕಲಾಗುತ್ತಿದೆಯೇ? ಬನ್ನಿ ಚರ್ಚಿಸೋಣ. ವೇದಿಕೆಯಾಗಿ ಈ Stf. ನ್ನು ಬಳಸೋಣ
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CACwGsz5gMTyyCV8t0ykMK%3D2n9Oo2G01s_e2A28u-hhib%3Da0q7g%40mail.gmail.com
>>>> <https://groups.google.com/d/msgid/socialsciencestf/CACwGsz5gMTyyCV8t0ykMK%3D2n9Oo2G01s_e2A28u-hhib%3Da0q7g%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CAN2jr8HNDQF6ab6f_wdJ9f96V-O95Cc%3D-xtH4wrw2yD-NkZF9g%40mail.gmail.com
>>> <https://groups.google.com/d/msgid/socialsciencestf/CAN2jr8HNDQF6ab6f_wdJ9f96V-O95Cc%3D-xtH4wrw2yD-NkZF9g%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CA%2B6qStoZkrYupzCRXf-VR3kboBKk5pGDz8dj%2B4_GDCKGzn5Lng%40mail.gmail.com
>> <https://groups.google.com/d/msgid/socialsciencestf/CA%2B6qStoZkrYupzCRXf-VR3kboBKk5pGDz8dj%2B4_GDCKGzn5Lng%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CACwGsz5QfKHYU39NEQnCrT1wPX5bD6qOgwpC-K9%2Bx6YZ46E%3DgQ%40mail.gmail.com
>> <https://groups.google.com/d/msgid/socialsciencestf/CACwGsz5QfKHYU39NEQnCrT1wPX5bD6qOgwpC-K9%2Bx6YZ46E%3DgQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CA%2B6qStpPFxvVQUmiAqdKXTLvuK2AU80XpPqM7HgpLdObHv7z_A%40mail.gmail.com
> <https://groups.google.com/d/msgid/socialsciencestf/CA%2B6qStpPFxvVQUmiAqdKXTLvuK2AU80XpPqM7HgpLdObHv7z_A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz6D6wKZLsp%3D%3Dd5qH%3D9mvO56e0eKgVnAixY77VbQvhLrpA%40mail.gmail.com.
For more options, visit https://groups.google.com/d/optout.

Reply via email to