ತುಂಬಾ ಚೆನ್ನಾಗಿದೆ ಸರ್ ಲೇಖನ
On 21-Feb-2016 8:30 pm, "Harishchandra Prabhu" <[email protected]>
wrote:

> ಬಹಳ  ಚಿಂತನಾತ್ಮಕ  ಲೇಖನ  .
>
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: [email protected]
> blog:NammaBellare.blogspot.com
> school blog:* gpucbellare.blogspot.com <http://gpucbellare.blogspot.com>*
> mobile: 9449592475
>
> 2016-02-21 16:35 GMT+05:30 Siddaramappa s m Sri <[email protected]>:
>
>> ಜನಪದರ ದೈವ ಕಲ್ಪನೆ
>>          ಇಂದಿನ ಸಮಾಜದಲ್ಲಿ ದೇವರ ಸಂಬಂಧದ ವಿಷಯಗಳು ಅನೇಕ ಸಮಸ್ಯೆಗಳನ್ನು
>> ಸೃಷ್ಟಿಸುತ್ತಿವೆ. ಆದಿಮಾನವನ ದೇವರ ಸೃಷ್ಟಿಯ ಹಿಂದಿರುವ ಮಾನವಪರವಾದ ಆಲೋಚನೆಗಳಲ್ಲಿ
>> ಗಂಭೀರವಾದ ಪಲ್ಲಟಗಳಾಗಿರುವುದು. ಇದಕ್ಕೆ ಪ್ರಮುಖ ಕಾರಣವಾಗಿದೆ. ದೇವರು ಮನುಷ್ಯನನ್ನು
>> ಕಾಪಾಡುವ ಮುಖ್ಯ ಉದ್ದೇಶದಿಂದ ಹುಟಿದ್ದು. ಆದರೆ ಕಾಲಾನಂತರ ಮನುಷ್ಯರೇ ದೇವರನ್ನು
>> ರಕ್ಷಿಸಬೇಕಾದ ದುರಂತ ಒದಗಿದೆ. ಇಂಥ ಸಂದರ್ಭದಲ್ಲಿ ದೇವರ ಸೃಷ್ಟಿಯ ಆರಂಭಿಕ ಉದ್ದೇಶ ಹಾಗೂ
>> ಸ್ವರೂಪಗಳನ್ನು ತಿಳಿಯುವ ಅಗತ್ಯತೆ ಇಂದು ಅನಿವಾರ್ಯವಾಗಿದೆ. ಈ ಉದ್ದೇಶದಿಂದ ದೇವರ ಆರಂಭಿಕ
>> ಸ್ಥಿತಿಯನ್ನು ತಿಳಿಯುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಜನಪದ ಸಮಾಜಗಳು
>> ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು; ಇವರ ಧರ್‍ಮಕ್ಕೆ ಒಬ್ಬ
>> ಸಂಸ್ಥಾಪಕನಾಗಲಿ, ಒಂದು ಧರ್‍ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ
>> ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ
>> ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್‍ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್‍ಮಗ್ರಂಥಗಳಂತೆ
>> ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಜನಪದ ಲೋಕದಲ್ಲಿ
>> ಪ್ರಕೃತಿಯೇ ಪ್ರಧಾನ ದೈವ . ಹಾಗೇಯೇ ತಮ್ಮ ಸಮಾಜ - ಸಂಸ್ಕೃತಿ ಉದ್ಧಾರಕ್ಕೆ ದುಡಿದ ನಾಯಕರೇ
>> ನಿಜವಾದ ದೇವರುಗಳು. ಇನ್ನೂ ಕೂತೂಹಲದ ಸಂಗತಿಯೆಂದರೆ ತಮ್ಮ ಬದುಕಿಗೆ ಸಹಾಯವಾಗಿ ಬಂದ ಎಲ್ಲಾ
>> ವಸ್ತು ವಿಷಯಗಳೂ ದೇವರುಗಳೇ. ಈ ಕಾರಣಕ್ಕಾಗಿ ಜನಪದರ ದೈವ ಸಮೂಹ ಅಗಣಿತವಾದದು. ಇಷ್ಟೆಲ್ಲ
>> ದೊಡ್ಡ ಸಮೂಹವಿದ್ದರೂ ಯಾವ ದೇವರು ತನ್ನ ಭಕ್ತರಲ್ಲಿ ಪರಸ್ಪರ ಸಂಘರ್ಷಗಳನ್ನು ಉಂಟುಮಾಡಿಲ್ಲ.
>> ಭಕ್ತರಿಗೆ ಯಾವುದೇ ಆಮಿಷವೊಡ್ಡಿಲ್ಲ. ಅತ್ಯಂತ ಮಾನವೀಯ ವಾತವರಣದೊಂದಿಗೆ ಬದುಕುವ
>> ಸಂದರ್ಭಗಳನ್ನು ಸೃಷ್ಟಿಸಿವೆ.
>>
>>         ನಮ್ಮ ಸಮಕಾಲೀನ ಸಂದರ್ಭದಲ್ಲಿ ಪ್ರಚಲಿತವಿರುವ ದೈವ ಕಲ್ಪನೆಗಳನ್ನು ಕಂಡರೆ
>> ಯಾರಿಗಾದರೂ ಬೇಸರವೆನಿಸುತ್ತದೆ. ವೈದಿಕ ಪರಂಪರೆಯ ದೈವಗಳು ಪಾರಂಪರಿಕ ದೈವಗಳ ಮೇಲೆ
>> ನಿರಂತರವಾಗಿ ನಡೆಸುತ್ತಾ ಬಂದಿರುವ ದಾಳಿಗಳ ಕಾರಣದಿಂದ ಇಂದು ದೇವರ ಹೆಸರಲ್ಲಿ
>> ಹೊಟ್ಟೆಹೊರೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಇಂಥವರಿಂದ ಭಕ್ತರ ಶೋಷಣೆ ಹೆಚ್ಚು ಹೆಚ್ಚು
>> ನಡೆದಿದೆ. ಆಧುನಿಕ ಸಮಾಜದ ವಿಜ್ಞಾನದ ವಿಚಾರಗಳು ದೈವ ಕಲ್ಪನೆಯನ್ನು ಸಡಿಲಗೊಳಿಸಿದರ ಪರಿಣಾಮ
>> ಇದರ ಫಲ ಪಡೆದ ಜನ ದೈವಗಳನ್ನೆ ಶೋಷಿಸುವ ಮಟ್ಟಕ್ಕಿಳಿದ್ದಿದ್ದಾರೆ. ದೇವರ ಹಿನ್ನೆಲೆಯಲ್ಲಿ
>> ಹುಟ್ಟಿಕೊಂಡ ದೇವಾಲಯ ಹಾಗೂ ಮಠಗಳು ಕೂಡ ಹಣ-ಆಸ್ತಿ ಗಳಿಕೆಯಲ್ಲಿ ಪೈಪೋಟಿ ನಡೆಸುತ್ತಿರುವುದು
>> ನಮ್ಮ ಕಾಲದ ದುರಂತ. ಇಂಥ ಸಂದರ್ಭದೊಳಗೆ ನಿಜವಾದ ಭಕ್ತಿಯುಳ್ಳ ಯಾರನ್ನು ಹಿಂಸಿಸದ, ನಿಜವಾದ
>> ಮಾನವ ಪ್ರೇಮವನ್ನು ಕಾಪಿಡುವ ಜನಪದರ ದೈವ ವ್ಯವಸ್ಥೆ ಇಂದು ನಮ್ಮೆಲ್ಲರ ಅಗತ್ಯವಾಗಿದೆ.
>>                 ಪ್ರಸ್ತುತ ಸಮಾಜದ ಹಲವಾರು ಆತಂಕ ಹಾಗೂ ಸಮಸ್ಯೆಗಳಿಗೆ ಧರ್‍ಮಗಳು
>> ಬಹುಮುಖ್ಯ ಕಾರಣವಾಗಿವೆ.  ಬರಹ ಹಾಗೂ ಉನ್ನತ ವರ್ಗಗಳಿಗೆ ಸೇರಿದ ಪ್ರಧಾನ ಧಾರೆಯ ಧರ್‍ಮಗಳು
>> ಪಾರಂಪರಿಕವಾಗಿ ಬೆಳೆದು ಬಂದ ದುಡಿಮೆಯ ಆಧರಿತ ಸೇವಾ ವೃತ್ತಿಗಳನ್ನು ಮೂಲೆ ಗುಂಪಾಗಿಸಿವೆ.
>> ಅಷ್ಟೇ ಅಲ್ಲದೆ ಸಮಾಜದ ಶ್ರೇಣೀಕರಣ ವ್ಯವಸ್ಥೆಯನ್ನು ಸಮರ್ಥಿಸುವ ಮೂಲಕ ಸಮಾಜದ
>> ಸಮುದಾಯಗಳಲ್ಲಿ ಮತೀಯ ಮತ್ಸರಗಳನ್ನು ಹೆಚ್ಚಿಸಿವೆ. ಹೀಗಾಗಿಯೇ ಹಿಂದೆಂದೂ ಕಾಣದಂತಹ
>> ಕೋಮುಗಲಭೆಗಳು ಮತ್ತು ಹಿಂಸಾಚಾರಗಳು ತಲೆ ಎತ್ತಿ ನಿಂತಿವೆ. ಚಲನಶೀಲತೆಯಿಲ್ಲದ ಈ ಕರ್ಮಠ
>> ಧರ್‍ಮಗಳಲ್ಲಿ ಯಾವುದೇ ರೀತಿಯ ಪರಿವರ್ತನೆಯ ಮನಸ್ಸಿಲ್ಲ. ಇಂಥ ಸ್ಥಿರ ಮನೋಭಾವ ತನ್ನ
>> ಶಕ್ತಿ-ಸಾಮರ್ಥ್ಯ ಹಾಗೂ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನತ್ತ ಹೆಚ್ಚು
>> ಒಲವು ತೋರುತ್ತಿದೆ. ಆ ಮೂಲಕ ಸಮಾಜದ ಶಾಂತಿಗಾಗಿ ದುಡಿಯಬೇಕಿದ್ದ ಧರ್‍ಮಗಳು ಅಶಾಂತಿಯನ್ನು
>> ಸೃಷ್ಟಿಸುವ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಾನವ ಸಮಾಜ
>> ಶಾಂತಿಗಾಗಿ ಆತೊರೆಯುತ್ತಿದೆ. ಇವರಿಗೆ ಶಾಂತಿ ಸಿಗುವುದಾದರೂ ಎಲ್ಲಿಂದ? ಅದು ನಮ್ಮ
>> ಪಾರಂಪರಿಕವಾದ ಚಲನಶೀಲ ಜನಪದ ಸಂಸ್ಕೃತಿಯೊಳಗಿನ ಧರ್‍ಮಗಳಿಂದ ಮಾತ್ರ ಸಾಧ್ಯವೆಂಬುದರಲ್ಲಿ
>> ಯಾವುದೇ ಅನುಮಾನಗಳು ಉಳಿದಿಲ್ಲ.
>> ಜನಪದ ಧರ್ಮ ಮತ್ತು ದೇವರು
>>             ಜನಪದ ಸಮಾಜಗಳು ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು;
>> ದೇಹ ಪ್ರಧಾನ ಕಾಯಕ ಮೌಲ್ಯವನ್ನು; ಸಮಷ್ಟಿಯ ಹಿತಾಸಕ್ತಿಯನ್ನು; ಭೌತಿಕ ಸಂಪತ್ತಿನ
>> ನಿರಾಕರಣೆಯ ಭಾವನೆಯನ್ನು; ಮನುಷ್ಯನಿಗಿಂತ ಹೆಚ್ಚಾಗಿ ಪ್ರಕೃತಿ ಕೇಂದ್ರಿತ ಮನೋಭಾವನೆಯನ್ನು;
>> ದ್ವೇಷರಹಿತ ಅಪ್ಪಟ ಮಾನವೀಯ ಅಂತಃಕರಣವನ್ನು; ವ್ಯವಹಾರಿಕವಲ್ಲದ ನಿಜವಾದ ಮಾನವೀಯ ಸಂಬಂಧದ
>> ಬಂಧುತ್ವವನ್ನು. ಇವೆಲ್ಲ ಭಾವನೆಗಳ ಮೂಸೆಯಲ್ಲಿ ಮೂಡಿ ಅನೇಕ ತಿರುವುಗಳಲ್ಲಿ ಬೆಳೆದ ಜನಪದ
>> ಸಂಸ್ಕೃತಿಯಲ್ಲಿ ಕಂಡು ಬರುವ ದೇವರು-ಧರ್ಮದ ಸ್ವರೂಪವನ್ನು ತಿಳಿಯುವುದು ಅತ್ಯಂತ ಕೂತೂಹಲಕರ
>> ಸಂಗತಿಯಾಗಿದೆ. ಸಂಸ್ಕೃತಿಗೂ ಧರ್‍ಮಕ್ಕೂ ನಿಕಟ ಸಂಬಂಧವಿದೆ. ಸಂಸ್ಕೃತಿಯನ್ನು ರೂಪಿಸುವಲ್ಲಿ
>> ಧರ್‍ಮದ ಪಾತ್ರ ದೊಡ್ಡದು. ಜನಪದರ ಧರ್‍ಮಕ್ಕೆ ಒಬ್ಬ ಸಂಸ್ಥಾಪಕನಾಗಲಿ, ಒಂದು
>> ಧರ್‍ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ ವಾರಸುದಾರರೆ ಆಗಿರುತ್ತಾರೆ.
>> ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ ಆಚರಣೆ ಮತ್ತು ಕಲ್ಪನೆಗಳೇ
>> ಇವರ ಧರ್‍ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್‍ಮಗ್ರಂಥಗಳಂತೆ ಜಡವಾದವುಗಳಲ್ಲ. ಬದಲಿಗೆ
>> ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಈ ಹಿನ್ನೆಲೆಯೊಳಗೆ ಕನ್ನಡ ಜನಪದ ಲೋಕದಲ್ಲಿ
>> ಕಂಡು ಬರುವ ದೇವರ ಕಲ್ಪನೆಗಳನ್ನು ಈ ಮುಂದಿನಂತೆ ವಿವರಿಸಬಹುದು.
>>            ’ಜನಪದ ಧರ್ಮವು ಲಿಖಿತ ಪಠ್ಯ, ಆ ಮೂಲಕ ಏರ್ಪಟ್ಟ ತಾತ್ವಿಕ ಚಿಂತನೆಯ ಮೂಲಕ
>> ಆಕಾರ ಪಡೆದುದ್ದಲ್ಲ. ಅದು ಬಹುಮಟ್ಟಿಗೆ ಅನುಕರಣೆ ಮತ್ತು ಆಚರಣೆಗಳಿಂದ ಹರಿದು ಬಂದಿದ್ದು,
>> ಅತಿಮಾನುಷ ಕಲ್ಪನೆ, ಅಲೌಕಿಕ ಜೀವಿಗಳ ಆರಾಧನೆ ಹಾಗೂ ಅನೇಕ ಬಗೆಯ ಧಾರ್ಮಿಕ ನಂಬಿಕೆಗಳಿಂದ
>> ಕೂಡಿದೆ’. ಇದರಲ್ಲಿ ಕಂಡು ಬರುವ ಆಚಾರ - ವಿಚಾರಗಳು, ನಡಾವಳಿಗಳು, ನಂಬಿಕೆಗಳು ಕಲೆಗಳು
>> ಮತ್ತು ಹುಟ್ಟು-ಸಾವುಗಳ ಮಧ್ಯೆ ಅನುಸರಿಸಲೇ ಬೇಕಾದ ಸಂಪ್ರದಾಯಗಳು, ಜನರ ಜೀವನ ವಿಧಾನ ಮತ್ತು
>> ಅದರ ಮನೋ ದೃಷ್ಟಿಯನ್ನು ಪ್ರತಿನಿಧಿಸುತ್ತವೆ. ತಾವು ಪರಿಪಾಲಿಸುವ ಧರ್ಮಗಳ ಧೇಯೋದ್ದೇಶಗಳ
>> ಅರಿವಿಲ್ಲವಾದರೂ ತಮ್ಮ ಸುತ್ತ ನಮ್ಮನ್ನು ಕಾಪಾಡುವ ಒಂದು ಶಕ್ತಿಯಿದೆ ಎಂಬುದನ್ನು ಜನಪದರು
>> ನಂಬುತ್ತಾರೆ. ಹೀಗಾಗಿ ಅವರು ಸೂರ್ಯ,ಚಂದ್ರ,ನೀರು,ಬೆಟ್ಟ-ಗುಡ್ಡಗಳು, ದಟ್ಟವಾದ ಕಾಡು
>> ಎಲ್ಲವುಗಳಲ್ಲೂ ದೈವತ್ವವನ್ನು ಅರಸುತ್ತಾರೆ. ಇವುಗಳ ಒಡೆಯನೇ ಆ ಪ್ರದೇಶದಲ್ಲಿ
>> ವಾಸವಾಗಿದ್ದು, ಕಾಯಿಲೆ ಮತ್ತು ಅನಿಷ್ಟಗಳಿಗೆ ಆತನೇ ಕಾರಣನೆಂದು ನಂಬಿ ಅವುಗಳನ್ನು
>> ಪೂಜಿಸುತ್ತಾರೆ. ಇಂಥ ’ಸರ್ವಚೇತನವಾದ’ ವಾಸ್ತವವಾಗಿ ಜನಪದ ಧರ್ಮದ ಅಡಿಗಲ್ಲಾಗಿದೆ ಎಂದು
>> ಹೇಳಬಹುದು. ಗಮನಿಸಬೇಕಾದ ಸಂಗತಿ ಎಂದರೆ ಜನಪದ ಸಂಸ್ಕೃತಿಯ ಧಾರ್ಮಿಕ ಸ್ತೊತ್ರ, ಸ್ತುತಿ,
>> ಪ್ರಾರ್ಥನೆಗಳಿಲ್ಲ. ಬದಲಿಗೆ ಒತ್ತಾಯದ, ಒತ್ತಡದ, ಬಲತ್ಕಾರದ ಗೇಲಿಯ ನಿಲುವಿದೆ. ಜನಪದರ
>> ಬದುಕು ರಾಜಶಕ್ತಿಗಿಂತ ಹೆಚ್ಚಾಗಿ ಧರ್ಮ ಶಕ್ತಿಯನ್ನು ಆಧರಿಸಿದೆ. ತಮ್ಮ ಜಾಯಮಾನಕ್ಕೆ
>> ಒಗ್ಗುವ ರೀತಿಯಲ್ಲಿ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವೊಂದನ್ನು ರೂಪಿಸಿಕೊಂಡ ಜನಪದರ
>> ಕಲ್ಪನೆಯ ದೇವರು ಪ್ರತಿಷ್ಟಿತ ಶಕ್ತಿಗಿಂತಲೂ ತೀರಾ ಭಿನ್ನವಾದುದು.
>> ಪ್ರಕೃತಿ  : ಆರಾಧನೆ ಮತ್ತು ಅನುಸಂಧಾನ
>>              ’ಪ್ರಕೃತಿ ಪೂಜೆ ಜನಪದ ಧರ್‍ಮದ ಪ್ರಧಾನ ಲಕ್ಷಣ. ತಾವು ವಾಸಿಸುವ ಭೂಮಿ,
>> ಸಮೀಪದ ಕಡಲು, ಶಾಖ ಮತ್ತು ಬೆಳಕನ್ನು ನೀಡುವ ಸೂರ್‍ಯ-ಚಂದ್ರ, ವಿವಿಧ ಉಪಯೋಗಗಳಿಗೆ ಬರುವ
>> ಮರ-ಗಿಡ-ಬಳ್ಳಿಗಳು ಜನಪದರ ಆರಾಧ್ಯ ದೈವಗಳು. ಜನಪದರ ಪ್ರಕೃತಿಯ ಪೂಜೆಯ ಹಿಂದೆ ಕೃತಜ್ಞತೆಯ
>> ಭಾವನೆಯಿದೆ. ಪ್ರಕೃತಿಯನ್ನು ಅವಲಂಬಿಸಿ ಬದುಕಿದ ಮನುಷ್ಯನಿಗೆ ಅದರ ಒಡನಾಟದಲ್ಲಿ ಆದ ನೋವು
>> -ನಲಿವು ದೈವ ಸ್ವರೂಪವನ್ನು ಕಂಡಿವೆ. ಮುಖ್ಯವಾಗಿ ಪ್ರಕೃತಿಯಲ್ಲಿನ ಭಯ ಹುಟ್ಟಿಸುವ
>> ವಸ್ತು-ವಿಷಯಗಳನ್ನು; ವಿಸ್ಮಯ ಮೂಡಿಸಿದ ಘಟನೆಗಳನ್ನೂ ದೇವರೆಂದು ಆರಾಧಿಸಿದ ಪರಿಕ್ರಮ
>> ಇಲ್ಲಿದೆ. ಜನಪದ ದೈವ ಕಲ್ಪನೆಯ ಚರಿತ್ರೆಯಲ್ಲಿ ಮೊದಲ ಹೆಜ್ಜೆ ಎಂದರೆ ಪ್ರಕೃತಿಯ
>> ಭಯ-ವಿಸ್ಮಯಗಳನ್ನು ಅನುಸಂಧಾನಗೊಳಿಸಿದ ಕ್ರಮ. ಮುಖ್ಯವಾಗಿ ಪ್ರಕೃತಿಯ ಜೊತೆ ನಡೆಸಿದ -
>> ಬೆಳೆಸಿದ ಸಂಬಂಧಗಳ ಸ್ವರೂಪದಲ್ಲಿ ಜನಪದರ ದೈವ ಕಲ್ಪನೆ ಒಡಮೂಡಿದೆ. ಪ್ರಕೃತಿಯ ಭಾಗವಾದ
>> ಸೂರ್‍ಯ-ಚಂದ್ರ-ಭೂಮಿ-ಆಕಾಶ, ನೀರು-ಗಾಳಿ, ಮಳೆ-ಬೆಳೆ ಇವುಗಳನ್ನು ಜನಪದರು ದೇವರೆಂದು
>> ಪೂಜಿಸಿದ್ದಾರೆ. ಅದರಲ್ಲೂ ’ಭೂಮಿ’ ಮಣ್ಣಿಗೆ ಹತ್ತಿರವಾಗಿ ಬದುಕಿದ ಜನಪದ ಸಮುದಾಯಗಳಿಗೆ
>> ಶ್ರೇಷ್ಟ ದೈವ. ಹಾಗಾಗಿ ಜನಪದ ತ್ರಿಪದಿಯೊಂದು ಭೂಮಿ ತಾಯಿಗೆ ಎಂಥ ಸ್ಥಾನವಿದೆ ಎಂಬುದನ್ನು
>> ಹೀಗೆ ಸ್ಪಷ್ಟಪಡಿಸುತ್ತದೆ.
>>                  ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ|
>>   ಎಳ್ಳು ಜೀರಿಗೆ ಬೆಳೆವಂಥ| ಭೂಮಿ ತಾಯಿನ|
>>   ಎದ್ದೊಂದು ಗಳಿಗೆ ನೆನೆದೇನ||
>> ಈ ಸಾಲುಗಳು, ಇರುವ ಅನಂತ ದೈವಗಳ ನಡುವೆ ಭೂಮಿ ತಾಯಿ ದೊಡ್ಡವಳು; ಹಾಗಾಗಿಯೇ ಅವಳಿಗೆ ಮೊದಲ
>> ಸ್ಥಾನ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಹೀಗೆ ಭೂಮಿಯನ್ನು ತಾಯಿಯೆಂದು ತಿಳಿದ. ಸಮುದಾಯಗಳ
>> ಪ್ರಜ್ಞೆ ಅನುಭವಜನ್ಯವಾದುದು. ಹುಟ್ಟಿನಿಂದ ಸಾವಿನವರೆಗೂ ಮನುಷ್ಯ ಭೂಮಿಯಿಂದ ಪಡೆಯುವ
>> ಸಹಾಯವೆಷ್ಟು? ಆದರೆ ಇತ್ತೀಚಿನ ದಿನಮಾನದಲ್ಲಿ ಭೂಮಿಯ ಗರ್ಭವನ್ನು ಬಸಿದ ಆಧುನಿಕರ ಜ್ಞಾನ
>> ಯಾಕಾಗಿ ಈ ಪರಂಪರೆಯನ್ನು ನಿಲಕ್ಷಿಸಿತು ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಭೂಮಿಯಂತೆ
>> ಸೂರ್‍ಯ, ಚಂದ್ರ, ನೀರು, ಗಾಳಿ ಮಳೆ ಮೊದಲಾದವು ಮನುಷ್ಯನ ಬದುಕಿಗೆ ಅನಿವಾರ್‍ಯ ಎಂಬುದಾಗಿ
>> ನಂಬುವ ಅವು ನೀಡಿದ ಸಹಕಾರಕ್ಕೆ ಪ್ರತಿಯಾಗಿ ಗೌರವಿಸುವ ಮನೋಭಾವದಿಂದಾಗಿ ಇವೆಲ್ಲವೂ ದೈವ
>> ಸ್ವರೂಪಿಯಾಗಿವೆ. ಜನಪದರ ಬದುಕುಗಳಲ್ಲಿ ದೊರೆಯುವ ಪ್ರಕೃತಿ ಆರಾಧನೆಯ ಮತ್ತೊಂದು ರೂಪ
>> ಗಿಡ-ಮರ-ಬಳ್ಳಿಗಳ ಹಾಗೂ ಪ್ರಾಣಿ ಪಕ್ಷಿಗಳ ಆರಾಧನೆ. ಇದನ್ನು ಕುಲದೇವತಾರಾಧನೆ ಪದ್ಧತಿ ಎಂದು
>> ಕರೆಯಲಾಗಿದೆ. ಈ ಪದ್ಧತಿಯ ಅನ್ವಯ ’ಒಂದು ಸಮುದಾಯದ ಜನ ತಮ್ಮ ಕುಲದ ಮೂಲವನ್ನು ಒಂದು ಸಸ್ಯ
>> ಅಥವಾ ಪ್ರಾಣಿಗಳಲ್ಲಿ ಆರೋಪಿಸಿಕೊಂಡು ಅವುಗಳನ್ನೇ ತಮ್ಮ ಕುಲದೇವರು ಎಂದು ಆರಾಧಿಸಿಕೊಂಡು
>> ಬರುತ್ತಾರೆ. ತಮ್ಮ ಕುಲದೇವತೆಯ ಲಾಂಛನವಾದ ಮರ/ಸಸ್ಯವನ್ನು ಅವರು ಕಡಿಯುವುದಿಲ್ಲ ಮತ್ತು
>> ಸುಡುವುದಿಲ್ಲ. ಪ್ರಾಣಿಯನ್ನು ಬೇಟೆಯಾಡುವುದಿಲ್ಲ ಹಾಗೂ ಆಹಾರವಾಗಿ ಸೇವಿಸುವುದಿಲ್ಲ. ಈ
>> ಸಮುದಾಯಗಳು ಪೂಜಿಸುವ ಬನ್ನಿ, ಬೇವು, ಆಲ, ಎಕ್ಕೆ ಮೊದಲಾದವು ಕೇವಲ ಹಸಿರಲ್ಲ.
>> ಅವುಗಳಲ್ಲಿರುವ ಔಷಧೀಯ ಗುಣವೇ ಅವುಗಳನ್ನು ಪೂಜೆಗೊಳ್ಳುವಂತೆ ಮಾಡಿದೆ. ಇಂಥಲ್ಲಿ ಮನುಷ್ಯನ
>> ಆರೋಗ್ಯಕ್ಕೆ ಸಹಕರಿಸಿದಕ್ಕೆ ಪ್ರತಿಯಾಗಿ ಮೂಡಿದ ಕೃತಜ್ಞತಾ ಭಾವವೇ ಅವುಗಳ ಆರಾಧನೆಗೆ
>> ಪ್ರಮುಖ ಕಾರಣವಾಗಿದೆ. ಈ ರೀತಿಯಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಬದುಕಿಗೆ ಅನುಕೂಲವಾಗಿ
>> ಒದಗಿಬಂದ ವಸ್ತು-ವಿಷಯಗಳನ್ನು ಗೌರವ ಮತ್ತು ಕೃತಜ್ಞತೆ ಸೂಚಿಸುವ ಸಲುವಾಗಿ ಪೂಜಿಸಿದರೆ; ಇದೇ
>> ಮನುಷ್ಯ ಮತ್ತೊಂದು ಕಡೆ ಪ್ರಕೃತಿಯ ವಿನಾಶಿ ರೂಪಗಳನ್ನು ಪೂಜಿಸಿದ್ದಾನೆ. ಉದಾ:
>> ಪ್ರಕೃತಿಯಲ್ಲಿರುವ ಕ್ರೂರ ಪ್ರಾಣಿಗಳು, ವಿಷಜಂತುಗಳು; ಗುಡುಗು-ಸಿಡಿಲು ಮೊದಲಾದ
>> ಭಯವನ್ನುಂಟು ಮಾಡುವ ಪ್ರಕೃತಿಯ ವೈಚಿತ್ರಗಳು. ಗಮನಿಸಬೇಕಾದ ಸಂಗತಿ ಎಂದರೆ ಕೃತಜ್ಞತಾ
>> ಭಾವನೆಯ ಪೂಜಾಕ್ರಮಗಳಿಗಿಂತ ಭಯದ ಭಾವನೆಯಲ್ಲಿ ಪೂಜಿಸುವ ಪೂಜಾಮಾದರಿಗಳು
>> ಭಿನ್ನವಾಗಿರುತ್ತವೆ. ಕೃತಜ್ಞತೆಗೆ ಎಡೆ ಮಾತ್ರ ಪ್ರಧಾನವಾದರೆ ಭಯಕ್ಕೆ ಬಲಿ
>> ಮುಖ್ಯವಾಗುತ್ತದೆ.
>> ಹಿರಿಯರ ಆರಾಧನೆ : ಕುಟುಂಬ ಮತ್ತು ಕುಲ
>> ಜನಪದರ ದೈವ ಕಲ್ಪನೆಯಲ್ಲಿ ಹಿರಿಯರ ಆರಾಧನೆ ಮತ್ತೊಂದು ಪ್ರಮುಖ ಮಜಲು. ಕುಟುಂಬದ, ಜಾತಿಯ
>> ಹಾಗೂ ಸಮುದಾಯದ ಉದ್ದಾರಕ್ಕೆ ದುಡಿದ ಹಿರಿಯರೇ ಇಲ್ಲಿನ ದೇವರು. ಸಾಂಸ್ಕೃತಿಕ ವೀರರು ಎನ್ನುವ
>> ಹೆಸರಿನಲ್ಲಿ ಕರೆಯಲ್ಪಡುವ ಈ ವ್ಯಕ್ತಿಗಳು ಸಮೂಹದ ಪರವಾದ ಕೆಲಸ-ಕಾರ್‍ಯಗಳ ಮೂಲಕ ಗಮನ
>> ಸೆಳೆದು ಪೂಜನೀಯರಾಗಿರುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಸಾವಿರಾರು ಜನ ಸಾಂಸ್ಕೃತಿಕ ವೀರರು
>> ಬಾಳಿ ಬದುಕಿದ್ದನ್ನು ಕಾಣಬಹುದು. ಅದರಲ್ಲಿ ಮುಖ್ಯವಾಗಿ ಮಲೆಯಮಾದೇಶ್ವರ, ಮಂಟೇಸ್ವಾಮಿ,
>> ಜುಂಜಪ್ಪ, ಮೈಲಾರಲಿಂಗ, ಗಾದ್ರಿ ಪಾಲನಾಯಕ, ಕುಮಾರರಾಮ, ಸೇವಾಲಾಲ, ಎಲ್ಲಮ್ಮ, ಸಿರಿ,
>> ಕೋಟಿಚನ್ನಯ್ಯ  ಇಂಥ ಕೆಲವೇ ಕೆಲವರು ಮಾತ್ರ ನಮ್ಮ ಲಕ್ಷ್ಯದಲ್ಲಿದ್ದಾರೆ. ಇವರಲ್ಲದೆ ಇನ್ನು
>> ನೂರಾರು ಜನ ಸಾಂಸ್ಕೃತಿಕ ವೀರರ ಕಥನಗಳು ಮತ್ತು ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯೊಳಗೆ
>> ಪ್ರಚಲಿತದಲ್ಲಿವೆ. ಈ ಮಟ್ಟದ ನಾಯಕರಲ್ಲದೆ ಪ್ರತೀ ಬಳಿ, ಕುಟುಂಬಕ್ಕೂ ಹಿರಿಯರ ಪರಂಪರೆ
>> ಇದ್ದು ಅವರು ತಾತ, ತಂದೆ, ಮೊದಲಾದ ನೆಲೆಗಳಲ್ಲಿ ದುಡಿದು ಶ್ರೇಷ್ಠರಾದ ಪೂಜನೀಯರಾಗಿದ್ದಾರೆ.
>> ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ. ಕುಟುಂಬ ಹಾಗೂ ಸಮುದಾಯಗಳ ಹಿರಿಯನ್ನು ಪೂಜೆ ಮಾಡುವ
>> ಕ್ರಮಗಳು ವಿಭಿನ್ನ. ಉದಾ: ಹಿರಿಯರ ಪ್ರತಿನಿಧಿಯಾಗಿ ಕಲ್ಲು, ಕೋಲು, ಮಗೆ ಮೊದಲಾದ
>> ವಸ್ತುಗಳನ್ನು ವ್ಯಕ್ತಿಗಳೆಂದು ಪರಿಭಾವಿಸಿ ಪೂಜಿಸಲಾಗುತ್ತದೆ. ಇತ್ತೀಚೆಗೆ ಛಾಯಾಚಿತ್ರಗಳ
>> ರೂಪದಲ್ಲಿ ಪೂಜಿಸುವ ಪದ್ಧತಿಗಳು ಚಾಲ್ತಿಗೆ ಬರುತ್ತಿವೆ.
>> ಸಹಾಯಕ್ಕೆ ಬಂದ ವಸ್ತು ಪರಿಕರಗಳು
>> ಜನಪದ ಧರ್‍ಮದ ಆರಾಧನೆಯ ಭಾಗವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ತನ್ನ ಬದುಕಿಗೆ
>> ಸಹಕರಿಸಿದ ಸೂರ್ಯ-ಚಂದ್ರ-ಭೂಮಿ; ಭಯವನ್ನುಂಟು ಮಾಡಿದ ಹಲವಾರು ಪ್ರಕೃತಿ ವಿಕೋಪಗಳು ಇಂಥ
>> ಮಹಾನ್ ಸಂಗತಿಗಳಲ್ಲದೆ ಕೃಷಿ ಮೊದಲಾದ ವಿವಿಧ ವೃತ್ತಿಯ ಜನ ಬಳಸುವ ಸಣ್ಣ ಸಣ್ಣ ಸಲಕರಣೆಗಳು
>> ಕೂಡ ಪೂಜನೀಯವಾಗಿವೆ. ನೇಗಿಲು, ರಂಟೆ, ಕುಂಟೆ, ಕುಡ ಮೊದಲಾದ ವಸ್ತುಗಳಿಲ್ಲದ ರೈತ; ಕೋಲು,
>> ಮಗೆಗಳಿಲ್ಲದ ಪುಶುಪಾಲಕ; ಉಳಿ, ಬೈರಿಗೆ, ಬಾಚಿ ಇಲ್ಲದ ಬಡಗಿ; ತಿಡಿ, ಬೆಂಕಿ, ಚಮ್ಮಟಿಗೆ
>> ಇಲ್ಲದ ಕಮ್ಮಾರ; ಮೊರ ಕಸಬರಿಗೆ ಹೊಂದಿಲ್ಲದ ಕುಟುಂಬದ ಮಹಿಳೆಯರ ಕಾಯಕ ಅದೆಷ್ಟು ಕಷ್ಟಕರ
>> ಎಂಬುದನ್ನು ಅರಿತರೆ ಇಲ್ಲಿನ ದೈವಾರಾಧನೆಯ ಸ್ವರೂಪದ ಹಿನ್ನೆಲೆ ಅರ್ಥವಾಗುತ್ತದೆ. ಹಾಗಾಗಿಯೇ
>> ಪ್ರತೀಯೊಮದು ವೃತ್ತಿ ಪರಿಕರಗಳನ್ನು ದೈವ ಸ್ವರೂಪಿಯೆಂದು ಭಾವಿಸಿ ಪೂಜಿಸಿದ್ದಾನೆ. ಆ ಮೂಲಕ
>> ಗೌರವಿಸಿದ್ದಾನೆ.
>> ಜನಪದ ದೇವರ ವಿಶಿಷ್ಟ ಲಕ್ಷಣಗಳು
>> ಕನ್ನಡ ಜನಪದ ಜೀವನದೊಳಗೆ ರೂಪುಗೊಂಡ ದೈವಗಳಲ್ಲಿ ಕಂಡು ಬರುವ ಗುಣಲಕ್ಷಣಗಳು ಹಲವಾರು.
>> ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
>> ದೇವರೂ ಮನುಷ್ಯರಂತೆ ಲೌಕಿಕ ಪ್ರಾಣಿ ! : ದೇವರುಗಳು ಕೂಡ ಮನುಷ್ಯನಂತೆ ಲೌಕಿಕ
>> ಭಾವನೆಗಳನ್ನು ಹೊಂದಿವೆ. ಜನಸಮುದಾಯಗಳು ದೇವರಲ್ಲಿ ಮಾಡಿಕೊಳ್ಳುವ ಹರಕೆಯ ಸ್ವರೂಪಗಳು,
>> ನಡೆಸುವ ಪೂಜಾವಿಧಾನಗಳು, ಬಳಸುವ ಪೂಜಾ ಸಾಮಗ್ರಿಗಳು ಇವೇ ಮೊದಲಾದ ಸಂಗತಿಗಳನ್ನು ಗಮನಿಸಿದರೆ
>> ಮೇಲಿನ ಸಂಗತಿ ಸ್ಪಷ್ಟವಾಗುತ್ತದೆ. ಮನುಷ್ಯನ ಹಸಿವು,ಆಸೆ,ಆಮಿಷೆಗಳು ದೇವರಲ್ಲ್ಲಿಯೂ
>> ಇರುತ್ತದೆ ಎಂಬ ತಿಳುವಳಿಕೆಯಿಂದ ಎರಡು ಬೇಟೆ ಕಡಿತೀನಿ, ೧೦೧ ಕಾಯಿ ಹೊಡಿತೀನಿ, ಸೀರೆ
>> ಉಡುಸ್ತೀನಿ, ಆಭರಣ ಮಾಡುಸ್ತೀನಿ ಇವೇ ಮೊದಲಾದ ಹರಕೆಗಳನ್ನು ಈ ಹಿನ್ನೆಲೆಯಲ್ಲಿ
>> ಗಮನಿಸಬೇಕಾಗುತ್ತದೆ.   ಅಷ್ಟೆ ಅಲ್ಲದೆ ಮನುಷ್ಯರಂತೆಯೇ ದೇವರುಗಳ ನಡುವೆ ಮಾನವೀಯ
>> ಸಂಬಂಧಗಳು, ರಕ್ತ ಸಂಬಂಧದ ನೆಲೆಗಳು ಇರುತ್ತವೆ. ಸಾಮಾನ್ಯವಾಗಿ ದೇವರುಗಳ ಮಧ್ಯೆ
>> ಗಂಡ-ಹೆಂಡತಿ, ಅಣ್ಣ-ತಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ ಸಂಬಂಧಗಳನ್ನು ಕಲ್ಪಿಸಿರುವುದು
>> ಕಂಡುಬರುತ್ತದೆ.
>> ಮುಖವಿಲ್ಲದ ದೇವರು : ಪ್ರಸ್ತುತ ಸಂದರ್ಭದಲ್ಲಿ ಶಿಷ್ಟ ಪರಂಪರೆಯ ಯಾವುದೇ ದೇವರನ್ನು
>> ನೋಡಿದರೂ ಅವುಗಳಿಗೆ ಮನುಷ್ಯನ ಇಲ್ಲವೇ ಪ್ರಾಣಿಯ ಮುಖಗಳಿರುವುದನ್ನು ನೋಡಬಹುದು.
>> ವಿಶೇಷವೆಂದರೆ ಮನುಷ್ಯರ ಮುಖಗಳಿರುವ ದೇವರು ಎಷ್ಟು ಶಕ್ತಿಶಾಲಿಯೆಂದು ಭಕ್ತರು
>> ಭಾವಿಸುತ್ತಾರೋ ಅಷ್ಟು ಮುಖಗಳು ಅಷ್ಟು ಕೈಗಳು ಜಾಸ್ತಿಯಾಗುತ್ತವೆ. ಪ್ರಾಣಿಮುಖವಾದರೆ ಇಡೀ
>> ದೇಹದ ಗಾತ್ರ ಮತ್ತು ಹಲ್ಲುಗಳು,ಉಗುರುಗಳು ಮೊದಲಾದ ಭಾಗಗಳು ಅಸಾಮಾನ್ಯ
>> ಸ್ಥಿತಿಯಲ್ಲಿರುತ್ತವೆ. ಜನಪದ ಲೋಕದ ದೇವರುಗಳಿಗೆ ಈ ರೀತಿಯ ಯಾವುದೇ ಮುಖವಿರುವುದಿಲ್ಲ.
>> ಮೇಲೆ ವಿವರಿಸಿದಂತೆ ಜನಪದರ ದೈವಗಳು ಒಂದು ರೀತಿಯ ಸಾಂಕೇತಿಕ ಗುರುತುಗಳು. ಉದಾಹರಣೆಗೆ ಕುಲದ
>> ಹಾಗೂ ಕುಟುಂಬದ ಹಿರಿಯರನ್ನು ಪೂಜಿಸುವ ಕ್ರಮದಲ್ಲಿ ಆ ಹಿರಿಯರು ಬಳಸಿದ ಕೋಲು, ಆಭರಣ ಮತ್ತು
>> ಆಯುಧ ಮತ್ಯಾವುದೋ ವಸ್ತುವಿನಲ್ಲಿ ಅವರ ರೂಪವನ್ನು ಕಂಡು ಅವುಗಳನ್ನೇ ಪೂಜಿಸುತ್ತಾರೆ.
>> ಹಾಗೆಯೇ ಕುಟುಂಬದ ಹಿರಿಯರನ್ನು ಕೇವಲ ಒಂದು ಚಿಕ್ಕ ಕಲ್ಲಿನಲ್ಲಿ ಕಾಣುತ್ತಾರೆ. ಇನ್ನೂ
>> ಪ್ರಕೃತಿ ಹಾಗೂ ವೃತ್ತಿಮೂಲದ ವಸ್ತುವಿಷಯಗಳು ನೇರ ಕಾಣುವ ರೂಪಗಳು.
>> ಪೂಜಾರಿಗೆ ಜಾಗವಿಲ್ಲ : ಈ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಸ್ತೊತ್ರ,
>> ಸ್ತುತಿ, ಪ್ರಾರ್ಥನೆಗಳ ನಿಲುವಿನ ಸಂಬಂಧವಿಲ್ಲ. ಹಾಗಾಗಿಯೇ ಜನಪದರ ದೇವರುಗಳಿಗೆ
>> ಪ್ರತಿಯೊಬ್ಬ ಭಕ್ತನೂ ಕೂಡ ಒಂದರ್ಥದಲ್ಲಿ ಪೂಜಾರಿಯೇ. ವಿಶೇಷವೆಂದರೆ ಈ ವ್ಯವಸ್ಥೆಯಲ್ಲಿ ದೈವ
>> ಮತ್ತು ಭಕ್ತರ ನಡುವೆ ಅರಸ-ಆಳು ರೀತಿಯ ಸಂಬಂಧಗಳಿರುವುದಿಲ್ಲ. ಅದರ ಹೊರತಾಗಿ ಇಲ್ಲಿ
>> ಬಂಧುತ್ವ, ಸ್ನೇಹ ರೀತಿಯ ನಂಟು ಕಂಡುಬರುತ್ತದೆ. ಹಾಗಾಗಿಯೇ ಜನಪದರು ದೇವರಲ್ಲಿ ವರವನ್ನು
>> ಬೇಡಿ ಪಡೆಯುವುದಕ್ಕಿಂತ ಒತ್ತಾಯಮಾಡಿ ಇಲ್ಲವೇ ಬೈದು ವರಪಡೆಯುವ ಕ್ರಮಗಳೇ ಹೆಚ್ಚು. ಈ ದೈವ
>> ವ್ಯವಸ್ಥೆಯಲ್ಲಿ ಪುರೋಹಿತಶಾಹಿಯ ಪ್ರವೇಶವಿಲ್ಲ. ದೇವರು ಮತ್ತು ಭಕ್ತರ ನಡುವೆ ಪೂಜಾರಿಯ
>> ಕೆಲಸವೇನು? ಎಂಬುದನ್ನು ಜನಪದ ಗರತಿಯೊಬ್ಬಳು ಹೀಗೆ ಪ್ರಶ್ನಿಸುತ್ತಾಳೆ :
>>     ದೇವರಿಗೆ ಬಂದೀನಿ ದಾರಿ ಬಿಡು ಪೂಜಾರಿ|
>>     ದೇವರಿಗೆ ನನಗೆ ಒಳಮಾತ | ಮೈಲಾರ ಲಿಂಗನ|
>>               ಠಾವಿಗೋಗಿ ಕೈಯ ಮುಗಿದೇನ||
>> ಜಂಗಮ ಸ್ವರೂಪಿ ದೇವರು ಮತ್ತು ಗುಡಿಗಳು : ಜನಪದ ದೇವರುಗಳಲ್ಲಿ ಹಲವು ದೇವರಿಗೆ ಗುಡಿಗಳೇ
>> ಇಲ್ಲ. ಕೆಲವು ದೇವರಿಗೆ ಗುಡಿಗಳಿವೆ ಆದರೆ ಆ ಗುಡಿಗಳು ನಮ್ಮ ಶಿಷ್ಟ ಪರಂಪರೆಯ ದೇವರುಗಳ
>> ಗುಡಿಗಳಂತೆ ನಿಂತ ಕಟ್ಟಡದ ಸ್ಮಾರಕಗಳಲ್ಲ. ಗುಡಿಗಳನ್ನು ಹೊಂದಿರದ ದೇವರುಗಳಿಗೆ ಸ್ವತಃ
>> ಅಸ್ತಿತ್ವವಿಲ್ಲ. ಮನೆಯಲ್ಲಿರುವ ಮಗೆ ಮತ್ತು ಕೋಲು ಸಮಯ ಬಂದಾಗ ದೇವರಾಗಿ ನಂತರ ದಿನನಿತ್ಯದ
>> ಉಪಯೋಗಕ್ಕೆ ಬಳಕೆಯಾಗುತ್ತವೆ. ಇನ್ನು ಸಗಣಿ ಸೂಕ್ತ ಸಂದರ್ಭಕ್ಕೆ ಗಣಪನಾಗಿ ನಂತರ ಒಲೆಗಿಡುವ
>> ಬೆರಣಿಯಾಗುತ್ತದೆ. ಹಾಗೆಯೇ ಹೊನ್ನಾರು ಹೂಡುವ ರೈತನಿಗೆ ಅಲ್ಲೇ ಇರುವ ಕಲ್ಲು ಇದಕ್ಕಿದ್ದಂತೆ
>> ದೇವರಾಗಿ ಪೂಜೆ ಮುಗಿದ ನಂತರ ಮತ್ತೆ ಅಲ್ಲೇ ಮಣ್ಣಲ್ಲಿ ಬೆರತು ಹೋಗುತ್ತದೆ.
>> ಗುಡಿಗಳನ್ನು ಹೊಂದಿರುವ ಕೆಲವಾರು ದೇವರ ಗುಡಿಗಳು ದೇವರಿಗೆ ಇಲ್ಲಿ ನಿರ್ಮಾಣವಾಗಿರುವ
>> ಗುಡಿಗಳು ಇದ್ದರೂ ಇವು ಚಲಿಸುವ ಜಂಗಮ ಸ್ವರೂಪಿಯಾದವು. ಬಹುತೇಕ ಜನಪದ ದೈವಗಳ ನೆಲೆಗಳು ಮರದ
>> ನೆರಳು, ಮೂರು ಬಂಡೆಗಲ್ಲುಗಳಿಂದ ಕಟ್ಟಿದ ಗುಡಿಯಲ್ಲಿ, ಬಹಳವೆಂದರೆ ಸಮಯ ಸಂದರ್ಭಕ್ಕೆ
>> ಅನುಗುಣವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದಾದ ಮರ ಮತ್ತು
>> ಹುಲ್ಲಿನಿಂದ ಸೃಷ್ಟಿಸಿದ ಸುತ್ತು ಗುಡಿಸಲುಗಳಿರುತ್ತವೆ.
>> ಜನಪದ ದೇವರ ಮಿತಿಗಳು
>> ಈ ಸ್ವರೂಪದ ಜನಪದ ದೈವ ವ್ಯವಸ್ಥೆಯಲ್ಲಿ ದೋಷಗಳೇನು ಇಲ್ಲ ಎಂದರೆ ಒಂದು ಮುಖದ ಸತ್ಯವನ್ನು
>> ಮಾತ್ರ ಹೇಳಿದಂತಾಗುತ್ತದೆ. ಹಾಗಾಗಿ ಇಲ್ಲಿರುವ ದೋಷಗಳನ್ನು ಗುರುತಿಸಿಕೊಳ್ಳುವ ಪ್ರಯತ್ನಗಳು
>> ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಜನಪದರ ದೈವ ಕಲ್ಪನೆಯಲ್ಲಿ ಕಂಡು ಬರುವ
>> ಕೆಲವು ಮಿತಿಗಳನ್ನು ಹೀಗೆ ಗುರುತಿಸಬಹುದು
>> ೧. ಎಲ್ಲ ಸಮಸ್ಯೆಗಳಿಗೂ ದೇವರೇ ಕಾರಣವೆಂಬ ದೃಢವಾದ ನಂಬಿಕೆಯಿಂದ ಜನಪದ ಸಮುದಾಯಗಳು
>> ಮೂಢನಂಬಿಕೆಯ ಕಡೆಗೆ ನಡೆದದ್ದು, ತಮ್ಮ ಪೂರ್ವಿಕರ  ಮೂಲ ಉದ್ದೇಶಗಳನ್ನು ಮರೆತು ಕುರುಡು
>> ಆಚರಣೆಗಾರರಾಗಿ ರೂಪುಗೊಂಡಿದ್ದು( ಕಾರ್ಯಾಕಾರಣ ಸಂಬಂಧಗಳ ತಿಳಿವಿಲ್ಲದೆ ನಡೆಸಿದ ಆಚರಣೆಗಳು)
>> ಉದಾ: ಉಪಯೋಗಕ್ಕಿಲ್ಲದ ವಸ್ತುಗಳನ್ನು ಪುಜಿಸಿದ್ದು- ಮೊರದ ಪೂಜೆ,
>> ೨. ಜನಪದರ ದೇವರ ಬಗೆಗಿನ ದೃಢವಾದ ನಂಬಿಕೆಗಳು ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ
>> ಸ್ವ ಇಚ್ಛೆಗಳನ್ನು ಪೂರೈಸಿಕೊಳ್ಳಲು ಅನವುಮಡಿಕೊಟ್ಟದ್ದು ( ದೇವದಾಸಿ ಪದ್ಧತಿ,
>> ಬೆತ್ತಲೆಸೇವೆ ಇತ್ಯಾದಿ)
>> ೩. ದೈವ ಸಂಬಂಧೀ ಆಚರಣೆಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಅಡ್ಡಿಯಾಗಿದ್ದು
>> ಇಂಥ ಮಿತಿಗಳನ್ನು ದಾಟುವುದಾದರೆ ನಮ್ಮ ಪಾರಂಪರಿಕ ದೈವ ಕಲ್ಪನೆ ಅನುಕರಣಾ ಯೋಗ್ಯವಾದುದು.
>> ಹಾಗೂ ಈಗಿನ ಸಂಕಷ್ಟದ ಕಾಲಕ್ಕೆ ಸಮರ್ಥವಾದ ಪರ್‍ಯಾಯ ವ್ಯವಸ್ಥೆಯೂ ಆಗುವುದರಲ್ಲಿ
>> ಅನುಮಾನವಿಲ್ಲ
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAJCvfyXcASuX-jRLNKK6P2xFd4AMUpuTOLKj4DGw2Yky%3D_NkRQ%40mail.gmail.com
>> <https://groups.google.com/d/msgid/socialsciencestf/CAJCvfyXcASuX-jRLNKK6P2xFd4AMUpuTOLKj4DGw2Yky%3D_NkRQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABtYOUV5VMwvu41TuLCuA62mBg9hNQx0LYg-W6DqZW2EjbR8OQ%40mail.gmail.com
> <https://groups.google.com/d/msgid/socialsciencestf/CABtYOUV5VMwvu41TuLCuA62mBg9hNQx0LYg-W6DqZW2EjbR8OQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz4VLJSi9fjk%3DLggfx9cob-J9%3DMHBsp%3Dp%3DTo%3DFPtMAzC5g%40mail.gmail.com.
For more options, visit https://groups.google.com/d/optout.

Reply via email to