ಆಧುನಿಕ ಕಾಲಕ್ಕೆ ಬಹಳ ಪ್ರಸ್ತುತ ಲೇಖನ..ಖಂಡಿಯವಾಗಿಯೂ ಚಿಂತನೆ ನಡೆಯಬೇಕಾದ ವಿಷಯ,
ಯುಜಿನಾ.ಪಿ.
ಸರಕಾರಿ ಪ್ರೌಢಶಾಲೆ,ದೋಳ್ಪಾಡಿ,ಪುತ್ತೂರು.
 [email protected].




2016-02-21 20:43 GMT+05:30 Basavaraja Naika H.D. <
[email protected]>:

> ತುಂಬಾ ಚೆನ್ನಾಗಿದೆ ಸರ್ ಲೇಖನ
> On 21-Feb-2016 8:30 pm, "Harishchandra Prabhu" <[email protected]>
> wrote:
>
>> ಬಹಳ  ಚಿಂತನಾತ್ಮಕ  ಲೇಖನ  .
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: [email protected]
>> blog:NammaBellare.blogspot.com
>> school blog:* gpucbellare.blogspot.com <http://gpucbellare.blogspot.com>*
>> mobile: 9449592475
>>
>> 2016-02-21 16:35 GMT+05:30 Siddaramappa s m Sri <[email protected]>:
>>
>>> ಜನಪದರ ದೈವ ಕಲ್ಪನೆ
>>>          ಇಂದಿನ ಸಮಾಜದಲ್ಲಿ ದೇವರ ಸಂಬಂಧದ ವಿಷಯಗಳು ಅನೇಕ ಸಮಸ್ಯೆಗಳನ್ನು
>>> ಸೃಷ್ಟಿಸುತ್ತಿವೆ. ಆದಿಮಾನವನ ದೇವರ ಸೃಷ್ಟಿಯ ಹಿಂದಿರುವ ಮಾನವಪರವಾದ ಆಲೋಚನೆಗಳಲ್ಲಿ
>>> ಗಂಭೀರವಾದ ಪಲ್ಲಟಗಳಾಗಿರುವುದು. ಇದಕ್ಕೆ ಪ್ರಮುಖ ಕಾರಣವಾಗಿದೆ. ದೇವರು ಮನುಷ್ಯನನ್ನು
>>> ಕಾಪಾಡುವ ಮುಖ್ಯ ಉದ್ದೇಶದಿಂದ ಹುಟಿದ್ದು. ಆದರೆ ಕಾಲಾನಂತರ ಮನುಷ್ಯರೇ ದೇವರನ್ನು
>>> ರಕ್ಷಿಸಬೇಕಾದ ದುರಂತ ಒದಗಿದೆ. ಇಂಥ ಸಂದರ್ಭದಲ್ಲಿ ದೇವರ ಸೃಷ್ಟಿಯ ಆರಂಭಿಕ ಉದ್ದೇಶ ಹಾಗೂ
>>> ಸ್ವರೂಪಗಳನ್ನು ತಿಳಿಯುವ ಅಗತ್ಯತೆ ಇಂದು ಅನಿವಾರ್ಯವಾಗಿದೆ. ಈ ಉದ್ದೇಶದಿಂದ ದೇವರ ಆರಂಭಿಕ
>>> ಸ್ಥಿತಿಯನ್ನು ತಿಳಿಯುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಜನಪದ ಸಮಾಜಗಳು
>>> ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು; ಇವರ ಧರ್‍ಮಕ್ಕೆ ಒಬ್ಬ
>>> ಸಂಸ್ಥಾಪಕನಾಗಲಿ, ಒಂದು ಧರ್‍ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ
>>> ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ
>>> ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್‍ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್‍ಮಗ್ರಂಥಗಳಂತೆ
>>> ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಜನಪದ ಲೋಕದಲ್ಲಿ
>>> ಪ್ರಕೃತಿಯೇ ಪ್ರಧಾನ ದೈವ . ಹಾಗೇಯೇ ತಮ್ಮ ಸಮಾಜ - ಸಂಸ್ಕೃತಿ ಉದ್ಧಾರಕ್ಕೆ ದುಡಿದ ನಾಯಕರೇ
>>> ನಿಜವಾದ ದೇವರುಗಳು. ಇನ್ನೂ ಕೂತೂಹಲದ ಸಂಗತಿಯೆಂದರೆ ತಮ್ಮ ಬದುಕಿಗೆ ಸಹಾಯವಾಗಿ ಬಂದ ಎಲ್ಲಾ
>>> ವಸ್ತು ವಿಷಯಗಳೂ ದೇವರುಗಳೇ. ಈ ಕಾರಣಕ್ಕಾಗಿ ಜನಪದರ ದೈವ ಸಮೂಹ ಅಗಣಿತವಾದದು. ಇಷ್ಟೆಲ್ಲ
>>> ದೊಡ್ಡ ಸಮೂಹವಿದ್ದರೂ ಯಾವ ದೇವರು ತನ್ನ ಭಕ್ತರಲ್ಲಿ ಪರಸ್ಪರ ಸಂಘರ್ಷಗಳನ್ನು ಉಂಟುಮಾಡಿಲ್ಲ.
>>> ಭಕ್ತರಿಗೆ ಯಾವುದೇ ಆಮಿಷವೊಡ್ಡಿಲ್ಲ. ಅತ್ಯಂತ ಮಾನವೀಯ ವಾತವರಣದೊಂದಿಗೆ ಬದುಕುವ
>>> ಸಂದರ್ಭಗಳನ್ನು ಸೃಷ್ಟಿಸಿವೆ.
>>>
>>>         ನಮ್ಮ ಸಮಕಾಲೀನ ಸಂದರ್ಭದಲ್ಲಿ ಪ್ರಚಲಿತವಿರುವ ದೈವ ಕಲ್ಪನೆಗಳನ್ನು ಕಂಡರೆ
>>> ಯಾರಿಗಾದರೂ ಬೇಸರವೆನಿಸುತ್ತದೆ. ವೈದಿಕ ಪರಂಪರೆಯ ದೈವಗಳು ಪಾರಂಪರಿಕ ದೈವಗಳ ಮೇಲೆ
>>> ನಿರಂತರವಾಗಿ ನಡೆಸುತ್ತಾ ಬಂದಿರುವ ದಾಳಿಗಳ ಕಾರಣದಿಂದ ಇಂದು ದೇವರ ಹೆಸರಲ್ಲಿ
>>> ಹೊಟ್ಟೆಹೊರೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಇಂಥವರಿಂದ ಭಕ್ತರ ಶೋಷಣೆ ಹೆಚ್ಚು ಹೆಚ್ಚು
>>> ನಡೆದಿದೆ. ಆಧುನಿಕ ಸಮಾಜದ ವಿಜ್ಞಾನದ ವಿಚಾರಗಳು ದೈವ ಕಲ್ಪನೆಯನ್ನು ಸಡಿಲಗೊಳಿಸಿದರ ಪರಿಣಾಮ
>>> ಇದರ ಫಲ ಪಡೆದ ಜನ ದೈವಗಳನ್ನೆ ಶೋಷಿಸುವ ಮಟ್ಟಕ್ಕಿಳಿದ್ದಿದ್ದಾರೆ. ದೇವರ ಹಿನ್ನೆಲೆಯಲ್ಲಿ
>>> ಹುಟ್ಟಿಕೊಂಡ ದೇವಾಲಯ ಹಾಗೂ ಮಠಗಳು ಕೂಡ ಹಣ-ಆಸ್ತಿ ಗಳಿಕೆಯಲ್ಲಿ ಪೈಪೋಟಿ ನಡೆಸುತ್ತಿರುವುದು
>>> ನಮ್ಮ ಕಾಲದ ದುರಂತ. ಇಂಥ ಸಂದರ್ಭದೊಳಗೆ ನಿಜವಾದ ಭಕ್ತಿಯುಳ್ಳ ಯಾರನ್ನು ಹಿಂಸಿಸದ, ನಿಜವಾದ
>>> ಮಾನವ ಪ್ರೇಮವನ್ನು ಕಾಪಿಡುವ ಜನಪದರ ದೈವ ವ್ಯವಸ್ಥೆ ಇಂದು ನಮ್ಮೆಲ್ಲರ ಅಗತ್ಯವಾಗಿದೆ.
>>>                 ಪ್ರಸ್ತುತ ಸಮಾಜದ ಹಲವಾರು ಆತಂಕ ಹಾಗೂ ಸಮಸ್ಯೆಗಳಿಗೆ ಧರ್‍ಮಗಳು
>>> ಬಹುಮುಖ್ಯ ಕಾರಣವಾಗಿವೆ.  ಬರಹ ಹಾಗೂ ಉನ್ನತ ವರ್ಗಗಳಿಗೆ ಸೇರಿದ ಪ್ರಧಾನ ಧಾರೆಯ ಧರ್‍ಮಗಳು
>>> ಪಾರಂಪರಿಕವಾಗಿ ಬೆಳೆದು ಬಂದ ದುಡಿಮೆಯ ಆಧರಿತ ಸೇವಾ ವೃತ್ತಿಗಳನ್ನು ಮೂಲೆ ಗುಂಪಾಗಿಸಿವೆ.
>>> ಅಷ್ಟೇ ಅಲ್ಲದೆ ಸಮಾಜದ ಶ್ರೇಣೀಕರಣ ವ್ಯವಸ್ಥೆಯನ್ನು ಸಮರ್ಥಿಸುವ ಮೂಲಕ ಸಮಾಜದ
>>> ಸಮುದಾಯಗಳಲ್ಲಿ ಮತೀಯ ಮತ್ಸರಗಳನ್ನು ಹೆಚ್ಚಿಸಿವೆ. ಹೀಗಾಗಿಯೇ ಹಿಂದೆಂದೂ ಕಾಣದಂತಹ
>>> ಕೋಮುಗಲಭೆಗಳು ಮತ್ತು ಹಿಂಸಾಚಾರಗಳು ತಲೆ ಎತ್ತಿ ನಿಂತಿವೆ. ಚಲನಶೀಲತೆಯಿಲ್ಲದ ಈ ಕರ್ಮಠ
>>> ಧರ್‍ಮಗಳಲ್ಲಿ ಯಾವುದೇ ರೀತಿಯ ಪರಿವರ್ತನೆಯ ಮನಸ್ಸಿಲ್ಲ. ಇಂಥ ಸ್ಥಿರ ಮನೋಭಾವ ತನ್ನ
>>> ಶಕ್ತಿ-ಸಾಮರ್ಥ್ಯ ಹಾಗೂ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನತ್ತ ಹೆಚ್ಚು
>>> ಒಲವು ತೋರುತ್ತಿದೆ. ಆ ಮೂಲಕ ಸಮಾಜದ ಶಾಂತಿಗಾಗಿ ದುಡಿಯಬೇಕಿದ್ದ ಧರ್‍ಮಗಳು ಅಶಾಂತಿಯನ್ನು
>>> ಸೃಷ್ಟಿಸುವ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಾನವ ಸಮಾಜ
>>> ಶಾಂತಿಗಾಗಿ ಆತೊರೆಯುತ್ತಿದೆ. ಇವರಿಗೆ ಶಾಂತಿ ಸಿಗುವುದಾದರೂ ಎಲ್ಲಿಂದ? ಅದು ನಮ್ಮ
>>> ಪಾರಂಪರಿಕವಾದ ಚಲನಶೀಲ ಜನಪದ ಸಂಸ್ಕೃತಿಯೊಳಗಿನ ಧರ್‍ಮಗಳಿಂದ ಮಾತ್ರ ಸಾಧ್ಯವೆಂಬುದರಲ್ಲಿ
>>> ಯಾವುದೇ ಅನುಮಾನಗಳು ಉಳಿದಿಲ್ಲ.
>>> ಜನಪದ ಧರ್ಮ ಮತ್ತು ದೇವರು
>>>             ಜನಪದ ಸಮಾಜಗಳು ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ
>>> ದೇವರು-ಧರ್ಮವನ್ನು; ದೇಹ ಪ್ರಧಾನ ಕಾಯಕ ಮೌಲ್ಯವನ್ನು; ಸಮಷ್ಟಿಯ ಹಿತಾಸಕ್ತಿಯನ್ನು; ಭೌತಿಕ
>>> ಸಂಪತ್ತಿನ ನಿರಾಕರಣೆಯ ಭಾವನೆಯನ್ನು; ಮನುಷ್ಯನಿಗಿಂತ ಹೆಚ್ಚಾಗಿ ಪ್ರಕೃತಿ ಕೇಂದ್ರಿತ
>>> ಮನೋಭಾವನೆಯನ್ನು; ದ್ವೇಷರಹಿತ ಅಪ್ಪಟ ಮಾನವೀಯ ಅಂತಃಕರಣವನ್ನು; ವ್ಯವಹಾರಿಕವಲ್ಲದ ನಿಜವಾದ
>>> ಮಾನವೀಯ ಸಂಬಂಧದ ಬಂಧುತ್ವವನ್ನು. ಇವೆಲ್ಲ ಭಾವನೆಗಳ ಮೂಸೆಯಲ್ಲಿ ಮೂಡಿ ಅನೇಕ ತಿರುವುಗಳಲ್ಲಿ
>>> ಬೆಳೆದ ಜನಪದ ಸಂಸ್ಕೃತಿಯಲ್ಲಿ ಕಂಡು ಬರುವ ದೇವರು-ಧರ್ಮದ ಸ್ವರೂಪವನ್ನು ತಿಳಿಯುವುದು
>>> ಅತ್ಯಂತ ಕೂತೂಹಲಕರ ಸಂಗತಿಯಾಗಿದೆ. ಸಂಸ್ಕೃತಿಗೂ ಧರ್‍ಮಕ್ಕೂ ನಿಕಟ ಸಂಬಂಧವಿದೆ.
>>> ಸಂಸ್ಕೃತಿಯನ್ನು ರೂಪಿಸುವಲ್ಲಿ ಧರ್‍ಮದ ಪಾತ್ರ ದೊಡ್ಡದು. ಜನಪದರ ಧರ್‍ಮಕ್ಕೆ ಒಬ್ಬ
>>> ಸಂಸ್ಥಾಪಕನಾಗಲಿ, ಒಂದು ಧರ್‍ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ
>>> ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ
>>> ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್‍ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್‍ಮಗ್ರಂಥಗಳಂತೆ
>>> ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಈ ಹಿನ್ನೆಲೆಯೊಳಗೆ
>>> ಕನ್ನಡ ಜನಪದ ಲೋಕದಲ್ಲಿ ಕಂಡು ಬರುವ ದೇವರ ಕಲ್ಪನೆಗಳನ್ನು ಈ ಮುಂದಿನಂತೆ ವಿವರಿಸಬಹುದು.
>>>            ’ಜನಪದ ಧರ್ಮವು ಲಿಖಿತ ಪಠ್ಯ, ಆ ಮೂಲಕ ಏರ್ಪಟ್ಟ ತಾತ್ವಿಕ ಚಿಂತನೆಯ ಮೂಲಕ
>>> ಆಕಾರ ಪಡೆದುದ್ದಲ್ಲ. ಅದು ಬಹುಮಟ್ಟಿಗೆ ಅನುಕರಣೆ ಮತ್ತು ಆಚರಣೆಗಳಿಂದ ಹರಿದು ಬಂದಿದ್ದು,
>>> ಅತಿಮಾನುಷ ಕಲ್ಪನೆ, ಅಲೌಕಿಕ ಜೀವಿಗಳ ಆರಾಧನೆ ಹಾಗೂ ಅನೇಕ ಬಗೆಯ ಧಾರ್ಮಿಕ ನಂಬಿಕೆಗಳಿಂದ
>>> ಕೂಡಿದೆ’. ಇದರಲ್ಲಿ ಕಂಡು ಬರುವ ಆಚಾರ - ವಿಚಾರಗಳು, ನಡಾವಳಿಗಳು, ನಂಬಿಕೆಗಳು ಕಲೆಗಳು
>>> ಮತ್ತು ಹುಟ್ಟು-ಸಾವುಗಳ ಮಧ್ಯೆ ಅನುಸರಿಸಲೇ ಬೇಕಾದ ಸಂಪ್ರದಾಯಗಳು, ಜನರ ಜೀವನ ವಿಧಾನ ಮತ್ತು
>>> ಅದರ ಮನೋ ದೃಷ್ಟಿಯನ್ನು ಪ್ರತಿನಿಧಿಸುತ್ತವೆ. ತಾವು ಪರಿಪಾಲಿಸುವ ಧರ್ಮಗಳ ಧೇಯೋದ್ದೇಶಗಳ
>>> ಅರಿವಿಲ್ಲವಾದರೂ ತಮ್ಮ ಸುತ್ತ ನಮ್ಮನ್ನು ಕಾಪಾಡುವ ಒಂದು ಶಕ್ತಿಯಿದೆ ಎಂಬುದನ್ನು ಜನಪದರು
>>> ನಂಬುತ್ತಾರೆ. ಹೀಗಾಗಿ ಅವರು ಸೂರ್ಯ,ಚಂದ್ರ,ನೀರು,ಬೆಟ್ಟ-ಗುಡ್ಡಗಳು, ದಟ್ಟವಾದ ಕಾಡು
>>> ಎಲ್ಲವುಗಳಲ್ಲೂ ದೈವತ್ವವನ್ನು ಅರಸುತ್ತಾರೆ. ಇವುಗಳ ಒಡೆಯನೇ ಆ ಪ್ರದೇಶದಲ್ಲಿ
>>> ವಾಸವಾಗಿದ್ದು, ಕಾಯಿಲೆ ಮತ್ತು ಅನಿಷ್ಟಗಳಿಗೆ ಆತನೇ ಕಾರಣನೆಂದು ನಂಬಿ ಅವುಗಳನ್ನು
>>> ಪೂಜಿಸುತ್ತಾರೆ. ಇಂಥ ’ಸರ್ವಚೇತನವಾದ’ ವಾಸ್ತವವಾಗಿ ಜನಪದ ಧರ್ಮದ ಅಡಿಗಲ್ಲಾಗಿದೆ ಎಂದು
>>> ಹೇಳಬಹುದು. ಗಮನಿಸಬೇಕಾದ ಸಂಗತಿ ಎಂದರೆ ಜನಪದ ಸಂಸ್ಕೃತಿಯ ಧಾರ್ಮಿಕ ಸ್ತೊತ್ರ, ಸ್ತುತಿ,
>>> ಪ್ರಾರ್ಥನೆಗಳಿಲ್ಲ. ಬದಲಿಗೆ ಒತ್ತಾಯದ, ಒತ್ತಡದ, ಬಲತ್ಕಾರದ ಗೇಲಿಯ ನಿಲುವಿದೆ. ಜನಪದರ
>>> ಬದುಕು ರಾಜಶಕ್ತಿಗಿಂತ ಹೆಚ್ಚಾಗಿ ಧರ್ಮ ಶಕ್ತಿಯನ್ನು ಆಧರಿಸಿದೆ. ತಮ್ಮ ಜಾಯಮಾನಕ್ಕೆ
>>> ಒಗ್ಗುವ ರೀತಿಯಲ್ಲಿ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವೊಂದನ್ನು ರೂಪಿಸಿಕೊಂಡ ಜನಪದರ
>>> ಕಲ್ಪನೆಯ ದೇವರು ಪ್ರತಿಷ್ಟಿತ ಶಕ್ತಿಗಿಂತಲೂ ತೀರಾ ಭಿನ್ನವಾದುದು.
>>> ಪ್ರಕೃತಿ  : ಆರಾಧನೆ ಮತ್ತು ಅನುಸಂಧಾನ
>>>              ’ಪ್ರಕೃತಿ ಪೂಜೆ ಜನಪದ ಧರ್‍ಮದ ಪ್ರಧಾನ ಲಕ್ಷಣ. ತಾವು ವಾಸಿಸುವ ಭೂಮಿ,
>>> ಸಮೀಪದ ಕಡಲು, ಶಾಖ ಮತ್ತು ಬೆಳಕನ್ನು ನೀಡುವ ಸೂರ್‍ಯ-ಚಂದ್ರ, ವಿವಿಧ ಉಪಯೋಗಗಳಿಗೆ ಬರುವ
>>> ಮರ-ಗಿಡ-ಬಳ್ಳಿಗಳು ಜನಪದರ ಆರಾಧ್ಯ ದೈವಗಳು. ಜನಪದರ ಪ್ರಕೃತಿಯ ಪೂಜೆಯ ಹಿಂದೆ ಕೃತಜ್ಞತೆಯ
>>> ಭಾವನೆಯಿದೆ. ಪ್ರಕೃತಿಯನ್ನು ಅವಲಂಬಿಸಿ ಬದುಕಿದ ಮನುಷ್ಯನಿಗೆ ಅದರ ಒಡನಾಟದಲ್ಲಿ ಆದ ನೋವು
>>> -ನಲಿವು ದೈವ ಸ್ವರೂಪವನ್ನು ಕಂಡಿವೆ. ಮುಖ್ಯವಾಗಿ ಪ್ರಕೃತಿಯಲ್ಲಿನ ಭಯ ಹುಟ್ಟಿಸುವ
>>> ವಸ್ತು-ವಿಷಯಗಳನ್ನು; ವಿಸ್ಮಯ ಮೂಡಿಸಿದ ಘಟನೆಗಳನ್ನೂ ದೇವರೆಂದು ಆರಾಧಿಸಿದ ಪರಿಕ್ರಮ
>>> ಇಲ್ಲಿದೆ. ಜನಪದ ದೈವ ಕಲ್ಪನೆಯ ಚರಿತ್ರೆಯಲ್ಲಿ ಮೊದಲ ಹೆಜ್ಜೆ ಎಂದರೆ ಪ್ರಕೃತಿಯ
>>> ಭಯ-ವಿಸ್ಮಯಗಳನ್ನು ಅನುಸಂಧಾನಗೊಳಿಸಿದ ಕ್ರಮ. ಮುಖ್ಯವಾಗಿ ಪ್ರಕೃತಿಯ ಜೊತೆ ನಡೆಸಿದ -
>>> ಬೆಳೆಸಿದ ಸಂಬಂಧಗಳ ಸ್ವರೂಪದಲ್ಲಿ ಜನಪದರ ದೈವ ಕಲ್ಪನೆ ಒಡಮೂಡಿದೆ. ಪ್ರಕೃತಿಯ ಭಾಗವಾದ
>>> ಸೂರ್‍ಯ-ಚಂದ್ರ-ಭೂಮಿ-ಆಕಾಶ, ನೀರು-ಗಾಳಿ, ಮಳೆ-ಬೆಳೆ ಇವುಗಳನ್ನು ಜನಪದರು ದೇವರೆಂದು
>>> ಪೂಜಿಸಿದ್ದಾರೆ. ಅದರಲ್ಲೂ ’ಭೂಮಿ’ ಮಣ್ಣಿಗೆ ಹತ್ತಿರವಾಗಿ ಬದುಕಿದ ಜನಪದ ಸಮುದಾಯಗಳಿಗೆ
>>> ಶ್ರೇಷ್ಟ ದೈವ. ಹಾಗಾಗಿ ಜನಪದ ತ್ರಿಪದಿಯೊಂದು ಭೂಮಿ ತಾಯಿಗೆ ಎಂಥ ಸ್ಥಾನವಿದೆ ಎಂಬುದನ್ನು
>>> ಹೀಗೆ ಸ್ಪಷ್ಟಪಡಿಸುತ್ತದೆ.
>>>                  ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ|
>>>   ಎಳ್ಳು ಜೀರಿಗೆ ಬೆಳೆವಂಥ| ಭೂಮಿ ತಾಯಿನ|
>>>   ಎದ್ದೊಂದು ಗಳಿಗೆ ನೆನೆದೇನ||
>>> ಈ ಸಾಲುಗಳು, ಇರುವ ಅನಂತ ದೈವಗಳ ನಡುವೆ ಭೂಮಿ ತಾಯಿ ದೊಡ್ಡವಳು; ಹಾಗಾಗಿಯೇ ಅವಳಿಗೆ
>>> ಮೊದಲ ಸ್ಥಾನ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಹೀಗೆ ಭೂಮಿಯನ್ನು ತಾಯಿಯೆಂದು ತಿಳಿದ.
>>> ಸಮುದಾಯಗಳ ಪ್ರಜ್ಞೆ ಅನುಭವಜನ್ಯವಾದುದು. ಹುಟ್ಟಿನಿಂದ ಸಾವಿನವರೆಗೂ ಮನುಷ್ಯ ಭೂಮಿಯಿಂದ
>>> ಪಡೆಯುವ ಸಹಾಯವೆಷ್ಟು? ಆದರೆ ಇತ್ತೀಚಿನ ದಿನಮಾನದಲ್ಲಿ ಭೂಮಿಯ ಗರ್ಭವನ್ನು ಬಸಿದ ಆಧುನಿಕರ
>>> ಜ್ಞಾನ ಯಾಕಾಗಿ ಈ ಪರಂಪರೆಯನ್ನು ನಿಲಕ್ಷಿಸಿತು ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಭೂಮಿಯಂತೆ
>>> ಸೂರ್‍ಯ, ಚಂದ್ರ, ನೀರು, ಗಾಳಿ ಮಳೆ ಮೊದಲಾದವು ಮನುಷ್ಯನ ಬದುಕಿಗೆ ಅನಿವಾರ್‍ಯ ಎಂಬುದಾಗಿ
>>> ನಂಬುವ ಅವು ನೀಡಿದ ಸಹಕಾರಕ್ಕೆ ಪ್ರತಿಯಾಗಿ ಗೌರವಿಸುವ ಮನೋಭಾವದಿಂದಾಗಿ ಇವೆಲ್ಲವೂ ದೈವ
>>> ಸ್ವರೂಪಿಯಾಗಿವೆ. ಜನಪದರ ಬದುಕುಗಳಲ್ಲಿ ದೊರೆಯುವ ಪ್ರಕೃತಿ ಆರಾಧನೆಯ ಮತ್ತೊಂದು ರೂಪ
>>> ಗಿಡ-ಮರ-ಬಳ್ಳಿಗಳ ಹಾಗೂ ಪ್ರಾಣಿ ಪಕ್ಷಿಗಳ ಆರಾಧನೆ. ಇದನ್ನು ಕುಲದೇವತಾರಾಧನೆ ಪದ್ಧತಿ ಎಂದು
>>> ಕರೆಯಲಾಗಿದೆ. ಈ ಪದ್ಧತಿಯ ಅನ್ವಯ ’ಒಂದು ಸಮುದಾಯದ ಜನ ತಮ್ಮ ಕುಲದ ಮೂಲವನ್ನು ಒಂದು ಸಸ್ಯ
>>> ಅಥವಾ ಪ್ರಾಣಿಗಳಲ್ಲಿ ಆರೋಪಿಸಿಕೊಂಡು ಅವುಗಳನ್ನೇ ತಮ್ಮ ಕುಲದೇವರು ಎಂದು ಆರಾಧಿಸಿಕೊಂಡು
>>> ಬರುತ್ತಾರೆ. ತಮ್ಮ ಕುಲದೇವತೆಯ ಲಾಂಛನವಾದ ಮರ/ಸಸ್ಯವನ್ನು ಅವರು ಕಡಿಯುವುದಿಲ್ಲ ಮತ್ತು
>>> ಸುಡುವುದಿಲ್ಲ. ಪ್ರಾಣಿಯನ್ನು ಬೇಟೆಯಾಡುವುದಿಲ್ಲ ಹಾಗೂ ಆಹಾರವಾಗಿ ಸೇವಿಸುವುದಿಲ್ಲ. ಈ
>>> ಸಮುದಾಯಗಳು ಪೂಜಿಸುವ ಬನ್ನಿ, ಬೇವು, ಆಲ, ಎಕ್ಕೆ ಮೊದಲಾದವು ಕೇವಲ ಹಸಿರಲ್ಲ.
>>> ಅವುಗಳಲ್ಲಿರುವ ಔಷಧೀಯ ಗುಣವೇ ಅವುಗಳನ್ನು ಪೂಜೆಗೊಳ್ಳುವಂತೆ ಮಾಡಿದೆ. ಇಂಥಲ್ಲಿ ಮನುಷ್ಯನ
>>> ಆರೋಗ್ಯಕ್ಕೆ ಸಹಕರಿಸಿದಕ್ಕೆ ಪ್ರತಿಯಾಗಿ ಮೂಡಿದ ಕೃತಜ್ಞತಾ ಭಾವವೇ ಅವುಗಳ ಆರಾಧನೆಗೆ
>>> ಪ್ರಮುಖ ಕಾರಣವಾಗಿದೆ. ಈ ರೀತಿಯಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಬದುಕಿಗೆ ಅನುಕೂಲವಾಗಿ
>>> ಒದಗಿಬಂದ ವಸ್ತು-ವಿಷಯಗಳನ್ನು ಗೌರವ ಮತ್ತು ಕೃತಜ್ಞತೆ ಸೂಚಿಸುವ ಸಲುವಾಗಿ ಪೂಜಿಸಿದರೆ; ಇದೇ
>>> ಮನುಷ್ಯ ಮತ್ತೊಂದು ಕಡೆ ಪ್ರಕೃತಿಯ ವಿನಾಶಿ ರೂಪಗಳನ್ನು ಪೂಜಿಸಿದ್ದಾನೆ. ಉದಾ:
>>> ಪ್ರಕೃತಿಯಲ್ಲಿರುವ ಕ್ರೂರ ಪ್ರಾಣಿಗಳು, ವಿಷಜಂತುಗಳು; ಗುಡುಗು-ಸಿಡಿಲು ಮೊದಲಾದ
>>> ಭಯವನ್ನುಂಟು ಮಾಡುವ ಪ್ರಕೃತಿಯ ವೈಚಿತ್ರಗಳು. ಗಮನಿಸಬೇಕಾದ ಸಂಗತಿ ಎಂದರೆ ಕೃತಜ್ಞತಾ
>>> ಭಾವನೆಯ ಪೂಜಾಕ್ರಮಗಳಿಗಿಂತ ಭಯದ ಭಾವನೆಯಲ್ಲಿ ಪೂಜಿಸುವ ಪೂಜಾಮಾದರಿಗಳು
>>> ಭಿನ್ನವಾಗಿರುತ್ತವೆ. ಕೃತಜ್ಞತೆಗೆ ಎಡೆ ಮಾತ್ರ ಪ್ರಧಾನವಾದರೆ ಭಯಕ್ಕೆ ಬಲಿ
>>> ಮುಖ್ಯವಾಗುತ್ತದೆ.
>>> ಹಿರಿಯರ ಆರಾಧನೆ : ಕುಟುಂಬ ಮತ್ತು ಕುಲ
>>> ಜನಪದರ ದೈವ ಕಲ್ಪನೆಯಲ್ಲಿ ಹಿರಿಯರ ಆರಾಧನೆ ಮತ್ತೊಂದು ಪ್ರಮುಖ ಮಜಲು. ಕುಟುಂಬದ, ಜಾತಿಯ
>>> ಹಾಗೂ ಸಮುದಾಯದ ಉದ್ದಾರಕ್ಕೆ ದುಡಿದ ಹಿರಿಯರೇ ಇಲ್ಲಿನ ದೇವರು. ಸಾಂಸ್ಕೃತಿಕ ವೀರರು ಎನ್ನುವ
>>> ಹೆಸರಿನಲ್ಲಿ ಕರೆಯಲ್ಪಡುವ ಈ ವ್ಯಕ್ತಿಗಳು ಸಮೂಹದ ಪರವಾದ ಕೆಲಸ-ಕಾರ್‍ಯಗಳ ಮೂಲಕ ಗಮನ
>>> ಸೆಳೆದು ಪೂಜನೀಯರಾಗಿರುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಸಾವಿರಾರು ಜನ ಸಾಂಸ್ಕೃತಿಕ ವೀರರು
>>> ಬಾಳಿ ಬದುಕಿದ್ದನ್ನು ಕಾಣಬಹುದು. ಅದರಲ್ಲಿ ಮುಖ್ಯವಾಗಿ ಮಲೆಯಮಾದೇಶ್ವರ, ಮಂಟೇಸ್ವಾಮಿ,
>>> ಜುಂಜಪ್ಪ, ಮೈಲಾರಲಿಂಗ, ಗಾದ್ರಿ ಪಾಲನಾಯಕ, ಕುಮಾರರಾಮ, ಸೇವಾಲಾಲ, ಎಲ್ಲಮ್ಮ, ಸಿರಿ,
>>> ಕೋಟಿಚನ್ನಯ್ಯ  ಇಂಥ ಕೆಲವೇ ಕೆಲವರು ಮಾತ್ರ ನಮ್ಮ ಲಕ್ಷ್ಯದಲ್ಲಿದ್ದಾರೆ. ಇವರಲ್ಲದೆ ಇನ್ನು
>>> ನೂರಾರು ಜನ ಸಾಂಸ್ಕೃತಿಕ ವೀರರ ಕಥನಗಳು ಮತ್ತು ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯೊಳಗೆ
>>> ಪ್ರಚಲಿತದಲ್ಲಿವೆ. ಈ ಮಟ್ಟದ ನಾಯಕರಲ್ಲದೆ ಪ್ರತೀ ಬಳಿ, ಕುಟುಂಬಕ್ಕೂ ಹಿರಿಯರ ಪರಂಪರೆ
>>> ಇದ್ದು ಅವರು ತಾತ, ತಂದೆ, ಮೊದಲಾದ ನೆಲೆಗಳಲ್ಲಿ ದುಡಿದು ಶ್ರೇಷ್ಠರಾದ ಪೂಜನೀಯರಾಗಿದ್ದಾರೆ.
>>> ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ. ಕುಟುಂಬ ಹಾಗೂ ಸಮುದಾಯಗಳ ಹಿರಿಯನ್ನು ಪೂಜೆ ಮಾಡುವ
>>> ಕ್ರಮಗಳು ವಿಭಿನ್ನ. ಉದಾ: ಹಿರಿಯರ ಪ್ರತಿನಿಧಿಯಾಗಿ ಕಲ್ಲು, ಕೋಲು, ಮಗೆ ಮೊದಲಾದ
>>> ವಸ್ತುಗಳನ್ನು ವ್ಯಕ್ತಿಗಳೆಂದು ಪರಿಭಾವಿಸಿ ಪೂಜಿಸಲಾಗುತ್ತದೆ. ಇತ್ತೀಚೆಗೆ ಛಾಯಾಚಿತ್ರಗಳ
>>> ರೂಪದಲ್ಲಿ ಪೂಜಿಸುವ ಪದ್ಧತಿಗಳು ಚಾಲ್ತಿಗೆ ಬರುತ್ತಿವೆ.
>>> ಸಹಾಯಕ್ಕೆ ಬಂದ ವಸ್ತು ಪರಿಕರಗಳು
>>> ಜನಪದ ಧರ್‍ಮದ ಆರಾಧನೆಯ ಭಾಗವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ತನ್ನ ಬದುಕಿಗೆ
>>> ಸಹಕರಿಸಿದ ಸೂರ್ಯ-ಚಂದ್ರ-ಭೂಮಿ; ಭಯವನ್ನುಂಟು ಮಾಡಿದ ಹಲವಾರು ಪ್ರಕೃತಿ ವಿಕೋಪಗಳು ಇಂಥ
>>> ಮಹಾನ್ ಸಂಗತಿಗಳಲ್ಲದೆ ಕೃಷಿ ಮೊದಲಾದ ವಿವಿಧ ವೃತ್ತಿಯ ಜನ ಬಳಸುವ ಸಣ್ಣ ಸಣ್ಣ ಸಲಕರಣೆಗಳು
>>> ಕೂಡ ಪೂಜನೀಯವಾಗಿವೆ. ನೇಗಿಲು, ರಂಟೆ, ಕುಂಟೆ, ಕುಡ ಮೊದಲಾದ ವಸ್ತುಗಳಿಲ್ಲದ ರೈತ; ಕೋಲು,
>>> ಮಗೆಗಳಿಲ್ಲದ ಪುಶುಪಾಲಕ; ಉಳಿ, ಬೈರಿಗೆ, ಬಾಚಿ ಇಲ್ಲದ ಬಡಗಿ; ತಿಡಿ, ಬೆಂಕಿ, ಚಮ್ಮಟಿಗೆ
>>> ಇಲ್ಲದ ಕಮ್ಮಾರ; ಮೊರ ಕಸಬರಿಗೆ ಹೊಂದಿಲ್ಲದ ಕುಟುಂಬದ ಮಹಿಳೆಯರ ಕಾಯಕ ಅದೆಷ್ಟು ಕಷ್ಟಕರ
>>> ಎಂಬುದನ್ನು ಅರಿತರೆ ಇಲ್ಲಿನ ದೈವಾರಾಧನೆಯ ಸ್ವರೂಪದ ಹಿನ್ನೆಲೆ ಅರ್ಥವಾಗುತ್ತದೆ. ಹಾಗಾಗಿಯೇ
>>> ಪ್ರತೀಯೊಮದು ವೃತ್ತಿ ಪರಿಕರಗಳನ್ನು ದೈವ ಸ್ವರೂಪಿಯೆಂದು ಭಾವಿಸಿ ಪೂಜಿಸಿದ್ದಾನೆ. ಆ ಮೂಲಕ
>>> ಗೌರವಿಸಿದ್ದಾನೆ.
>>> ಜನಪದ ದೇವರ ವಿಶಿಷ್ಟ ಲಕ್ಷಣಗಳು
>>> ಕನ್ನಡ ಜನಪದ ಜೀವನದೊಳಗೆ ರೂಪುಗೊಂಡ ದೈವಗಳಲ್ಲಿ ಕಂಡು ಬರುವ ಗುಣಲಕ್ಷಣಗಳು ಹಲವಾರು.
>>> ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
>>> ದೇವರೂ ಮನುಷ್ಯರಂತೆ ಲೌಕಿಕ ಪ್ರಾಣಿ ! : ದೇವರುಗಳು ಕೂಡ ಮನುಷ್ಯನಂತೆ ಲೌಕಿಕ
>>> ಭಾವನೆಗಳನ್ನು ಹೊಂದಿವೆ. ಜನಸಮುದಾಯಗಳು ದೇವರಲ್ಲಿ ಮಾಡಿಕೊಳ್ಳುವ ಹರಕೆಯ ಸ್ವರೂಪಗಳು,
>>> ನಡೆಸುವ ಪೂಜಾವಿಧಾನಗಳು, ಬಳಸುವ ಪೂಜಾ ಸಾಮಗ್ರಿಗಳು ಇವೇ ಮೊದಲಾದ ಸಂಗತಿಗಳನ್ನು ಗಮನಿಸಿದರೆ
>>> ಮೇಲಿನ ಸಂಗತಿ ಸ್ಪಷ್ಟವಾಗುತ್ತದೆ. ಮನುಷ್ಯನ ಹಸಿವು,ಆಸೆ,ಆಮಿಷೆಗಳು ದೇವರಲ್ಲ್ಲಿಯೂ
>>> ಇರುತ್ತದೆ ಎಂಬ ತಿಳುವಳಿಕೆಯಿಂದ ಎರಡು ಬೇಟೆ ಕಡಿತೀನಿ, ೧೦೧ ಕಾಯಿ ಹೊಡಿತೀನಿ, ಸೀರೆ
>>> ಉಡುಸ್ತೀನಿ, ಆಭರಣ ಮಾಡುಸ್ತೀನಿ ಇವೇ ಮೊದಲಾದ ಹರಕೆಗಳನ್ನು ಈ ಹಿನ್ನೆಲೆಯಲ್ಲಿ
>>> ಗಮನಿಸಬೇಕಾಗುತ್ತದೆ.   ಅಷ್ಟೆ ಅಲ್ಲದೆ ಮನುಷ್ಯರಂತೆಯೇ ದೇವರುಗಳ ನಡುವೆ ಮಾನವೀಯ
>>> ಸಂಬಂಧಗಳು, ರಕ್ತ ಸಂಬಂಧದ ನೆಲೆಗಳು ಇರುತ್ತವೆ. ಸಾಮಾನ್ಯವಾಗಿ ದೇವರುಗಳ ಮಧ್ಯೆ
>>> ಗಂಡ-ಹೆಂಡತಿ, ಅಣ್ಣ-ತಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ ಸಂಬಂಧಗಳನ್ನು ಕಲ್ಪಿಸಿರುವುದು
>>> ಕಂಡುಬರುತ್ತದೆ.
>>> ಮುಖವಿಲ್ಲದ ದೇವರು : ಪ್ರಸ್ತುತ ಸಂದರ್ಭದಲ್ಲಿ ಶಿಷ್ಟ ಪರಂಪರೆಯ ಯಾವುದೇ ದೇವರನ್ನು
>>> ನೋಡಿದರೂ ಅವುಗಳಿಗೆ ಮನುಷ್ಯನ ಇಲ್ಲವೇ ಪ್ರಾಣಿಯ ಮುಖಗಳಿರುವುದನ್ನು ನೋಡಬಹುದು.
>>> ವಿಶೇಷವೆಂದರೆ ಮನುಷ್ಯರ ಮುಖಗಳಿರುವ ದೇವರು ಎಷ್ಟು ಶಕ್ತಿಶಾಲಿಯೆಂದು ಭಕ್ತರು
>>> ಭಾವಿಸುತ್ತಾರೋ ಅಷ್ಟು ಮುಖಗಳು ಅಷ್ಟು ಕೈಗಳು ಜಾಸ್ತಿಯಾಗುತ್ತವೆ. ಪ್ರಾಣಿಮುಖವಾದರೆ ಇಡೀ
>>> ದೇಹದ ಗಾತ್ರ ಮತ್ತು ಹಲ್ಲುಗಳು,ಉಗುರುಗಳು ಮೊದಲಾದ ಭಾಗಗಳು ಅಸಾಮಾನ್ಯ
>>> ಸ್ಥಿತಿಯಲ್ಲಿರುತ್ತವೆ. ಜನಪದ ಲೋಕದ ದೇವರುಗಳಿಗೆ ಈ ರೀತಿಯ ಯಾವುದೇ ಮುಖವಿರುವುದಿಲ್ಲ.
>>> ಮೇಲೆ ವಿವರಿಸಿದಂತೆ ಜನಪದರ ದೈವಗಳು ಒಂದು ರೀತಿಯ ಸಾಂಕೇತಿಕ ಗುರುತುಗಳು. ಉದಾಹರಣೆಗೆ ಕುಲದ
>>> ಹಾಗೂ ಕುಟುಂಬದ ಹಿರಿಯರನ್ನು ಪೂಜಿಸುವ ಕ್ರಮದಲ್ಲಿ ಆ ಹಿರಿಯರು ಬಳಸಿದ ಕೋಲು, ಆಭರಣ ಮತ್ತು
>>> ಆಯುಧ ಮತ್ಯಾವುದೋ ವಸ್ತುವಿನಲ್ಲಿ ಅವರ ರೂಪವನ್ನು ಕಂಡು ಅವುಗಳನ್ನೇ ಪೂಜಿಸುತ್ತಾರೆ.
>>> ಹಾಗೆಯೇ ಕುಟುಂಬದ ಹಿರಿಯರನ್ನು ಕೇವಲ ಒಂದು ಚಿಕ್ಕ ಕಲ್ಲಿನಲ್ಲಿ ಕಾಣುತ್ತಾರೆ. ಇನ್ನೂ
>>> ಪ್ರಕೃತಿ ಹಾಗೂ ವೃತ್ತಿಮೂಲದ ವಸ್ತುವಿಷಯಗಳು ನೇರ ಕಾಣುವ ರೂಪಗಳು.
>>> ಪೂಜಾರಿಗೆ ಜಾಗವಿಲ್ಲ : ಈ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಸ್ತೊತ್ರ,
>>> ಸ್ತುತಿ, ಪ್ರಾರ್ಥನೆಗಳ ನಿಲುವಿನ ಸಂಬಂಧವಿಲ್ಲ. ಹಾಗಾಗಿಯೇ ಜನಪದರ ದೇವರುಗಳಿಗೆ
>>> ಪ್ರತಿಯೊಬ್ಬ ಭಕ್ತನೂ ಕೂಡ ಒಂದರ್ಥದಲ್ಲಿ ಪೂಜಾರಿಯೇ. ವಿಶೇಷವೆಂದರೆ ಈ ವ್ಯವಸ್ಥೆಯಲ್ಲಿ ದೈವ
>>> ಮತ್ತು ಭಕ್ತರ ನಡುವೆ ಅರಸ-ಆಳು ರೀತಿಯ ಸಂಬಂಧಗಳಿರುವುದಿಲ್ಲ. ಅದರ ಹೊರತಾಗಿ ಇಲ್ಲಿ
>>> ಬಂಧುತ್ವ, ಸ್ನೇಹ ರೀತಿಯ ನಂಟು ಕಂಡುಬರುತ್ತದೆ. ಹಾಗಾಗಿಯೇ ಜನಪದರು ದೇವರಲ್ಲಿ ವರವನ್ನು
>>> ಬೇಡಿ ಪಡೆಯುವುದಕ್ಕಿಂತ ಒತ್ತಾಯಮಾಡಿ ಇಲ್ಲವೇ ಬೈದು ವರಪಡೆಯುವ ಕ್ರಮಗಳೇ ಹೆಚ್ಚು. ಈ ದೈವ
>>> ವ್ಯವಸ್ಥೆಯಲ್ಲಿ ಪುರೋಹಿತಶಾಹಿಯ ಪ್ರವೇಶವಿಲ್ಲ. ದೇವರು ಮತ್ತು ಭಕ್ತರ ನಡುವೆ ಪೂಜಾರಿಯ
>>> ಕೆಲಸವೇನು? ಎಂಬುದನ್ನು ಜನಪದ ಗರತಿಯೊಬ್ಬಳು ಹೀಗೆ ಪ್ರಶ್ನಿಸುತ್ತಾಳೆ :
>>>     ದೇವರಿಗೆ ಬಂದೀನಿ ದಾರಿ ಬಿಡು ಪೂಜಾರಿ|
>>>     ದೇವರಿಗೆ ನನಗೆ ಒಳಮಾತ | ಮೈಲಾರ ಲಿಂಗನ|
>>>               ಠಾವಿಗೋಗಿ ಕೈಯ ಮುಗಿದೇನ||
>>> ಜಂಗಮ ಸ್ವರೂಪಿ ದೇವರು ಮತ್ತು ಗುಡಿಗಳು : ಜನಪದ ದೇವರುಗಳಲ್ಲಿ ಹಲವು ದೇವರಿಗೆ ಗುಡಿಗಳೇ
>>> ಇಲ್ಲ. ಕೆಲವು ದೇವರಿಗೆ ಗುಡಿಗಳಿವೆ ಆದರೆ ಆ ಗುಡಿಗಳು ನಮ್ಮ ಶಿಷ್ಟ ಪರಂಪರೆಯ ದೇವರುಗಳ
>>> ಗುಡಿಗಳಂತೆ ನಿಂತ ಕಟ್ಟಡದ ಸ್ಮಾರಕಗಳಲ್ಲ. ಗುಡಿಗಳನ್ನು ಹೊಂದಿರದ ದೇವರುಗಳಿಗೆ ಸ್ವತಃ
>>> ಅಸ್ತಿತ್ವವಿಲ್ಲ. ಮನೆಯಲ್ಲಿರುವ ಮಗೆ ಮತ್ತು ಕೋಲು ಸಮಯ ಬಂದಾಗ ದೇವರಾಗಿ ನಂತರ ದಿನನಿತ್ಯದ
>>> ಉಪಯೋಗಕ್ಕೆ ಬಳಕೆಯಾಗುತ್ತವೆ. ಇನ್ನು ಸಗಣಿ ಸೂಕ್ತ ಸಂದರ್ಭಕ್ಕೆ ಗಣಪನಾಗಿ ನಂತರ ಒಲೆಗಿಡುವ
>>> ಬೆರಣಿಯಾಗುತ್ತದೆ. ಹಾಗೆಯೇ ಹೊನ್ನಾರು ಹೂಡುವ ರೈತನಿಗೆ ಅಲ್ಲೇ ಇರುವ ಕಲ್ಲು ಇದಕ್ಕಿದ್ದಂತೆ
>>> ದೇವರಾಗಿ ಪೂಜೆ ಮುಗಿದ ನಂತರ ಮತ್ತೆ ಅಲ್ಲೇ ಮಣ್ಣಲ್ಲಿ ಬೆರತು ಹೋಗುತ್ತದೆ.
>>> ಗುಡಿಗಳನ್ನು ಹೊಂದಿರುವ ಕೆಲವಾರು ದೇವರ ಗುಡಿಗಳು ದೇವರಿಗೆ ಇಲ್ಲಿ ನಿರ್ಮಾಣವಾಗಿರುವ
>>> ಗುಡಿಗಳು ಇದ್ದರೂ ಇವು ಚಲಿಸುವ ಜಂಗಮ ಸ್ವರೂಪಿಯಾದವು. ಬಹುತೇಕ ಜನಪದ ದೈವಗಳ ನೆಲೆಗಳು ಮರದ
>>> ನೆರಳು, ಮೂರು ಬಂಡೆಗಲ್ಲುಗಳಿಂದ ಕಟ್ಟಿದ ಗುಡಿಯಲ್ಲಿ, ಬಹಳವೆಂದರೆ ಸಮಯ ಸಂದರ್ಭಕ್ಕೆ
>>> ಅನುಗುಣವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದಾದ ಮರ ಮತ್ತು
>>> ಹುಲ್ಲಿನಿಂದ ಸೃಷ್ಟಿಸಿದ ಸುತ್ತು ಗುಡಿಸಲುಗಳಿರುತ್ತವೆ.
>>> ಜನಪದ ದೇವರ ಮಿತಿಗಳು
>>> ಈ ಸ್ವರೂಪದ ಜನಪದ ದೈವ ವ್ಯವಸ್ಥೆಯಲ್ಲಿ ದೋಷಗಳೇನು ಇಲ್ಲ ಎಂದರೆ ಒಂದು ಮುಖದ ಸತ್ಯವನ್ನು
>>> ಮಾತ್ರ ಹೇಳಿದಂತಾಗುತ್ತದೆ. ಹಾಗಾಗಿ ಇಲ್ಲಿರುವ ದೋಷಗಳನ್ನು ಗುರುತಿಸಿಕೊಳ್ಳುವ ಪ್ರಯತ್ನಗಳು
>>> ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಜನಪದರ ದೈವ ಕಲ್ಪನೆಯಲ್ಲಿ ಕಂಡು ಬರುವ
>>> ಕೆಲವು ಮಿತಿಗಳನ್ನು ಹೀಗೆ ಗುರುತಿಸಬಹುದು
>>> ೧. ಎಲ್ಲ ಸಮಸ್ಯೆಗಳಿಗೂ ದೇವರೇ ಕಾರಣವೆಂಬ ದೃಢವಾದ ನಂಬಿಕೆಯಿಂದ ಜನಪದ ಸಮುದಾಯಗಳು
>>> ಮೂಢನಂಬಿಕೆಯ ಕಡೆಗೆ ನಡೆದದ್ದು, ತಮ್ಮ ಪೂರ್ವಿಕರ  ಮೂಲ ಉದ್ದೇಶಗಳನ್ನು ಮರೆತು ಕುರುಡು
>>> ಆಚರಣೆಗಾರರಾಗಿ ರೂಪುಗೊಂಡಿದ್ದು( ಕಾರ್ಯಾಕಾರಣ ಸಂಬಂಧಗಳ ತಿಳಿವಿಲ್ಲದೆ ನಡೆಸಿದ ಆಚರಣೆಗಳು)
>>> ಉದಾ: ಉಪಯೋಗಕ್ಕಿಲ್ಲದ ವಸ್ತುಗಳನ್ನು ಪುಜಿಸಿದ್ದು- ಮೊರದ ಪೂಜೆ,
>>> ೨. ಜನಪದರ ದೇವರ ಬಗೆಗಿನ ದೃಢವಾದ ನಂಬಿಕೆಗಳು ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ
>>> ಸ್ವ ಇಚ್ಛೆಗಳನ್ನು ಪೂರೈಸಿಕೊಳ್ಳಲು ಅನವುಮಡಿಕೊಟ್ಟದ್ದು ( ದೇವದಾಸಿ ಪದ್ಧತಿ,
>>> ಬೆತ್ತಲೆಸೇವೆ ಇತ್ಯಾದಿ)
>>> ೩. ದೈವ ಸಂಬಂಧೀ ಆಚರಣೆಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಅಡ್ಡಿಯಾಗಿದ್ದು
>>> ಇಂಥ ಮಿತಿಗಳನ್ನು ದಾಟುವುದಾದರೆ ನಮ್ಮ ಪಾರಂಪರಿಕ ದೈವ ಕಲ್ಪನೆ ಅನುಕರಣಾ ಯೋಗ್ಯವಾದುದು.
>>> ಹಾಗೂ ಈಗಿನ ಸಂಕಷ್ಟದ ಕಾಲಕ್ಕೆ ಸಮರ್ಥವಾದ ಪರ್‍ಯಾಯ ವ್ಯವಸ್ಥೆಯೂ ಆಗುವುದರಲ್ಲಿ
>>> ಅನುಮಾನವಿಲ್ಲ
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CAJCvfyXcASuX-jRLNKK6P2xFd4AMUpuTOLKj4DGw2Yky%3D_NkRQ%40mail.gmail.com
>>> <https://groups.google.com/d/msgid/socialsciencestf/CAJCvfyXcASuX-jRLNKK6P2xFd4AMUpuTOLKj4DGw2Yky%3D_NkRQ%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABtYOUV5VMwvu41TuLCuA62mBg9hNQx0LYg-W6DqZW2EjbR8OQ%40mail.gmail.com
>> <https://groups.google.com/d/msgid/socialsciencestf/CABtYOUV5VMwvu41TuLCuA62mBg9hNQx0LYg-W6DqZW2EjbR8OQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz4VLJSi9fjk%3DLggfx9cob-J9%3DMHBsp%3Dp%3DTo%3DFPtMAzC5g%40mail.gmail.com
> <https://groups.google.com/d/msgid/socialsciencestf/CACwGsz4VLJSi9fjk%3DLggfx9cob-J9%3DMHBsp%3Dp%3DTo%3DFPtMAzC5g%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKfrRiSsroy9WcY5nJ%3DJ%2Bfgv6QQpCPDW5YS0fFubz%3D1zsXdYmw%40mail.gmail.com.
For more options, visit https://groups.google.com/d/optout.

Reply via email to