ಕುಗ್ರಾಮಗಳಿಗೊಂದು ಹೊಸ ಶಿಕ್ಷಣಕ್ರಮ ರೂಪಿಸೋಣ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಲ್ಲಿ ಕಾಲ ಕಳೆದಂತೆ ಗುಣಮಟ್ಟದ ಕೊರತೆ
ಹೆಚ್ಚುತ್ತಲೇ ಇದೆ.ಸರ್ಕಾರಿ ಶಾಲೆಗಳು ಅವಸಾನದ ಅಂಚಿಗೆ ತಲುಪಿವೆ.ಭವಿಷ್ಯದಲ್ಲಿ
ಮುಂದೊಂದುದಿನ ಸಾರ್ವಜನಿಕ ಪಠ್ಯಕ್ರಮ ಬದಲಾಯಿಸುವ ಮುನ್ಸೂಚನೆಗಳು ದಟ್ಟವಾಗಿ
ಗೊಚರಿಸುತ್ತಿವೆ.ಈಗಾಗಲೇ ದೊಡ್ಡಪಟ್ಟಣ ಜಿಲ್ಲೆ, ಮತ್ತು ರಾಜಧಾನಿ ಬೆಂಗಳುರು
ಕೇಂದ್ರವಾಗಿಟ್ಟುಕೊಂಡು ಇದರ  ಸುತ್ತಲಿನ ಸರಾಸರಿ ಐವತ್ತು ಎಪ್ಪತ್ತು ಕೀ. ಮೀ ದೂರದ
ವ್ಯಾಪ್ತಿಯ ಪ್ರದೇಶವನ್ನು ಖಾಸಗಿ ಶಿಕ್ಷಣ ವ್ಯವಸ್ಥೆ ಆಕ್ರವಿಸಿಕೊಂಡಿದ್ದಾಗಿದೆ.ಇವುಗಳ
ನಡುವೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿದ್ದು ಜೀವಹಿಡಿದು
ಕುಳಿತಿವೆ.ಇದಕ್ಕೆ ಹೊಣೆಗಾರರನ್ನಾಗಿ ಯಾರನ್ನೋ ಮಾಡಿ ದೂಷಿಸಲು ಸಾಧ್ಯವಿಲ್ಲ. ಬದಲಾದ
ಜಗತ್ತಿನಲ್ಲಿ ಜಾಗತೀಕರಣದ ದಟ್ಟಪ್ರಭಾವವಿದೆ.ಕ್ಷಿಪ್ರಗತಿಯಲ್ಲಿ ನೋಡು ನೋಡುತ್ತದ್ದಂತೆ
ನಗರಗಳು  ಎಲ್ಲಾ ಕ್ಷೇತ್ರಗಳಲ್ಲಿ ತೀರ್ವ ಬೆಳವಣಿಗೆಸಾದಿಸುತ್ತಿವೆ.ನಗರವಾಸಿಗಳು  ಗುಣಮಟ್ಟದ
ಶಿಕ್ಷಣದ ಸೇವಾಸೌಲ್ಯಗಳನ್ನು ನೀರಿಕ್ಷಿಸುತ್ತಿದ್ದಾರೆ ಹೊರತು , ತಮ್ಮ ಅಗತ್ಯ
ಪೂರೈಸುವಂತವರು ಖಾಸಗಿಯೊ ಅಥವಾ ಸರ್ಕಾರವೋ  ಎಂದು ಯೋಚಿಸಲಾರರು.ಇದು ಅವರಿಗೆ ಅಗತ್ಯವಿಲ್ಲದ
ಬೇಡದ ವಿಚಾರವೂ ಆಗಿದೆ.ಈ ಜಾಗತಿಕ ಸ್ಪರ್ಧೆ ಪೈಪೂಟಿಯಲ್ಲಿ ಗರಿಷ್ಟ ಸೇವೆ ವದಗಿಸಲು
ಖಾಸಗಿಯವರು ಸಾದಾ ಒಂದಿಲ್ಲೊಂದು ವಿಭಿನ್ನ ಹೊಸ ರಿಯಾಯಿತಿಗಳು ಗ್ರಾಹಕರ ಸೆಳೆಯುವ ಆಕರ್ಷಕ
ಸೌಲಭ್ಯ ಸೃಷ್ಟಿಸುತ್ತಿರುತ್ತಾರೆ.ಈ ಬೆಳವಣಿಗೆ ಪರೋಕ್ಷವಾಗಿ  ಶಿಕ್ಷಣ ಕೇತ್ರಕ್ಕೂ
ಬಂದಾಗಿದೆ.ಸರ್ಕಾರಿ ಶಾಲೆ ವರ್ಸಸ್ ಖಾಸಗಿ ಶಾಲೆಗಳ ನಡುವೆ ತೀರ್ವ ತರದ ಸ್ಪರ್ದೆ
ಏರ್ಪಡುತ್ತಿದೆ. ಜನರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಸೇವೆಗಳು ನೀಡುವದರತ್ತ
ವಾಲುತ್ತಿದ್ದಾರೆ.ಜನರಿಗೆ ಸರ್ಕಾರದಿಂದ ಮೀಸಲಾತಿ ಸೌಲಭಗಳು ಸರ್ಕಾರಿ ದೊಡ್ಡ ದೊಡ್ಡ
ಹುದ್ದೆಗಳು ಬೇಕು. ಆದರೆ  ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಮ್ಮ ಮಕ್ಕಳು ಕಲಿಯುವದು ಬೇಡ ಎಂಬ
ಭಾವನೆ ಬಹುಜನರಲ್ಲಿ ಮೂಡಿಯಾಗಿದೆ.ಸರ್ಕಾರಿ ಶಾಲೆಯಲ್ಲಿ ಓದಿಸಿದರೆ ನಮ್ಮ  ಘನತೆ ಗೌರವಕ್ಕೆ
ಸ್ವಾಭಿಮಾನಕ್ಕೆ ದಕ್ಕೆಬರುತ್ತದೆಂದು ಭಾವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ
ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ನಿರಿಕ್ಷಿತ ಉತ್ತಮ ಭವಿಷ್ಯ  ಒದಗಿಸಲು ಅಥವಾ ರೂಪಿಸಲು
ಸಾದ್ಯವಿಲ್ಲ.ಎಂಬ ಭಾವನೆ ಮೂಡಿದೆ.ಸರ್ಕಾರಿ ಶಾಲೆಗಳಿಗೆ  ಬರುವಂತ ಮಕ್ಕಳು ಆರ್ಥಿಕ
ಬಲಹೀನರು,ಶೊಷಿತರು,ತಳಸಮುದಾಯದವರು,ಹಿಂದುಳಿದವರು,ಕೆಳಸ್ತರದವರು,ಬಲಹೀನರು ಎಂಬ
ಸ್ತರವಿನ್ಯಾಸವು ಸಮೂದಾಯದಲ್ಲಿ ಮೂಡಿಯಾಗೆದೆ.
  ಹಳ್ಳಿಯ ಸರ್ಕಾರಿ ಶಾಲೆಗಳಿಗೂ ಮತ್ತು ನಗರದ ಖಾಸಗಿ ಶಾಲೆಗಳ ನಡುವೆ ಅಜಗಜಾಂತರ
ವ್ಯತ್ಯಾಸವಿದೆ.ಈ ವ್ಯತ್ಯಾಸ ಕಾಲಾಂತರದಲ್ಲಿ ಹೆಚ್ಚುತ್ತಲೇ ಹೋಗುವ ಸಾಧ್ಯತೆಗಳು
ನಿಚ್ಚಳವಾಗಿ ಗೊಚರಿಸುತ್ತಿವೆ.ಪರೋಕ್ಷವಾಗಿ ಸರ್ಕಾರವೇ ಇದಕ್ಕೆ ಬೆಂಬಲ ನೀಡಿದಂತಿದೆ
ಸರ್ಕಾರದ ಪ್ರಸ್ತೂತ ನೀತಿ ನಿರ್ಣಯಗಳು.ಸರ್ಕಾರವು ಗ್ರಾಮೀಣ ಪ್ರದೇಶದ ಸರ್ವತೋಮುಖ
ಅಭಿರುದ್ಧಿಯ ಹಿತದೃಷ್ಟಿಯಿಂದ ಜನೋಪಕಾರಿ ಯೋಜನೆಗಳು ಕಾಲಕಾಲಕ್ಕೆ ಪ್ರಕಟಿಸಿ
ಅನುಷ್ಟಾನಗೊಳಿಸುತ್ತಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ಗ್ರಾಮೀಣ ಪ್ರದೇಶದ ಸಾಕ್ಷರತೆಯ
ಹೆಚ್ಚಳಕ್ಕಾಗಿ,ಶಿಕ್ಷಣದ ಗುಣಮಟ್ಟದಪ್ರಗತಿಗಾಗಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ
ಹೆಚ್ಚಳಕ್ಕಾಗಿ,ಉತ್ತಮ ಮಾನವ ಸಂಪನ್ಮೂಲದ ಸೃಷ್ಟಿಗಾಗಿ,ವಿಭಿನ್ನ ಯೋಜನೆಗಳು ಕಾಲಕಾಲಕ್ಕೆ
ಹಾಕಿಕೊಳ್ಳುವದು.ಬದಲಾದ ಈ ದಿನಗಳಲ್ಲಿ ಗ್ರಾಮೀಣ ಜನರ ನಾಡಿ ಮಿಡಿತವರಿಯದೇ ಖಾಸಗಿ ಮತ್ತು
ಸರ್ಕಾರಿ ಶಾಲೆಗಳೆಂದು ಸರ್ಕಾರವೇ ವಿಭಜಿಸಿ , ವ್ಯತ್ಯಾಸ ಮಾಡಿ ಯೊಜನೆಗಳು ಅನುಷ್ಠಾನಗೊಳಿಸಿ
ಆವಾಂತರ  ಸೃಷ್ಟಿಸಿ,ಸರ್ಕಾರವೇ  ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದರೆ
ಅತೀಶಯೋಕ್ತಿಯಾಗಲಾರದು.
  ಸರ್ಕಾರ ಅನುದಾನದಲ್ಲೆ ನಡೆಯುವ ಹತ್ತಾರು ಹೊಸ ಹೊಸ ಹೆಸರಿನ ಶಾಲೆಗಳು ಇತ್ತಿಚಿನ
ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.ಇಂತ ಶಾಲೆಗಳಿಗೆ ಸೇರ ಬಯಸು ಮಕ್ಕಳಿಗೆ ಪೂರ್ವ
ಪರೀಕ್ಷೆ ನಡೆಸಿ ಮೀಸಲಾತಿ ಅನ್ವಯ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುವದು.ಇನ್ನು
ಆರ್ಥಿಕವಾಗಿ ಬಲಿಷ್ಟವಿರುವ ಪೋಷಕು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯಕಾಕಾಗಿ  ಖಾಸಗಿ
ಶಿಕ್ಷಣದತ್ತ,ಮುಖಮಾಡಿದ್ದರೆ.ಹೀಗೆ ಎಲ್ಲಡೆಯೂ ಹರಿದು ಹಂಚಿಹೋದ ಮಕ್ಕಳಲ್ಲಿ ಅಳಿದುಳಿದವರು
ಯಲ್ಲಿಯೂ ಸಲ್ಲದವರು , ಬೌದ್ದಿಕವಾಗಿ ತೀರ ಹಿಂದುಳಿದವರು ಕುಗ್ರಾಮದ ಗ್ರಾಮೀಣ ಮಕ್ಕಳು
ಸರ್ಕಾರಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ ಇಂಥ ಮಕ್ಕಳ ಪೋಷಕರು ಎಲ್ಲರೀತಿಯಿಂದಲೂ
ಹಿಂದುಳಿದು ಬಲಹಿನರಾಗಿರುತ್ತಾರೆ ಅದೆಷ್ಟೋ ಪೋಷಕರಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ
ಹಿತ ಚಿಂತನೆಯ ಅರಿವಿನ ಕೊರತೆ ಎದ್ದು ಕಾಣುವದು.ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಹಾಗೊ  ಹೀಗೊ
ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಹದಿನಾಲ್ಕು ವರ್ಷ ಪೂರೈಸಿಕೊಂಡು ಹೈಸ್ಕೂಲಿಗೆ
ಬರುತ್ತಾರೆ.ಆದರೆ,ಸರಾಸರಿಯಾಗಿ ಹೆಚ್ಚಿನ ಮಕ್ಕಳಲ್ಲಿ ಮೂಲಸಾಮರ್ಥಗಳ ಕೊರತೆ ಎದ್ದು
ಕಾಣುತ್ತದೆ.ಸಾಮಾನ್ಯವಾಗಿ ಇಂಥ ಮಕ್ಕಳು ಬಹಳಷ್ಟು ಹಿಂದುಳಿದ ಜಾತಿಯ, ಆರ್ಥಿಕ ಬಲಹಿನ,
ಅನಕ್ಷರಸ್ಥ ದುಷ್ಚಟಗಳಿಗೆ ದಾಸರಾದ ,ಕೂಲಿ ಮಾಡುವ, ಮೂಲಭುತ ಅವಷ್ಯಕತೆಗಳೆ ಇಲ್ಲದಂತ
ಕೌಟುಂಬಿಕ ಹಿನ್ನಲೆಯುಳ್ಳವರಾಗಿರುತ್ತಾರೆ. ಅದೆಷ್ಟೋ ಮಕ್ಕಳು ನಾಲ್ಕಾರು ಕೀ.ಮೀ ನಿಂದ
ಬರುತ್ತಾರೆ.ಮನೆಯಲ್ಲಿ ಕೆಲಸ ಕಾರ್ಯದ ಹೊರೆ ಬೇರೆ.ಕೆಲವೊಮ್ಮೆ ರಜೆ ಸಿಕ್ಕರೇ ಸಾಕು ಕೂಲಿ
ನಾಲಿ ಎಂದು ಹೊರಟು ಹೋಗುತ್ತಾರೆ.ಕೆಲವರು ಅಪೌಷ್ಠಿಕತೆಯಿಂದ ನರಳಿ,.ಸದೃಢ ದೇಹ,ಆರೋಗ್ಯವಂತರೂ
ಆಗಿರಲಾರರೂ.ಇವರು ವರ್ಷಪೂರ್ತಿ ಶಾಲೆಗೆ ಬಾರದೇ ಪದೆಪದೆ ಅನಧಿಕೃತವಾಗಿ ಗೈರು ಆಗುತ್ತಾರೆ.ಇಥ
ಹತ್ತಾರೂ ವಯಕ್ತಿಕ ಸಾಮಾಜಿಕ ಆರ್ಥಿಕ ಸಮಸ್ಯೆಗಳಿರುವ ಮಕ್ಕಳಿಂದ ಯಾವ ಗುಣಮಟ್ಟದ ಕಲಿಕೆ
ನಿರೀಕ್ಷಿಸಲಿ ಸಾಧ್ಯವಿದೆ? ಹತ್ತಾರು ಸಮಸ್ಯಗಳಿಂದ ಬಳಲುವ ಮಕ್ಕಳನ್ನು ರಾಜ್ಯಮಟ್ಟದ
ಪಬ್ಲಿಕ್ ಪರೀಕ್ಷೆ ಬರೆಯಲು ಸಜ್ಜುಗೊಳಿಸುವದು ಶಿಕ್ಷಕನಿಗೆ ನಿಜಕ್ಕು ಸವಾಲಿನ
ಸಂಗತಿ.ದುರ್ಬಲ ಮಕ್ಕಳನ್ನು ಸಬಲಮಕ್ಕಳೊಂದಿಗೆ ಹೋಲಿಸುವದಂತೂ ಮಹಾವಂಚನೆಯೇ ಸರಿ.
  ತೀವ್ರ ವತ್ತಡದ ವೇಗದ ಸ್ಪರ್ದಾ ಪ್ರಪಂಚದಲ್ಲಿ ಮೂಲಭುತ ಸೌಲಭ್ಯಗಳೇ ಮರಿಚಿಕೆಯಾದ ಹಳ್ಳಿಯ
ಸ್ಪರ್ಧಾಳು(ಮಕ್ಕಳು)ಉತ್ಕೃಷ್ಟ ಸೌಲಭ್ಯದ ಗುಣಮಟ್ಟದ ಶಿಕ್ಷಣ ಪಡೆಯಲು ಹಂಬಲಿಸಲು
ಸಾಧ್ಯವೇ?ನಗರದ ಬಲಿಷ್ಟ ಸಾಮರ್ಥ್ಯ ಸ್ಪರ್ದಾರ್ಥಿ ಜೊತೆಗೆ ಸಣಸಲು ಭವಿಷ್ಯದ ಉತ್ತಮ ಬದುಕು
ಕಟ್ಟಿಕೊಳ್ಳಲು ಸಾಧ್ಯವೆ? ರಾಜ್ಯಾದ್ಯಂತ ಏಕರೂಪದ ಪಠ್ಯಕ್ರಮರೂಪಿಸಿ ಭಿನ್ನ ಮಾಧ್ಯಮದಲ್ಲಿ
ಕಲಿಯಲು ಅವಕಾಶನೀಡಿ ಖಾಸಗಿ ಸರ್ಕಾರಿ ಮತ್ತು ವಿಷೇಶ ಸರ್ಕಾರಿ ಶಾಲೆ ಪ್ರಾರಂಭಿಸಿ, ಎಲ್ಲ
ಮಕ್ಕಳೂ ಸಮಾನರೆಂದು ಭಾವಿಸಿ ಸಾರ್ವತ್ರಿಕವಾಗಿ ಒಂದೇ ಪರೀಕ್ಷೆ ಏರ್ಪಡಿಸಿ ಪಲಿತಾಂಶದಲ್ಲಿ
ಎಲ್ಲರನ್ನು ಸಮಾನರೆಂದು ಭಾವಿಸುವದು ಎಷ್ಟು ಸರಿ?ಸರ್ಕಾರವೇ ಪರೋಕ್ಷವಾಗಿ ಕುಗ್ರಾಮಗಳ
ಮಕ್ಕಳನ್ನು ವಂಚಿಸುತ್ತಿದೆ.ನಗರ ಮತ್ತು ಗ್ರಾಮೀಣ ಸಮುದಾಯದ ಕಂದಕ ಹೆಚ್ಚಿಸುತ್ತಿದೆ.
  ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಟವಾದ ಸಮುದಾಯಗಳ ತಾಳಕ್ಕೆ ತಕ್ಕಂತೆ
ಕುಣಿಯುವ ಭ್ರಷ್ಟ ಬಂಢ ಅಧಿಕಾರಿವರ್ಗ ನೀತಿ ನಿಯಮಗಳು ಗಾಳಿಗೆ ತೂರಿ  ಗ್ರಾಮೀಣ ಸಮುದಾಯದ
ಆಸುಪಾಸಿನಲ್ಲಿ ಈಗಾಗಲೇ ಎರಡು ಮೂರು ಸರ್ಕಾರಿ ಅಥವಾ ಖಾಸಗಿ ಶಾಲೆಗಳು ಕಾರ್ಯ
ನಿರ್ವಹಿಸುತ್ತದ್ದಾಗ್ಯೂ, ಹೊಸದೊಂದು ಶಾಲೆ ಅನುಮತಿ ನೀಡುತ್ತಾರೆ.ಇದರಿಂದ ಹಳ್ಳಿಯ
ಮಕ್ಕಳಿಗೆ ಇನ್ನಷ್ಟು ವಂಚನೆ ಮಾಡಿದಂತೆಯೇ.ಕಾಲಕ್ರಮೇಣ ಗ್ರಾಮೀಣ  ಶಿಕ್ಷಣವೆವಸ್ಥೆಯೂ
ಸಂಪೂರ್ಣ ಖಾಸಗಿ ವ್ಯವಸ್ಥೆಯ ಕಬಂದ ಬಾಹುವಿನ ಹಿಡಿತಕ್ಕೊಳಪಟ್ಟು ವ್ಯಾಪಾರಿಕರಣಗೊಳ್ಳುವ
ಮುನಸೂಚನೆಗಳು ದಟ್ಟವಾಗಿ ಗೊಚರಿಸುತ್ತಿವೆ.ಈಗಾಗಲೇ ಉಳ್ಳವರಿಗೆ ಉತೃಷ್ಟ ಉತ್ತಮ ಗುಣಮಟ್ಟದ
ಶಿಕ್ಷಣ ಎಂನ್ನುವಂತ ವಾತಾವರ್ಣವಿದೆ. ಖಾಸಗಿ ಶಾಲೆಗಳು ಪ್ರಸ್ತುತ ಪೋಷಕರು  ಮಕ್ಕಳ
ಮನೋಧೊರಣೆಗಳ ನಾಡಿ ಮಿಡಿತವರಿತು ಅವರ ಬಯಕೆ ಬೇಡಿಕೆಗಳಿಗನುಸಾರ ಸೇವಾಸೌಲಭ್ಯಗಳು, ತಮ್ಮದೆ
ಪಠ್ಯಪುಸ್ತಕ ,ಶುಲ್ಕವಸುಲಿ , ಸಮವಸತ್ರ.... ತಮ್ಮದೇ ನೀತಿ ನಿಯಮಗಳು ಎಲ್ಲದರಲ್ಲೂ ಎಲ್ಲ
ಹಂತಗಳಲ್ಲೂ ಸ್ವಾಯಿತ್ತತೆ.ಇಲ್ಲಿ ಸರ್ಕಾರದ ನೀತಿ ನಿಯಮಗಳಿಗೆ ಕವಡೆ ಕಿಮ್ಮತ್ತಿಲ್ಲ. ಹೀಗೆ
ರಾಜ್ಯದ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಖಾಸಗಿ ಶಿಕ್ಷಣದ ಬೇಡಿಕೆ ದಿನೇ ದಿನೇ
ಹೆಚ್ಚುತ್ತಲೇ ಇದೆ.ಈ ಖಾಸಗಿ ಶಿಕ್ಷಣ ವ್ಯವಸ್ತೆಯ ವಿರುದ್ಧ ಖಂಡಿತವಾಗಿಯೂ ಸರ್ಕಾರಿ
ವ್ಯವಸ್ಥೆ ಪ್ರತಿಸ್ಪರ್ದಿಯಾಗಿ ನಿಲ್ಲಲೂ ಸಾಧ್ಯವಿಲ್ಲ ಎಂಬ ವಾತಾವರ್ವ
ನಿರ್ಮಾಣವಾಗುತ್ತಿದೆ.ಸರ್ಕಾರದ ನೀತಿ ನಿಯಮಗಳಡಿಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿ
ಶಾಲೆಗಳಿಗೆ ನುರಾರು ನ್ಯೂನ್ಯತೆ ಮಿತಿಗಳಿವೆ.ಕಾನುನಿನ ಚೌಕಟ್ಟಿದೆ.ಭ್ರಸ್ಟತನ,ಅದಿಕಾರದ
ದುರುಪಯೋಗ ದಬ್ಬಾಳಿಕೆ ಸ್ವಹಿತಾಸಕ್ತಿ ಸ್ವಜನಪಕ್ಷಪಾತ,ಯೋಜನೆಗಳ ಅನುಷ್ಠಾನದಲ್ಲಿ
ಇಚ್ಛಾಶಕ್ತಿಯ ಕೊರತೆ ಸಮಯಕ್ಕೆ ಬಾರದ ಆರ್ಥಿಕ ಸಹಾಯಧನ ಭ್ರಸ್ಟಾಚಾರ ಒಂದೆ ಎರಡೇ ಇವುಗಳ
ಪಟ್ಟಿ ಮಾಡಿದರೆ ಹನುಮಂತನ ಬಾಲವೇ ಸರಿ.ಇಂಥ ಸಂದಿಗ್ಧ ಪರಸ್ತಿತಿಯಲ್ಲಿ ಬೇಕಾಬಿಟ್ಟಿ ಎಂದು
ಮಲತಾಯಿ ಮಕ್ಕಳೆಂದು ಎರಡನೇ ದರ್ಜೆಯ ಪ್ರಜೆಗಳಂತೆ ಕುಗ್ರಾಮಗಳ ಮಕ್ಕಳನ್ನು
ಪರಿಗಣಿಸಿದರೆ,ಕಾಲಿಗೆ ಕಟ್ಟಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಹೇಳಿದಂತೆ.
ಅದೆಷ್ಟೋ ಕುಗ್ರಾಮಗಳಿಗೆ ಇಂದಿಗೂ ಮೂಲಭೂತ ಸೌಲಭ್ಯಗಳು ಮರಿಚಿಕೆಯೆ.ಸರಿಯಾದ ಕಾಲುನಡಿಗೆಯ
ರಸ್ತೆ ವಿದ್ಯುತ್ ಸಂಪರ್ಕ ವಿಲ್ಲ.ಈ ತಳಸಮುದಾಯಗಳ ಆಚರಣೆ ಹಬ್ಬ ಹರಿದಿನಗಳು ವೃತ್ತಿ
ಪ್ರವೃತ್ತಿಗಳೆಲ್ಲವೂ ವ್ಯವಸಾಯದ ಸುತ್ತಲೂ ಕೇಂದ್ರಿಕೃತವಾದಂತವುಗಳು.ನಿತ್ಯದ ಬದುಕು ಅತ್ಯಂತ
ಸರಳ. ಬಯಕೆ ಬೇಡಿಕೆಗಳು ಅತ್ಯಲ್ಪ. ದೊಡ್ಡ ನಗರಗಳಂತೆ ವೈಭವದ ಬದುಕಾಗಲಿ
ದುಂದುವೆಚ್ಛವಾಗಲಿ,ಕೊಳ್ಳುಬಾಕತನವಾಗಲಿ,ಹಣದಹಪಹಪಿತನವಾಗಲಿ,ಬಹುಭಾಷೆಯಗಲಿ,ವಿಭಿನ್ನ
ಸಂಸ್ಕೃತಿಯಾಗಲೀ, ಇವೆಲ್ಲವುಗಳಿಂದ ಬಹುದೂರ.ಇದಾವುದೂ ಅವರಿಗೆ ಅಗತ್ಯವೂ ಇಲ್ಲ.ನಗರ ಮತ್ತು
ಗ್ರಾಮಗಳ  ವ್ಯತ್ಯಾಸದ ಜನಜೀವನ ಕ್ರಮವರಿಯದೆ, ಎಲ್ಲರಿಗೂ ಏಕರೂಪದ ಪರೀಕ್ಷೆನಡೆಸಿ
ಬರವಣಿಗೆಯಾದರಿತ ಮೌಲ್ಯಮಾಪನದ ಅಂಕಗಳಾದರಿಸಿ ಮಕ್ಕಳ ಜ್ಞಾನ ಕೌಶಲ್ಯ ಅನುಭವ ಅಳೆಯಲು
ಸಾಧ್ಯವಿಲ್ಲ.ಗ್ರಾಮೀಣ ಮಕ್ಕಳ ಶಿಕ್ಷಣಪ್ರಗತಿಗೆ ಸರ್ವತೋಮುಖ ಬೆಳವಣಿಗೆಗೆ ಅವರ ಪ್ರಾದೇಶಿಕ
ಅಗತ್ಯತೆಗೆ ತಕ್ಕಂತೆ ಸಂಪದಾಯಿಕ ಶಿಕ್ಷಣದ ಹೊರತಾಗಿ ಆಸಕ್ತಿ ಅಭಿರುಚಿಗೆ ತಕ್ಕಂತೆ ಜೀವನ
ನಿರ್ವಹಣೆಗೆ ಪುರಕವಾದ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಕೊಡಲು ಸರ್ಕಾರ ಇದರತ್ತ ಚಿಂತನೆ ಮಾಡುವ
ಸೂಕ್ತ ಕಾಲ ಒದಗಿ ಬಂದಿದೆ. ಬೌದ್ಧಿಕ ಶೈಕ್ಷಣಿಕ ಸಾಮಾಜಿಕ ಆರ್ಥಿಕ ವಾಗಿ ಹಿಂದುಳಿದ
ಕುಟುಂಬಗಳು ಸ್ವಾವಲಂಬನೆಸಾದಿಸಲು ಉದ್ಯೋಗವಾದರಿತ   ಕೌಶಲ್ಯವಾದರಿತ ಶಿಕ್ಷಣ ಪ್ರೌಢಶಾಲಾ
ಹಂತದಲ್ಲೇ  ಶಿಕ್ಷಣ ಅಗತ್ಯವಾಗಿ  ಹಳ್ಳಿ ಮಕ್ಕಳಿಗೆ ಜರುರಾಗಿ  ಬೇಕಿದೆ.ಈ ಮೂಲಕ ಗ್ರಾಮೀಣ
ತಳಸಮುದಾಯದ ಆರ್ಥಿಕ ಸ್ವಾವಲಂಬನೆ ಜೊತೆಗೆ ಸರ್ವತೋಮುಖ ಅಭಿವೃದ್ಧಿಯ ಕನಸು
ಕಾಣಬೇಕಿದೆ.ಔಪಚಾರಿಕ ಏಕರೂಪದ ಪಠ್ಯಕ್ರಮ ಮತ್ತು ಸಾರ್ವತ್ರಿಕ ಪರೀಕ್ಷೆ ಬದಲಿಗೆ ಹೊಸದೊಂದು
ಹಾದಿ ಹುಡುಕಬೆಕಿದೆ.
           *****************
ಪ್ರಹ್ಲಾದ್. ವಾ. ಪತ್ತಾರ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAOouN1xpvFDprpPsZmCV1e9Pc9BduFakhbwRsDUG9rPR1vZzCw%40mail.gmail.com.
For more options, visit https://groups.google.com/d/optout.

Reply via email to