ಈ  ಚಿಂತನೆ  ಪರಿಣಾಮಕಾರಿಯಾದದ್ದು .  ಲೇಖನದಲ್ಲಿ  ಕೆಲವು  ಕಹಿ ಸತ್ಯಗಳೂ  ಇವೆ,.


*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-02-22 21:03 GMT+05:30 Pralhada vssudeva pattar <
[email protected]>:

> ಕುಗ್ರಾಮಗಳಿಗೊಂದು ಹೊಸ ಶಿಕ್ಷಣಕ್ರಮ ರೂಪಿಸೋಣ.
>
> ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಲ್ಲಿ ಕಾಲ ಕಳೆದಂತೆ ಗುಣಮಟ್ಟದ ಕೊರತೆ
> ಹೆಚ್ಚುತ್ತಲೇ ಇದೆ.ಸರ್ಕಾರಿ ಶಾಲೆಗಳು ಅವಸಾನದ ಅಂಚಿಗೆ ತಲುಪಿವೆ.ಭವಿಷ್ಯದಲ್ಲಿ
> ಮುಂದೊಂದುದಿನ ಸಾರ್ವಜನಿಕ ಪಠ್ಯಕ್ರಮ ಬದಲಾಯಿಸುವ ಮುನ್ಸೂಚನೆಗಳು ದಟ್ಟವಾಗಿ
> ಗೊಚರಿಸುತ್ತಿವೆ.ಈಗಾಗಲೇ ದೊಡ್ಡಪಟ್ಟಣ ಜಿಲ್ಲೆ, ಮತ್ತು ರಾಜಧಾನಿ ಬೆಂಗಳುರು
> ಕೇಂದ್ರವಾಗಿಟ್ಟುಕೊಂಡು ಇದರ  ಸುತ್ತಲಿನ ಸರಾಸರಿ ಐವತ್ತು ಎಪ್ಪತ್ತು ಕೀ. ಮೀ ದೂರದ
> ವ್ಯಾಪ್ತಿಯ ಪ್ರದೇಶವನ್ನು ಖಾಸಗಿ ಶಿಕ್ಷಣ ವ್ಯವಸ್ಥೆ ಆಕ್ರವಿಸಿಕೊಂಡಿದ್ದಾಗಿದೆ.ಇವುಗಳ
> ನಡುವೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿದ್ದು ಜೀವಹಿಡಿದು
> ಕುಳಿತಿವೆ.ಇದಕ್ಕೆ ಹೊಣೆಗಾರರನ್ನಾಗಿ ಯಾರನ್ನೋ ಮಾಡಿ ದೂಷಿಸಲು ಸಾಧ್ಯವಿಲ್ಲ. ಬದಲಾದ
> ಜಗತ್ತಿನಲ್ಲಿ ಜಾಗತೀಕರಣದ ದಟ್ಟಪ್ರಭಾವವಿದೆ.ಕ್ಷಿಪ್ರಗತಿಯಲ್ಲಿ ನೋಡು ನೋಡುತ್ತದ್ದಂತೆ
> ನಗರಗಳು  ಎಲ್ಲಾ ಕ್ಷೇತ್ರಗಳಲ್ಲಿ ತೀರ್ವ ಬೆಳವಣಿಗೆಸಾದಿಸುತ್ತಿವೆ.ನಗರವಾಸಿಗಳು  ಗುಣಮಟ್ಟದ
> ಶಿಕ್ಷಣದ ಸೇವಾಸೌಲ್ಯಗಳನ್ನು ನೀರಿಕ್ಷಿಸುತ್ತಿದ್ದಾರೆ ಹೊರತು , ತಮ್ಮ ಅಗತ್ಯ
> ಪೂರೈಸುವಂತವರು ಖಾಸಗಿಯೊ ಅಥವಾ ಸರ್ಕಾರವೋ  ಎಂದು ಯೋಚಿಸಲಾರರು.ಇದು ಅವರಿಗೆ ಅಗತ್ಯವಿಲ್ಲದ
> ಬೇಡದ ವಿಚಾರವೂ ಆಗಿದೆ.ಈ ಜಾಗತಿಕ ಸ್ಪರ್ಧೆ ಪೈಪೂಟಿಯಲ್ಲಿ ಗರಿಷ್ಟ ಸೇವೆ ವದಗಿಸಲು
> ಖಾಸಗಿಯವರು ಸಾದಾ ಒಂದಿಲ್ಲೊಂದು ವಿಭಿನ್ನ ಹೊಸ ರಿಯಾಯಿತಿಗಳು ಗ್ರಾಹಕರ ಸೆಳೆಯುವ ಆಕರ್ಷಕ
> ಸೌಲಭ್ಯ ಸೃಷ್ಟಿಸುತ್ತಿರುತ್ತಾರೆ.ಈ ಬೆಳವಣಿಗೆ ಪರೋಕ್ಷವಾಗಿ  ಶಿಕ್ಷಣ ಕೇತ್ರಕ್ಕೂ
> ಬಂದಾಗಿದೆ.ಸರ್ಕಾರಿ ಶಾಲೆ ವರ್ಸಸ್ ಖಾಸಗಿ ಶಾಲೆಗಳ ನಡುವೆ ತೀರ್ವ ತರದ ಸ್ಪರ್ದೆ
> ಏರ್ಪಡುತ್ತಿದೆ. ಜನರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಸೇವೆಗಳು ನೀಡುವದರತ್ತ
> ವಾಲುತ್ತಿದ್ದಾರೆ.ಜನರಿಗೆ ಸರ್ಕಾರದಿಂದ ಮೀಸಲಾತಿ ಸೌಲಭಗಳು ಸರ್ಕಾರಿ ದೊಡ್ಡ ದೊಡ್ಡ
> ಹುದ್ದೆಗಳು ಬೇಕು. ಆದರೆ  ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಮ್ಮ ಮಕ್ಕಳು ಕಲಿಯುವದು ಬೇಡ ಎಂಬ
> ಭಾವನೆ ಬಹುಜನರಲ್ಲಿ ಮೂಡಿಯಾಗಿದೆ.ಸರ್ಕಾರಿ ಶಾಲೆಯಲ್ಲಿ ಓದಿಸಿದರೆ ನಮ್ಮ  ಘನತೆ ಗೌರವಕ್ಕೆ
> ಸ್ವಾಭಿಮಾನಕ್ಕೆ ದಕ್ಕೆಬರುತ್ತದೆಂದು ಭಾವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ
> ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ನಿರಿಕ್ಷಿತ ಉತ್ತಮ ಭವಿಷ್ಯ  ಒದಗಿಸಲು ಅಥವಾ ರೂಪಿಸಲು
> ಸಾದ್ಯವಿಲ್ಲ.ಎಂಬ ಭಾವನೆ ಮೂಡಿದೆ.ಸರ್ಕಾರಿ ಶಾಲೆಗಳಿಗೆ  ಬರುವಂತ ಮಕ್ಕಳು ಆರ್ಥಿಕ
> ಬಲಹೀನರು,ಶೊಷಿತರು,ತಳಸಮುದಾಯದವರು,ಹಿಂದುಳಿದವರು,ಕೆಳಸ್ತರದವರು,ಬಲಹೀನರು ಎಂಬ
> ಸ್ತರವಿನ್ಯಾಸವು ಸಮೂದಾಯದಲ್ಲಿ ಮೂಡಿಯಾಗೆದೆ.
>   ಹಳ್ಳಿಯ ಸರ್ಕಾರಿ ಶಾಲೆಗಳಿಗೂ ಮತ್ತು ನಗರದ ಖಾಸಗಿ ಶಾಲೆಗಳ ನಡುವೆ ಅಜಗಜಾಂತರ
> ವ್ಯತ್ಯಾಸವಿದೆ.ಈ ವ್ಯತ್ಯಾಸ ಕಾಲಾಂತರದಲ್ಲಿ ಹೆಚ್ಚುತ್ತಲೇ ಹೋಗುವ ಸಾಧ್ಯತೆಗಳು
> ನಿಚ್ಚಳವಾಗಿ ಗೊಚರಿಸುತ್ತಿವೆ.ಪರೋಕ್ಷವಾಗಿ ಸರ್ಕಾರವೇ ಇದಕ್ಕೆ ಬೆಂಬಲ ನೀಡಿದಂತಿದೆ
> ಸರ್ಕಾರದ ಪ್ರಸ್ತೂತ ನೀತಿ ನಿರ್ಣಯಗಳು.ಸರ್ಕಾರವು ಗ್ರಾಮೀಣ ಪ್ರದೇಶದ ಸರ್ವತೋಮುಖ
> ಅಭಿರುದ್ಧಿಯ ಹಿತದೃಷ್ಟಿಯಿಂದ ಜನೋಪಕಾರಿ ಯೋಜನೆಗಳು ಕಾಲಕಾಲಕ್ಕೆ ಪ್ರಕಟಿಸಿ
> ಅನುಷ್ಟಾನಗೊಳಿಸುತ್ತಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ಗ್ರಾಮೀಣ ಪ್ರದೇಶದ ಸಾಕ್ಷರತೆಯ
> ಹೆಚ್ಚಳಕ್ಕಾಗಿ,ಶಿಕ್ಷಣದ ಗುಣಮಟ್ಟದಪ್ರಗತಿಗಾಗಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ
> ಹೆಚ್ಚಳಕ್ಕಾಗಿ,ಉತ್ತಮ ಮಾನವ ಸಂಪನ್ಮೂಲದ ಸೃಷ್ಟಿಗಾಗಿ,ವಿಭಿನ್ನ ಯೋಜನೆಗಳು ಕಾಲಕಾಲಕ್ಕೆ
> ಹಾಕಿಕೊಳ್ಳುವದು.ಬದಲಾದ ಈ ದಿನಗಳಲ್ಲಿ ಗ್ರಾಮೀಣ ಜನರ ನಾಡಿ ಮಿಡಿತವರಿಯದೇ ಖಾಸಗಿ ಮತ್ತು
> ಸರ್ಕಾರಿ ಶಾಲೆಗಳೆಂದು ಸರ್ಕಾರವೇ ವಿಭಜಿಸಿ , ವ್ಯತ್ಯಾಸ ಮಾಡಿ ಯೊಜನೆಗಳು ಅನುಷ್ಠಾನಗೊಳಿಸಿ
> ಆವಾಂತರ  ಸೃಷ್ಟಿಸಿ,ಸರ್ಕಾರವೇ  ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದರೆ
> ಅತೀಶಯೋಕ್ತಿಯಾಗಲಾರದು.
>   ಸರ್ಕಾರ ಅನುದಾನದಲ್ಲೆ ನಡೆಯುವ ಹತ್ತಾರು ಹೊಸ ಹೊಸ ಹೆಸರಿನ ಶಾಲೆಗಳು ಇತ್ತಿಚಿನ
> ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.ಇಂತ ಶಾಲೆಗಳಿಗೆ ಸೇರ ಬಯಸು ಮಕ್ಕಳಿಗೆ ಪೂರ್ವ
> ಪರೀಕ್ಷೆ ನಡೆಸಿ ಮೀಸಲಾತಿ ಅನ್ವಯ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುವದು.ಇನ್ನು
> ಆರ್ಥಿಕವಾಗಿ ಬಲಿಷ್ಟವಿರುವ ಪೋಷಕು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯಕಾಕಾಗಿ  ಖಾಸಗಿ
> ಶಿಕ್ಷಣದತ್ತ,ಮುಖಮಾಡಿದ್ದರೆ.ಹೀಗೆ ಎಲ್ಲಡೆಯೂ ಹರಿದು ಹಂಚಿಹೋದ ಮಕ್ಕಳಲ್ಲಿ ಅಳಿದುಳಿದವರು
> ಯಲ್ಲಿಯೂ ಸಲ್ಲದವರು , ಬೌದ್ದಿಕವಾಗಿ ತೀರ ಹಿಂದುಳಿದವರು ಕುಗ್ರಾಮದ ಗ್ರಾಮೀಣ ಮಕ್ಕಳು
> ಸರ್ಕಾರಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ ಇಂಥ ಮಕ್ಕಳ ಪೋಷಕರು ಎಲ್ಲರೀತಿಯಿಂದಲೂ
> ಹಿಂದುಳಿದು ಬಲಹಿನರಾಗಿರುತ್ತಾರೆ ಅದೆಷ್ಟೋ ಪೋಷಕರಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ
> ಹಿತ ಚಿಂತನೆಯ ಅರಿವಿನ ಕೊರತೆ ಎದ್ದು ಕಾಣುವದು.ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಹಾಗೊ  ಹೀಗೊ
> ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಹದಿನಾಲ್ಕು ವರ್ಷ ಪೂರೈಸಿಕೊಂಡು ಹೈಸ್ಕೂಲಿಗೆ
> ಬರುತ್ತಾರೆ.ಆದರೆ,ಸರಾಸರಿಯಾಗಿ ಹೆಚ್ಚಿನ ಮಕ್ಕಳಲ್ಲಿ ಮೂಲಸಾಮರ್ಥಗಳ ಕೊರತೆ ಎದ್ದು
> ಕಾಣುತ್ತದೆ.ಸಾಮಾನ್ಯವಾಗಿ ಇಂಥ ಮಕ್ಕಳು ಬಹಳಷ್ಟು ಹಿಂದುಳಿದ ಜಾತಿಯ, ಆರ್ಥಿಕ ಬಲಹಿನ,
> ಅನಕ್ಷರಸ್ಥ ದುಷ್ಚಟಗಳಿಗೆ ದಾಸರಾದ ,ಕೂಲಿ ಮಾಡುವ, ಮೂಲಭುತ ಅವಷ್ಯಕತೆಗಳೆ ಇಲ್ಲದಂತ
> ಕೌಟುಂಬಿಕ ಹಿನ್ನಲೆಯುಳ್ಳವರಾಗಿರುತ್ತಾರೆ. ಅದೆಷ್ಟೋ ಮಕ್ಕಳು ನಾಲ್ಕಾರು ಕೀ.ಮೀ ನಿಂದ
> ಬರುತ್ತಾರೆ.ಮನೆಯಲ್ಲಿ ಕೆಲಸ ಕಾರ್ಯದ ಹೊರೆ ಬೇರೆ.ಕೆಲವೊಮ್ಮೆ ರಜೆ ಸಿಕ್ಕರೇ ಸಾಕು ಕೂಲಿ
> ನಾಲಿ ಎಂದು ಹೊರಟು ಹೋಗುತ್ತಾರೆ.ಕೆಲವರು ಅಪೌಷ್ಠಿಕತೆಯಿಂದ ನರಳಿ,.ಸದೃಢ ದೇಹ,ಆರೋಗ್ಯವಂತರೂ
> ಆಗಿರಲಾರರೂ.ಇವರು ವರ್ಷಪೂರ್ತಿ ಶಾಲೆಗೆ ಬಾರದೇ ಪದೆಪದೆ ಅನಧಿಕೃತವಾಗಿ ಗೈರು ಆಗುತ್ತಾರೆ.ಇಥ
> ಹತ್ತಾರೂ ವಯಕ್ತಿಕ ಸಾಮಾಜಿಕ ಆರ್ಥಿಕ ಸಮಸ್ಯೆಗಳಿರುವ ಮಕ್ಕಳಿಂದ ಯಾವ ಗುಣಮಟ್ಟದ ಕಲಿಕೆ
> ನಿರೀಕ್ಷಿಸಲಿ ಸಾಧ್ಯವಿದೆ? ಹತ್ತಾರು ಸಮಸ್ಯಗಳಿಂದ ಬಳಲುವ ಮಕ್ಕಳನ್ನು ರಾಜ್ಯಮಟ್ಟದ
> ಪಬ್ಲಿಕ್ ಪರೀಕ್ಷೆ ಬರೆಯಲು ಸಜ್ಜುಗೊಳಿಸುವದು ಶಿಕ್ಷಕನಿಗೆ ನಿಜಕ್ಕು ಸವಾಲಿನ
> ಸಂಗತಿ.ದುರ್ಬಲ ಮಕ್ಕಳನ್ನು ಸಬಲಮಕ್ಕಳೊಂದಿಗೆ ಹೋಲಿಸುವದಂತೂ ಮಹಾವಂಚನೆಯೇ ಸರಿ.
>   ತೀವ್ರ ವತ್ತಡದ ವೇಗದ ಸ್ಪರ್ದಾ ಪ್ರಪಂಚದಲ್ಲಿ ಮೂಲಭುತ ಸೌಲಭ್ಯಗಳೇ ಮರಿಚಿಕೆಯಾದ ಹಳ್ಳಿಯ
> ಸ್ಪರ್ಧಾಳು(ಮಕ್ಕಳು)ಉತ್ಕೃಷ್ಟ ಸೌಲಭ್ಯದ ಗುಣಮಟ್ಟದ ಶಿಕ್ಷಣ ಪಡೆಯಲು ಹಂಬಲಿಸಲು
> ಸಾಧ್ಯವೇ?ನಗರದ ಬಲಿಷ್ಟ ಸಾಮರ್ಥ್ಯ ಸ್ಪರ್ದಾರ್ಥಿ ಜೊತೆಗೆ ಸಣಸಲು ಭವಿಷ್ಯದ ಉತ್ತಮ ಬದುಕು
> ಕಟ್ಟಿಕೊಳ್ಳಲು ಸಾಧ್ಯವೆ? ರಾಜ್ಯಾದ್ಯಂತ ಏಕರೂಪದ ಪಠ್ಯಕ್ರಮರೂಪಿಸಿ ಭಿನ್ನ ಮಾಧ್ಯಮದಲ್ಲಿ
> ಕಲಿಯಲು ಅವಕಾಶನೀಡಿ ಖಾಸಗಿ ಸರ್ಕಾರಿ ಮತ್ತು ವಿಷೇಶ ಸರ್ಕಾರಿ ಶಾಲೆ ಪ್ರಾರಂಭಿಸಿ, ಎಲ್ಲ
> ಮಕ್ಕಳೂ ಸಮಾನರೆಂದು ಭಾವಿಸಿ ಸಾರ್ವತ್ರಿಕವಾಗಿ ಒಂದೇ ಪರೀಕ್ಷೆ ಏರ್ಪಡಿಸಿ ಪಲಿತಾಂಶದಲ್ಲಿ
> ಎಲ್ಲರನ್ನು ಸಮಾನರೆಂದು ಭಾವಿಸುವದು ಎಷ್ಟು ಸರಿ?ಸರ್ಕಾರವೇ ಪರೋಕ್ಷವಾಗಿ ಕುಗ್ರಾಮಗಳ
> ಮಕ್ಕಳನ್ನು ವಂಚಿಸುತ್ತಿದೆ.ನಗರ ಮತ್ತು ಗ್ರಾಮೀಣ ಸಮುದಾಯದ ಕಂದಕ ಹೆಚ್ಚಿಸುತ್ತಿದೆ.
>   ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಟವಾದ ಸಮುದಾಯಗಳ ತಾಳಕ್ಕೆ ತಕ್ಕಂತೆ
> ಕುಣಿಯುವ ಭ್ರಷ್ಟ ಬಂಢ ಅಧಿಕಾರಿವರ್ಗ ನೀತಿ ನಿಯಮಗಳು ಗಾಳಿಗೆ ತೂರಿ  ಗ್ರಾಮೀಣ ಸಮುದಾಯದ
> ಆಸುಪಾಸಿನಲ್ಲಿ ಈಗಾಗಲೇ ಎರಡು ಮೂರು ಸರ್ಕಾರಿ ಅಥವಾ ಖಾಸಗಿ ಶಾಲೆಗಳು ಕಾರ್ಯ
> ನಿರ್ವಹಿಸುತ್ತದ್ದಾಗ್ಯೂ, ಹೊಸದೊಂದು ಶಾಲೆ ಅನುಮತಿ ನೀಡುತ್ತಾರೆ.ಇದರಿಂದ ಹಳ್ಳಿಯ
> ಮಕ್ಕಳಿಗೆ ಇನ್ನಷ್ಟು ವಂಚನೆ ಮಾಡಿದಂತೆಯೇ.ಕಾಲಕ್ರಮೇಣ ಗ್ರಾಮೀಣ  ಶಿಕ್ಷಣವೆವಸ್ಥೆಯೂ
> ಸಂಪೂರ್ಣ ಖಾಸಗಿ ವ್ಯವಸ್ಥೆಯ ಕಬಂದ ಬಾಹುವಿನ ಹಿಡಿತಕ್ಕೊಳಪಟ್ಟು ವ್ಯಾಪಾರಿಕರಣಗೊಳ್ಳುವ
> ಮುನಸೂಚನೆಗಳು ದಟ್ಟವಾಗಿ ಗೊಚರಿಸುತ್ತಿವೆ.ಈಗಾಗಲೇ ಉಳ್ಳವರಿಗೆ ಉತೃಷ್ಟ ಉತ್ತಮ ಗುಣಮಟ್ಟದ
> ಶಿಕ್ಷಣ ಎಂನ್ನುವಂತ ವಾತಾವರ್ಣವಿದೆ. ಖಾಸಗಿ ಶಾಲೆಗಳು ಪ್ರಸ್ತುತ ಪೋಷಕರು  ಮಕ್ಕಳ
> ಮನೋಧೊರಣೆಗಳ ನಾಡಿ ಮಿಡಿತವರಿತು ಅವರ ಬಯಕೆ ಬೇಡಿಕೆಗಳಿಗನುಸಾರ ಸೇವಾಸೌಲಭ್ಯಗಳು, ತಮ್ಮದೆ
> ಪಠ್ಯಪುಸ್ತಕ ,ಶುಲ್ಕವಸುಲಿ , ಸಮವಸತ್ರ.... ತಮ್ಮದೇ ನೀತಿ ನಿಯಮಗಳು ಎಲ್ಲದರಲ್ಲೂ ಎಲ್ಲ
> ಹಂತಗಳಲ್ಲೂ ಸ್ವಾಯಿತ್ತತೆ.ಇಲ್ಲಿ ಸರ್ಕಾರದ ನೀತಿ ನಿಯಮಗಳಿಗೆ ಕವಡೆ ಕಿಮ್ಮತ್ತಿಲ್ಲ. ಹೀಗೆ
> ರಾಜ್ಯದ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಖಾಸಗಿ ಶಿಕ್ಷಣದ ಬೇಡಿಕೆ ದಿನೇ ದಿನೇ
> ಹೆಚ್ಚುತ್ತಲೇ ಇದೆ.ಈ ಖಾಸಗಿ ಶಿಕ್ಷಣ ವ್ಯವಸ್ತೆಯ ವಿರುದ್ಧ ಖಂಡಿತವಾಗಿಯೂ ಸರ್ಕಾರಿ
> ವ್ಯವಸ್ಥೆ ಪ್ರತಿಸ್ಪರ್ದಿಯಾಗಿ ನಿಲ್ಲಲೂ ಸಾಧ್ಯವಿಲ್ಲ ಎಂಬ ವಾತಾವರ್ವ
> ನಿರ್ಮಾಣವಾಗುತ್ತಿದೆ.ಸರ್ಕಾರದ ನೀತಿ ನಿಯಮಗಳಡಿಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿ
> ಶಾಲೆಗಳಿಗೆ ನುರಾರು ನ್ಯೂನ್ಯತೆ ಮಿತಿಗಳಿವೆ.ಕಾನುನಿನ ಚೌಕಟ್ಟಿದೆ.ಭ್ರಸ್ಟತನ,ಅದಿಕಾರದ
> ದುರುಪಯೋಗ ದಬ್ಬಾಳಿಕೆ ಸ್ವಹಿತಾಸಕ್ತಿ ಸ್ವಜನಪಕ್ಷಪಾತ,ಯೋಜನೆಗಳ ಅನುಷ್ಠಾನದಲ್ಲಿ
> ಇಚ್ಛಾಶಕ್ತಿಯ ಕೊರತೆ ಸಮಯಕ್ಕೆ ಬಾರದ ಆರ್ಥಿಕ ಸಹಾಯಧನ ಭ್ರಸ್ಟಾಚಾರ ಒಂದೆ ಎರಡೇ ಇವುಗಳ
> ಪಟ್ಟಿ ಮಾಡಿದರೆ ಹನುಮಂತನ ಬಾಲವೇ ಸರಿ.ಇಂಥ ಸಂದಿಗ್ಧ ಪರಸ್ತಿತಿಯಲ್ಲಿ ಬೇಕಾಬಿಟ್ಟಿ ಎಂದು
> ಮಲತಾಯಿ ಮಕ್ಕಳೆಂದು ಎರಡನೇ ದರ್ಜೆಯ ಪ್ರಜೆಗಳಂತೆ ಕುಗ್ರಾಮಗಳ ಮಕ್ಕಳನ್ನು
> ಪರಿಗಣಿಸಿದರೆ,ಕಾಲಿಗೆ ಕಟ್ಟಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಹೇಳಿದಂತೆ.
> ಅದೆಷ್ಟೋ ಕುಗ್ರಾಮಗಳಿಗೆ ಇಂದಿಗೂ ಮೂಲಭೂತ ಸೌಲಭ್ಯಗಳು ಮರಿಚಿಕೆಯೆ.ಸರಿಯಾದ ಕಾಲುನಡಿಗೆಯ
> ರಸ್ತೆ ವಿದ್ಯುತ್ ಸಂಪರ್ಕ ವಿಲ್ಲ.ಈ ತಳಸಮುದಾಯಗಳ ಆಚರಣೆ ಹಬ್ಬ ಹರಿದಿನಗಳು ವೃತ್ತಿ
> ಪ್ರವೃತ್ತಿಗಳೆಲ್ಲವೂ ವ್ಯವಸಾಯದ ಸುತ್ತಲೂ ಕೇಂದ್ರಿಕೃತವಾದಂತವುಗಳು.ನಿತ್ಯದ ಬದುಕು ಅತ್ಯಂತ
> ಸರಳ. ಬಯಕೆ ಬೇಡಿಕೆಗಳು ಅತ್ಯಲ್ಪ. ದೊಡ್ಡ ನಗರಗಳಂತೆ ವೈಭವದ ಬದುಕಾಗಲಿ
> ದುಂದುವೆಚ್ಛವಾಗಲಿ,ಕೊಳ್ಳುಬಾಕತನವಾಗಲಿ,ಹಣದಹಪಹಪಿತನವಾಗಲಿ,ಬಹುಭಾಷೆಯಗಲಿ,ವಿಭಿನ್ನ
> ಸಂಸ್ಕೃತಿಯಾಗಲೀ, ಇವೆಲ್ಲವುಗಳಿಂದ ಬಹುದೂರ.ಇದಾವುದೂ ಅವರಿಗೆ ಅಗತ್ಯವೂ ಇಲ್ಲ.ನಗರ ಮತ್ತು
> ಗ್ರಾಮಗಳ  ವ್ಯತ್ಯಾಸದ ಜನಜೀವನ ಕ್ರಮವರಿಯದೆ, ಎಲ್ಲರಿಗೂ ಏಕರೂಪದ ಪರೀಕ್ಷೆನಡೆಸಿ
> ಬರವಣಿಗೆಯಾದರಿತ ಮೌಲ್ಯಮಾಪನದ ಅಂಕಗಳಾದರಿಸಿ ಮಕ್ಕಳ ಜ್ಞಾನ ಕೌಶಲ್ಯ ಅನುಭವ ಅಳೆಯಲು
> ಸಾಧ್ಯವಿಲ್ಲ.ಗ್ರಾಮೀಣ ಮಕ್ಕಳ ಶಿಕ್ಷಣಪ್ರಗತಿಗೆ ಸರ್ವತೋಮುಖ ಬೆಳವಣಿಗೆಗೆ ಅವರ ಪ್ರಾದೇಶಿಕ
> ಅಗತ್ಯತೆಗೆ ತಕ್ಕಂತೆ ಸಂಪದಾಯಿಕ ಶಿಕ್ಷಣದ ಹೊರತಾಗಿ ಆಸಕ್ತಿ ಅಭಿರುಚಿಗೆ ತಕ್ಕಂತೆ ಜೀವನ
> ನಿರ್ವಹಣೆಗೆ ಪುರಕವಾದ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಕೊಡಲು ಸರ್ಕಾರ ಇದರತ್ತ ಚಿಂತನೆ ಮಾಡುವ
> ಸೂಕ್ತ ಕಾಲ ಒದಗಿ ಬಂದಿದೆ. ಬೌದ್ಧಿಕ ಶೈಕ್ಷಣಿಕ ಸಾಮಾಜಿಕ ಆರ್ಥಿಕ ವಾಗಿ ಹಿಂದುಳಿದ
> ಕುಟುಂಬಗಳು ಸ್ವಾವಲಂಬನೆಸಾದಿಸಲು ಉದ್ಯೋಗವಾದರಿತ   ಕೌಶಲ್ಯವಾದರಿತ ಶಿಕ್ಷಣ ಪ್ರೌಢಶಾಲಾ
> ಹಂತದಲ್ಲೇ  ಶಿಕ್ಷಣ ಅಗತ್ಯವಾಗಿ  ಹಳ್ಳಿ ಮಕ್ಕಳಿಗೆ ಜರುರಾಗಿ  ಬೇಕಿದೆ.ಈ ಮೂಲಕ ಗ್ರಾಮೀಣ
> ತಳಸಮುದಾಯದ ಆರ್ಥಿಕ ಸ್ವಾವಲಂಬನೆ ಜೊತೆಗೆ ಸರ್ವತೋಮುಖ ಅಭಿವೃದ್ಧಿಯ ಕನಸು
> ಕಾಣಬೇಕಿದೆ.ಔಪಚಾರಿಕ ಏಕರೂಪದ ಪಠ್ಯಕ್ರಮ ಮತ್ತು ಸಾರ್ವತ್ರಿಕ ಪರೀಕ್ಷೆ ಬದಲಿಗೆ ಹೊಸದೊಂದು
> ಹಾದಿ ಹುಡುಕಬೆಕಿದೆ.
>            *****************
> ಪ್ರಹ್ಲಾದ್. ವಾ. ಪತ್ತಾರ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAOouN1xpvFDprpPsZmCV1e9Pc9BduFakhbwRsDUG9rPR1vZzCw%40mail.gmail.com
> <https://groups.google.com/d/msgid/socialsciencestf/CAOouN1xpvFDprpPsZmCV1e9Pc9BduFakhbwRsDUG9rPR1vZzCw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUVZGMKEB7aKNMc4fB7cVoDtajuC5HJ%2BmdY8myymyT2Oig%40mail.gmail.com.
For more options, visit https://groups.google.com/d/optout.

Reply via email to