ಸರ್  ಒಳ್ಳೆಯ  ಲೇಖನ

ಹರಿಶ್ಚಂದ್ರ . ಪಿ.
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog: gpucbellare.blogspot.com
mobile: 9449592475


2016-02-23 20:55 GMT+05:30 Siddaramappa s m Sri <[email protected]>:
> 08-Jan-2014
> ದೇವರನ್ನು ಕಾಣುವ ಕಣ್ಣು
> ಗುಣಮುಖ
> 
> ( ಇತ್ತೀಚೆಗೆ ಬಿಡುಗಡೆಯಾದ 'ಶುಭಸಂಕಲ್ಪ' ಪುಸ್ತಕದಿಂದ ಆಯ್ದ ಭಾಗ ಇದು. ಪ್ರಕಾಶಕರು:
> ಅದ್ವೈತ)
> ನಾವೆಲ್ಲಾ ದೇವರು ನಮಗೆ ಕಾಣಿಸಲಿ ಎಂದು ಹಂಬಲಿಸುತ್ತೇವೆ, ಆರಾಧಿಸುತ್ತೇವೆ ಮತ್ತೆ, ಮತ್ತೆ
> ಪ್ರಾರ್ಥಿಸುತ್ತೇವೆ. ಆದರೆ ನಾವೆಲ್ಲಾ ನಿಜವಾಗಿ ದೇವರನ್ನು ಕೇಳಿಕೊಳ್ಳಬೇಕಾಗಿರುವುದು,
> ಸರ್ವಾಂತರ್ಯಾಮಿಯಾಗಿರುವ, ಅಂದರೆ ನಮ್ಮ ಸುತ್ತಲೂ  ಇರುವ ದೇವರನ್ನು ಕಾಣುವ ಕಣ್ಣುಗಳನ್ನು
> ದೇವರು ನಮಗೆ ದಯಪಾಲಿಸಲಿ ಎಂದು. ಹಾಗೆಯೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರೀತಿಗಾಗಿ
> ಕಾತರಿಸಿ, ಹಂಬಲಿಸಿ, ಕನವರಿಸಿ ಪ್ರಾರ್ಥಿಸುವವರೇ. ಆದರೆ ನಾವೆಲ್ಲ ನಿಜವಾಗಿ ಕೇಳಿ
> ಕೊಳ್ಳಬೇಕಿರುವುದು, ನಮ್ಮ ಸುತ್ತಲೂ  ಇರುವ ಪ್ರೀತಿಯನ್ನು ಗುರುತಿಸಿ, ಸ್ವೀಕರಿಸಿ,
> ಗೌರವಿಸುವಂತೆ ಆಗುವ ನಮ್ಮ ಒಳ ಮನ ಪರಿವರ್ತನೆಯನ್ನು.
> ಏನನ್ನೋ, ಯಾರನ್ನೋ ಪರಿವರ್ತಿಸಲು ಹೊರಡುವ ನಾವು, ಕೊನೆಗೆ ಪರಿವರ್ತಿಸಬೇಕಾಗಿದ್ದು
> ನಮ್ಮನ್ನಲ್ಲವೇ, ನಮ್ಮ ಗ್ರಹಿಕೆಯ ಮಟ್ಟವನ್ನಲ್ಲವೇ? ಎಂಬ ಅರಿವನ್ನು ಮುಟ್ಟುತ್ತೇವೆ... ಹೀಗೆ
> ಹೇಳುತ್ತಿರುವಾಗಲೇ ನನಗೊಂದು ಎಲ್ಲೋ ಕೇಳಿದ ಕತೆ ನೆನಪಾಗುತ್ತಿದೆ...
> ~*~
> ಅಂದು ಆ ದಂಪತಿಗಳ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ. ವಿಚ್ಛೇದನಗಳು
> ಹೆಚ್ಚುತ್ತಿರುವ ಈ ದಿನಗಳಲ್ಲಿ ಆ ಸಮಾರಂಭಕ್ಕೆ ವಿಶೇಷ ಮಹತ್ವ ಬಂದಿತ್ತು. ಡ್ಯಾನ್ ಮತ್ತು
> ರೋಸಿಯವರ ಆ ಸಮಾರಂಭಕ್ಕೆ ಇಡೀ ಊರಿಗೆಊರೇ ಬಂದು ಶುಭ ಹಾರೈಸಿತು. ತಮ್ಮ ಸೊಗಸಾದ ಗುಣವಂತಿಕೆ,
> ನಯ ವಿನಯಗಳ ವರ್ತನೆಯಿಂದ ಡ್ಯಾನ್ ಮತ್ತು ರೋಸಿ ಇಡೀ ಊರಿನ ಪ್ರೀತಿಗೆ ಪಾತ್ರರಾಗಿದ್ದರು.
> ನಮ್ಮ ಮಕ್ಕಳು ಕೂಡ ಡ್ಯಾನ್ ಮತ್ತು ರೋಸಿಯರ ತರ ಬಾಳಬೇಕು ಎಂದು ಎಲ್ಲರಿಗೂ ಆಳದಲ್ಲಿ ಆಸೆ
> ಹುಟ್ಟಿಸುವಷ್ಟು ಆದರ್ಶಪ್ರಾಯರಾಗಿದ್ದರು. ಆ ಪುಟ್ಟ ಪಟ್ಟಣದಲ್ಲಿ ಅವರನ್ನು ಅರಿಯದವರೇ
> ಇಲ್ಲ. ಅವರ ದಾಂಪತ್ಯ ಯುವ ಜೋಡಿಗಳಿಗೆ ಆದರ್ಶಪ್ರಾಯವಾಗಿತ್ತು. ಎಷ್ಟೋ ಸಾರಿ ಏನು ಬಂತು,
> ಪ್ರತಿ ಸಾರಿಯೂ... ಆ ಊರಿನ ಪಾದ್ರಿ ಚರ್ಚಿನಲ್ಲಿ ಮದುವೆಯನ್ನು ಮಾಡಿಸುವಾಗ, ಮದುವೆಯ
> ಬಾಂಧವ್ಯ ಬೋಧಿಸುವಾಗ 'ಆದರ್ಶ ವಿವಾಹ'ಕ್ಕೆ ಡ್ಯಾನ್ ಮತ್ತು ರೋಸಿಯ ದಾಂಪತ್ಯದ ಉದಾಹರಣೆ
> ಕೊಡುತ್ತಿದ್ದ.
> ಹೀಗಿರುವ ಆದರ್ಶ ದಂಪತಿಗಳ ಇಪ್ಪತ್ತೈತೈದನೇ ವಿವಾಹ ವಾರ್ಷಿಕೋತ್ಸವದ ಆ ದಿನ ಇಡೀ ಊರೇ ನಲಿದು
> ಸಂಭ್ರಮಿಸಿ, ದಂಪತಿಗಳಿಂದ ರಾತ್ರಿಯ ಔತಣ ಸ್ವೀಕರಿಸಿ, ಶುಭ ಹಾರೈಸಿ ಮನೆಗೆ ಮರಳಿದರು.
> ಇದಾಗಿ ಮರುದಿನ, ಕಾಡ್ಗಿಚ್ಚಿನಂತೆ ಒಂದು ಸುದ್ದಿ ಹಬ್ಬಿತು. ರೋಸಿ ಡ್ಯಾನ್-ನಿಂದ ವಿಚ್ಛೇದನ
> ಬಯಸಿ ಕೋರ್ಟಿನಲ್ಲಿ ದಾವೆ ಹೂಡಿದ್ದಳು! ಇಡೀ ಊರಿಗೆ ಹೃದಯಾಘಾತ! ಯಾರಿಗೂ ನಂಬಲು ಸಾಧ್ಯವೇ
> ಆಗಲಿಲ್ಲ. ಯಾರಾದರೂ ಸೂರ್ಯ ಪಶ್ಚಿಮದಲ್ಲಿ ಹುಟ್ಟಿದನೆಂದರೆ ಸುಲಭವಾಗಿ ನಂಬುತ್ತಿದ್ದರೋ
> ಏನೋ... ಆದರೆ ಆ ಊರಿನವರಿಗೆ ಆ ಸುದ್ದಿಯನ್ನು ನಂಬಲಾಗಲಿಲ್ಲ. ಆ ಊರಿನ ಕೋರ್ಟ್
> ನ್ಯಾಯಾಧೀಶನಿಗೂ ಕೂಡ ಅರ್ಜಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ರೋಸಿಯನ್ನು ಪರಿಪರಿಯಾಗಿ
> ಕೇಳಿಕೊಂಡರೂ ಕೇಳದೆ ಹಠ ಮಾಡಿ ರೋಸಿ ವಿಚ್ಛೇದನಕ್ಕೆ ಅರ್ಜಿ ಹಾಕೇ ಬಿಟ್ಟಳು, ವಿಚ್ಛೇದನಕ್ಕೆ
> ಕಾರಣವನ್ನೂ ತಿಳಿಸದೆ. ದುರಂತವೆಂದರೆ ನೋಡಿ, ಹಿಂದಿನ ದಿನದ ಔತಣಕೂಟಕ್ಕೆ ಬಂದವರಲ್ಲಿ, ಶುಭ
> ಹಾರೈಸಿದವರಲ್ಲಿ ನ್ಯಾಯಾಧೀಶನೂ ಇದ್ದ!
> ಸರಿ, ಕುತೂಹಲ ತಾಳಲಾರದೆ ನ್ಯಾಯಾಧೀಶ ಅರ್ಜಿದಾರರನ್ನು ತಕ್ಷಣವೇ ವಿಚಾರಣೆಗೆ ಕರೆದ.
> ವಿಚಾರಣೆಯ ದಿನ ಇಡೀ ಊರಿಗೆ ಊರೇ ಕೋರ್ಟ್-ನಲ್ಲಿ ನೆರೆದಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ!
> ಎಲ್ಲರ ನಿರೀಕ್ಷೆಯಂತೆ, ನ್ಯಾಯಾಧೀಶ ರೋಸಿಯನ್ನು ವಿಚ್ಛೇದನಕ್ಕೆ ಕಾರಣವನ್ನು
> ಕೇಳುವುದರೊಂದಿಗೆ ವಿಚಾರಣೆ ಆರಂಭಿಸಿದ. ರೋಸಿ ಸೌಮ್ಯ ಸ್ವಭಾವದ ಹೆಣ್ಣು ಮಗಳು, ನಲವತ್ತೈದರ
> ಗಡಿ ದಾಟಿರುವ ಗ೦ಭೀರ ಸ್ವಭಾವದ ಹೆಣ್ಣುಮಗಳು. ಅಳತೆ ತಪ್ಪಿ ಮೀರಿ ವರ್ತಿಸಿದ್ದು ಯಾರೂ
> ನೋಡಿಲ್ಲ ಮತ್ತು ಕೇಳಿಲ್ಲ. ಎಲ್ಲರಿಗೂ ಕುತೂಹಲ ರೋಸಿಯ ವಿಚ್ಛೇದನ ಅರ್ಜಿಗೆ
> ಕಾರಣವೇನಿರಬಹುದೆಂದು?
> ನ್ಯಾಯಾಧೀಶ ತಡಮಾಡದೆ ತನ್ನ ವಿಚಾರಣೆ ಶುರು ಮಾಡಿದ. "ಅಮ್ಮ ರೋಸಿ, ಮೊನ್ನೆ ತಾನೇ ನಿನ್ನ
> ಮತ್ತು ಡ್ಯಾನಿಯ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ ನಡೆಯಿತು. ನಿನ್ನ
> ಅರ್ಜಿಗೆ ಬಲವಾದ ಕಾರಣ ತಿಳಿಸದಿದ್ದರೆ ನಾವು ವಿಚಾರಣೆಯಲ್ಲಿ ಮುಂದುವರೆಯುವ ಹಾಗಿಲ್ಲ.
> ದಯವಿಟ್ಟು ನೀನು ವಿಚ್ಛೇದನ ಬಯಸಲು ಕಾರಣವೇನು ಎಂದು ಈ ಕೋರ್ಟಿಗೆ ತಿಳಿಸು?"
> ಕ್ಷಣ ಕಾಲ ಅಳುಕಿದ ರೋಸಿ, ಧೈರ್ಯವನ್ನು ಒಟ್ಟುಗೂಡಿಸಿಕೊಂಡು ತನ್ನ ಅಂತರಾಳದ ನೋವನ್ನು
> ಹೇಳಿಕೊಂಡಳು, "ಸ್ವಾಮೀ, ನನ್ನ ಗಂಡ ಡ್ಯಾನಿ ಕೆಟ್ಟವನಲ್ಲ, ಒಂದು ದಿನವೂ ಕಡೆಗಣಿಸಿದವನಲ್ಲ.
> ಯಾವುದಕ್ಕೂ ಕೊರತೆ ಮಾಡಿದವನಲ್ಲ. ಆದರೆ ಅವನ ಒಂದು ದುರಭ್ಯಾಸ ನನ್ನನ್ನು ಈ ತೀರ್ಮಾನಕ್ಕೆ
> ನೂಕಿದೆ." ವಿಚಾರಣೆಯನ್ನು ಕೇಳುತ್ತಿದ್ದವರಲ್ಲಿ ಡ್ಯಾನಿ, ಅವನ ಸಹೋದರರು, ಸ್ನೇಹಿತರು ಮತ್ತು
> ಅವನ ವಯಸ್ಸಾದ ತಾಯಿ ಕೂಡ ಇದ್ದರು. ಎಲ್ಲರಿಗೂ ಅಚ್ಚರಿ, ಏನಿದ್ದೀತೂ  ಡ್ಯಾನಿಯ ದುರಭ್ಯಾಸ
> ನಮಗೆ ಗೊತ್ತಿಲ್ಲದಿರುವುದು?! ಡ್ಯಾನಿ ತನ್ನ ಸಭ್ಯ ನಡುವಳಿಕೆಯಿಂದ ಇಡೀ ಊರಿಗೇ
> ಪ್ರಸಿದ್ಧನಾಗಿದ್ದ.
> ರೋಸಿ ಮುಂದುವರೆದು " ನಮಗೆ ಪ್ರತಿ ರಾತ್ರಿ ಊಟಕ್ಕೆ ಬ್ರೆಡ್ ಬಳಸುವುದು ಅಭ್ಯಾಸ. ನನ್ನ ಗಂಡ
> ಪ್ರತಿ ಸಾರಿ ಬ್ರೆಡ್ ಕತ್ತರಿಸುವಾಗ ಕಂದಿದ, ಗಟ್ಟಿಯಾದ ಭಾಗವನ್ನು ನನಗೆ ಕೊಟ್ಟು, ಮೃದುವಾದ
> ಬಿಳಿ ಭಾಗವನ್ನು ತಾನು ತಿನ್ನುತ್ತಿದ್ದ. ಒಂದು ದಿನವಲ್ಲ, ಎರಡು ದಿನವಲ್ಲ... ಸತತ
> ಇಪ್ಪತ್ತೈತೈದು ವರ್ಷ ಈ ರೀತಿ ನನ್ನನ್ನು ನಡೆಸಿಕೊಂಡಿದ್ದಾನೆ... ಮುಂದಾದರೂ ಬದಲಾಗಬಹುದು
> ಎಂಬ ಆಸೆಯಲ್ಲಿ ನಾನು ಸುಮ್ಮನಿದ್ದೆ... ಆದರೆ ಆ ಬದಲಾಗುವ ದಿನ ಬರಲೇ ಇಲ್ಲ. ಇಪ್ಪತ್ತೈತೈದನೇ
> ವಿವಾಹ ವಾರ್ಷಿಕೋತ್ಸವದ ಸಂತೋಷದ ರಾತ್ರಿ ಕೂಡ ಈ ರೀತಿ ಮಾಡಿದಾಗ ನನಗೆ ತಡೆಯಲಾಗಲಿಲ್ಲ...
> ಇನ್ನೆಷ್ಟು ದಿನ ಅಂತ ಈ ಅವಮಾನವನ್ನ, ಕೀಳು ನಡತೆಯನ್ನ ಸಹಿಸಲಿ... ನೀವೇ ಹೇಳಿ... ಸಾಕು
> ಸಾಕಾಗಿದೆ ನನಗೆ ಈ ಬದುಕು" ಎಂದು ಹೇಳುತ್ತಾ... ಹೇಳುತ್ತಾ ರೋಸಿಯ ಕಣ್ಣಲ್ಲಿ
> ಅಶ್ರುಧಾರೆಯಾಯಿತು, ಕುತೂಹಲದಿಂದ ಕೇಳುತ್ತಿದ್ದವರ ಕಣ್ಣಲ್ಲೂ... ಕೋರ್ಟ್-ನಲ್ಲಿ ಅಲ್ಲಲ್ಲಿ
> ನಿಟ್ಟುಸಿರು... 'ಯಾವ ಹುತ್ತದಲ್ಲಿ ಯಾವ ಹಾವಿದೆಯೋ...' 'ಛೇ, ಡ್ಯಾನಿ ಈ ರೀತಿ ಮಾಡಿದನೇ?'
> ಎಂಬ ಅಸಮಾಧಾನದ ನುಡಿ ಕೋರ್ಟಲ್ಲಿ. ಕೊನೆಗೆ ನ್ಯಾಯಾಧೀಶ ಡ್ಯಾನಿಯನ್ನು ಕಟಕಟೆಗೆ ಕರೆದ.
> ಡ್ಯಾನಿ ಗಂಭೀರವಾಗಿ ಬಂದು ನಿಂತು ಕೋರ್ಟ್-ಗೆ ವಂದಿಸಿದ.
> "ಡ್ಯಾನಿ ಈ ಆಪಾದನೆಯ ಬಗ್ಗೆ ನೀನು ಹೇಳುವುದೇನಾದರೂ ಇದೆಯೇ?" ಎಂದ ನ್ಯಾಯಾಧೀಶನ ಧ್ವನಿಯಲ್ಲಿ
> ಬೇಡ ಬೇಡವೆಂದರೂ ಡ್ಯಾನಿಯ ಕುರಿತು ಕೊಂಚ ಅಸಹನೆ, ಅಸಮಾಧಾನವಿತ್ತು.
> "ನ್ಯಾಯಾಧೀಶರೆ! ಈ ಆಪಾದನೆಗೆ ನಾನು ಉತ್ತರಿಸುವುದಿಲ್ಲ, ನನ್ನ ತಾಯಿ ಬಂದು
> ಉತ್ತರಿಸಲಿದ್ದಾಳೆ!" ಎಂದ ಡ್ಯಾನಿಯ ಧ್ವನಿಯಲ್ಲಿ ಕಿಂಚಿತ್ತೂ ಅಪರಾಧಿ ಭಾವವಿರಲಿಲ್ಲ.
> ಅದನ್ನು ಕಂಡು ನೆರೆದಿದ್ದ ಜನರಲ್ಲಿ ಆಕ್ರೋಶ ಮತ್ತು ಆಶ್ಚರ್ಯ ಒಟ್ಟಿಗೆ ಆಯಿತು.
> ಡ್ಯಾನಿಯ ವಯಸ್ಸಾದ ತಾಯಿ ಕಟಕಟೆಯಲ್ಲಿ ಬಂದು ನಿಂತಳು. ಎಲ್ಲರಿಗೂ ಕುತೂಹಲ. ಏನೋ ಅಪರೂಪದ
> ಡ್ಯಾನಿಯ ಗುಟ್ಟನ್ನು ಹೇಳುವಳೋ ಎಂದು. ಅತ್ತೆ ಎಂದಾದರೂ ಸೊಸೆಯ ಪರವಾಗಿ ಮಾತಾಡಲು ಸಾಧ್ಯವೇ?!
> ಎಂಬ ಆತಂಕ ಬೇರೆ.
> "ಸ್ವಾಮೀ! ಡ್ಯಾನಿ ನನ್ನ ಹಿರಿಯ ಮಗ. ಅವನು ಸೇರಿ ನಾಲ್ಕು ಜನ ಮಕ್ಕಳು ನನಗೆ. ಚಿಕ್ಕ
> ವಯಸ್ಸಿನಿಂದ ಅವನಿಗೆ ಬ್ರೆಡ್ ಅಂದರೆ ವಿಶೇಷ ಇಷ್ಟ ಮತ್ತು ಪ್ರೀತಿ... ಅದರಲ್ಲೂ ಕೆಂಚಗೆ
> ಕಂದಿದ, ಗಟ್ಟಿಯಾದ ಬ್ರೆಡ್-ನ ಭಾಗವೆಂದರೆ ಪ್ರಾಣ. ಅವನಿಗೆ ಆ ಗಟ್ಟಿಯಾದ ಬ್ರೆಡ್ ಭಾಗ ಎಷ್ಟು
> ಇಷ್ಟವೆಂದರೆ... ಅವನು ತನ್ನ ತಮ್ಮ, ತಂಗಿ, ತಂದೆ ಹೋಗಲಿ ಹೆತ್ತ ತಾಯಿಯಾದ ನನಗೆ ಕೂಡ
> ಕೊಡುತ್ತಿರಲಿಲ್ಲ... ಹಂಚಿಕೊಳ್ಳುತ್ತಿರಲಿಲ್ಲ. ಏನೋ ವಿಚಿತ್ರ ಸ್ವಭಾವವೆಂದು ನಾವೇ
> ಹೊಂದಿಕೊಂಡಿದ್ದೆವು. ಆದರೆ ಮದುವೆಯಾದ ಮೇಲೆ ರೋಸಿಯ ಮೇಲೆ ಏನು ಒಲವು ಮೂಡಿತೋ, ಎಷ್ಟು
> ಪ್ರೀತಿ ಹುಟ್ಟಿತೋ... ತನ್ನ ಪ್ರೀತಿಯ ತಿನಿಸನ್ನ ಅವಳಿಗೆ ಕೊಡಲು ಶುರುಮಾಡಿದ... ಇದನ್ನು
> ನೋಡಿ ಕೆಲ ದಿನ ನಾವೆಲ್ಲಾ ನಕ್ಕಿದ್ದೂ ಇದೆ... ತನಗೆ ಪ್ರಾಣಕ್ಕೆ ಪ್ರಿಯವಾದ ತಿನಿಸನ್ನು
> ಅವನು ಅವಳಿಗೆ ಪ್ರೀತಿಯಿಂದ ಅರ್ಪಿಸುತ್ತಿದ್ದರೆ... ನೋಡಿ ಅವಳಿಗೆ ಅದರ ಪರಿವೇ ಇಲ್ಲ...
> ಅದನ್ನು ಅವಮಾನ, ಹಿಂಸೆ ಎಂದು ಭಾವಿಸಿದ್ದಾಳೆ! ಒಂದು ಚಿಕ್ಕ ಮಾತುಕತೆಯಲ್ಲಿ
> ಬಗೆಹರಿಯಬಹುದಾಗಿದ್ದ ಈ ಸಮಸ್ಯೆ ಈ ಹಂತಕ್ಕೆ ತಲುಪಿದೆ... ಇನ್ನು ಹೇಳುವುದಕ್ಕೆ ಏನೂ ಇಲ್ಲ
> ಸ್ವಾಮೀ..." ಹೀಗೆ ಹೇಳಿ ಅವನ ತಾಯಿ ಅಪಾರ್ಥದಿಂದ ಮುರಿಯಬಹುದಾಗಿದ್ದ ತನ್ನ ಮಗನ ಮದುವೆಯನ್ನು
> ಉಳಿಸಿದಳು. ಅಷ್ಟೊಂದು ಪ್ರೀತಿಯ ಕ್ರಿಯೆಯನ್ನ ಅವಮಾನವೆಂದು ತಿಳಿದೆನಲ್ಲ ಎಂದು ರೋಸಿಯಲ್ಲಿ
> ಪಶ್ಚಾತ್ತಾಪವಾಯಿತು ಮತ್ತು ಅವರ ದಾಂಪತ್ಯ ಮತ್ತಷ್ಟು ಗಟ್ಟಿಯಾಯಿತು.
> *
> ಈ ಕತೆ ನೆನಪಾದಾಗಲೆಲ್ಲಾ, ನಾನು ದೇವರನ್ನು ಕೇಳಿಕೊಳ್ಳುವುದಿಷ್ಟೆ... 'ಭಗವಂತ!
> ಅಪಾರ್ಥಗಳಿಂದ ನನ್ನನ್ನು ದೂರವಿಡು... ಅಪಾರ್ಥವಾದಾಗಲೆಲ್ಲ ಒಂದು ಚಿಕ್ಕ ಮಾತುಕತೆಗೆ ನನ್ನ
> ನೆನಪಿಸು, ಪ್ರೇರೇಪಿಸು.... ನನ್ನ ಸುತ್ತಲೂ  ತುಂಬಿರುವ ಪ್ರೀತಿಯನ್ನು ಗುರುತಿಸುವ ಮನಸ್ಸು
> ಕೊಡು!
> 
> 
> 
> 5
> ಅನಿಲ ತಾಳಿಕೋಟಿ January 09, 2014 at 7:01pm
> ಮುಸುಕಿದ ಮಬ್ಬಿನ ತೆರೆ ಸರಿಸಿ ಎಳೆ ಕಿರಣಗಳಲ್ಲಿ ತೊಯ್ಯಿಸುವ ಲೇಖನ...
> Swarna January 09, 2014 at 7:44pm
> ನಮ್ಮ ಸುತ್ತಲೂ  ಇರುವ ಪ್ರೀತಿಯನ್ನು ಗುರುತಿಸಿ, ಸ್ವೀಕರಿಸಿ, ಗೌರವಿಸುವಂತೆ ಆಗುವ ನಮ್ಮ ಒಳ
> ಮನ ಪರಿವರ್ತನೆಯನ್ನು.ತುಂಬಾ ಚೆನ್ನಾಗಿದೆ.
> ನಂದಗೋಪಾಲ್ January 09, 2014 at 8:48pm
> ಇಪ್ಪತೈದು ವರ್ಷ ಗಂಡ ಹೆಂಡಿರಾಗಿ ಸಹಬಾಳ್ವೆ ನಡೆಸಿ ಆದರ್ಶ ದಂಪತಿಗಳೆಂದು ಪ್ರಖ್ಯಾತರು.
> ತನಗೆ  ಕೊಡುವ ಕಂದಿದ ಗಟ್ಟಿಯಾದ ಬ್ರಡ್ ಇಷ್ತವಿಲ್ಲ ಎಂದು ಹೆಂಡತಿ ಹೇಳಿಲ್ಲ! ಖೈದಿಯಾದರೂ
> ಧೈರ್ಯಮಾಡಿ ಹೇಳಿರುತ್ತಿದ್ದ. ಪಾಪ ಹೆಂಡತಿಗೆ ಗಂಡ ಎಲ್ಲಿ ನೊಂದುಕೊಳ್ಳುತ್ತಾನೆ ಎಂಬ
> ಸಂಕೋಚವೋ ಭಯವೋ?.  ತನಗೆ ಇಷ್ಟವಾದದ್ದು ಅವಳಿಗೂಇಷ್ಟ ಎಂದು ಇಪ್ಪತೈದು ವರ್ಷ ನಂಬಿದ್ದಾನೆ
> ಪೆದ್ದ ಗಂಡ.ಆದರೆ ಇದು ವಿವಾಹದ ರಜಿತ ಮಹೋತ್ಸವದ ಮಾರನೇ ದಿನ ಸ್ಪೋಟಗೊಂಡು ವಿಚ್ಛೇದನ ಹಂತ
> ತಲಿಪಿತು ಎಂದರೆ ನಂಬೋದು ಹೇಗೆ ಸ್ವಾಮಿ? ಒಂದೇ ದಿನ ಕುರಿಯಂತೆ ಇದ್ದ ಹೆಂಡತಿ ಹೆಬ್ಬುಲಿ
> ಆದಳೆ? ಅಸಹಜ ಅತಾರ್ಕಿಕ ಅಲ್ಲವೇ? ಅಲ್ಲ ಎನ್ನುವುದಾದರೆ  ಇದು ಯಾವ ದೇಶದ ಯಾವ ಭಾಷೆಯೆ ಕತೆ
> ನೆನಪಿಸಿಕೊಂಡು ಹೇಳಲು ಪ್ರಯತ್ನಿಸಿ.
> ಗುಣಮುಖ January 09, 2014 at 9:31pm
> ಒಳ್ಳೆ ಪ್ರಶ್ನೆ ನಂದಗೋಪಾಲ್! ಉತ್ತರಕ್ಕೆ ಉಳಿದ ಶುಭಸಂಕಲ್ಪದ ಕತೆ ಓದುವುದು ಒಳ್ಳೆಯದು...
> ಆಸಕ್ತಿಕರವೆಂದರೆ ಈ ಪ್ರಶ್ನೆಗೆ ಇನ್ನೊಂದು ಕತೆಯಿದೆ -
> hema January 10, 2014 at 12:06pm
> ನಂದಗೊಪಾಲ್ರವರೆ : ಕತೆಯನ್ನು ಓದಿದಾಗ ಅಪಾರ್ಥವೆಂಬುದು ಹೇಗೆ ಒಂದು ಸುಂದರ
> ಸಂಸಾರವನ್ನು,ಸಂಬಂಧವನ್ನು ಮುರಿದುಹಾಕುತ್ತದೆ ಎನ್ನುವ ತಾತ್ಪರ್ಯ ನಿಚ್ಚಳವಾಗುತ್ತದೆ
> .ಹೆಸರುಗಳನ್ನು ಗಮನಿಸಿದರೆ ಈ ಕತೆ ಯಾವುದೋ ಪಾಶ್ಚಾತ್ಯ ದೇಶದಲ್ಲಿ
> ನಡೆದಿರಬಹುದಾದಂತಿದೆ.ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯತಿಯ ಅಭಿವ್ಯಕ್ತಿ
> ಸ್ವಾತಂತ್ರ್ಯಕ್ಕೆ ಸಾಕಷ್ಟು ಮಹತ್ವವಿದೆ. ಆದರೆ ಭಾರತದಂತಹ ದೇಶಗಳಲ್ಲಿ , ಬಹುತೇಕ
> ದಾಂಪತ್ಯಗಳಲ್ಲಿ ಹೆಂಡತಿ -Repression ನಂತಹ ಪರಿಸ್ತಿತಿಯಿಂದ ನರಳುತ್ತಿರುತ್ತಾಳೆ. ಗಂಡನ
> ಅಭಿಪ್ರಾಯ,ಅನಿಸಿಕೆಗಳು ತನ್ನವಲ್ಲದ್ದಿದ್ದರು ಅದನ್ನು ಹೇರಿಕೊಂಡು ಬಾಳಲೆಬೇಕಾದಂತ
> ಅನಿವಾರ್ಯತೆ ಇರುತ್ತದೆ .ಗಂಡನ ಮನಸನ್ನು ನೋಯಿಸಬಾರದು ಎನ್ನುವ ಸಂಕೋಚಕ್ಕಿಂತ,ನೋಯಿಸಿದರೆ
> ಗಂಡನ ಅಹಂಕಾರಕ್ಕೆ ಪೆಟ್ಟಾಗುತ್ತದೆ ಮತ್ತು ಅವನ ನಿರಾಕಾರಾಣೆಯ,ಕೋಪದ ಬೆಂಕಿ ಸುಡುತ್ತದೆ
> ಎನ್ನುವ ಭಯ,ಜಿಗುಪ್ಸೆಗಳ ದಾಕ್ಷಿನ್ಯದಲ್ಲಿ ಸ್ವಂತ ಅಸ್ತಿತ್ವವೇ ಇಲ್ಲವೆಂಬಂತೆ
> ಬಾಳಿಬಿಟ್ಟಿರುತ್ತಾಳೆ . ಕಾಲಾಂತರದಲ್ಲಿ ಗಂಡನ ತಾತ್ಸಾರ,ಅವಗಣನೆ,ಮತ್ತು ತಣ್ಣನೆಯ
> ಕ್ರೌರ್ಯದೆದುರು ನಲುಗಿ ಅಭಿವ್ಯಕ್ತಿಸಲಾರದೆ ಶೇಕರಣೆಯಾದ ಇಷ್ಟಕಷ್ಟದ ಒತ್ತಡಗಳು , ಎಂದೋ
> ಒಂದು ಸಂಧರ್ಭದಲ್ಲಿ ಈ ರೀತಿ ದಿಗ್ಗನೆ ಸ್ಪೋಟನೆಗೊಳ್ಳುತ್ತದೆ . ಬಹುಶ ಈ ಕತೆಯಲ್ಲಿ ,ತನಗೆ
> ಇಷ್ಟವಾದದ್ದು ಅವಳಿಗೂಇಷ್ಟ ಎಂದು ಇಪ್ಪತೈದು ವರ್ಷ ಗಂಡ ನಂಬಿರುತ್ತಾನೆ . ಆದರೆ
> ಸಂಕೋಚದಿಂದಲೋ, ಪ್ರೀತಿಯಿಂದಲೋ ತನಗಿಷ್ಟ ಇಲ್ಲ ಎಂದು ಹೇಳಿಕೊಳ್ಳದೆ , ಇವತ್ತಲ್ಲ ನಾಳೆ
> ಅವನಾಗೇ ಅರ್ಥಮಾಡಿಕೊಳ್ಳುತ್ತಾನೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದ ಹೆಂಡತಿಗೆ , ಗಂಡ
> ಕಡೆಗಣಿಸಿದನು ಎನ್ನುವ ಅವಮಾನ, ಅಹಂಕಾರಕ್ಕೆ ಪೆಟ್ಟುಕೊಟ್ಟು ಆ ರೀತಿ
> ಪ್ರೇರೇಪಿಸಿರುತ್ತದೆ.comminication ಗ್ಯಾಪ್ ಮತ್ತು ಅಪಾರ್ಥದದಿಂದಾಗುವ ದುರಂತವನ್ನು ಕತೆ
> ಸಾರುತ್ತದೆ .
> ಸೌಜನ್ಯ :WWW.chukubhuku.com
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software ಸಾರ್ವಜನಿಕ
> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJCvfyWq3eEvmjef1XDk_qWNmqnOJ4Zhip%3DcLN%3DN8MnLfPTHNg%40mail.gmail.com.
> For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUUhjRfcosd57Lrt9XwD56vT3WxgGNs3PHfgUXzDWeyyQg%40mail.gmail.com.
For more options, visit https://groups.google.com/d/optout.

Reply via email to