ತುಂಬಾ ಮನಕ್ಕೆ ಮುಟ್ಟುವ ಮಾತು ಸರ್ ಅದು "ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ" ಅನ್ನುವ
ಹಾಗೆ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ "ಮಕ್ಕಳೇ ನಮ್ಮಪಾಲಿನ ದೇವರು", ಆ ದೇವರಿಗೆ
ಮೋಸಮಾಡಿದರೆ ನಮ್ಮ ಕರ್ತವ್ಯಕ್ಕೆ ದ್ರೋಹ ಮಾಡಿದ ಹಾಗೆ ಎಂದಿಗೂ ಅದಕ್ಕೆ ಕ್ಷಮೆಇಲ್ಲ.
On Mar 21, 2016 3:23 PM, "Basavaraja Naika H.D." <
basavarajanaik...@gmail.com> wrote:

> ಒಬ್ಬ ಶಿಕ್ಷಕಿಯ ಮನದಾಳದ.   ಮಾತು ನನ್ನನ್ನು ಬಡಿದೆಬ್ಬಿಸಿತು.ಅ ಮಾತು ಶಿಕ್ಷಕರ
> ನಿದ್ದೆಗೆಡಿಸಬೇಕು
> **************************
> ಹೋದ ವರ್ಷ ಇರಬೇಕೆನ್ನಿಸುತ್ತದೆ.ರಾಯಚೂರು ತಾಲೂಕಿನ ಬಿ.ಅರ್.ಸಿ ಕೇಂದ್ರದಲ್ಲಿ ನಲಿ ಕಲಿ
> ತರಬೇತಿ ನಡೆಯುತ್ತಿತ್ತು.ನಮ್ಮ ಡಯಟ್ ಅವರಣದಲ್ಲಿಯೆ ಇರುವ ಬಿ.ಅರ್.ಸಿ ಕೇಂದ್ರ.ಬಿ.ಅರ್.ಪಿ
> ಮಿತ್ರ ಅಹ್ಮದ್ ನನ್ನನ್ನು ತರಬೇತಿ  ನಡೆಯುತ್ತಿದೆ ಬನ್ನಿ ಎಂದು ಕರೆಯಲು ಬಂದರು.ತರಬೇತಿಗಳು
> ನಡೆಯುವಾಗ ನನ್ನನ್ನು ಕರೆದರೆ ಬಹಳ ಖುಷಿಯಿಂದ ನಾನಲ್ಲಿಗೆ ಹೋಗಬಯಸುತ್ತೇನೆ.ಅದರೆ
> ಕರೆಯುವವರು ಮಾತ್ರ ಅತ್ಯಲ್ಪ.ಕಾರಣ ಗೊತ್ತಿಲ್ಲ.ಕಂಡುಕೊಳ್ಳಲು ಇಷ್ಟವಿದ್ದರೂ
> ಕಂಡುಕೊಳ್ಳುವುದಿಲ್ಲ.ಬಿ.ಅರ್.ಸಿ ಕೇಂದ್ರಕ್ಕೆ ಹೋದೆ.ನಲಿ ಕಲಿ ಚಪ್ಪಾಳೆಯೊಂದಿಗೆ ಭವ್ಯ
> ಸ್ವಾಗತ ಸಿಕ್ಕಿತು.ಅಹ್ಮದ್ ಸಾಬ್ ಸ್ವಾಗತಿಸಿ ಈಗ ಪ್ರಾಚಾರ್ಯರು ಮಾತನಾಡುತ್ತಾರೆ ಎಂದು
> ಎಮ್ಮೆಯನ್ನು ನೀರಿಗಿಳಿಸುವ ಥರ ನನ್ನನ್ನು ಮಾತನಾಡಲು ಗ್ರೀನ್ ಸಿಗ್ನಲ್ ಕೊಟ್ಟ. ಈ ಬಾರಿ
> ನಾನು ನೀರಿಗಿಳಿಯಲಿಲ್ಲ.ನಾನು ಮಾತನಾಡುವದಿಲ್ಲ ನಿಮ್ಮೆಲ್ಲರ ಜೊತೆ ಸಂವಾದ
> ಮಾಡುತ್ತೇನೆಂದೆ.ಮಾತಿಗೆ ಪ್ರಾರಂಭಿಸಿದೆ.ತರಬೇತಿಗೆ ಬಂದಿರುವವರು ಬಹಳಷ್ಟು ಜನ ಮಹಿಳೆಯರು.
> ಸಮಸ್ಯೆಗಳನ್ನು ಹೇಳಲು ಶುರು ಮಾಡಿದರು.ಸಾರ್,ನಲಿಕಲಿ, ಕೆಳಗೆ ಕೂಡಬೇಕು.ಮಂಡಿ ನೋವು ಕೂಡಲು
> ಅಗಲ್ಲ.ಕೂತರೆ ಏಳಲು ಅಗಲ್ಲ ಎಂದರು ಓರ್ವ ಶಿಕ್ಷಕಿ.ಮಂಡಿ ನೋವುಗಳಿರುವ ಶಿಕ್ಷಕಿಯರ ಒಕ್ಕೂಟ
> ಇದಕ್ಕೆ ದನಿಗೂಡಿಸಿದರು.ಸಾರ್,ನಲಿ ಕಲಿ ಪ್ರಾರಂಭವಾದಾಗಿನಿಂದ ನಾವೇ ಹ್ಯಾಂಡಲ್ ಮಾಡ್ತೀವಿ
> ಬೇರೆಯವರು ಇದನ್ನು ಮಾಡಬಾರದಾ ಸಾರ್.ನಲಿ ಕಲಿ ಶಿಕ್ಷಕರೆಂದರೆ ಶಾಲೆಯ ಇತರೆ ಶಿಕ್ಷಕರು ನಾವು
> ಸುಮಾರು ಅನ್ನೋ ಥರ ನೋಡ್ತಾರೆ ಸಾರ್..ಎಂದೊಬ್ಬ ಶಿಕ್ಷಕಿ ಎದ್ದು ನಿಂತು
> ಹೇಳಿದಳು..ಅದಕ್ಕೊಂದಿಷ್ಟು ಜನ ದನಿಗೂಡಿಸಿದರು.ನಮಗೂ ಬೇರೆ ವಿಷಯಗಳನ್ನು ಬೋಧಿಸುವಾಸೆ,
> ಹೆಚ್ಚಿನ ತರಗತಿಗಳಿಗೆ ಪಾಠ ಮಾಡಲು ನಮಗೆ ಅವಕಾಶ ಯಾಕೆ ಕೊಡಬಾರದು. ನಾವೇನು ನಲಿ ಕಲಿ
> ಶಿಕ್ಷಕರೆಂದು ನೇಮಕಗೊಂಡಿದ್ದೀವಾ? ಮತ್ತೊಬ್ಬರ ಅಭಿಪ್ರಾಯ ಅದಕ್ಕೆ ದನಿಗೂಡಿಸಿದ ಹಲವಾರು
> ಶಿಕ್ಚಕಿಯರು ರೊಟೇಷನ್ ಸಿಸ್ಟಮ್ ಮಾಡಿ ಸಾರ್ ಪ್ಲೀಜ್ ..ಇವೆಲ್ಲ ಸಂಭಾಷಣೆಯ ತುಣುಕುಗಳು.
> ನಮ್ಮ ಅಹಂನ ಭದ್ರಕೋಟೆಯಿಂದ ಕೆಳಗಿಳಿದು ಶಿಕ್ಷಕರ ಹತ್ತಿರ ಹೀಗೆಲ್ಲಾ ಮಾತನಾಡುವುದಿದೆಯಲ್ಲ
> ಅದಕ್ಕಿಂತ ಖುಷಿ ಇನ್ಯಾವುದರಲ್ಲಿ ಇಲ್ಲ.ಕುಟುಂಬದ ಹಿರಿಯನ ಜೊತೆ ಪ್ರೀತಿಯಿಂದ ಹಕ್ಕು
> ಮಂಡಿಸುವ ಥರ ಪ್ರೀತಿಯಿಂದ ಎಲ್ಲ ಸಮಸ್ಯೆಗಳನ್ನು, ಸಾಧನೆಗಳನ್ನು ಹೇಳುಕೊಂಡು
> ಹಗುರವಾಗುತ್ತಾರೆ.ನಮಗೆ ತನಗರಿವಿಲ್ಲದಂತೆಯೇ ಹತ್ತಿರವಾಗಿಬಿಡುತ್ತಾರೆ.ಕೆಲವರು
> ಸಮಸ್ಯೆಗಳನ್ನು ಹೇಳುತ್ತಾ ಕಣ್ಣೀರಿಟ್ಟಿದ್ದೂ ಸಹ ಉಂಟು.ಅವರೆಲ್ಲರೂ ನಿಜಕ್ಕೂ ಕಾಳಜಿ
> ಇರುವವರು. ಹೃದಯವಂತರು.ನಮ್ಮ ಅಧಿಕಾರಿ ವರ್ಗದ ಅಹಂ ಇಳಿದಾಗ ಮಾತ್ರ ನಾವು ಸುಲಭವಾಗಿ
> ಶಿಕ್ಷಕರ ಮನದಾಳಕ್ಕೆ ಇಳಿಯುತ್ತೇವೆ.ಅವರಿಗೆಲ್ಲ ಸಮಾಧಾನ ಪಡಿಸಿದರೆ.ಅವರ ಕಾರ್ಯವನ್ನು
> ಪ್ರಶಂಸಿಸಿದೆ.ಅವರಿಗಾದ ಹರ್ಷ ಅಷ್ಟಿಷ್ಟಲ್ಲ. ಇಲ್ಲದಿದ್ದ ಉತ್ಸಾಹ ಎಲ್ಲಿಂದಲೋ ಬಂದು
> ಸೇರಿಬಿಟ್ಟಿತು.ಅಗ ಓರ್ವ ಶಿಕ್ಷಕಿ ಎದ್ದು ನಿಂತು "ಸಾರ್, ನಾನು ಬಹಳ ಸಂತಸದಿಂದ,ಕಳಕಳಿಯಿಂದ
> ಕಲಿಸುತ್ತೇನೆ ಸಾರ್.ನಮಗೆ ಅನ್ನ ಹಾಕುವ ಮಕ್ಕಳು ಈ ಶಾಲೆಯ ಮಕ್ಕಳು.ಅವರಿಂದಲೇ ಬರುವ
> ಸಂಬಳ..ಅದರಿಂದಲೇ ನಮಗೆಲ್ಲ ಅನ್ನ.ಅವರು ನಮ್ಮ ಮಾಲೀಕರು ಸಾರ್.ನಮ್ಮ ಹೊಟ್ಟೆಯಲ್ಲಿ ಹುಟ್ಟಿದ
> ಮಕ್ಕಳು ದೊಡ್ಡವರಾಗಿ ನಾಳಿನ ದಿನ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಲ್ಲ.ಅದರೆ ಈ ಪುಟ್ಟ
> ಮಕ್ಕಳು ಈಗಿನಿಂದಲೇ ನಮಗೆ ಅನ್ನ ಹಾಕುತ್ತಿವೆ.ಇದರ ಋಣ ನಾವು ತೀರಿಸಲೇ ಬೇಕಲ್ಲ
> ಸಾರ್"ಎಂದಳು.ಅ ಮಹಾತಾಯಿಯ ಕಂಗಳು ಮಾತನಾಡುವಾಗ ಒದ್ದೆಯಾಗಿದ್ದವು.ನನಗರಿವಿಲ್ಲದಂತೆ ನನ್ನ
> ಗಂಟಲಿನ ನರಗಳು ಉಬ್ಬಿಬಂದವು.ನನ್ನ ಕಂಗಳು ಹನಿಗೂಡಲಾರಂಭಿಸಿದವು.ಅಕೆಯ ಮಾತುಗಳಿಗೆ ಸಭೆ
> ದಿಗ್ಮೂಡಗೊಂಡಿತು.ಸಭೆ ನಿಶ್ಯಬ್ದವಾಯಿತು.ಅಕೆಗೆ ಮಕ್ಕಳ ಬಗ್ಗೆ ಇರುವ ದೊಡ್ಡ
> ಭಾವನೆ,ಪವಿತ್ರಭಾವನೆ,ಅರ್ಪಣಾ ಮನೋಭಾವನೆ,ಋಣ ಸಂದಾಯ..ಅಬ್ಬಬ್ಬಾ...ಏನೆಂದು ಬಣ್ಣಿಸಲಿ ಬಣ್ಣ
> ಹಚ್ಚದಿರುವ ಅ ಸಹಜತೆಯ ಮಗುವಿನಂತಹ ಮನವ.ಅ ತಾಯಿಯ ಹೆಸರು ಕೇಳಲಿಲ್ಲ ನಾನು.ಅಕೆಯನ್ನು
> ನಿರ್ದಿಷ್ಟಗೊಳಿಸಬಾರದೆಂದು.ಅದು ಇಡೀ ಸಭೆಯ ದನಿಯೆಂದು ಭಾವಿಸಿ ಅಕೆಯ ಕಳಕಳಿಗೆ ಮನಸಾರೆ
> ನನ್ನ ಮನದಾಳದ ಮಾತುಗಳಿಂದ ಅಭಿನಂದಿಸಿದೆ.
> ಅಧಿಕಾರಿಗಳಾದ ನಮಗೆಷ್ಟು ಜನರಿಗೆ ಈ ನಿಯತ್ತಿದೆ? ಜವಾಬ್ದಾರಿ ಇದೆ? ನಮ್ಮ ಕೆಲಸದ ಬಗ್ಗೆ
> ನಮಗೆಷ್ಟು ಕಳಕಳಿ ಇದೆ ಎನ್ನುವುದನ್ನು ನಾವು ಮನಮುಟ್ಟಿ ನೋಡಿಕೊಳ್ಳಬೇಕಿದೆ.
> ಈ ಶಿಕ್ಷಕಿಗಿರುವ ಕಳಕಳಿ ನಮಗೆಲ್ಲ ಬರಬೇಕು.ಶಾಲೆಗೆ ಬರುವ ,ನಮಗೆ ಅನ್ನವಿಕ್ಕುವ ನಮ್ಮ
> ಪುಟ್ಟ ಧಣಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು.ಅವರ ಬಗ್ಗೆ ಕಳಕಳಿ,ಜವಾಬ್ದಾರಿ,ಕೆಲಸದ
> ಬಗ್ಗೆ ವಿಧೇಯತೆ ನಮಗಿರಬೇಕು.ಎಷ್ಟು ಜನ ಶಿಕ್ಷಕರು ಈ ನಿಜವನ್ನು ಅರ್ಥಮಾಡಿಕೊಂಡಿದ್ದಾರೆ?
> ನಿಜಕ್ಕೂ ಎಲ್ಲರ ಮನದಾಳಕ್ಕೆ ಈ ಮಾತಿಳಿಯಬೇಕಿದೆ.ಮನಕ್ಕಿಳಿದು ಅಲ್ಲಿ ಅದು
> ಹೆಮ್ಮರವಾಗಬೇಕಿದೆ.ನಾವು ಬಲಿಷ್ಟರಾಗಲು ಬೇರೇನೂ ಬೇಕಿಲ್ಲ ..ಬಡಿದೆಬ್ಬಿಸುವ ಈ ಮಾತು
> ಸಾಕು.ನಾವು ಬಲಿಷ್ಟರಾಗುತ್ತೇವೆ..ನಮ್ಮ ಮನೋದಾರಿದ್ರ್ಯ ತೊಲಗಲು ಅ ಶಿಕ್ಷಕಿಯಾಡಿದ ಮಾತು
> ಸಾಕಲ್ಲವೇ?
> ನಮಸ್ಕಾರ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz6LcpunsoHqjLFd2hCyVabTK7%3DKS2aqRqaL-Z_9z37zJw%40mail.gmail.com
> <https://groups.google.com/d/msgid/socialsciencestf/CACwGsz6LcpunsoHqjLFd2hCyVabTK7%3DKS2aqRqaL-Z_9z37zJw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAPpNVaWXaqSPUoX9AdEiWxwy8YPRPi7%3Dm1Kreh2obZ5siN0YUQ%40mail.gmail.com.
For more options, visit https://groups.google.com/d/optout.

Reply via email to