ತುಂಬಾ ಸುಂದರವಾದ ಘಟನೆಯನ್ನು ಹಂಚಿಕೊಂಡಿದ್ದೀರಾ ಬಸವರಾಜ್ ಸರ್. ನಾವೆಲ್ಲಾ ಅದರ ಸಾರಾಂಶ
ಅರಿತು ನಮ್ಮ ನಮ್ಮ ಶಾಲೆಗಳ ಮಕ್ಕಳನ್ನು ಕ್ರಿಯಾಶಿಲರನ್ನಾಗಿ ಮಾಡಿದರೆ ನಿಜಕ್ಕೂ ಇದಕೊಂದು
ಅರ್ಥ ಬರುತ್ತದೆ.ಆ ಮಹಾತಾಯಿಗೆ ನನ್ನದೊಂದು ಸಲಾಂ.
On Mar 22, 2016 8:47 AM, "Ramesha.K.T Ramesha.K.T" <[email protected]>
wrote:

> ತುಂಬಾ ಮನಕ್ಕೆ ಮುಟ್ಟುವ ಮಾತು ಸರ್ ಅದು "ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ" ಅನ್ನುವ
> ಹಾಗೆ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ "ಮಕ್ಕಳೇ ನಮ್ಮಪಾಲಿನ ದೇವರು", ಆ ದೇವರಿಗೆ
> ಮೋಸಮಾಡಿದರೆ ನಮ್ಮ ಕರ್ತವ್ಯಕ್ಕೆ ದ್ರೋಹ ಮಾಡಿದ ಹಾಗೆ ಎಂದಿಗೂ ಅದಕ್ಕೆ ಕ್ಷಮೆಇಲ್ಲ.
> On Mar 21, 2016 3:23 PM, "Basavaraja Naika H.D." <
> [email protected]> wrote:
>
>> ಒಬ್ಬ ಶಿಕ್ಷಕಿಯ ಮನದಾಳದ.   ಮಾತು ನನ್ನನ್ನು ಬಡಿದೆಬ್ಬಿಸಿತು.ಅ ಮಾತು ಶಿಕ್ಷಕರ
>> ನಿದ್ದೆಗೆಡಿಸಬೇಕು
>> **************************
>> ಹೋದ ವರ್ಷ ಇರಬೇಕೆನ್ನಿಸುತ್ತದೆ.ರಾಯಚೂರು ತಾಲೂಕಿನ ಬಿ.ಅರ್.ಸಿ ಕೇಂದ್ರದಲ್ಲಿ ನಲಿ ಕಲಿ
>> ತರಬೇತಿ ನಡೆಯುತ್ತಿತ್ತು.ನಮ್ಮ ಡಯಟ್ ಅವರಣದಲ್ಲಿಯೆ ಇರುವ ಬಿ.ಅರ್.ಸಿ ಕೇಂದ್ರ.ಬಿ.ಅರ್.ಪಿ
>> ಮಿತ್ರ ಅಹ್ಮದ್ ನನ್ನನ್ನು ತರಬೇತಿ  ನಡೆಯುತ್ತಿದೆ ಬನ್ನಿ ಎಂದು ಕರೆಯಲು ಬಂದರು.ತರಬೇತಿಗಳು
>> ನಡೆಯುವಾಗ ನನ್ನನ್ನು ಕರೆದರೆ ಬಹಳ ಖುಷಿಯಿಂದ ನಾನಲ್ಲಿಗೆ ಹೋಗಬಯಸುತ್ತೇನೆ.ಅದರೆ
>> ಕರೆಯುವವರು ಮಾತ್ರ ಅತ್ಯಲ್ಪ.ಕಾರಣ ಗೊತ್ತಿಲ್ಲ.ಕಂಡುಕೊಳ್ಳಲು ಇಷ್ಟವಿದ್ದರೂ
>> ಕಂಡುಕೊಳ್ಳುವುದಿಲ್ಲ.ಬಿ.ಅರ್.ಸಿ ಕೇಂದ್ರಕ್ಕೆ ಹೋದೆ.ನಲಿ ಕಲಿ ಚಪ್ಪಾಳೆಯೊಂದಿಗೆ ಭವ್ಯ
>> ಸ್ವಾಗತ ಸಿಕ್ಕಿತು.ಅಹ್ಮದ್ ಸಾಬ್ ಸ್ವಾಗತಿಸಿ ಈಗ ಪ್ರಾಚಾರ್ಯರು ಮಾತನಾಡುತ್ತಾರೆ ಎಂದು
>> ಎಮ್ಮೆಯನ್ನು ನೀರಿಗಿಳಿಸುವ ಥರ ನನ್ನನ್ನು ಮಾತನಾಡಲು ಗ್ರೀನ್ ಸಿಗ್ನಲ್ ಕೊಟ್ಟ. ಈ ಬಾರಿ
>> ನಾನು ನೀರಿಗಿಳಿಯಲಿಲ್ಲ.ನಾನು ಮಾತನಾಡುವದಿಲ್ಲ ನಿಮ್ಮೆಲ್ಲರ ಜೊತೆ ಸಂವಾದ
>> ಮಾಡುತ್ತೇನೆಂದೆ.ಮಾತಿಗೆ ಪ್ರಾರಂಭಿಸಿದೆ.ತರಬೇತಿಗೆ ಬಂದಿರುವವರು ಬಹಳಷ್ಟು ಜನ ಮಹಿಳೆಯರು.
>> ಸಮಸ್ಯೆಗಳನ್ನು ಹೇಳಲು ಶುರು ಮಾಡಿದರು.ಸಾರ್,ನಲಿಕಲಿ, ಕೆಳಗೆ ಕೂಡಬೇಕು.ಮಂಡಿ ನೋವು ಕೂಡಲು
>> ಅಗಲ್ಲ.ಕೂತರೆ ಏಳಲು ಅಗಲ್ಲ ಎಂದರು ಓರ್ವ ಶಿಕ್ಷಕಿ.ಮಂಡಿ ನೋವುಗಳಿರುವ ಶಿಕ್ಷಕಿಯರ ಒಕ್ಕೂಟ
>> ಇದಕ್ಕೆ ದನಿಗೂಡಿಸಿದರು.ಸಾರ್,ನಲಿ ಕಲಿ ಪ್ರಾರಂಭವಾದಾಗಿನಿಂದ ನಾವೇ ಹ್ಯಾಂಡಲ್ ಮಾಡ್ತೀವಿ
>> ಬೇರೆಯವರು ಇದನ್ನು ಮಾಡಬಾರದಾ ಸಾರ್.ನಲಿ ಕಲಿ ಶಿಕ್ಷಕರೆಂದರೆ ಶಾಲೆಯ ಇತರೆ ಶಿಕ್ಷಕರು ನಾವು
>> ಸುಮಾರು ಅನ್ನೋ ಥರ ನೋಡ್ತಾರೆ ಸಾರ್..ಎಂದೊಬ್ಬ ಶಿಕ್ಷಕಿ ಎದ್ದು ನಿಂತು
>> ಹೇಳಿದಳು..ಅದಕ್ಕೊಂದಿಷ್ಟು ಜನ ದನಿಗೂಡಿಸಿದರು.ನಮಗೂ ಬೇರೆ ವಿಷಯಗಳನ್ನು ಬೋಧಿಸುವಾಸೆ,
>> ಹೆಚ್ಚಿನ ತರಗತಿಗಳಿಗೆ ಪಾಠ ಮಾಡಲು ನಮಗೆ ಅವಕಾಶ ಯಾಕೆ ಕೊಡಬಾರದು. ನಾವೇನು ನಲಿ ಕಲಿ
>> ಶಿಕ್ಷಕರೆಂದು ನೇಮಕಗೊಂಡಿದ್ದೀವಾ? ಮತ್ತೊಬ್ಬರ ಅಭಿಪ್ರಾಯ ಅದಕ್ಕೆ ದನಿಗೂಡಿಸಿದ ಹಲವಾರು
>> ಶಿಕ್ಚಕಿಯರು ರೊಟೇಷನ್ ಸಿಸ್ಟಮ್ ಮಾಡಿ ಸಾರ್ ಪ್ಲೀಜ್ ..ಇವೆಲ್ಲ ಸಂಭಾಷಣೆಯ ತುಣುಕುಗಳು.
>> ನಮ್ಮ ಅಹಂನ ಭದ್ರಕೋಟೆಯಿಂದ ಕೆಳಗಿಳಿದು ಶಿಕ್ಷಕರ ಹತ್ತಿರ ಹೀಗೆಲ್ಲಾ ಮಾತನಾಡುವುದಿದೆಯಲ್ಲ
>> ಅದಕ್ಕಿಂತ ಖುಷಿ ಇನ್ಯಾವುದರಲ್ಲಿ ಇಲ್ಲ.ಕುಟುಂಬದ ಹಿರಿಯನ ಜೊತೆ ಪ್ರೀತಿಯಿಂದ ಹಕ್ಕು
>> ಮಂಡಿಸುವ ಥರ ಪ್ರೀತಿಯಿಂದ ಎಲ್ಲ ಸಮಸ್ಯೆಗಳನ್ನು, ಸಾಧನೆಗಳನ್ನು ಹೇಳುಕೊಂಡು
>> ಹಗುರವಾಗುತ್ತಾರೆ.ನಮಗೆ ತನಗರಿವಿಲ್ಲದಂತೆಯೇ ಹತ್ತಿರವಾಗಿಬಿಡುತ್ತಾರೆ.ಕೆಲವರು
>> ಸಮಸ್ಯೆಗಳನ್ನು ಹೇಳುತ್ತಾ ಕಣ್ಣೀರಿಟ್ಟಿದ್ದೂ ಸಹ ಉಂಟು.ಅವರೆಲ್ಲರೂ ನಿಜಕ್ಕೂ ಕಾಳಜಿ
>> ಇರುವವರು. ಹೃದಯವಂತರು.ನಮ್ಮ ಅಧಿಕಾರಿ ವರ್ಗದ ಅಹಂ ಇಳಿದಾಗ ಮಾತ್ರ ನಾವು ಸುಲಭವಾಗಿ
>> ಶಿಕ್ಷಕರ ಮನದಾಳಕ್ಕೆ ಇಳಿಯುತ್ತೇವೆ.ಅವರಿಗೆಲ್ಲ ಸಮಾಧಾನ ಪಡಿಸಿದರೆ.ಅವರ ಕಾರ್ಯವನ್ನು
>> ಪ್ರಶಂಸಿಸಿದೆ.ಅವರಿಗಾದ ಹರ್ಷ ಅಷ್ಟಿಷ್ಟಲ್ಲ. ಇಲ್ಲದಿದ್ದ ಉತ್ಸಾಹ ಎಲ್ಲಿಂದಲೋ ಬಂದು
>> ಸೇರಿಬಿಟ್ಟಿತು.ಅಗ ಓರ್ವ ಶಿಕ್ಷಕಿ ಎದ್ದು ನಿಂತು "ಸಾರ್, ನಾನು ಬಹಳ ಸಂತಸದಿಂದ,ಕಳಕಳಿಯಿಂದ
>> ಕಲಿಸುತ್ತೇನೆ ಸಾರ್.ನಮಗೆ ಅನ್ನ ಹಾಕುವ ಮಕ್ಕಳು ಈ ಶಾಲೆಯ ಮಕ್ಕಳು.ಅವರಿಂದಲೇ ಬರುವ
>> ಸಂಬಳ..ಅದರಿಂದಲೇ ನಮಗೆಲ್ಲ ಅನ್ನ.ಅವರು ನಮ್ಮ ಮಾಲೀಕರು ಸಾರ್.ನಮ್ಮ ಹೊಟ್ಟೆಯಲ್ಲಿ ಹುಟ್ಟಿದ
>> ಮಕ್ಕಳು ದೊಡ್ಡವರಾಗಿ ನಾಳಿನ ದಿನ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಲ್ಲ.ಅದರೆ ಈ ಪುಟ್ಟ
>> ಮಕ್ಕಳು ಈಗಿನಿಂದಲೇ ನಮಗೆ ಅನ್ನ ಹಾಕುತ್ತಿವೆ.ಇದರ ಋಣ ನಾವು ತೀರಿಸಲೇ ಬೇಕಲ್ಲ
>> ಸಾರ್"ಎಂದಳು.ಅ ಮಹಾತಾಯಿಯ ಕಂಗಳು ಮಾತನಾಡುವಾಗ ಒದ್ದೆಯಾಗಿದ್ದವು.ನನಗರಿವಿಲ್ಲದಂತೆ ನನ್ನ
>> ಗಂಟಲಿನ ನರಗಳು ಉಬ್ಬಿಬಂದವು.ನನ್ನ ಕಂಗಳು ಹನಿಗೂಡಲಾರಂಭಿಸಿದವು.ಅಕೆಯ ಮಾತುಗಳಿಗೆ ಸಭೆ
>> ದಿಗ್ಮೂಡಗೊಂಡಿತು.ಸಭೆ ನಿಶ್ಯಬ್ದವಾಯಿತು.ಅಕೆಗೆ ಮಕ್ಕಳ ಬಗ್ಗೆ ಇರುವ ದೊಡ್ಡ
>> ಭಾವನೆ,ಪವಿತ್ರಭಾವನೆ,ಅರ್ಪಣಾ ಮನೋಭಾವನೆ,ಋಣ ಸಂದಾಯ..ಅಬ್ಬಬ್ಬಾ...ಏನೆಂದು ಬಣ್ಣಿಸಲಿ ಬಣ್ಣ
>> ಹಚ್ಚದಿರುವ ಅ ಸಹಜತೆಯ ಮಗುವಿನಂತಹ ಮನವ.ಅ ತಾಯಿಯ ಹೆಸರು ಕೇಳಲಿಲ್ಲ ನಾನು.ಅಕೆಯನ್ನು
>> ನಿರ್ದಿಷ್ಟಗೊಳಿಸಬಾರದೆಂದು.ಅದು ಇಡೀ ಸಭೆಯ ದನಿಯೆಂದು ಭಾವಿಸಿ ಅಕೆಯ ಕಳಕಳಿಗೆ ಮನಸಾರೆ
>> ನನ್ನ ಮನದಾಳದ ಮಾತುಗಳಿಂದ ಅಭಿನಂದಿಸಿದೆ.
>> ಅಧಿಕಾರಿಗಳಾದ ನಮಗೆಷ್ಟು ಜನರಿಗೆ ಈ ನಿಯತ್ತಿದೆ? ಜವಾಬ್ದಾರಿ ಇದೆ? ನಮ್ಮ ಕೆಲಸದ ಬಗ್ಗೆ
>> ನಮಗೆಷ್ಟು ಕಳಕಳಿ ಇದೆ ಎನ್ನುವುದನ್ನು ನಾವು ಮನಮುಟ್ಟಿ ನೋಡಿಕೊಳ್ಳಬೇಕಿದೆ.
>> ಈ ಶಿಕ್ಷಕಿಗಿರುವ ಕಳಕಳಿ ನಮಗೆಲ್ಲ ಬರಬೇಕು.ಶಾಲೆಗೆ ಬರುವ ,ನಮಗೆ ಅನ್ನವಿಕ್ಕುವ ನಮ್ಮ
>> ಪುಟ್ಟ ಧಣಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು.ಅವರ ಬಗ್ಗೆ ಕಳಕಳಿ,ಜವಾಬ್ದಾರಿ,ಕೆಲಸದ
>> ಬಗ್ಗೆ ವಿಧೇಯತೆ ನಮಗಿರಬೇಕು.ಎಷ್ಟು ಜನ ಶಿಕ್ಷಕರು ಈ ನಿಜವನ್ನು ಅರ್ಥಮಾಡಿಕೊಂಡಿದ್ದಾರೆ?
>> ನಿಜಕ್ಕೂ ಎಲ್ಲರ ಮನದಾಳಕ್ಕೆ ಈ ಮಾತಿಳಿಯಬೇಕಿದೆ.ಮನಕ್ಕಿಳಿದು ಅಲ್ಲಿ ಅದು
>> ಹೆಮ್ಮರವಾಗಬೇಕಿದೆ.ನಾವು ಬಲಿಷ್ಟರಾಗಲು ಬೇರೇನೂ ಬೇಕಿಲ್ಲ ..ಬಡಿದೆಬ್ಬಿಸುವ ಈ ಮಾತು
>> ಸಾಕು.ನಾವು ಬಲಿಷ್ಟರಾಗುತ್ತೇವೆ..ನಮ್ಮ ಮನೋದಾರಿದ್ರ್ಯ ತೊಲಗಲು ಅ ಶಿಕ್ಷಕಿಯಾಡಿದ ಮಾತು
>> ಸಾಕಲ್ಲವೇ?
>> ನಮಸ್ಕಾರ
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CACwGsz6LcpunsoHqjLFd2hCyVabTK7%3DKS2aqRqaL-Z_9z37zJw%40mail.gmail.com
>> <https://groups.google.com/d/msgid/socialsciencestf/CACwGsz6LcpunsoHqjLFd2hCyVabTK7%3DKS2aqRqaL-Z_9z37zJw%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAPpNVaWXaqSPUoX9AdEiWxwy8YPRPi7%3Dm1Kreh2obZ5siN0YUQ%40mail.gmail.com
> <https://groups.google.com/d/msgid/socialsciencestf/CAPpNVaWXaqSPUoX9AdEiWxwy8YPRPi7%3Dm1Kreh2obZ5siN0YUQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABM%3DbW2L%2Brvg5%3DJS780kSErKnR8Rs58No_SzA2VS-vwkft96SA%40mail.gmail.com.
For more options, visit https://groups.google.com/d/optout.

Reply via email to