ಇಂದು ವಿಶ್ವಜಲದಿನ ವಿಷಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. On 22-Mar-2016 11:44 am, "vasu shyagoti" <[email protected]> wrote:
> ನೀರು ಉಳಿಸಲು ಇವರು ಮನೆಮನೆ ನಲ್ಲಿ ರಿಪೇರಿ ಮಾಡ್ತಾರೆ! > > ಅಬಿದ್ ಸುರತಿ ಎಂಬ ಹೆಸರನ್ನು ನೀವೆಲ್ಲ ಕೇಳಿರಬಹುದು. ಭಾರತ ಕಂಡ ಹೆಸರಾಂತ ಲೇಖಕರಲ್ಲಿ > ಅಬಿದ್ ಸುರತಿ ಕೂಡ ಒಬ್ಬರು. ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಸಣ್ಣ ಕಥೆಗಳು, > ಕಾದಂಬರಿಗಳು, ನಾಟಕಗಳು, ಏಕಾಂಕಗಳನ್ನು ಬರೆದಿರುವುದು ಅಬಿದ್ ಸುರತಿಯವರ ಹೆಚ್ಚುಗಾರಿಕೆ. > ಅವರ ಕೃತಿಗಳು, ಹತ್ತಕ್ಕೂ ಹೆಚ್ಚು ಭಾಷೆಗೆ ಅನುವಾದವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿನ > ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ, ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಜೊತೆಗೆ, > ಹಿಂದಿ ಸಾಹಿತ್ಯ ಸಂಸ್ಥಾ ಪ್ರಶಸ್ತಿ, ಗುಜರಾತ್ ಸರ್ಕಾರ ನೀಡುವ ಗುಜರಾತ್ ಗೌರವ್ ಪ್ರಶಸ್ತಿ > ಕೂಡ ಅಬಿದ್ ಸುರತಿಯವರ ಪಾಲಾಗಿದೆ. ಇವತ್ತು ಹಿಂದಿ ಅಥವಾ ಗುಜರಾತಿ ಭಾಷೆಯಲ್ಲಿ ಬರೆಯುವ > ಪ್ರತಿಯೊಬ್ಬರೂ, ತಮ್ಮ ಬರಹಗಳನ್ನು ಅಬಿದ್ ಗಮನಿಸಲಿ ಎಂದು ಬಯಸುತ್ತಾರೆ. > ಒಂದರ್ಥದಲ್ಲಿ ಜೀವಂತ ದಂತಕಥೆ ಎನಿಸಿಕೊಂಡಿರುವ ಅಬಿದ್ ಸುರತಿ, ಕಥೆ, ಕಾವ್ಯ, ಕಾದಂಬರಿಗಳ > ಮಧ್ಯೆಯೇ ಕಳೆದು ಹೋದವರಲ್ಲ. ಅವರು ಕಳೆದ ನಲವತ್ತು ವರ್ಷಗಳಿಂದಲೂ ಹಿಂದಿ ಹಾಗೂ ಗುಜರಾತಿ > ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ. ವ್ಯಂಗ್ಯ ಚಿತ್ರ ರಚಿಸುತ್ತಾರೆ. ಪೇಂಟಿಂಗ್ > ಮಾಡುತ್ತಾರೆ. ಪರಿಸರ ಸಂಬಂಧಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಒಟ್ಟಾರೆಯಾಗಿ > ಹೇಳುವುದಾದರೆ -ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿದೆಯಲ್ಲ, ಆ ವರ್ಗಕ್ಕೆ ಸೇರಿದವರು ಅಬಿದ್ > ಸುರತಿ. ಅವರ ಪ್ರತಿಯೊಂದು ಮಾತು, ವರ್ತನೆ ಮತ್ತು ಕೆಲಸದ ಹಿಂದೆ ಜನಪರ ಕಾಳಜಿ ಇದ್ದೇ > ಇರುತ್ತದೆ. > ಇಂಥ ಹಿನ್ನೆಲೆಯ ಅಬಿದ್ ಸುರತಿ ಅವರಿಗೆ ಕೆಲವು ವರ್ಷಗಳ ಹಿಂದೆ ರಾಷ್ಟ್ರಪತಿ ಕಚೇರಿಯಿಂದ > ಒಂದು ಪತ್ರ ಬಂತು: ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಪರಿಗಣಿಸಿ ರಾಷ್ಟ್ರೀಯ > ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ > ನಡೆಯಲಿದೆ. ನೀವು ದಯವಿಟ್ಟು ಪ್ರಶಸ್ತಿ ಸ್ವೀಕರಿಸಲು ರಾಜಧಾನಿ ದೆಹಲಿಗೆ ಬರಬೇಕು ಎಂಬುದು > ಪತ್ರದ ಸಾರಾಂಶ. ಬೇರೆ ಯಾರೇ ಆಗಿದ್ದರೂ, ಈ ಪತ್ರ ಕಂಡಾಕ್ಷಣ ಕುಣಿದಾಡುತ್ತಾ ಒಪ್ಪಿಗೆ ಪತ್ರ > ಬರೆದು ಬಿಡುತ್ತಿದ್ದರೇನೋ. ಆದರೆ ಅಬಿದ್ ಸುರತಿ ಹಾಗೆ ಮಾಡಲಿಲ್ಲ. ಪತ್ರ ಬಂದಿರುವುದು > ರಾಷ್ಟ್ರಪತಿಗಳ ಕಾರ್ಯಾಲಯದಿಂದ ಎಂದು ಗೊತ್ತಿದ್ದರೂ ತಕ್ಷಣವೇ ಹೀಗೊಂದು ಉತ್ತರ ಬರೆದರು: > 'ನಾನೊಂದು ಹೊಸ ಕಾದಂಬರಿ ರಚನೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಹಾಗಾಗಿ ದೆಹಲಿಗೆ ಬಂದು > ಹೋಗುವ ಉತ್ಸಾಹ ಮತ್ತು ಸಮಯ ಎರಡೂ ನನಗಿಲ್ಲ. ನಿಮ್ಮ ಆಹ್ವಾನವನ್ನು > ತಿರಸ್ಕರಿಸುತ್ತಿರುವುದಕ್ಕೆ ಕ್ಷಮೆಯಿರಲಿ...' > ಸ್ವಾರಸ್ಯದ ಸಂಗತಿಯೊಂದಿದೆ ಕೇಳಿ. ದೇಶದ ಪ್ರಥಮ ಪ್ರಜೆ ಅನ್ನಿಸಿಕೊಂಡಿರುವ ರಾಷ್ಟ್ರಪತಿಯೇ > ಬನ್ನಿ ಎಂದು ಕರೆದರೂ, ಸಾರಿ, ನನಗೆ ಟೈಂ ಇಲ್ಲ ಎಂದಿದ್ದ ಸುರತಿ, ಕಳೆದ ಏಳು ವರ್ಷಗಳಿಂದಲೂ > ನಲ್ಲಿ ರಿಪೇರಿ ಮಾಡುವ ಉಪಕರಣಗಳನ್ನು ಹಿಡಿದುಕೊಂಡು ಪ್ರತಿ ಭಾನುವಾರವೂ ಮುಂಬಯಿಯ > ಬಡಾವಣೆಗಳನ್ನು ಸುತ್ತುತ್ತಾರೆ. ತಮಗೆ ಎದುರಾದ ನಾಗರೀಕರನ್ನು ನಿಲ್ಲಿಸಿ ಕೇಳುತ್ತಾರೆ: > ನಿಮ್ಮ ಮನೆ ಅಥವಾ ಏರಿಯಾದಲ್ಲಿ ನಲ್ಲಿಗಳನ್ನು ರಿಪೇರಿ ಮಾಡಬೇಕಿದೆಯಾ? ಹಾಗೇನಾದ್ರೂ ಇದ್ರೆ > ತಕ್ಷಣವೇ ಹೇಳಿ. ನಾನು ರಿಪೇರಿ ಮಾಡಿ ಕೊಡ್ತೇನೆ. ಈ ಕೆಲಸಕ್ಕೆ ನಯಾ ಪೈಸೆಯ ಫೀ ಇಲ್ಲ. > ಎಲ್ಲವನ್ನೂ ಉಚಿತವಾಗಿ ಮಾಡಿ ಕೊಡ್ತೇನೆ...' > ಕಥೆ, ಕಾದಂಬರಿ ಹಾಗೂ ನಾಟಕಗಳಲ್ಲಿ ಅದ್ಭುತ ರಮ್ಯ ಪಾತ್ರಗಳನ್ನು ಸೃಷ್ಟಿಸುವ, ಅವುಗಳಿಂದ > ನಮ್ಮ ಮನಸ್ಸಿನಲ್ಲಿರುವ ಮಾತುಗಳನ್ನೇ ಹೇಳಿಸುವ ಕಾದಂಬರಿಕಾರ, ಹೀಗೆ ಉಚಿತವಾಗಿ ನಲ್ಲಿ > ರಿಪೇರಿ ಮಾಡುವಂಥ ಕೆಲಸಕ್ಕೆ ಮುಂದಾಗಿರುವುದಾದರೂ ಏಕೆ? ಇಂಥದೊಂದು ಸೇವೆಗೆ ಮುಂದಾಗುವಂತೆ > ಸುರತಿಯವರನ್ನು ಪ್ರೇರೇಪಿಸಿದ ಸಂದರ್ಭವಾದರೂ ಯಾವುದು ಎಂದು ಪ್ರಶ್ನಿಸಿದರೆ ಅವರು > ಉತ್ತರಿಸುವುದು ಹೀಗೆ: ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಮುಖ್ಯಸ್ಥರಾದ ಬುಟ್ರೋಸ್ > ಘಾಲಿ ಅವರ ಸಂದರ್ಶನವೊಂದು ಪ್ರಕಟವಾಗಿತ್ತು. ಘಾಲಿಯವರು ತುಂಬ ಸ್ಪಷ್ಟವಾಗಿ ಹೇಳಿದ್ದರು- > 2025ರ ವೇಳೆಗೆ ಪ್ರಪಂಚದ 40ಕ್ಕೂ ಹೆಚ್ಚು ರಾಷ್ಟ್ರಗಳು ಕುಡಿಯುವ ನೀರಿನ ತೊಂದರೆಯಿಂದ > ಪರದಾಡುವುದು ಗ್ಯಾರಂಟಿ. ನೀರಿನ ಮಹತ್ವ ನಮ್ಮ ಜನರಿಗೆ ಗೊತ್ತೇ ಇಲ್ಲ. ಕಣ್ಣೆದುರೇ > ವ್ಯರ್ಥವಾಗಿ ನೀರು ಹರಿದು ಹೋಗುತ್ತಿದ್ದರೂ ಅದನ್ನು ಉಳಿಸುವ ಸಣ್ಣ ಪ್ರಯತ್ನವನ್ನೂ ಯಾರೂ > ಮಾಡುತ್ತಿಲ್ಲ...' ಘಾಲಿಯವರ ಮಾತುಗಳನ್ನು ಕೇಳುತ್ತಿದ್ದಂತೆಯೇ ನನಗೆ ಬಾಲ್ಯದ ಬದುಕು > ನೆನಪಾಯಿತು. ಆಗ ಒಂದು ಕೊಡ ನೀರಿಗೂ ವಿಪರೀತ ಕಷ್ಟಪಡಬೇಕಿತ್ತು. ಮೈಲುಗಟ್ಟಲೆ ದೂರದಿಂದ > ನೀರನ್ನು ಹೊತ್ತು ತರಬೇಕಾಗಿತ್ತು. ಎಷ್ಟೋ ಬಾರಿ, ನೀರಿಗೆಂದು ಮರಳಲ್ಲಿ ಗುಂಡಿ > ತೋಡುತ್ತಿದ್ದೆವು. ಆದರೆ ನೀರೇ ಬರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಒಂದು ಕೊಡ ನೀರು > ಸಂಗ್ರಹಿಸುವ ವೇಳೆಗೆ ತಲೆಕೆಟ್ಟುಹೋಗುತ್ತಿತ್ತು. > 2007ರ ಸಂದರ್ಭದಲ್ಲಿ ಗೆಳೆಯನ ಮನೆಯಲ್ಲಿ ಹರಟುತ್ತಾ ಕೂತಿದ್ದರು ಸುರತಿ. ಮನೆಯ ಎದುರಿನ > ನಲ್ಲಿಯ ಕ್ಯಾಪ್ ಸಡಿಲಾಗಿದ್ದ ಕಾರಣದಿಂದ ಸುಮ್ಮನೇ ನೀರು ಹರಿಯುತ್ತಲೇ ಇತ್ತು. 'ಅಯ್ಯೋ, > ತುಂಬಾ ಹೊತ್ತಿಂದ ನೀರು ಹರಿದು ಹೋಗ್ತಾ ಇದೆಯಲ್ಲ?' ಎಂದು ಉದ್ಗರಿಸುತ್ತಾ ಗೆಳೆಯರ ಗಮನಕ್ಕೆ > ತಂದರು ಸುರತಿ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಜೊತೆಗೆ ಒಂದೇ ಒಂದು > ನಲ್ಲಿ ರಿಪೇರಿ ಮಾಡಲು ಅವತ್ತಿನ ಸಂದರ್ಭದಲ್ಲಿ ಯಾರೂ ಬರುತ್ತಿರಲಿಲ್ಲ. ನಲ್ಲಿ ರಿಪೇರಿ > ಮಾಡುವವರನ್ನು ಕರೆ ತಂದರೆ ಅವರಿಗೆ ಕಾಫಿ, ತಿಂಡಿ, ಬೀಡಿಯ ಖರ್ಚಿನ ಜೊತೆಗೆ ಇಡೀ ದಿನ ಕೂಲಿ > ಕೊಟ್ಟು ಕಳಿಸಬೇಕಿತ್ತು. ಇದೆಲ್ಲಾ ದುಬಾರಿ ವ್ಯವಹಾರ. ಬೇಕಿದ್ದರೆ ಜಲಮಂಡಳಿಯವರು ಈ ಬಗ್ಗೆ > ತಲೆಕೆಡಿಸಿಕೊಳ್ಳಲಿ ಎಂದು ಎಲ್ಲರೂ ಹೇಳಿಬಿಟ್ಟರು. > ಕೆಲ ದಿನಗಳ ನಂತರ, ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಯಿತು. ನಾಗರಿಕರು ಹಾಗೂ > ಜಲಮಂಡಳಿಯವರ ನಿರ್ಲಕ್ಷ್ಯದಿಂದ ಪ್ರತಿದಿನವೂ ಹೇಗೆಲ್ಲಾ ನೀರು ಪೋಲಾಗುತ್ತಿದೆ, ಕೇವಲ ಒಂದು > ಗಂಟೆಯ ಅವಧಿಗೆ ಒಂದು ನಲ್ಲಿಯ ಕ್ಯಾಪ್ ಸಡಿಲಾದರೆ ಎಷ್ಟು ಸಾವಿರ ಲೀಟರ್ ನೀರು ಅನ್ಯಾಯವಾಗಿ > ಪೋಲಾಗುತ್ತದೆ ಎಂಬುದನ್ನು ಆ ವರದಿಯಲ್ಲಿ ಅಂಕಿ ಅಂಶಗಳೊಂದಿಗೆ ವಿವರಿಸಲಾಗಿತ್ತು. ಸುರತಿ, > ಅವತ್ತೇ ನಿರ್ಧರಿಸಿದರು: ಇಂದಿನಿಂದ ನೀರು ಪೋಲಾಗುವುದನ್ನು ತಡೆಯುವುದೇ ನನ್ನ ಗುರಿ. > ಮನೆಮನೆಗೆ, ಬಡಾವಣೆಯಿಂದ ಬಡಾವಣೆಗೆ ಅಲೆದಾಡಿದರೂ ಸೈ, ನಾನು ಆದಷ್ಟೂ ನೀರು ಪೋಲಾಗದಂತೆ > ತಡೆಯಬೇಕು. ತಡೆಯಲೇಬೇಕು...' > ಮನೆಮನೆಗೆ ಹೋಗಿ ನಲ್ಲಿ ರಿಪೇರಿ ಮಾಡುವುದು ಖಂಡಿತ ಸುಲಭವಲ್ಲ. ಮೊದಲಿಗೆ ಆ ಏರಿಯಾದ ಜನರ > ವಿಶ್ವಾಸ ಸಂಪಾದಿಸಬೇಕು. ನಂತರ ಅವರಿಗೆ ನಲ್ಲಿ ರಿಪೇರಿಯವರು ಬರುತ್ತಿದ್ದಾರೆ ಎಂದು > ಗೊತ್ತಾಗಬೇಕು. ಅದನ್ನು ಪ್ರಚಾರ ಮಾಡಲು ಜನ ಬೇಕು. ಪಾಂಪ್ಲೆಟ್ ಮೂಲಕ ಜಾಹೀರಾತು ನೀಡಲು ಹಣ > ಬೇಕು. ಇದಕ್ಕೆಲ್ಲಾ ಸ್ವಲ್ಪ ಫಂಡ್ ಜೊತೆಗಿಟ್ಟುಕೊಂಡರೆ ಒಳ್ಳೆಯದು ಎಂದು ಸುರತಿ > ಅಂದುಕೊಂಡರು. ಆದರೆ, ಅವತ್ತಿಗೆ ಅವರಲ್ಲಿ ಹೆಚ್ಚು ಹಣವಿರಲಿಲ್ಲ. ಮುಂದೇನು ಎಂದು ಅವರು > ಯೋಚಿಸುತ್ತಿದ್ದಾಗಲೇ ಆಕಸ್ಮಿಕವೊಂದು ನಡೆದು ಹೋಯಿತು. ಸಾಹಿತ್ಯ ಕ್ಷೇತ್ರಕ್ಕೆ ಸುರತಿಯವರ > ಕೊಡುಗೆಯನ್ನು ಪರಿಗಣಿಸಿ, ಹಿಂದಿ ಸಾಹಿತ್ಯ ಸಂಸ್ಥಾನವು ಒಂದು ಲಕ್ಷ ರೂಪಾಯಿಗಳ ಬಹುಮಾನ > ಘೋಷಿಸಿತು. ಈ ಹಣವನ್ನೇ ಮೂಲ ಬಂಡವಾಳ ಮಾಡಿಕೊಂಡ ಅಬಿದ್ ಸುರತಿ, ಅವತ್ತೇ Drop Dead > ಹೆಸರಿನ ಎನ್ಜಿಒ ಆರಂಭಿಸಿದರು. ಮಾರುಕಟ್ಟೆಗೆ ಹೋಗಿ ನಲ್ಲಿಗೆ ಹಾಕುವ ವಿವಿಧ ಅಳತೆಯ ನಟ್ಟು > ಹಾಗೂ ಬೋಲ್ಟುಗಳನ್ನು ನೂರರ ಸಂಖ್ಯೆಯಲ್ಲಿ ಖರೀದಿಸಿದರು. ತಮ್ಮೊಂದಿಗೆ ಕೆಲಸ ಮಾಡಲು ರಿಯಾಜ್ > ಎಂಬ ಪಳಗಿದ ನಲ್ಲಿ ರಿಪೇರಿ ಕೆಲಸಗಾರನನ್ನೂ, ತೇಜಾಲ್ ಎಂಬ ಸಮಾಜಸೇವಾ ಕಾರ್ಯಕರ್ತೆಯನ್ನೂ > ಸೇರಿಸಿಕೊಂಡರು. ಆಮೇಲೆ ಏನಾಯಿತು ಗೊತ್ತಾ? > ತಮ್ಮ ತಂಡದ ಸದಸ್ಯರೊಂದಿಗೆ ಪ್ರತಿ ಭಾನುವಾರವೂ ಅಬಿದ್ ಸುರತಿ ಮುಂಬಯಿಯ ಬಡಾವಣೆಗಳಿಗೆ > ಭೇಟಿ ಕೊಡಲಾರಂಭಿಸಿದರು. > ಅಷ್ಟಕ್ಕೂ ಅಂದಿನ ದಿನವೇ, ತೇಜಾಲ್ ತಮ್ಮ ತಂಡದ ಕೆಲಸ ಮತ್ತು ಉದ್ದೇಶ ವಿವರಿಸುವ > ಪಾಂಪ್ಲೆಟ್ ಹಾಗೂ ಪೋಸ್ಟರ್ಗಳನ್ನು ಅಂಟಿಸಿರುತ್ತಾರೆ. ಅದನ್ನು ಗಮನಿಸಿದ ಜನ, ಫ್ರೀಯಾಗಿ > ಕೆಲಸ ಮಾಡಿಕೊಡ್ತಾರೆ ಎಂಬ ಆಸೆಯಿಂದ ನಲ್ಲಿಗಳ ಕ್ಯಾಪ್ಗಳನ್ನು ಟೈಟ್ ಮಾಡಿಸಿಕೊಂಡಿದ್ದಾರೆ. > ನಂಬಿ ಸ್ವಾಮಿ ಹೀಗೆ, 2007ರಲ್ಲಿ ಅಬಿದ್ ಸುರತಿ ಮತ್ತು ಸಂಗಡಿಗರು 1553 ಮನೆಗಳಿಗೆ ಭೇಟಿ > ನೀಡಿದರು. 400ಕ್ಕೂ ಹೆಚ್ಚು ನಲ್ಲಿಗಳ ರಿಪೇರಿ ಮಾಡಿದರು. ಆ ಮೂಲಕ, ಸಾವಿರಾರು ಲೀಟರ್ ನೀರು > ಪೋಲಾಗುವುದನ್ನು ತಪ್ಪಿಸಿದರು. > 2008ರಲ್ಲಿ ಜಲ ಸಂರಕ್ಷಣೆಯ ವಿಷಯವಾಗಿ ಒಂದು ಸಿನಿಮಾ ನಿರ್ಮಾಣದ ಉತ್ಸಾಹದಲ್ಲಿದ್ದ > ಹೆಸರಾಂತ ನಿರ್ದೇಶಕ ಶೇಖರ್ ಕಪೂರ್ಗೆ ಅಬಿದ್ ಸುರತಿ ಮತ್ತು ತಂಡದವರ > ಪ್ರತಿಫಲಾಪೇಕ್ಷೆಯಿಲ್ಲದ ಕೆಲಸದ ಬಗ್ಗೆ ತಿಳಿಯಿತು. ಆತ ತಕ್ಷಣವೇ ತನ್ನ ವೆಬ್ಸೈಟ್ನಲ್ಲಿ > ಹೀಗೆ ಬರೆದರು: ಪ್ರಿಯ ಅಬಿದ್ ಸುರತಿಯವರೇ, ನೀವು ಆರಂಭಿಸಿರುವ ಅಪರೂಪದ ಕೆಲಸಕ್ಕೆ > ಅಭಿನಂದನೆಗಳು. ಸೇವೆಯೇ ಜೀವನ ಎಂದು ಭಾವಿಸುವ ನಿಮ್ಮಂಥ ಹಲವರು ಈ ಲೋಕದಲ್ಲಿದ್ದಾರೆ ಎಂಬುದು > ನಮ್ಮ ಹೆಮ್ಮೆ. ನಿಮ್ಮ ಕೆಲಸ, ಈ ಲೋಕದ ಎಲ್ಲರಿಗೂ ಸ್ಫೂರ್ತಿ ನೀಡುವಂಥದು...' > ಮುಂದೆ ಸುರತಿಯವರ Drop Dead ತಂಡ ಮತ್ತು ಅದರ ಉದ್ದೇಶದ ಬಗ್ಗೆ ಸ್ಥಳೀಯ ಪತ್ರಿಕೆಗಳು > ವಿಶೇಷ ವರದಿಗಳನ್ನು ಪ್ರಕಟಿಸಿದವು. ಪರಿಣಾಮವಾಗಿ, ಮಹಾರಾಷ್ಟ್ರದ ಮೂಲೆಮೂಲೆಗಳಿಂದಲೂ > ಸುರತಿಯವರನ್ನು ಅಭಿನಂದಿಸುವ ಇ-ಮೇಲ್ಗಳು ಸಾವಿರದ ಸಂಖ್ಯೆಯಲ್ಲಿ ಬಂದವು. ಹೀಗೆ ಮೇಲ್ > ಕಳಿಸಿದವರ ಪಟ್ಟಿಯಲ್ಲಿ ಅನಾಮಿಕರಿದ್ದರು. ಅಧಿಕಾರಿಗಳಿದ್ದರು. ಸೆಲೆಬ್ರಿಟಿಗಳೂ ಇದ್ದರು. > ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ನ ಬಾದ್ಶಾ ಎಂದೇ ಹೆಸರಾಗಿರುವ ಶಾರೂಖ್ ಖಾನ್ ಕೂಡ > ಇದ್ದ. ಪತ್ರಿಕಾ ವರದಿಯಲ್ಲಿ 'City of Angels'' ಎಂಬ ಹೆಡ್ಡಿಂಗ್ನೊಂದಿಗೆ ಸುರತಿ ಮತ್ತು > ಸಂಗಡಿಗರ ಕೆಲಸವನ್ನು ಹೊಗಳಲಾಗಿತ್ತು. ತನ್ನ ಪ್ರತಿಕ್ರಿಯೆಯಲ್ಲಿ ಶಾರೂಖ್ ಹೀಗೆ ಬರೆದಿದ್ದ: > ಸರ್ ಜಿ, ಚಿಕ್ಕಂದಿನಲ್ಲಿ ನೀವು ಸೃಷ್ಟಿಸಿದ ಕಾರ್ಟೂನ್ಗಳನ್ನೂ, ಕಥೆಗಳನ್ನೂ ಓದುತ್ತಾ > ಬೆರಗಾದವನು ನಾನು. ಈಗ ಬೇರೊಂದು ಬಗೆಯ ಮಹಾನ್ ಕೆಲಸದಿಂದ ನನ್ನ ಮನಸ್ಸು ಗೆದ್ದಿದ್ದೀರಿ. ಈ > ಲೇಖನ ಓದಿದ ನಂತರ, ದೇವತೆಗಳು ನಮ್ಮ ಸುತ್ತಮುತ್ತಲಲ್ಲೇ ಇದ್ದಾರೆ ಎಂಬುದು ಅರ್ಥವಾಗಿದೆ. > ನಿಮಗೆ ನಮಸ್ಕಾರ, ಅಭಿನಂದನೆ... > ಜಲಸಂರಕ್ಷಣೆಗೆ ಅಬಿದ್ ಸುರತಿಯವರು ನಡೆಸುತ್ತಿರುವ ಹೋರಾಟವನ್ನು ಗಮನಿಸಿದ > ಸಿಎನ್ಎನ್-ಐಬಿಎನ್ ಚಾನೆಲ್, ಮೊದಲು ಈ ಬಗ್ಗೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತು. ಕೆಲ > ದಿನಗಳ ನಂತರ 'Be the Change' ಎಂಬ ಪ್ರಶಸ್ತಿಗೆ ಸುರತಿಯವರನ್ನೇ ಆಯ್ಕೆ ಮಾಡಿತು. ಇದೇ > ಸಂದರ್ಭದಲ್ಲಿ ಬರ್ಲಿನ್ನ ಚಾನೆಲ್ ಕೂಡ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. > ಪರಿಣಾಮವಾಗಿ, ಸುರತಿಯವರ 'ಸೇವೆ' ಪ್ರಪಂಚದ ಎಲ್ಲರನ್ನೂ ತಲುಪಿತು. > ಅನ್ಯಾಯವಾಗಿ ಚರಂಡಿ ಪಾಲಾಗುತ್ತಿರುವ ನೀರನ್ನು ಉಳಿಸಲು ಕಳೆದ ಏಳು ವರ್ಷಗಳ ಅವಧಿಯಲ್ಲಿ > ಸುರತಿಯವರು ಅದೆಷ್ಟು ಬಡಾವಣೆ ಸುತ್ತಿದರು? ಎಷ್ಟು ಮನೆಗಳ ಬಾಗಿಲು ಬಡಿದರು? ಅದೆಷ್ಟು > ನಲ್ಲಿಗಳ ನಟ್ಟು, ಬೋಲ್ಟ್ಗಳನ್ನು ಸರಿಪಡಿಸಿದರು? ನಯಾ ಪೈಸೆ ಆದಾಯವಿಲ್ಲದ ಈ ಕೆಲಸಕ್ಕಾಗಿ > ಅದೆಷ್ಟು ಜೊತೆ ಚಪ್ಪಲಿಗಳನ್ನು ಸವೆಸಿದರು? ಈ ಪ್ರಶ್ನೆಗಳಿಗೆ ಖಚಿತ ಉತ್ತರ ಯಾರಿಗೂ > ಗೊತ್ತಿಲ್ಲ. ಆದರೆ, ತನ್ನ ಏಕಾಂಗಿ ಹೋರಾಟದಿಂದ ಸುರತಿಯವರು ಈ 7 ವರ್ಷಗಳಲ್ಲಿ ಕಡಿಮೆಯೆಂದರೂ > 5 ಲಕ್ಷ ಲೀಟರ್ ನೀರು ಉಳಿಸಿದ್ದಾರೆ ಎಂದು ಅವರ ಕೆಲಸವನ್ನು ಹತ್ತಿರದಿಂದ ಕಂಡವರೆಲ್ಲಾ > ಹೇಳುತ್ತಾರೆ. > ಬೇಸಿಗೆ ಎಂಬುದು ಒಂದೊಂದೇ ಹೆಜ್ಜೆ ಇಡುತ್ತಾ ಬರುತ್ತಿರುವ ಸಂದರ್ಭದಲ್ಲಿ ದೇಶದ ಹಲವು > ಮಹಾನಗರಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಅದನ್ನು ಗಮನಿಸಿರುವ ಸುರತಿ ಹೇಳುತ್ತಾರೆ: > 'ನೀರೆಂಬುದು ಕೇವಲ ಹನಿಯಲ್ಲ. ಅದು ಜೀವಜಲ, ಅಮೃತ. ಅದನ್ನು ಕಾಪಾಡುವುದು ಎಲ್ಲರ > ಕರ್ತವ್ಯವಾಗಬೇಕು. ಜಲಸಂರಕ್ಷಣೆಯ ಕೆಲಸಕ್ಕೆ ಹೆಚ್ಚಿನ ಹಣದ ಅವಶ್ಯಕತೆಯಿಲ್ಲ. ನಾಯಕತ್ವದ > ಹಂಗೂ ಬೇಕಿಲ್ಲ. ಈ ಕೆಲಸವನ್ನುಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಎಲ್ಲರೂ ತಾವಿರುವ > ಜಾಗದಲ್ಲೇ ಆರಂಭಿಸಬಹುದು. ಇವತ್ತು ನಾವು ನೀರನ್ನು ಉಳಿಸಿದರೆ ಮಾತ್ರ ನಾಳೆ ನಮ್ಮ ಬದುಕು > ಸುಂದರವಾಗುತ್ತದೆ...' > ದೂರದ ಮುಂಬಯಿಯಲ್ಲಿ ನಿಂತು ಸುರತಿಯವರು ಹೇಳಿರುವ ಮಾತುಗಳು ಈಗಾಗಲೇ ನೀರಿನ ಸಮಸ್ಯೆಗೆ > ತುತ್ತಾಗಿರುವ ಕರ್ನಾಟಕದ ಎಲ್ಲರಿಗೂ ಹಿರಿಯನೊಬ್ಬ ಹೇಳುವ ಎಚ್ಚರಿಕೆಯ ಮಾತುಗಳಂತೆ > ಕೇಳಿಸುತ್ತಿದೆಯಲ್ಲವೆ? > ಮಿತ್ರ ಶ್ರೀನಿವಾಸ ರೈತ ಅವರು ಅಬಿದ್ ಸುರತಿ ಬಗ್ಗೆ ಕಳಿಸಿದ ಲೇಖನವೊಂದು ಈ ಸಂದರ್ಭದಲ್ಲಿ > ನಮ್ಮೆಲ್ಲರಲ್ಲಿ ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲಿ. > -ವಿಶ್ವೇಶ್ವರ ಭಟ್ > > ಸಂಗ್ರಹ > ವಾಸು. ಶ್ಯಾಗೋಟಿ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CALEc3K%3DHOzn1aMwCGw_2cQrwt5K2%3DKeSv-HwyEQKSUPcXwt7Zg%40mail.gmail.com > <https://groups.google.com/d/msgid/socialsciencestf/CALEc3K%3DHOzn1aMwCGw_2cQrwt5K2%3DKeSv-HwyEQKSUPcXwt7Zg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAFr_QNA6F7WFG6v%3DEt1TYF1VhysNbj1PB-t7Uy2enJKfQhOwLw%40mail.gmail.com. For more options, visit https://groups.google.com/d/optout.
