*really good article *

2016-03-22 22:21 GMT+05:30 Harishchandra Prabhu <[email protected]>
:

> ಒಳ್ಳೆಯ  ಲೇಖನ
>
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: [email protected]
> blog:NammaBellare.blogspot.com
> school blog:* gpucbellare.blogspot.com <http://gpucbellare.blogspot.com>*
> mobile: 9449592475
>
> 2016-03-22 20:33 GMT+05:30 Valya Naik <[email protected]>:
>
>> ಶಾಲ ಧ್ಯೇಯ ವಾಕ್ಯಕಳಿಸಿ
>>
>> On Mar 22, 2016 11:44 AM, "vasu shyagoti" <[email protected]> wrote:
>> >
>> > ನೀರು ಉಳಿಸಲು ಇವರು ಮನೆಮನೆ ನಲ್ಲಿ ರಿಪೇರಿ ಮಾಡ್ತಾರೆ!
>> >
>> > ಅಬಿದ್ ಸುರತಿ ಎಂಬ ಹೆಸರನ್ನು ನೀವೆಲ್ಲ ಕೇಳಿರಬಹುದು. ಭಾರತ ಕಂಡ ಹೆಸರಾಂತ ಲೇಖಕರಲ್ಲಿ
>> ಅಬಿದ್ ಸುರತಿ ಕೂಡ ಒಬ್ಬರು. ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಸಣ್ಣ ಕಥೆಗಳು,
>> ಕಾದಂಬರಿಗಳು, ನಾಟಕಗಳು, ಏಕಾಂಕಗಳನ್ನು ಬರೆದಿರುವುದು ಅಬಿದ್ ಸುರತಿಯವರ ಹೆಚ್ಚುಗಾರಿಕೆ.
>> ಅವರ ಕೃತಿಗಳು, ಹತ್ತಕ್ಕೂ ಹೆಚ್ಚು ಭಾಷೆಗೆ ಅನುವಾದವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿನ
>> ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ, ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಜೊತೆಗೆ,
>> ಹಿಂದಿ ಸಾಹಿತ್ಯ ಸಂಸ್ಥಾ ಪ್ರಶಸ್ತಿ, ಗುಜರಾತ್ ಸರ್ಕಾರ ನೀಡುವ ಗುಜರಾತ್ ಗೌರವ್ ಪ್ರಶಸ್ತಿ
>> ಕೂಡ ಅಬಿದ್ ಸುರತಿಯವರ ಪಾಲಾಗಿದೆ. ಇವತ್ತು ಹಿಂದಿ ಅಥವಾ ಗುಜರಾತಿ ಭಾಷೆಯಲ್ಲಿ ಬರೆಯುವ
>> ಪ್ರತಿಯೊಬ್ಬರೂ, ತಮ್ಮ ಬರಹಗಳನ್ನು ಅಬಿದ್ ಗಮನಿಸಲಿ ಎಂದು ಬಯಸುತ್ತಾರೆ.
>> > ಒಂದರ್ಥದಲ್ಲಿ ಜೀವಂತ ದಂತಕಥೆ ಎನಿಸಿಕೊಂಡಿರುವ ಅಬಿದ್ ಸುರತಿ, ಕಥೆ, ಕಾವ್ಯ,
>> ಕಾದಂಬರಿಗಳ ಮಧ್ಯೆಯೇ ಕಳೆದು ಹೋದವರಲ್ಲ. ಅವರು ಕಳೆದ ನಲವತ್ತು ವರ್ಷಗಳಿಂದಲೂ ಹಿಂದಿ ಹಾಗೂ
>> ಗುಜರಾತಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ. ವ್ಯಂಗ್ಯ ಚಿತ್ರ ರಚಿಸುತ್ತಾರೆ.
>> ಪೇಂಟಿಂಗ್ ಮಾಡುತ್ತಾರೆ. ಪರಿಸರ ಸಂಬಂಧಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
>> ಒಟ್ಟಾರೆಯಾಗಿ ಹೇಳುವುದಾದರೆ -ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿದೆಯಲ್ಲ, ಆ ವರ್ಗಕ್ಕೆ
>> ಸೇರಿದವರು ಅಬಿದ್ ಸುರತಿ. ಅವರ ಪ್ರತಿಯೊಂದು ಮಾತು, ವರ್ತನೆ ಮತ್ತು ಕೆಲಸದ ಹಿಂದೆ ಜನಪರ
>> ಕಾಳಜಿ ಇದ್ದೇ ಇರುತ್ತದೆ.
>> > ಇಂಥ ಹಿನ್ನೆಲೆಯ ಅಬಿದ್ ಸುರತಿ ಅವರಿಗೆ ಕೆಲವು ವರ್ಷಗಳ ಹಿಂದೆ ರಾಷ್ಟ್ರಪತಿ
>> ಕಚೇರಿಯಿಂದ ಒಂದು ಪತ್ರ ಬಂತು: ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಪರಿಗಣಿಸಿ
>> ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ
>> ಸಮಾರಂಭ ನಡೆಯಲಿದೆ. ನೀವು ದಯವಿಟ್ಟು ಪ್ರಶಸ್ತಿ ಸ್ವೀಕರಿಸಲು ರಾಜಧಾನಿ ದೆಹಲಿಗೆ ಬರಬೇಕು
>> ಎಂಬುದು ಪತ್ರದ ಸಾರಾಂಶ. ಬೇರೆ ಯಾರೇ ಆಗಿದ್ದರೂ, ಈ ಪತ್ರ ಕಂಡಾಕ್ಷಣ ಕುಣಿದಾಡುತ್ತಾ
>> ಒಪ್ಪಿಗೆ ಪತ್ರ ಬರೆದು ಬಿಡುತ್ತಿದ್ದರೇನೋ. ಆದರೆ ಅಬಿದ್ ಸುರತಿ ಹಾಗೆ ಮಾಡಲಿಲ್ಲ. ಪತ್ರ
>> ಬಂದಿರುವುದು ರಾಷ್ಟ್ರಪತಿಗಳ ಕಾರ್ಯಾಲಯದಿಂದ ಎಂದು ಗೊತ್ತಿದ್ದರೂ ತಕ್ಷಣವೇ ಹೀಗೊಂದು ಉತ್ತರ
>> ಬರೆದರು: 'ನಾನೊಂದು ಹೊಸ ಕಾದಂಬರಿ ರಚನೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಹಾಗಾಗಿ ದೆಹಲಿಗೆ
>> ಬಂದು ಹೋಗುವ ಉತ್ಸಾಹ ಮತ್ತು ಸಮಯ ಎರಡೂ ನನಗಿಲ್ಲ. ನಿಮ್ಮ ಆಹ್ವಾನವನ್ನು
>> ತಿರಸ್ಕರಿಸುತ್ತಿರುವುದಕ್ಕೆ ಕ್ಷಮೆಯಿರಲಿ...'
>> > ಸ್ವಾರಸ್ಯದ ಸಂಗತಿಯೊಂದಿದೆ ಕೇಳಿ. ದೇಶದ ಪ್ರಥಮ ಪ್ರಜೆ ಅನ್ನಿಸಿಕೊಂಡಿರುವ
>> ರಾಷ್ಟ್ರಪತಿಯೇ ಬನ್ನಿ ಎಂದು ಕರೆದರೂ, ಸಾರಿ, ನನಗೆ ಟೈಂ ಇಲ್ಲ ಎಂದಿದ್ದ ಸುರತಿ, ಕಳೆದ ಏಳು
>> ವರ್ಷಗಳಿಂದಲೂ ನಲ್ಲಿ ರಿಪೇರಿ ಮಾಡುವ ಉಪಕರಣಗಳನ್ನು ಹಿಡಿದುಕೊಂಡು ಪ್ರತಿ ಭಾನುವಾರವೂ
>> ಮುಂಬಯಿಯ ಬಡಾವಣೆಗಳನ್ನು ಸುತ್ತುತ್ತಾರೆ. ತಮಗೆ ಎದುರಾದ ನಾಗರೀಕರನ್ನು ನಿಲ್ಲಿಸಿ
>> ಕೇಳುತ್ತಾರೆ: ನಿಮ್ಮ ಮನೆ ಅಥವಾ ಏರಿಯಾದಲ್ಲಿ ನಲ್ಲಿಗಳನ್ನು ರಿಪೇರಿ ಮಾಡಬೇಕಿದೆಯಾ?
>> ಹಾಗೇನಾದ್ರೂ ಇದ್ರೆ ತಕ್ಷಣವೇ ಹೇಳಿ. ನಾನು ರಿಪೇರಿ ಮಾಡಿ ಕೊಡ್ತೇನೆ. ಈ ಕೆಲಸಕ್ಕೆ ನಯಾ
>> ಪೈಸೆಯ ಫೀ ಇಲ್ಲ. ಎಲ್ಲವನ್ನೂ ಉಚಿತವಾಗಿ ಮಾಡಿ ಕೊಡ್ತೇನೆ...'
>> > ಕಥೆ, ಕಾದಂಬರಿ ಹಾಗೂ ನಾಟಕಗಳಲ್ಲಿ ಅದ್ಭುತ ರಮ್ಯ ಪಾತ್ರಗಳನ್ನು ಸೃಷ್ಟಿಸುವ,
>> ಅವುಗಳಿಂದ ನಮ್ಮ ಮನಸ್ಸಿನಲ್ಲಿರುವ ಮಾತುಗಳನ್ನೇ ಹೇಳಿಸುವ ಕಾದಂಬರಿಕಾರ, ಹೀಗೆ ಉಚಿತವಾಗಿ
>> ನಲ್ಲಿ ರಿಪೇರಿ ಮಾಡುವಂಥ ಕೆಲಸಕ್ಕೆ ಮುಂದಾಗಿರುವುದಾದರೂ ಏಕೆ? ಇಂಥದೊಂದು ಸೇವೆಗೆ
>> ಮುಂದಾಗುವಂತೆ ಸುರತಿಯವರನ್ನು ಪ್ರೇರೇಪಿಸಿದ ಸಂದರ್ಭವಾದರೂ ಯಾವುದು ಎಂದು ಪ್ರಶ್ನಿಸಿದರೆ
>> ಅವರು ಉತ್ತರಿಸುವುದು ಹೀಗೆ: ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಮುಖ್ಯಸ್ಥರಾದ
>> ಬುಟ್ರೋಸ್ ಘಾಲಿ ಅವರ ಸಂದರ್ಶನವೊಂದು ಪ್ರಕಟವಾಗಿತ್ತು. ಘಾಲಿಯವರು ತುಂಬ ಸ್ಪಷ್ಟವಾಗಿ
>> ಹೇಳಿದ್ದರು- 2025ರ ವೇಳೆಗೆ ಪ್ರಪಂಚದ 40ಕ್ಕೂ ಹೆಚ್ಚು ರಾಷ್ಟ್ರಗಳು ಕುಡಿಯುವ ನೀರಿನ
>> ತೊಂದರೆಯಿಂದ ಪರದಾಡುವುದು ಗ್ಯಾರಂಟಿ. ನೀರಿನ ಮಹತ್ವ ನಮ್ಮ ಜನರಿಗೆ ಗೊತ್ತೇ ಇಲ್ಲ.
>> ಕಣ್ಣೆದುರೇ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದ್ದರೂ ಅದನ್ನು ಉಳಿಸುವ ಸಣ್ಣ
>> ಪ್ರಯತ್ನವನ್ನೂ ಯಾರೂ ಮಾಡುತ್ತಿಲ್ಲ...' ಘಾಲಿಯವರ ಮಾತುಗಳನ್ನು ಕೇಳುತ್ತಿದ್ದಂತೆಯೇ ನನಗೆ
>> ಬಾಲ್ಯದ ಬದುಕು ನೆನಪಾಯಿತು. ಆಗ ಒಂದು ಕೊಡ ನೀರಿಗೂ ವಿಪರೀತ ಕಷ್ಟಪಡಬೇಕಿತ್ತು.
>> ಮೈಲುಗಟ್ಟಲೆ ದೂರದಿಂದ ನೀರನ್ನು ಹೊತ್ತು ತರಬೇಕಾಗಿತ್ತು. ಎಷ್ಟೋ ಬಾರಿ, ನೀರಿಗೆಂದು
>> ಮರಳಲ್ಲಿ ಗುಂಡಿ ತೋಡುತ್ತಿದ್ದೆವು. ಆದರೆ ನೀರೇ ಬರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ
>> ಒಂದು ಕೊಡ ನೀರು ಸಂಗ್ರಹಿಸುವ ವೇಳೆಗೆ ತಲೆಕೆಟ್ಟುಹೋಗುತ್ತಿತ್ತು.
>> > 2007ರ ಸಂದರ್ಭದಲ್ಲಿ ಗೆಳೆಯನ ಮನೆಯಲ್ಲಿ ಹರಟುತ್ತಾ ಕೂತಿದ್ದರು ಸುರತಿ. ಮನೆಯ ಎದುರಿನ
>> ನಲ್ಲಿಯ ಕ್ಯಾಪ್ ಸಡಿಲಾಗಿದ್ದ ಕಾರಣದಿಂದ ಸುಮ್ಮನೇ ನೀರು ಹರಿಯುತ್ತಲೇ ಇತ್ತು. 'ಅಯ್ಯೋ,
>> ತುಂಬಾ ಹೊತ್ತಿಂದ ನೀರು ಹರಿದು ಹೋಗ್ತಾ ಇದೆಯಲ್ಲ?' ಎಂದು ಉದ್ಗರಿಸುತ್ತಾ ಗೆಳೆಯರ ಗಮನಕ್ಕೆ
>> ತಂದರು ಸುರತಿ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಜೊತೆಗೆ ಒಂದೇ ಒಂದು
>> ನಲ್ಲಿ ರಿಪೇರಿ ಮಾಡಲು ಅವತ್ತಿನ ಸಂದರ್ಭದಲ್ಲಿ ಯಾರೂ ಬರುತ್ತಿರಲಿಲ್ಲ. ನಲ್ಲಿ ರಿಪೇರಿ
>> ಮಾಡುವವರನ್ನು ಕರೆ ತಂದರೆ ಅವರಿಗೆ ಕಾಫಿ, ತಿಂಡಿ, ಬೀಡಿಯ ಖರ್ಚಿನ ಜೊತೆಗೆ ಇಡೀ ದಿನ ಕೂಲಿ
>> ಕೊಟ್ಟು ಕಳಿಸಬೇಕಿತ್ತು. ಇದೆಲ್ಲಾ ದುಬಾರಿ ವ್ಯವಹಾರ. ಬೇಕಿದ್ದರೆ ಜಲಮಂಡಳಿಯವರು ಈ ಬಗ್ಗೆ
>> ತಲೆಕೆಡಿಸಿಕೊಳ್ಳಲಿ ಎಂದು ಎಲ್ಲರೂ ಹೇಳಿಬಿಟ್ಟರು.
>> > ಕೆಲ ದಿನಗಳ ನಂತರ, ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಯಿತು. ನಾಗರಿಕರು ಹಾಗೂ
>> ಜಲಮಂಡಳಿಯವರ ನಿರ್ಲಕ್ಷ್ಯದಿಂದ ಪ್ರತಿದಿನವೂ ಹೇಗೆಲ್ಲಾ ನೀರು ಪೋಲಾಗುತ್ತಿದೆ, ಕೇವಲ ಒಂದು
>> ಗಂಟೆಯ ಅವಧಿಗೆ ಒಂದು ನಲ್ಲಿಯ ಕ್ಯಾಪ್ ಸಡಿಲಾದರೆ ಎಷ್ಟು ಸಾವಿರ ಲೀಟರ್ ನೀರು ಅನ್ಯಾಯವಾಗಿ
>> ಪೋಲಾಗುತ್ತದೆ ಎಂಬುದನ್ನು ಆ ವರದಿಯಲ್ಲಿ ಅಂಕಿ ಅಂಶಗಳೊಂದಿಗೆ ವಿವರಿಸಲಾಗಿತ್ತು. ಸುರತಿ,
>> ಅವತ್ತೇ ನಿರ್ಧರಿಸಿದರು: ಇಂದಿನಿಂದ ನೀರು ಪೋಲಾಗುವುದನ್ನು ತಡೆಯುವುದೇ ನನ್ನ ಗುರಿ.
>> ಮನೆಮನೆಗೆ, ಬಡಾವಣೆಯಿಂದ ಬಡಾವಣೆಗೆ ಅಲೆದಾಡಿದರೂ ಸೈ, ನಾನು ಆದಷ್ಟೂ ನೀರು ಪೋಲಾಗದಂತೆ
>> ತಡೆಯಬೇಕು. ತಡೆಯಲೇಬೇಕು...'
>> > ಮನೆಮನೆಗೆ ಹೋಗಿ ನಲ್ಲಿ ರಿಪೇರಿ ಮಾಡುವುದು ಖಂಡಿತ ಸುಲಭವಲ್ಲ. ಮೊದಲಿಗೆ ಆ ಏರಿಯಾದ
>> ಜನರ ವಿಶ್ವಾಸ ಸಂಪಾದಿಸಬೇಕು. ನಂತರ ಅವರಿಗೆ ನಲ್ಲಿ ರಿಪೇರಿಯವರು ಬರುತ್ತಿದ್ದಾರೆ ಎಂದು
>> ಗೊತ್ತಾಗಬೇಕು. ಅದನ್ನು ಪ್ರಚಾರ ಮಾಡಲು ಜನ ಬೇಕು. ಪಾಂಪ್ಲೆಟ್ ಮೂಲಕ ಜಾಹೀರಾತು ನೀಡಲು ಹಣ
>> ಬೇಕು. ಇದಕ್ಕೆಲ್ಲಾ ಸ್ವಲ್ಪ ಫಂಡ್ ಜೊತೆಗಿಟ್ಟುಕೊಂಡರೆ ಒಳ್ಳೆಯದು ಎಂದು ಸುರತಿ
>> ಅಂದುಕೊಂಡರು. ಆದರೆ, ಅವತ್ತಿಗೆ ಅವರಲ್ಲಿ ಹೆಚ್ಚು ಹಣವಿರಲಿಲ್ಲ. ಮುಂದೇನು ಎಂದು ಅವರು
>> ಯೋಚಿಸುತ್ತಿದ್ದಾಗಲೇ ಆಕಸ್ಮಿಕವೊಂದು ನಡೆದು ಹೋಯಿತು. ಸಾಹಿತ್ಯ ಕ್ಷೇತ್ರಕ್ಕೆ ಸುರತಿಯವರ
>> ಕೊಡುಗೆಯನ್ನು ಪರಿಗಣಿಸಿ, ಹಿಂದಿ ಸಾಹಿತ್ಯ ಸಂಸ್ಥಾನವು ಒಂದು ಲಕ್ಷ ರೂಪಾಯಿಗಳ ಬಹುಮಾನ
>> ಘೋಷಿಸಿತು. ಈ ಹಣವನ್ನೇ ಮೂಲ ಬಂಡವಾಳ ಮಾಡಿಕೊಂಡ ಅಬಿದ್ ಸುರತಿ, ಅವತ್ತೇ Drop Dead
>> ಹೆಸರಿನ ಎನ್ಜಿಒ ಆರಂಭಿಸಿದರು. ಮಾರುಕಟ್ಟೆಗೆ ಹೋಗಿ ನಲ್ಲಿಗೆ ಹಾಕುವ ವಿವಿಧ ಅಳತೆಯ ನಟ್ಟು
>> ಹಾಗೂ ಬೋಲ್ಟುಗಳನ್ನು ನೂರರ ಸಂಖ್ಯೆಯಲ್ಲಿ ಖರೀದಿಸಿದರು. ತಮ್ಮೊಂದಿಗೆ ಕೆಲಸ ಮಾಡಲು ರಿಯಾಜ್
>> ಎಂಬ ಪಳಗಿದ ನಲ್ಲಿ ರಿಪೇರಿ ಕೆಲಸಗಾರನನ್ನೂ, ತೇಜಾಲ್ ಎಂಬ ಸಮಾಜಸೇವಾ ಕಾರ್ಯಕರ್ತೆಯನ್ನೂ
>> ಸೇರಿಸಿಕೊಂಡರು. ಆಮೇಲೆ ಏನಾಯಿತು ಗೊತ್ತಾ?
>> > ತಮ್ಮ ತಂಡದ ಸದಸ್ಯರೊಂದಿಗೆ ಪ್ರತಿ ಭಾನುವಾರವೂ ಅಬಿದ್ ಸುರತಿ ಮುಂಬಯಿಯ ಬಡಾವಣೆಗಳಿಗೆ
>> ಭೇಟಿ ಕೊಡಲಾರಂಭಿಸಿದರು.
>> > ಅಷ್ಟಕ್ಕೂ ಅಂದಿನ ದಿನವೇ, ತೇಜಾಲ್ ತಮ್ಮ ತಂಡದ ಕೆಲಸ ಮತ್ತು ಉದ್ದೇಶ ವಿವರಿಸುವ
>> ಪಾಂಪ್ಲೆಟ್ ಹಾಗೂ ಪೋಸ್ಟರ್ಗಳನ್ನು ಅಂಟಿಸಿರುತ್ತಾರೆ. ಅದನ್ನು ಗಮನಿಸಿದ ಜನ, ಫ್ರೀಯಾಗಿ
>> ಕೆಲಸ ಮಾಡಿಕೊಡ್ತಾರೆ ಎಂಬ ಆಸೆಯಿಂದ ನಲ್ಲಿಗಳ ಕ್ಯಾಪ್ಗಳನ್ನು ಟೈಟ್ ಮಾಡಿಸಿಕೊಂಡಿದ್ದಾರೆ.
>> ನಂಬಿ ಸ್ವಾಮಿ ಹೀಗೆ, 2007ರಲ್ಲಿ ಅಬಿದ್ ಸುರತಿ ಮತ್ತು ಸಂಗಡಿಗರು 1553 ಮನೆಗಳಿಗೆ ಭೇಟಿ
>> ನೀಡಿದರು. 400ಕ್ಕೂ ಹೆಚ್ಚು ನಲ್ಲಿಗಳ ರಿಪೇರಿ ಮಾಡಿದರು. ಆ ಮೂಲಕ, ಸಾವಿರಾರು ಲೀಟರ್ ನೀರು
>> ಪೋಲಾಗುವುದನ್ನು ತಪ್ಪಿಸಿದರು.
>> > 2008ರಲ್ಲಿ ಜಲ ಸಂರಕ್ಷಣೆಯ ವಿಷಯವಾಗಿ ಒಂದು ಸಿನಿಮಾ ನಿರ್ಮಾಣದ ಉತ್ಸಾಹದಲ್ಲಿದ್ದ
>> ಹೆಸರಾಂತ ನಿರ್ದೇಶಕ ಶೇಖರ್ ಕಪೂರ್ಗೆ ಅಬಿದ್ ಸುರತಿ ಮತ್ತು ತಂಡದವರ
>> ಪ್ರತಿಫಲಾಪೇಕ್ಷೆಯಿಲ್ಲದ ಕೆಲಸದ ಬಗ್ಗೆ ತಿಳಿಯಿತು. ಆತ ತಕ್ಷಣವೇ ತನ್ನ ವೆಬ್ಸೈಟ್ನಲ್ಲಿ
>> ಹೀಗೆ ಬರೆದರು: ಪ್ರಿಯ ಅಬಿದ್ ಸುರತಿಯವರೇ, ನೀವು ಆರಂಭಿಸಿರುವ ಅಪರೂಪದ ಕೆಲಸಕ್ಕೆ
>> ಅಭಿನಂದನೆಗಳು. ಸೇವೆಯೇ ಜೀವನ ಎಂದು ಭಾವಿಸುವ ನಿಮ್ಮಂಥ ಹಲವರು ಈ ಲೋಕದಲ್ಲಿದ್ದಾರೆ ಎಂಬುದು
>> ನಮ್ಮ ಹೆಮ್ಮೆ. ನಿಮ್ಮ ಕೆಲಸ, ಈ ಲೋಕದ ಎಲ್ಲರಿಗೂ ಸ್ಫೂರ್ತಿ ನೀಡುವಂಥದು...'
>> > ಮುಂದೆ ಸುರತಿಯವರ Drop Dead ತಂಡ ಮತ್ತು ಅದರ ಉದ್ದೇಶದ ಬಗ್ಗೆ ಸ್ಥಳೀಯ ಪತ್ರಿಕೆಗಳು
>> ವಿಶೇಷ ವರದಿಗಳನ್ನು ಪ್ರಕಟಿಸಿದವು. ಪರಿಣಾಮವಾಗಿ, ಮಹಾರಾಷ್ಟ್ರದ ಮೂಲೆಮೂಲೆಗಳಿಂದಲೂ
>> ಸುರತಿಯವರನ್ನು ಅಭಿನಂದಿಸುವ ಇ-ಮೇಲ್ಗಳು ಸಾವಿರದ ಸಂಖ್ಯೆಯಲ್ಲಿ ಬಂದವು. ಹೀಗೆ ಮೇಲ್
>> ಕಳಿಸಿದವರ ಪಟ್ಟಿಯಲ್ಲಿ ಅನಾಮಿಕರಿದ್ದರು. ಅಧಿಕಾರಿಗಳಿದ್ದರು. ಸೆಲೆಬ್ರಿಟಿಗಳೂ ಇದ್ದರು.
>> ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ನ ಬಾದ್ಶಾ ಎಂದೇ ಹೆಸರಾಗಿರುವ ಶಾರೂಖ್ ಖಾನ್ ಕೂಡ
>> ಇದ್ದ. ಪತ್ರಿಕಾ ವರದಿಯಲ್ಲಿ 'City of Angels'' ಎಂಬ ಹೆಡ್ಡಿಂಗ್ನೊಂದಿಗೆ ಸುರತಿ ಮತ್ತು
>> ಸಂಗಡಿಗರ ಕೆಲಸವನ್ನು ಹೊಗಳಲಾಗಿತ್ತು. ತನ್ನ ಪ್ರತಿಕ್ರಿಯೆಯಲ್ಲಿ ಶಾರೂಖ್ ಹೀಗೆ ಬರೆದಿದ್ದ:
>> ಸರ್ ಜಿ, ಚಿಕ್ಕಂದಿನಲ್ಲಿ ನೀವು ಸೃಷ್ಟಿಸಿದ ಕಾರ್ಟೂನ್ಗಳನ್ನೂ, ಕಥೆಗಳನ್ನೂ ಓದುತ್ತಾ
>> ಬೆರಗಾದವನು ನಾನು. ಈಗ ಬೇರೊಂದು ಬಗೆಯ ಮಹಾನ್ ಕೆಲಸದಿಂದ ನನ್ನ ಮನಸ್ಸು ಗೆದ್ದಿದ್ದೀರಿ. ಈ
>> ಲೇಖನ ಓದಿದ ನಂತರ, ದೇವತೆಗಳು ನಮ್ಮ ಸುತ್ತಮುತ್ತಲಲ್ಲೇ ಇದ್ದಾರೆ ಎಂಬುದು ಅರ್ಥವಾಗಿದೆ.
>> ನಿಮಗೆ ನಮಸ್ಕಾರ, ಅಭಿನಂದನೆ...
>> > ಜಲಸಂರಕ್ಷಣೆಗೆ ಅಬಿದ್ ಸುರತಿಯವರು ನಡೆಸುತ್ತಿರುವ ಹೋರಾಟವನ್ನು ಗಮನಿಸಿದ
>> ಸಿಎನ್ಎನ್-ಐಬಿಎನ್ ಚಾನೆಲ್, ಮೊದಲು ಈ ಬಗ್ಗೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತು. ಕೆಲ
>> ದಿನಗಳ ನಂತರ 'Be the Change' ಎಂಬ ಪ್ರಶಸ್ತಿಗೆ ಸುರತಿಯವರನ್ನೇ ಆಯ್ಕೆ ಮಾಡಿತು. ಇದೇ
>> ಸಂದರ್ಭದಲ್ಲಿ ಬರ್ಲಿನ್ನ ಚಾನೆಲ್ ಕೂಡ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತು.
>> ಪರಿಣಾಮವಾಗಿ, ಸುರತಿಯವರ 'ಸೇವೆ' ಪ್ರಪಂಚದ ಎಲ್ಲರನ್ನೂ ತಲುಪಿತು.
>> > ಅನ್ಯಾಯವಾಗಿ ಚರಂಡಿ ಪಾಲಾಗುತ್ತಿರುವ ನೀರನ್ನು ಉಳಿಸಲು ಕಳೆದ ಏಳು ವರ್ಷಗಳ ಅವಧಿಯಲ್ಲಿ
>> ಸುರತಿಯವರು ಅದೆಷ್ಟು ಬಡಾವಣೆ ಸುತ್ತಿದರು? ಎಷ್ಟು ಮನೆಗಳ ಬಾಗಿಲು ಬಡಿದರು? ಅದೆಷ್ಟು
>> ನಲ್ಲಿಗಳ ನಟ್ಟು, ಬೋಲ್ಟ್ಗಳನ್ನು ಸರಿಪಡಿಸಿದರು? ನಯಾ ಪೈಸೆ ಆದಾಯವಿಲ್ಲದ ಈ ಕೆಲಸಕ್ಕಾಗಿ
>> ಅದೆಷ್ಟು ಜೊತೆ ಚಪ್ಪಲಿಗಳನ್ನು ಸವೆಸಿದರು? ಈ ಪ್ರಶ್ನೆಗಳಿಗೆ ಖಚಿತ ಉತ್ತರ ಯಾರಿಗೂ
>> ಗೊತ್ತಿಲ್ಲ. ಆದರೆ, ತನ್ನ ಏಕಾಂಗಿ ಹೋರಾಟದಿಂದ ಸುರತಿಯವರು ಈ 7 ವರ್ಷಗಳಲ್ಲಿ ಕಡಿಮೆಯೆಂದರೂ
>> 5 ಲಕ್ಷ ಲೀಟರ್ ನೀರು ಉಳಿಸಿದ್ದಾರೆ ಎಂದು ಅವರ ಕೆಲಸವನ್ನು ಹತ್ತಿರದಿಂದ ಕಂಡವರೆಲ್ಲಾ
>> ಹೇಳುತ್ತಾರೆ.
>> > ಬೇಸಿಗೆ ಎಂಬುದು ಒಂದೊಂದೇ ಹೆಜ್ಜೆ ಇಡುತ್ತಾ ಬರುತ್ತಿರುವ ಸಂದರ್ಭದಲ್ಲಿ ದೇಶದ ಹಲವು
>> ಮಹಾನಗರಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಅದನ್ನು ಗಮನಿಸಿರುವ ಸುರತಿ ಹೇಳುತ್ತಾರೆ:
>> 'ನೀರೆಂಬುದು ಕೇವಲ ಹನಿಯಲ್ಲ. ಅದು ಜೀವಜಲ, ಅಮೃತ. ಅದನ್ನು ಕಾಪಾಡುವುದು ಎಲ್ಲರ
>> ಕರ್ತವ್ಯವಾಗಬೇಕು. ಜಲಸಂರಕ್ಷಣೆಯ ಕೆಲಸಕ್ಕೆ ಹೆಚ್ಚಿನ ಹಣದ ಅವಶ್ಯಕತೆಯಿಲ್ಲ. ನಾಯಕತ್ವದ
>> ಹಂಗೂ ಬೇಕಿಲ್ಲ. ಈ ಕೆಲಸವನ್ನುಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಎಲ್ಲರೂ ತಾವಿರುವ
>> ಜಾಗದಲ್ಲೇ ಆರಂಭಿಸಬಹುದು. ಇವತ್ತು ನಾವು ನೀರನ್ನು ಉಳಿಸಿದರೆ ಮಾತ್ರ ನಾಳೆ ನಮ್ಮ ಬದುಕು
>> ಸುಂದರವಾಗುತ್ತದೆ...'
>> > ದೂರದ ಮುಂಬಯಿಯಲ್ಲಿ ನಿಂತು ಸುರತಿಯವರು ಹೇಳಿರುವ ಮಾತುಗಳು ಈಗಾಗಲೇ ನೀರಿನ ಸಮಸ್ಯೆಗೆ
>> ತುತ್ತಾಗಿರುವ ಕರ್ನಾಟಕದ ಎಲ್ಲರಿಗೂ ಹಿರಿಯನೊಬ್ಬ ಹೇಳುವ ಎಚ್ಚರಿಕೆಯ ಮಾತುಗಳಂತೆ
>> ಕೇಳಿಸುತ್ತಿದೆಯಲ್ಲವೆ?
>> > ಮಿತ್ರ ಶ್ರೀನಿವಾಸ ರೈತ ಅವರು ಅಬಿದ್ ಸುರತಿ ಬಗ್ಗೆ ಕಳಿಸಿದ ಲೇಖನವೊಂದು ಈ
>> ಸಂದರ್ಭದಲ್ಲಿ ನಮ್ಮೆಲ್ಲರಲ್ಲಿ ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲಿ.
>> > -ವಿಶ್ವೇಶ್ವರ ಭಟ್
>> >
>> > ಸಂಗ್ರಹ
>> > ವಾಸು. ಶ್ಯಾಗೋಟಿ.
>> >
>> > --
>> > *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>> >
>> > **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> > ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> > ---
>> > You received this message because you are subscribed to the Google
>> Groups "SocialScience STF" group.
>> > To unsubscribe from this group and stop receiving emails from it, send
>> an email to [email protected].
>> > To post to this group, send email to [email protected].
>> > Visit this group at https://groups.google.com/group/socialsciencestf.
>> > To view this discussion on the web visit
>> https://groups.google.com/d/msgid/socialsciencestf/CALEc3K%3DHOzn1aMwCGw_2cQrwt5K2%3DKeSv-HwyEQKSUPcXwt7Zg%40mail.gmail.com
>> .
>> > For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAJt2Zaqvbb8SS4%2BHuC3Hmgs%3DSPpvQUw5G7gDRf5kmg6bAyzgDw%40mail.gmail.com
>> <https://groups.google.com/d/msgid/socialsciencestf/CAJt2Zaqvbb8SS4%2BHuC3Hmgs%3DSPpvQUw5G7gDRf5kmg6bAyzgDw%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABtYOUUF1hNA1dOPx8wCusiiWkpPi8-HY5VTf%2BMKmh4cZ9sD2g%40mail.gmail.com
> <https://groups.google.com/d/msgid/socialsciencestf/CABtYOUUF1hNA1dOPx8wCusiiWkpPi8-HY5VTf%2BMKmh4cZ9sD2g%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>



-- 
Basavaraj Naika H D
Asst Teacher
G H S Baggavalli Tarikere Tq
Chickmagalur Dist

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz7PnRZw-PqMBWb4ypESYv8t8YaN3eefpoQ%3DO-woz3%2B6Ug%40mail.gmail.com.
For more options, visit https://groups.google.com/d/optout.

Reply via email to