ಪುಣೆ: ಶನಿ ಶಿಂಗಣಾಪುರ ದೇಗುಲಕ್ಕೆ ಮಹಿಳಾ ಪ್ರವೇಶಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ
ಬೃಹತ್ ಚಳವಳಿ ನಡೆಸಿದ್ದ ಭೂಮಾತಾ ಬ್ರಿಗೇಡ್​ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಏ.28ರಂದು
ಹಾಜಿ ಅಲಿ ದರ್ಗಾ ಪ್ರವೇಶಿಸುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ದರ್ಗಾ ಪ್ರವೇಶಿಸಲು
ಮುಂದಾದರೆ ಚಪ್ಪಲಿಯಿಂದ ಸ್ವಾಗತಿಸುವುದಾಗಿ ಶಿವಸೇನಾ ಮುಖಂಡ ಹಾಜಿ ಅರಾಫತ್ ಶೇಖ್
ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, 'ಯಾವುದೇ ಬೆದರಿಕೆಗೂ ಜಗ್ಗದೆ
ಏ.28ಕ್ಕೆ ನಮ್ಮ ತಂಡ ದರ್ಗಾ ಪ್ರವೇಶಿಸಲಿದೆ. ಇಂಥ ಬೆದರಿಕೆಗಳನ್ನೊಡ್ಡುವುದು ಸರಿಯಲ್ಲ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಅರಾಫತ್ ಬೆದರಿಕೆ ಬಗ್ಗೆ
ಶಿವಸೇನೆ ತನ್ನ ನಿಲುವೇನೆಂದು ಸ್ಪಷ್ಟಪಡಿಸಬೇಕು. ಹೇಳಿಕೆಯಿಂದ ಅಂತರ
ಕಾಯ್ದುಕೊಳ್ಳುವುದಿದ್ದಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ.

http://dhunt.in/17dLB?ss=gml
via Dailyhunt

ಇತ್ತೀಚೆಗೆ  ದೇಶದಲ್ಲಿ  ಕ್ರಾಂತಿಕಾರಿ  ಬದಲಾವಣೆಗಳು  ಆಗುತ್ತಿವೆ.   ಪ್ರಾರಂಭದಲ್ಲಿ
 ಸಮಾಜ ಇದಕ್ಕೆ  ವಿರೋಧಿಸುತ್ತದೆ.

*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  57421೩

ಇತ್ತೀಚೆಗೆ  ಇಸ್ಲಾಂ ಬುದ್ಧಿಜೀವಿಗಳಿಂದ ಇಸ್ಲಾಂ ನಲ್ಲೂ ಬದಲಾವಣೆ ಬಯಸುತ್ತಿದ್ದಾರೆ .

ಬಸವರಾಜ್

ಬದಲಾವಣೆ ಎಲ್ಲಾ  ಧರ್ಮದಲ್ಲೂ  ಬಯಸುತ್ತಿದ್ದಾರೆ.  ಇತ್ತೀಚೆಗೆ  ಗೃಹ  ಮಂತ್ರಿಯವರ
 ಹೇಳಿಕೆ  ನೋಡಿ.    ನಾನು  ಹಿಂದೂ  ಆಗಿ  ಹುಟ್ಟ  ಬಾರದಿತ್ತು -  ಎಂದರು( ನ್ಯೂಸ್
 ಪೇಪರ್ ಮಾಹಿತಿ). ಹಾಗಾಗಿ  ಎಲ್ಲಾ  ಧರ್ಮದಲ್ಲೂ  ಅಸಮಾಧಾನವಿದೆ.

*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212

ಹೌದು ಸರ್ ಅಸಮದಾನ ಎಲ್ಲಾಕಡಯೂ ಇದೆ

ತೃಪ್ತಿ ದೇಸಾಯಿಯ ತವರಿಗೆ ಧನ್ಯವಾದಗಳು  ಮಹಿಳಾಸಮಾನತೆಗಾಗಿ ಹೋರಾಟ
ಮುಂದುವರೆಸುತ್ತಿರುವುದಕ್ಕೆ.

ಆದರೆ ಸಂಪ್ರದಾಯ ವಾದಿ ಮತ್ತು ಮೂಲಭೂತವಾದಿದಳಿಗೆ ಇದು ಸಹಿಸಿಕೊಳ್ಳಲಾರದ ವಿಷಯ. ಶೋಷಣೆಯೇ
ಅವರ ಯೋಚನೆ ಆಗಿರುತ್ತದೆ

ಹಕ್ಕುಗಳು ಯಾರೂ ಯಾರಿಗೂ ಉಚಿತವಾಗಿ ನೀಡಿಲ್ಲ. ಎಲ್ಲವೂ ಹೋರಾಟದಿಂದಲೇ ಪಡೆದಿರುವುದು

ಅಮೇರಿಕದಲ್ಲಿ ಕರಿಜನರಿಗೆ ಪ್ರಾಣಿಗಳಂತೆ ಮಾರಾಟ ಮಾಡುತ್ತಿದ್ದರು

ಕರಿಜನರು ಹೋರಾಟ ಪ್ರಾರಂಭಿಸಿ "ಮಾರುವುದಾದರೆ ಒಂದು ಇಡಿ ಕುಟುಂಬವೇ ಒಂದುಕಡೆ ಮಾರಾಟಮಾಡಿ
ಒಬ್ಬೊಬ್ಬರಿಗೆ ಒಂದೊಂದು ಕಡೆ ಮಾರಾಟ ಮಾಡಿದರೆ ಬದುಕಲು ಕಷ್ಟವಾಗುತ್ತದೆ " ಎಂದು  ಸುಮಾರೂ
50 ವರ್ಷ ಹೋರಾಟ ಮಾಡಿದರು ಜಯ ತಂದುಕೊಂಡರು

ನಂತರ " ಸಾಯುವವರೆಗೆ ನಿಮ್ಮಲ್ಲಿ ಜೀತಕಿರುತ್ತೇವೆ ಮಾರಾಟ  ಮಾಡುವುದನ್ನು ನಿಲ್ಲಿಸಿ "
ಎಂದು ಸುಮಾರು 50 ವರ್ಷ ಹೋರಾಟದ ನಂತರ ಜಯ

ನಂತರ " ನಾವೇಕೆ ಜೀತಕ್ಕಿರಬೇಕು ನಮಗೂ ಕೃಷಿ ಮಾಡಿ ಬದುಕಲು ಅವಕಾಶ ನೀಡಿ " ಎಂದು ಸುಮಾರು
50 ವರ್ಷ ಹೋರಾಟದ ನಂತರ ಜಯಸಿಕ್ಕಿತು

ನಂತರ ನಮಗೂ ಓಟುಹಾಕುವ , ರಾಜಕೀಯದಲ್ಲಿ  ಅವಕಾಶ ನೀಡಿ ಎಂದು ಸುಮಾರು 50 ಹೋರಾಟದ ನಂತರ
ಜಯಸಿಕಿತು ಸಮಾನತೆ ಬಂದಿತು

ಹೀಗೆ ಹಕ್ಕು ಯಾರು ಯಾರೀಗೂ ನೀಡಿದ್ದಲ್ಲ ಹೋರಾಟದಿಂದ ಪಡೆದದ್ದು

ತೃಪ್ತಿ ದೇಸಾಯಿಯ ತವರಿಗೆ ಮತ್ತೊಮ್ಮೆ  ಅನಂತ ಅನಂತ ಧನ್ಯವಾದಗಳು  ಮಹಿಳಾಸಮಾನತೆಗಾಗಿ
ಹೋರಾಟ ಮುಂದುವರೆಸುತ್ತಿರುವುದಕ್ಕೆ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz4eVN%3DRax1Bi6ep8OP9UFExfnuNDHswtj3rS%3DeK4kH6fQ%40mail.gmail.com.
For more options, visit https://groups.google.com/d/optout.

Reply via email to