ಸ್ವಂತ ಜಿಪಿಎಸ್ ಕನಸು ನನಸು

BY ವಿಜಯವಾಣಿ ನ್ಯೂಸ್ · APR 29, 2016

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಐಆರ್​ಎನ್​ಎಸ್​ಎಸ್-1ಜಿ (ಭಾರತೀಯ
ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ) ಉಪಗ್ರಹವನ್ನು ಗುರುವಾರ ಯಶಸ್ವಿಯಾಗಿ ಕಕ್ಷೆಗೆ
ಸೇರಿಸಿದೆ. ಈ ಮೂಲಕ ಐಆರ್​ಎನ್​ಎಸ್​ಎಸ್ ವ್ಯವಸ್ಥೆಯ ಏಳೂ ಉಪಗ್ರಹಗಳು ಕಕ್ಷೆಗೆ ಸೇರಿದ್ದು,
ಸ್ವಂತ ದಿಕ್ಸೂಚಿ ವ್ಯವಸ್ಥೆ (ಜಿಪಿಎಸ್) ಹೊಂದುವ ಭಾರತದ ಕನಸು ನನಸಾಗಿದೆ. ಅಲ್ಲದೆ, ಸ್ವಂತ
ಜಿಪಿಎಸ್ ಹೊಂದಿರುವ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಗೊಂಡಿದೆ.

ರಸ್ತೆ, ವಾಯು, ನೌಕಾಯಾನದ ಸಂದರ್ಭದಲ್ಲಿ ಮಾರ್ಗದರ್ಶನ ನೀಡುವುದೂ ಸೇರಿದಂತೆ ವಿಪತ್ತು
ನಿರ್ವಹಣೆ, ವಾಹನ ದಟ್ಟಣೆ ನಿಯಂತ್ರಣ ಮುಂತಾದ ಕಾರ್ಯಗಳಲ್ಲಿ ಜಿಪಿಎಸ್ ಬಹುಮುಖ್ಯ ಪಾತ್ರ
ವಹಿಸುತ್ತದೆ. ಭಾರತದಲ್ಲಿ ಸದ್ಯ ಅಮೆರಿಕದ ಜಿಪಿಎಸ್ ವ್ಯವಸ್ಥೆಯನ್ನು
ಬಳಸಿಕೊಳ್ಳಲಾಗುತ್ತಿದೆ. ಈ ಕ್ಷೇತ್ರದಲ್ಲಿ ದೇಶೀ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ
ಮೂಲಕ ಭಾರತವನ್ನು ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಇಸ್ರೋ ಐಆರ್​ಎನ್​ಎಸ್​ಎಸ್
ವ್ಯವಸ್ಥೆಯನ್ನು ರೂಪಿಸಿದೆ. ಇದು ಏಳು ಉಪಗ್ರಹಗಳನ್ನು ಒಳಗೊಂಡಿದ್ದು, ಈ ಸರಣಿಯ ಮೊದಲ
ಉಪಗ್ರಹ ಐಆರ್​ಎನ್​ಎಸ್​ಎಸ್-1ಎಯನ್ನು 2013ರ ಜುಲೈ 1ರಂದು ಕಕ್ಷೆಗೆ ಸೇರಿಸಲಾಗಿತ್ತು. ಆ
ಬಳಿಕ ಹಂತ ಹಂತವಾಗಿ ಆರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು. ಈಗ ಏಳನೆಯ ಉಪಗ್ರಹ
1,425 ಕೆ.ಜಿ. ತೂಕದ ಐಆರ್​ಎನ್​ಎಸ್​ಎಸ್-1ಜಿಯನ್ನು ಪಿಎಸ್​ಎಲ್​ವಿ-ಸಿ33 ಯಶಸ್ವಿಯಾಗಿ
ಕಕ್ಷೆಗೆ ಸೇರಿಸಿದ್ದು, ದಿಕ್ಸೂಚಿ ವ್ಯವಸ್ಥೆಗೆ ಪೂರ್ಣ ರೂಪ ಸಿಕ್ಕಿದೆ. ಕಕ್ಷೆಗೆ ಸೇರಿರುವ
ಆರು ಉಪಗ್ರಹಗಳು ಈಗಾಗಲೇ ಕಾರ್ಯಾರಂಭಿಸಿವೆ. ಪ್ರಾದೇಶಿಕ ದಿಕ್ಸೂಚಿ ವ್ಯವಸ್ಥೆಯು ಕೇವಲ ಏಳು
ಉಪಗ್ರಹಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತಿರುವುದು ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು
ವಿಶೇಷ ಪ್ರಯತ್ನ ಎಂದೇ ಹೇಳಬಹುದು. ಇದರ ನಿಖರತೆಯಲ್ಲಿ 20 ಮೀಟರ್​ಗಿಂತಲೂ ಕಡಿಮೆ
ವ್ಯತ್ಯಾಸ ಕಂಡುಬಂದಿದೆ. ಇದು ಭಾರತದ ಒಳಗೆ ಮಾತ್ರವಲ್ಲದೆ, ಸುತ್ತ 1,500 ಕಿ.ಮೀ.
ಪರಿಧಿಯಲ್ಲಿ ಸ್ಥಳದ ಮಾಹಿತಿ ಒದಗಿಸಲಿದೆ.

ಐಆರ್​ಎನ್​ಎಸ್​ಎಸ್ ಸರಣಿಯ ಪ್ರತಿ ಉಪಗ್ರಹಕ್ಕೂ ಸುಮಾರು 150 ಕೋಟಿ ರೂ. ವ್ಯಯಿಸಲಾಗಿದೆ.
ಜತೆಗೆ ಅದನ್ನು ಕಕ್ಷೆಗೆ ಸೇರಿಸುವ ಪಿಎಸ್​ಎಲ್​ವಿ ರಾಕೆಟ್​ಗೆ 130 ಕೋಟಿ ರೂ.
ವ್ಯಯಿಸಲಾಗಿದೆ. ಒಟ್ಟಾರೆ ಇಡೀ ಯೋಜನೆಯ ವೆಚ್ಚ ಸುಮಾರು 1,420 ಕೋಟಿ ರೂ. ಈ ಉಪಗ್ರಹಗಳ
ಜೀವಿತಾವಧಿ 12 ವರ್ಷಗಳು. ಅಮೆರಿಕ, ರಷ್ಯಾ, ಚೀನಾ ಹಾಗೂ ಯುರೋಪಿಯನ್ ಯೂನಿಯನ್​ಗಳು ಮಾತ್ರ
ಈ ತನಕ ಸ್ವಂತ ಜಿಪಿಎಸ್ ಹೊಂದಿದ್ದವು. ಭಾರತ ಈವರೆಗೆ ಸೇನಾ ಕಾರ್ಯಾಚರಣೆಯಿಂದ ಹಿಡಿದು ಎಲ್ಲ
ಕಾರ್ಯಕ್ಕೂ ಅಮೆರಿಕದ ಜಿಪಿಎಸ್ ವ್ಯವಸ್ಥೆಯನ್ನು ಅವಲಂಬಿಸಿತ್ತು. 1999ರಲ್ಲಿ ಕಾರ್ಗಿಲ್
ಯುದ್ಧದ ಸಂದರ್ಭದಲ್ಲಿ ಅಮೆರಿಕ ಭಾರತಕ್ಕೆ ಜಿಪಿಎಸ್ ಆಧಾರಿತ ಮಾಹಿತಿ ಒದಗಿಸಲು
ನಿರಾಕರಿಸಿತ್ತು. ಆ ಸಂದರ್ಭದಲ್ಲಿ ಸ್ವಂತ ಜಿಪಿಎಸ್ ಹೊಂದುವ ಚಿಂತನೆ ಭಾರತಕ್ಕೆ ಮೂಡಿತ್ತು.
ಅದೀಗ ಸಾಕಾರಗೊಂಡಿದೆ. ವಾಯು, ಜಲ ಮಾರ್ಗಗಳಿಗೆ ಐಆರ್​ಎನ್​ಎಸ್​ಎಸ್ ದಿನದ 24 ಗಂಟೆಯೂ ಸೇವೆ
ಒದಗಿಸಲಿದೆ. ಸೇನೆ ಹಾಗೂ ಕ್ಷಿಪಣಿ ಉಡಾವಣೆಗೆ ಸಂಬಂಧಿಸಿಯೂ ಇದು ಸೇವೆ ಒದಗಿಸಲಿದೆ. ಮುಂದಿನ
ಮೂರರಿಂದ ಆರು ತಿಂಗಳ ಅವಧಿಯಲ್ಲಿ ಐಆರ್​ಎನ್​ಎಸ್​ಎಸ್ ಶ್ರೇಣಿಯ ಎಲ್ಲ ಉಪಗ್ರಹಗಳು
ನಕ್ಷತ್ರಪುಂಜದ ಮಾದರಿಯಲ್ಲಿ ಸ್ಥಿರಗೊಳ್ಳಲಿವೆ. ಆ ಬಳಿಕ ಅವುಗಳ ಸಂಜ್ಞೆಗಳನ್ನು ಪರಿಶೀಲಿಸಿ
ನಂತರ ಬಳಕೆಗೆ ತರುವ ಸಾಧ್ಯತೆ ಇದೆ. ಅಲ್ಲದೆ, ತುರ್ತಸಂದರ್ಭದಲ್ಲಿ ಬೇಕಾಗಬಹುದು ಎಂಬ
ಕಾರಣಕ್ಕೆ ಎರಡು ಬದಲಿ ಉಪಗ್ರಹಗಳನ್ನು ಕೂಡ ಇಸ್ರೋ ಸಿದ್ಧಪಡಿಸಿಟ್ಟುಕೊಂಡಿದೆ.

ಐಆರ್​ಎನ್​ಎಸ್​ಎಸ್ ವ್ಯವಸ್ಥೆ ಭಾರತಕ್ಕೆ ಅನೇಕ ವಿಧದಲ್ಲಿ ಪ್ರಯೋಜನಕಾರಿ. ಇದರಿಂದ
ಅಮೆರಿಕದ ಜಿಪಿಎಸ್ ಮೇಲಿನ ಭಾರತದ ಅವಲಂಬನೆ ತಗ್ಗಲಿದೆ. ಆದರೆ, ಚೀನಾ, ಅಮೆರಿಕದ ಜಿಪಿಎಸ್
ವ್ಯವಸ್ಥೆಗೆ ಹೋಲಿಸಿದರೆ ಇದರ ನಿಖರತೆಯಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯವಿದೆ. ಸ್ವಂತ
ಜಿಪಿಎಸ್ ಹೊಂದುವ ನಿಟ್ಟಿನಲ್ಲಿ ಇದು ಮೊದಲ ಪ್ರಯತ್ನವಾಗಿರುವ ಕಾರಣ ಮುಂದಿನ ದಿನಗಳಲ್ಲಿ
ಇಸ್ರೋ ಈ ಕೊರತೆಯನ್ನು ನೀಗಿಸುವ ಭರವಸೆ ಇದೆ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALEc3KmAnxaLMC%3DZP9kRcwdf0-vmYjH8uZu-OiuJe1NPBAKrxg%40mail.gmail.com.
For more options, visit https://groups.google.com/d/optout.

Reply via email to