ಪ್ರಖರವಾದ ಸೂರ್ಯಕಿರಣಗಳ ಸ್ಪರ್ಶದಿಂದ ಉಂಟಾಗುವ
ತಾಪವು ಭೂಮಿಗೂ, ಸಾಗರಕ್ಕೂ ಸಮಾನ. ಭೂಮಿ ಇದಕ್ಕೆ
ಪ್ರತಿಕ್ರಿಯಿಸದೆ ಸಹಿಸಿಕೊಳ್ಳುವುದು. ಸಹಿಸುವುದು,
ಕ್ಷಮಿಸುವುದು ಭೂಮಿಯ ವಿಶೇಷಗುಣ. ಅದಕ್ಕಾಗಿಯೇ
ಅವಳಿಗೆ ‘ಸರ್ವಂಸಹಾ ಎಂಬ ಹೆಸರು. ‘ಕ್ಷಮಯಾ ಧರಿತ್ರೀ’
ಎಂದು ಕ್ಷಮಾಗುಣಕ್ಕೆ ಅವಳನ್ನೇ ತೋರಿಸುವುದು,
ಹೋಲಿಸುವುದು. ಆದರೆ ಸಾಗರ ಎಲ್ಲವನ್ನೂ
ಸಹಿಸುವುದಿಲ್ಲ. ಸೋಸಿ, ಸೋಸಿ ಒಳ್ಳೆಯದನ್ನು ಮಾತ್ರ
ಸ್ವೀಕರಿಸಿ ಕೆಟ್ಟದ್ದನ್ನು ಕೈಬಿಡುತ್ತದೆ. ಪರೀಕ್ಷಿಸಿ
ಸ್ವೀಕರಿಸುವ ಹಾಗೂ ಪ್ರತಿಕ್ರಿಯಿಸುವ ಗುಣವನ್ನು ನಾವು
ಸಾಗರದಿಂದ ಕಲಿಯಬೇಕು. ಅದು ಸೂರ್ಯನ ತಾಪವನ್ನು
ಭೂಮಿಯಂತೆ ಕೇವಲ ಸಹಿಸಿಕೊಳ್ಳುವುದಿಲ್ಲ. ತಕ್ಕ ಪ್ರತಿಕ್ರಿಯೆ
ನೀಡುವುದು. ಸಾಗರವು ಸೂರ್ಯನ ತಾಪಕ್ಕೆ ತನ್ನ
ಅಲೆಗಳನ್ನು ಆವಿಯಾಗಿಸಿಕೊಳ್ಳುತ್ತದೆ. ಆವಿಯು ಮೇಲಕ್ಕೆ
ಸಾಗುವುದು. ಅದೇ ಘನವಾಗಿ ಮೇಘವೆನಿಸುವುದು.
(ಘನಶಬ್ದಕ್ಕೆ ಮೇಘವೆಂಬ ಹೆಸರೂ ಇದೆ.) ವಾಯುವಿನ
ಸಹಕಾರದಿಂದ ಮಳೆಯಾಗುವುದು, ಹನಿಯಾಗುವುದು.
ಭೂಮಿಯಲ್ಲೂ ಸಾಗರದಲ್ಲೂ ಸಮಾನವಾಗಿಯೇ ಮಳೆಯ
ಸಿಂಚನ. ಪರಿಣಾಮ ತನ್ನೊಂದಿಗೆ ಭೂಮಿಯನ್ನೂ
ತಂಪಾಗಿಸುವುದು. ತನ್ನ ತಾಪದ ಪರಿಹಾರದೊಂದಿಗೆ
ತನ್ನೊಂದಿಗಿರುವವರ ತಾಪವನ್ನೂ ಪರಿಹರಿಸುವುದು.
ಸಜ್ಜನರೂ ಹೀಗೆಯೇ ಎರಡು ವಿಧ. ಭೂಮಿಯಂತೆ ಬಂದ
ಕಷ್ಟಗಳನ್ನೆಲ್ಲವನ್ನೂ ತಮ್ಮೊಳಗೇ ನುಂಗಿಕೊಳ್ಳುವವರು
ಒಂದು ವಿಧವಾದರೆ, ಸಾಗರದಂತೆ ಕಷ್ಟಗಳನ್ನೆಲ್ಲ
ನಿವಾರಿಸಿಕೊಳ್ಳುತ್ತ ಇತರರ ಕಷ್ಟಗಳನ್ನೂ ನಿವಾರಿಸಬಲ್ಲವರು
ಮತ್ತೊಂದು ವಿಧ. ಈ ಬ್ರಹ್ಮಾಂಡವೆಂಬ ಭಗವಂತನ
ಆಡುಂಬೊಲದಲ್ಲಿ ಅರಿಯುವುದು ಸಾಕಷ್ಟಿದೆ.
ಮನುಷ್ಯಶರೀರ ಅಶಾಶ್ವತವಾದರೂ ಇದನ್ನು ಪಡೆದಾಗ
ಮಾತ್ರ ಜೀವನದ ಪರಿಪೂರ್ಣತೆಯನ್ನು ಸಾಧಿಸಬಹುದು.
ಪರಿಪೂರ್ಣತೆಯೆಂದರೆ, ಭಗವಂತನ ಸಾಕ್ಷಾತ್ಕಾರವಾದಾಗ
ಮಾತ್ರ ಸಾಧ್ಯವಾಗುವಂತಹುದು. ಅದಕ್ಕಾಗಿ ನಾವು
ಪ್ರಯತ್ನಿಸಬೇಕು. ಸದ್ಗುಣಗಳು ಎಲ್ಲಿದ್ದರೂ ಅವನ್ನು
ಸ್ವೀಕರಿಸಬೇಕು. ನಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುವ
ಸಮಯದಲ್ಲಿ ಇತರರಿಗೆ ಬಂದ ಸಂಕಷ್ಟಗಳನ್ನೂ ಪರಿಹರಿಸಲು
ಪ್ರಯತ್ನಿಸಬೇಕು. ನಾವು ನಡೆದಾಡುವ ಭೂಮಿ, ಕುಡಿಯುವ
ಜಲ, ಸೇವಿಸುವ ವಾಯು, ಕಾಣುವ ಬೆಳಕು, ಅವಕಾಶ
ನೀಡುವ ಆಕಾಶ – ಇವೆಲ್ಲವೂ ನಮಗೆ ಒಂದಲ್ಲ ಒಂದು
ವಿಧದಲ್ಲಿ ಗುರುವಾಗಬಲ್ಲವು.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALWUL%3D5tGQnV8VY9YUPdm9K90DX2TqmayavYdn5-BLtD7YN9Yw%40mail.gmail.com.
For more options, visit https://groups.google.com/d/optout.

Reply via email to