ಮಕ್ಕಳೇ, ಇದು ಮತ್ತೂಂದು ವರ್ಷದ ಹೊಸ ತರಗತಿಗೆ
ಸಿದ್ಧವಾಗುವ ಸಮಯ . ನಿಮ್ಮ ಬದುಕಿನ ಅಧ್ಯಾಯದಲ್ಲಿ
ಒಂದೊಂದೇ ಹಂತವನ್ನು ದಾಟುವ ಬಂಗಾರದ
ಕ್ಷಣಗಳಿವು. ತೆರೆದಿರುವ ಶಾಲೆಗಳು ನಿಮ್ಮನ್ನು ಕೈಬೀಸಿ
ಕರೆಯುತ್ತಿವೆ .
ಸರಸ್ವತಿ ಪೂಜೆಯಲ್ಲಿ ದೇವರಿಗೆ ಪಾಸ್ ಮಾಡಪ್ಪ ಅಂತ ಒಂದು
ಮೇಲ್ಮನವಿ ಸಲ್ಲಿಸಿ , ಕೊನೆಯ ಗ್ರೂಪ್ ಫೋಟೊಕ್ಕೊಂದು
ಸೆ ¾„ ಲ್ ಪೋಜ್ ಕೊಟ್ಟು , ಎಕ್ಸಾಂ ಹಾಲ್ನಲ್ಲಿ ಪಕ್ಕದವರ ಕಡೆ
ವಾರೆಗಣ್ಣು ಬೀರಿ ಅಂತೂ ಶಾಲೆ ದಿನಗಳ ಮುಗಿಸಿ ಶಾಲಾ
ಬ್ಯಾಗ್ ತಂದು ಮನೆಗೆ ಎಸೆದು ಅಬ್ಟಾ ! ಈ ವರ್ಷ ಮುಗೀತು
ಅಂತ ನಿರಮ್ಮಳರಾಗಿದ್ದ ಮಕ್ಕಳೇ, ಅನಾಮತ್ತಾಗಿ ಎರಡು
ತಿಂಗಳು ಕಳೆದುಬಿಟ್ಟಿರಿ. ಮತ್ತೆ ಶಾಲೆ ಶುರುವಾಗಿದೆ . ಬ್ಯಾಗ್
ಹುಡುಕಬೇಕಿದೆ.
ಹುಡುಕಬೇಕಿದೆ ಅಂತ ಹೇಳಿದೆನಲ್ಲ , ಏಕೆಂದರೆ ಸರ್ಕಾರಿ ಶಾಲೆಗೆ
ಹೋಗುವ ಬಹುಪಾಲು ಮಕ್ಕಳ ಮನೆಯ ಸ್ಥಿತಿ ಎಲ್ಲರಿಗೂ
ಗೊತ್ತೇ ಇದೆ . ಬಡತನವೇ ಬಂಡವಾಳವಾಗಿರುವ ಬಹುತೇಕ
ಕೂಲಿ ಕಾರ್ಮಿಕರು, ರೈತಾಪಿ ವರ್ಗದವರ ಮನೆಗಳ ಮಕ್ಕಳು
ನೀವು . ರಜೆಯಲ್ಲಿ ನೀವು ಶ್ರೀಮಂತರ ಮಕ್ಕಳಂತೆ
ಖುಷಿಯಾಗಿ ಕಾಲ ಕಳೆಯದೆ ಅಪ್ಪ ಅಮ್ಮನೊಂದಿಗೆ ಹೋಗಿ
ಓದಿಗೆ ಒಂದಷ್ಟು ಸಂಗ್ರಹಿಸಿದ್ದೀರಿ . ಆ ಅವಸರದಲ್ಲಿ ಶಾಲೆ
ಮತ್ತು ಬ್ಯಾಗನ್ನು ಮರೆತಿದ್ದೀರಿ. ವರ್ಷವಿಡೀ ತೊಟ್ಟ
ಯೂನಿಫಾರಂಗಳು ಹರಿದು ಹೋಗಿವೆ , ಶಾಲಾ ಬ್ಯಾಗ್
ಪುಸ್ತಕದ ಭಾರಕ್ಕೆ ನಾಲ್ಕಾರು ಕಡೆ ಹರಿದು ಹೋಗಿ ಅದಕ್ಕೆ
ಕೈಹೊಲಿಗೆ ಹಾಕಿಸಬೇಕಿದೆ . ಮಧ್ಯಾಹ್ನದ ಊಟಕ್ಕೆ ಸುತ್ತಲೂ
ನೆಗ್ಗಿ ಹೋಗಿರುವ ನಿಮ್ಮ ತಟ್ಟೆ, ಅರ್ಧರ್ಧ ಹರಿದ ನೋಟ್
ಪುಸ್ತಕಗಳು , ಪಠ್ಯಪುಸ್ತಗಳು , ಮುರಿದ ಪೆನ್ , ಪೆನ್ಸಿಲ್ಗಳು
ಇವೇ ಅದರಲ್ಲಿ ತುಂಬಿರುತ್ತವೆ . ಅಂಕಗಳಿಗಾಗಿಯೇ ಇರುವ
ಖಾಸಗಿ ಶಾಲೆಯವರಿಗೆ ಇದು ಅನ್ವಯಿಸುವುದಿಲ್ಲವೆಂದು
ಪುನಃ ಹೇಳುತ್ತೇನೆ .
ಮಕ್ಕಳೇ , ಇದು ಮತ್ತೂಂದು ವರ್ಷದ ಹೊಸ ತರಗತಿಗೆ
ಸಿದ್ಧವಾಗುವ ಸಮಯ . ನಿಮ್ಮ ಬದುಕಿನ ಅಧ್ಯಾಯದಲ್ಲಿ
ಒಂದೊಂದೇ ಹಂತವನ್ನು ದಾಟುವ ಬಂಗಾರದ
ಕ್ಷಣಗಳಿವು . ತೆರೆದಿರುವ ಶಾಲೆಗಳು ನಿಮ್ಮನ್ನು ಕೈಬೀಸಿ
ಕರೆಯುತ್ತಿವೆ . ಬನ್ನಿ, ನಿಮ್ಮ ಪುಟ್ಟ ಪುಟ್ಟ ಹೆಜ್ಜೆಗಳಿಂದ , ದನಿಯ
ಕಲರವದಿಂದ
ಶಾಲಾಂಗಣ ಮತ್ತು ಕೊಠಡಿಗಳಲ್ಲಿ ಹೊಸ ಸಂಚಲನ ಮೂಡಿಸಿ .
ಇಲ್ಲಿ ನೀವು , ನಿಮ್ಮ ಪೋಷಕರು ಹಾಗೂ ಶಿಕ್ಷಕರು ಕೂಡ
ಮರೆಯಬಾರದ ಕೆಲ ಸಂಗತಿಗಳಿವೆ .
ಮಕ್ಕಳಿಗೆ
ಶಾಲೆ ಶುರುವಾದ ಮೊದಲ ವಾರ ನಿಮ್ಮ ನಿಮ್ಮ ಶಾಲೆಗಳಲ್ಲಿ
ಹಬ್ಬ . ಎರಡು ತಿಂಗಳಿನಿಂದ ಬಿದ್ದಿರುವ ಕಸ ಎತ್ತಬೇಕಾ ಎಂಬ
ತಿರಸ್ಕಾರ ಬೇಡ! ನಿಮ್ಮ ಶಾಲೆ ಈಗಾಗಲೇ ಸ್ವತ್ಛವಾಗಿದೆ.
ಕೈಯಲ್ಲಿ ಸಮವಸ್ತ್ರ, ಪಠ್ಯಪುಸ್ತಕ ನೀಡಿ, ನಡೆಯಿರಿ ನಿಮ್ಮ
ಜೊತೆ ನಾವಿದ್ದೇವೆ , ಕಲಿಯಿರಿ. . . ಎಂದು ಗುಡ್ಲಕ್ ಹೇಳಲು
ಶಿಕ್ಷಕರು ಸಿದ್ಧರಾಗಿದ್ದಾರೆ .
ಮಕ್ಕಳೇ , ನಿಮ್ಮ ಪೋಷಕರಿಗೆ ಅನವಶ್ಯಕ ಖರ್ಚುಗಳನ್ನು
ಹೇರದೆ ಶಿಕ್ಷಕರ ಮಾರ್ಗದರ್ಶನದಲ್ಲಿ ಅವಶ್ಯವಿರುವಷ್ಟೇ
ವಸ್ತುಗಳನ್ನು ಕೊಂಡುಕೊಳ್ಳಿ ಮತ್ತು
ವರ್ಷಾಂತ್ಯದವರೆಗೂ ಜತನದಿಂದ ನೋಡಿಕೊಳ್ಳಿ . ಹಗಲು
ರಾತ್ರಿಯನ್ನದೇ ದುಡಿಯುವ ನಿಮ್ಮ ತಂದೆ ತಾಯಿಗಳ ಬಗೆಗೆ
ಗೌರವವಿರಲಿ . ಅವರ ನಿರೀಕ್ಷೆಗಳನ್ನು ಹುಸಿಗೊಳಿಸದಿರಿ . ಈ ವರ್ಷ
ನಾನೇನು ಕಲಿಯಬೇಕಿದೆ ? ಅದಕ್ಕೆ ಸಂಬಂಧಿಸಿದಂತೆ ಒಂದು
ಸ್ಪಷ್ಟ ಗುರಿಯಿರಲಿ. ಕೇವಲ ಅಂಕಗಳೇ ಓದಲ್ಲ, ಅದೇ
ಶಿಕ್ಷಣವೂ ಅಲ್ಲ. ಹಾಗಂತ ಅಂಕಗಳು ಬೇಡವೆಂದು ಕೈಚೆಲ್ಲಿ
ಕುಳಿತುಕೊಳ್ಳುವುದೂ ಅಲ್ಲ . ಅಂಕಗಳ ಜೊತೆ ಜೊತೆಗೆ
ಒಳ್ಳೆಯ ವ್ಯಕ್ತಿತ್ವವೂ ರೂಪುಗೊಳ್ಳಲಿ .
ಶಾಲೆಯಲ್ಲಿ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಿ .
ಶಿಕ್ಷಕರೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ
ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ . ಅದಕ್ಕೆ ಅದಕ್ಕೆ ಬಂದಾಗ
ಪ್ರತಿಭಟಿಸುವ ಗುಣವೂ ನಿಮ್ಮದಾಗಲಿ . ಮುಖ್ಯವಾಗಿ
ಹೇಳಬೇಕೆಂದರೆ , ಟೈ , ಬೆಲ್ಟ್ ಹಾಕಿಕೊಂಡು ಇಂಗ್ಲಿಷ್ ಶಾಲೆಗೆ
ಹೋಗುವ ಮಕ್ಕಳನ್ನು ನೋಡಿ ಕೀಳರಿಮೆಗೆ ಒಳಗಾಗಬೇಡಿ ,
ಬದಲಿಗೆ ಹೆಮ್ಮೆ ಪಡಿ . ತಾಯಿ ಭಾಷೆಯಲ್ಲಿ ಪಡೆಯುವ ಶಿಕ್ಷಣವೇ
ಶ್ರೇಷ್ಠ ಶಿಕ್ಷಣ. ಈ ಭಾಷೆಯಲ್ಲಿ ಕಲಿತು ನೀವು ಬದುಕುನ್ನು
ಯಶಸ್ವಿಗೊಳಿಸಿಕೊಳ್ಳುವ ಕಲೆಯಲ್ಲಿ ನಿಪುಣರಾಗುತ್ತೀರಿ .
ನಿಮ್ಮ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಿ . ಶಿಕ್ಷಕರು
ಹೇಳಿದ್ದನ್ನು ಪಾಲಿಸಿ , ಅಂದಿನ ಓದನ್ನು ಅಂದಂದೇ
ಓದುತ್ತಾ ಹೋಗಿ. ನಿಗದಿತ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ .
ಮನೆಗೆಲಸಕ್ಕೂ ಸಹಕರಿಸಿ . ನಿರಂತರ ಪರಿಶ್ರಮ , ಶ್ರದ್ಧೆ, ಸತತ
ಅಭ್ಯಾಸ, ಶಿಸ್ತು ಎಂಥವರನ್ನೂ ಮೇಲ್ಸ್ತರಕ್ಕೆ ತಂದು
ನಿಲ್ಲಿಸುತ್ತದೆ.
ಶಿಕ್ಷಕರಿಗೆ
ನೀವು ವೇತನ , ಶಿಕ್ಷಕರ ಇತಿ - ಮಿತಿಗಳನ್ನು ದಾಟಿ ಆಚೆ ಬಂದು
ಕೆಲಸ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ
ಹೊಸ ಭರವಸೆಗಳನ್ನು ಮೂಡಿಸಿದೆ . ಮಕ್ಕಳನ್ನು ತೊಂಭತ್ತು
ಅಂಕಗಳಿಗೆ ತಯಾರು ಮಾಡುವ ಜೊತೆಗೆ ತೊಂಭತ್ತು ವರ್ಷಗಳ
ಕಾಲ ಅರ್ಥವತ್ತಾಗಿ ಬಾಳುವಂತಾಗುವ ಬದುಕಿನ ಪಾಠವನ್ನು
ಹೇಳಿಕೊಡಬೇಕಾಗಿದೆ . ರಜೆಯ ಗುಂಗಿನಲ್ಲಿರುವ ಮಕ್ಕಳು
ಶಾಲೆಯ ಕಡೆ ಹೆಜ್ಜೆ ಹಾಕಲು ಸ್ವಲ್ಪ$ ದಿನಗಳೇ
ಬೇಕಾಗಬಹುದು . ಕಾಯುತ್ತಾ ಕೂರದೆ ಒಂದಿಷ್ಟು
ಮಕ್ಕಳನ್ನು ಸೇರಿಸಿಕೊಂಡು ಎಲ್ಲಾ ಶಿಕ್ಷಕರಾದಿಯಾಗಿ
ಮಕ್ಕಳ ಮನೆ ಮನೆಗೆ ಭೇಟಿ ನೀಡಿ. ಆಗ ಮಗುವಿನ ಮನಸ್ಸಿನಲ್ಲೂ ,
ಪೋಷಕರ ಮನಸ್ಸಿನಲ್ಲೂ ಶಾಲೆಯ ಬಗೆಗೆ ಮತ್ತು ನಿಮ್ಮ ಬಗೆಗೆ
ವಿಶೇಷ ಗೌರವವೊಂದು ರೂಪುಗೊಳ್ಳುತ್ತದೆ . ಸರ್ಕಾರಿ
ಶಾಲೆಯ ಸೌಲಭ್ಯಗಳು ಮತ್ತು ಮಾತೃಭಾಷೆ ಶಿಕ್ಷಣದ
ಮಹತ್ವವನ್ನು ತಿಳಿಸಿ ಸರ್ಕಾರಿ ಶಾಲೆಗೆ ಸೇರುವಂತೆ
ಪ್ರೋತ್ಸಾಹಿಸಿ .
ಶಾಲೆಯಲ್ಲಿ ಆರಂಭದ ಒಂದು ವಾರ ಹಬ್ಬದ ವಾತಾವರಣವಿರಲಿ ,
ಅಷ್ಟರೊಳಗೆ ಎಲ್ಲಾ ಮಕ್ಕಳು ಬರುವಂತೆ ಮಾಡಿ .
ಆರಂಭದಲ್ಲೇ ಪೋಷಕರ ಮತ್ತು ಎಸ್ಡಿಎಮ್ಸಿ
ಸಹಯೋಗದೊಂದಿಗೆ ವರ್ಷವಿಡಿ ಶಾಲೆಯಲ್ಲಿ ಮಾಡಬೇಕಾದ
ಕಾರ್ಯಗಳ ಒಂದು ಸ್ಪಷ್ಟ ಕ್ರಿಯಾ ಯೋಜನೆ
ರೂಪಿಸಿಕೊಳ್ಳಿ . ಶಾಲೆಯ ಅಗತ್ಯಗಳಿಗೆ ಅನುಗುಣವಾಗಿ
ಸಮುದಾಯದ ಸಹಕಾರ ಪಡೆಯಲು ಪ್ರಯತ್ನಿಸಿ . ಪೋಷಕರಿಗೆ
ಮನೆಯಲ್ಲಿ ಮಗುವಿನ ಮೇಲೆ ನಿಗಾ ಇಡಲು ತಿಳಿಸಿ. ಪ್ರತಿ ತಿಂಗಳು
ಮಗುವಿನ ಪ್ರಗತಿಯನ್ನು ಪೋಷಕರಿಗೆ ತಿಳಿಸುವ ಪ್ರಯತ್ನ
ಮಾಡಿ . ಇಲಾಖೆ ವಹಿಸುವ ಕೆಲಸದ ಒತ್ತಡ ಮತ್ತು ವೇತನಕ್ಕೆ
ಸಂಬಂಧಿಸಿದಂತೆ ನಿಮ್ಮ ಸಮಸ್ಯೆಯ ಅರಿವಿದೆ . ಆದರೆ ಅದರಿಂದ
ನಾಳಿನ ಭವ್ಯ ಭವಿಷ್ಯ ನೋಡಬೇಕಾದ ಮಗುವಿನ ಮೇಲೆ
ಯಾವುದೇ ಪರಿಣಾಮ ಆಗದಿರಲಿ . ಬೊಧನೆಯನ್ನು ಹೆಚ್ಚು
ಆಕರ್ಷಕವಾಗಿಸಿ . ಪಠ್ಯೇತರ ಚಟುವಟಿಕೆಗಳನ್ನು ಸಾಕಷ್ಟು
ಆಯೋಜಿಸಿ , ಮಕ್ಕಳ ಪ್ರತಿಭೆ ಹೊರಹೊಮ್ಮಲು ಅವಕಾಶ
ನೀಡಿ. ಇದರಲ್ಲೇ ನಿಮ್ಮ ವೃತ್ತಿಯ ಯಶಸ್ಸು ಅಡಗಿದೆ.
ಪೋಷಕರಿಗೆ
ಹಿಂದೆಂದಿಗಿಂತ ಇಂದು ಪೋಷಕರಲ್ಲಿ ತಮ್ಮ ಮಕ್ಕಳ ಶಿಕ್ಷಣದ
ಕುರಿತು ಕಾಳಜಿ ವ್ಯಕ್ತವಾಗುತ್ತಿರುವುದು
ಉತ್ತಮ ಬೆಳವಣಿಗೆ . ಈ ಕಾಳಜಿಯಷ್ಟೇ ಸಾಲದು,
ಮಗುವಿನ ಬೆಳವಣಿಗೆಯ ಹಸಿರು ಬೆಳೆ ಕಾಣಲು ನೀರು
ಗೊಬ್ಬರವೂ ಬೇಕು . ಪೋಷಕರೇ , ನಿಮ್ಮ ಮಗುವಿಗೆ
ನೀವು ಪಡುವ ಕಷ್ಟದ ಕೆಲ ಸ್ಯಾಂಪಲ್ಗಳನ್ನು ಪರಿಚಯಿಸಿ .
ಅದರ ಅರಿವು ಓದಿನ ಕಡೆ ಉತ್ಸಾಹ ಹೆಚ್ಚಲು
ಸಹಾಯವಾದೀತು. ಆಗಾಗ ಶಾಲೆಯ ಕಡೆ ಹೋಗಿ ನಿಮ್ಮ
ಮಗುವಿನ ಬಗ್ಗೆ ವಿಚಾರಿಸಿ. ಆತನ ಒಳ್ಳೆಯ ಕಾರ್ಯಗಳಿಗೆ
ಪ್ರೋತ್ಸಾಹಿಸಿ . ಎಂದೂ ಕೂಡ ಅನ್ಯ ಮಕ್ಕಳ ಜೊತೆ
ಹೋಲಿಸಿ ಮಾತನಾಡಬೇಡಿ . ಸರ್ಕಾರಿ ಶಾಲೆಯಲ್ಲಿ
ಗುಣಮಟ್ಟದ ಶಿಕ್ಷಣ ಹಾಗೂ ಹಾಲಿನಿಂದ ಹಿಡಿದು
ಹಾಕಿಕೊಳ್ಳುವ ಶೂ ವರೆಗೂ ಎಲ್ಲವೂ ಉಚಿತವಾಗಿ ಸಿಗುತ್ತವೆ .
ನೀವು ಮಗುವಿಗಾಗಿ ವ್ಯಯಿಸಬೇಕಾದ ಅಗತ್ಯವೇ ಇಲ್ಲ .
ಮನೆಯ ಬಡತನಕ್ಕೆ ದುಡಿಯಲು ಮಗುವನ್ನು ಶಾಲೆ ಬಿಡಿಸುವ
ಮೂರ್ಖತನ ಬೇಡ. ಮಗುವಿನ ನಾಳಿನ ಭವಿಷ್ಯಕ್ಕಾಗಿ
ಒಂದಿಷ್ಟು ತ್ಯಾಗ ಮಾಡಿ .
ಶಾಲೆಗಿಂತ ಮಗುವು ಹೆಚ್ಚಾಗಿ ಕುಟುಂಬದಲ್ಲಿ ತನ್ನ ಸಮಯ
ಕಳೆಯುವುದರಿಂದ ಮನೆಯ ವಾತಾವರಣ ಆರೋಗ್ಯದಿಂದಿರಲಿ.
ಜಗಳ , ಮನಸ್ತಾಪ ನಿಮ್ಮ ಮಗುವಿನ ಮೇಲೆ ಪರಿಣಾಮ
ಬೀರುವುದರಲ್ಲಿ ಅನುಮಾನವೇ ಇಲ್ಲ. ಅದರ ಬಗ್ಗೆ ಸ್ವಲ್ಪ
ಜಾಗೃತೆಯಿರಲಿ . ಶಾಲೆಯಲ್ಲಿ ಏನೇನು ಹೇಳಿಕೊಟ್ಟರು , ಅಲ್ಲಿ
ಏನೇನು ನಡೆಯುತ್ತಿದೆ ಎಂದು ಮಗುವನ್ನು
ವಿಚಾರಿಸಿಕೊಳ್ಳಲು ಪ್ರತಿದಿನ ನಿಮ್ಮ 30 ನಿಮಿಷವನ್ನಾದರೂ
ಮೀಸಲಿಡಿ .
ಮಗು , ಶಿಕ್ಷಕ , ಪಠ್ಯಕ್ರಮ ಮತ್ತು ಪೋಷಕರು ಶಿಕ್ಷಣಸೌಧದ
ನಾಲ್ಕು ಕಂಬಗಳು . ಯಾವ ಕಂಬ ಊನವಾದರೂ ಶಿಕ್ಷಣವೆಂಬ
ಸೌಧ ಧರೆಗುರುಳುತ್ತದೆ . ಒಂದು ನಾಡಿನ , ದೇಶದ ಪ್ರಗತಿ ಆ
ದೇಶದ ಶಿಕ್ಷಣವನ್ನು ಅವಲಂಬಿಸಿದೆ . ಉತ್ತಮ ಶಿಕ್ಷಣಕ್ರಮ
ರೂಪಿಸಿದಲ್ಲಿ ಒಳ್ಳೆಯ ಸಮಾಜವನ್ನು ನಿರೀಕ್ಷಿಸಬಹುದು. ಆ
ನಿಟ್ಟಿನಲ್ಲಿ ಎಲ್ಲರೂ ಸೇರಿ ಹೆಜ್ಜೆ ಹಾಕೋಣ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALWUL%3D5xCU-7ctO_wqEx%2BT-WEaizj5fv%2B3724HPh%3D9NrzRnmiQ%40mail.gmail.com.
For more options, visit https://groups.google.com/d/optout.

Reply via email to