sir good information Thanks for shariong 2016-06-21 19:19 GMT+05:30 Siddaramappa s m Sri <[email protected]>:
> ಭೂಮಿ ಭಾಯ್ಬಿಟ್ಟಾಗ > > (3 May) ಭೂಕಂಪಗಳಿಗೂ ಆಲ್ಪ್ರೆಡ್ ವೆಗ್ನರ್ನಿಗೂ ಬಿಡಿಸಲಾರದ ನಂಟು. ಹೇಗೆ ಎನ್ನುತ್ತೀರ? > ಅವು ಹೇಗೆ ಸಂಭವಿಸುತ್ತವೆ ಎನ್ನುವುದಕ್ಕೆ ಸರಿಯಾದ ವೈಜ್ಞಾನಿಕ ವಿವರಣೆ ಕೊಡಲು > ಸಾಧ್ಯವಾಗಿದ್ದೇ ವೆಗ್ನರ್ನ ಸಂಶೋಧನೆಗಳಿಂದ. ಭೂವಿಜ್ಞಾನದ ಡಾರ್ವಿನ್ ಎಂದೇ > ಗುರುತಿಸಬಹುದಾದ ವೆಗ್ನರ್ ತನ್ನ ಪ್ರಸಿದ್ಧ 'ಖಂಡ ಮತ್ತು ಸಾಗರಗಳ ಉಗಮ' ಕೃತಿಯನ್ನು ಬರೆದು > ಇಂದಿಗೆ ನೂರು ವರ್ಷ. > > 1930ರ ಒಂದು ಶೀತಲ ಸಂಜೆ. ನಾನು ಸಹೋದ್ಯೋಗಿ ಲೂವಿಯ ಜೊತೆ ಗ್ರೀನ್ಲ್ಯಾಂಡ್ನ ಹಿಮ > ಮುಸುಕಿದ ದಾರಿಯಲ್ಲಿ ಸಿಕ್ಕಿಬಿದ್ದಿದ್ದೆ. ಮೂರು ದಿನಗಳಿಂದ ಇಬ್ಬರೂ ತುತ್ತು ಬ್ರೆಡ್ಡೂ > ತಿಂದಿರಲಿಲ್ಲ. ನೀರು ಕುಡಿದು ದಾಹ ಇಂಗಿಸಿಕೊಳ್ಳೋಣವೆಂದರೆ ಅದಕ್ಕಾಗಿ ಅಮೂಲ್ಯವಾದ > ಬೆಂಕಿಯನ್ನು ಗಂಟೆಗಟ್ಟಲೆ ಖರ್ಚು ಮಾಡಬೇಕು. ಆಕಾಶದಿಂದ ಇಳಿದಿಳಿದು ಬಂದು > ತುಂಬಿಕೊಳ್ಳುತ್ತಿದೆಯೇನೋ ಎನ್ನಿಸುವ ಗವ್ವನೆ ಹಿಮರಾಶಿ ಎಲ್ಲೆಲ್ಲೂ. ನನ್ನ ದೇಹದೊಳಗೆ ರಕ್ತ > ಹರಿಯುವುದು ನಿಂತುಹೋಗಿ ನಾಳಗಳೆಲ್ಲ ಹೆಪ್ಪುಗಟ್ಟಿದಂತೆ ಭಾಸವಾಗುತ್ತಿತ್ತು. ಲೂವಿ > ಕಿರುಚಲಿಕ್ಕೂ ದನಿ ಸಾಲದೆ ಒದ್ದಾಡುತ್ತಿದ್ದ. ಅವನ ಕಾಲಿನಲ್ಲಿ ರಕ್ತಪರಿಚಲನೆ ನಿಂತು ನರಗಳು > ಸತ್ತು ನೀಲಿಗಟ್ಟಿದ್ದವು. ಅವುಗಳನ್ನು ಕತ್ತರಿಸಿ ತೆಗೆಯದೆ ಬೇರೆ ದಾರಿಯೇ ಇರಲಿಲ್ಲ. ಒಂದು > ಮರದ ಕೊರಡನ್ನು ಅವನ ಹಲ್ಲುಗಳ ನಡುವೆ ತುರುಕಿ, ಕಚ್ಚಿಕೊಂಡಿರಲು ಹೇಳಿ, ನನ್ನ ಚಾಕು ತೆಗೆದು > ಅವನ ಕಾಲನ್ನು ಗರಗಸದಂತೆ ಕುಯ್ಯತೊಡಗಿದೆ. ಸುಮಾರು ಎರಡು ಗಂಟೆ ಒದ್ದಾಡಿದ ಮೇಲೆ, ಎರಡೂ > ಕಾಲುಗಳನ್ನು ಮೊಣಗಂಟಿನ ಬಳಿ ಕತ್ತರಿಸಿ ತೆಗೆಯಲು ಸಾಧ್ಯವಾಯಿತು. ಓಹ್ ಕ್ಷಮಿಸಿ, > ಪರಿಚಯಿಸಿಕೊಳ್ಳುವುದೇ ಮರೆತೆ ನೋಡಿ! ನನ್ನ ಹೆಸರು ಆಲ್ಪ್ರೆಡ್ ವೆಗ್ನರ್. ನಾನೊಬ್ಬ > ಭೂವಿಜ್ಞಾನಿ. ನೀವಂದುಕೊಂಡ ಹಾಗೆ ನರಭಕ್ಷಕ ಅಥವಾ ರಾಕ್ಷಸ ಏನೂ ಅಲ್ಲ! ಹಿಮಪ್ರದೇಶದ ದುರ್ಭರ > ಸ್ಥಿತಿ ವಿವರಿಸುತ್ತ ಈ ಲೂವಿಯ ಕಾಲು ಕತ್ತರಿಸಿದ ಮಾತು ಬಂತು ಅಷ್ಟೆ. ಉಷ್ಣಾಂಶ ಮೈನಸ್ > ಅರವತ್ತಕ್ಕೆ ಹೋದಾಗ ಬದುಕು ಹೇಗಿರುತ್ತದೆ ಎನ್ನುವುದನ್ನು ನಿಮಗೆಂದಾದರೂ > ಕಲ್ಪಿಸಿಕೊಳ್ಳಲಿಕ್ಕಾದರೂ ಸಾಧ್ಯವಾಗುತ್ತದೋ ಇಲ್ಲವೊ ನನಗೆ ಗೊತ್ತಿಲ್ಲ! ಆ ಚಳಿಯಲ್ಲಿ ನೀವು > ಮೈಮೇಲೆ ಭೂತ ಬಂದಂತೆ ನಡುಗುತ್ತಿರುತ್ತೀರಿ. ಅಥವಾ ನರವ್ಯೂಹ ಸತ್ತು ನಡುಗದೆ ಹೆಣದಂತೆ > ನಿಶ್ಚೇಷ್ಟಿತರಾಗಿರುತ್ತೀರಿ. ಕೈಕಾಲುಗಳನ್ನೆಲ್ಲ ಹಿಮ ಕೊರೆದುಹಾಕಿರುತ್ತದೆ. ಎಷ್ಟು > ಹುಡುಕಿದರೂ ಒಂದು ಸಣ್ಣ ಎಲೆ ಕೂಡ ಕಾಣದ ಆ ಬಿಳಿ ಮರುಭೂಮಿಯಲ್ಲಿ ಕೊನೆಗೆ ನಿಮ್ಮೊಡನೆ ಗಾಡಿ > ಎಳೆಯುತ್ತ ಬಂದ ಹಿಮನಾಯಿಗಳನ್ನೇ ಒಂದೊಂದಾಗಿ ಕೊಂದು ತಿಂದು ಜೀವ ಹಿಡಿದುಕೊಳ್ಳಬೇಕಾದ > ಪರಿಸ್ಥಿತಿ ಬರುತ್ತದೆ. ಅದೃಷ್ಟವಿದ್ದರೆ ಬದುಕಿಬರುತ್ತೀರಿ. ಇಲ್ಲವೆ, ಸತ್ತು ಹಿಮದ ಮೇಲೆ > ನೂರಾರು ವರ್ಷ ಕೆಡದೆ ಮಮ್ಮಿಯಾಗಿ ಮಲಗಿರುತ್ತೀರಿ. ಇಂಥದೊಂದು ವಿಚಿತ್ರ ಸಾಹಸಕ್ಕೆ > ನನ್ನನ್ನು ನಾನು ಪ್ರತಿವರ್ಷ ಒಡ್ಡಿಕೊಳ್ಳಬೇಕಾಗಿತ್ತು. ಯಾಕೆಂದರೆ ನನ್ನ ವಿಶೇಷ ಅಧ್ಯಯನದ > ವಿಷಯ ಧ್ರುವಪ್ರದೇಶದ ಹವಾಮಾನ ವೈಪರೀತ್ಯ. ವರ್ಷದ ವಿವಿಧ ಕಾಲಗಳಲ್ಲಿ ಧ್ರುವಗಳ ಹಿಮಟೋಪಿಗಳ > ದಪ್ಪ ಹೇಗೆ ಹೆಚ್ಚುಕಡಿಮೆಯಾಗುತ್ತದೆ ಎನ್ನುವುದನ್ನು ನಾನು ಅಭ್ಯಾಸ ಮಾಡಿ ಸರ್ಕಾರಕ್ಕೆ > ವರದಿ ಒಪ್ಪಿಸಬೇಕಾಗಿತ್ತು. ಅದಕ್ಕಾಗಿ ನನ್ನ ದೇಶ ಜರ್ಮನಿ, ಭರಪೂರವಾದ ದುಡ್ಡು > ಸುರಿಯುತ್ತಿತ್ತು. ಸೈಬೀರಿಯದ ಓಪನ್ ಜೈಲುಗಳಿಗಿಂತಲೂ ಭೀಕರವಾದ ಗ್ರೀನ್ಲ್ಯಾಂಡ್ನ > ಹಿಮಭೂಮಿಯಲ್ಲಿ ಹವಾಮಾನ ಪ್ರಯೋಗಾಲಯಗಳನ್ನು ತೆರೆಯುವ ಕೆಲಸ ನನ್ನ ಪಾಲಿಗೆ ಬಂದಿದ್ದರಿಂದ, > ಅವಕ್ಕಾಗಿ ಈ ಓಡಾಟಗಳು ಅಗತ್ಯವಾಗಿದ್ದವು. ನಾನು ಹುಟ್ಟಿದ್ದು 1880ರ ನವೆಂಬರ್ 1ರಂದು, > ಜರ್ಮನಿಯ ಬರ್ಲಿನ್ನಲ್ಲಿ. ಅಪ್ಪ ಜಿಮ್ನಾಸಿಯಂ (ನಿಮ್ಮ ಹೈಸ್ಕೂಲಿಗೆ ಸಮ) ಒಂದರಲ್ಲಿ > ಲ್ಯಾಟಿನ್, ಗ್ರೀಕ್ ಮೊದಲಾದ ಅಭಿಜಾತ ಭಾಷೆಗಳನ್ನು ಹೇಳಿಕೊಡುವ ಶಿಕ್ಷಕ. ನಾನು ಓದಿನಲ್ಲಿ > ಮುಂದಿದ್ದೆ. ತರಗತಿಗೆ ಮೊದಲ ಸ್ಥಾನವನ್ನೇ ಪಡೆಯುತ್ತಿದ್ದೆ. ಪದವಿ ಪಡೆಯಲು ಕಾಲೇಜು > ಸೇರಿದಾಗ ಅಧ್ಯಯನದ ವಿಷಯವಾಗಿ ಭೌತಶಾಸ್ತ್ರ, ಪವನವಿಜ್ಞಾನ (Mಛಿಠಿಛಿಟ್ಟಟ್ಝಟಜಢ) ಮತ್ತು > ಖಗೋಳಶಾಸ್ತ್ರಗಳನ್ನು ಆರಿಸಿಕೊಂಡೆ. ಪದವಿ ಮುಗಿಯಿತು. ಹತ್ತಿರದ ಖಗೋಳ ವೀಕ್ಷಣಾಲಯದಲ್ಲಿ > ಪುಟ್ಟದೊಂದು ಕೆಲಸ ಸಿಕ್ಕಿತು. ಅಲ್ಲಿರುತ್ತ, ನನ್ನ ಇಪ್ಪತೆôದನೇ ವರ್ಷಕ್ಕೆಲ್ಲ > ಆಸ್ಟ್ರಾನಮಿಯಲ್ಲಿ ಪಿಎಚ್ಡಿಯನ್ನೂ ಪೂರ್ತಿಗೊಳಿಸಿದೆ. ಆಗಲೇ ನನಗೆ ಭೂಮಿಯ ಹವಾಮಾನ > ಬದಲಾವಣೆಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕೆಂಬ ಆಸೆ ಹುಟ್ಟಿದ್ದು. ಅಣ್ಣ ಕರ್ಟ್ > ಜೊತೆಗಿದ್ದ. ಅವನಿಗೂ ಇಂಥ ಹುಚ್ಚಾಟಗಳಲ್ಲಿ ಅಮಿತ ಆಸಕ್ತಿ. ಇಬ್ಬರೂ ಸೇರಿ, ಆಕಾಶಕ್ಕೆ > ದೊಡ್ಡದೊಡ್ಡ ಬಲೂನುಗಳನ್ನು ಹಾರಿಸಿ, ಅವು ಹಾರಿಕೊಂಡುಹೋಗುವ ದಿಕ್ಕು, ವೇಗ ಇತ್ಯಾದಿ ನೋಡಿ, > ಭೂಮಿಯ ಸುತ್ತಲೂ ಒಂದು ಬಗೆಯ ವಾಯುಪ್ರವಾಹಗಳು ಸದಾ ಗಿರಕಿ ಹೊಡೆಯುತ್ತಿವೆ ಎನ್ನುವ > ತೀರ್ವನಕ್ಕೆ ಬಂದೆವು. ಇವುಗಳ ಉಷ್ಣತೆಯಲ್ಲಿ ಏರುಪೇರಾಗುತ್ತಿರುತ್ತದೆ. ಅಂಥ > ತಾಪವೈಪರೀತ್ಯವೇ ಜಗತ್ತಿನಲ್ಲಿ ನಡೆಯುವ ಹಲವು ನೈಸರ್ಗಿಕ ವಿದ್ಯಮಾನಗಳಿಗೆ ಕಾರಣ ಎನ್ನುವುದು > ನಮ್ಮ ತರ್ಕವಾಗಿತ್ತು. ನಂಬಿದರೆ ನಂಬಿ, ಆಗಿನ್ನೂ ಭೂಮಂಡಲದ ಸುತ್ತ ಉಷ್ಣ ಮತ್ತು > ಶೀತಪ್ರವಾಹಗಳಿರುತ್ತವೆ ಎನ್ನುವ ಕಲ್ಪನೆಯೇ ಜನಕ್ಕೆ ಇರಲಿಲ್ಲ! ನನ್ನ ಸಂಶೋಧನೆಗಳನ್ನು > ಮುಂದುವರಿಸಲು ಗ್ರೀನ್ಲ್ಯಾಂಡ್ನಂಥ ಸ್ತಬ್ಧ ಪರಿಸರ ಸೂಕ್ತ ಅನ್ನಿಸಿತು. 1906ರಲ್ಲಿ ನನ್ನ > ಸವಾರಿ ಅಲ್ಲಿಗೆ ಹೋಯಿತು. ಅಲ್ಲಿನ ಶೀತದ ಕತೆಯನ್ನು ಕೇಳಿ (ಕೇಳಿಯೇ!) ನಡುಗಿದ್ದೆನೇ ಹೊರತು > ಕಣ್ಣಾರೆ ನೋಡಿ ಅನುಭವಿಸಿರಲಿಲ್ಲ. ಆ ವರ್ಷದ ಯಾತ್ರೆಯಲ್ಲಿ ನನ್ನ ಕಣ್ಣೆದುರಲ್ಲೇ ಇಬ್ಬರು > ಹಿರಿಯ ಸಹೋದ್ಯೋಗಿಗಳು ಥಂಡಿಯೇರಿ ಸಾಯುವುದನ್ನು ನೋಡಬೇಕಾಯಿತು. ಅಲ್ಲಿಂದ 1908ರಲ್ಲಿ > ವಾಪಸು ಬಂದ ಮೇಲೆ, ಮತ್ತೆ ಹೋಗಲು ಧೈರ್ಯ ಸಾಲಲಿಲ್ಲ. ಮೂರ್ನಾಲ್ಕು ವಿಶ್ವವಿದ್ಯಾಲಯಗಳಲ್ಲಿ > ಪವನವಿಜ್ಞಾನ, ಕಾಸ್ಮಿಕ್ ಫಿಸಿಕ್ಸ್, ಆಸ್ಟ್ರಾನಮಿ ಇತ್ಯಾದಿ ಬೋಧಿಸಿದೆ. ಸ್ವಯಂಸಂಶೋಧನೆಗಳ > ಕತೆಗಳನ್ನೂ ಗ್ರೀನ್ಲ್ಯಾಂಡ್ನಲ್ಲಿ ಅಧ್ಯಯನಕ್ಕಾಗಿ ಮಾಡಿದ ಹುಚ್ಚಾಟದ ವಿವರಗಳನ್ನೂ > ಸೇರಿಸಿ ಒಗ್ಗರಣೆ ಹಾಕಿ ಪಾಠ ಮಾಡುತ್ತಿದ್ದುದರಿಂದ ಭಲೇ ಜನಪ್ರಿಯ ಪ್ರಾಧ್ಯಾಪಕನಾದೆ. > ಸಹೋದ್ಯೋಗಿಗಳು ಕೂಡ, ಈತ ಪುಸ್ತಕದ ಬದನೆಕಾಯಲ್ಲ - ಹೊರಗಿನ ಜಗತ್ತಿನ ವಿವರಗಳನ್ನೂ > ರಸವತ್ತಾಗಿ ಹೇಳುತ್ತಾನೆ ಎಂದು ಮೆಚ್ಚಿಕೊಂಡರು. ಮೊದಲ ಮಹಾಯುದ್ಧ ಶುರುವಾದಾಗ, ದೇಶದ > ಆಣತಿಯಂತೆ ನಾನು ಅನಿವಾರ್ಯವಾಗಿ ಯುದ್ಧಭೂಮಿಯಲ್ಲಿ ಬಂದೂಕು ಹಿಡಿದು ಹೋರಾಡಬೇಕಾಯಿತು. > ಅದರಲ್ಲಿ ಅಷ್ಟೊಂದು ಅನುಭವವಿಲ್ಲದ ಮಡೆಯನಾದ್ದರಿಂದ ಎರಡು ಸಲ ತೀವ್ರವಾದ ಗಾಯಗಳಾಗಿ > ಆಸ್ಪತ್ರೆ ಸೇರಬೇಕಾಯಿತು. ಆದರೆ, ಯುದ್ಧದ ಸಂದರ್ಭದಲ್ಲಿ ನನಗೆ ಯುರೋಪ್ನಲ್ಲಿ ವ್ಯಾಪಕವಾಗಿ > ಸುತ್ತಾಡುವ ಸುವರ್ಣ ಅವಕಾಶ ಸಿಕ್ಕಿತು! ಹಾಗೆ ಹೊಸಜಾಗಕ್ಕೆ ಗುಳೆ ಹೊರಟಾಗೆಲ್ಲ ನನ್ನೊಳಗಿನ > ವಿಜ್ಞಾನಿ ಜಾಗೃತನಾಗುತ್ತಿದ್ದ. ಅಲ್ಲಿ ಸಿಗುವ ಕಲ್ಲುಮಣ್ಣುಗಳನ್ನು ಸೂಕ್ಷ್ಮವಾಗಿ > ಪರಿಶೀಲಿಸುತ್ತಿದ್ದೆ. ಆಗ ನನಗೆ ಅಚ್ಚರಿ ಹುಟ್ಟಿಸುವ ಫಲಿತಾಂಶವೊಂದು ಸಿಕ್ಕಿತು. > ಅದೇನೆಂದರೆ, ಉತ್ತರ ಅಮೆರಿಕದ ಪೂರ್ವ ಕರಾವಳಿ ಮತ್ತು ಯುರೋಪ್ನ ಪಶ್ಚಿಮದ ಭಾಗಗಳಲ್ಲಿ > ಕಂಡುಬರುವ ಕಲ್ಲುಮಣ್ಣುಗಳಲ್ಲಿ ಮೈ ಮುಳ್ಳೆಬ್ಬಿಸುವಷ್ಟು ಸಾಮ್ಯತೆ ಇದ್ದವು. ಹಾಗೆಯೇ > ದಕ್ಷಿಣ ಅಮೆರಿಕ ಮತ್ತು ಆಫ್ರಿಕದ ಭಾಗಗಳಲ್ಲಿ ದೊರಕಿದ ಫಾಸಿಲ್ಗಳಲ್ಲೂ ಅಪ್ರತಿಮ > ಹೋಲಿಕೆಗಳಿದ್ದವು. ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುವಂತಾಯಿತು. ನಡುವೆ ಅಷ್ಟೊಂದು > ದೊಡ್ಡ ಅಟ್ಲಾಂಟಿಕ್ ಸಾಗರ ಹಬ್ಬಿದ್ದರೂ ಈ ಭೂಸಾಮ್ಯ ಹೇಗೆ? ಸಂಶಯದ ಕೀಟ ಮಿದುಳನ್ನು > ಕೊರೆಕೊರೆದು ಹಾಕತೊಡಗಿತು. ಸೈನಿಕನ ವೇಷದಲ್ಲಿದ್ದ ಈ ವಿಜ್ಞಾನಿಯ ರಹಸ್ಯಸಂಶೋಧನೆ > ಶುರುವಾಯಿತು. ಭೂಮಿಯ ಮ್ಯಾಪು ಬಳಿಯಲ್ಲಿಟ್ಟುಕೊಂಡು ಹಗಲುರಾತ್ರಿ ಎವೆಯಿಕ್ಕದೆ ನೋಡಿದೆ. > ಅದುವರೆಗಿನ ಎಲ್ಲ ಸಂಶೋಧನೆಗಳ ಸಾರಸರ್ವಸ್ವವನ್ನೂ ಮೈಮೇಲೆ ಬಸಿದುಕೊಂಡೆ. ಭೂವಿಜ್ಞಾನದ > ಗೂಢಗಳನ್ನು ಅರಿಯಲು ಸ್ವತಃ ನಾನೇ ಅದರೊಳಗೆ ಡುಮ್ಕಿ ಹೊಡೆದೆ. ಕೊನೆಗೆ 1912ರ ಹೊತ್ತಿಗೆ > ನನಗೊಂದು ವಿಷಯ ಸ್ಪಷ್ಟವಾಗತೊಡಗಿತು. ಅದೇನೆಂದರೆ, ಈ ಭೂಮಿ ಈಗ ನಾವು ನೋಡುವಂತೆ ಇರಲಿಲ್ಲ. > ಅದು ಕಳೆದ ಹಲವು ಕೋಟ್ಯಂತರ ವರ್ಷಗಳಲ್ಲಿ ಬದಲಾಗುತ್ತ ಬಂದಿದೆ. ಕೆಲವು ಲಕ್ಷ ವರ್ಷಗಳ > ಹಿಂದೆ, ಈ ಖಂಡಗಳು ಪರಸ್ಪರ ಹತ್ತಿರ ಇದ್ದವು. ಹತ್ತಿರ ಏನು? ಅಂಟಿಕೊಂಡೇ ಇದ್ದವು! ಅಮೆರಿಕ > ಯುರೋಪ್ ಮತ್ತು ಆಫ್ರಿಕಗಳಿಗೆ; ಅವು ಏಷ್ಯಕ್ಕೆ; ಏಷ್ಯ ಆಸ್ಟ್ರೇಲಿಯಕ್ಕೆ - ಹೀಗೆ ಇದು > ಒಂದಕ್ಕೊಂದು ಪೋಣಿಸಿದ ಸರಮಾಲೆಯಾಗಿತ್ತು! ಕಾಲಕ್ರಮೇಣ ಎಣ್ಣೆಯಲ್ಲಿ ಬಿದ್ದ ಬೂಂದಿಯ > ಹನಿಗಳಂತೆ ಇವು ದೂರದೂರಕ್ಕೆ ಸರಿಯತೊಡಗಿದವು. ಈ ಚಲನೆ ಈಗಲೂ ಜಾರಿಯಲ್ಲಿದೆ; ಭೂಖಂಡಗಳು > ಪ್ರತಿವರ್ಷವೂ ಇಷ್ಟಿಷ್ಟೇ ಇಂಚು ಎನ್ನುತ್ತ ಪರಸ್ಪರ ದೂರ ಹೋಗುತ್ತಿವೆ ಎಂಬ ವಾದ ತಲೆಯಲ್ಲಿ > ಹುಟ್ಟಿತು. 1914ರಲ್ಲಿ ನಾನು ಯುದ್ಧದ ಗಾಯಾಳುವಾಗಿ ಹಲವು ವಾರ ಆಸ್ಪತ್ರೆಯಲ್ಲಿ ಮಲಗಬೇಕಾಗಿ > ಬಂದದ್ದು ಒಳ್ಳೆಯದೇ ಆಯ್ತೆನ್ನಿ! ಆಗ, ಈ 'ಭೂಖಂಡಗಳ ಚಲನೆ' ಎಂಬ ನನ್ನ ಹೊಸಸಿದ್ಧಾಂತವನ್ನು > ವಿವರಿಸಿ ವಿವರವಾದ ಪುಸ್ತಕವೊಂದನ್ನು ಬರೆಯಲು ಅನುಕೂಲವಾಯಿತು. ಅದಕ್ಕೆ ಪೂರಕವಾಗಿ ಒಂದೆರಡು > ಲೇಖನಗಳನ್ನು ಬರೆದು ವಿಜ್ಞಾನ ಜರ್ನಲ್ಗಳಿಗೆ ಕಳಿಸಿದೆ. ಕೆಲವು ಪ್ರಕಟವಾದವು. ಅವುಗಳನ್ನು > ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಕೆಲವರು ಉಡಾಫೆ ಮಾಡಿ, ನನಗೊಂದಿಷ್ಟು ಬಯ್ದು ನಾಲಗೆಯ > ತೀಟೆ ತೀರಿಸಿಕೊಂಡರು. ಈ ಪ್ರತಿಕ್ರಿಯೆಗಳನ್ನು ನೋಡಿ, ನನ್ನ ಪುಸ್ತಕದಲ್ಲಿ ಬೇಕಾದ > ಪರಿಷ್ಕಾರಗಳನ್ನು ಮಾಡಿ, ಅಗತ್ಯ ಭಾಗಗಳನ್ನು ಹಿಗ್ಗಿಸಿ, ಇನ್ನಷ್ಟು ವಿವರಣೆ ಸೇರಿಸಿ, ಅಂತೂ > ಅದನ್ನು ಪ್ರಕಟಣೆಗೆ ಸಿದ್ಧಗೊಳಿಸಿದೆ. ಭೂಮಿಯ ಮೇಲಿರುವ ಖಂಡಗಳೆಲ್ಲವೂ ಆಳದಲ್ಲಿ ಒಂದಷ್ಟು > ಶಿಲಾಫಲಕಗಳ ಮೇಲೆ ನಿಂತಿರುವ ರಚನೆಗಳು; ಈ ಫಲಕಗಳು ಕಾರಣಾಂತರಗಳಿಂದ ಅತ್ತಿತ್ತ ಸರಿದಾಗ > ಖಂಡಗಳೂ ಚಲಿಸುತ್ತವೆ ಎನ್ನುವ ಹೊಸ 'ಶಿಲಾಫಲಕಗಳ ಚಲನೆಯ ಸಿದ್ಧಾಂತ'ವನ್ನೂ ಆ ಪುಸ್ತಕದಲ್ಲಿ > ಸೇರಿಸಿದೆ. 1915ರಲ್ಲಿ 'ಖಂಡ ಮತ್ತು ಸಾಗರಗಳ ಉಗಮ' ಎಂಬ ಆ ಉದಂಥ ಪ್ರಕಟಣೆಯ ಭಾಗ್ಯ > ಕಂಡಿತು. ತಮಾಷೆಯೆಂದರೆ, ಅಲ್ಲಿಯವರೆಗೂ ಈ ಖಂಡಗಳ ಚಲನೆಯ ವಿಷಯದಲ್ಲಿ ಯಾರೂ ಸಂಶೋಧನೆ > ಮಾಡುವುದು ಬಿಡಿ, ಯೋಚಿಸಿಯೂ ಇರಲಿಲ್ಲ! ಎಲ್ಲ ಖಂಡಗಳ ನಡುವೆಯೂ ನೆಲದ ಸೇತುವೆ ಇದ್ದವು; > ಕಾಲಾಂತರದಲ್ಲಿ ಅವು ಸಾಗರದಲ್ಲಿ ಬಿದ್ದುಹೋದವು - ಎಂಬ ಮಾತನ್ನೇ ಎಲ್ಲರೂ ದೇವರ ಸಂದೇಶ > ಎಂಬಂತೆ ಭಯಭಕ್ತಿಯಿಂದ ನಂಬಿ ಕೂತಿದ್ದರು! ಇಡೀ ವಿಶ್ವದಲ್ಲೇ ಅತ್ಯಂತ ಸ್ಥಿರವಾದ ರಚನೆ > ಎಂದರೆ ಭೂಮಿ, ಅದಕ್ಕೆ ಚಲನೆ ಇಲ್ಲ ಎಂದು ವಿಜ್ಞಾನಿಗಳು ಕೂಡ ನಂಬಿದ್ದರು. > ದುರದೃಷ್ಟವೆಂದರೆ, ನಾನು ಕೂಡ; ಖಂಡಗಳು ಒಟ್ಟಾಗಿದ್ದವು, ಈಗ ದೂರ ಸರಿಯುತ್ತಿವೆ ಎಂದೆನೇ > ಹೊರತು ಅವಕ್ಕೆ ಕಾರಣವೇನು ಎನ್ನುವುದನ್ನು ತಿಳಿದಿರಲಿಲ್ಲ. ಭೂಮಿ ಎಡೆಬಿಡದೆ ತನ್ನ > ಅಕ್ಷದಲ್ಲಿ ಭ್ರಮಿಸುತ್ತಿರುವುದರಿಂದ, ಅದರಿಂದ ಉಂಟಾದ ಕೇಂದ್ರಾಪಗಾಮಿ ಶಕ್ತಿಯೇ ಈ > ಖಂಡಗಳನ್ನು ದೂರ ತಳ್ಳುತ್ತಿದೆ ಎಂದು ನಂಬಿದ್ದೆ. ನನ್ನ ವಾದಕ್ಕೆ ಎಲ್ಲೂ ಪುಷ್ಟಿ > ಸಿಗಲಿಲ್ಲ. ನ್ಯೂಯಾರ್ಕ್ನಲ್ಲಿ ಈ ಪುಸ್ತಕವನ್ನು ಹೀಯಾಳಿಸುವುದಕ್ಕಾಗಿಯೇ ಅಂತಾರಾಷ್ಟ್ರೀಯ > ಸಮ್ಮೇಳನವೊಂದು ಆಯೋಜನೆಯಾಯಿತು ಎಂದರೆ ನೀವು ನಂಬಲೇಬೇಕು! ಜರ್ಮನಿಯ ಖ್ಯಾತ > ಭೂವಿಜ್ಞಾನಿಯಾಗಿದ್ದ ನನ್ನ ಮಾವನವರು, 'ಈ ಮೊದ್ದುಮಣಿಯ ಅಧಿಕಪ್ರಸಂಗವನ್ನು ವಿದ್ವನ್ಮಣಿಗಳು > ಗಂಭೀರವಾಗಿ ಪರಿಗಣಿಸಬಾರದು' ಎಂದುಬಿಟ್ಟರು! ನನ್ನ ವಿರುದ್ಧ ನೂರಾರು ಲೇಖನಗಳು > ಬರೆಯಲ್ಪಟ್ಟವು. ಕೈಯಲ್ಲಿದ್ದ ಕೆಲಸ ಕೂಡ ಹೋಯಿತು. ಮಾನಸಿಕವಾಗಿ ತೀರಾ ಇಳಿದುಹೋದೆ. ಅದಾಗಿ > ಹಲವು ವರ್ಷ ನಾನು ಖಂಡಾಂತರ ಚಲನೆಯ ಸಂಶೋಧನೆಯಿಂದಲೇ ದೂರ ಹೋದೆ. ಅಥವಾ ಹಾಗಾಗುವಂತೆ > ಜಗತ್ತಿನ ಪಂಡಿತವಲಯ ನೋಡಿಕೊಂಡಿತು! ನನ್ನ ಅಧ್ಯಯನವನ್ನು ಭೂಮಿಯ ಮೇಲೆ ನಡೆಯುವ ಉಷ್ಣ-ಶೀತ > ಪ್ರವಾಹಗಳ ಮೇಲೆ ಕೇಂದ್ರೀಕರಿಸಿದೆ. ಧ್ರುವಪ್ರದೇಶಗಳ ವಾತಾವರಣದ ಬಗ್ಗೆ ಎಡೆಬಿಡದೆ ಸಂಶೋಧನೆ > ಮಾಡಿದೆ. ವರ್ಷಕ್ಕೊಂದಾವರ್ತಿ ಗ್ರೀನ್ಲ್ಯಾಂಡ್ಗೆ ಹೋಗುವುದಂತೂ ಇದ್ದೇ ಇತ್ತು. ಅಲ್ಲಿನ > ಹಿಮನೆಲದಲ್ಲಿ ಅಲೆಮಾರಿಯಾಗಿ ರಣಪೀಡೆಯಂತೆ ಸುತ್ತುವಾಗ, ಮನುಷ್ಯಪ್ರಪಂಚಕ್ಕಿಂತ ಈ > ಪ್ರಕೃತಿಯೇ ಹೆಚ್ಚು ಸಹ್ಯವಾಗಿದೆ ಅನ್ನಿಸುತ್ತಿತ್ತು. ಆದರೂ ಖಂಡಾಂತರ ಚಲನೆಯ ವಾದದಿಂದ > ಹಿಂದೆ ಸರಿಯಲಿಲ್ಲ. ಆ ಪುಸ್ತಕವನ್ನು ಮತ್ತೆ ಮತ್ತೆ ತಿದ್ದಿ ಬರೆಯುತ್ತ, ಪರಿಷ್ಕರಿಸುತ್ತ, > ಹೊಸ ವಿಚಾರಗಳನ್ನು ಸೇರಿಸುತ್ತ, ತಪ್ಪುಗಳನ್ನು ಕೈಬಿಡುತ್ತ ಐದಾರು ಸಲ ಪ್ರಕಟಿಸಿದೆ. ಆದರೆ, > ನನ್ನ ಹಣೆಬರಹವೋ ಅಥವಾ ವಿಜ್ಞಾನದ ದುರವಸ್ಥೆಯೋ - ಅಂತೂ ಅದನ್ನು ಇದ್ದರೂ ಇರಬಹುದೆಂದು > ಒಪ್ಪುವ ಒಬ್ಬನೇ ಒಬ್ಬ ವಿಜ್ಞಾನಪ್ರೇಮಿಯೂ ಹುಟ್ಟಿಬರಲಿಲ್ಲ! ಭೂಮಿಯಲ್ಲಿ ಕಂದಕಗಳು, > ನದಿಸರೋವರಗಳು ಹುಟ್ಟಲು ಶಿಲಾಫಲಕಗಳ ಅಲುಗಾಟವೇ ಕಾರಣ; ಅವು ಪರಸ್ಪರ ಹತ್ತಿರ ಬಂದಾಗ > ಪರ್ವತಗಳು ಎದ್ದು ನಿಲ್ಲುತ್ತವೆ ಎಂದು ನಾನು ಹೇಳಿದಾಗ ಜನ ಪಕಪಕನೆ ನಕ್ಕರು. > ಬಿಸಿಯುಂಡೆಯಾಗಿದ್ದ ಭೂಮಿ ತಣಿಯುತ್ತಿದ್ದಾಗ ಉಂಟಾದ ಮಡಿಕೆಗಳೇ ಪರ್ವತಗಳು ಎಂಬ ವಾದವೇ > ಸದ್ದುಮಾಡುತ್ತಿತ್ತು. ಅದರ ಆರ್ಭಟದೆದುರು ನನ್ನ ದನಿ ಉಡುಗಿಹೋಯಿತು. 1930ರಲ್ಲಿ > ಗ್ರೀನ್ಲ್ಯಾಂಡ್ನ ನೆಲದಲ್ಲಿದ್ದೆ. ಅಲ್ಲಿ ಮೂರ್ನಾಲ್ಕು ಹವಾಮಾನ ಕೇಂದ್ರಗಳನ್ನು ತೆರೆಯುವ > ಗುರುತರ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತ್ತು. ಅವತ್ತೊಂದು ದಿನ - ಚಳಿಗಾಲ ತನ್ನ > ಉಗ್ರಪ್ರತಾಪ ತೋರುತ್ತಿದ್ದ ದಿನ - ಒಂದು ಸ್ಟೇಶನ್ನಿಂದ ಇನ್ನೊಂದಕ್ಕೆ ಆಹಾರ ಸರಬರಾಜು > ಮಾಡುವ ಕೆಲಸ ವಹಿಸಿಕೊಂಡು ಹೊರಬಿದ್ದಿದ್ದೆ. ಕಾಲಡಿಯ ಹಿಮನೆಲ ಎಷ್ಟು ಹೊತ್ತಿಗಾದರೂ ನನ್ನ > ಬಲಿ ತೆಗೆದುಕೊಳ್ಳುವೆನೆಂಬಂತೆ ಮೈಯನ್ನು ನೆಕ್ಕಿಹಾಕುತ್ತಿತ್ತು. ಮಂಜು ಮುಸುಕಿದ > ವಾತಾವರಣದಲ್ಲಿ ನನಗೆ ದಾರಿ ತಪ್ಪಿತು. ಹಿಂದೊಮ್ಮೆ ಬಂದಿದ್ದಾಗ ನೆಟ್ಟ ಗುರುತುಗಳೆಲ್ಲ > ಮೂರ್ನಾಲ್ಕು ಅಡಿ ಆಳದಲ್ಲಿ ಹುಗಿದುಹೋಗಿದ್ದವೊ ಏನೋ. ಎಷ್ಟು ಅಲೆದರೂ ಹಿಂದಿರುಗುವ ಮಾರ್ಗ > ಕಾಣಲಿಲ್ಲ. ಕತ್ತಲಾಯಿತು. ಸಣ್ಣಗೆ ಹಿಮಪಾತವೂ ಶುರುವಾಯಿತು. ಯಾವುದೋ ಕ್ಷಣದಲ್ಲಿ ನಾನು > ಬಲಹೀನ ಬಳ್ಳಿಯಂತೆ ಕೆಳಗೆ ಬಿದ್ದೆ. ಇಳಿಯುತ್ತಿದ್ದ ನಸುಗತ್ತಲು ಗಾಢವಾಗಿ ಹರಡಿಕೊಂಡು ನನ್ನ > ದೇಹವನ್ನು ಹೊದಿಕೆಯಂತೆ ಅಪ್ಪಿಕೊಂಡಿತು. > > ಅದಾಗಿ, ಏಳು ತಿಂಗಳ ನಂತರ, 1931ರ ಮೇನಲ್ಲಿ ವೆಗ್ನರ್ನ ದೇಹ ಪತ್ತೆಯಾಯಿತು. ಅವನ ಜೊತೆ ಆ > ಚಳಿಗಾಲದಲ್ಲಿ ಗ್ರೀನ್ಲ್ಯಾಂಡ್ನಲ್ಲಿ ಕೆಲಸ ಮಾಡುತ್ತಿದ್ದ ಒಂದು ಡಜನ್ ಸಹೋದ್ಯೋಗಿಗಳು > ಕಣ್ಣೀರು ಮಿಡಿದರು. ವೆಗ್ನರ್ನ ದೇಹವನ್ನು ಅಲ್ಲೇ ಸಮಾಧಿ ಮಾಡಲಾಯಿತು. ಜೀವನಪರ್ಯಂತ > ಅವನಿಗೆ ಸೇರಬೇಕಾಗಿದ್ದ ಮಾನ-ಸಮ್ಮಾನಗಳು ಬರಲೇ ಇಲ್ಲ. 1964ರವರೆಗೂ ವಿಜ್ಞಾನಿಗಳು, > ಸಂಶೋಧಕರು ಯಾರೂ ಅವನ ಸಿದ್ಧಾಂತವನ್ನು ಒಪ್ಪಲಿಲ್ಲ! ಕೊನೆಗೆ ಆ ವರ್ಷ ಅಮೆರಿಕದ > ಅಲಾಸ್ಕದಲ್ಲಿ ನಡೆದ ಭೀಕರ ಭೂಕಂಪವೊಂದು ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿತು. > ಭೂಕಂಪಕ್ಕೆ ನಿಜವಾದ ಕಾರಣ ಏನು ಎಂದು ಹುಡುಕಹೊರಟವರಿಗೆ ಭೂಮಿಯಾಳದಲ್ಲಿ ಶಿಲಾಫಲಕಗಳು > ಅತ್ತಿತ್ತ ಜರುಗುವ ವಿದ್ಯಮಾನದ ಬಗ್ಗೆ ತಿಳಿಯಿತು. ಐವತ್ತು ವರ್ಷಗಳ ಹಿಂದೆಯೇ ವೆಗ್ನರ್ ಈ > ಕಾರಣವನ್ನು ಹೇಳಿಬಿಟ್ಟಿದ್ದ ಎನ್ನುವುದೂ ತಿಳಿಯಿತು! ಕುತೂಹಲದಿಂದ ಅವನ ಸಂಶೋಧನಾ > ಲೇಖನಗಳನ್ನೂ, ಪುಸ್ತಕಗಳನ್ನೂ ಮತ್ತೆ ಓದತೊಡಗಿದ ವಿಜ್ಞಾನಿಗಳು, ಅಲ್ಲಿ ಬರೆದಿರುವ ಒಂದೊಂದು > ವಾಕ್ಯವೂ ಸತ್ಯ ಎಂದು ಒಪ್ಪಿಕೊಂಡರು! ಭೂಮಿಯ ನೆಲ ಒಂದಾನೊಂದು ಕಾಲದಲ್ಲಿ ಅಖಂಡವಾಗಿತ್ತು, > ಬಳಿಕ ಸರಿಯುತ್ತ ದೂರಹೋಯಿತು ಎನ್ನುವುದಾಗಲಿ, ಎರಡು ಶಿಲಾಪದರಗಳು ಪರಸ್ಪರ ಒಂದರ ಅಡಿಗೆ > ಒಂದು ಸೇರಿಕೊಂಡು ಹಿಮಾಲಯದಂಥ ಎತ್ತರದ ಬೆಟ್ಟಗಳನ್ನು ಹುಟ್ಟಿಸುತ್ತವೆ ಎನ್ನುವುದಾಗಲಿ > ನೂರಕ್ಕೆ ನೂರು ನಿಜವಾದ ಮಾತು ಎಂದು ತಪ್ಪೊಪ್ಪಿಕೊಂಡರು. ಅವರ ಇಷ್ಟು ವರ್ಷಗಳ ನಂಬಿಕೆಯನ್ನು > ವೆಗ್ನರ್ ಭೂಕಂಪದಂತೆಯೇ ಬುಡಮೇಲು ಮಾಡಿಬಿಟ್ಟಿದ್ದ! ವೆಗ್ನರ್ನನ್ನು ಈ ಜಗತ್ತಿನಲ್ಲಿ > ಆಗಿಹೋಗಿರುವ ಅತ್ಯಂತ ಧೀಮಂತ ವಿಜ್ಞಾನಿಗಳಲ್ಲಿ ಒಬ್ಬನೆಂದರು ಹಲವರು. 20ನೇ ಶತಮಾನದ > ವಿಜ್ಞಾನದ ದಿಕ್ಕು ಬದಲಿಸಿದ ಶಕಪುರುಷರಲ್ಲಿ ವೆಗ್ನರ್ ಒಬ್ಬ ಎಂಬ ಮಾತನ್ನು ಈಗ ಯಾವ ಭೂ > ಅಥವಾ ಪವನವಿಜ್ಞಾನಿಯೂ ಅಲ್ಲಗಳೆಯುವುದಿಲ್ಲ. ವೆಗ್ನರ್ ಹೋದ ದಾರಿಯಲ್ಲಿ ನಡೆಯದೆ > ಇರುತ್ತಿದ್ದರೆ, ಈಗಲೂ ನಮಗೆ ಭೂಕಂಪಗಳು ಪ್ರಕೃತಿವೈಚಿತ್ರ್ಯಳಾಗಿಯೇ ಉಳಿಯುತ್ತಿದ್ದವು. > ನೇಪಾಳದ ಭೂಕಂಪವನ್ನು ತಿಂಗಳಷ್ಟು ಮುಂಚಿತವಾಗಿ ಊಹಿಸಲು ವಿಜ್ಞಾನಿಗಳಿಗೆ ಸಾಧ್ಯವೇ > ಆಗುತ್ತಿರಲಿಲ್ಲ. ಕಾಲ ಮತ್ತು ಭೂಮಿ ಎರಡೂ ನಿರ್ದಯಿಗಳು. ಯಾವ ಕರುಣೆ ಇಲ್ಲದೆ ಅವು > ಎಲ್ಲವನ್ನೂ ಅಗಸ್ಱರಂತೆ ಹೊಟ್ಟೆಯೊಳಗೆ ಹಾಕಿಕೊಳ್ಳುತ್ತವೆ. ಹರಪ್ಪಾ-ಮೊಹೆಂಜೋದಾರೋಗಳಂತೆ > ಅಥವಾ ವೆಗ್ನರ್ನಂತೆ ಹೂತುಹೋದ ಆ ಗೂಢಸತ್ಯಗಳನ್ನು ಮತ್ತೆಷ್ಟೋ ವರ್ಷಗಳ ನಂತರ ಹೊರಕ್ಕೆ > ತೆಗೆದು ಮನುಷ್ಯ ಆಶ್ಚರ್ಯದಿಂದ ಬಾಯಿಕಳೆದು ನಿಲ್ಲುತ್ತಾನೆ! *** ಬದುಕಿದ್ದಾಗ ಕಾಯಂ ಕೆಲಸ > ಹಿಡಿಯಲು ಒದ್ದಾಡಬೇಕಿದ್ದ ವೆಗ್ನರ್ ಸತ್ತು ಐವತ್ತು ವರ್ಷಗಳಾದ ಮೇಲೆ, ಅವನ ಸಂಶೋಧನೆಯ > ಪ್ರಾಮುಖ್ಯ ಉಳಿದವರಿಗೆ ಗೊತ್ತಾಯಿತು! 1980ರಲ್ಲಿ 'ಆಲ್ಪ್ರೆಡ್ ವೆಗ್ನರ್ ಧ್ರುವ ಮತ್ತು > ಸಾಗರ ಅಧ್ಯಯನ ಸಂಸ್ಥೆ' ಎಂಬ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಜರ್ಮನಿಯಲ್ಲಿ > ಸ್ಥಾಪಿಸಲಾಯಿತು. ಉತ್ತರ ಮತ್ತು ದಕ್ಷಿಣಧ್ರುವಗಳೆರಡರ ಮೇಲೂ ನಿರಂತರ ಸಂಶೋಧನೆ ನಡೆಸುವ > ಪ್ರಪಂಚದ ಏಕಮಾತ್ರ ಸಂಸ್ಥೆ ಇದು. ಚಂದ್ರ ಮತ್ತು ಮಂಗಳಗ್ರಹಗಳ ಮೇಲಿನ ಎರಡು ಕುಳಿಗಳಿಗೆ > ವೆಗ್ನರ್ನ ಹೆಸರಿಡಲಾಗಿದೆ. ಭೂಖಂಡಗಳ ಸಂಶೋಧನೆ ಮಾತ್ರವಲ್ಲದೆ, ಭೂಮಿಯ ವಾಯುಮಂಡಲದಲ್ಲಿ > ಶೀತೋಷ್ಣ ಪ್ರವಾಹಗಳು ನಿರಂತರ ಹರಿಯುತ್ತಿವೆ ಎಂದು ತಿಳಿಸಿದ ಮೊದಲಿಗ ವೆಗ್ನರ್. ಆಧುನಿಕ > ಹವಾಮಾನ ವಿಜ್ಞಾನ ಇಲ್ಲಿಂದ ಪ್ರಾರಂಭವಾಯಿತು. ಧ್ರುವಪ್ರದೇಶಗಳ ಹಿಮಪದರಗಳ ದಪ್ಪದಲ್ಲಿ ಆಗುವ > ವ್ಯತ್ಯಾಸಗಳ ಬಗ್ಗೆ ಸಂಶೋಧನೆ ನಡೆಸಿದ ಮೊದಲಿಗನೂ ವೆಗ್ನರನೇ. ಅವನು ಬರೆದ 'ಥಮೋಡೈನಾಮಿಕ್ಸ್ > ಆಫ್ ದ ಅಟ್ಮಾಸ್ಪಿಯರ್' ಕೃತಿಯನ್ನು ಈಗ ಪವನವಿಜ್ಞಾನದ ಮೊದಲ ಪಠ್ಯಪುಸ್ತಕ ಎಂದು > ಪರಿಗಣಿಸಲಾಗುತ್ತದೆ. ವೆಗ್ನರ್ ಪ್ರಕಾರ ಸುಮಾರು 20 ಕೋಟಿ ವರ್ಷಗಳ ಹಿಂದೆ ಜಗತ್ತಿನ ಏಳು > ಭೂಖಂಡಗಳೂ ಸೇರಿ ಅಖಂಡವಾದ ಒಂದೇ ಭೂಭಾಗವಾಗಿತ್ತು. (ಆಗ ಆಸ್ಟ್ರೇಲಿಯ ನಮ್ಮ ಕೋಲಾರಕ್ಕೆ > ಅಂಟಿಕೊಂಡಿತ್ತು!) ಅವು ವರ್ಷಕ್ಕೆ ಒಂದೆರಡು ಇಂಚಿನಷ್ಟೇ ದೂರ ಸರಿಯಲು ಶುರುವಾದ ಮೇಲೆ > ಆರೂವರೆ ಕೋಟಿ ವರ್ಷಗಳ ಹಿಂದೆ ಈಗಿರುವಂಥ ರೂಪ ಭೂಮಿಗೆ ಸಿಕ್ಕಿತು. ಅಖಂಡವಾಗಿದ್ದ > ಭೂಭಾಗವನ್ನು ವೆಗ್ನರ್ 'ಖ್ಟಿkಟ್ಞಠಿಜ್ಞಿಛ್ಞಿಠಿ' ಎಂದು ಕರೆದಿದ್ದಾನೆ. (ಇದಕ್ಕೆ ಮುಂದೆ > ಪ್ಯಾಂಜಿಯಾ ಎಂಬ ಹೆಸರು ಬಂತು) ಈ ಭೂಭಾಗಗಳನ್ನು ಹೊತ್ತಿರುವ ಶಿಲಾಫಲಕಗಳ ಅಲುಗಾಟ ಇನ್ನೂ > ನಿಂತಿಲ್ಲ. ಇವುಗಳ ನಡುವೆ ನೂರಿನ್ನೂರು ಕಿಲೋಮೀಟರ್ ಆಳದಲ್ಲಾಗುವ ಉಜ್ಜಾಟವೇ ಭೂಕಂಪಕ್ಕೆ > ಕಾರಣ. > > [email protected] > ಸಿದ್ದರಾಮಪ್ಪ. ಎಸ್.ಎಂ > ಸಶಿ ಕಲಾ > ಸರ್ಕಾರಿ ಪ್ರೌಢ ಶಾಲೆ > ಗಂಜಿಗೆರೆ. ಕೆ ಆರ್ ಪೇಟೆ ತಾ|| > ಮಂಡ್ಯ ಜಿಲ್ಲೆ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAJCvfyUFgbhOf3Ng2UBb7ZwSKvkyKVJMkT6ejWu5gH5WcbbZAQ%40mail.gmail.com > <https://groups.google.com/d/msgid/socialsciencestf/CAJCvfyUFgbhOf3Ng2UBb7ZwSKvkyKVJMkT6ejWu5gH5WcbbZAQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- Basavaraj. s.Gogi. A.M. Girls,Govt.p.u.college shorapur po:Shorapur Dist : yadgiri. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABPNLHRnErF9cLzeP-uoamLekf3jpuoFXA1CSWvQ_6ChFQ9CbA%40mail.gmail.com. For more options, visit https://groups.google.com/d/optout.
