ತುಂಬಾ ಗಂಭೀರವಾದ ವಿಷಯ. ಮುಂದಾದರೂ ಈ ಪರಿಸ್ಥಿತಿ ಸುಧಾರಿಸಿತೇ?
2016-08-01 23:59 GMT+05:30 Siddaramappa s m Sri <[email protected]>: > ಅನುರಣನ > > ಪೊಲೀಸರನ್ನು ಮನುಷ್ಯರನ್ನಾಗಿಸುವ ಕಷ್ಟಗಳು > > 1 Aug, 2016ನಾರಾಯಣ > ‘ಪೊಲೀಸರಿಂದ ಅಮಾನವೀಯ ಹಲ್ಲೆ’ ಎಂಬುದಾಗಿ ನಾವು ಮತ್ತೆ ಮತ್ತೆ ಮಾಧ್ಯಮಗಳಲ್ಲಿ ಓದುವ > ಶೀರ್ಷಿಕೆಯೇ ವಿಚಿತ್ರವಾಗಿದೆ. ಯಾಕೆಂದರೆ ಹಲ್ಲೆಯಲ್ಲಿ ಮಾನವೀಯ ಹಲ್ಲೆ, ಅಮಾನವೀಯ ಹಲ್ಲೆ > ಎಂದು ಎರಡು ವಿಭಾಗಗಳಿಲ್ಲ. ಹಲ್ಲೆ ಹಲ್ಲೆಯೇ. > > ಸಮಸ್ಯೆ ಇರುವುದು ಇಲ್ಲೆ. ಎಲ್ಲಿ ಎಂದರೆ ಪೊಲೀಸರು ಹಲ್ಲೆ ನಡೆಸಬಹುದು, ಆದರೆ ಅದು > ಮಾನವೀಯವಾಗಿರಬೇಕು ಎಂದು ಬಯಸುವಲ್ಲಿ. ಒಮ್ಮೆ ಹಿಂಸಿಸುವ ಅಧಿಕಾರ ಪಡೆದ ಯಾವ ವ್ಯಕ್ತಿಯೂ > ಮಾನವೀಯವಾಗಿ ಉಳಿಯಲು ಸಾಧ್ಯವೇ ಇಲ್ಲ. > > ಇಷ್ಟು ಹೇಳಿದಾಕ್ಷಣ ಪೊಲೀಸರು ‘ಪ್ರಾಕ್ಟಿಕಲ್ ಆಗಿರಬೇಕಲ್ಲ?’ ‘ಬಲಪ್ರಯೋಗಿಸದೆ ಅಹಿಂಸೆಯ > ಮಂತ್ರ ಪಠಿಸುತ್ತಿದ್ದರೆ ಸಮಾಜಘಾತಕ ಶಕ್ತಿಗಳನ್ನು ನಿಯಂತ್ರಿಸುವುದು ಹೇಗೆ?’ ಎಂಬ > ಮರುಪ್ರಶ್ನೆಗಳು ಬರುತ್ತವೆ. > > ಬಲ ಪ್ರಯೋಗ ಮಾಡದೆ ಪೊಲೀಸ್ ಕೆಲಸ ಸಾಧ್ಯವಿಲ್ಲ ಎನ್ನುವ ಬಾಲರಾಮಾಯಣ ಮಟ್ಟದ ಜ್ಞಾನ ಪೊಲೀಸರ > ಹಿಂಸೆಯನ್ನು ಪ್ರಶ್ನಿಸುವ ಎಲ್ಲರಿಗೂ ತಿಳಿದಿರುತ್ತದೆ. ಅದನ್ನು ಯಾರೂ ಯಾರಿಗೂ ಉಪದೇಶಿಸುವ > ಅಗತ್ಯ ಇಲ್ಲ. ಬಲ ಪ್ರಯೋಗ ಬೇರೆ, ಹಿಂಸೆ ಬೇರೆ. > > ಭಾರತದಲ್ಲಿ ಪೊಲೀಸರು ತಮ್ಮ ಮೂಲಭೂತ ಜವಾಬ್ದಾರಿಗಳನ್ನು ಅಂದರೆ ಕಾನೂನು-ವ್ಯವಸ್ಥೆಯ > ರಕ್ಷಣೆ ಮತ್ತು ಅಪರಾಧ ತನಿಖೆಯನ್ನು ನಡೆಸುವುದು ಹಿಂಸೆಯ ಮೂಲಕ ಮತ್ತು ಭಯವನ್ನು ಸೃಷ್ಟಿಸುವ > ಮೂಲಕ. ಉದ್ರಿಕ್ತ ಗುಂಪನ್ನು ಚದುರಿಸಿ, ಹಿಂಸೆಗಿಳಿದವರನ್ನು ಗುರುತಿಸಿ ಕಾನೂನು ಪ್ರಕಾರ > ಕ್ರಮ ಕೈಗೊಳ್ಳಬೇಕಾದರೆ ಅದಕ್ಕೆ ಬುದ್ಧಿ, ವೈಜ್ಞಾನಿಕ ತರಬೇತಿ, ಶಿಸ್ತು ಎಲ್ಲಾ > ಬೇಕಾಗುತ್ತದೆ. > > ಅದ್ಯಾವುದೂ ಇಲ್ಲದೆ ನೇಮಕಗೊಂಡ ಕೆಳಹಂತದ ಸಿಬ್ಬಂದಿಯನ್ನು ಬಳಸಿ ಪರಿಸ್ಥಿತಿಯನ್ನು > ನಿಯಂತ್ರಣಕ್ಕೆ ತರಲು ಇರುವ ಸುಲಭ ಮಾರ್ಗ ಎಂದರೆ ಜನರಲ್ಲಿ ಭೀತಿ ಹುಟ್ಟಿಸುವುದು. ಭೀತಿ > ಹುಟ್ಟಿಸಬೇಕಾದರೆ ಹಿಂಸೆ ನಡೆಸಬೇಕು. > > ಮನೆ ಬಾಗಿಲು ಮುರಿದು ಒಳನುಗ್ಗಬೇಕು, ಕಂಡಕಂಡವರಿಗೆ ಬಡಿಯಬೇಕು, ರಕ್ತ ಹರಿಸಬೇಕು... > ಲಾಠಿಚಾರ್ಜು ಮಾಡುವುದು ಜನರನ್ನು ಓಡಿಸುವುದಕ್ಕೆ. ಆದರೆ ಪ್ರತೀ ಲಾಠಿಚಾರ್ಜಿನ > ಸಂದರ್ಭದಲ್ಲೂ ನಾವು ನೋಡುವುದು ಓಡುತ್ತಿರುವವರನ್ನು ನಿಲ್ಲಿಸಿ ಬಡಿಯುವುದನ್ನು. > ಬಿದ್ದವರನ್ನು ಸುತ್ತುವರಿದು ಮರ್ದಿಸುವುದನ್ನು. > > ಮೇಲಣ ಹುದ್ದೆಗಳಲ್ಲಿರುವವರು ಸಾರ್ವಜನಿಕವಾಗಿ ಇವನ್ನೆಲ್ಲ ಖಂಡಿಸುತ್ತಾ ಒಳಗೊಳಗೇ ತಮ್ಮ > ಕೆಳಗಿನ ಸಿಬ್ಬಂದಿಗೆ ಹೀಗೆ ಮಾಡಲು ಕುಮ್ಮಕ್ಕು ನೀಡುತ್ತಾ ಬಂದಿರುವುದು ಎಷ್ಟೋ ವರ್ಷಗಳಿಂದ > ನಡೆದು ಬಂದ ಪದ್ಧತಿ. ಭಯೋತ್ಪಾದಕರು ಇತ್ತೀಚೆಗೆ ಬಂದದ್ದು. > > ಪೊಲೀಸರು ಈ ಭಯೋತ್ಪಾದನೆಯ ಮಾರ್ಗವನ್ನು ಎಷ್ಟೋ ಕಾಲದಿಂದ ಅನುಸರಿಸುತ್ತಾ ಬಂದಿದ್ದಾರೆ. > ಮೊನ್ನೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಏನು ನಡೆಯಿತು ಅದು ಮೊದಲೂ ಅಲ್ಲ, ಕೊನೆಯೂ ಅಲ್ಲ. > ಅಪರಾಧ ಪತ್ತೆಯ ವಿಷಯದಲ್ಲೂ ಅಷ್ಟೇ. > > ನೂರು ಜನರನ್ನು ಸಂಶಯದಿಂದ ಬಂಧಿಸಿ ಬಡಿದು ಒಬ್ಬ ಕಳ್ಳನನ್ನೋ, ಕೊಲೆಗಾರನನ್ನೋ ಹಿಡಿಯುವುದು > ಭಾರತೀಯ ಪೊಲೀಸರು ಮೊದಲಿಂದಲೂ ಅನುಸರಿಸಿಕೊಂಡು ಬಂದ ತನಿಖಾ ವಿಧಾನ. ಇದೆಲ್ಲ ಹೀಗೆ ಮಾತ್ರ > ನಡೆಯಲು ಸಾಧ್ಯ, ಇದಕ್ಕೆ ಪರ್ಯಾಯವೇ ಇಲ್ಲ ಎನ್ನುವಂತೆ ಇಡೀ ಸಮಾಜ ನಡೆದುಕೊಂಡದ್ದರ ಪರಿಣಾಮ > ಇರಬೇಕು ಭಾರತದ ಪೊಲೀಸ್ ವ್ಯವಸ್ಥೆ ಬರಬರುತ್ತಾ ಪ್ರಪಂಚದ ಅತ್ಯಂತ ಅನಾಗರಿಕ, ಕ್ರೂರ, > ಬರ್ಬರ, ಹಿಂಸಾ ವಿನೋದಿ ವ್ಯವಸ್ಥೆಯಾಗಿ ಮಾರ್ಪಟ್ಟಿರುವುದು. > > ಸಂವಿಧಾನವು ಪೊಲೀಸ್ ವ್ಯವಸ್ಥೆಯನ್ನು ಜನರಿಂದ ಚುನಾಯಿತವಾದ ಒಂದು ವ್ಯವಸ್ಥೆಯ > ನಿಯಂತ್ರಣದಲ್ಲಿ ಇರಿಸಿರುವುದು ಹೀಗೆಲ್ಲಾ ಆಗಬಾರದು ಎಂದು. ದುರಂತ ಏನು ಎಂದರೆ ಪೊಲೀಸ್ > ವ್ಯವಸ್ಥೆಯನ್ನು ನಿಯಂತ್ರಿಸಬೇಕಾದ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ಈ > ವ್ಯವಸ್ಥೆಗೆ ಸಂಪೂರ್ಣವಾಗಿ ಮಾರಿಕೊಂಡಿರುವುದು ಅಥವಾ ಅದಕ್ಕೆ ಸಂಪೂರ್ಣ ಶರಣಾಗಿರುವುದು. > > ಪೊಲೀಸ್ ವ್ಯವಸ್ಥೆಯ ಎದುರು ಎದೆಯುಬ್ಬಿಸಿ ಹಾಗೆ ಯಾಕೆ? ಹೀಗೆ ಯಾಕೆ ಆಗಕೂಡದು? ಅಂತ ಕೇಳಿ > ವ್ಯವಸ್ಥೆಯನ್ನು ಎಳ್ಳಿನ ಏಳು ಭಾಗವಾದರೂ ಸುಧಾರಿಸಿದ ಒಬ್ಬ ಗೃಹಮಂತ್ರಿಯನ್ನು ಈ ದೇಶದ ಯಾವ > ರಾಜ್ಯವೂ ನೋಡಿಲ್ಲ. ಕೇರಳದ ಈಗಿನ ಮುಖ್ಯಮಂತ್ರಿ ಪೊಲೀಸರಿಂದ ಸ್ವತಃ ಚರ್ಮ ಸುಲಿಸಿಕೊಂಡ > ಅನುಭವ ಹೊತ್ತವರು. ರಾಜನ್ ಪ್ರಕರಣದ ಕಳಂಕ ಹೊತ್ತ ಕೇರಳ ಪೊಲೀಸರ ಒಂದೇ ಒಂದು ರೋಮಕ್ಕಾದರೂ > ಅವರ ಕಾಲದಲ್ಲಿ ಸ್ವಲ್ಪ ಮಾನವೀಯತೆಯ ಸಿಂಚನವಾದರೆ ಅದು ಅವರು ದೇಶಕ್ಕೆ ನೀಡಬಹುದಾದ > ಚಾರಿತ್ರಿಕ ಕೊಡುಗೆಯಾಗಬಹುದು. > > ಈ ಹೇಳಿಕೆಗಳೆಲ್ಲ ಅತಿಯಾಯಿತು ಅಂತ ಅನ್ನಿಸುವವರು ಪೊಲೀಸ್ ಸುಧಾರಣಾ ಆಯೋಗದ ವರದಿಗಳ > ಮೇಲೊಮ್ಮೆ ಕಣ್ಣಾಡಿಸಬೇಕು. ಅದು ಕಷ್ಟವಾದರೆ ಇಂಟರ್ನೆಟ್‌ನಲ್ಲಿ ಯೂಟ್ಯೂಬ್‌ಗೆ ಹೋಗಿ > ‘ಇಂಡಿಯನ್ ಪೊಲೀಸ್’ ಎಂದು ಹುಡುಕಿದರೆ 52.6 ಲಕ್ಷ ವಿಡಿಯೊ ತುಣುಕುಗಳು ಸಿಗುತ್ತವೆ. > ಅವುಗಳಲ್ಲಿ ಕೆಲವನ್ನು ನೋಡಿ. > > ಇವ್ಯಾವುವೂ ನಿಮಗೆ ನಂಬಿಕೆ ಹುಟ್ಟಿಸದಿದ್ದರೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ > ಹೆಸರು ಗಳಿಸಿ ಮಧ್ಯಮ ಹಂತದ ಹುದ್ದೆಗೆ ಬಂದು ನಿವೃತ್ತರಾದ ಒಬ್ಬ ವ್ಯಕ್ತಿ ಬರೆದ ಆತ್ಮ > ಚರಿತ್ರೆ ಇದೆ. ಅದನ್ನು ಓದಿ. > > ಮುಂದೆ ಕನ್ನಡ ನಟನಾಗಿ ಪ್ರಸಿದ್ಧರಾದ ಒಬ್ಬ ವ್ಯಕ್ತಿಯನ್ನು ಪ್ರೇಮ ಪ್ರಕರಣವೊಂದಕ್ಕೆ > ಸಂಬಂಧಿಸಿದಂತೆ ಠಾಣೆಗೆ ಎಳೆದು ತಂದು ‘ಇನ್ಯಾರದ್ದೋ ಮೇಲಿನ ಕೋಪಕ್ಕೆ’ ಆ ಹುಡುಗನ ಮೇಲೆ > ‘ಅವನಿಗೆ ಎಲ್ಲಿಂದ ಉಸಿರಾಡಬೇಕು, ಎಲ್ಲಿಂದ ಊಟ ಮಾಡಬೇಕು ಎಂದು ಗೊತ್ತಾಗದೆ ಮಿಲಮಿಲನೆ > ಒದ್ದಾಡುವಂತೆ’ ಮುಖಮೂತಿ ಜಜ್ಜಿದೆವು ಎಂದು ಅದೇನೋ ಮನರಂಜನೆ ಎಂಬಂತೆ ಅವರು ಬರೆಯುತ್ತಾರೆ. > > ಇನ್ನೊಮ್ಮೆ ಒಬ್ಬನಿಗೆ ಬಡಿದೂ ಬಡಿದೂ ಸುಸ್ತಾಗಿ ಆತನಿಂದ ಏನೂ ವಿವರ ದೊರಕದೆ ಹತಾಶರಾದ > ಒಬ್ಬ ಹಿರಿಯ ಪೊಲೀಸ್ ವ್ಯಕ್ತಿ ಆತನ ಜನನಾಂಗವನ್ನು ಚುಚ್ಚಿ ‘ಇದೇನು’ ಅಂತ ಕೇಳುತ್ತಾರೆ- > ‘ಅದಕ್ಕೂ ಆತ ನನಗೆ ಗೊತ್ತಿಲ್ಲ’ ಅಂತ ಉತ್ತರಿಸುತ್ತಾನೆ ಎಂದು ಇದ್ಯಾವುದೋ ಜೋಕ್ ಎಂಬಂತೆ > ಘಟನೆಯೊಂದನ್ನು ವಿವರಿಸುತ್ತಾರೆ. > > ಇನ್ನೊಂದು ಪ್ರಕರಣದಲ್ಲಿ ಮೂವರು ಶಂಕಿತರನ್ನು ಬಂಧಿಸಿ ಅನ್ನ ನೀರು ಕೊಡದೆ ಮೂಳೆ ಮುರಿಯಲಾ > ಯಿತು. ಯಾವ ವಿವರಗಳೂ ಸಿಕ್ಕದಾಗ ಇನ್ನೇನು ಮಾಡುವುದು ಎಂದು ‘ಡಿಸಿಪಿ’ಯನ್ನು ಕೇಳಿದರೆ > ಇನ್ನೂ ಸ್ವಲ್ಪ ಬಡಿಯಿರಿ ಎನ್ನುವ ಆದೇಶ ಬಂತು... ಮತ್ತೆ ನೋಡಿದರೆ ಆ ಹುಡುಗರೆಲ್ಲ ಏನೊಂದೂ > ತಿಳಿಯದ ಅಮಾಯಕರು. > > ಈ ಮೂರೂ ಪ್ರಕರಣಗಳೂ ಪೊಲೀಸ್ ಠಾಣೆಗಳಲ್ಲಿ ನಿತ್ಯ ನಡೆಯುವ ಅನಗತ್ಯ ಹಿಂಸೆಯ ಪ್ರಾತಿನಿಧಿಕ > ಉದಾಹರಣೆಗಳು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ ಎನ್ನುವ ಭಯಾನಕ ಒಳನೋಟ ನೀಡುವ ಸಂಶಯಾತೀತ > ವಿವರಗಳು. > > ಓದಲೂ ನಾಚಿಕೆಯಾಗುವ ಇಂತಹ ಚಿತ್ರಣಗಳಿರುವ ಈ ಪುಸ್ತಕಗಳಲ್ಲಿ ಒಂದಕ್ಕೆ ಮುನ್ನುಡಿ > ಬರೆದದ್ದು ಮಾಜಿ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವರು! ಅವರು ಬರೆಯುತ್ತಾರೆ: ಇಲ್ಲಿನ > ಲೇಖನಗಳಲ್ಲಿ ಶೃಂಗಾರ, ಹಾಸ್ಯ, ವೀರ... ಎಲ್ಲ ರಸಗಳೂ ಇವೆ! ಪುಸ್ತಕಕ್ಕೆ ಆಶಯ > ನುಡಿಗಳನ್ನು ಬರೆದದ್ದು ಸಿನಿಮಾ ಮಾಡುವ ಒಬ್ಬ ಸಾಹಿತಿ. ಅವರು ಬರೆಯುತ್ತಾರೆ: ವೈನೋದಿಕ > ನಿರೂಪಣೆಯಿಂದ ಇಲ್ಲಿನ ಲೇಖನಗಳು ಆಪ್ತವಾಗುತ್ತವೆ! > > ಇವರೆಲ್ಲ ಒಳ್ಳೆಯವರು. ಇಂತಹ ಒಳ್ಳೆಯವರು ಕೂಡಾ ಪೊಲೀಸ್ ವ್ಯವಸ್ಥೆಯ ಅತ್ಯಂತ ಅನಾಗರಿಕ > ಮತ್ತು ಅಪಾಯಕಾರಿ ಮುಖವನ್ನು ಎಷ್ಟೊಂದು ನಿರಾಳವಾಗಿ ಸ್ವೀಕರಿಸುತ್ತಾರೆ ಎನ್ನುವುದಕ್ಕೆ > ಇದೊಂದು ಉದಾಹರಣೆ. > > ಹೋದ ವಾರ ಮಹಾದಾಯಿ ಗಲಭೆ ನಿಯಂತ್ರಿಸುವ ನೆಪದಲ್ಲಿ ಕರ್ನಾಟಕ ಪೊಲೀಸರು ಮಹಿಳೆಯರು, ಮುದು > ಕರು, ಮಕ್ಕಳು, ಗರ್ಭಿಣಿಯರಿಗೆಲ್ಲ ಮನಸೋ ಇಚ್ಛೆ ಬಡಿದು ಹಿಂಸಾರತಿಯಲ್ಲಿ ಮಿಂದೆದ್ದನ್ನು > ಖಂಡಿಸುತ್ತಿರುವ ಕನ್ನಡ ಮಾಧ್ಯಮಗಳು ಕೆಲ ಸಮಯದ ಹಿಂದೆ ಮಹಾರಾಷ್ಟ್ರ-ಕರ್ನಾಟಕ ಗಡಿ > ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯ ಸಂದರ್ಭ ಪೊಲೀಸರು ಇದೇ ರೀತಿ ವರ್ತಿಸಿದಾಗ > ‘ಪುಂಡರಿಗೆ ಸರಿಯಾದ ಪಾಠ ಕಲಿಸಿದರು’ ಎಂಬಂತೆ ಹಾಡಿಹೊಗಳಿದ್ದುಂಟು. > > ಒಟ್ಟಿನಲ್ಲಿ ಹೇಳುವುದಿಷ್ಟೇ. ಈ ರೀತಿ ವ್ಯವಸ್ಥೆಯೊಳಗಿನ ಹಿಂಸೆಯನ್ನು ಎಲ್ಲರೂ ಸಹಜ > ಎ೦ಬ೦ತೆ ಸ್ವೀಕರಿಸಿರುವಾಗ ಮತ್ತು ಈ ವ್ಯವಸ್ಥೆ ಹೀಗೆ ಮಾತ್ರ ಇರಲು ಸಾಧ್ಯ ಎಂದು > ಒಪ್ಪಿಕೊಂಡಿರುವಾಗ ಪೊಲೀಸರಿಂದ ಅಮಾನವೀಯ ಹಲ್ಲೆ ಎಂದು ಆಗೊಮ್ಮೆ ಈಗೊಮ್ಮೆ ಗೊಣಗುವುದು > ವ್ಯರ್ಥ ಮತ್ತು ಅರ್ಥಹೀನ. ಹೀಗಾಗುವಲ್ಲಿ ಎಲ್ಲರ ಪಾಲೂ ಇದೆ. > > ಭಾರತದ ಪೊಲೀಸರ ಕ್ರೌರ್ಯಕ್ಕೆ ಸಾವಿರ ಸಮರ್ಥನೆಗಳಿರಬಹುದು. ಪ್ರಶ್ನಿಸಬೇಕಾದವರೆಲ್ಲಾ > ಅದನ್ನು ಒಪ್ಪಿಕೊಂಡಿರಬಹುದು. ಆದರೆ ಎಲ್ಲರೂ ಗಮನಿಸಬೇಕಾದ ಒಂದು ವಿಚಾರ ಇದೆ. ಹಿಂಸೆಯನ್ನೇ > ಆಶ್ರಯಿಸಿ ಕಟ್ಟಿರುವ ಪೊಲೀಸ್ ವ್ಯವಸ್ಥೆಯ ವಿರುದ್ಧ ಜನರ ಆಕ್ರೋಶ ದಿನದಿನಕ್ಕೂ > ಮಡುಗಟ್ಟುತ್ತಿದೆ. > > ಇದು ಗುಪ್ತ ಕ್ಯಾಮೆರಾಗಳ ಮತ್ತು ಇಂಟರ್ನೆಟ್‌ನ ಕಾಲ. ಈಗ ಪೊಲೀಸರು ಮಾಡುವುದನ್ನೆಲ್ಲಾ ಜನ > ನೋಡುತ್ತಾರೆ, ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾರೆ. ಬೆಂಗಳೂರು ನಗರದ ಪೊಲೀಸ್ > ಮುಖ್ಯಸ್ಥರೊಬ್ಬರು ಕೆಲಕಾಲದ ಹಿಂದೆ ‘ಪೊಲೀಸರ ಹೆಸರು ಹೇಳಿ ಮಕ್ಕಳಿಗೆ ಹೆದರಿಸಬೇಡಿ, > ಮಕ್ಕಳು ಪೊಲೀಸರ ಬಗ್ಗೆ ತಪ್ಪು ಅಭಿಪ್ರಾಯ ಹೊಂದುತ್ತಾರೆ’ ಅಂತ ನಗರದಾದ್ಯಂತ ಬೋರ್ಡು > ಹಾಕಿಸಿದ್ದರು. ಮಕ್ಕಳಿಗೆ ಹೆತ್ತವರು ಪೊಲೀಸರ ಕತೆ ಹೇಳಬೇಕಾಗಿಲ್ಲ. > > ಪೊಲೀಸರ ಸ್ವಭಾವ, ಸಂಸ್ಕಾರ ಮತ್ತು ಭಾಷೆ ಹೇಗಿರುತ್ತವೆ ಎನ್ನುವುದನ್ನು ಅವರೆಲ್ಲಾ > ಇಂಟರ್ನೆಟ್ ಮತ್ತು ಟಿವಿಗಳಲ್ಲಿ ನೋಡುತ್ತಿದ್ದಾರೆ. ಹಾಗೆ ನೋಡುತ್ತಾ ನಡೆದಾಡುವ ಜೀವಿಗಳ > ಪೈಕಿ ಮನುಷ್ಯರು, ಮೃಗಗಳು ಮತ್ತು ಪೊಲೀಸರು ಎಂಬ ಮೂರು ಪ್ರಬೇಧಗಳಿವೆ ಎಂಬ ನಿರ್ಧಾರಕ್ಕೆ > ಮಕ್ಕಳು ಎಂದೋ ಬಂದಿರುತ್ತಾರೆ. ಆ ಮಕ್ಕಳೆಲ್ಲಾ ಬೆಳೆಯುತ್ತಿದ್ದಾರೆ. > > ಪೊಲೀಸರ ವಿರುದ್ಧ ಜನರ ಸಹನೆ ಎಂದೋ ಕಟ್ಟೆಯೊಡೆದು ಹೋಗುತ್ತಿತ್ತು. ಆದರೆ ಈ ಮಧ್ಯೆ > ಕಾಣಿಸಿಕೊಂಡ ನಕ್ಸಲರ ಮತ್ತು ಭಯೋತ್ಪಾದಕರ ಸಮಸ್ಯೆಯಿಂದಾಗಿ ಪೊಲೀಸರು > ಮಾಡುತ್ತಿರುವುದನ್ನೆಲ್ಲಾ ಸಹಿಸಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಕೂತರೆ ನಿಂತರೆ > ಬಂದ್‌ಗಳನ್ನ ಜನರ ಮೇಲೆ ಹೇರಿ ಸಾರ್ವಜನಿಕ ಆಸ್ತಿಗಳನ್ನು ಸುಡುವ ಸಂಘಟನೆಗಳ ಹಾವಳಿಯಿಂದಾಗಿ > ಪೊಲೀಸರನ್ನು ಜನ ಸಹಿಸಿಕೊಳ್ಳಬೇಕಾಯಿತು. > > ನಮ್ಮ ನ್ಯಾಯಾಂಗ ವ್ಯವಸ್ಥೆಯ ದೋಷಗಳಿಂದಾಗಿ ಜನ ಪೊಲೀಸರ ಮಧ್ಯಯುಗದ ಪ್ರವೃತ್ತಿಗಳನ್ನು > ಒಪ್ಪಿಕೊಳ್ಳಬೇಕಾಯಿತು. ಈಗ ಇವೆಲ್ಲದರ ಹೊರತಾಗಿಯೂ ಜನರ ಸಹನೆ ಮೀರುತ್ತಿದೆ ಎನ್ನುವ > ಸೂಚನೆಗಳು ಕಾಣಿಸಿಕೊಳ್ಳುತ್ತಿವೆ. > > ಗುಜರಾತಿನ ಮೀಸಲಾತಿ ಚಳವಳಿಯ ಹಾರ್ದಿಕ್ ಪಟೇಲ್ ಎಂಬ ಯುವಕ ‘ಪೊಲೀಸರನ್ನು ಕೊಲ್ಲಿರಿ’ > ಎಂದು ಅಪಾಯಕಾರಿ ಕರೆ ನೀಡಿದ. ಬೆಂಗಳೂರಿನ ಬೀದಿಗಳಲ್ಲಿ ಜನ ಪೊಲೀಸರ ಮೇಲೆ ಕೈಮಾಡುತ್ತಿರುವ > ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ. > > ಪೊಲೀಸರ ತಂಟೆಗೆ ಬಂದ ಸಾಮಾನ್ಯ ಮನುಷ್ಯರನ್ನು ಜೀವನ ಪೂರ್ತಿ ಹಾಸಿಗೆ ಹಿಡಿಯುವಂತೆ > ಸಾಯಹೊಡೆಯಲಾಗುತ್ತದೆ ಎನ್ನುವ ಸತ್ಯ ಕಣ್ಣಮುಂದಿದ್ದರೂ ಜನ ಪೊಲೀಸರ ಮೇಲೆರಗುತ್ತಿದ್ದಾರೆ. > ಇತ್ತೀಚೆಗೆ ಬೀದಿಗಿಳಿದ ಗಾರ್ಮೆಂಟ್ ನೌಕರರು ಏಕಾಏಕಿ ಪೊಲೀಸ್ ಸ್ಟೇಷನ್‌ಗೆ ನುಗ್ಗಿದರು. > ಅದರ ಘೋರ ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿದ್ದರೂ ಹಾಗೆ ಮಾಡಿದರು. > > ಹೊಸದಾಗಿ ಆಯ್ಕೆಯಾದ ಪೊಲೀಸ್ ಮಂದಿಗೆ ಯಾವ ರೀತಿಯ ತರಬೇತಿ ನೀಡುತ್ತಾರೋ ಗೊತ್ತಿಲ್ಲ. > ಬಹುಶಃ ಚಿತ್ರಹಿಂಸೆ ನೀಡುವುದು ಹೇಗೆ ಎನ್ನುವುದನ್ನು ಅವರಿಗೆ ಕಲಿಸುತ್ತಿರಬಹುದು. > ಅದೇನಾದರೂ ಆಗಲಿ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ನಡೆದ ಚೌರಿಚೌರ ಘಟನೆಯ ಬಗ್ಗೆ > ತರಬೇತಿಯಲ್ಲಿ ಅವರಿಗೆ ಸ್ವಲ್ಪ ವಿಸ್ತೃತವಾಗಿ ಹೇಳುವುದು ಒಳ್ಳೆಯದು. ಅದು ಸ್ವಾತಂತ್ರ್ಯ > ಹೋರಾಟಗಾರರು ಪೊಲೀಸರ ವಿರುದ್ಧ ತಿರುಗಿಬಿದ್ದ ಕತೆ. > > ಅದು ನಡೆದದ್ದು 1922ರ ಫೆಬ್ರುವರಿ 4 ರಂದು. 1919ರ ಜಲಿಯನ್ ವಾಲಾ ಬಾಗ್ ಆದಿಯಾಗಿ > ಬ್ರಿಟಿಷ್ ಪೊಲೀಸರ ಮತ್ತು ಸೈನ್ಯದ ದೌರ್ಜನ್ಯ ಮೇರೆ ಮೀರಿ ಜನರಲ್ಲಿ ಪೊಲೀಸರ ಕುರಿತಾಗಿ > ತೀವ್ರವಾದ ಅಸಹನೆ ಮತ್ತು ಕ್ರೋಧ ಮನೆಮಾಡಿತ್ತು. ಈ ಮಧ್ಯೆ ಚೌರಿಚೌರ ಎಂಬಲ್ಲಿ ಪೊಲೀಸರು > ಸ್ವಾತಂತ್ರ್ಯ ಹೋರಾಟಗಾರರ ಮೇಲೆರಗಿದಾಗ ಪರಿಸ್ಥಿತಿ ಕೈಮೀರಿ ಜನ ಅಲ್ಲಿನ ಪೊಲೀಸ್ > ಠಾಣೆಯನ್ನು ಸುಡುತ್ತಾರೆ; ಪೊಲೀಸರನ್ನು ಕ್ರೂರವಾಗಿ ದಹಿಸುತ್ತಾರೆ. > > ಸ್ವಾತಂತ್ರ್ಯಾನ೦ತರದ 69 ವರ್ಷಗಳಲ್ಲಿ ಜನ ಅವಡು ಕಚ್ಚಿಕೊಂಡು ತಮ್ಮದೇ ದೇಶದ ಪೊಲೀಸರ > ಪಾಷಾಣ ಪ್ರವೃತ್ತಿಗಳನ್ನೆಲ್ಲಾ ಸಹಿಸಿಕೊಂಡಿದ್ದಾರೆ. ಈ ಸಹನೆ ಮುಗಿಯುವ ಮುನ್ಸೂಚನೆಗಳು > ನಮ್ಮ ಮುಂದಿವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ನೂರಾರು ಚೌರಿಚೌರಗಳನ್ನು ದೇಶ > ಕಾಣಬೇಕಾದೀತು. ಪೊಲೀಸರು ಮನುಷ್ಯರಾಗಬೇಕಾಗಿರುವುದು ಜನರ ಹಿತದೃಷ್ಟಿಯಿಂದ ಮಾತ್ರವಲ್ಲ, > ಸ್ವತಃ ಪೊಲೀಸರ ಹೆಂಡತಿ ಮಕ್ಕಳ ಹಿತದೃಷ್ಟಿಯಿಂದ ಕೂಡಾ > > (ಮಕ್ಕಳಿಗೆ ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ ಎಂಬ ನಮ್ಮ ನಂಬಿಕೆಯೂ ಇದೆ ಹಿನ್ನೆಲೆಯದ್ದೇನೊ) > [email protected] > ಸಿದ್ದರಾಮಪ್ಪ. ಎಸ್.ಎಂ > ಸಶಿ ಕಲಾ > ಸರ್ಕಾರಿ ಪ್ರೌಢ ಶಾಲೆ > ಗಂಜಿಗೆರೆ. ಕೆ ಆರ್ ಪೇಟೆ ತಾ|| > ಮಂಡ್ಯ ಜಿಲ್ಲೆ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAJCvfyVAvAYBHqkx6JVXdPABZnc7gyjUT7t61uzXPe5F3Fb_ww%40mail.gmail.com > <https://groups.google.com/d/msgid/socialsciencestf/CAJCvfyVAvAYBHqkx6JVXdPABZnc7gyjUT7t61uzXPe5F3Fb_ww%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- LOKESH S GPUC (HS), SHIVAPURA, MADDUR TQ, MANDYA DIST. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAJ51JmGsA0W1L2HFK7eGsdxX%3D-sO%2BufX7R5obwJ6yf%2BCXYXscQ%40mail.gmail.com. For more options, visit https://groups.google.com/d/optout.
