ಪೊಲೀಸ್ ರ ಬಗ್ಗೆ ಯಾವ ಒಬ್ಬ ನರಪಿಳ್ಳಯು ಅನುಕಂಪ ತೋರಿಸಬಾರದು

ಅತೀ ಹೆಚ್ಚು ವ್ಯವಸ್ಥೆಯನ್ನು ಹಾಳುಮಾಡುತ್ತಿರುವ ಮೃಗಗಳು
On 02-Aug-2016 7:51 PM, "Lokesh Singrappa" <[email protected]> wrote:

ತುಂಬಾ ಗಂಭೀರವಾದ ವಿಷಯ. ಮುಂದಾದರೂ ಈ ಪರಿಸ್ಥಿತಿ ಸುಧಾರಿಸಿತೇ?

2016-08-01 23:59 GMT+05:30 Siddaramappa s m Sri <[email protected]>:

> ಅನುರಣನ
>
> ಪೊಲೀಸರನ್ನು ಮನುಷ್ಯರನ್ನಾಗಿಸುವ ಕಷ್ಟಗಳು
>
> 1 Aug, 2016ನಾರಾಯಣ
> ‘ಪೊಲೀಸರಿಂದ ಅಮಾನವೀಯ ಹಲ್ಲೆ’ ಎಂಬುದಾಗಿ ನಾವು ಮತ್ತೆ ಮತ್ತೆ ಮಾಧ್ಯಮಗಳಲ್ಲಿ ಓದುವ
> ಶೀರ್ಷಿಕೆಯೇ ವಿಚಿತ್ರವಾಗಿದೆ. ಯಾಕೆಂದರೆ ಹಲ್ಲೆಯಲ್ಲಿ ಮಾನವೀಯ ಹಲ್ಲೆ, ಅಮಾನವೀಯ ಹಲ್ಲೆ
> ಎಂದು ಎರಡು ವಿಭಾಗಗಳಿಲ್ಲ. ಹಲ್ಲೆ ಹಲ್ಲೆಯೇ.
>
> ಸಮಸ್ಯೆ ಇರುವುದು ಇಲ್ಲೆ. ಎಲ್ಲಿ ಎಂದರೆ ಪೊಲೀಸರು ಹಲ್ಲೆ ನಡೆಸಬಹುದು, ಆದರೆ ಅದು
> ಮಾನವೀಯವಾಗಿರಬೇಕು ಎಂದು ಬಯಸುವಲ್ಲಿ. ಒಮ್ಮೆ ಹಿಂಸಿಸುವ ಅಧಿಕಾರ ಪಡೆದ ಯಾವ ವ್ಯಕ್ತಿಯೂ
> ಮಾನವೀಯವಾಗಿ ಉಳಿಯಲು ಸಾಧ್ಯವೇ ಇಲ್ಲ.
>
> ಇಷ್ಟು ಹೇಳಿದಾಕ್ಷಣ ಪೊಲೀಸರು ‘ಪ್ರಾಕ್ಟಿಕಲ್ ಆಗಿರಬೇಕಲ್ಲ?’ ‘ಬಲಪ್ರಯೋಗಿಸದೆ ಅಹಿಂಸೆಯ
> ಮಂತ್ರ ಪಠಿಸುತ್ತಿದ್ದರೆ ಸಮಾಜಘಾತಕ ಶಕ್ತಿಗಳನ್ನು ನಿಯಂತ್ರಿಸುವುದು ಹೇಗೆ?’ ಎಂಬ
> ಮರುಪ್ರಶ್ನೆಗಳು ಬರುತ್ತವೆ.
>
> ಬಲ ಪ್ರಯೋಗ ಮಾಡದೆ ಪೊಲೀಸ್ ಕೆಲಸ ಸಾಧ್ಯವಿಲ್ಲ ಎನ್ನುವ ಬಾಲರಾಮಾಯಣ ಮಟ್ಟದ ಜ್ಞಾನ ಪೊಲೀಸರ
> ಹಿಂಸೆಯನ್ನು ಪ್ರಶ್ನಿಸುವ ಎಲ್ಲರಿಗೂ ತಿಳಿದಿರುತ್ತದೆ. ಅದನ್ನು ಯಾರೂ ಯಾರಿಗೂ ಉಪದೇಶಿಸುವ
> ಅಗತ್ಯ ಇಲ್ಲ. ಬಲ ಪ್ರಯೋಗ ಬೇರೆ, ಹಿಂಸೆ ಬೇರೆ.
>
> ಭಾರತದಲ್ಲಿ ಪೊಲೀಸರು ತಮ್ಮ ಮೂಲಭೂತ ಜವಾಬ್ದಾರಿಗಳನ್ನು ಅಂದರೆ ಕಾನೂನು-ವ್ಯವಸ್ಥೆಯ
> ರಕ್ಷಣೆ ಮತ್ತು ಅಪರಾಧ ತನಿಖೆಯನ್ನು ನಡೆಸುವುದು ಹಿಂಸೆಯ ಮೂಲಕ ಮತ್ತು ಭಯವನ್ನು ಸೃಷ್ಟಿಸುವ
> ಮೂಲಕ. ಉದ್ರಿಕ್ತ ಗುಂಪನ್ನು ಚದುರಿಸಿ, ಹಿಂಸೆಗಿಳಿದವರನ್ನು ಗುರುತಿಸಿ ಕಾನೂನು ಪ್ರಕಾರ
> ಕ್ರಮ ಕೈಗೊಳ್ಳಬೇಕಾದರೆ ಅದಕ್ಕೆ ಬುದ್ಧಿ, ವೈಜ್ಞಾನಿಕ ತರಬೇತಿ, ಶಿಸ್ತು ಎಲ್ಲಾ
> ಬೇಕಾಗುತ್ತದೆ.
>
> ಅದ್ಯಾವುದೂ ಇಲ್ಲದೆ ನೇಮಕಗೊಂಡ ಕೆಳಹಂತದ ಸಿಬ್ಬಂದಿಯನ್ನು ಬಳಸಿ ಪರಿಸ್ಥಿತಿಯನ್ನು
> ನಿಯಂತ್ರಣಕ್ಕೆ ತರಲು ಇರುವ ಸುಲಭ ಮಾರ್ಗ ಎಂದರೆ ಜನರಲ್ಲಿ ಭೀತಿ ಹುಟ್ಟಿಸುವುದು. ಭೀತಿ
> ಹುಟ್ಟಿಸಬೇಕಾದರೆ ಹಿಂಸೆ ನಡೆಸಬೇಕು.
>
> ಮನೆ ಬಾಗಿಲು ಮುರಿದು ಒಳನುಗ್ಗಬೇಕು, ಕಂಡಕಂಡವರಿಗೆ ಬಡಿಯಬೇಕು, ರಕ್ತ ಹರಿಸಬೇಕು...
> ಲಾಠಿಚಾರ್ಜು ಮಾಡುವುದು ಜನರನ್ನು ಓಡಿಸುವುದಕ್ಕೆ. ಆದರೆ ಪ್ರತೀ ಲಾಠಿಚಾರ್ಜಿನ
> ಸಂದರ್ಭದಲ್ಲೂ ನಾವು ನೋಡುವುದು ಓಡುತ್ತಿರುವವರನ್ನು ನಿಲ್ಲಿಸಿ ಬಡಿಯುವುದನ್ನು.
> ಬಿದ್ದವರನ್ನು ಸುತ್ತುವರಿದು ಮರ್ದಿಸುವುದನ್ನು.
>
> ಮೇಲಣ ಹುದ್ದೆಗಳಲ್ಲಿರುವವರು ಸಾರ್ವಜನಿಕವಾಗಿ ಇವನ್ನೆಲ್ಲ ಖಂಡಿಸುತ್ತಾ ಒಳಗೊಳಗೇ ತಮ್ಮ
> ಕೆಳಗಿನ ಸಿಬ್ಬಂದಿಗೆ ಹೀಗೆ ಮಾಡಲು ಕುಮ್ಮಕ್ಕು ನೀಡುತ್ತಾ ಬಂದಿರುವುದು ಎಷ್ಟೋ ವರ್ಷಗಳಿಂದ
> ನಡೆದು ಬಂದ ಪದ್ಧತಿ. ಭಯೋತ್ಪಾದಕರು ಇತ್ತೀಚೆಗೆ ಬಂದದ್ದು.
>
> ಪೊಲೀಸರು ಈ ಭಯೋತ್ಪಾದನೆಯ ಮಾರ್ಗವನ್ನು ಎಷ್ಟೋ ಕಾಲದಿಂದ ಅನುಸರಿಸುತ್ತಾ ಬಂದಿದ್ದಾರೆ.
> ಮೊನ್ನೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಏನು ನಡೆಯಿತು ಅದು ಮೊದಲೂ ಅಲ್ಲ, ಕೊನೆಯೂ ಅಲ್ಲ.
> ಅಪರಾಧ ಪತ್ತೆಯ ವಿಷಯದಲ್ಲೂ ಅಷ್ಟೇ.
>
> ನೂರು ಜನರನ್ನು ಸಂಶಯದಿಂದ ಬಂಧಿಸಿ ಬಡಿದು ಒಬ್ಬ ಕಳ್ಳನನ್ನೋ, ಕೊಲೆಗಾರನನ್ನೋ ಹಿಡಿಯುವುದು
> ಭಾರತೀಯ ಪೊಲೀಸರು ಮೊದಲಿಂದಲೂ ಅನುಸರಿಸಿಕೊಂಡು ಬಂದ ತನಿಖಾ ವಿಧಾನ.  ಇದೆಲ್ಲ ಹೀಗೆ ಮಾತ್ರ
> ನಡೆಯಲು ಸಾಧ್ಯ, ಇದಕ್ಕೆ ಪರ್ಯಾಯವೇ  ಇಲ್ಲ ಎನ್ನುವಂತೆ ಇಡೀ ಸಮಾಜ ನಡೆದುಕೊಂಡದ್ದರ ಪರಿಣಾಮ
> ಇರಬೇಕು ಭಾರತದ ಪೊಲೀಸ್ ವ್ಯವಸ್ಥೆ ಬರಬರುತ್ತಾ ಪ್ರಪಂಚದ ಅತ್ಯಂತ ಅನಾಗರಿಕ, ಕ್ರೂರ,
> ಬರ್ಬರ, ಹಿಂಸಾ ವಿನೋದಿ ವ್ಯವಸ್ಥೆಯಾಗಿ ಮಾರ್ಪಟ್ಟಿರುವುದು.
>
> ಸಂವಿಧಾನವು ಪೊಲೀಸ್ ವ್ಯವಸ್ಥೆಯನ್ನು ಜನರಿಂದ ಚುನಾಯಿತವಾದ ಒಂದು ವ್ಯವಸ್ಥೆಯ
> ನಿಯಂತ್ರಣದಲ್ಲಿ ಇರಿಸಿರುವುದು ಹೀಗೆಲ್ಲಾ ಆಗಬಾರದು ಎಂದು. ದುರಂತ ಏನು ಎಂದರೆ ಪೊಲೀಸ್
> ವ್ಯವಸ್ಥೆಯನ್ನು ನಿಯಂತ್ರಿಸಬೇಕಾದ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ಈ
> ವ್ಯವಸ್ಥೆಗೆ ಸಂಪೂರ್ಣವಾಗಿ ಮಾರಿಕೊಂಡಿರುವುದು ಅಥವಾ ಅದಕ್ಕೆ ಸಂಪೂರ್ಣ ಶರಣಾಗಿರುವುದು.
>
> ಪೊಲೀಸ್ ವ್ಯವಸ್ಥೆಯ ಎದುರು ಎದೆಯುಬ್ಬಿಸಿ ಹಾಗೆ ಯಾಕೆ? ಹೀಗೆ ಯಾಕೆ ಆಗಕೂಡದು? ಅಂತ ಕೇಳಿ
> ವ್ಯವಸ್ಥೆಯನ್ನು ಎಳ್ಳಿನ ಏಳು ಭಾಗವಾದರೂ ಸುಧಾರಿಸಿದ ಒಬ್ಬ ಗೃಹಮಂತ್ರಿಯನ್ನು ಈ ದೇಶದ ಯಾವ
> ರಾಜ್ಯವೂ ನೋಡಿಲ್ಲ. ಕೇರಳದ ಈಗಿನ ಮುಖ್ಯಮಂತ್ರಿ ಪೊಲೀಸರಿಂದ ಸ್ವತಃ ಚರ್ಮ ಸುಲಿಸಿಕೊಂಡ
> ಅನುಭವ ಹೊತ್ತವರು. ರಾಜನ್ ಪ್ರಕರಣದ ಕಳಂಕ ಹೊತ್ತ ಕೇರಳ ಪೊಲೀಸರ ಒಂದೇ ಒಂದು ರೋಮಕ್ಕಾದರೂ
> ಅವರ ಕಾಲದಲ್ಲಿ ಸ್ವಲ್ಪ ಮಾನವೀಯತೆಯ ಸಿಂಚನವಾದರೆ ಅದು ಅವರು ದೇಶಕ್ಕೆ ನೀಡಬಹುದಾದ
> ಚಾರಿತ್ರಿಕ ಕೊಡುಗೆಯಾಗಬಹುದು.
>
> ಈ ಹೇಳಿಕೆಗಳೆಲ್ಲ ಅತಿಯಾಯಿತು ಅಂತ ಅನ್ನಿಸುವವರು  ಪೊಲೀಸ್ ಸುಧಾರಣಾ ಆಯೋಗದ  ವರದಿಗಳ
> ಮೇಲೊಮ್ಮೆ ಕಣ್ಣಾಡಿಸಬೇಕು. ಅದು ಕಷ್ಟವಾದರೆ ಇಂಟರ್ನೆಟ್‌ನಲ್ಲಿ ಯೂಟ್ಯೂಬ್‌ಗೆ ಹೋಗಿ
> ‘ಇಂಡಿಯನ್ ಪೊಲೀಸ್’ ಎಂದು ಹುಡುಕಿದರೆ 52.6 ಲಕ್ಷ ವಿಡಿಯೊ ತುಣುಕುಗಳು ಸಿಗುತ್ತವೆ.
> ಅವುಗಳಲ್ಲಿ ಕೆಲವನ್ನು ನೋಡಿ.
>
> ಇವ್ಯಾವುವೂ ನಿಮಗೆ ನಂಬಿಕೆ ಹುಟ್ಟಿಸದಿದ್ದರೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ
> ಹೆಸರು ಗಳಿಸಿ ಮಧ್ಯಮ ಹಂತದ ಹುದ್ದೆಗೆ ಬಂದು ನಿವೃತ್ತರಾದ ಒಬ್ಬ ವ್ಯಕ್ತಿ ಬರೆದ ಆತ್ಮ
> ಚರಿತ್ರೆ ಇದೆ. ಅದನ್ನು ಓದಿ.
>
> ಮುಂದೆ ಕನ್ನಡ ನಟನಾಗಿ ಪ್ರಸಿದ್ಧರಾದ ಒಬ್ಬ ವ್ಯಕ್ತಿಯನ್ನು ಪ್ರೇಮ ಪ್ರಕರಣವೊಂದಕ್ಕೆ
> ಸಂಬಂಧಿಸಿದಂತೆ ಠಾಣೆಗೆ ಎಳೆದು ತಂದು ‘ಇನ್ಯಾರದ್ದೋ ಮೇಲಿನ ಕೋಪಕ್ಕೆ’ ಆ ಹುಡುಗನ ಮೇಲೆ
> ‘ಅವನಿಗೆ ಎಲ್ಲಿಂದ ಉಸಿರಾಡಬೇಕು, ಎಲ್ಲಿಂದ ಊಟ ಮಾಡಬೇಕು ಎಂದು ಗೊತ್ತಾಗದೆ ಮಿಲಮಿಲನೆ
> ಒದ್ದಾಡುವಂತೆ’ ಮುಖಮೂತಿ ಜಜ್ಜಿದೆವು ಎಂದು ಅದೇನೋ  ಮನರಂಜನೆ ಎಂಬಂತೆ ಅವರು  ಬರೆಯುತ್ತಾರೆ.
>
> ಇನ್ನೊಮ್ಮೆ ಒಬ್ಬನಿಗೆ ಬಡಿದೂ ಬಡಿದೂ ಸುಸ್ತಾಗಿ ಆತನಿಂದ ಏನೂ ವಿವರ ದೊರಕದೆ ಹತಾಶರಾದ
> ಒಬ್ಬ ಹಿರಿಯ ಪೊಲೀಸ್ ವ್ಯಕ್ತಿ ಆತನ ಜನನಾಂಗವನ್ನು ಚುಚ್ಚಿ ‘ಇದೇನು’ ಅಂತ ಕೇಳುತ್ತಾರೆ-
> ‘ಅದಕ್ಕೂ ಆತ ನನಗೆ ಗೊತ್ತಿಲ್ಲ’ ಅಂತ ಉತ್ತರಿಸುತ್ತಾನೆ ಎಂದು   ಇದ್ಯಾವುದೋ ಜೋಕ್ ಎಂಬಂತೆ
> ಘಟನೆಯೊಂದನ್ನು ವಿವರಿಸುತ್ತಾರೆ.
>
> ಇನ್ನೊಂದು ಪ್ರಕರಣದಲ್ಲಿ ಮೂವರು ಶಂಕಿತರನ್ನು ಬಂಧಿಸಿ ಅನ್ನ ನೀರು ಕೊಡದೆ ಮೂಳೆ ಮುರಿಯಲಾ
> ಯಿತು. ಯಾವ ವಿವರಗಳೂ ಸಿಕ್ಕದಾಗ ಇನ್ನೇನು ಮಾಡುವುದು ಎಂದು ‘ಡಿಸಿಪಿ’ಯನ್ನು ಕೇಳಿದರೆ
> ಇನ್ನೂ ಸ್ವಲ್ಪ ಬಡಿಯಿರಿ ಎನ್ನುವ ಆದೇಶ ಬಂತು... ಮತ್ತೆ  ನೋಡಿದರೆ ಆ ಹುಡುಗರೆಲ್ಲ ಏನೊಂದೂ
> ತಿಳಿಯದ ಅಮಾಯಕರು.
>
> ಈ ಮೂರೂ ಪ್ರಕರಣಗಳೂ ಪೊಲೀಸ್ ಠಾಣೆಗಳಲ್ಲಿ ನಿತ್ಯ ನಡೆಯುವ ಅನಗತ್ಯ ಹಿಂಸೆಯ ಪ್ರಾತಿನಿಧಿಕ
> ಉದಾಹರಣೆಗಳು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ ಎನ್ನುವ ಭಯಾನಕ ಒಳನೋಟ ನೀಡುವ ಸಂಶಯಾತೀತ
> ವಿವರಗಳು.
>
> ಓದಲೂ ನಾಚಿಕೆಯಾಗುವ ಇಂತಹ ಚಿತ್ರಣಗಳಿರುವ ಈ ಪುಸ್ತಕಗಳಲ್ಲಿ ಒಂದಕ್ಕೆ ಮುನ್ನುಡಿ
> ಬರೆದದ್ದು ಮಾಜಿ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವರು! ಅವರು ಬರೆಯುತ್ತಾರೆ: ಇಲ್ಲಿನ
> ಲೇಖನಗಳಲ್ಲಿ ಶೃಂಗಾರ, ಹಾಸ್ಯ, ವೀರ... ಎಲ್ಲ ರಸಗಳೂ ಇವೆ!   ಪುಸ್ತಕಕ್ಕೆ ಆಶಯ
> ನುಡಿಗಳನ್ನು ಬರೆದದ್ದು ಸಿನಿಮಾ ಮಾಡುವ ಒಬ್ಬ ಸಾಹಿತಿ. ಅವರು ಬರೆಯುತ್ತಾರೆ: ವೈನೋದಿಕ
> ನಿರೂಪಣೆಯಿಂದ ಇಲ್ಲಿನ ಲೇಖನಗಳು ಆಪ್ತವಾಗುತ್ತವೆ!
>
> ಇವರೆಲ್ಲ ಒಳ್ಳೆಯವರು. ಇಂತಹ ಒಳ್ಳೆಯವರು ಕೂಡಾ ಪೊಲೀಸ್ ವ್ಯವಸ್ಥೆಯ ಅತ್ಯಂತ ಅನಾಗರಿಕ
> ಮತ್ತು ಅಪಾಯಕಾರಿ ಮುಖವನ್ನು ಎಷ್ಟೊಂದು ನಿರಾಳವಾಗಿ ಸ್ವೀಕರಿಸುತ್ತಾರೆ ಎನ್ನುವುದಕ್ಕೆ
> ಇದೊಂದು ಉದಾಹರಣೆ.
>
> ಹೋದ ವಾರ ಮಹಾದಾಯಿ  ಗಲಭೆ ನಿಯಂತ್ರಿಸುವ ನೆಪದಲ್ಲಿ ಕರ್ನಾಟಕ ಪೊಲೀಸರು ಮಹಿಳೆಯರು, ಮುದು
> ಕರು, ಮಕ್ಕಳು, ಗರ್ಭಿಣಿಯರಿಗೆಲ್ಲ ಮನಸೋ ಇಚ್ಛೆ ಬಡಿದು ಹಿಂಸಾರತಿಯಲ್ಲಿ ಮಿಂದೆದ್ದನ್ನು
> ಖಂಡಿಸುತ್ತಿರುವ ಕನ್ನಡ ಮಾಧ್ಯಮಗಳು ಕೆಲ ಸಮಯದ ಹಿಂದೆ ಮಹಾರಾಷ್ಟ್ರ-ಕರ್ನಾಟಕ ಗಡಿ
> ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯ ಸಂದರ್ಭ ಪೊಲೀಸರು ಇದೇ ರೀತಿ ವರ್ತಿಸಿದಾಗ
> ‘ಪುಂಡರಿಗೆ ಸರಿಯಾದ ಪಾಠ ಕಲಿಸಿದರು’ ಎಂಬಂತೆ ಹಾಡಿಹೊಗಳಿದ್ದುಂಟು.
>
> ಒಟ್ಟಿನಲ್ಲಿ ಹೇಳುವುದಿಷ್ಟೇ. ಈ ರೀತಿ ವ್ಯವಸ್ಥೆಯೊಳಗಿನ  ಹಿಂಸೆಯನ್ನು ಎಲ್ಲರೂ ಸಹಜ
> ಎ೦ಬ೦ತೆ ಸ್ವೀಕರಿಸಿರುವಾಗ ಮತ್ತು ಈ ವ್ಯವಸ್ಥೆ ಹೀಗೆ ಮಾತ್ರ ಇರಲು ಸಾಧ್ಯ ಎಂದು
> ಒಪ್ಪಿಕೊಂಡಿರುವಾಗ ಪೊಲೀಸರಿಂದ ಅಮಾನವೀಯ ಹಲ್ಲೆ ಎಂದು ಆಗೊಮ್ಮೆ ಈಗೊಮ್ಮೆ ಗೊಣಗುವುದು
> ವ್ಯರ್ಥ ಮತ್ತು ಅರ್ಥಹೀನ. ಹೀಗಾಗುವಲ್ಲಿ ಎಲ್ಲರ ಪಾಲೂ ಇದೆ.
>
> ಭಾರತದ ಪೊಲೀಸರ ಕ್ರೌರ್ಯಕ್ಕೆ ಸಾವಿರ ಸಮರ್ಥನೆಗಳಿರಬಹುದು. ಪ್ರಶ್ನಿಸಬೇಕಾದವರೆಲ್ಲಾ
> ಅದನ್ನು ಒಪ್ಪಿಕೊಂಡಿರಬಹುದು. ಆದರೆ ಎಲ್ಲರೂ ಗಮನಿಸಬೇಕಾದ ಒಂದು ವಿಚಾರ ಇದೆ. ಹಿಂಸೆಯನ್ನೇ
> ಆಶ್ರಯಿಸಿ ಕಟ್ಟಿರುವ ಪೊಲೀಸ್‌ ವ್ಯವಸ್ಥೆಯ ವಿರುದ್ಧ ಜನರ  ಆಕ್ರೋಶ ದಿನದಿನಕ್ಕೂ
> ಮಡುಗಟ್ಟುತ್ತಿದೆ.
>
> ಇದು ಗುಪ್ತ ಕ್ಯಾಮೆರಾಗಳ ಮತ್ತು ಇಂಟರ್ನೆಟ್‌ನ ಕಾಲ. ಈಗ ಪೊಲೀಸರು ಮಾಡುವುದನ್ನೆಲ್ಲಾ ಜನ
> ನೋಡುತ್ತಾರೆ, ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾರೆ. ಬೆಂಗಳೂರು ನಗರದ ಪೊಲೀಸ್
> ಮುಖ್ಯಸ್ಥರೊಬ್ಬರು ಕೆಲಕಾಲದ ಹಿಂದೆ ‘ಪೊಲೀಸರ ಹೆಸರು ಹೇಳಿ ಮಕ್ಕಳಿಗೆ ಹೆದರಿಸಬೇಡಿ,
> ಮಕ್ಕಳು ಪೊಲೀಸರ ಬಗ್ಗೆ ತಪ್ಪು ಅಭಿಪ್ರಾಯ ಹೊಂದುತ್ತಾರೆ’ ಅಂತ ನಗರದಾದ್ಯಂತ ಬೋರ್ಡು
> ಹಾಕಿಸಿದ್ದರು. ಮಕ್ಕಳಿಗೆ ಹೆತ್ತವರು ಪೊಲೀಸರ ಕತೆ ಹೇಳಬೇಕಾಗಿಲ್ಲ.
>
> ಪೊಲೀಸರ ಸ್ವಭಾವ, ಸಂಸ್ಕಾರ ಮತ್ತು ಭಾಷೆ ಹೇಗಿರುತ್ತವೆ ಎನ್ನುವುದನ್ನು ಅವರೆಲ್ಲಾ
> ಇಂಟರ್ನೆಟ್ ಮತ್ತು ಟಿವಿಗಳಲ್ಲಿ ನೋಡುತ್ತಿದ್ದಾರೆ. ಹಾಗೆ ನೋಡುತ್ತಾ ನಡೆದಾಡುವ ಜೀವಿಗಳ
> ಪೈಕಿ ಮನುಷ್ಯರು, ಮೃಗಗಳು ಮತ್ತು ಪೊಲೀಸರು ಎಂಬ ಮೂರು ಪ್ರಬೇಧಗಳಿವೆ ಎಂಬ ನಿರ್ಧಾರಕ್ಕೆ
> ಮಕ್ಕಳು ಎಂದೋ ಬಂದಿರುತ್ತಾರೆ. ಆ ಮಕ್ಕಳೆಲ್ಲಾ ಬೆಳೆಯುತ್ತಿದ್ದಾರೆ.
>
> ಪೊಲೀಸರ ವಿರುದ್ಧ ಜನರ ಸಹನೆ ಎಂದೋ ಕಟ್ಟೆಯೊಡೆದು ಹೋಗುತ್ತಿತ್ತು. ಆದರೆ ಈ ಮಧ್ಯೆ
> ಕಾಣಿಸಿಕೊಂಡ ನಕ್ಸಲರ ಮತ್ತು ಭಯೋತ್ಪಾದಕರ ಸಮಸ್ಯೆಯಿಂದಾಗಿ ಪೊಲೀಸರು
> ಮಾಡುತ್ತಿರುವುದನ್ನೆಲ್ಲಾ ಸಹಿಸಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಕೂತರೆ ನಿಂತರೆ
> ಬಂದ್‌ಗಳನ್ನ ಜನರ ಮೇಲೆ ಹೇರಿ ಸಾರ್ವಜನಿಕ ಆಸ್ತಿಗಳನ್ನು ಸುಡುವ ಸಂಘಟನೆಗಳ ಹಾವಳಿಯಿಂದಾಗಿ
> ಪೊಲೀಸರನ್ನು ಜನ ಸಹಿಸಿಕೊಳ್ಳಬೇಕಾಯಿತು.
>
> ನಮ್ಮ ನ್ಯಾಯಾಂಗ ವ್ಯವಸ್ಥೆಯ ದೋಷಗಳಿಂದಾಗಿ ಜನ ಪೊಲೀಸರ ಮಧ್ಯಯುಗದ ಪ್ರವೃತ್ತಿಗಳನ್ನು
> ಒಪ್ಪಿಕೊಳ್ಳಬೇಕಾಯಿತು. ಈಗ ಇವೆಲ್ಲದರ ಹೊರತಾಗಿಯೂ ಜನರ ಸಹನೆ ಮೀರುತ್ತಿದೆ ಎನ್ನುವ
> ಸೂಚನೆಗಳು ಕಾಣಿಸಿಕೊಳ್ಳುತ್ತಿವೆ.
>
> ಗುಜರಾತಿನ ಮೀಸಲಾತಿ ಚಳವಳಿಯ ಹಾರ್ದಿಕ್  ಪಟೇಲ್ ಎಂಬ ಯುವಕ ‘ಪೊಲೀಸರನ್ನು ಕೊಲ್ಲಿರಿ’
> ಎಂದು ಅಪಾಯಕಾರಿ ಕರೆ ನೀಡಿದ. ಬೆಂಗಳೂರಿನ  ಬೀದಿಗಳಲ್ಲಿ ಜನ ಪೊಲೀಸರ ಮೇಲೆ ಕೈಮಾಡುತ್ತಿರುವ
> ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ.
>
> ಪೊಲೀಸರ ತಂಟೆಗೆ ಬಂದ ಸಾಮಾನ್ಯ ಮನುಷ್ಯರನ್ನು ಜೀವನ ಪೂರ್ತಿ ಹಾಸಿಗೆ ಹಿಡಿಯುವಂತೆ
> ಸಾಯಹೊಡೆಯಲಾಗುತ್ತದೆ ಎನ್ನುವ ಸತ್ಯ ಕಣ್ಣಮುಂದಿದ್ದರೂ ಜನ ಪೊಲೀಸರ ಮೇಲೆರಗುತ್ತಿದ್ದಾರೆ.
> ಇತ್ತೀಚೆಗೆ ಬೀದಿಗಿಳಿದ ಗಾರ್ಮೆಂಟ್ ನೌಕರರು ಏಕಾಏಕಿ ಪೊಲೀಸ್ ಸ್ಟೇಷನ್‌ಗೆ ನುಗ್ಗಿದರು.
> ಅದರ ಘೋರ ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿದ್ದರೂ ಹಾಗೆ ಮಾಡಿದರು.
>
> ಹೊಸದಾಗಿ ಆಯ್ಕೆಯಾದ ಪೊಲೀಸ್ ಮಂದಿಗೆ ಯಾವ ರೀತಿಯ ತರಬೇತಿ ನೀಡುತ್ತಾರೋ ಗೊತ್ತಿಲ್ಲ.
> ಬಹುಶಃ ಚಿತ್ರಹಿಂಸೆ ನೀಡುವುದು ಹೇಗೆ ಎನ್ನುವುದನ್ನು ಅವರಿಗೆ ಕಲಿಸುತ್ತಿರಬಹುದು.
> ಅದೇನಾದರೂ ಆಗಲಿ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ನಡೆದ  ಚೌರಿಚೌರ ಘಟನೆಯ ಬಗ್ಗೆ
> ತರಬೇತಿಯಲ್ಲಿ ಅವರಿಗೆ ಸ್ವಲ್ಪ ವಿಸ್ತೃತವಾಗಿ ಹೇಳುವುದು ಒಳ್ಳೆಯದು. ಅದು ಸ್ವಾತಂತ್ರ್ಯ
> ಹೋರಾಟಗಾರರು ಪೊಲೀಸರ ವಿರುದ್ಧ ತಿರುಗಿಬಿದ್ದ ಕತೆ.
>
> ಅದು ನಡೆದದ್ದು 1922ರ ಫೆಬ್ರುವರಿ 4 ರಂದು. 1919ರ ಜಲಿಯನ್ ವಾಲಾ ಬಾಗ್ ಆದಿಯಾಗಿ
> ಬ್ರಿಟಿಷ್ ಪೊಲೀಸರ ಮತ್ತು ಸೈನ್ಯದ ದೌರ್ಜನ್ಯ ಮೇರೆ ಮೀರಿ ಜನರಲ್ಲಿ ಪೊಲೀಸರ ಕುರಿತಾಗಿ
> ತೀವ್ರವಾದ ಅಸಹನೆ ಮತ್ತು ಕ್ರೋಧ ಮನೆಮಾಡಿತ್ತು. ಈ ಮಧ್ಯೆ ಚೌರಿಚೌರ ಎಂಬಲ್ಲಿ ಪೊಲೀಸರು
> ಸ್ವಾತಂತ್ರ್ಯ ಹೋರಾಟಗಾರರ ಮೇಲೆರಗಿದಾಗ ಪರಿಸ್ಥಿತಿ ಕೈಮೀರಿ ಜನ ಅಲ್ಲಿನ ಪೊಲೀಸ್
> ಠಾಣೆಯನ್ನು ಸುಡುತ್ತಾರೆ; ಪೊಲೀಸರನ್ನು ಕ್ರೂರವಾಗಿ ದಹಿಸುತ್ತಾರೆ.
>
> ಸ್ವಾತಂತ್ರ್ಯಾನ೦ತರದ 69 ವರ್ಷಗಳಲ್ಲಿ ಜನ ಅವಡು ಕಚ್ಚಿಕೊಂಡು ತಮ್ಮದೇ ದೇಶದ ಪೊಲೀಸರ
> ಪಾಷಾಣ ಪ್ರವೃತ್ತಿಗಳನ್ನೆಲ್ಲಾ ಸಹಿಸಿಕೊಂಡಿದ್ದಾರೆ. ಈ ಸಹನೆ ಮುಗಿಯುವ ಮುನ್ಸೂಚನೆಗಳು
> ನಮ್ಮ ಮುಂದಿವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ನೂರಾರು ಚೌರಿಚೌರಗಳನ್ನು ದೇಶ
> ಕಾಣಬೇಕಾದೀತು. ಪೊಲೀಸರು ಮನುಷ್ಯರಾಗಬೇಕಾಗಿರುವುದು ಜನರ ಹಿತದೃಷ್ಟಿಯಿಂದ ಮಾತ್ರವಲ್ಲ,
> ಸ್ವತಃ ಪೊಲೀಸರ ಹೆಂಡತಿ ಮಕ್ಕಳ ಹಿತದೃಷ್ಟಿಯಿಂದ ಕೂಡಾ
>
> (ಮಕ್ಕಳಿಗೆ ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ ಎಂಬ ನಮ್ಮ ನಂಬಿಕೆಯೂ ಇದೆ ಹಿನ್ನೆಲೆಯದ್ದೇನೊ)
> [email protected]
> ಸಿದ್ದರಾಮಪ್ಪ. ಎಸ್.ಎಂ
> ಸಶಿ ಕಲಾ
> ಸರ್ಕಾರಿ ಪ್ರೌಢ ಶಾಲೆ
> ಗಂಜಿಗೆರೆ. ಕೆ ಆರ್ ಪೇಟೆ ತಾ||
> ಮಂಡ್ಯ ಜಿಲ್ಲೆ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJCvfyVAvAYBHqkx6JVXdPABZnc7gyjUT7t61uzXPe5F3Fb_ww%40mail.gmail.com
> <https://groups.google.com/d/msgid/socialsciencestf/CAJCvfyVAvAYBHqkx6JVXdPABZnc7gyjUT7t61uzXPe5F3Fb_ww%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>



-- 
LOKESH S
GPUC (HS), SHIVAPURA, MADDUR TQ,
MANDYA DIST.

-- 
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"SocialScience STF" group.
To unsubscribe from this group and stop receiving emails from it, send an
email to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit
https://groups.google.com/d/msgid/socialsciencestf/CAJ51JmGsA0W1L2HFK7eGsdxX%3D-sO%2BufX7R5obwJ6yf%2BCXYXscQ%40mail.gmail.com
<https://groups.google.com/d/msgid/socialsciencestf/CAJ51JmGsA0W1L2HFK7eGsdxX%3D-sO%2BufX7R5obwJ6yf%2BCXYXscQ%40mail.gmail.com?utm_medium=email&utm_source=footer>
.
For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz57ZBPHmJVLGcVCJhJcafno%2BNv1%2B%3DXK-Bdx_F6LerRr8A%40mail.gmail.com.
For more options, visit https://groups.google.com/d/optout.

Reply via email to