ಭಾರತೀಯರ ಕಲ್ಪನೆ ಅದ್ಭುತವಾದುದು. ಸರ್.

ವಿಚಾರಗಳನ್ನು ಅಭಿವ್ಯಕ್ತಪಡಿಸುವ ಅವಕಾಶ ಇದ್ದರೆ ಒಳ್ಳೆಯದು
On 04-Aug-2016 6:35 PM, "Narayana D" <[email protected]> wrote:

> ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು
> ಪರಮಾತ್ಮ :ಈಶ್ವರ :ದೇವರು :ಬ್ರಹ್ಮ :ಪರಬ್ರಹ್ಮ :ಮೂಲ ಚೈತನ್ಯ :
>
> ಪೀಠಿಕೆ
>
> ಜೀವ, ಜಗತ್ತುಗಳಂತೆ ದರ್ಶನಗಳಲ್ಲಿ ಪ್ರಧಾನವಾದುದು ಈಶ್ವರ ತತ್ತ್ವ. ಸಮಸ್ತ ಪ್ರಪಂಚವನ್ನೂ
> ಆವರಿಸಿ ಅದನ್ನೆಲ್ಲಾ ನಿಯಂತ್ರಿಸುವ ಒಂದು ಶಕ್ತಿ ಇದೆಯೇ ? ಅದೊಂದು ವ್ಯಕ್ತಿಯೇ ? ಶಕ್ತಿಯೇ
> ? ಜಗತ್ತಿಗೂ ಈಶ್ವರನಿಗೂ ಇರುವ ಸಂಬಂಧವೇನು ? ಜಗತ್ತಿನಲ್ಲಿ ಅನುಭವಿಸುವ ಕಷ್ಟಗಳಿಗೆ
> ಆವ್ಯಕ್ತಿ - ಶಕ್ತಿಯಿಂದ ಸಹಾಯ ದೊರೆತೀತೇ ? ಈ ಹಲವು ಪ್ರಶ್ನೆಗಳಿಗೆ ಉತ್ತರಿಸಲು
> ಯತ್ನಸಿರವುದೇ ದರ್ಶನ ಶಾಸ್ತ್ರ.
> ಡಿ.ವಿ.ಜಿ.ಯವರು ಜೀವನ ಧರ್ಶನ ಕಾವ್ಯವಾಗಿರುವ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಮೊದಲಿಗೆ ಈ
> ಪ್ರಶ್ನೆಗಳನ್ನು ಎತ್ತುತ್ತಾರೆ .
> ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
> ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||
> ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
> ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||
> (ವಿಶ್ವಕ್ಕೆ ಆದಿ ಮತ್ತು ಮೂಲ-ಕಾರಣವಾದದ್ದು/ ಕಾಣದೊಡಂ-ಕಾಣದಿದ್ದರೂ
> ಅಳ್ತಿಯಿಂ-ಪ್ರೀತಿಯಿಂದ/ಭಕ್ತಿಯಿಂದ ಜನ ನಂಬಿರುವರೋ ಆ ವಿಚಿತ್ರಕ್ಕೆ ನಮಸ್ಕಾರ !! )
> ಜೀವ ಜಡರೂಪ ಪ್ರಪಂಚವನದಾವುದೋ|
> ಆವರಿಸಿಕೊಂಡುಮೊಳನೆರೆದುಮಿಹುದಂತೆ||
> ಭಾವಕೊಳಪಡದಂತೆ ಅಳತೆಗಳವಡದಂತೆ|
> ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||
> (ಪ್ರಪಂಚವನ್ನು ಅದು ಆವುದೋ ಆವರಿಸಿಕೊಂಡುಂ+ ಒಳ+ನೆರೆ-ಒಳಗೆ ತಂಬಿಹುದಂತೆ;ಭಾವಕೆ
> ಮನಸ್ಸಿಗೆ ಸಿಗದ ಅಳತೆಗೆ ಅಳವಡದ-ಸಿಗದ ಆ ವಿಶೇಷಕ್ಕೆ ನಮಿಸು !!)
> ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
> ಮಹಿಮೆಯಿಂ ಜಗವಾಗಿ ಜೀವವೇಷದಲಿ||
> ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
> ಗಹನ ತತ್ವಕೆ ಶರಣೊ - ಮಂಕುತಿಮ್ಮ||
> (ಇದೆ ಅಥವಾ ಇಲ್ಲ ಎಂದು ತಿಳಿಯಲು ಆಗದ /ಆಸ್ಪದಕೊಡದ -ತರ್ಕಕ್ಕೆ ಸಿಗದ ನಿಜ-ತನ್ನ
> ಶಕ್ತಿಯಿಂದ ಜಗತ್ತಾಗಿ ರೂಪಗೊಂಡು/ಜೀವವಾಗಿ ಪರಿಣಮಿಸಿ,ನಿಸದ=ನಿಜ- ನಿಜವಾದೊಡೆ/ನಿಜವಿದ್ದರೂ
> ಇರಬಹುದು -ಅದಕ್ಕೆ ನಮಿಸು !! )
> ದರ್ಶನ ಶಾಸ್ತ್ರಗಳಲ್ಲಿ ಈಶ್ವರ ಸಂಪಾದಿಸಿ
>
> ಚರ್ವಾಕ
> ಚರ್ವಾಕರು ಮೋಕ್ಷ , ಪುನರ್ಜನ್ಮ , ಪರಲೋಕ , ಈಶ್ವರ , ಇವನ್ನೆಲ್ಲಾ ನಿರಾಕರಿಸುತ್ತಾರೆ.
> ಅವೆಲ್ಲಾ ಭ್ರಮೆ ಎನ್ನುತ್ತಾರೆ . ಸುಖ ದುಃಖಗಳೆಲ್ಲಾ ಪ್ರಕೃತಿ ಸಹಜವಾದದ್ದು ; ರಾಜನೇ
> ಈಶ್ವರನ ಕೆಲಸಮಾಡುತ್ತಾನೆ ಎಂಬುದು ಅವರ ಸಿದ್ಧಾಂತ.
> ಜೈನ
> ಜೈನದರ್ಶನವು ಈಶ್ವರನನ್ನು ಒಪ್ಪದಿದ್ದರೂ , ಅನಂತ ಜ್ಞಾನಶಕ್ತಿಗಳಿರುವ ಆತ್ಮ
> ತತ್ವನ್ನೊಪ್ಪಿದೆ.ಅನೇಕ ಅನಂತ ಆತ್ಮಗಳಿವೆ ಎನ್ನುತ್ತಾರೆ. ಕೆಲವು
> ದೇವತೆಗಳನ್ನೊಪ್ಮ್ಪತ್ತಾರೆ (ವೇದಗಳಲ್ಲಿ ಹೇಳಿದವು - ಕೆಲವು ಹೊಸ ದೇವತೆಗಳಿದ್ದಾರೆ). ಜಿನ
> , ಅರ್ಹತ, ತೀರ್ಥಂಕರರು, ಪೂರ್ಣಜೀವರು .
> ಬೌದ್ಧ
> ಬೌದ್ಧರೂ ಪರಮಾತ್ಮನನ್ನು ಒಪ್ಪುವುದಿಲ್ಲ. ಜೀವನನ್ನು ಒಪ್ಪಿದರೂ ;ರಾಗ
> ದ್ವೇಷಾದಿಗಳನ್ನೂ-ಕರ್ಮಗಳನ್ನು ಜ್ಞಾನದಿಂದ ಬಿಡಿಸಿಕೊಂಡ ನಂತರ ಶೂನ್ಯದಲ್ಲಿ ಒಂದಾಗುವುದು
> (ಮೋಕ್ಷ) ; ಆದರೂ ಪೂರ್ಣಾತ್ಮನೆಂದು ಬುದ್ಧನನ್ನೇ ಸ್ವೀಕರಿಸಿ ಅವನನ್ನೇ ಈಶ್ವರ
> ಸ್ಥಾನಕ್ಕೇರಿಸಿದೆ. ಬೌದ್ಧ ದರ್ಶನವು ದೇವತೆಗಳನ್ನು ಸ್ವೀಕರಿಸುವುದು . ಆದರೆ ಜಗತ್ತೆಲ್ಲಾ
> ಕ್ಷಣಿಕ -ಭ್ರಮೆ ಎಂಬ ನಿಲುಮೆ ಅದರ ಪ್ರಕಾರ ಶೂನ್ಯವೇ ಸತ್ಯ .
> ಷಡ್ದರ್ಶನಗಳಲ್ಲಿ ದೇವರು ಸಂಪಾದಿಸಿ
>
> ಸಾಂಖ್ಯ
> ಪ್ರಾಚೀನ ಸಾಂಖ್ಯರಲ್ಲಿ ಈಶ್ವರನ ವಿಚಾರವಿಲ್ಲ. ಪ್ರಕೃತಿ ಪುರುಷರೇ ಎಲ್ಲಕ್ಕೂ ಕಾರಣ .
> ಪುರುಷರ ಸಾನ್ನಿಧ್ಯವು ಪ್ರಕೃತಿಗೆ - ಸೃಷ್ಟಿಗೆ ಪ್ರೇರಣೆಯನ್ರ್ನೆದಗಿಸುತ್ತದೆ.
> ಯೋಗ ದರ್ಶನ
> ಯೋಗ ದರ್ಶನದಲ್ಲಿ ಈಶ್ವರನನ್ನು ಒಪ್ಪಲಾಗಿದೆ. ಪತಂಜಲಿಯ ಪ್ರಕಾರ ಈಶ್ವರನು ನಿತ್ಯ, ಮುಕ್ತ
> , ಕರ್ಮಾತೀತ , ಸರ್ವಜ್ಞ ಸರ್ವಶಕ್ತ , ಸರ್ವವ್ಯಾಪಿ . ಹಿಂದಿನ ಋಷಿಗಳ ಗುರು , ಸಮಾಧಿ
> ಪಡೆಯಲು , ಅನ ಅನುಗ್ರಹ ಬೇಕು ಎಂಬ ಅಭಿಪ್ರಾಯ ಹೋದಿದ್ದಾರೆ. ಜೀವರ ಶಿP -ರಕ್ಷೆ ಯ ಹೊಣೆ
> ಅವನಿಗಿಲ್ಲ. ದೇವನು ಮೋಕ್ಷದಾಯಕನೂ ಅಲ್ಲ .ಜಗತ್ತಿನ ಸಶಷ್ಟಿ, ಸ್ಥಿತತಿ,ಲಯಗಳಿಗೆ ಇವನು
> ಕಾರಣನಲ್ಲ . ಪ್ರಕೃತಿಗೆ ಕೇವಲ ಪ್ರೇರಕನಾಗಿ , -ನಿಮಿತ್ತ ಕಾರಣನಾಗಿದ್ದಾನೆ.
> ವೈಶೇಷಿಕ ದರ್ಶನ
> ವೈಶೇಷಿಕ ದರ್ಶನದಲ್ಲಿ -ಅದರ ಸೂತ್ರಗಳಲ್ಲಿ ಸ್ಪಷ್ಟವಾಗಿ ದೇವರ ಉಲ್ಲೇಖವಿಲ್ಲ. ಸೂತ್ರದ ವಿ
> ತದ್ವಚನಾತ್ ವಿ ಂಬಸೂತ್ರ-ವ್ಯಾಖ್ಯಾನಕ್ಕರ ವೇದದ ಆಧಾರದಮೇಲೆ , ತದ್ ಎಂದರೆ ಅದನ್ನು
> (ದೇವರನ್ನು) ಒಪ್ಪಲಾಗಿದೆ.
> ಮೀಮಾಂಸಾ ದರ್ಶನ
> ಮೀಮಾಂಸಾ ದರ್ಶನದಲ್ಲಿ ಜೈಮಿನಿ , ಶಬರಸ್ವಾಮಿ , ಇವರು ಈಶ್ವರನನ್ನು ನಿರಾಕರಿಸುತ್ತಾರೆ.
> ವೇದ -ಅದರ ಮಂತ್ರಗಳು , ಯಜ್ಞ ಕರ್ಮಗಳು ನಿತ್ಯ ಅಥವಾ ಪ್ರಾಮುಖ್ಯ . ದೇವತೆಗಳ
> ಅಸ್ಥಿತ್ವವನ್ನೂ ಒಪ್ಪುವುದಿಲ್ಲ .
> ವೇದಗಳು ಅನಾದಿ , ತಾನಾಗಿ ಸೃಷ್ಟಿಯಾದವು ಎನ್ನುತ್ತಾರೆ. ನಂತರದ ಮೀಮಾಂಸಕರು ದೇವರನ್ನು
> ಒಪ್ಪಿದ್ದಾರೆ . ಆದರೆ ದೇವರಿಗೆ ಮಹತ್ವ ವಿಲ್ಲ. ಕುಮಾರಿಲರು ವೇದಪುರುಷನನ್ನು ಒಪ್ಪಿದರೂ,
> ಈಶ್ವರನನ್ನು ಒಪ್ಪಿಲ್ಲ . ಕಾರಣ ದೇವನ್ನು ಒಪ್ಪಿದರೆ ಜಗತ್ತಿನಲ್ಲಿರುವ ಅನ್ಯಾಯವನ್ನು
> ವಿವರಿಸಲು ಅದಕ್ಕೆ ಕಾರಣ ಹೇಳಲು ಅಸಾದ್ಯವೆಂದು ಅವರ ಮತ,
> ಅದ್ವೈತ
> ಅದ್ವೈತ ದರ್ಶನದಲ್ಲಿ ನಿರ್ಗುಣನೂ, ನಿರಾಕಾರನೂ ಸಚ್ಚದಾನಂದ ರೂಪಿಯೂ ಆದ ಪರಬ್ರಹ್ಮನನ್ನು
> ಒಪ್ಪಲಾಗಿದೆ. ಬ್ರಹ್ಮ ವೊಂದೇ ಸತ್ಯ ,ಅದೇ ಪರಬ್ರಹ್ಮ , ಮಾಯೆ ಸೇರಿದಾಗ , ಅದು ಅಪರ ಬ್ರಹ್ಮ
> ವೆನಿಸಿ ,ಜಗತ್ತಿನ ಸೃಷ್ಟಿ , ಸ್ಥಿತಿಲಯಗಳಿಗೆ , ಉಪಾದಾನ ಮತ್ತು ನಿಮಿತ್ತ ಕಾರಣವಾಗಿದೆ.
> ಅವಿದ್ಯೆಯ ಮಾಯೆಎ) ಆವರಣದಿಂದ , ಅದೇ ಬ್ರಹ್ಮ ವು ಜೀವ ಗಳೆ/ನೆನಿಸುತ್ತದೆ/ ವೆ. ಆದರೆ
> ವ್ಯವಹಾರಿಕ ಸತ್ತೆಯ ದೃಷ್ಟಿಯಿಂದ ಉಪಸನಾ ದೃಷ್ಟಿಯಿಂದ , ಈಶ್ವರನನ್ನು (ಸಗುಣ ಬ್ರಹ್ಮ)
> ಒಪ್ಪಲಾಗಿದೆ. ಆದರೆ ಪಾರಮಾರ್ಥಿಕ ದೃಷ್ಟಿಯಿಂದ ,ಸಗುಣ ಬ್ರಹ್ಮ , ನಿರ್ಗುಣಬ್ರಹ್ಮ
> ಜೀವರಲ್ಲಿ ಬೇಧವಿಲ್ಲ. ; ಜಗತ್ತು ಒಂದು ಮಿಥ್ಯೆ ; (ವಿವರಿಸಲಾಗದ ವಸ್ತು)ಅದು ಬ್ರಹ್ಮ ನಿಂದ
> ಬೇರೆಯಿಲ್ಲ.ಅಥವಾ -ಇಲ್ಲವೇ ಇಲ್ಲ.
> ಇತರೆ ದರ್ಶನಗಳಲ್ಲಿ ದೇವರು ಸಂಪಾದಿಸಿ
>
> ಭಕ್ತಿ ಪಂಥ ವಿಶಿಷ್ಟಾದ್ವೈತ
>
> ರಾಮಾನುಜರ ವಿಶಿಷಾದ್ವೈತದಲ್ಲಿ ನಿರ್ಗುಣ ಬ್ರಹ್ಮಕ್ಕೆ ಸ್ಥಾನವಿಲ್ಲ.
> ಸಗುಣ ಸವಿಶೇಷ ಬ್ರಹ್ಮವೇ ಈಶ್ವರ. ಅವನೇ ವಿಷ್ಣು ; ಅವನೇ ಶ್ರೀಮನ್ನಾರಾಯಣ . ಅವನು
> ಲಕ್ಷ್ಮಿಯೊಡನೆ ವೈಕುಂಠದಲ್ಲಿ ವಾಸಿಸುತ್ತಾನೆ . ಈ ಈಶ್ವರನಲ್ಲಿಯೇ ಚಿತ್ (ಚೇತನ) ಅಚಿತ್
> ಮತ್ತು ಸಗುಣ ಈಶ್ವರ ತತ್ವವನ್ನು ಕಾಣಬಹುದು.ವನೇ ಏಕಮಾತ್ರ ಸತ್ತೆ (ಸತ್ಯ -ಇರುವವನು) . ಜೀವ
> , ಜಗತ್ತು ಅವನನ್ನು ಅವಲಂಬಿಸಿಕೊಂಡಿದ್ದೂ ಬೇರೆಯಾಗಿವೆ. ಆದರೆ ಬಿಡಿಸಲಾಗದಂತೆ
> ಹೊಂದಿಕೊಂಡಿವೆ. ಪ್ರಲಯ ಕಾಲದಲ್ಲಿ ಜೀವ ಜಗತ್ತುಗಳು ಸೂಕ್ಷ್ಮಾವಸ್ಥೆಯಲ್ಲಿ ಈಶ್ವರನಲ್ಲಿ
> ಅಡಗಿರುತ್ತವೆ. ಪುನಃ ಸೃಷ್ಟಿಯಾದಾಗ ಪ್ರಕಟವಾಗುತ್ತವೆ . ಪರಮಾತ್ಮನಾದ ವಾಸುದೇವನು ಜಗತ್ತಿನ
> ಸೃಷ್ಟಿ, ಸ್ಥಿತಿ , ಲಯಗಳಿಗೆ ಉಪಾದಾನ ಹಾಗೂ ನಿಮಿತ್ತ ಕಾರಣನಾಗಿದ್ದಾನೆ. ಸ್ವತಃ ಅವನಲ್ಲಿ
> ಯಾವ ಬದಲಾವಣೆಯೂ ಇಲ್ಲ. ಅವನಿಗೆ ಅಪ್ರಾಕೃತವಾದ ಅಂದರೆ ದಿವ್ಯವಾದ ದೇಹವಿದೆ. ಹಾಗಿದ್ದರೂ
> ಕರ್ಮದ ಬಂಧಕ್ಕೆ ಸಿಲುಕುವುದಿಲ್ಲ. ಆದರೆ ಅವನು ಕರ್ಮಾಧ್ಯಕ್ಷ.ಅವನ ಅನುಗ್ರಹದಿಂದ
> ಮುಕ್ತಿಯನ್ನು ಪಡೆಯಬಹುದು.
> ಮಧ್ವರ ದ್ವೈತ ಮತ್ತು ದೇವರು. ಸಂಪಾದಿಸಿ
>
> ಮಧ್ವರ ಮತದಲ್ಲಿಯೂ ದೇವರನ್ನು ವಿಷ್ಣುವೆಂದು ಕರೆಯಲಾಗಿದೆ. ಅವನ ಗುಣಗಳೆಲ್ಲಾ ರಾಮಾನುಜ
> ಮತದಂತೆ ; ಆದರೆ ರಾಮಾನುಜರಂತೆ ಜೀವ ಜಗತ್ತುಗಳು ಪರಮಾತ್ಮನ ಶರೀರವೆಂದು ಒಪ್ಪುವುದಿಲ್ಲ.
> ಅವು ಅವನಿಗಿಂತ ಭಿನ್ನ ವಾದವು. ಜಗತ್ತಿನ ಸೃಷ್ಟಿಗೆ ಅವನು ನಿಮಿತ್ತ ಕಾರಣ ಮಾತ್ರಾ ;
> ಪ್ರಕೃತಿಯು ಉಪಾದಾನ ಕಾರಣ.
> ನಿಂಬಾರ್ಕರು - ದ್ವೈತಾದ್ವೈತ ಸಂಪಾದಿಸಿ
>
> ನಿಂಬಾರ್ಕರು ತಮ್ಮ ದ್ವೈತಾದ್ವೈತ ಸಿದ್ಧಾಂತದಲ್ಲಿ ,ಈಶ್ವರ ಆತ್ಮೀಯ ; ಅವನೇಶ್ರೀಕೃಷ್ಣ ;
> ಅವನ ಗುಣಗಳು ರಾಮಾನುಜ -ಮಧ್ವ ಮತದಂತೆ , ಆದರೆ ದೇವರು ವಿಶ್ವ ಸೃಷಿಗೆ ಉಪಾದಾನ ಕಾರಣ ಮತ್ತು
> ನಿಮಿತ್ತ ಕಾರಣ. ಜಗತ್ತಿನ ಜಡ ಚೇತನಗಳು ಬೇರೆಯಾಗಿ ಕಂಡರೂ, ಬ್ರಹ್ಮದ ಪರಿಣಾಮವಾಗಿದ್ದು ,
> ತತ್ವತಃ ಬ್ರಹ್ಮವೇ ಆಗಿದೆ.
> ವಲ್ಲಭರ -ಶುದ್ಧಾದ್ವೈತ ಸಂಪಾದಿಸಿ
>
> ವಲ್ಲಭಾಚಾರ್ಯರ ಶುದ್ಧಾದ್ವೈತವೂ ಸಾಕಾರ ಈಶ್ವರನನ್ನು ಪ್ರತಿಪಾದಿಸುತ್ತದೆ . ಈ ಬ್ರಹ್ಮನೇ
> (ಕೃಷ್ಣನೇ), ಸತ್ ಚಿತ್ , ಆನಂದ ಮತ್ತು ರಸನಾಗಿದ್ದಾನೆ . ಅನೋರಣಿಯಾನ್ ಮಹತೋಮಹೀಯಾನ್
> ಆಗಿರುವವನೂ ಅವನೇ. ಕರ್ತೃವೂ ಅವನೇ ಭೋಕ್ತೃವೂ ಅವನೇ ; ಈ ವಿಶ್ವ ಅವನ ಲೀಲೆ . ಅವನು
> ಅಧಿದೈವಿಕದಲ್ಲಿ ಪರಬ್ರಹ್ಮ , ಅಧ್ಯಾತ್ಮಿಕದಲ್ಲಿ ಅಕ್ಷರಬ್ರಹ್ಮ ; ಅಧಿಭೌತಿಕದಲ್ಲಿ ಜಗತ್ತು
> . ಕಾರ್ಯ ಕಾರಣಗಳು ಬೇರೆ ಅಲ್ಲವಾದುದರಿಂದ , ಜಗತ್ತು ಬ್ರಹ್ಮ ರೂಪವೇ ಆಗಿದೆ. ಕಾರಣ ಅವನು
> ಜಗತ್ತಿಗೆ ಉಪಾದಾನ ,ಮತ್ತು ನಿಮಿತ್ತ ಕಾರಣನಾಗಿದ್ದಾನೆ.
> ಚೈತನ್ಯ ಪ್ರಭು
>
> ಚೈತನ್ಯರ ಪ್ರಕಾರ ಬ್ರಹ್ಮ ಅಥವಾ ಶ್ರೀಕೃಷ್ಣ ಸಚ್ಚಿದಾನಂದ ರೂಪಿ ; ಸಕಲ ಕಲ್ಯಾಣಗುಣನಿಧಿ ;
> ಅವನು ಬೇಧಗಳಿಂದ ಶೂನ್ಯನಾದವನು ; ಅಚಿಂತ್ಯ ; ನಕಾರಾತ್ಮಕವಾಗಿ ಕಂಡರೂ , ಏಕಾತ್ಮ ;
> ಸರ್ವವ್ಯಾಪಿ ; ಅವನ ಮೂರು (೪?) ಶಕ್ತಿಗಳೆಂದರೆ ಸ್ವರೂಪ ಶಕ್ತಿ , ತಟಸ್ಥ ಶಕ್ತಿ ,
> ಜೀವಶಕ್ತಿ ಅಥವಾ ಮಾಯಾ ಶಕ್ತಿ. ಸ್ವರೂಪ ಶಕ್ತಿಯಿಂದ ಸತ್ತೆ ವ್ಯಾಪ್ತಿ , ಜ್ಞಾನ, ಆನಂದ ;
> ತಟಸ್ಥ ಶಕ್ತಿಯಿಂದ ಜೀವಿಗಳ ಉತ್ಪತ್ತಿ ; (ಜೀವ ಶಕ್ತಿ) ಮಾಯಾಶಕ್ತಿಯಿಂದ ಜಗತ್ತು
> ಉಂಟಾಗುತ್ತದೆ.ಈ ಮೂರು ಶಕ್ತಿಗಳು ಒಟ್ಟಾಗಿ -ಪರಾಶಕ್ತಿ- ಎನಿಸುತ್ತದೆ. ಸ್ವರೂಪ ಶಕ್ತಿಯಿಂದ
> ಜಗತ್ತಿಗೆ ನಿಮಿತ್ತ ಕಾರಣ ; ಮಾಯಾ ಶಕ್ತಿ ಮತ್ತು ಜೀವ ಶಕ್ತಿಯಿಂದ ಉಪಾದಾನ ಕಾರಣ. ಅವನು
> (ದೇವನು, ಬ್ರಹ್ಮ ,ಶ್ರೀಕೃಷ್ಣ ) ಅನೇಕ ಅವತಾರವೆತ್ತುತ್ತಾನೆ . ಆದರೆ ಶ್ರೀ ಕೃಷ್ಣನು
> ಮಾತ್ರಾ ಪರಬ್ರಹ್ಮವೇ .
> ಶೈವ ಸಿದ್ಧಾಂತಗಳಲ್ಲಿ ದೇವರು ಸಂಪಾದಿಸಿ
>
> ಶೈವ ಸಿದ್ಧಾಂತಗಳ ಪ್ರಕಾರ ಶಿವನೇ (ಪರಬ್ರಹ್ಮ) ಪ್ರಪಂಚದ ಸೃಷ್ಟಿ -ಸ್ಥಿತಿ -ಲಯಗಳಿಗೆ
> ಕಾರಣ. ಅವನ ಆಣವ ಮಲದ (ಅವಿದ್ಯೆ) ಸಂಬಂಧದಿಂದ ಜಗತ್ತು ಹೊರಹೊಮ್ಮುತ್ತದೆ. ಕಾಲ-ದಂತೆ
> ಅವನಲ್ಲಿ ಬದಲಾವಣೆ ಇಲ್ಲ . ಅವನ ಸಂಕಲ್ಪದಿಂದ ಎಲ್ಲಾ ಬದಲಾವಣೆಗಳಾಗುತ್ತವೆ. ಜೀವಿಗಳ
> ಬಂಧವನ್ನು ಹರಿಸುವುದರಿಂದ ಅವನು -ಹರ ; ಮಂಗಳಕರನಾದುದರಿಂದ ಅವನು -ಶಿವ ; ಅವನು ನಿರ್ಗುಣ ;
> ನಿರ್ಗುಣನೆಂದರೆ ತ್ರಿಗುಣಾತೀತ ; ಪೂರ್ಣ ; ವಿಶ್ವಾತ್ಮಕ ; ವಿಶ್ವಾತೀತ ; ಸಾಕಾರನೂ ಹೌದು ;
> ನಿರಾಕಾರನೂ ಹೌದು . ಅವನಿಗೆ ಪಂಚ ಕೃತ್ಯಗಳುಂಟು : -ಅವು ಸೃಷ್ಟಿ , ಸ್ಥಿತಿ , ಲಯ ,
> ತಿರೋಧಾನ , ಅನುಗ್ರಹ .
> ಕಾಶ್ಮೀರ ಶೈವ -ಪ್ರತ್ಯಭಿಜ್ಞಾ ದರ್ಶನ
> ಕಾಶ್ಮೀರ ಶೈವದ ಪ್ರಕಾರ ಶಿವನೇ ಪರಮ ತತ್ವ . ಈ ತತ್ವವು ಶಿವ-ಶಕ್ತಿಯರ ಸಾಮ್ಯ ರೂಪದ್ದು.
> ಅವನು ಚೈತನ್ಯ-ಎಲ್ಲದರಲ್ಲೂ ವ್ಯಾಪಿತ ; ವಿಶ್ವಾತ್ಮಕನಾಗಿ ಪ್ರತಿವಸ್ತುವಿನಲ್ಲಿದ್ದಾನೆ .
> ಅಲ್ಲದೆ ವಿಶ್ವೋತ್ತೀರ್ಣ , ವಿಶ್ವದ ಹೊರಗೂ ಇದ್ದಾನೆ . ಈ ಜಗತ್ತು ಶಿವನಿಂದ ಬೇರೆಯಲ್ಲ .
> ಅವನ ಪ್ರಧಾನ ಶಕ್ತಿಗಳು : ಚಿತ್ , ಆನಂದ , ಇಚ್ಛಾ , ಜ್ಞಾನ , ಮತ್ತು ಕ್ರಿಯಾ . ಕಾಶ್ಮೀರೀ
> ಶೈವವು ಅದ್ವೈತವನ್ನೇ ಹೇಳಿದರೂ ಶಿವನಿಗೆ ಕರ್ತೃತ್ವವನ್ನು ಹೇಳುತ್ತದೆ. ಅವನೇ ನಿಪುಣ
> ನಟನಾಗಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಮ್ಳತ್ತಾನೆ .
> ಪಾಶ್ಚಿಮಾತ್ಯ ತತ್ವಶಾಸ್ತ್ರ ಮತ್ತು ದೇವರು ಸಂಪಾದಿಸಿ
>
> 
> A depiction of the Trinity-ತತ್ವ-ತ್ರಯ consisting of God the Father-ದೇವ ಪಿತ,
> God the Son-ದೇವಪುತ್ರ (Jesus-ಏಸು), and God the Holy Spirit-ಪವಿತ್ರಶಕ್ತಿ
> ವೈಜ್ಞಾನಿಕ ವಿಚಾರ ವಾದಿಗಳು ಅನೇಕರು "ಇಲ್ಲದ" ವಿಚಾರದಲ್ಲಿ ಅನಗತ್ಯ ದೀರ್ಘ ಚರ್ಚೆ
> ಅನಗತ್ಯವೆಂದು ಅಭಿಪ್ರಾಯ ಪಡುತ್ತಾರೆ ಮತ್ತು ಈ ಚರ್ಚೆಗೆ ಸಮಯ ವ್ಯರ್ಥವೆಂದು ಹೇಳುತ್ತಾರೆ .
> ಆದರೆ ಪಶ್ಚಿಮದ ಆಸ್ತಿಕರು ದೇವನು ಒಂದು ಸರ್ವಶಕ್ತಿಯುಳ್ಳ ದೇವಲೋಕದಲ್ಲಿರುವ ಒಂದು
> ವ್ಯಕ್ತಿಯೆಂದು, ಅವರ ಮತ ಗ್ರಂಥದ ಆಧಾರದ ಮೇಲೆ ನಂಬುಗೆ ಇಟ್ಟು ಒಪ್ಪಿದ್ದಾರೆ . ಅವರ
> ಮತಗ್ರಂಥದ ಆದಾರದ ಮೇಲೆ ದೇವರನ್ನು ಒಪ್ಪುವ ಅವರು ಡಾರ್ವಿನ್ನನ ಜೀವವಿಕಾಸ ವಾದವನ್ನೂ ,
> ವೈಜ್ಞಾನಿಕ ವಿಶ್ವ ವಿಕಾಸ ವಾದವನ್ನೂ, ತಿರಸ್ಕರಿಸುತ್ತಾರೆ.
>
> ಮುಖ್ಯ ಮತಧರ್ಮ ಕ್ರಿಶ್ಚಿಯನ್ನರು ಮುಖ್ಯವಾಗಿಮೂರು ತತ್ವಗಳನ್ನು ಅಂತಿಮ ದೈವಿಕ
> ಶಕ್ತಿಗಳೆಂದು ನಂಬುತ್ತಾರೆ.
> ದೇವಲೋಕದ ಪಿತ (ದೇವ ಪಿತ) ;
> ದೇವ ಪುತ್ರ (ಏಸು ) ;
> ಪವಿತ್ರಾತ್ಮ ಅಥವಾ ಪವಿತ್ರ ಶಕ್ತಿ;
> ಎಂದು, ಈ ಮೂರು ತತ್ವಗಳುಳ್ಳ ದೇವನನ್ನು ನಂಬಬೇಕೆಂದು ವಿಧಿಸಲಾಗಿದೆ
> ದೇವರು ಇದ್ದಾನೋ ಇಲ್ಲವೋ-ವಾದ-ವಿವಾದ ಸಂಪಾದಿಸಿ
>
> ಈಶ್ವರನ ಅಸ್ತಿತ್ವ~ ನಿರಾಕರಣೆ -ಸಮರ್ಥನೆ .
> ಈಶ್ವರನು (ದೇವನು) ಪ್ರತ್ಯಕ್ಷ ಪ್ರಮಾಣಕ್ಕೆ ವಿಷಯನಲ್ಲ (ಕಣ್ಣಿಗೆ ಕಾಣುವುದಿಲ್ಲ)
> .ಅದರಿಂದ ಅನುಮಾನ ಅಥವಾ ಶಬ್ದಪ್ರಮಾಣವನ್ನು ಆಶ್ರಯಿಸಿ ಈಶ್ವರನು ಇದಾನೆಂದು
> ನಿರೂಪಿಸಬೇಕಾಗುವುದು. ಮೀಮಾಂಸಕರಾದ ಕುಮಾರಿಲರು ಅನುಮಾನ ಪ್ರಮಾಣದಿಂದಲೂದೇವರಿದ್ದಾನೆಂದು
> ಸಾಧಿಸಲುಬರುವುದಲ್ಲವೆನ್ನುತ್ತಾರೆ .
> ಅದಕ್ಕೆ ಉದಯನನು ತನ್ನ ನ್ಯಾಯ ಕುಸುಮಾಂಜಲಿಯಲ್ಲಿ , ಹೂಡುವ ವಾದವು ಪ್ರಸಿದ್ಧವಾಗಿದೆ.
> (ನ್ಯಾಯ ದರ್ಶನ)
>
> ದೇವರು ಇದ್ದಾನೆ ಎಂಬ ಸಮರ್ಥನೆಯ ವಾದ
> ಉದಯನನ ಸಮರ್ಥನೆ ಸಂಪಾದಿಸಿ
> ಕಾರ್ಯಕಾರಣ ಯೋಜನದೃತ್ಯಾದೇಃ | ಪದಾತ್ ಪ್ರತ್ಯಯ ಶ್ರುತೇಃ |
> ವಾಕ್ಯಾತ್ , ಸಾಂಖ್ಯಾ ವಿಷೇಶಾಚ್ಯ ಸಾಧ್ಯೋ , ವಿಶ್ವ ವಿದವ್ಯ : ||
> ವ್ಯಾಖ್ಯಾನ :-
> ಕಾರ್ಯಾತ್ : ಜಗತ್ತು ಒಂದು ಕಾರ್ಯ ; ಹಾಗಾಗಿ ಇದಕ್ಕೊಂದು ನಿಮಿತ್ತಕಾರಣ ಬೇಕು ; ಅವನೇ
> ಈಶ್ವರ. ಉದಾಹರಣೆ : ಮಡಕೆಗೆ ಕುಂಬಾರನಿದಂತೆ.
> ಆಯೋಜನಾತ್ : ಜಗತ್ತಿನ ಉಪಾದಾನ ಕಾರಣಗಳಾದ ಪರಮಾಣುಗಳ (ಜಡ) ಸಂಯೋಜನೆ ಕ್ರಿಯೆಗೆ, ಚೇತನ
> ಶಕ್ತಿ ಬೇಕು. ಅವನೇ ಈಶ್ವರ.
> ಧೃತ್ಯಾದೇ :(ಧರಿಸುವಿಕೆ): ಗ್ರಹ, ತಾರೆ, ನಕ್ಷತ್ರಗಳು ನಿಂತಿದ್ದರೆ ಅದು ಈಶ್ವರನ ಮಹಿಮೆ.
> ಇಲ್ಲದಿದ್ದರೆ ಎಲ್ಲಾ ನಾಶವಾಗುತ್ತಿತ್ತು.
> ಪದಾತ್ : ಪದಗಳು ಅರ್ಥವನ್ನು ಸೂಚಿಸುತ್ತವೆ. ಅದು ಅವನ ಶಕ್ತಿಯಿಂದ . ಕಲಾ ಕೌಶಲ್ಯಗಳೂ ಅವನ
> ಶಕ್ತಿಯಿಂದ.
> ಪ್ರತ್ಯಯತಃ : ಯಾವ ತಪ್ಪೂ ಇಲ್ಲದ ವೇದಗಳ ರಚನೆ , ಈಶ್ವರನಿಂದ ಮಾತ್ರಾ ಸಾಧ್ಯ.
> ಶ್ರುತೇ : ವೇದಗಳು ಈಶ್ವರನ ಅಸ್ತಿತ್ವವನ್ನು ಹೇಳುತ್ತವೆ.
> ವಾಕ್ಯಾತ್ : ವೇದ ವಾಕ್ಯಗಳು ವಿಧಿ -ನಿಷೇಧವನ್ನು ಹೇಳುತ್ತವೆ. ಆ ಧರ್ಮ ಪ್ರವರ್ತಕನು
> ಈಶ್ವರ.
> ಸಂಖ್ಯಾ ವಿಶೇಷಾತ್ : ಎರಡು ಪರಮಾಣುಗಳ ಸಂಯೋಗ , ದ್ವಣುಕ ಉತ್ಪತ್ತಿ ಸಂಖ್ಯಾದ್ವಯದಿಂದ
> ಆಗುತ್ತದೆ. ಈ ದ್ವಿತ ಸಂಖ್ಯೆಯ ಅಪೇಕ್ಷಾ ಬುದ್ಧಿ ಜನ್ಯ. ಅದು ಚೇತನಾ ವ್ಯಕ್ತಿಯಿಂದ
> ಆಗತಕ್ಕದ್ದು. ಅವನೇ ಈಶ್ವರ.
> ಅದೃಷ್ಟಾತ್  : ನಮ್ಮ ಕರ್ಮಫಲಗಳಿಗೆ ಅದೃಷ್ಟವು ಕಾರಣ. ಜಡವಾದ ಅದೃಷ್ಟವನ್ನು , ಪ್ರೇರಿಸುವ
> ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುತ್ತದೆ. ಆ ಚೇತನ ವ್ಯಕ್ತಿಯೇ ಈಶ್ವರ.(ನ್ಯಾಯ
> ದರ್ಶನ)
> (ಕರ್ಮಫಲವನ್ನು ಅದೃಷ್ಟ ವಸ್ತು ಪ್ರೇರಿಪಿಸುವುದು ; ಈ ಕೆಲಸವನ್ನು ಚೇತನ-ವ್ಯಕ್ತಿಯೇ
> ಮಾಡಬೇಕಾಗುವುದು. ಇದು ಈಚೇತನ ದೇವರು. ಯೋಗ ಸೂತ್ರದಂತೆ ನಮ್ಮಲ್ಲಿರುವ ,
> ಭೂತ,ಭವಷತ್,ವರ್ತಮಾನ , ಜ್ಞಾನ ಶಕ್ತಿ , ಈಶ್ವರನಿಂದಲೇ ಬಂದಿರಬಹುದು. ಅದಕ್ಕೆ ಶ್ರತಿ ಯು
> ಪ್ರಮಾಣ, ಅನುಮಾನ ಮತ್ತು ಶ್ರುತಿ ಇವು ಪ್ರಮಾಣ ,)
> ವೇದಾಂತಿಗಳು ಈಶ್ವರನನ್ನು ತಿಳಿಯಲು , ವೇದಗಳು ಮಾತ್ರಾ ಪ್ರಬಲ ಪ್ರಮಾಣವೆನ್ನುತ್ತಾರೆ ,
> ಅದಕ್ಕೆ ಅನುಮಾನ ಪ್ರಮಾಣಗಳನ್ನು ನಿರಾಕರಿಸುವುದಿಲ್ಲ . ಆದರೆ ಶ್ರೀ ಶಂಕರರು , ಅನುಮಾನ
> ಪ್ರಮಾಣದಿಂದ , ಈ ಜಗತ್ತನ್ನು ಕಾರ್ಯವೆಂದು ಒಪ್ಪಿದರೂ , ಅದಕ್ಕೆ ಈಶ್ವರನು ಕಾರಣವೋ ಬೇರೆ
> ಕಾರಣವೋ ಎಂದು ನಿರ್ಧರಿಸುವುದು /ತೀರ್ಮಾನಿಸುವುದು ಕಷ್ಟವೆನ್ನುತ್ತಾರೆ. (ಬ್ರ,ಊ. ಭಾಷ್ಯ :
> ೨.೨) ಪ್ರಸಿದ್ಧ ಮೀಮಾಂಸಕರಾದ , ಕುಮಾರಿಲ ಭಟ್ಟರದೂ ಅದೇ ಅಭಿಪ್ರಾಯ.
> ಈಶ್ವರಾಸ್ತಿತ್ವದ ನಿರಾಕರಣೆಯ ವಾದ ಸಂಪಾದಿಸಿ
> ಈಶ್ವರನ ಅಸ್ತಿತ್ವವನ್ನು ನಿರಾಕರಿಸುವವರು ಕಾರ್ಯ-ಕಾರಣ ವಾದವು ಪ್ರಬಲವಾದುದೆಂದು
> ಅಂಗೀಕರಿಸಿದ್ದಾರೆ. ಏಕೆಂದರೆ ದೇವರು ಇದ್ದಾನೆ ಎನ್ನುವುದಕ್ಕೆ ಹೇಗೋ ಹಾಗೆ
> ಇಲ್ಲವೆನ್ನುವುದಕ್ಕೂ ಅದೇ ವಾದವನ್ನು ಉಪಯೋಗಿಸುತ್ತಾರೆ.
> ಈಶ್ವರನ ನಿರಾಕರಣೆ ವಾದಗಳು
> ೧. ಕಾರ್ಯಕಾರಣವಾದದಲ್ಲಿ , ಮುಖ್ಯ ಅಂಶ ‘ಜಗತ್ತು ಒಂದು ಕಾರ್ಯ‘ (ಸೃಷ್ಟಿಸಲ್ಪಟ್ಟಿದ್ದು)
> ಎಂಬುದಾಗಿದೆ. ಜೈನರಲ್ಲಿ ಪ್ರಸಿದ್ಧನಾದ ಗುಣರತ್ನನು ಜಗತ್ತನ್ನು ಕಾರ್ಯವೆಂದೇ
> ಒಪ್ಪುವುದಿಲ್ಲ. ಏಕೆಂದರೆ ‘ಅವಯುವ‘ ಸಂಬಂಧವಾಗಿದ್ದರೆ ಮಾತ್ರಾ ಕಾರ್ಯವೆಂದು ಪರಿಗಣಿಸಬಹುದು
> (ಅವಯುವ=ಮೂರು ಆಯಾಮದ ವಸ್ತು /ತ್ರೀ ಡೈಮೆನ್ಶನಲ್ ಮ್ಯಾಟರ್) .ಆದರೆ ಆಕಾಶವು (ಪಂಚ
> ಭೂತಗಳಲ್ಲಿ ಒಂದು.) ಕಾರ್ಯವಾಗಲಾರದು ;ಎಲ್ಲಾ ವಸ್ತುಗಳಿಗೂ ಆಶ್ರಯವಾದದ್ದು . ಅಥವಾ
> (ವಸ್ತುಗಳು) ‘ಸಾವಯುವ‘ ವೆಂದರೆ (ಮೂಲದ್ರವ್ಯ) ಸಮವೇತ ದ್ರವ್ಯತ್ವ ಅಥವಾ ದ್ರವ್ಯದಲ್ಲಿ
> ದ್ರವ್ಯತ್ವ (ಎಲಿಮೆಂಟ್?)ಎಂದರೂ ಸರಿಯಾಗದು -ಮೂಲದಲ್ಲಿರುವುದು ಎಂದರೂ ಸರಿಯಾಗದು.
> ಬುದ್ಧಿಗೆ ಗೋಚರವೆಂದರೆ - `ಆತ್ಮ` ವು ‘ಕಾರ್ಯ‘ ವೆನ್ನಬೇಕಾಗುವುದು. ಆದ್ದರಿಂದ ಜಗತ್ತು
> ‘ಕಾರ್ಯ‘ ವೆಂದು ಹೇಳುವುದು ಸರಿಯಲ್ಲ.
> ಜಗತ್ತಿನ ಸೃಷ್ಟಿ ಕಾರ್ಯವಲ್ಲದಿದ್ದ ಮೇಲೆ ಅದಕ್ಕೆ ಕಾರಣವೆಂದು ಈಶ್ವರನನ್ನು
> ಹೇಳಲುಬರುವುದಿಲ್ಲ. ಆದ್ದರಿಂದ ಈಶ್ವರನನ್ನು ಒಪ್ಪಬೇಕಾದ್ದಿಲ್ಲ.
> ೨.ಈಶ್ವರನು ಒಬ್ಬನೇ ಜಗತ್ತನ್ನು ಸೃಷ್ಟಿಸಿದನೇ ? ಈ ವಿಶಾಲ ಜಗತ್ತು ಒಬ್ಬನಿಂದಾಗಲಾರದು .
> ಮನೆ ಕಟ್ಟಲು ಅನೇಕ ಜನರಿರುವಂತೆ ಜಗತ್ ಸೃಷ್ಟಿಗೆ ಅನೇಕರು ಬೇಕಾಗುವುದು. ; ಅದೂ ಸಿದ್ಧಿಸದು
> (ತರ್ಕಕ್ಕೆ ಒಪ್ಪದು) ಏಕೆಂದರೆ ಅವರಲ್ಲಿ ಸದಾ ಮತಬೇಧವಿದ್ದು ಕೆಲಸ ಕೆಡುವುದು.
> ೩. ಸಾಂಖ್ಯ ಸೂತ್ರದಲ್ಲಿ ‘ಈಶ್ವರಾಸಿದ್ಧೇ‘ (ಈಶ್ವರನು ಇದ್ದಾನೆಂದು ಸಾಧಿಸಲು
> ಸಾಧ್ಯವಿಲ್ಲ), ಎಂಬ ಮಾತಿದೆ. ಅದರ ವ್ಯಾಖ್ಯಾನ ಮಾಡುತ್ತಾ ‘ಅನಿರುದ್ಧಪಂಡಿತ‘ , -ಅವನು
> ಶರೀರವಿರುವವನೋ ಇಲ್ಲದವನೋ ? ಶರೀರವಿದೆಯೆಂದರೆ ಅವನಿಗೆ ಮಿತಿಗಳಿವೆ. ಶರೀರ ಹೇಗಂಟಾಯಿತು
> ಎಂಬ ಪ್ರಶ್ನೆ ಏಳವುದು . ಇಲ್ಲವೆಂದರೆ ಅವನಿಗೆ (ದೇವನಿಗೆ) ಇಚ್ಛೆಯೂ ಉಂಟಾಗದು. ಎಂದರೆ
> ಜಗತ್ತಿನ ಸೃಷ್ಟಿಯೂ ಅವನಿಂದಾಗದು , ಇದು ಪ್ರತಿವಾದ.
> ೪.ಈಶ್ವರನು ಸರ್ವವ್ಯಾಪಿಯಾಗಿದ್ದರೆ , ಬೇರೆಯವರಿಗೆ ಸೃಷ್ಟಿಸಲು ಎನೂ ಇಲ್ಲವೆಂದಾಗುವುದು.
> ಎಲ್ಲಾ ಅವನೇ, ಆದ್ದರಿಂದ ಅದು ಸರಿಯಲ್ಲ. ಹಾಗಿದ್ದರೆ ದೇವರು ನರಕದಲ್ಲೂ ಇದ್ದಾನೆ ಎಚಿದಂತೆ
> ಆಯಿತು. ಆಗ ಅದು ನರಕವೇ ಆಗದು . ನರಕದಲ್ಲಿ ಇಲ್ಲವೆಂದರೆ ಅನಮು ಸರ್ವವ್ಯಾಪಿಯಾಗಲಾರ.
> ಆದ್ದರಿಂದ ದೇವರ ಕಲ್ಪನೆಯೇ ಸರಿಯಲ್ಲ.
> ೫. ಈಶ್ವರನು ಸ್ವತಂತ್ರನೆಂದರೆ ಅವನ ಸೃಷ್ಟಿಯಲ್ಲಿರುವವರೆಲ್ಲಾ ಸುಖಿಗಳಾಗಿರಬೇಕಿತ್ತು.
> ದುಃಖವನ್ನೇ ಸೃಷ್ಟಿಸುತ್ತಿರಲಿಲ್ಲ. ಸುಖ ದುಃಖಗಳು ಕರ್ಮಾಧೀನವೆಂದರೆ ಈಶ್ವರನಿಗೆ ಸ್ವತಂತ್ರ
> ಶಕ್ತಿ ಇಲ್ಲ ಎಂದಾಗುವುದು . ಕರ್ಮವೇ ಪ್ರಬಲವಾಗುವುದು . ಆದ್ದರಿಂದ ಸರ್ವಶಕ್ತ
> ದೇವರಿದ್ದಾನೆ ಎಂದು ಹೇಳುವುದು ಸರಯಲ್ಲ .
> ೬. ಈಶ್ವರನು ಜಗತ್ತನ್ನು ಸೃಷ್ಟಿಸಿದ್ದಾನೆಂದರೆ -ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ ?
> -ಎಂದು ವಿವರಿಸುವುದು ಕಷ್ಟ. ಅವನಿಗೆ ಆಸೆಗಳಿಲ್ಲ . ‘ಪೂರ್ಣಕಾಮನಾದ‘ ,(ಸಂತೃಪ್ತ ) ಅವನಿಗೆ
> ಸ್ವಾರ್ಥವೇನು? ಇಚ್ಛ ಏಕೆ ? ಅಂಥ ಅಪೇಕ್ಷೆ ಇದೆ ಎಂದಾದರೆ ಅವನಲ್ಲಿ ಏನೋ ಕೊರತೆ ಇದೆ
> ಎಂದಾಗುತ್ತದೆ . ಹಾಗಾಗಿ ಈಶ್ವರನನ್ನು (ಅಸ್ತಿತ್ವವನ್ನು) ನಾಸ್ತಿಕರು , ಮೀಮಾಂಸಕರು
> ಒಪ್ಪುವುದಿಲ್ಲ.
> ೭. ವೇದಾಂತಿಗಳು ಜಗತ್ತನ್ನು ಈಶ್ವರನ ಲೀಲೆ ಎನ್ನುತ್ತಾರೆ . ಆದರೆ ನಿರೀಶ್ವರವಾದಿಗಳು ,
> ಅದನ್ನೊಪ್ಪುವುದಿಲ್ಲ. ತನ್ನ ಲೀಲಾ ವಿನೋದಕ್ಕಾಗಿ ದೇವನು , ಜೀವಿಗಳನ್ನು ದುಃಖ , ಕಷ್ಟ ,
> ಕೋಟಲೆಗೆ ನೂಕಿ ತಾನು ಆನಂದ ಪಡುವುದಾದರೆ. ಅವನು ಕೂəರಿಯೂ ಕರಣಾಹೀನನೂ ಆಗುತ್ತಾನೆ . ಆ
> ಬಗೆಯ ದೇವನನ್ನು ಒಪ್ಪಲು ಆಗುವುದಿಲ್ಲ.
> ೮. ಪ್ರಾಚೀನ ಮೀಮಾಂಸಕರು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳು ಕಟ್ಟು ಕಥೆ ಎನ್ನುತ್ತಾರೆ.
> ಜಗತ್ತು ತಾನಾಗಿಯೇ ಯಾವಾಗಲೂ ಇದೆ ಎನ್ನುತ್ತಾರೆ ಅದಕ್ಕೆ (ಸೃಷ್ಟಿಸಲು) ಈಶ್ವರನ
> ಅಗತ್ಯವಿಲ್ಲ ಎನ್ನುವುದು ಅವರ ಮತ. ವೇದಗಳು ಅನಾದಿಯಾದವು -ತಂತಾನೆ ಪ್ರಕಟವಾದವು ; ಅವು
> ನಿತ್ಯ ; ಕರ್ಮಫಲಗಳುತನ್ನಿಂದ ತಾನೇ ಪ್ರವರ್ತಿಸುತ್ತವೆ . ಅದಕ್ಕೆ ಯಜಮಾನ-ಈಶ್ವರ ಬೇಕಿಲ್ಲ
> ಎಂಬುದು ಅವರ ಮತ . ಅವರುದೇವರನ್ನು ಒಪ್ಪದಿದ್ದರೂ ವೇದಗಳನ್ನು ಒಪ್ಪುತ್ತಾರೆ.
> ೯ , ಅಂತ್ಯದಲ್ಲಿ ತಾರ್ಕಿಕರೆಲ್ಲಾ ಮೂಲೆಗೆ ಬಿದ್ದು , ಈಶ್ವರನ ಅಸ್ತಿತ್ವವಾದ ಗೆದ್ದು ,
> ಧಾರ್ಮಿಕ ವಿಧಿಗಳ ಅವಶ್ಯಕತೆ ಪ್ರಬಲವಾಗಿ ಜಗತ್ತಿನಲ್ಲಿ ಬೇರೂರಿದೆ ಎನ್ನಬಹುದು .
> ೧೦. ಜೀವ-ಜಗತ್ತಿಗೆ ಕಾರಣವಾದ ಚೇತನ ಮತ್ತು ಮನಸ್ಸುಗಳಿಗೆ ಸಕಾರಣವನ್ನ ಹೇಳಲು
> ನಿರೀಶ್ವರವಾದಿಗಳಿಂದಲೂ ಸಾಧ್ಯವಿಲ್ಲ.
> ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
> ತಾತ್ಪರ್ಯ -ಉಪಸಂಹಾರ ಸಂಪಾದಿಸಿ
>
> ಒಟ್ಟು ನಾಲ್ಕು ಬಗೆಯ ಈಶ್ವರನಿಗೆ ಸಂಬಂಧಿಸಿದ ವಾದಗಳು ಕಂಡುಬರುತ್ತವೆ :
> ಈಶ್ವರನಿಲ್ಲ ಜಗತ್ತು ಮಾತ್ರವಿದೆ (ಶೂನ್ಯ ವಾದ ) ;
> ಈಶ್ವರನು ಜಗತ್ತಿಗೆ ಕಾರಣ ಅವನು ಸ್ವತಂತ್ರ ಜಗತ್ತು ಅವನಿಗೆ ಅಧೀನ ;
> ಈಶ್ವರನು ಜಗತ್ತಿಗೆ ಪ್ರಭು ; ಆದರೂ ಅವನು ಸೃಷ್ಟಿ -ಸ್ಥಿತಿ-ಲಯಗಳಿಗೆ ಕಾರಣನಲ್ಲ
> ಕರ್ತೃತ್ವವಿಲ್ಲ. ;
> ಈಶ್ವರ ಮತ್ತು ಚಿತ್ ಶಕ್ತಿ ಎರಡೂ ಒಂದೇ
> ವಿಚಾರ ವಾದಿಗಳು ಈಶ್ವರನನ್ನು ಒಪ್ಪದೆ , ಕುಟುಂಬದ ಯಜಮಾನನ ಕಲ್ಪನೆಯಿಂದ ಈಶ್ವರ ಕಲ್ಪನೆ
> ಉಂಟಾಗಿರಬಹುದೆನ್ನುವರು . ಆಪತ್ತಿನಕಾಲದಲ್ಲಿ ರಕ್ಷಣೆಗೆ ಮೊರೆ ಇಡಲು ಒಂದು ಅದೃಷ್ಟ
> ಶಕ್ತಿಬೇಕಾಗುವುದು ; ಅದು ಮಾನವ ಮನಸ್ಸಿನ ಸ್ವಭಾವ . ಆದ್ದರಿಂದ ಸರ್ವಜ್ಞನೂ, ಸರ್ವಶಕ್ತನೂ
> ಬೇಕೆಂಬ ಬಯಕೆ ಈಶ್ವರ ಕಲ್ಪನೆಗೆ ಕಾರಣವೆನ್ನವವರೂ ಇದ್ದಾರೆ. ಕಡು ದುಃಖಿತನಿಗೆ -
> ಪರಿಹಾರವಿಲ್ಲದ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದವನಿಗೆ ದೇವರೇ ಗತಿಯಲ್ಲವೇ !! - ಎಂಬುದು
> ಒಂದು ಅಭಿಪ್ರಾಯ . : ಓಂ ತತ್ಸತ್ :
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAKHYmYm%3DdQvZd3N9%3DMgmtNUASWYJ11g3Vkswi7iCSLQOu
> HWs6A%40mail.gmail.com
> <https://groups.google.com/d/msgid/socialsciencestf/CAKHYmYm%3DdQvZd3N9%3DMgmtNUASWYJ11g3Vkswi7iCSLQOuHWs6A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5hK8XH9FrsrvEOXtfebM-6hsjgTBE1JOmqM0Cxa6njxA%40mail.gmail.com.
For more options, visit https://groups.google.com/d/optout.

Reply via email to