ದನ್ಯವಾದಗಳು ಗುರುಗಳೇ

On Aug 4, 2016 10:14 PM, "sundareshamurty T.V." <[email protected]>
wrote:

> ಸತ್ಯ , ಶಕ್ತಿ , ಪ್ರಕೃತಿ , ತತ್ವ , ಸಿದ್ಧಾಂತ , ದೇವರು , ಪರಮಾತ್ಮ , ಕಾಣದ ಕೈ
> .ನಿರಾಕಾರ ಸ್ವರೂಪ , ಬ್ರಹ್ಮನ್ . ಪರಂಜ್ಯೋತಿ, ಪರಬ್ರಹ್ಮನ್ , ----  ಇತ್ಯಾದಿ
>  ಇತ್ಯಾದಿಯಾಗಿ  ಇರುವ  ಒಬ್ಬನೇ  ಭಗವಂತನನ್ನು  ಅವರರ  ಭಾವಕ್ಕೆ  ಅವರವರ  ಬಕುತಿಗೆ (
> ನಂಬಿಕೆಗೆ ) ಅನುಗುಣವಾಗಿ  ಶಿವ , ನಾರಾಯಣ , ಪರಲೋಕದಲ್ಲಿರುವ ತಂದೆ ( ಗಾಡ್ ), ಅಲ್ಲಾಹು
> ಎಂಬುದಾಗಿ  ನಿರೂಪಿಸಿರುವುದು  ಅಥವಾ  ಸ್ಥಾಪಿಸಿಕೊಂಡಿರುವುದು . ಇದೇ  ಆ ಮಾತಿನ ಅರ್ಥ .
> ಎಲ್ಲರಿಗೂ ಗೊತ್ತಿರುವ ಸರಳ ಸತ್ಯ  ಬೇರೇನೂ  ಘಹನವಾದುದ್ದಲ್ಲ.
> ಶುಭ ರಾತ್ರಿ ಗುರುಗಳೇ                                     ವಂದನೆಗಳು.
>
> 2016-08-04 20:19 GMT+05:30 Basavaraja Naika H.D. <
> [email protected]>:
>
>> ಸಂಸ್ಕೃತ ಅರ್ಥವಾಗಲಿಲ್ಲ
>> On 04-Aug-2016 8:08 PM, "sundareshamurty T.V." <[email protected]>
>> wrote:
>>
>>> ಗುರುಗಳೇ   ಏಕಂ ಸತ್  ವಿಪ್ರ ಬಹುದಾ ವಿಧಂತಿ .
>>>
>>>
>>> 2016-08-04 19:54 GMT+05:30 Basavaraja Naika H.D. <
>>> [email protected]>:
>>>
>>>> ಭಾರತೀಯರ ಕಲ್ಪನೆ ಅದ್ಭುತವಾದುದು. ಸರ್.
>>>>
>>>> ವಿಚಾರಗಳನ್ನು ಅಭಿವ್ಯಕ್ತಪಡಿಸುವ ಅವಕಾಶ ಇದ್ದರೆ ಒಳ್ಳೆಯದು
>>>> On 04-Aug-2016 6:35 PM, "Narayana D" <[email protected]> wrote:
>>>>
>>>>> ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು
>>>>> ಪರಮಾತ್ಮ :ಈಶ್ವರ :ದೇವರು :ಬ್ರಹ್ಮ :ಪರಬ್ರಹ್ಮ :ಮೂಲ ಚೈತನ್ಯ :
>>>>>
>>>>> ಪೀಠಿಕೆ
>>>>>
>>>>> ಜೀವ, ಜಗತ್ತುಗಳಂತೆ ದರ್ಶನಗಳಲ್ಲಿ ಪ್ರಧಾನವಾದುದು ಈಶ್ವರ ತತ್ತ್ವ. ಸಮಸ್ತ
>>>>> ಪ್ರಪಂಚವನ್ನೂ ಆವರಿಸಿ ಅದನ್ನೆಲ್ಲಾ ನಿಯಂತ್ರಿಸುವ ಒಂದು ಶಕ್ತಿ ಇದೆಯೇ ? ಅದೊಂದು
>>>>> ವ್ಯಕ್ತಿಯೇ ? ಶಕ್ತಿಯೇ ? ಜಗತ್ತಿಗೂ ಈಶ್ವರನಿಗೂ ಇರುವ ಸಂಬಂಧವೇನು ? ಜಗತ್ತಿನಲ್ಲಿ
>>>>> ಅನುಭವಿಸುವ ಕಷ್ಟಗಳಿಗೆ ಆವ್ಯಕ್ತಿ - ಶಕ್ತಿಯಿಂದ ಸಹಾಯ ದೊರೆತೀತೇ ? ಈ ಹಲವು
>>>>> ಪ್ರಶ್ನೆಗಳಿಗೆ ಉತ್ತರಿಸಲು ಯತ್ನಸಿರವುದೇ ದರ್ಶನ ಶಾಸ್ತ್ರ.
>>>>> ಡಿ.ವಿ.ಜಿ.ಯವರು ಜೀವನ ಧರ್ಶನ ಕಾವ್ಯವಾಗಿರುವ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ
>>>>> ಮೊದಲಿಗೆ ಈ ಪ್ರಶ್ನೆಗಳನ್ನು ಎತ್ತುತ್ತಾರೆ .
>>>>> ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
>>>>> ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||
>>>>> ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
>>>>> ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||
>>>>> (ವಿಶ್ವಕ್ಕೆ ಆದಿ ಮತ್ತು ಮೂಲ-ಕಾರಣವಾದದ್ದು/ ಕಾಣದೊಡಂ-ಕಾಣದಿದ್ದರೂ
>>>>> ಅಳ್ತಿಯಿಂ-ಪ್ರೀತಿಯಿಂದ/ಭಕ್ತಿಯಿಂದ ಜನ ನಂಬಿರುವರೋ ಆ ವಿಚಿತ್ರಕ್ಕೆ ನಮಸ್ಕಾರ !! )
>>>>> ಜೀವ ಜಡರೂಪ ಪ್ರಪಂಚವನದಾವುದೋ|
>>>>> ಆವರಿಸಿಕೊಂಡುಮೊಳನೆರೆದುಮಿಹುದಂತೆ||
>>>>> ಭಾವಕೊಳಪಡದಂತೆ ಅಳತೆಗಳವಡದಂತೆ|
>>>>> ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||
>>>>> (ಪ್ರಪಂಚವನ್ನು ಅದು ಆವುದೋ ಆವರಿಸಿಕೊಂಡುಂ+ ಒಳ+ನೆರೆ-ಒಳಗೆ ತಂಬಿಹುದಂತೆ;ಭಾವಕೆ
>>>>> ಮನಸ್ಸಿಗೆ ಸಿಗದ ಅಳತೆಗೆ ಅಳವಡದ-ಸಿಗದ ಆ ವಿಶೇಷಕ್ಕೆ ನಮಿಸು !!)
>>>>> ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
>>>>> ಮಹಿಮೆಯಿಂ ಜಗವಾಗಿ ಜೀವವೇಷದಲಿ||
>>>>> ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
>>>>> ಗಹನ ತತ್ವಕೆ ಶರಣೊ - ಮಂಕುತಿಮ್ಮ||
>>>>> (ಇದೆ ಅಥವಾ ಇಲ್ಲ ಎಂದು ತಿಳಿಯಲು ಆಗದ /ಆಸ್ಪದಕೊಡದ -ತರ್ಕಕ್ಕೆ ಸಿಗದ ನಿಜ-ತನ್ನ
>>>>> ಶಕ್ತಿಯಿಂದ ಜಗತ್ತಾಗಿ ರೂಪಗೊಂಡು/ಜೀವವಾಗಿ ಪರಿಣಮಿಸಿ,ನಿಸದ=ನಿಜ- 
>>>>> ನಿಜವಾದೊಡೆ/ನಿಜವಿದ್ದರೂ
>>>>> ಇರಬಹುದು -ಅದಕ್ಕೆ ನಮಿಸು !! )
>>>>> ದರ್ಶನ ಶಾಸ್ತ್ರಗಳಲ್ಲಿ ಈಶ್ವರ ಸಂಪಾದಿಸಿ
>>>>>
>>>>> ಚರ್ವಾಕ
>>>>> ಚರ್ವಾಕರು ಮೋಕ್ಷ , ಪುನರ್ಜನ್ಮ , ಪರಲೋಕ , ಈಶ್ವರ , ಇವನ್ನೆಲ್ಲಾ
>>>>> ನಿರಾಕರಿಸುತ್ತಾರೆ. ಅವೆಲ್ಲಾ ಭ್ರಮೆ ಎನ್ನುತ್ತಾರೆ . ಸುಖ ದುಃಖಗಳೆಲ್ಲಾ ಪ್ರಕೃತಿ
>>>>> ಸಹಜವಾದದ್ದು ; ರಾಜನೇ ಈಶ್ವರನ ಕೆಲಸಮಾಡುತ್ತಾನೆ ಎಂಬುದು ಅವರ ಸಿದ್ಧಾಂತ.
>>>>> ಜೈನ
>>>>> ಜೈನದರ್ಶನವು ಈಶ್ವರನನ್ನು ಒಪ್ಪದಿದ್ದರೂ , ಅನಂತ ಜ್ಞಾನಶಕ್ತಿಗಳಿರುವ ಆತ್ಮ
>>>>> ತತ್ವನ್ನೊಪ್ಪಿದೆ.ಅನೇಕ ಅನಂತ ಆತ್ಮಗಳಿವೆ ಎನ್ನುತ್ತಾರೆ. ಕೆಲವು
>>>>> ದೇವತೆಗಳನ್ನೊಪ್ಮ್ಪತ್ತಾರೆ (ವೇದಗಳಲ್ಲಿ ಹೇಳಿದವು - ಕೆಲವು ಹೊಸ ದೇವತೆಗಳಿದ್ದಾರೆ). ಜಿನ
>>>>> , ಅರ್ಹತ, ತೀರ್ಥಂಕರರು, ಪೂರ್ಣಜೀವರು .
>>>>> ಬೌದ್ಧ
>>>>> ಬೌದ್ಧರೂ ಪರಮಾತ್ಮನನ್ನು ಒಪ್ಪುವುದಿಲ್ಲ. ಜೀವನನ್ನು ಒಪ್ಪಿದರೂ ;ರಾಗ
>>>>> ದ್ವೇಷಾದಿಗಳನ್ನೂ-ಕರ್ಮಗಳನ್ನು ಜ್ಞಾನದಿಂದ ಬಿಡಿಸಿಕೊಂಡ ನಂತರ ಶೂನ್ಯದಲ್ಲಿ ಒಂದಾಗುವುದು
>>>>> (ಮೋಕ್ಷ) ; ಆದರೂ ಪೂರ್ಣಾತ್ಮನೆಂದು ಬುದ್ಧನನ್ನೇ ಸ್ವೀಕರಿಸಿ ಅವನನ್ನೇ ಈಶ್ವರ
>>>>> ಸ್ಥಾನಕ್ಕೇರಿಸಿದೆ. ಬೌದ್ಧ ದರ್ಶನವು ದೇವತೆಗಳನ್ನು ಸ್ವೀಕರಿಸುವುದು . ಆದರೆ ಜಗತ್ತೆಲ್ಲಾ
>>>>> ಕ್ಷಣಿಕ -ಭ್ರಮೆ ಎಂಬ ನಿಲುಮೆ ಅದರ ಪ್ರಕಾರ ಶೂನ್ಯವೇ ಸತ್ಯ .
>>>>> ಷಡ್ದರ್ಶನಗಳಲ್ಲಿ ದೇವರು ಸಂಪಾದಿಸಿ
>>>>>
>>>>> ಸಾಂಖ್ಯ
>>>>> ಪ್ರಾಚೀನ ಸಾಂಖ್ಯರಲ್ಲಿ ಈಶ್ವರನ ವಿಚಾರವಿಲ್ಲ. ಪ್ರಕೃತಿ ಪುರುಷರೇ ಎಲ್ಲಕ್ಕೂ ಕಾರಣ .
>>>>> ಪುರುಷರ ಸಾನ್ನಿಧ್ಯವು ಪ್ರಕೃತಿಗೆ - ಸೃಷ್ಟಿಗೆ ಪ್ರೇರಣೆಯನ್ರ್ನೆದಗಿಸುತ್ತದೆ.
>>>>> ಯೋಗ ದರ್ಶನ
>>>>> ಯೋಗ ದರ್ಶನದಲ್ಲಿ ಈಶ್ವರನನ್ನು ಒಪ್ಪಲಾಗಿದೆ. ಪತಂಜಲಿಯ ಪ್ರಕಾರ ಈಶ್ವರನು ನಿತ್ಯ,
>>>>> ಮುಕ್ತ , ಕರ್ಮಾತೀತ , ಸರ್ವಜ್ಞ ಸರ್ವಶಕ್ತ , ಸರ್ವವ್ಯಾಪಿ . ಹಿಂದಿನ ಋಷಿಗಳ ಗುರು ,
>>>>> ಸಮಾಧಿ ಪಡೆಯಲು , ಅನ ಅನುಗ್ರಹ ಬೇಕು ಎಂಬ ಅಭಿಪ್ರಾಯ ಹೋದಿದ್ದಾರೆ. ಜೀವರ ಶಿP -ರಕ್ಷೆ ಯ
>>>>> ಹೊಣೆ ಅವನಿಗಿಲ್ಲ. ದೇವನು ಮೋಕ್ಷದಾಯಕನೂ ಅಲ್ಲ .ಜಗತ್ತಿನ ಸಶಷ್ಟಿ, ಸ್ಥಿತತಿ,ಲಯಗಳಿಗೆ
>>>>> ಇವನು ಕಾರಣನಲ್ಲ . ಪ್ರಕೃತಿಗೆ ಕೇವಲ ಪ್ರೇರಕನಾಗಿ , -ನಿಮಿತ್ತ ಕಾರಣನಾಗಿದ್ದಾನೆ.
>>>>> ವೈಶೇಷಿಕ ದರ್ಶನ
>>>>> ವೈಶೇಷಿಕ ದರ್ಶನದಲ್ಲಿ -ಅದರ ಸೂತ್ರಗಳಲ್ಲಿ ಸ್ಪಷ್ಟವಾಗಿ ದೇವರ ಉಲ್ಲೇಖವಿಲ್ಲ.
>>>>> ಸೂತ್ರದ ವಿ ತದ್ವಚನಾತ್ ವಿ ಂಬಸೂತ್ರ-ವ್ಯಾಖ್ಯಾನಕ್ಕರ ವೇದದ ಆಧಾರದಮೇಲೆ , ತದ್ ಎಂದರೆ
>>>>> ಅದನ್ನು (ದೇವರನ್ನು) ಒಪ್ಪಲಾಗಿದೆ.
>>>>> ಮೀಮಾಂಸಾ ದರ್ಶನ
>>>>> ಮೀಮಾಂಸಾ ದರ್ಶನದಲ್ಲಿ ಜೈಮಿನಿ , ಶಬರಸ್ವಾಮಿ , ಇವರು ಈಶ್ವರನನ್ನು
>>>>> ನಿರಾಕರಿಸುತ್ತಾರೆ. ವೇದ -ಅದರ ಮಂತ್ರಗಳು , ಯಜ್ಞ ಕರ್ಮಗಳು ನಿತ್ಯ ಅಥವಾ ಪ್ರಾಮುಖ್ಯ .
>>>>> ದೇವತೆಗಳ ಅಸ್ಥಿತ್ವವನ್ನೂ ಒಪ್ಪುವುದಿಲ್ಲ .
>>>>> ವೇದಗಳು ಅನಾದಿ , ತಾನಾಗಿ ಸೃಷ್ಟಿಯಾದವು ಎನ್ನುತ್ತಾರೆ. ನಂತರದ ಮೀಮಾಂಸಕರು
>>>>> ದೇವರನ್ನು ಒಪ್ಪಿದ್ದಾರೆ . ಆದರೆ ದೇವರಿಗೆ ಮಹತ್ವ ವಿಲ್ಲ. ಕುಮಾರಿಲರು ವೇದಪುರುಷನನ್ನು
>>>>> ಒಪ್ಪಿದರೂ, ಈಶ್ವರನನ್ನು ಒಪ್ಪಿಲ್ಲ . ಕಾರಣ ದೇವನ್ನು ಒಪ್ಪಿದರೆ ಜಗತ್ತಿನಲ್ಲಿರುವ
>>>>> ಅನ್ಯಾಯವನ್ನು ವಿವರಿಸಲು ಅದಕ್ಕೆ ಕಾರಣ ಹೇಳಲು ಅಸಾದ್ಯವೆಂದು ಅವರ ಮತ,
>>>>> ಅದ್ವೈತ
>>>>> ಅದ್ವೈತ ದರ್ಶನದಲ್ಲಿ ನಿರ್ಗುಣನೂ, ನಿರಾಕಾರನೂ ಸಚ್ಚದಾನಂದ ರೂಪಿಯೂ ಆದ
>>>>> ಪರಬ್ರಹ್ಮನನ್ನು ಒಪ್ಪಲಾಗಿದೆ. ಬ್ರಹ್ಮ ವೊಂದೇ ಸತ್ಯ ,ಅದೇ ಪರಬ್ರಹ್ಮ , ಮಾಯೆ ಸೇರಿದಾಗ ,
>>>>> ಅದು ಅಪರ ಬ್ರಹ್ಮ ವೆನಿಸಿ ,ಜಗತ್ತಿನ ಸೃಷ್ಟಿ , ಸ್ಥಿತಿಲಯಗಳಿಗೆ , ಉಪಾದಾನ ಮತ್ತು
>>>>> ನಿಮಿತ್ತ ಕಾರಣವಾಗಿದೆ.
>>>>> ಅವಿದ್ಯೆಯ ಮಾಯೆಎ) ಆವರಣದಿಂದ , ಅದೇ ಬ್ರಹ್ಮ ವು ಜೀವ ಗಳೆ/ನೆನಿಸುತ್ತದೆ/ ವೆ. ಆದರೆ
>>>>> ವ್ಯವಹಾರಿಕ ಸತ್ತೆಯ ದೃಷ್ಟಿಯಿಂದ ಉಪಸನಾ ದೃಷ್ಟಿಯಿಂದ , ಈಶ್ವರನನ್ನು (ಸಗುಣ ಬ್ರಹ್ಮ)
>>>>> ಒಪ್ಪಲಾಗಿದೆ. ಆದರೆ ಪಾರಮಾರ್ಥಿಕ ದೃಷ್ಟಿಯಿಂದ ,ಸಗುಣ ಬ್ರಹ್ಮ , ನಿರ್ಗುಣಬ್ರಹ್ಮ
>>>>> ಜೀವರಲ್ಲಿ ಬೇಧವಿಲ್ಲ. ; ಜಗತ್ತು ಒಂದು ಮಿಥ್ಯೆ ; (ವಿವರಿಸಲಾಗದ ವಸ್ತು)ಅದು ಬ್ರಹ್ಮ 
>>>>> ನಿಂದ
>>>>> ಬೇರೆಯಿಲ್ಲ.ಅಥವಾ -ಇಲ್ಲವೇ ಇಲ್ಲ.
>>>>> ಇತರೆ ದರ್ಶನಗಳಲ್ಲಿ ದೇವರು ಸಂಪಾದಿಸಿ
>>>>>
>>>>> ಭಕ್ತಿ ಪಂಥ ವಿಶಿಷ್ಟಾದ್ವೈತ
>>>>>
>>>>> ರಾಮಾನುಜರ ವಿಶಿಷಾದ್ವೈತದಲ್ಲಿ ನಿರ್ಗುಣ ಬ್ರಹ್ಮಕ್ಕೆ ಸ್ಥಾನವಿಲ್ಲ.
>>>>> ಸಗುಣ ಸವಿಶೇಷ ಬ್ರಹ್ಮವೇ ಈಶ್ವರ. ಅವನೇ ವಿಷ್ಣು ; ಅವನೇ ಶ್ರೀಮನ್ನಾರಾಯಣ . ಅವನು
>>>>> ಲಕ್ಷ್ಮಿಯೊಡನೆ ವೈಕುಂಠದಲ್ಲಿ ವಾಸಿಸುತ್ತಾನೆ . ಈ ಈಶ್ವರನಲ್ಲಿಯೇ ಚಿತ್ (ಚೇತನ) ಅಚಿತ್
>>>>> ಮತ್ತು ಸಗುಣ ಈಶ್ವರ ತತ್ವವನ್ನು ಕಾಣಬಹುದು.ವನೇ ಏಕಮಾತ್ರ ಸತ್ತೆ (ಸತ್ಯ -ಇರುವವನು) . 
>>>>> ಜೀವ
>>>>> , ಜಗತ್ತು ಅವನನ್ನು ಅವಲಂಬಿಸಿಕೊಂಡಿದ್ದೂ ಬೇರೆಯಾಗಿವೆ. ಆದರೆ ಬಿಡಿಸಲಾಗದಂತೆ
>>>>> ಹೊಂದಿಕೊಂಡಿವೆ. ಪ್ರಲಯ ಕಾಲದಲ್ಲಿ ಜೀವ ಜಗತ್ತುಗಳು ಸೂಕ್ಷ್ಮಾವಸ್ಥೆಯಲ್ಲಿ ಈಶ್ವರನಲ್ಲಿ
>>>>> ಅಡಗಿರುತ್ತವೆ. ಪುನಃ ಸೃಷ್ಟಿಯಾದಾಗ ಪ್ರಕಟವಾಗುತ್ತವೆ . ಪರಮಾತ್ಮನಾದ ವಾಸುದೇವನು 
>>>>> ಜಗತ್ತಿನ
>>>>> ಸೃಷ್ಟಿ, ಸ್ಥಿತಿ , ಲಯಗಳಿಗೆ ಉಪಾದಾನ ಹಾಗೂ ನಿಮಿತ್ತ ಕಾರಣನಾಗಿದ್ದಾನೆ. ಸ್ವತಃ ಅವನಲ್ಲಿ
>>>>> ಯಾವ ಬದಲಾವಣೆಯೂ ಇಲ್ಲ. ಅವನಿಗೆ ಅಪ್ರಾಕೃತವಾದ ಅಂದರೆ ದಿವ್ಯವಾದ ದೇಹವಿದೆ. ಹಾಗಿದ್ದರೂ
>>>>> ಕರ್ಮದ ಬಂಧಕ್ಕೆ ಸಿಲುಕುವುದಿಲ್ಲ. ಆದರೆ ಅವನು ಕರ್ಮಾಧ್ಯಕ್ಷ.ಅವನ ಅನುಗ್ರಹದಿಂದ
>>>>> ಮುಕ್ತಿಯನ್ನು ಪಡೆಯಬಹುದು.
>>>>> ಮಧ್ವರ ದ್ವೈತ ಮತ್ತು ದೇವರು. ಸಂಪಾದಿಸಿ
>>>>>
>>>>> ಮಧ್ವರ ಮತದಲ್ಲಿಯೂ ದೇವರನ್ನು ವಿಷ್ಣುವೆಂದು ಕರೆಯಲಾಗಿದೆ. ಅವನ ಗುಣಗಳೆಲ್ಲಾ
>>>>> ರಾಮಾನುಜ ಮತದಂತೆ ; ಆದರೆ ರಾಮಾನುಜರಂತೆ ಜೀವ ಜಗತ್ತುಗಳು ಪರಮಾತ್ಮನ ಶರೀರವೆಂದು
>>>>> ಒಪ್ಪುವುದಿಲ್ಲ. ಅವು ಅವನಿಗಿಂತ ಭಿನ್ನ ವಾದವು. ಜಗತ್ತಿನ ಸೃಷ್ಟಿಗೆ ಅವನು ನಿಮಿತ್ತ ಕಾರಣ
>>>>> ಮಾತ್ರಾ ; ಪ್ರಕೃತಿಯು ಉಪಾದಾನ ಕಾರಣ.
>>>>> ನಿಂಬಾರ್ಕರು - ದ್ವೈತಾದ್ವೈತ ಸಂಪಾದಿಸಿ
>>>>>
>>>>> ನಿಂಬಾರ್ಕರು ತಮ್ಮ ದ್ವೈತಾದ್ವೈತ ಸಿದ್ಧಾಂತದಲ್ಲಿ ,ಈಶ್ವರ ಆತ್ಮೀಯ ;
>>>>> ಅವನೇಶ್ರೀಕೃಷ್ಣ ; ಅವನ ಗುಣಗಳು ರಾಮಾನುಜ -ಮಧ್ವ ಮತದಂತೆ , ಆದರೆ ದೇವರು ವಿಶ್ವ ಸೃಷಿಗೆ
>>>>> ಉಪಾದಾನ ಕಾರಣ ಮತ್ತು ನಿಮಿತ್ತ ಕಾರಣ. ಜಗತ್ತಿನ ಜಡ ಚೇತನಗಳು ಬೇರೆಯಾಗಿ ಕಂಡರೂ, ಬ್ರಹ್ಮದ
>>>>> ಪರಿಣಾಮವಾಗಿದ್ದು , ತತ್ವತಃ ಬ್ರಹ್ಮವೇ ಆಗಿದೆ.
>>>>> ವಲ್ಲಭರ -ಶುದ್ಧಾದ್ವೈತ ಸಂಪಾದಿಸಿ
>>>>>
>>>>> ವಲ್ಲಭಾಚಾರ್ಯರ ಶುದ್ಧಾದ್ವೈತವೂ ಸಾಕಾರ ಈಶ್ವರನನ್ನು ಪ್ರತಿಪಾದಿಸುತ್ತದೆ . ಈ
>>>>> ಬ್ರಹ್ಮನೇ (ಕೃಷ್ಣನೇ), ಸತ್ ಚಿತ್ , ಆನಂದ ಮತ್ತು ರಸನಾಗಿದ್ದಾನೆ . ಅನೋರಣಿಯಾನ್
>>>>> ಮಹತೋಮಹೀಯಾನ್ ಆಗಿರುವವನೂ ಅವನೇ. ಕರ್ತೃವೂ ಅವನೇ ಭೋಕ್ತೃವೂ ಅವನೇ ; ಈ ವಿಶ್ವ ಅವನ ಲೀಲೆ 
>>>>> .
>>>>> ಅವನು ಅಧಿದೈವಿಕದಲ್ಲಿ ಪರಬ್ರಹ್ಮ , ಅಧ್ಯಾತ್ಮಿಕದಲ್ಲಿ ಅಕ್ಷರಬ್ರಹ್ಮ ; ಅಧಿಭೌತಿಕದಲ್ಲಿ
>>>>> ಜಗತ್ತು . ಕಾರ್ಯ ಕಾರಣಗಳು ಬೇರೆ ಅಲ್ಲವಾದುದರಿಂದ , ಜಗತ್ತು ಬ್ರಹ್ಮ ರೂಪವೇ ಆಗಿದೆ. 
>>>>> ಕಾರಣ
>>>>> ಅವನು ಜಗತ್ತಿಗೆ ಉಪಾದಾನ ,ಮತ್ತು ನಿಮಿತ್ತ ಕಾರಣನಾಗಿದ್ದಾನೆ.
>>>>> ಚೈತನ್ಯ ಪ್ರಭು
>>>>>
>>>>> ಚೈತನ್ಯರ ಪ್ರಕಾರ ಬ್ರಹ್ಮ ಅಥವಾ ಶ್ರೀಕೃಷ್ಣ ಸಚ್ಚಿದಾನಂದ ರೂಪಿ ; ಸಕಲ
>>>>> ಕಲ್ಯಾಣಗುಣನಿಧಿ ; ಅವನು ಬೇಧಗಳಿಂದ ಶೂನ್ಯನಾದವನು ; ಅಚಿಂತ್ಯ ; ನಕಾರಾತ್ಮಕವಾಗಿ ಕಂಡರೂ 
>>>>> ,
>>>>> ಏಕಾತ್ಮ ; ಸರ್ವವ್ಯಾಪಿ ; ಅವನ ಮೂರು (೪?) ಶಕ್ತಿಗಳೆಂದರೆ ಸ್ವರೂಪ ಶಕ್ತಿ , ತಟಸ್ಥ 
>>>>> ಶಕ್ತಿ
>>>>> , ಜೀವಶಕ್ತಿ ಅಥವಾ ಮಾಯಾ ಶಕ್ತಿ. ಸ್ವರೂಪ ಶಕ್ತಿಯಿಂದ ಸತ್ತೆ ವ್ಯಾಪ್ತಿ , ಜ್ಞಾನ, ಆನಂದ 
>>>>> ;
>>>>> ತಟಸ್ಥ ಶಕ್ತಿಯಿಂದ ಜೀವಿಗಳ ಉತ್ಪತ್ತಿ ; (ಜೀವ ಶಕ್ತಿ) ಮಾಯಾಶಕ್ತಿಯಿಂದ ಜಗತ್ತು
>>>>> ಉಂಟಾಗುತ್ತದೆ.ಈ ಮೂರು ಶಕ್ತಿಗಳು ಒಟ್ಟಾಗಿ -ಪರಾಶಕ್ತಿ- ಎನಿಸುತ್ತದೆ. ಸ್ವರೂಪ 
>>>>> ಶಕ್ತಿಯಿಂದ
>>>>> ಜಗತ್ತಿಗೆ ನಿಮಿತ್ತ ಕಾರಣ ; ಮಾಯಾ ಶಕ್ತಿ ಮತ್ತು ಜೀವ ಶಕ್ತಿಯಿಂದ ಉಪಾದಾನ ಕಾರಣ. ಅವನು
>>>>> (ದೇವನು, ಬ್ರಹ್ಮ ,ಶ್ರೀಕೃಷ್ಣ ) ಅನೇಕ ಅವತಾರವೆತ್ತುತ್ತಾನೆ . ಆದರೆ ಶ್ರೀ ಕೃಷ್ಣನು
>>>>> ಮಾತ್ರಾ ಪರಬ್ರಹ್ಮವೇ .
>>>>> ಶೈವ ಸಿದ್ಧಾಂತಗಳಲ್ಲಿ ದೇವರು ಸಂಪಾದಿಸಿ
>>>>>
>>>>> ಶೈವ ಸಿದ್ಧಾಂತಗಳ ಪ್ರಕಾರ ಶಿವನೇ (ಪರಬ್ರಹ್ಮ) ಪ್ರಪಂಚದ ಸೃಷ್ಟಿ -ಸ್ಥಿತಿ -ಲಯಗಳಿಗೆ
>>>>> ಕಾರಣ. ಅವನ ಆಣವ ಮಲದ (ಅವಿದ್ಯೆ) ಸಂಬಂಧದಿಂದ ಜಗತ್ತು ಹೊರಹೊಮ್ಮುತ್ತದೆ. ಕಾಲ-ದಂತೆ
>>>>> ಅವನಲ್ಲಿ ಬದಲಾವಣೆ ಇಲ್ಲ . ಅವನ ಸಂಕಲ್ಪದಿಂದ ಎಲ್ಲಾ ಬದಲಾವಣೆಗಳಾಗುತ್ತವೆ. ಜೀವಿಗಳ
>>>>> ಬಂಧವನ್ನು ಹರಿಸುವುದರಿಂದ ಅವನು -ಹರ ; ಮಂಗಳಕರನಾದುದರಿಂದ ಅವನು -ಶಿವ ; ಅವನು ನಿರ್ಗುಣ 
>>>>> ;
>>>>> ನಿರ್ಗುಣನೆಂದರೆ ತ್ರಿಗುಣಾತೀತ ; ಪೂರ್ಣ ; ವಿಶ್ವಾತ್ಮಕ ; ವಿಶ್ವಾತೀತ ; ಸಾಕಾರನೂ ಹೌದು 
>>>>> ;
>>>>> ನಿರಾಕಾರನೂ ಹೌದು . ಅವನಿಗೆ ಪಂಚ ಕೃತ್ಯಗಳುಂಟು : -ಅವು ಸೃಷ್ಟಿ , ಸ್ಥಿತಿ , ಲಯ ,
>>>>> ತಿರೋಧಾನ , ಅನುಗ್ರಹ .
>>>>> ಕಾಶ್ಮೀರ ಶೈವ -ಪ್ರತ್ಯಭಿಜ್ಞಾ ದರ್ಶನ
>>>>> ಕಾಶ್ಮೀರ ಶೈವದ ಪ್ರಕಾರ ಶಿವನೇ ಪರಮ ತತ್ವ . ಈ ತತ್ವವು ಶಿವ-ಶಕ್ತಿಯರ ಸಾಮ್ಯ
>>>>> ರೂಪದ್ದು. ಅವನು ಚೈತನ್ಯ-ಎಲ್ಲದರಲ್ಲೂ ವ್ಯಾಪಿತ ; ವಿಶ್ವಾತ್ಮಕನಾಗಿ
>>>>> ಪ್ರತಿವಸ್ತುವಿನಲ್ಲಿದ್ದಾನೆ . ಅಲ್ಲದೆ ವಿಶ್ವೋತ್ತೀರ್ಣ , ವಿಶ್ವದ ಹೊರಗೂ ಇದ್ದಾನೆ . ಈ
>>>>> ಜಗತ್ತು ಶಿವನಿಂದ ಬೇರೆಯಲ್ಲ . ಅವನ ಪ್ರಧಾನ ಶಕ್ತಿಗಳು : ಚಿತ್ , ಆನಂದ , ಇಚ್ಛಾ , 
>>>>> ಜ್ಞಾನ
>>>>> , ಮತ್ತು ಕ್ರಿಯಾ . ಕಾಶ್ಮೀರೀ ಶೈವವು ಅದ್ವೈತವನ್ನೇ ಹೇಳಿದರೂ ಶಿವನಿಗೆ ಕರ್ತೃತ್ವವನ್ನು
>>>>> ಹೇಳುತ್ತದೆ. ಅವನೇ ನಿಪುಣ ನಟನಾಗಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಮ್ಳತ್ತಾನೆ .
>>>>> ಪಾಶ್ಚಿಮಾತ್ಯ ತತ್ವಶಾಸ್ತ್ರ ಮತ್ತು ದೇವರು ಸಂಪಾದಿಸಿ
>>>>>
>>>>> 
>>>>> A depiction of the Trinity-ತತ್ವ-ತ್ರಯ consisting of God the Father-ದೇವ
>>>>> ಪಿತ, God the Son-ದೇವಪುತ್ರ (Jesus-ಏಸು), and God the Holy Spirit-ಪವಿತ್ರಶಕ್ತಿ
>>>>> ವೈಜ್ಞಾನಿಕ ವಿಚಾರ ವಾದಿಗಳು ಅನೇಕರು "ಇಲ್ಲದ" ವಿಚಾರದಲ್ಲಿ ಅನಗತ್ಯ ದೀರ್ಘ ಚರ್ಚೆ
>>>>> ಅನಗತ್ಯವೆಂದು ಅಭಿಪ್ರಾಯ ಪಡುತ್ತಾರೆ ಮತ್ತು ಈ ಚರ್ಚೆಗೆ ಸಮಯ ವ್ಯರ್ಥವೆಂದು ಹೇಳುತ್ತಾರೆ 
>>>>> .
>>>>> ಆದರೆ ಪಶ್ಚಿಮದ ಆಸ್ತಿಕರು ದೇವನು ಒಂದು ಸರ್ವಶಕ್ತಿಯುಳ್ಳ ದೇವಲೋಕದಲ್ಲಿರುವ ಒಂದು
>>>>> ವ್ಯಕ್ತಿಯೆಂದು, ಅವರ ಮತ ಗ್ರಂಥದ ಆಧಾರದ ಮೇಲೆ ನಂಬುಗೆ ಇಟ್ಟು ಒಪ್ಪಿದ್ದಾರೆ . ಅವರ
>>>>> ಮತಗ್ರಂಥದ ಆದಾರದ ಮೇಲೆ ದೇವರನ್ನು ಒಪ್ಪುವ ಅವರು ಡಾರ್ವಿನ್ನನ ಜೀವವಿಕಾಸ ವಾದವನ್ನೂ ,
>>>>> ವೈಜ್ಞಾನಿಕ ವಿಶ್ವ ವಿಕಾಸ ವಾದವನ್ನೂ, ತಿರಸ್ಕರಿಸುತ್ತಾರೆ.
>>>>>
>>>>> ಮುಖ್ಯ ಮತಧರ್ಮ ಕ್ರಿಶ್ಚಿಯನ್ನರು ಮುಖ್ಯವಾಗಿಮೂರು ತತ್ವಗಳನ್ನು ಅಂತಿಮ ದೈವಿಕ
>>>>> ಶಕ್ತಿಗಳೆಂದು ನಂಬುತ್ತಾರೆ.
>>>>> ದೇವಲೋಕದ ಪಿತ (ದೇವ ಪಿತ) ;
>>>>> ದೇವ ಪುತ್ರ (ಏಸು ) ;
>>>>> ಪವಿತ್ರಾತ್ಮ ಅಥವಾ ಪವಿತ್ರ ಶಕ್ತಿ;
>>>>> ಎಂದು, ಈ ಮೂರು ತತ್ವಗಳುಳ್ಳ ದೇವನನ್ನು ನಂಬಬೇಕೆಂದು ವಿಧಿಸಲಾಗಿದೆ
>>>>> ದೇವರು ಇದ್ದಾನೋ ಇಲ್ಲವೋ-ವಾದ-ವಿವಾದ ಸಂಪಾದಿಸಿ
>>>>>
>>>>> ಈಶ್ವರನ ಅಸ್ತಿತ್ವ~ ನಿರಾಕರಣೆ -ಸಮರ್ಥನೆ .
>>>>> ಈಶ್ವರನು (ದೇವನು) ಪ್ರತ್ಯಕ್ಷ ಪ್ರಮಾಣಕ್ಕೆ ವಿಷಯನಲ್ಲ (ಕಣ್ಣಿಗೆ ಕಾಣುವುದಿಲ್ಲ)
>>>>> .ಅದರಿಂದ ಅನುಮಾನ ಅಥವಾ ಶಬ್ದಪ್ರಮಾಣವನ್ನು ಆಶ್ರಯಿಸಿ ಈಶ್ವರನು ಇದಾನೆಂದು
>>>>> ನಿರೂಪಿಸಬೇಕಾಗುವುದು. ಮೀಮಾಂಸಕರಾದ ಕುಮಾರಿಲರು ಅನುಮಾನ ಪ್ರಮಾಣದಿಂದಲೂದೇವರಿದ್ದಾನೆಂದು
>>>>> ಸಾಧಿಸಲುಬರುವುದಲ್ಲವೆನ್ನುತ್ತಾರೆ .
>>>>> ಅದಕ್ಕೆ ಉದಯನನು ತನ್ನ ನ್ಯಾಯ ಕುಸುಮಾಂಜಲಿಯಲ್ಲಿ , ಹೂಡುವ ವಾದವು ಪ್ರಸಿದ್ಧವಾಗಿದೆ.
>>>>> (ನ್ಯಾಯ ದರ್ಶನ)
>>>>>
>>>>> ದೇವರು ಇದ್ದಾನೆ ಎಂಬ ಸಮರ್ಥನೆಯ ವಾದ
>>>>> ಉದಯನನ ಸಮರ್ಥನೆ ಸಂಪಾದಿಸಿ
>>>>> ಕಾರ್ಯಕಾರಣ ಯೋಜನದೃತ್ಯಾದೇಃ | ಪದಾತ್ ಪ್ರತ್ಯಯ ಶ್ರುತೇಃ |
>>>>> ವಾಕ್ಯಾತ್ , ಸಾಂಖ್ಯಾ ವಿಷೇಶಾಚ್ಯ ಸಾಧ್ಯೋ , ವಿಶ್ವ ವಿದವ್ಯ : ||
>>>>> ವ್ಯಾಖ್ಯಾನ :-
>>>>> ಕಾರ್ಯಾತ್ : ಜಗತ್ತು ಒಂದು ಕಾರ್ಯ ; ಹಾಗಾಗಿ ಇದಕ್ಕೊಂದು ನಿಮಿತ್ತಕಾರಣ ಬೇಕು ;
>>>>> ಅವನೇ ಈಶ್ವರ. ಉದಾಹರಣೆ : ಮಡಕೆಗೆ ಕುಂಬಾರನಿದಂತೆ.
>>>>> ಆಯೋಜನಾತ್ : ಜಗತ್ತಿನ ಉಪಾದಾನ ಕಾರಣಗಳಾದ ಪರಮಾಣುಗಳ (ಜಡ) ಸಂಯೋಜನೆ ಕ್ರಿಯೆಗೆ,
>>>>> ಚೇತನ ಶಕ್ತಿ ಬೇಕು. ಅವನೇ ಈಶ್ವರ.
>>>>> ಧೃತ್ಯಾದೇ :(ಧರಿಸುವಿಕೆ): ಗ್ರಹ, ತಾರೆ, ನಕ್ಷತ್ರಗಳು ನಿಂತಿದ್ದರೆ ಅದು ಈಶ್ವರನ
>>>>> ಮಹಿಮೆ. ಇಲ್ಲದಿದ್ದರೆ ಎಲ್ಲಾ ನಾಶವಾಗುತ್ತಿತ್ತು.
>>>>> ಪದಾತ್ : ಪದಗಳು ಅರ್ಥವನ್ನು ಸೂಚಿಸುತ್ತವೆ. ಅದು ಅವನ ಶಕ್ತಿಯಿಂದ . ಕಲಾ ಕೌಶಲ್ಯಗಳೂ
>>>>> ಅವನ ಶಕ್ತಿಯಿಂದ.
>>>>> ಪ್ರತ್ಯಯತಃ : ಯಾವ ತಪ್ಪೂ ಇಲ್ಲದ ವೇದಗಳ ರಚನೆ , ಈಶ್ವರನಿಂದ ಮಾತ್ರಾ ಸಾಧ್ಯ.
>>>>> ಶ್ರುತೇ : ವೇದಗಳು ಈಶ್ವರನ ಅಸ್ತಿತ್ವವನ್ನು ಹೇಳುತ್ತವೆ.
>>>>> ವಾಕ್ಯಾತ್ : ವೇದ ವಾಕ್ಯಗಳು ವಿಧಿ -ನಿಷೇಧವನ್ನು ಹೇಳುತ್ತವೆ. ಆ ಧರ್ಮ ಪ್ರವರ್ತಕನು
>>>>> ಈಶ್ವರ.
>>>>> ಸಂಖ್ಯಾ ವಿಶೇಷಾತ್ : ಎರಡು ಪರಮಾಣುಗಳ ಸಂಯೋಗ , ದ್ವಣುಕ ಉತ್ಪತ್ತಿ ಸಂಖ್ಯಾದ್ವಯದಿಂದ
>>>>> ಆಗುತ್ತದೆ. ಈ ದ್ವಿತ ಸಂಖ್ಯೆಯ ಅಪೇಕ್ಷಾ ಬುದ್ಧಿ ಜನ್ಯ. ಅದು ಚೇತನಾ ವ್ಯಕ್ತಿಯಿಂದ
>>>>> ಆಗತಕ್ಕದ್ದು. ಅವನೇ ಈಶ್ವರ.
>>>>> ಅದೃಷ್ಟಾತ್  : ನಮ್ಮ ಕರ್ಮಫಲಗಳಿಗೆ ಅದೃಷ್ಟವು ಕಾರಣ. ಜಡವಾದ ಅದೃಷ್ಟವನ್ನು ,
>>>>> ಪ್ರೇರಿಸುವ ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುತ್ತದೆ. ಆ ಚೇತನ ವ್ಯಕ್ತಿಯೇ
>>>>> ಈಶ್ವರ.(ನ್ಯಾಯ ದರ್ಶನ)
>>>>> (ಕರ್ಮಫಲವನ್ನು ಅದೃಷ್ಟ ವಸ್ತು ಪ್ರೇರಿಪಿಸುವುದು ; ಈ ಕೆಲಸವನ್ನು ಚೇತನ-ವ್ಯಕ್ತಿಯೇ
>>>>> ಮಾಡಬೇಕಾಗುವುದು. ಇದು ಈಚೇತನ ದೇವರು. ಯೋಗ ಸೂತ್ರದಂತೆ ನಮ್ಮಲ್ಲಿರುವ ,
>>>>> ಭೂತ,ಭವಷತ್,ವರ್ತಮಾನ , ಜ್ಞಾನ ಶಕ್ತಿ , ಈಶ್ವರನಿಂದಲೇ ಬಂದಿರಬಹುದು. ಅದಕ್ಕೆ ಶ್ರತಿ ಯು
>>>>> ಪ್ರಮಾಣ, ಅನುಮಾನ ಮತ್ತು ಶ್ರುತಿ ಇವು ಪ್ರಮಾಣ ,)
>>>>> ವೇದಾಂತಿಗಳು ಈಶ್ವರನನ್ನು ತಿಳಿಯಲು , ವೇದಗಳು ಮಾತ್ರಾ ಪ್ರಬಲ ಪ್ರಮಾಣವೆನ್ನುತ್ತಾರೆ
>>>>> , ಅದಕ್ಕೆ ಅನುಮಾನ ಪ್ರಮಾಣಗಳನ್ನು ನಿರಾಕರಿಸುವುದಿಲ್ಲ . ಆದರೆ ಶ್ರೀ ಶಂಕರರು , ಅನುಮಾನ
>>>>> ಪ್ರಮಾಣದಿಂದ , ಈ ಜಗತ್ತನ್ನು ಕಾರ್ಯವೆಂದು ಒಪ್ಪಿದರೂ , ಅದಕ್ಕೆ ಈಶ್ವರನು ಕಾರಣವೋ ಬೇರೆ
>>>>> ಕಾರಣವೋ ಎಂದು ನಿರ್ಧರಿಸುವುದು /ತೀರ್ಮಾನಿಸುವುದು ಕಷ್ಟವೆನ್ನುತ್ತಾರೆ. (ಬ್ರ,ಊ. ಭಾಷ್ಯ 
>>>>> :
>>>>> ೨.೨) ಪ್ರಸಿದ್ಧ ಮೀಮಾಂಸಕರಾದ , ಕುಮಾರಿಲ ಭಟ್ಟರದೂ ಅದೇ ಅಭಿಪ್ರಾಯ.
>>>>> ಈಶ್ವರಾಸ್ತಿತ್ವದ ನಿರಾಕರಣೆಯ ವಾದ ಸಂಪಾದಿಸಿ
>>>>> ಈಶ್ವರನ ಅಸ್ತಿತ್ವವನ್ನು ನಿರಾಕರಿಸುವವರು ಕಾರ್ಯ-ಕಾರಣ ವಾದವು ಪ್ರಬಲವಾದುದೆಂದು
>>>>> ಅಂಗೀಕರಿಸಿದ್ದಾರೆ. ಏಕೆಂದರೆ ದೇವರು ಇದ್ದಾನೆ ಎನ್ನುವುದಕ್ಕೆ ಹೇಗೋ ಹಾಗೆ
>>>>> ಇಲ್ಲವೆನ್ನುವುದಕ್ಕೂ ಅದೇ ವಾದವನ್ನು ಉಪಯೋಗಿಸುತ್ತಾರೆ.
>>>>> ಈಶ್ವರನ ನಿರಾಕರಣೆ ವಾದಗಳು
>>>>> ೧. ಕಾರ್ಯಕಾರಣವಾದದಲ್ಲಿ , ಮುಖ್ಯ ಅಂಶ ‘ಜಗತ್ತು ಒಂದು ಕಾರ್ಯ‘
>>>>> (ಸೃಷ್ಟಿಸಲ್ಪಟ್ಟಿದ್ದು) ಎಂಬುದಾಗಿದೆ. ಜೈನರಲ್ಲಿ ಪ್ರಸಿದ್ಧನಾದ ಗುಣರತ್ನನು ಜಗತ್ತನ್ನು
>>>>> ಕಾರ್ಯವೆಂದೇ ಒಪ್ಪುವುದಿಲ್ಲ. ಏಕೆಂದರೆ ‘ಅವಯುವ‘ ಸಂಬಂಧವಾಗಿದ್ದರೆ ಮಾತ್ರಾ ಕಾರ್ಯವೆಂದು
>>>>> ಪರಿಗಣಿಸಬಹುದು (ಅವಯುವ=ಮೂರು ಆಯಾಮದ ವಸ್ತು /ತ್ರೀ ಡೈಮೆನ್ಶನಲ್ ಮ್ಯಾಟರ್) .ಆದರೆ 
>>>>> ಆಕಾಶವು
>>>>> (ಪಂಚ ಭೂತಗಳಲ್ಲಿ ಒಂದು.) ಕಾರ್ಯವಾಗಲಾರದು ;ಎಲ್ಲಾ ವಸ್ತುಗಳಿಗೂ ಆಶ್ರಯವಾದದ್ದು . ಅಥವಾ
>>>>> (ವಸ್ತುಗಳು) ‘ಸಾವಯುವ‘ ವೆಂದರೆ (ಮೂಲದ್ರವ್ಯ) ಸಮವೇತ ದ್ರವ್ಯತ್ವ ಅಥವಾ ದ್ರವ್ಯದಲ್ಲಿ
>>>>> ದ್ರವ್ಯತ್ವ (ಎಲಿಮೆಂಟ್?)ಎಂದರೂ ಸರಿಯಾಗದು -ಮೂಲದಲ್ಲಿರುವುದು ಎಂದರೂ ಸರಿಯಾಗದು.
>>>>> ಬುದ್ಧಿಗೆ ಗೋಚರವೆಂದರೆ - `ಆತ್ಮ` ವು ‘ಕಾರ್ಯ‘ ವೆನ್ನಬೇಕಾಗುವುದು. ಆದ್ದರಿಂದ ಜಗತ್ತು
>>>>> ‘ಕಾರ್ಯ‘ ವೆಂದು ಹೇಳುವುದು ಸರಿಯಲ್ಲ.
>>>>> ಜಗತ್ತಿನ ಸೃಷ್ಟಿ ಕಾರ್ಯವಲ್ಲದಿದ್ದ ಮೇಲೆ ಅದಕ್ಕೆ ಕಾರಣವೆಂದು ಈಶ್ವರನನ್ನು
>>>>> ಹೇಳಲುಬರುವುದಿಲ್ಲ. ಆದ್ದರಿಂದ ಈಶ್ವರನನ್ನು ಒಪ್ಪಬೇಕಾದ್ದಿಲ್ಲ.
>>>>> ೨.ಈಶ್ವರನು ಒಬ್ಬನೇ ಜಗತ್ತನ್ನು ಸೃಷ್ಟಿಸಿದನೇ ? ಈ ವಿಶಾಲ ಜಗತ್ತು
>>>>> ಒಬ್ಬನಿಂದಾಗಲಾರದು . ಮನೆ ಕಟ್ಟಲು ಅನೇಕ ಜನರಿರುವಂತೆ ಜಗತ್ ಸೃಷ್ಟಿಗೆ ಅನೇಕರು
>>>>> ಬೇಕಾಗುವುದು. ; ಅದೂ ಸಿದ್ಧಿಸದು (ತರ್ಕಕ್ಕೆ ಒಪ್ಪದು) ಏಕೆಂದರೆ ಅವರಲ್ಲಿ ಸದಾ
>>>>> ಮತಬೇಧವಿದ್ದು ಕೆಲಸ ಕೆಡುವುದು.
>>>>> ೩. ಸಾಂಖ್ಯ ಸೂತ್ರದಲ್ಲಿ ‘ಈಶ್ವರಾಸಿದ್ಧೇ‘ (ಈಶ್ವರನು ಇದ್ದಾನೆಂದು ಸಾಧಿಸಲು
>>>>> ಸಾಧ್ಯವಿಲ್ಲ), ಎಂಬ ಮಾತಿದೆ. ಅದರ ವ್ಯಾಖ್ಯಾನ ಮಾಡುತ್ತಾ ‘ಅನಿರುದ್ಧಪಂಡಿತ‘ , -ಅವನು
>>>>> ಶರೀರವಿರುವವನೋ ಇಲ್ಲದವನೋ ? ಶರೀರವಿದೆಯೆಂದರೆ ಅವನಿಗೆ ಮಿತಿಗಳಿವೆ. ಶರೀರ ಹೇಗಂಟಾಯಿತು
>>>>> ಎಂಬ ಪ್ರಶ್ನೆ ಏಳವುದು . ಇಲ್ಲವೆಂದರೆ ಅವನಿಗೆ (ದೇವನಿಗೆ) ಇಚ್ಛೆಯೂ ಉಂಟಾಗದು. ಎಂದರೆ
>>>>> ಜಗತ್ತಿನ ಸೃಷ್ಟಿಯೂ ಅವನಿಂದಾಗದು , ಇದು ಪ್ರತಿವಾದ.
>>>>> ೪.ಈಶ್ವರನು ಸರ್ವವ್ಯಾಪಿಯಾಗಿದ್ದರೆ , ಬೇರೆಯವರಿಗೆ ಸೃಷ್ಟಿಸಲು ಎನೂ
>>>>> ಇಲ್ಲವೆಂದಾಗುವುದು. ಎಲ್ಲಾ ಅವನೇ, ಆದ್ದರಿಂದ ಅದು ಸರಿಯಲ್ಲ. ಹಾಗಿದ್ದರೆ ದೇವರು 
>>>>> ನರಕದಲ್ಲೂ
>>>>> ಇದ್ದಾನೆ ಎಚಿದಂತೆ ಆಯಿತು. ಆಗ ಅದು ನರಕವೇ ಆಗದು . ನರಕದಲ್ಲಿ ಇಲ್ಲವೆಂದರೆ ಅನಮು
>>>>> ಸರ್ವವ್ಯಾಪಿಯಾಗಲಾರ. ಆದ್ದರಿಂದ ದೇವರ ಕಲ್ಪನೆಯೇ ಸರಿಯಲ್ಲ.
>>>>> ೫. ಈಶ್ವರನು ಸ್ವತಂತ್ರನೆಂದರೆ ಅವನ ಸೃಷ್ಟಿಯಲ್ಲಿರುವವರೆಲ್ಲಾ
>>>>> ಸುಖಿಗಳಾಗಿರಬೇಕಿತ್ತು. ದುಃಖವನ್ನೇ ಸೃಷ್ಟಿಸುತ್ತಿರಲಿಲ್ಲ. ಸುಖ ದುಃಖಗಳು
>>>>> ಕರ್ಮಾಧೀನವೆಂದರೆ ಈಶ್ವರನಿಗೆ ಸ್ವತಂತ್ರ ಶಕ್ತಿ ಇಲ್ಲ ಎಂದಾಗುವುದು . ಕರ್ಮವೇ
>>>>> ಪ್ರಬಲವಾಗುವುದು . ಆದ್ದರಿಂದ ಸರ್ವಶಕ್ತ ದೇವರಿದ್ದಾನೆ ಎಂದು ಹೇಳುವುದು ಸರಯಲ್ಲ .
>>>>> ೬. ಈಶ್ವರನು ಜಗತ್ತನ್ನು ಸೃಷ್ಟಿಸಿದ್ದಾನೆಂದರೆ -ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ
>>>>> ? -ಎಂದು ವಿವರಿಸುವುದು ಕಷ್ಟ. ಅವನಿಗೆ ಆಸೆಗಳಿಲ್ಲ . ‘ಪೂರ್ಣಕಾಮನಾದ‘ ,(ಸಂತೃಪ್ತ )
>>>>> ಅವನಿಗೆ ಸ್ವಾರ್ಥವೇನು? ಇಚ್ಛ ಏಕೆ ? ಅಂಥ ಅಪೇಕ್ಷೆ ಇದೆ ಎಂದಾದರೆ ಅವನಲ್ಲಿ ಏನೋ ಕೊರತೆ
>>>>> ಇದೆ ಎಂದಾಗುತ್ತದೆ . ಹಾಗಾಗಿ ಈಶ್ವರನನ್ನು (ಅಸ್ತಿತ್ವವನ್ನು) ನಾಸ್ತಿಕರು , ಮೀಮಾಂಸಕರು
>>>>> ಒಪ್ಪುವುದಿಲ್ಲ.
>>>>> ೭. ವೇದಾಂತಿಗಳು ಜಗತ್ತನ್ನು ಈಶ್ವರನ ಲೀಲೆ ಎನ್ನುತ್ತಾರೆ . ಆದರೆ ನಿರೀಶ್ವರವಾದಿಗಳು
>>>>> , ಅದನ್ನೊಪ್ಪುವುದಿಲ್ಲ. ತನ್ನ ಲೀಲಾ ವಿನೋದಕ್ಕಾಗಿ ದೇವನು , ಜೀವಿಗಳನ್ನು ದುಃಖ , ಕಷ್ಟ 
>>>>> ,
>>>>> ಕೋಟಲೆಗೆ ನೂಕಿ ತಾನು ಆನಂದ ಪಡುವುದಾದರೆ. ಅವನು ಕೂəರಿಯೂ ಕರಣಾಹೀನನೂ ಆಗುತ್ತಾನೆ . ಆ
>>>>> ಬಗೆಯ ದೇವನನ್ನು ಒಪ್ಪಲು ಆಗುವುದಿಲ್ಲ.
>>>>> ೮. ಪ್ರಾಚೀನ ಮೀಮಾಂಸಕರು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳು ಕಟ್ಟು ಕಥೆ
>>>>> ಎನ್ನುತ್ತಾರೆ. ಜಗತ್ತು ತಾನಾಗಿಯೇ ಯಾವಾಗಲೂ ಇದೆ ಎನ್ನುತ್ತಾರೆ ಅದಕ್ಕೆ (ಸೃಷ್ಟಿಸಲು)
>>>>> ಈಶ್ವರನ ಅಗತ್ಯವಿಲ್ಲ ಎನ್ನುವುದು ಅವರ ಮತ. ವೇದಗಳು ಅನಾದಿಯಾದವು -ತಂತಾನೆ ಪ್ರಕಟವಾದವು ;
>>>>> ಅವು ನಿತ್ಯ ; ಕರ್ಮಫಲಗಳುತನ್ನಿಂದ ತಾನೇ ಪ್ರವರ್ತಿಸುತ್ತವೆ . ಅದಕ್ಕೆ ಯಜಮಾನ-ಈಶ್ವರ
>>>>> ಬೇಕಿಲ್ಲ ಎಂಬುದು ಅವರ ಮತ . ಅವರುದೇವರನ್ನು ಒಪ್ಪದಿದ್ದರೂ ವೇದಗಳನ್ನು ಒಪ್ಪುತ್ತಾರೆ.
>>>>> ೯ , ಅಂತ್ಯದಲ್ಲಿ ತಾರ್ಕಿಕರೆಲ್ಲಾ ಮೂಲೆಗೆ ಬಿದ್ದು , ಈಶ್ವರನ ಅಸ್ತಿತ್ವವಾದ ಗೆದ್ದು
>>>>> , ಧಾರ್ಮಿಕ ವಿಧಿಗಳ ಅವಶ್ಯಕತೆ ಪ್ರಬಲವಾಗಿ ಜಗತ್ತಿನಲ್ಲಿ ಬೇರೂರಿದೆ ಎನ್ನಬಹುದು .
>>>>> ೧೦. ಜೀವ-ಜಗತ್ತಿಗೆ ಕಾರಣವಾದ ಚೇತನ ಮತ್ತು ಮನಸ್ಸುಗಳಿಗೆ ಸಕಾರಣವನ್ನ ಹೇಳಲು
>>>>> ನಿರೀಶ್ವರವಾದಿಗಳಿಂದಲೂ ಸಾಧ್ಯವಿಲ್ಲ.
>>>>> ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
>>>>> ತಾತ್ಪರ್ಯ -ಉಪಸಂಹಾರ ಸಂಪಾದಿಸಿ
>>>>>
>>>>> ಒಟ್ಟು ನಾಲ್ಕು ಬಗೆಯ ಈಶ್ವರನಿಗೆ ಸಂಬಂಧಿಸಿದ ವಾದಗಳು ಕಂಡುಬರುತ್ತವೆ :
>>>>> ಈಶ್ವರನಿಲ್ಲ ಜಗತ್ತು ಮಾತ್ರವಿದೆ (ಶೂನ್ಯ ವಾದ ) ;
>>>>> ಈಶ್ವರನು ಜಗತ್ತಿಗೆ ಕಾರಣ ಅವನು ಸ್ವತಂತ್ರ ಜಗತ್ತು ಅವನಿಗೆ ಅಧೀನ ;
>>>>> ಈಶ್ವರನು ಜಗತ್ತಿಗೆ ಪ್ರಭು ; ಆದರೂ ಅವನು ಸೃಷ್ಟಿ -ಸ್ಥಿತಿ-ಲಯಗಳಿಗೆ ಕಾರಣನಲ್ಲ
>>>>> ಕರ್ತೃತ್ವವಿಲ್ಲ. ;
>>>>> ಈಶ್ವರ ಮತ್ತು ಚಿತ್ ಶಕ್ತಿ ಎರಡೂ ಒಂದೇ
>>>>> ವಿಚಾರ ವಾದಿಗಳು ಈಶ್ವರನನ್ನು ಒಪ್ಪದೆ , ಕುಟುಂಬದ ಯಜಮಾನನ ಕಲ್ಪನೆಯಿಂದ ಈಶ್ವರ
>>>>> ಕಲ್ಪನೆ ಉಂಟಾಗಿರಬಹುದೆನ್ನುವರು . ಆಪತ್ತಿನಕಾಲದಲ್ಲಿ ರಕ್ಷಣೆಗೆ ಮೊರೆ ಇಡಲು ಒಂದು 
>>>>> ಅದೃಷ್ಟ
>>>>> ಶಕ್ತಿಬೇಕಾಗುವುದು ; ಅದು ಮಾನವ ಮನಸ್ಸಿನ ಸ್ವಭಾವ . ಆದ್ದರಿಂದ ಸರ್ವಜ್ಞನೂ, ಸರ್ವಶಕ್ತನೂ
>>>>> ಬೇಕೆಂಬ ಬಯಕೆ ಈಶ್ವರ ಕಲ್ಪನೆಗೆ ಕಾರಣವೆನ್ನವವರೂ ಇದ್ದಾರೆ. ಕಡು ದುಃಖಿತನಿಗೆ -
>>>>> ಪರಿಹಾರವಿಲ್ಲದ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದವನಿಗೆ ದೇವರೇ ಗತಿಯಲ್ಲವೇ !! - ಎಂಬುದು
>>>>> ಒಂದು ಅಭಿಪ್ರಾಯ . : ಓಂ ತತ್ಸತ್ :
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CAKHYmYm%3DdQvZd3N9%3DMgmtNUASWYJ11g3Vkswi7iCSLQOuHWs6A%40mail.gmail.com
>>>>> <https://groups.google.com/d/msgid/socialsciencestf/CAKHYmYm%3DdQvZd3N9%3DMgmtNUASWYJ11g3Vkswi7iCSLQOuHWs6A%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CACwGsz5hK8XH9FrsrvEOXtfebM-6hsjgTBE1JOmqM0Cxa6njxA%40mail.gmail.com
>>>> <https://groups.google.com/d/msgid/socialsciencestf/CACwGsz5hK8XH9FrsrvEOXtfebM-6hsjgTBE1JOmqM0Cxa6njxA%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>>
>>>
>>>
>>> --
>>> *ಸುಂದರೇಶ ಮೂರ್ತಿ. ಟಿ . ವಿ *
>>>                                             *ಶಿಕ್ಷಕರು *
>>> ಸರ್ಕಾರಿ ಪ್ರೌಢ ಶಾಲೆ  ಲಕ್ಷ್ಮೀ ಸಾಗರ ,
>>> ಪಾಂಡವಪುರ ತಾಲೂಕು , ಮಂಡ್ಯ  ಜಿಲ್ಲೆ .
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CADDbdW2PaoJNwPv%3DP33JunHWAFG0DZTVGd84UsHyX96eRJ6kQQ%40mail.gmail.com
>>> <https://groups.google.com/d/msgid/socialsciencestf/CADDbdW2PaoJNwPv%3DP33JunHWAFG0DZTVGd84UsHyX96eRJ6kQQ%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CACwGsz6Bk0HACf1CtmtXGBRw4K%3Dck%3DvWZBc9QuorvBZ44Tkf5w%40mail.gmail.com
>> <https://groups.google.com/d/msgid/socialsciencestf/CACwGsz6Bk0HACf1CtmtXGBRw4K%3Dck%3DvWZBc9QuorvBZ44Tkf5w%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>
>
>
> --
> *ಸುಂದರೇಶ ಮೂರ್ತಿ. ಟಿ . ವಿ *
>                                             *ಶಿಕ್ಷಕರು *
> ಸರ್ಕಾರಿ ಪ್ರೌಢ ಶಾಲೆ  ಲಕ್ಷ್ಮೀ ಸಾಗರ ,
> ಪಾಂಡವಪುರ ತಾಲೂಕು , ಮಂಡ್ಯ  ಜಿಲ್ಲೆ .
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CADDbdW3Zu6KGYz0qTWaGPaEFhoeb5svpr6cBy8oFjKVc%3DcUV%2BA%40mail.gmail.com
> <https://groups.google.com/d/msgid/socialsciencestf/CADDbdW3Zu6KGYz0qTWaGPaEFhoeb5svpr6cBy8oFjKVc%3DcUV%2BA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKHYmYmCWB7SssrYSaijDkf460QKSYYymzb1toJR9Y8_bj26xg%40mail.gmail.com.
For more options, visit https://groups.google.com/d/optout.

Reply via email to