ಬಹುಶಃ ನಮ್ಮೆಲ್ಲರ ಎದೆಯಾಳದ ನೋವನ್ನು ಬಿಡಿಬಿಡಿಯಾಗಿ ಬಿಡಿಸಿಟ್ಟಿದ್ದೀರಿ. ಪ್ರತಿಯೊಬ್ಬ
ಶಿಕ್ಷಕನಿಗೂ ಒಂದಲ್ಲ ಹಲವು ಬಾರಿ ಕಾಡುವ ಇ ಪ್ರಶ್ನೆಗಳಿಗೆ ಉತ್ತರ ಇದೆಯೇ??????????

2017-03-14 23:03 GMT+05:30 Pralhada vssudeva pattar <
[email protected]>:

> ಬಲ್ಲವರು ಬಲಿಷ್ಟ ಉತ್ತರ ಹುಡುಕಿಕೊಡಿ ..
>
>
> ಕಲಿಕೆ ಗರಿಷ್ಠ ಮಟ್ಟದಲ್ಲಿ ಫಲಪ್ರದವಾಗಲೆಂದು ಹಂಬಲಿಸುವ ವಿಷಯ ಶಿಕ್ಷಕ ಎಷ್ಟು  ಶಂಕ
> ಕುಟ್ಟಿ ಜಾಗಡೆ ಬಾರಿಸಿದರೂ ಏನು ಪ್ರಯೋಜನ .. ?  ಕಲಿಕೆಯಲ್ಲಿ ತೊಡಗಿಸಿಕೊಳ್ಳದ  ಇಂದಿನ
>  ಗ್ರಾಮೀಣ ಸರ್ಕಾರಿ ಮಕ್ಕಳಿಗೆ ಏನು ಹೇಳಿದರೆನು ಫಲಪ್ರದ ? ನೀರೆ ಇಳಿಯದ ಗಂಟಲು ಕಡುಬು
> ತುರುಕಿದ ಪರಸ್ಥಿತಿ..   ಶಿಕ್ಷಕರದ್ದು. ..
> IQ ಹೆಚ್ಚಿರುವ ಪ್ರತಿಭಾವಂತ ತೀಕ್ಷಣ ಮತಿಯ 8/10 ವರ್ಷದ &  ಓದು ಬರಹ ಬಲ್ಲ ಮಗುವಿಗೆ
> ಸುಲಭವಾಗಿ   ಎರಡು ತಿಂಗಳಲ್ಲೇ  ಮಾರ್ಗದರ್ಶನ ನೀಡಿದರೆ ಸಾಕು .. ಹತ್ತನೆ ತರಗತಿಯ ಸಮಾಜ
> ವಿಜ್ಞಾನ  ಪಾಸು ಮಾಡಿಸಬಹುದು .ಆದರೆ ಜೀನ್ಸ್ ನಲ್ಲೇ ವ್ಯತ್ಯಾಸ ವಿದ್ದು IQ ಕಡಿಮೆ ಇರುವ ,
> ಓದಿಗೆ ಪ್ರೋತ್ಸಾಹ   ಪೂರಕ ಪರಿಸರ ಇಲ್ಲದಾಗ,,.. ಸೂತಾರಾಂ ಕಲಿಯಲ್ಲ ಅಂತ ಭಂಢ ತನ  ಮಾಡುವ
> ಮಕ್ಕಳಿಗೆ ಶಿಕ್ಷಕನಾದರೂ  ಏನು ಮಾಡಿಯಾನು  ?  ಆದರೆ ..  ಪ್ರಸ್ತುತ ಪರಸ್ಥಿತಿಯಲ್ಲಿ
>  ಕಲಿಯಲೂ ಕಿಂಚಿತ್ತೂ ಆಸಕ್ತಿ ಇಲ್ಲದ ಮಕ್ಕಳಿಗೆ ಹೇಗೆ ಪಾಸು ಮಾಡಲು ಪ್ರಯತ್ನಿಸುವದು ?
> ಪಾಸು ಮಾಡಲೇ ಬೇಕು ಎನ್ನುವ ಅಧಿಕಾರಯುತ ವಾಣಿಗೆ ಬೆಷರತ್ತಾಗಿ  ಅಧಿಕಾರವರ್ಗದ ಮನಮೆಚ್ಚುಗೆಯ
> ಪಲಿತಾಂಶ ನೀಡುವದಾದರೂ ಹೇಗೆ ?
> ನನ್ನಲ್ಲಿ...  ನಿಮ್ಮೆಲ್ಲರಿಂದಲೂ ಎರವಲು ಪಡೆದ ‌.....
> ವಿಧವಿಧವಾದ ಮುದ್ರಣ, ಆಡಿಯೋ ,ವಿಡಿಯೋ  ಸಂಕ್ಷಿಪ್ತ ಸರಳಾತಿ ಸರಳವಾದ  ಪಾಸಿಂಗ್ ಪ್ಯಾಕ್
> .. ಸಂಪನ್ಮೂಲದ ಭಂಡಾರವೇ ಇದೆ .. ಕಲಿಸಬೇಕು ಎಂಬ ಹಂಬಲ ಉತ್ಕಷ ಅಭಿಲಾಸೆ ಇದ್ದು
> ..ಮಕ್ಕಳಿಗೆ ಏನಾದರೂ ಮಾಡಬೇಕು ಎಂಬ ಉತ್ಕಟ ಇಚ್ಚಾ ಶಕ್ತಿಯೂ ಇದೆ.., ಕುಗ್ರಾಮಗಳಲ್ಲಿ
> ಸೌಲಭ್ಯಗಳೇ ಇಲ್ಲದೇ ಇರುವ ಕುಟುಂಬಗಳ ಮಕ್ಕಳಿಗೆ ಕಿಂಚಿತ್ತಾದರೂ ಜೀವನಮಟ್ಟ ಬದಲಾಯಿಸಲು
>  ಹೆಬ್ಬಯಕೆ ಇದೆ.. ಇಷ್ಟೆಲ್ಲ ಕನಸು ಇರುವ ಪ್ರಯತ್ನಿಸುವ ಶಿಕ್ಷಕರಿಗೆ  ಅಥವಾ  ನನಗೆ
> ನಿರುತ್ಸಾಹದ ಕಾರ್ಮೊಡ ಕವಿದಂತೆ ಕಾಣುತ್ತಿದೆ.  ಕಾರಣ...ಮಕ್ಕಳಲ್ಲಿ  ಓದುವ ಉತ್ಸುಕತೆಯೇ
> ಆಸಕ್ತಿ ಆಂತರಿಕ ಅಭಿಪ್ರೇರಣೆ  ಇಲ್ಲದೇ ಹೋಗಿದೆ.. ಮಕ್ಕಳ ಮುಂದೆ ಯಾವ ಸಂಪನ್ಮೂಲ ಸಾಹಿತ್ಯ
> .. ಸಿದ್ದಮಾಡಿ ಸುಲಿದು . ಇಟ್ಟರೂ ಏನು ಪ್ರಯೋಜನವಸಗುತ್ತಿಲ್ಲ..?  ಕೊಣದ  ಮುಂದೆ ಕಿನ್ನರಿ
> ಬಾರಿಸಿದಂತೆ .. ಬೊರ್ಗಲ್ಲ ಮೇಲೆ ಮಳೆ ಸೂರಿದಂತೆ ಎಲ್ಲವೂ ನಿಷ್ಪಲ.. ವ್ಯರ್ಥ ಪ್ರಯತ್ನ ..
> ಗಾಳಿಗೆ  ಗುದ್ದಿ ಮೈ ನುಸಿಕೊಳ್ಳುವ ಮೊಂಡು ಪ್ರಯತ್ನ ಅಷ್ಟೆ ..
>
> * ಒಂದು ಕುಂದುರೆ ನೀರಡಿಸಿದೆ ಎಂದು  ನಾವೆ ಕಲ್ಪಿಸಿಕೊಂಡು ನೀರು ಹತ್ತಿರ ಕರೆದುಕೊಂಡು
> ಹೋಗಬಹುದು..ಪಾಪ ಅದರ  ಆರೋಗ್ಯ  ಸರಿ ಇಲ್ಲ  ಎಂದು ಭ್ರಮಿಸಿಕೊಂಡು  .ನಾವೇ .ಕುದುರೆಯ
> ಬಾಯ್ದೆರೆದು  ಗೊಟುಕು ಹಾಕಬಹುದು.ಆದರೆ, ಕುಡಿಯಲು ಶಕ್ತಿ ಸಾಮರ್ಥ್ಯ ವೇ ಇಲ್ಲದಾಗ ..
> ಎಷ್ಟು ಪ್ರಯತ್ನ ಮಾಡಿದರು  ಏನು ಪ್ರಯೋಜನ  ... ?  ಬ್ರೆನ್ ಡೆಡ್ ಆದ ಕೋಮಾದಲ್ಲಿ ಇರುವ
> ರೋಗಿಯಂತೆ .. ವ್ಯರ್ಥ ಪ್ರಯತ್ನ ..  ಸರ್ಕಾರಿ ಕುಳು ತಿನ್ನುವದರಿಂದ ಇಚ್ಚೆ ಇದ್ದೊ
> ಇಲ್ಲದೆಯೋ .. ಕಾಗೆ ಕಪ್ಪು ಅಂತ ವಾದ ಮಾಡದೆ ಬೆಳ್ಳಗೆ ಇದೆ ಎಂದೂ ಹೂ ಗುಟ್ಟುತ್ತಾ ಸಾಗಬೇಕು
> .
> * ಜ್ಞಾನದ ಹೊಟ್ಟೆ ಹಸಿವಿದ್ದವನಿಗೆ ಊಟ ಹಾಕಬಹುದು ಹೊಟ್ಟೆ ಹಸಿವೇ ಇಲ್ಲದವನಿಗೆ
>  ಮೃಷ್ಟಾನ್ನ ಭೋಜನ ಮುಂದೆ ಇಟ್ಟರೂ ಅದನ್ನು ತಿನ್ನಲು ಅಪೆಕ್ಷೆ ಪಡಲು ಸಾದ್ಯವೇ ?  ...
> ಹೀಗೆ ತರತರವಾಗಿ ಪ್ರಸ್ತುತ ಮಕ್ಕಳ ಮನಸ್ತಿತಿ  ಬಗ್ಗೆ ಮತ್ತು ಶೈಕ್ಷಣಿಕ ವ್ಯವಸ್ಥೆ ಬಗ್ಗೆ
> ಕಟುವಾಗಿ ವೇದನೆಯಿಂದ ಕಳಕಳಿಯಿಂದ ನಿವೆದಿಸಬಹುದು ... ನಾನು ನಿರುತ್ಸಾಹದಿಂದ ಈ ಮಾತು
> ಹೇಳುತ್ತಿಲ್ಲ .. ವಾಸ್ತವ ಅರುಹುತ್ತಿರುವೆ..
> ನಾನು ( ನಾವು ) ಎಷ್ಟೇ ಪ್ರಯತ್ನ ಪಟ್ಟರೂ ಶ್ರಮವಹಿಸಿದರೂ ಎಂಥಾ ಪ್ರಯೋಗಗಳು ಮಾಡಿದರೂ
> ...ಏನು ಹರಸಾಹಸ ಪಟ್ಟರೂ  ಶಕ್ತಿ ಮೀರಿ ನಮ್ಮ ಸಾಮರ್ಥ್ಯ ಒರೆಗೆ ಹಚ್ಚಿ , ಶತ ಪ್ರಯತ್ನ
> ಪಟ್ಟರೂ   ೧೦ ನೇ ತರಗತಿಯಲ್ಲಿ ನಿರಿಕ್ಷಿತ ಪಲಿತಾಂಶದ .. ಫಲ ದೊರಕುತ್ತಿಲ್ಲ. ನನಗೆ
> ಅನಿಸಿದಂತೆ  ಪ್ರತಿಯೊಬ್ಬ ಶಿಕ್ಷಕನೂ  ಹೀಗೆ ಒಂದು ಕ್ಷಣ ಬೆಸರ ಹತಾಶೆ ನಿರುತ್ಸಾಹ
> ಖಿನ್ನತೆಯ ಭಾವ  ಆಗುತ್ತೆ ಅನ್ನೊಂದು ನನ್ನ ಭಾವನೆ ?  ( ಕುತಂತ್ರ , ತಮತ್ರಗಾರಿಗೆ
> ಪರಿಕ್ಷಾ ರಣತಂತ್ರ ಹೊರತಾಗಿ ಚಿಂತನೆ ಮಾಡುವದು ಅಗತ್ಯ ... ಇದನ್ನು ಅನುಸರಿಸಿದರೆ ೧೦೦
> ಕ್ಕೆ ನೂರು ಪಲಿತಾಂಶ ಸುಲಬವಾಗಿ ಪಡಿಬಹುದು ಅದು ಅಪ್ರಸ್ತುತ)
> ನನ್ನ ಈ ಚಿಂತೆಗೆ ಕಾರಣ ಹತ್ತು ಹಲವು ... ನಾನು ಈ ವರ್ಷ ಕೈಗೊಂಡ ಕ್ರಮಗಳು...
> ೧)ಬೇಸಿಗೆ ರಜೆಯಲ್ಲೆ ೩/೪ ಅಂಕದ ಪ್ರಶ್ನೋತ್ತರ ಝರಾಕ್ಸ  ಮಕ್ಕಲಿಗೆ ಅನುಕುಲವಾಗಲಿ ಎಂದು
> ನೀಡಿದ್ದು
> ೨) ೯ ನೇ ತರಗತಿಯಲ್ಲೇ ( ಮಾರ್ಚ್ ೨೦೧೬) ಸರಳವಾದ ೨/೩ ಪಾಠ ಪರಿಚಯ ಮಾಡಿದ್ದು
> ೩) ನವಂಬರ್ ನಲ್ಲೆ ಸೆಲೆಬಸ್ ಪೂರ್ಣ ಪೂರ್ಣ ಮಾಡಿದ್ದು
> ೪) ಎಲ್ಲಾ ಪಾಠಗಳನ್ನು ಪಿ ಪಿ ಟಿ ಮೂಲಕ ಪ್ರಾತ್ಯಕ್ಷಿಕೆ ಮಾಡಿದ್ದು
> ೪)೪೦ ಪಾಠಗಳ  ೧೦/ ೧೫ ಅಂಕಗಳ ಕಿರು ಪರಿಕ್ಷೆಗಳು ಮಾಡಿದ್ದು
> ೫) ಕ್ವಿಜ್ ಗಳು , ಪದಬಂದ ಲಕ್ಕಿ ನಂಬರ್, ಜಾಕ್ ಪಟ್ ..ಆಟದ ಮೂಲಕ ಪಾಠ ಮಾಡಿದ್ದು
> ೬) ಪ್ರತಿ ಪಾಠದ ಸಾರವನ್ನು ನಾಲ್ಕಾರು ಬಾರಿ ರಿವಿಜನ್ ಮಾಡಿದ್ದು
> ೭) ಪಾಠಕ್ಕೆ ಪೂರಕ ವಿಡಿಯೋ ತೊರಿಸಿದ್ದು
> ೮) ಸಮಯದ ಟಾರ್ಗೆಟ್ ನೀಡಿ ಪಾಸಿಂಗ್ ಪ್ಯಾಕ್  ಮೂಲಕ ಓದಿಸಿದ್ದು
> ೯) ಹಾಡಿನ ಮೂಲಕ ೩ ಅಂಕದ ಪ್ರಶ್ನೆ ಹಾಡಿಸಿದ್ದು
> ೧೦) ಬ್ಲೂಪ್ರಿಂಟ್ ಪ್ರಕಾರ ಓದಲು ಹೇಳಿದ್ದು
> ೧೧) ೩ ಅಂಕದ ೬ ಪಾಠಗಳ ಇಟ್ಟು ೧೮ ಪ್ರಶ್ನೆ ಮಾತ್ರ ಓದಲು ತಿಳಿಸಿದ್ದು
> ೧೨)ನಕ್ಷೆಯನ್ನೂ  ೪ ವಿದದಲ್ಲಿ ಬರೆಯಲು ಹೇಳಿಕೊಟ್ಟು   ೧೫  ಸ್ಥಳ ಮಾತ್ರ ಗುರುತಿಸಲು
> ತಿಳಿಸಿದ್ದು
> ೧೩) ೪ ಅಂಕದ ಕೇವಲ ೭ ಪ್ರಶ್ನೆ  ಪುನಃರಾವರ್ತನೆ ಮಾಡಿಸಿದ್ದು
> ೧೪) ೬ ಸರಣಿ ಪರಿಕ್ಷೆ ಮಾಡಿದ್ದು
> ೧೫) ೧೫ ಮಾದರಿ ಪ್ರಶ್ನೆ ಪತ್ರಿಕೆ ಪ್ರ್ಯಾಕ್ಟೀಸ್ ಮಾಡಿಸಿದ್ದು
> ೧೬) ಸಿಮಿಲರ್ ಪ್ರಶ್ನೆಗೆ ಒಂದೇ ಉತ್ತರ ಬರೆಸಿದ್ದು
> ೧೭) ಮಕ್ಕಳ ಮನೆಗೆ ಬೇಟಿ ನೀಡಿದ್ದು
> ೧೮)ಪ್ರಿತಿಯಿಂದ ತಿದ್ದಿ ಬುದ್ದಿ ಹೇಳಿದ್ದು
> ೧೯) ಬೈದು ಹೊಡೆದು ಹೇಳಿದ್ದು
> ೨೦) ಭವಿಷ್ಯದ ಶಿಕ್ಷಣದ ಬಗ್ಗೆ ಸಲಹೆ ಸೂಚನೆ ಹೆಳಿದ್ದು
> ೨೧) ಉತ್ತರ ಬರೆಯುವ ಶೈಲಿ ಬಗ್ಗೆ ಪದೆ ಪದೆ ಹೇಳಿದ್ದು
> ೨೨) ವೈಯಕ್ತಿಕವಾಗಿ ತಪ್ಪು ಕರೆದು ತಪ್ಪು ತಿದ್ದಿದಗದು
> ೨೩)ಹೇಗೆ ಎಷ್ಟು ಯಾವಾಗ ಓದು ಬರಹ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದ್ದು
> ೨೪) ಓದಲು ಕುಳ್ಳಿರಿಸಿ ವಾಚ್ ಮಾಡಿದ್ದು
> ೨೫)  ಅರ್ದಗಂಟೆ ಕಂಠಪಾಠ ಮಾಡಲು ಹೇಳಿ ಉತ್ತರ ಕೇಳಿದ್ದು
> ಹೀಗೆ  ನಾನಾ ವಿಧದಲ್ಲಿ ತರತರವಾಗಿ ನನ್ನ ವಿವೆಚನೆ ಶಕ್ತಿಮೀರಿ   ಕಲಿಕೆಯಲ್ಲಿ ಹಿಂದುಳಿದ
> ಮಕ್ಕಳನ್ನು ಪರಿಕ್ಷೆಯಲ್ಲಿ ಪಾಸುಮಾಡಲೇ ಬೆಕೆಂದು  ಒಂದ್ ತರ ಬಂಡತನದಿಂದ ಪ್ರಯತ್ನ ಮತ್ತು
> ಪ್ರಯೋಗ ಮಾಡಿದರೂ ... ಪ್ರತಿಫಲ ಮಾತ್ರ .. ನಿರಿಕ್ಷೆಗೆ ತಕ್ಕಂತೆ ಸಾಧಿಸಲು ಸಾದ್ಯವಾಗದೇ
> ಕೈ  ಚೆಲ್ಲಿ ಕುಳಿತಿರುವೆ ..
> ತಿಳಿದವರು ಯಾರಾದರೂ ಹಿಮ್ಮಾಹಿತಿ ನೀಡಿ  ...
> ಗರಿಷ್ಟಮಟ್ಟದ ಪಲಿತಾಂಶಕ್ಕಾಗಿ  ಇರುವ ತಂತ್ರ ಸಾಧನಗಳ ತಮಗೆ ತಿಳಿದಿದ್ದರೆ ಮಾಹಿತಿ ನೀಡಿ
> ..
> ಏನಾದರೂ ಒಂದಿಷ್ಟು ಸಧಿಸಲು ಹೊಸಬದಲಾವಣೆಯ ದಾವಂತ ತುಡಿತ ಮಿಡಿತ ಹಂಬಲ ಇರುವ ಶಿಕ್ಷಕರಿಗೆ
> (ನನಗೆ )ಮಾರ್ಗದರ್ಶನ ನೀಡಿ. ಪಠ್ಯೇತರ ಮತ್ತು ಪಠ್ಯಪೂರಕ  ಚಟುವಟಿಕೆ ಹೊರತಾದ ಸರ್ವತೋಮುಖ
> ಅಭಿವೃದ್ದಿ ಸಾಧಿಸಲು ಹೊರಟವರಿಗೆ ವಾಸ್ತವ ಮತ್ತು ಪ್ರಾಯೋಗಿಕ ನೆಲಗಟ್ಟಿನಲ್ಲಿ
> ಉತ್ತರಹುಡುಕಿಕೊಡಿ ..
> ****
> ಇಂದ
> ಪ್ರಹ್ಲಾದ್ .ವಾ . ಪತ್ತಾರ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>



-- 
LOKESH S
*LOKESH S.*
                                                                      GPUC
(HS), SHIVAPURA, MADDUR TQ,
  MANDYA DIST.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to