Thank you Prahlad sir. There is no answer. On 14 Mar 2017 11:04 p.m., "Pralhada vssudeva pattar" < [email protected]> wrote:
> ಬಲ್ಲವರು ಬಲಿಷ್ಟ ಉತ್ತರ ಹುಡುಕಿಕೊಡಿ .. > > > ಕಲಿಕೆ ಗರಿಷ್ಠ ಮಟ್ಟದಲ್ಲಿ ಫಲಪ್ರದವಾಗಲೆಂದು ಹಂಬಲಿಸುವ ವಿಷಯ ಶಿಕ್ಷಕ ಎಷ್ಟು ಶಂಕ > ಕುಟ್ಟಿ ಜಾಗಡೆ ಬಾರಿಸಿದರೂ ಏನು ಪ್ರಯೋಜನ .. ? ಕಲಿಕೆಯಲ್ಲಿ ತೊಡಗಿಸಿಕೊಳ್ಳದ ಇಂದಿನ > ಗ್ರಾಮೀಣ ಸರ್ಕಾರಿ ಮಕ್ಕಳಿಗೆ ಏನು ಹೇಳಿದರೆನು ಫಲಪ್ರದ ? ನೀರೆ ಇಳಿಯದ ಗಂಟಲು ಕಡುಬು > ತುರುಕಿದ ಪರಸ್ಥಿತಿ.. ಶಿಕ್ಷಕರದ್ದು. .. > IQ ಹೆಚ್ಚಿರುವ ಪ್ರತಿಭಾವಂತ ತೀಕ್ಷಣ ಮತಿಯ 8/10 ವರ್ಷದ & ಓದು ಬರಹ ಬಲ್ಲ ಮಗುವಿಗೆ > ಸುಲಭವಾಗಿ ಎರಡು ತಿಂಗಳಲ್ಲೇ ಮಾರ್ಗದರ್ಶನ ನೀಡಿದರೆ ಸಾಕು .. ಹತ್ತನೆ ತರಗತಿಯ ಸಮಾಜ > ವಿಜ್ಞಾನ ಪಾಸು ಮಾಡಿಸಬಹುದು .ಆದರೆ ಜೀನ್ಸ್ ನಲ್ಲೇ ವ್ಯತ್ಯಾಸ ವಿದ್ದು IQ ಕಡಿಮೆ ಇರುವ , > ಓದಿಗೆ ಪ್ರೋತ್ಸಾಹ ಪೂರಕ ಪರಿಸರ ಇಲ್ಲದಾಗ,,.. ಸೂತಾರಾಂ ಕಲಿಯಲ್ಲ ಅಂತ ಭಂಢ ತನ ಮಾಡುವ > ಮಕ್ಕಳಿಗೆ ಶಿಕ್ಷಕನಾದರೂ ಏನು ಮಾಡಿಯಾನು ? ಆದರೆ .. ಪ್ರಸ್ತುತ ಪರಸ್ಥಿತಿಯಲ್ಲಿ > ಕಲಿಯಲೂ ಕಿಂಚಿತ್ತೂ ಆಸಕ್ತಿ ಇಲ್ಲದ ಮಕ್ಕಳಿಗೆ ಹೇಗೆ ಪಾಸು ಮಾಡಲು ಪ್ರಯತ್ನಿಸುವದು ? > ಪಾಸು ಮಾಡಲೇ ಬೇಕು ಎನ್ನುವ ಅಧಿಕಾರಯುತ ವಾಣಿಗೆ ಬೆಷರತ್ತಾಗಿ ಅಧಿಕಾರವರ್ಗದ ಮನಮೆಚ್ಚುಗೆಯ > ಪಲಿತಾಂಶ ನೀಡುವದಾದರೂ ಹೇಗೆ ? > ನನ್ನಲ್ಲಿ... ನಿಮ್ಮೆಲ್ಲರಿಂದಲೂ ಎರವಲು ಪಡೆದ ..... > ವಿಧವಿಧವಾದ ಮುದ್ರಣ, ಆಡಿಯೋ ,ವಿಡಿಯೋ ಸಂಕ್ಷಿಪ್ತ ಸರಳಾತಿ ಸರಳವಾದ ಪಾಸಿಂಗ್ ಪ್ಯಾಕ್ > .. ಸಂಪನ್ಮೂಲದ ಭಂಡಾರವೇ ಇದೆ .. ಕಲಿಸಬೇಕು ಎಂಬ ಹಂಬಲ ಉತ್ಕಷ ಅಭಿಲಾಸೆ ಇದ್ದು > ..ಮಕ್ಕಳಿಗೆ ಏನಾದರೂ ಮಾಡಬೇಕು ಎಂಬ ಉತ್ಕಟ ಇಚ್ಚಾ ಶಕ್ತಿಯೂ ಇದೆ.., ಕುಗ್ರಾಮಗಳಲ್ಲಿ > ಸೌಲಭ್ಯಗಳೇ ಇಲ್ಲದೇ ಇರುವ ಕುಟುಂಬಗಳ ಮಕ್ಕಳಿಗೆ ಕಿಂಚಿತ್ತಾದರೂ ಜೀವನಮಟ್ಟ ಬದಲಾಯಿಸಲು > ಹೆಬ್ಬಯಕೆ ಇದೆ.. ಇಷ್ಟೆಲ್ಲ ಕನಸು ಇರುವ ಪ್ರಯತ್ನಿಸುವ ಶಿಕ್ಷಕರಿಗೆ ಅಥವಾ ನನಗೆ > ನಿರುತ್ಸಾಹದ ಕಾರ್ಮೊಡ ಕವಿದಂತೆ ಕಾಣುತ್ತಿದೆ. ಕಾರಣ...ಮಕ್ಕಳಲ್ಲಿ ಓದುವ ಉತ್ಸುಕತೆಯೇ > ಆಸಕ್ತಿ ಆಂತರಿಕ ಅಭಿಪ್ರೇರಣೆ ಇಲ್ಲದೇ ಹೋಗಿದೆ.. ಮಕ್ಕಳ ಮುಂದೆ ಯಾವ ಸಂಪನ್ಮೂಲ ಸಾಹಿತ್ಯ > .. ಸಿದ್ದಮಾಡಿ ಸುಲಿದು . ಇಟ್ಟರೂ ಏನು ಪ್ರಯೋಜನವಸಗುತ್ತಿಲ್ಲ..? ಕೊಣದ ಮುಂದೆ ಕಿನ್ನರಿ > ಬಾರಿಸಿದಂತೆ .. ಬೊರ್ಗಲ್ಲ ಮೇಲೆ ಮಳೆ ಸೂರಿದಂತೆ ಎಲ್ಲವೂ ನಿಷ್ಪಲ.. ವ್ಯರ್ಥ ಪ್ರಯತ್ನ .. > ಗಾಳಿಗೆ ಗುದ್ದಿ ಮೈ ನುಸಿಕೊಳ್ಳುವ ಮೊಂಡು ಪ್ರಯತ್ನ ಅಷ್ಟೆ .. > > * ಒಂದು ಕುಂದುರೆ ನೀರಡಿಸಿದೆ ಎಂದು ನಾವೆ ಕಲ್ಪಿಸಿಕೊಂಡು ನೀರು ಹತ್ತಿರ ಕರೆದುಕೊಂಡು > ಹೋಗಬಹುದು..ಪಾಪ ಅದರ ಆರೋಗ್ಯ ಸರಿ ಇಲ್ಲ ಎಂದು ಭ್ರಮಿಸಿಕೊಂಡು .ನಾವೇ .ಕುದುರೆಯ > ಬಾಯ್ದೆರೆದು ಗೊಟುಕು ಹಾಕಬಹುದು.ಆದರೆ, ಕುಡಿಯಲು ಶಕ್ತಿ ಸಾಮರ್ಥ್ಯ ವೇ ಇಲ್ಲದಾಗ .. > ಎಷ್ಟು ಪ್ರಯತ್ನ ಮಾಡಿದರು ಏನು ಪ್ರಯೋಜನ ... ? ಬ್ರೆನ್ ಡೆಡ್ ಆದ ಕೋಮಾದಲ್ಲಿ ಇರುವ > ರೋಗಿಯಂತೆ .. ವ್ಯರ್ಥ ಪ್ರಯತ್ನ .. ಸರ್ಕಾರಿ ಕುಳು ತಿನ್ನುವದರಿಂದ ಇಚ್ಚೆ ಇದ್ದೊ > ಇಲ್ಲದೆಯೋ .. ಕಾಗೆ ಕಪ್ಪು ಅಂತ ವಾದ ಮಾಡದೆ ಬೆಳ್ಳಗೆ ಇದೆ ಎಂದೂ ಹೂ ಗುಟ್ಟುತ್ತಾ ಸಾಗಬೇಕು > . > * ಜ್ಞಾನದ ಹೊಟ್ಟೆ ಹಸಿವಿದ್ದವನಿಗೆ ಊಟ ಹಾಕಬಹುದು ಹೊಟ್ಟೆ ಹಸಿವೇ ಇಲ್ಲದವನಿಗೆ > ಮೃಷ್ಟಾನ್ನ ಭೋಜನ ಮುಂದೆ ಇಟ್ಟರೂ ಅದನ್ನು ತಿನ್ನಲು ಅಪೆಕ್ಷೆ ಪಡಲು ಸಾದ್ಯವೇ ? ... > ಹೀಗೆ ತರತರವಾಗಿ ಪ್ರಸ್ತುತ ಮಕ್ಕಳ ಮನಸ್ತಿತಿ ಬಗ್ಗೆ ಮತ್ತು ಶೈಕ್ಷಣಿಕ ವ್ಯವಸ್ಥೆ ಬಗ್ಗೆ > ಕಟುವಾಗಿ ವೇದನೆಯಿಂದ ಕಳಕಳಿಯಿಂದ ನಿವೆದಿಸಬಹುದು ... ನಾನು ನಿರುತ್ಸಾಹದಿಂದ ಈ ಮಾತು > ಹೇಳುತ್ತಿಲ್ಲ .. ವಾಸ್ತವ ಅರುಹುತ್ತಿರುವೆ.. > ನಾನು ( ನಾವು ) ಎಷ್ಟೇ ಪ್ರಯತ್ನ ಪಟ್ಟರೂ ಶ್ರಮವಹಿಸಿದರೂ ಎಂಥಾ ಪ್ರಯೋಗಗಳು ಮಾಡಿದರೂ > ...ಏನು ಹರಸಾಹಸ ಪಟ್ಟರೂ ಶಕ್ತಿ ಮೀರಿ ನಮ್ಮ ಸಾಮರ್ಥ್ಯ ಒರೆಗೆ ಹಚ್ಚಿ , ಶತ ಪ್ರಯತ್ನ > ಪಟ್ಟರೂ ೧೦ ನೇ ತರಗತಿಯಲ್ಲಿ ನಿರಿಕ್ಷಿತ ಪಲಿತಾಂಶದ .. ಫಲ ದೊರಕುತ್ತಿಲ್ಲ. ನನಗೆ > ಅನಿಸಿದಂತೆ ಪ್ರತಿಯೊಬ್ಬ ಶಿಕ್ಷಕನೂ ಹೀಗೆ ಒಂದು ಕ್ಷಣ ಬೆಸರ ಹತಾಶೆ ನಿರುತ್ಸಾಹ > ಖಿನ್ನತೆಯ ಭಾವ ಆಗುತ್ತೆ ಅನ್ನೊಂದು ನನ್ನ ಭಾವನೆ ? ( ಕುತಂತ್ರ , ತಮತ್ರಗಾರಿಗೆ > ಪರಿಕ್ಷಾ ರಣತಂತ್ರ ಹೊರತಾಗಿ ಚಿಂತನೆ ಮಾಡುವದು ಅಗತ್ಯ ... ಇದನ್ನು ಅನುಸರಿಸಿದರೆ ೧೦೦ > ಕ್ಕೆ ನೂರು ಪಲಿತಾಂಶ ಸುಲಬವಾಗಿ ಪಡಿಬಹುದು ಅದು ಅಪ್ರಸ್ತುತ) > ನನ್ನ ಈ ಚಿಂತೆಗೆ ಕಾರಣ ಹತ್ತು ಹಲವು ... ನಾನು ಈ ವರ್ಷ ಕೈಗೊಂಡ ಕ್ರಮಗಳು... > ೧)ಬೇಸಿಗೆ ರಜೆಯಲ್ಲೆ ೩/೪ ಅಂಕದ ಪ್ರಶ್ನೋತ್ತರ ಝರಾಕ್ಸ ಮಕ್ಕಲಿಗೆ ಅನುಕುಲವಾಗಲಿ ಎಂದು > ನೀಡಿದ್ದು > ೨) ೯ ನೇ ತರಗತಿಯಲ್ಲೇ ( ಮಾರ್ಚ್ ೨೦೧೬) ಸರಳವಾದ ೨/೩ ಪಾಠ ಪರಿಚಯ ಮಾಡಿದ್ದು > ೩) ನವಂಬರ್ ನಲ್ಲೆ ಸೆಲೆಬಸ್ ಪೂರ್ಣ ಪೂರ್ಣ ಮಾಡಿದ್ದು > ೪) ಎಲ್ಲಾ ಪಾಠಗಳನ್ನು ಪಿ ಪಿ ಟಿ ಮೂಲಕ ಪ್ರಾತ್ಯಕ್ಷಿಕೆ ಮಾಡಿದ್ದು > ೪)೪೦ ಪಾಠಗಳ ೧೦/ ೧೫ ಅಂಕಗಳ ಕಿರು ಪರಿಕ್ಷೆಗಳು ಮಾಡಿದ್ದು > ೫) ಕ್ವಿಜ್ ಗಳು , ಪದಬಂದ ಲಕ್ಕಿ ನಂಬರ್, ಜಾಕ್ ಪಟ್ ..ಆಟದ ಮೂಲಕ ಪಾಠ ಮಾಡಿದ್ದು > ೬) ಪ್ರತಿ ಪಾಠದ ಸಾರವನ್ನು ನಾಲ್ಕಾರು ಬಾರಿ ರಿವಿಜನ್ ಮಾಡಿದ್ದು > ೭) ಪಾಠಕ್ಕೆ ಪೂರಕ ವಿಡಿಯೋ ತೊರಿಸಿದ್ದು > ೮) ಸಮಯದ ಟಾರ್ಗೆಟ್ ನೀಡಿ ಪಾಸಿಂಗ್ ಪ್ಯಾಕ್ ಮೂಲಕ ಓದಿಸಿದ್ದು > ೯) ಹಾಡಿನ ಮೂಲಕ ೩ ಅಂಕದ ಪ್ರಶ್ನೆ ಹಾಡಿಸಿದ್ದು > ೧೦) ಬ್ಲೂಪ್ರಿಂಟ್ ಪ್ರಕಾರ ಓದಲು ಹೇಳಿದ್ದು > ೧೧) ೩ ಅಂಕದ ೬ ಪಾಠಗಳ ಇಟ್ಟು ೧೮ ಪ್ರಶ್ನೆ ಮಾತ್ರ ಓದಲು ತಿಳಿಸಿದ್ದು > ೧೨)ನಕ್ಷೆಯನ್ನೂ ೪ ವಿದದಲ್ಲಿ ಬರೆಯಲು ಹೇಳಿಕೊಟ್ಟು ೧೫ ಸ್ಥಳ ಮಾತ್ರ ಗುರುತಿಸಲು > ತಿಳಿಸಿದ್ದು > ೧೩) ೪ ಅಂಕದ ಕೇವಲ ೭ ಪ್ರಶ್ನೆ ಪುನಃರಾವರ್ತನೆ ಮಾಡಿಸಿದ್ದು > ೧೪) ೬ ಸರಣಿ ಪರಿಕ್ಷೆ ಮಾಡಿದ್ದು > ೧೫) ೧೫ ಮಾದರಿ ಪ್ರಶ್ನೆ ಪತ್ರಿಕೆ ಪ್ರ್ಯಾಕ್ಟೀಸ್ ಮಾಡಿಸಿದ್ದು > ೧೬) ಸಿಮಿಲರ್ ಪ್ರಶ್ನೆಗೆ ಒಂದೇ ಉತ್ತರ ಬರೆಸಿದ್ದು > ೧೭) ಮಕ್ಕಳ ಮನೆಗೆ ಬೇಟಿ ನೀಡಿದ್ದು > ೧೮)ಪ್ರಿತಿಯಿಂದ ತಿದ್ದಿ ಬುದ್ದಿ ಹೇಳಿದ್ದು > ೧೯) ಬೈದು ಹೊಡೆದು ಹೇಳಿದ್ದು > ೨೦) ಭವಿಷ್ಯದ ಶಿಕ್ಷಣದ ಬಗ್ಗೆ ಸಲಹೆ ಸೂಚನೆ ಹೆಳಿದ್ದು > ೨೧) ಉತ್ತರ ಬರೆಯುವ ಶೈಲಿ ಬಗ್ಗೆ ಪದೆ ಪದೆ ಹೇಳಿದ್ದು > ೨೨) ವೈಯಕ್ತಿಕವಾಗಿ ತಪ್ಪು ಕರೆದು ತಪ್ಪು ತಿದ್ದಿದಗದು > ೨೩)ಹೇಗೆ ಎಷ್ಟು ಯಾವಾಗ ಓದು ಬರಹ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದ್ದು > ೨೪) ಓದಲು ಕುಳ್ಳಿರಿಸಿ ವಾಚ್ ಮಾಡಿದ್ದು > ೨೫) ಅರ್ದಗಂಟೆ ಕಂಠಪಾಠ ಮಾಡಲು ಹೇಳಿ ಉತ್ತರ ಕೇಳಿದ್ದು > ಹೀಗೆ ನಾನಾ ವಿಧದಲ್ಲಿ ತರತರವಾಗಿ ನನ್ನ ವಿವೆಚನೆ ಶಕ್ತಿಮೀರಿ ಕಲಿಕೆಯಲ್ಲಿ ಹಿಂದುಳಿದ > ಮಕ್ಕಳನ್ನು ಪರಿಕ್ಷೆಯಲ್ಲಿ ಪಾಸುಮಾಡಲೇ ಬೆಕೆಂದು ಒಂದ್ ತರ ಬಂಡತನದಿಂದ ಪ್ರಯತ್ನ ಮತ್ತು > ಪ್ರಯೋಗ ಮಾಡಿದರೂ ... ಪ್ರತಿಫಲ ಮಾತ್ರ .. ನಿರಿಕ್ಷೆಗೆ ತಕ್ಕಂತೆ ಸಾಧಿಸಲು ಸಾದ್ಯವಾಗದೇ > ಕೈ ಚೆಲ್ಲಿ ಕುಳಿತಿರುವೆ .. > ತಿಳಿದವರು ಯಾರಾದರೂ ಹಿಮ್ಮಾಹಿತಿ ನೀಡಿ ... > ಗರಿಷ್ಟಮಟ್ಟದ ಪಲಿತಾಂಶಕ್ಕಾಗಿ ಇರುವ ತಂತ್ರ ಸಾಧನಗಳ ತಮಗೆ ತಿಳಿದಿದ್ದರೆ ಮಾಹಿತಿ ನೀಡಿ > .. > ಏನಾದರೂ ಒಂದಿಷ್ಟು ಸಧಿಸಲು ಹೊಸಬದಲಾವಣೆಯ ದಾವಂತ ತುಡಿತ ಮಿಡಿತ ಹಂಬಲ ಇರುವ ಶಿಕ್ಷಕರಿಗೆ > (ನನಗೆ )ಮಾರ್ಗದರ್ಶನ ನೀಡಿ. ಪಠ್ಯೇತರ ಮತ್ತು ಪಠ್ಯಪೂರಕ ಚಟುವಟಿಕೆ ಹೊರತಾದ ಸರ್ವತೋಮುಖ > ಅಭಿವೃದ್ದಿ ಸಾಧಿಸಲು ಹೊರಟವರಿಗೆ ವಾಸ್ತವ ಮತ್ತು ಪ್ರಾಯೋಗಿಕ ನೆಲಗಟ್ಟಿನಲ್ಲಿ > ಉತ್ತರಹುಡುಕಿಕೊಡಿ .. > **** > ಇಂದ > ಪ್ರಹ್ಲಾದ್ .ವಾ . ಪತ್ತಾರ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
