---------- Forwarded message ----------
From: "Raghavendra Rao" <[email protected]>
Date: Jan 14, 2018 18:49
Subject: Re: educational kavana
To: "jyothi bhat" <[email protected]>
Cc:

😃😃👌👌

On Jan 14, 2018 18:38, "jyothi bhat" <[email protected]> wrote:

> ಯಾರೋ ಬಂದರು
> ಏನೋ ಹುಡುಕಿ ತಂದರು
> ಮಕ್ಕಳ ತಲೆಗೆ ಹೀಗೆ ತುರುಕೆಂದರು/
> ಮತ್ಯಾರೋ ಬಂದರು
> ಮತ್ತವರೇನೋ ತಂದರು
> ಮಕ್ಕಳಿಗೆ ಹೀಗೆ ಹೇಳಿ ಅಂದರು/
> ಇನ್ಯಾರೂ ಬಂದರು
> ವಿಮಾನದಲ್ಲಿ ಹಾರಿ ದೂರ ಹೋಗಿ ವಿಷಯ ತಂದರು /
> ಅದು ಸರಿ ಇಲ್ಲ
> ಇದ ಕಲಿಸಿ ಎಂದರು/
> ಚಾಳೀಸಿನವರು,ಇಳಿಬಿದ್ದ ಮೀಸೆಯವರು,ಗಡ್ಡಧಾರಿಗಳು,ಕೋಟು
> ಸೂಟಿನವರು,ಕುರುಚಲುಗಡ್ಡದವರು,ಬಾಬ್ ಕಟ್ಟಿನವರು,ಲಿಪ್ ಸ್ಟಿಕ್ಕಿನವರು,ನಿಲುವಂಗಿಯವರು
> ಬಂದರು/ಏನೇನೋ ತಂದರು/
> ಯಾವುದೂ ಸರಿ ಇಲ್ಲ
> ನಮ್ಮದು ಸರಿ ಎಂದು
> ಮಾಯಾ ಪೆಟ್ಟಿಗೆ ತೆಗೆದು
> ತೋರಿಸಿ ನಕ್ಕರು/
> ಹಳೆಯ ಮದ್ಯವ ಹೊಸ ಬಾಟಲಿಯಲ್ಲಿ ಹಾಕಿ ಕುಡಿಸಿಯೇ ಬಿಟ್ಟರು/
> ಎಲ್ಲರಿಗೂ ಏರಿತು ಅಮಲು
> ಕುಣಿದು ಕುಪ್ಪಳಿಸಿ
> ಮಕ್ಕಳ ಮೆದುಳಿಗೆ ಕೈ ಹಾಕಿದರು /
> ಮಕ್ಕಳು ತಿಣುಕಿದರು
> ಶಾಲೆ ಬಿಟ್ಟೋಡಿದರು/
> ಮಾಸ್ತರರ ಕಣ್ಣಿಗೆ ಬೀಳದಾದರು/
> ಮಾಸ್ತರ ಮನೆಗೆ ನುಗ್ಗಿದಾಗ
> ಹಳದಿ ಬಸ್ಸೇರಿಬಿಟ್ಟರು/
>
> ಬಡ ಮಕ್ಕಳ ವಿಧಿಯಾಟ
> ಶಾಲೆಯಲ್ಲಿಯೇ ಉಳಿದವು/
> ಹಳದಿ ಬಸ್ಸಿನ ಮಕ್ಕಳು
> ಹೇಳಿದವು ರಂಗು ರಂಗಿನ ಕಥೆಗಳ/
> ಹಳದಿ ಬಸ್ಸಿನ ಮಕ್ಕಳ ರಂಗಿನ ಕಥೆಗಳು ವ್ಯಥೆಗಳಾದವು ಈ ಮಕ್ಕಳಿಗೆ /
> ಹಳದಿ ಮಕ್ಕಳ ಕಲಿಕಾ ನಾಗಾಲೋಟಕ್ಕೆ ನಮ್ಮ ಮಕ್ಕಳು ತತ್ತರ/
> ಏನೂ ಬರದ,ಅರಕ್ಕೇರದೆ ಮೂರಕ್ಕಿಳಿಯದೇ ಇರುವ ನಮ್ಮ ಶಾಲೆಯ ಮಕ್ಕಳು/
> ನಿಟ್ಟುಸಿರಿಟ್ಟವು/ತತ್ತರಿಸಿದವು
> ಮುಮ್ಮಲ ಮರುಗಿದವು/ಮಕ್ಕಳ
> ಕಲಿಯುವ ನಾಗಾಲೋಟಕ್ಕೆ
> ತಜ್ಞರ ತಕರಾರು/
> ಹೀಗೆಯೇ ಮಾಡಿ
> ಎನ್ನುವ ಫರ್ಮಾನು/
> ಕಲಿಯದ ಮಕ್ಕಳು/
> ಒತ್ತಡದ ಹಾದಿಗೆ ನಲುಗಿ
> ಕಲಿಸದ ಮಾಸ್ತರುಗಳು/
> ಇಡಿ ಬಡ ಸಮುದಾಯವೇ ಬಲಿ ಇವರ ತೀಟೆಗಳಿಗೆ/
> ಹಳದಿ ಬಸ್ ಗಳು ಅಣಕಿಸುತ್ತಿವೆ/
> ನಮ್ಮ ಶಾಲೆಗಳು ಸೊರಗುತ್ತಿವೆ/
> ಕೆಲ ಶಾಲೆಗಳು
> ಮುಚ್ಚಿವೆ/
> ಇನ್ನೂ ಹಲವು ಮುಚ್ಚಲಿವೆ/
> ಶಿಕ್ಷಕನಿಗಿಲ್ಲ ಕಲಿಸುವ ಸ್ವಾತಂತ್ರ/
> ತಜ್ಞರ ತಕರಾರುಗಳಿಗೆ
> ಇಲಾಖೆಯೆ ತತ್ತರ/
> ಕಲಿಸುವವನಿಗೂ ಶಿಕ್ಷೆ
> ಕಲಿಯುವವನಿಗೂ ಶಿಕ್ಷೆ/
> ಶಿಕ್ಷಕ ಮಗು ಹರಕೆಯ ಕುರಿಗಳು/
> ತಜ್ಞ ಕರುಣೆ ಇಲ್ಲದ ಕಟುಕ/
> ನಮ್ಮ ಶಾಲೆಗಳು ಸಂಪೂರ್ಣವಾಗಿ ಮುಚ್ಚಿದಾಗಲೆ ತಜ್ಞರಿಗೆ ಮನಶಾಂತಿ,ಸಂಪೂರ್ಣ ವಿಶ್ರಾಂತಿ /
> -ಮಲ್ಲಿಕಾರ್ಜುನ ಸ್ವಾಮಿ
>
> --
>
> *Jyothi, GHS, Meenakaliya, Baikampady.*
>
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to