ಸಮೀರ ಮೇಡಂ, ಕಗ್ಗದ ಸಾಲುಗಳು  ಬಹಳ ಅರ್ಥಗರ್ಭಿತವಾಗಿದೆ, ದಯಮಾಡಿ ಪ್ರತಿ ದಿನವು ಕಗ್ಗದ
ಸಾಲುಗಳನ್ನುಹಾಗು ತಾತ್ಪರ್ಯವನ್ನು ತಿಳಿಸಿ.
On May 9, 2017 9:03 PM, "Sameera samee" <[email protected]> wrote:

>
> 🙏 *ಡಿ.ವಿ.ಜಿ ಬೆಳಗು:-*🙏
>
> *ನೂರಾರು ಮತವಿಹುದು ಲೋಕದುಗ್ರಾಣದಲಿ|*
> *ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್||*
> *ಸಾರದಡುಗೆಯನೊಳವಿಚಾರದೊಲೆಯಲಿ ಮಾಡು|*
> *ಬೇರೆ ಮತಿ ಬೇರೆ ಮತ – ಮಂಕುತಿಮ್ಮ||934||*
>
> *ನಲ್ವೆಳಗು-ಕವಿತಾ ಅಡೂರು*
>
> ಲೋಕವೆಂಬ ಉಗ್ರಾಣದಲ್ಲಿ ನೂರಾರು ಮತವಿದೆ. ಅದರಲ್ಲಿ ನಿನ್ನ ಅಭಿರುಚಿಗೆ ಒಪ್ಪುವುದನ್ನು
> ಆರಿಸಿಕೊ. ಅವುಗಳಲ್ಲಿ ನಿನಗೆ ದೊರಕಿರುವ ಸಾರವನ್ನು , ವಿಚಾರವೆಂಬ ಒಲೆಯಲ್ಲಿ ಅಡುಗೆ ಮಾಡು.
> ಪ್ರತಿಯೊಬ್ಬರದ್ದೂ ಕೂಡಾ ಬೇರೆ ಬೇರೆ ಮತಿ, ಅದಕ್ಕನುಸಾರವಾಗಿಯೇ ಬೇರೆ ಬೇರೆ ಮತವೂ
> ಇರುತ್ತದೆ.
>
> ಜಗತ್ತು ದೈವಸೃಷ್ಟಿ ಎನ್ನುವುದನ್ನು ನಾವೆಲ್ಲರೂ ಬಲ್ಲೆವು. ಸೂಕ್ಷ್ಮವಾಗಿ ಅವಲೊಕಿಸಿದರೆ
> ಅದೆಷ್ಟು ವೈವಿಧ್ಯತೆಯನ್ನು ನಾವಿಲ್ಲಿ ಕಾಣುತ್ತೇವೆ. ಹಾಗೆಯೇ ಜೀವನ ಕ್ರಮದಲ್ಲಿ,
> ಆಚಾರವಿಚಾರಗಳಲ್ಲಿ, ಗುಣ-ಧರ್ಮದಲ್ಲಿ ವ್ಯತ್ಯಾಸವಿರುವುದೂ ಹೌದು. ಈ ವಿಭಿನ್ನತೆಯೊಳಗೆಯೇ
> ನಾವು ಒಂದಾಗಿ ಬಾಳುತ್ತಿದ್ದೇವೆ. ಆದರೆ ಎಲ್ಲವನ್ನು ಸಹಿಸಿಕೊಂಡು, ಯಾವುದನ್ನೂ
> ನಿರಾಕರಿಸದೆ, ದ್ವೇಷಿಸದೆ ,ತಿರಸ್ಕರಿಸದೆ ಬಾಳುತ್ತಿದ್ದೇವೆಯೇ? ಯೋಚಿಸ ಬೇಕಿದೆ.
>
> ಗಗನವನ್ನು ಸೋಕುವಂತೆ ಕಾಣುವ ಪರ್ವತ ಶ್ರೇಣಿ. ಅದರಾಚೆಗೇನಿದೆ ಎಂದು ಕಾಣಲು ಸಾಧ್ಯವೇ
> ಇಲ್ಲವೆಂಬಂತೆ , ಆ ಪರ್ವತಕ್ಕೆ ಹೊದೆದ ಹಸಿರ ಚಾದರ! . ಆ ಶಿಖರವನ್ನು ಏರಿದರೆ ಭಗವಂತನ
> ದರ್ಶನವಾಗುತ್ತದೆ, ಬದುಕು ನೆಮ್ಮದಿಯನ್ನು ಕಾಣುತ್ತದೆ ಎಂಬ ಸತ್ಯವನ್ನು ತಿಳಿದ ಹಲವರು;  ಆ
> ಪರ್ವತವನ್ನು ಹತ್ತಲು  ಪ್ರಯತ್ನಿಸುತ್ತಾರೆ. ಅದೇನು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.
> ಪರ್ವತವನ್ನು ಏರಲು ಹಲವು ಹಾದಿಗಳಿತ್ತು. ಯಾವ ಹಾದಿಯನ್ನು ಹಿಡಿದು ನಡೆಯುವುದು
> ಎನ್ನುವುದನ್ನು ನಿರ್ಧರಿಸುವುದು ; ಚಾರಣಿಗರ ಜಾಣ್ಮೆಗೆ ಒಡ್ಡಿದ ಸವಾಲಾಗಿತ್ತು. ಪ್ರತಿ
> ಹಾದಿಯೂ ಒಂದಕ್ಕಿಂತ ಒಂದು ಭಿನ್ನ. ದಟ್ಟ ಅರಣ್ಯದ ನಡುವಿನ ಇರುಳ ದಾರಿ ಸ್ಪಷ್ಟವಾಗಲು ,
>  ಅಲ್ಲಲ್ಲಿ ಮಾರ್ಗದರ್ಶಕ ದೀಪಗಳಿದ್ದರೂ, ನಡೆವ ಹೆಜ್ಜೆಗಳಿಗೆ ಧೈರ್ಯ ಬೇಕೇ ಬೇಕು. ಹೀಗೆ
> ಬೆಟ್ಟ ಏರುವವರು ಹಲವರಿದ್ದರೂ, ಶಿಖರಾಗ್ರವನ್ನು ತಲುಪಿದವರು ವಿರಳ. ಕಾರಣ;  ತಮ್ಮ
> ಮನಸ್ಸಿಗೆ ಒಗ್ಗುವ ದಾರಿಯನ್ನು ಆಯ್ದು ಕೊಂಡು ನಡೆಯ ಹೊರಟ ಕೆಲವು ದಿನಗಳ ನಂತರ, ಆ ದಾರಿ
> ಕಷ್ಟಕರವೆಂದೋ, ಸ್ವಾರಸ್ಯಕರವಲ್ಲವೆಂದೊ, ಅಪನಂಬಿಕೆಯಿಂದಲೋ ಇನ್ನೊಂದನ್ನು
> ಆರಿಸಿಕೊಳ್ಳುತ್ತಿದ್ದರು. ಮತ್ತದೂ ಬೇಡವೆಂದು ಮಗದೊಂದನ್ನು... ಹೀಗೆ ಹಾದಿಗಳನ್ನು ಅರಸಿ,
> ಆರಿಸಿ ,ಬದಲಿಸಿ ಕೊಳ್ಳುವುದರಲ್ಲೇ ಬದುಕು ಕಳೆದು ಹೋಗುತ್ತಿತ್ತೇ ಹೊರತು ಶಿಖರಾಗ್ರವನ್ನು
> ತಲುಪುವುದು ಸಾಧ್ಯವಾಗುತ್ತಿರಲಿಲ್ಲ.  ನಾವೇನಾದರೂ ಹೀಗಿದ್ದೇವೆಯೇ?
>
> ಸಮಾಜವನ್ನು, ಜನತೆಯನ್ನು ಉದ್ಧರಿಸಲೋಸುಗ, ಆಧ್ಯಾತ್ಮಿಕತೆಯನ್ನು ಪರಿಚಯಿಸಲೋಸುಗ ಹಲವು
> ಮತ-ಧರ್ಮಗಳು, ಧರ್ಮಪ್ರಚಾರಕರು, ಗುರು ಪೀಠಗಳು ಹುಟ್ಟಿಕೊಂಡಿವೆ. ಪುರಾಣ ಗ್ರಂಥಗಳೂ
> ಹಲವಿವೆ.  ಎಲ್ಲ ಮತ-ಧರ್ಮಗಳೂ  ಬೇರೆ ಬೇರೆ ರೀತಿಯಲ್ಲಿ ದೇವರ ಬಗ್ಗೆ , ದೇವರ ಮಹಿಮೆಯ
> ಬಗ್ಗೆ ವಿವರಿಸುತ್ತದೆ. ಎಲ್ಲಾ ಅಭಿಪ್ರಾಯಗಳನ್ನು ಆಲಿಸುತ್ತಾ, ಎಲ್ಲವನ್ನು ಗೌರವಿಸುತ್ತಾ,
> ನಮ್ಮ ಆಂತರ್ಯಕ್ಕೆ ಸರಿ ಎನಿಸುವ ಮತ- ಧರ್ಮವನ್ನು ಆಯ್ದುಕೊಂಡು ಅನುಸರಿಸ ಬೇಕು.
> ಪ್ರತಿಯೊಂದು ಮತ-ಧರ್ಮಗಳು ಪ್ರತಿಪಾದಿಸುವ ತತ್ವಗಳನ್ನು , ಅದರ ಸಾರ ಸರ್ವಸ್ವವನ್ನು ಅಂತೆಯೇ
> ಸ್ವೀಕರಿಸುವುದಲ್ಲ. ಯಾರದೋ ಅಭಿಪ್ರಾಯಕ್ಕೆ ತಕ್ಕಂತೆ ನಡೆಯುವುದೂ ಸರಿಯಲ್ಲ. ಅಂಧಾನುಕರಣೆ
> ಸಲ್ಲದು. ಆ ತತ್ವವನ್ನು ನಮ್ಮ ವಿವೇಚನೆಯೊಳಗಿಟ್ಟು ಪರೀಕ್ಷಿಸ ಬೇಕು. ತನ್ಮೂಲಕ ನಮಗದು
> ಒಪ್ಪಿತವಾಗ ಬೇಕು. ಮೂಢನಂಬಿಕೆಗಳನ್ನು, ಅಕಾರಣವಾದ ಆಚರಣೆಗಳನ್ನು ಮೀರಿದ ಉದಾತ್ತ
> ನಿಲುವನ್ನಷ್ಟೇ ನಾವು ಗಮನಿಸ ಬೇಕು. ಹೀಗೆ ಸ್ವೀಕೃತವಾದ ಜೀವನ ತತ್ವಕ್ಕೆ ನಾವು ಸದಾ
> ಬದ್ಧರಾಗಿಯೇ ಇರಬೇಕು ಮತ್ತು ಈ ರೀತಿ ಆರಿಸಿಕೊಂಡ ದಾರಿಯು, ನಿರ್ವಿಕಾರನೂ, ನಿರ್ಗುಣನೂ ಆದ
> ಭಗವಂತನನ್ನು ಸೇರುತ್ತದೆ ಎಂಬ ಅಚಲ ನಂಬಿಕೆ ನಮ್ಮನ್ನು ಔನ್ನತ್ಯಕ್ಕೆ ಏರಿಸುತ್ತದೆ.
>
> ಹಾಗಾಗಿ ಬದುಕಿಗೊಂದು ಕ್ರಮವನ್ನು, ಮನಸಿಗೊಂದು ನಂಬಿಕೆಯನ್ನು , ರಕ್ಷಣಾತ್ಮಕ ಭಾವವನ್ನು
> ನೀಡುವ ಮತ-ಧರ್ಮಗಳನ್ನು ನಮ್ಮ ನಮ್ಮ ಅರಿವಿನ ಬೆಳಕಲ್ಲಿ, ಮನಸ್ಸಿಗೆ ಒಪ್ಪುವಂತೆ
> ಅನುಸರಿಸೋಣ. ನಂಬಿಕೆಯ ನೆಲೆಯಲ್ಲಿ ಬದುಕನ್ನು ಬಂಧುರವಾಗಿಸೋಣ. ಎಲ್ಲಾ ತತ್ವಗಳ ಬೆಳಕನ್ನು
> ಕಾಣುತ್ತಾ, ಒಳಿತನ್ನು ಸ್ವೀಕರಿಸುತ್ತಾ  ಜೊತೆಯಾಗಿ ಬಾಳೋಣ.
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to