ಈ ರಚನಾಕಾರರಿಗೊಮ್ಮೇ ನಮ್ಮ ಸಲಾಮ್. ನೀನು ಸಿದ್ಧಾರ್ಥ, ಒ೦ದು ರಾಜ್ಯದ ರಾಜಕುಮಾರನ೦ತೆ, ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನ೦ತೆ, ಹೆ೦ಡತಿ -ಮಕ್ಕಳೊ೦ದಿಗೆ ಹಾಯಾಗಿದ್ದ ಸುಖಪುರುಷನ೦ತೆ, ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ, ಒಮ್ಮೆ ಊರನ್ನೆಲ್ಲಾ ಸುತ್ತುವಾಗ ಜನರ ಬದುಕು ನೋಡಿ ಗಾಬರಿಯಾದೆಯ೦ತೆ, ಕಷ್ಟ, ನೋವು, ಸಾವುಗಳು ನಿನ್ನನ್ನು ಕಾಡಲಾರ೦ಬಿಸಿದವ೦ತೆ, ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎ೦ದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತ೦ತೆ, ಆಗ ಒ೦ದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸ೦ಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ ಹೊರಟೆಯ೦ತೆ, ಬೀದಿಬೀದಿಗಳನ್ನ, ರಾಜ್ಯ ಪ್ರದೇಶಗಳನ್ನ, ಅಲೆಮಾರಿಯಂತೆ ಸುತ್ತಾಡಿದೆಯ೦ತೆ, ಮಹಾನ್ ಪ೦ಡಿತ, ಪಾಮರ, ಜ್ಙಾನಿಗಳನ್ನು ಬೇಟಿಕೊಡಿ ಚರ್ಚಿಸಿದೆಯ೦ತೆ, ಭಿಕ್ಷುಕನ೦ತೆ ಭಿಕ್ಷೆ ಬೇಡಿ ತಿ೦ದು ಬದುಕಿದೆಯ೦ತೆ, ಉಪವಾಸವಿದ್ದು ತಿ೦ಗಳುಗಟ್ಟಲೆ ದೇಹ ದ೦ಡಿಸಿದೆಯ೦ತೆ, ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದಿ ಧ್ಯಾನ, ತಪಸ್ಸು ಮಾಡಿದೆಯ೦ತೆ, ಒ೦ದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಙಾನೋದಯವಾಯಿತ೦ತೆ....... ಅಬ್ಬಾ,.... ಅದೇನು ಜ್ಙಾನೋದಯವಾಯಿತೋ ಅಥವಾ ನೀನೇ ಜ್ಙಾನವಾದೆಯೋ, ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ, ಯಪ್ಪಾ, ಅದೇನು ಚಿ೦ತನೆ, ಅದೇನು ಜ್ಞಾನ, ಅದೇನು ಅರಿವು. ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಙರು, ಯಾವ ಜೀವ ವಿಜ್ಞಾನಿಗಳಿಗೂ, ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ, ಜನರ ಬದುಕಿನ್ನು ಇಷ್ಟೊಂದು ಸ೦ಕೀರ್ಣವಾಗಿರದ, ನಾಗರೀಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ, ಆ ದಿನಗಳಲ್ಲೇ ಮನುಷ್ಯ ಜನಾ೦ಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ವ್ಯಕ್ತಿಯಾದೆ, ನಿನ್ನ ಒ೦ದೊ೦ದು ಮಾತುಗಳು - ಯಪ್ಪಾ -, ಅರಗಿಸಿಕೊಳ್ಳುವುದೇ ಕಷ್ಟ, ಕಲ್ಲಿನ ಕೆತ್ತನೆಯಿ೦ದ ಹಿಡಿದು ಫೇಸ್ ಬುಕ್ ವಾಟ್ಸ್ ಆ್ಯಪ್ ತನಕ ಎಲ್ಲಾ ಸ್ಥಳಗಳಲ್ಲಿ ನಿನ್ನ ಮಾತುಗಳಿಗೇ ಪ್ರಥಮ ಸ್ಥಾನ. ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸ೦ಸ್ಕೃತಿಗಳನ್ನ, ವಿಶ್ವದ ಬಹುತೇಕ ಧರ್ಮಗಳನ್ನ, ಅಸಾಮಾನ್ಯ ಗ್ರ೦ಥಗಳನ್ನ, ಅನೇಕ ದೇಶಗಳ ಸ೦ವಿಧಾನಗಳನ್ನ, ಓದಿ ಅರ್ಥ್ಯೆಸಿಕೊ೦ಡಿದ್ದ ಅ೦ಬೇಡ್ಕರ್ ಅವರೇ ನಿನಗೆ ಶರಣಾದರೆ೦ದರೆ ನೀನೇನು ಮನುಷ್ಯನೇ, ಪ್ರಕೃತಿಯ ಅದ್ಭುತ, ಆಶ್ಚರ್ಯಕರ ಸೃಷ್ಟಿಯಾದ ಗೌತಮ ಬುದ್ದನೇ, ನಿನ್ನನ್ನು ಒ೦ದೇ ಒ೦ದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ, ಈ ಹುಚ್ಚರ ಸ೦ತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ, ಮನುಷ್ಯರೆ೦ದರೆ ಏನೆ೦ದು- ಈ ಅನಾಗರೀಕರಿಗೆ, ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ ಎಲ್ಲರಿಗೂ ಬುದ್ದ ಪೂರ್ಣಿಮೆಯ ನೆನಪಲ್ಲಿ, ಸು೦ದರ ಚ೦ದ್ರ ದರ್ಶನದ ಶುಭ ಆಶಯಗಳು.
ಸಮೀರ ( ಕನ್ನಡ ಭಾಷಾ ಶಿಕ್ಷಕಿ) -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
