ಮೇಡಂ,ತಂಭಾಉಪಕಾರದಸಂಗತಿ,ದನ್ಯವಾದಗಳು,
On 7 Jun 2017 1:37 p.m., "Nandini mahantesh" <[email protected]> wrote: > thank you madam > > 2017-06-06 19:58 GMT+05:30 Dinesha Poojary <[email protected]>: > >> ತುಂಬಾ ಉತ್ತಮವಾದ ಮಾಹಿತಿ.ಅಭಿನಂದನೆಗಳು ತಮಗೆ. >> On Jun 6, 2017 7:11 PM, "Sameera samee" <[email protected]> wrote: >> >>> ಮಾಸ್ತಿ ವೆಂಕಟೇಶ ಅಯ್ಯಂಗಾರ್ >>> >>> ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ >>> ಪ್ರಮುಖರು. ಅವರು ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ >>> ಜನಿಸಿದರು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ವಂತ ಪ್ರತಿಭೆಯಿಂದ 1907ರಲ್ಲಿ >>> ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ; 1909ರಲ್ಲಿ ಎಫ್. ಎ ಪರೀಕ್ಷೆಯಲ್ಲಿ ಪ್ರಥಮ >>> ಶ್ರೇಣಿಯಲ್ಲಿ ತೇರ್ಗಡೆಯಾದರು. ಎಲ್ಲ ತರಗತಿಗಳಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ >>> ಪ್ರಥಮ ಸ್ಥಾನದ ಗಳಿಕೆ ನೀರು ಕುಡಿದಷ್ಟು ಸಲೀಸು. 1913ರಲ್ಲಿ ಮೈಸೂರು ಸಿವಿಲ್ >>> ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅದೇ ವರ್ಷ ಅಸಿಸ್ಟೆಂಟ್ ಕಮೀಷನರ್ ಆಗಿ ನೇಮಕಗೊಂಡರು. >>> 1930ರಲ್ಲಿ ಅವರಿಗೆ ಡೆಪ್ಯೂಟಿ ಕಮೀಷನರ್ ಹುದ್ದೆಗೆ ಭಡ್ತಿ ದೊರೆಯಿತು. ಸರಕಾರದ ಹಲವು >>> ಉನ್ನತ ಹುದ್ದೆಗಳಲ್ಲಿ, ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದರು. 1943ರಲ್ಲಿ >>> ಸರಕಾರದ ಸೇವೆಯಿಂದ, ಸ್ವಾಪೇಕ್ಷಿತ ನಿವೃತ್ತಿ ಪಡೆದರು. ಅವರ ಸರಕಾರೀ ಸೇವೆಯ ಅವಧಿ >>> ಸಾಕಷ್ಟು ದೀರ್ಘವಾದುದು; ವೈವಿಧ್ಯಮಯವಾದುದು. ದೊರಕಿದ ಹುದ್ದೆಗೆ ಅಪಚಾರವಾಗದಂತೆ ದುಡಿದು >>> ದಕ್ಷ ಆಡಳಿತಗಾರರೆಂಬ ಮನ್ನಣೆಗೆ ಪಾತ್ರರಾದರು. ಮಾಸ್ತಿಯವರ ರಾಜನಿಷ್ಠೆ >>> ಹೆಸರುವಾಸಿಯಾದುದು. 1942ರಲ್ಲಿ ಮೈಸೂರು ಮಹಾರಾಜರು ‘ರಾಜಸೇವಾ ಪ್ರಸಕ್ತ’ ಬಿರುದು ನೀಡಿ >>> ಮಾಸ್ತಿಯವರನ್ನು ಗೌರವಿಸಿದರು. ಸರಕಾರಿ ನೌಕರಿಯ ಅನುಭವ ಅವರ ಸಾಹಿತ್ಯಕೃಷಿಗೆ ಬಹಳ >>> ಸ್ಫೂರ್ತಿ ನೀಡಿದೆ. >>> >>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ರಚನೆಗೆ >>> ಪ್ರಾರಂಭಿಸಿದರು. 1910-11ರ ಸುಮಾರಿನಲ್ಲಿ ‘ರಂಗನ ಮದುವೆ’ ಎಂಬ ಮೊದಲ ಸಣ್ಣ ಕಥೆಯನ್ನು >>> ಬರೆದರು. ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ. ಅವರ ಹೆಸರಿನ ಜೊತೆ ಇರುವ ಅವರ >>> ಹುಟ್ಟೂರಿನ ಹೆಸರು ‘ಮಾಸ್ತಿ’ ಅವರ ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ. >>> 1920ರಲ್ಲಿ ‘ಕೆಲವು ಸಣ್ಣಕಥೆಗಳು’ ಎಂಬ ಪ್ರಥಮ ಪುಸ್ತಕ ಪ್ರಕಟವಾಯಿತು. ಇದು ಮಾಸ್ತಿಯವರ >>> ಮೊದಲ ಪುಸ್ತಕವಷ್ಟೇ ಅಲ್ಲ, ಆಧುನಿಕ ಕನ್ನಡ ಸಾಹಿತ್ಯದ ವಿಶಿಷ್ಟವಾದ ಮೊದಲ ಪುಸ್ತಕವೂ ಹೌದು. >>> ಮಾಸ್ತಿಯವರ ಸುಮಾರು 90 ಕಥೆಗಳು ಹಿಂದೆ 14 ಸಂಪುಟಗಳಲ್ಲಿ ಪ್ರಕಟಗೊಂಡಿದ್ದವು. ಇತ್ತೀಚಿನ >>> ವರ್ಷಗಳಲ್ಲಿ ಇವು 5 ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಅವರು ಕನ್ನಡದ ಮೊದಲ >>> ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ. ಕಥೆಗಳಿಗೂ >>> ಮಾಸ್ತಿಯವರಿಗೂ ಅವಿನಾ ಸಂಬಂಧ. ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ >>> ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ. ಅವರ ಕಥೆಗಳಲ್ಲಿ ಕಥಾಸಾಹಿತ್ಯದ ಅತ್ಯುತ್ತಮ ಅಂಶಗಳಿವೆ. >>> ನಿಜಗಲ್ಲಿನ ರಾಣಿ, ಒಂದು ಹಳೆಯ ಕಥೆ, ಕಾಮನ ಹಬ್ಬದ ಒಂದು ಕಥೆ, ಮೊಸರಿನ ಮಂಗಮ್ಮ, ಜೋಗ್ಯೋರ >>> ಅಂಜಪ್ಪನ ಕೋಳಿ ಕಥೆ, ವೆಂಕಟಶಾಮಿಯ ಪ್ರಣಯ, ಕಲ್ಮಾಡಿಯ ಕೋಣ ಮೊದಲಾದವು ಶ್ರೇಷ್ಠ >>> ಕಥೆಗಳಾಗಿವೆ. ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ ಸರಳ. ಜೀವನದ ಅನುಭವ >>> ನಿಚ್ಚಳ. ಕಥೆಯ ನಿರೂಪಣೆಗೆ ಅವರದ್ದೇ ಆದ ವಿಧಾನವಿದೆ. ಸಂಗೀತಗಾರನೊಬ್ಬನ ಜೀವನವನ್ನು >>> ಆಧರಿಸಿರುವ ‘ಸುಬ್ಬಣ್ಣ’ ಎಂಬ ನೀಳ್ಗತೆ ಪ್ರಪಂಚದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವಂಥದು. >>> ಇದು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಜರ್ಮನ್ ಭಾಷೆಗಳಿಗೂ ಅನುವಾದವಾಗಿವೆ. >>> ಕುರುಡರಿಗಾಗಿ ಬ್ರೈಲ್ ಆವೃತ್ತಿಯೂ ಬಿಡುಗಡೆಯಾಗಿದೆ; ಹಲವು ಪುನರ್ ಮುದ್ರಣಕಂಡಿರುವ >>> ಜನಪ್ರಿಯ ಗ್ರಂಥವಾಗಿದೆ. >>> >>> ಮಾಸ್ತಿಯವರ ಕಥೆಗಳ ವಸ್ತು, ಪಾತ್ರ, ಘಟನೆ, ಅನುಭವ, ವಿನ್ಯಾಸಗಳ ಕ್ಷೇತ್ರ >>> ವಿಶಾಲವಾಗಿದೆ; ವಿವಿಧ ಮುಖಗಳಿಂದ ಕೂಡಿದೆ. ಅವರ ಕಥಾ ನಿರೂಪಣೆ ಅನುಕರಣೀಯವಾದುದು. >>> ಅವರಿಗೆ ಕಥಾ ನಿರೂಪಣೆ ಮುಖ್ಯ, ಘಟನೆಯಲ್ಲ. ಮನುಷ್ಯ ಸ್ವಭಾವ ಮುಖ್ಯ ತಂತ್ರವಲ್ಲ. >>> 1968ರಲ್ಲಿ ಮಾಸ್ತಿಯವರ ‘ಸಣ್ಣಕಥೆ’ಗಳು (ಸಣ್ಣಕಥೆಗಳು 12-13ರ ಸಂಯುಕ್ತ ಸಂಪುಟ) >>> ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು. ಆ ಸಂದರ್ಭದಲ್ಲಿ >>> ಮೈಸೂರಿನಲ್ಲಿ ಸಾರ್ವಜನಿಕರು ಅವರನ್ನು ಸನ್ಮಾನಿಸಿದರು. ‘ಸಣ್ಣಕಥೆಗಳು’ ಎರಡನೇ ಸಂಪುಟ >>> ‘ಗುರುದಕ್ಷಿಣೆ’ ಎಂಬ ಹೆಸರಿನಲ್ಲಿ ತಮಿಳು ಭಾಷೆಗೆ ಭಾಷಾಂತರವಾಗಿದೆ. >>> >>> ಮಾಸ್ತಿಯವರ ಕಥಾಸಾಹಿತ್ಯದಲ್ಲಿ ಚೆನ್ನಬಸವನಾಯಕ ಮತ್ತು ಚಿಕ್ಕವೀರರಾಜೇಂದ್ರ ಕಾದಂಬರಿಗಳು >>> ಶಿಖರಪ್ರಾಯವಾಗಿವೆ. ಇವು ಕ್ರಮವಾಗಿ 1949 ಮಾತು 1956ರಲ್ಲಿ ಪ್ರಕಟವಾಗಿವೆ. ಇವೆರಡೂ >>> ಐತಿಹಾಸಿಕ ಕಾದಂಬರಿಗಳು. ಕಾದಂಬರಿಯ ಶಿಲ್ಪ, ಆರಂಭ, ಬೆಳವಣಿಗೆ, ಮುಕ್ತಾಯ, ಪರಿಣಾಮಗಳಲ್ಲಿ >>> ಎರಡು ಕಾದಂಬರಿಗಳಿಗೂ ಸಾಮ್ಯವಿದೆ. ಇವು ದುರಂತ ಕಾದಂಬರಿಗಳು. ಬಿದನೂರಿನ ನಾಯಕ ಮನೆತನದ >>> ಕಥೆ ಚೆನ್ನಬಸವನಾಯಕ ಕಾದಂಬರಿಯ ವಸ್ತು. ಮನೆತನದ ಅವ್ಯವಸ್ಥೆ, ರಾಣಿಯ ಕೆಟ್ಟ ನಡತೆ, ತಾಯಿ >>> ಮಕ್ಕಳ ಮೈಮನಸ್ಸು, ಅಕ್ರಮ ಸಂಬಂಧ, ಇತಿಹಾಸದ ಘಟನಾವಳಿಗಳು ಕಾದಂಬರಿಯಲ್ಲಿ ಮುಖ್ಯವಾಗಿವೆ. >>> ಬಿದನೂರಿನ ಇತಿಹಾಸ ನಮ್ಮ ಜನಾಂಗದ ಭಾಗವಾಗಿ ವರ್ಣನೆಯಾಗಿದೆ. ಭೂತಕಾಲದ ಕತೆಯನ್ನು >>> ವರ್ತಮಾನದೊಡನೆ ಬೆಸುಗೆ ಹಾಕಿ ಜೀವಂತಗೊಳಿಸುವ ಪ್ರಯತ್ನ ಕಾದಂಬರಿಯಲ್ಲಿ ನಡೆದಿದೆ. >>> ಚೆನ್ನಬಸವನಾಯಕ ಕಾದಂಬರಿ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೂ ಅನುವಾದವಾಗಿವೆ. >>> >>> ಕೊಡಗಿನ ರಾಜಕೀಯದ ದುರವಸ್ಥೆ, ಕೊನೆಯ ರಾಜನ ದುರಂತ ಚಿಕ್ಕವೀರರಾಜೇಂದ್ರ ಕಾದಂಬರಿಯ >>> ವಸ್ತು. ರಾಜನ ಲಂಪಟತನ, ದುಷ್ಟ ಸ್ನೇಹ, ಅಧಿಕಾರ ಲಾಲಸೆ, ಕಾಮುಕತನ, ಪ್ರಜಾಹಿತ >>> ನಿರ್ಲಕ್ಷ್ಯ, ಸ್ವಾರ್ಥ, ಸ್ವೇಚ್ಛಾ ಪ್ರವೃತ್ತಿ, ಅದರಿಂದಾಗುವ ಅವನತಿ ಕಾದಂಬರಿಯಲ್ಲಿ >>> ಪ್ರಧಾನವಾಗಿದೆ. ವೈಯಕ್ತಿಕ ಅಧಃಪತನ, ಐತಿಹಾಸಿಕ ಮುನ್ನಡೆಯ ಅನಿವಾರ್ಯತೆ ಏಕಕಾಲದಲ್ಲಿ >>> ಚಿತ್ರಿತವಾಗಿದೆ. ಕಾದಂಬರಿಯಲ್ಲಿ ಸಾರ್ವಕಾಲಿಕವಾದ, ಶಾಶ್ವತವಾದ ಆಲೋಚನೆಯಿದೆ. ಅಂದಿನ >>> ಕತೆಗೆ ಇಂದಿನ ಅರ್ಥ ತುಂಬಲು ಅವಕಾಶವಿದೆ. ಕೊಡಗಿನ ಅಂದಿನ ಆಡಳಿತದ ಕತೆ ಸಮಕಾಲೀನ >>> ಆಡಳಿತಕ್ಕೆ ಅನ್ವಯಿಸುವಂತಿದೆ. ಕೊಡಗಿನ ಕೊನೆಯ ಅರಸ, ಚಿಕ್ಕವೀರರಾಜನ ದುರಂತ ಕಥೆ >>> ಕಣ್ಣಿಗೆ ಕಟ್ಟುವಂತೆ, ಮನಕರಗುವಂತೆ ವರ್ಣನೆಯಾಗಿದೆ. >>> >>> ಚಿಕ್ಕವೀರರಾಜೇಂದ್ರ ಕಾದಂಬರಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿತು. >>> ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಸಾಹಿತ್ಯ ಗ್ರಂಥವೆಂಬುದು ಪ್ರಶಸ್ತಿ ಆಯ್ಕೆಯ ಕಾರಣ. >>> ಮಾಸ್ತಿಯವರ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ಜ್ಞಾನಪೀಠ ದೊಡ್ಡದೇನಲ್ಲ. ಮಾಸ್ತಿಯವರಿಗೆ >>> ಬಂದ ಪ್ರಶಸ್ತಿ ಕನ್ನಡಕ್ಕೆ, ಕನ್ನಡಿಗರಿಗೆ, ಕನ್ನಡ ನಾಡಿಗೆ ಬಂದ ಪ್ರಶಸ್ತಿಯಾಗಿದೆ. >>> ನ್ಯಾಷನಲ್ ಬುಕ್ ಟ್ರಸ್ಟ್ ಚಿಕ್ಕವೀರ ರಾಜೇಂದ್ರ ಕಾದಂಬರಿಯನ್ನು ಭಾರತದ ಎಲ್ಲ ಭಾಷೆಗಳಿಗೂ >>> ಅನುವಾದಿಸಲು ಕಾರ್ಯ ಕೈಗೊಂಡಿತು. >>> >>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ. ಅವರ >>> ಕಾವ್ಯಗಳಲ್ಲಿ ‘ಶ್ರೀನಿವಾಸ’ ದರ್ಶನ ಪ್ರಮುಖವಾಗಿದೆ. ದೇವರ ಲೀಲೆ, ಆತ್ಮ ನಿವೇದನೆ, >>> ಪ್ರಕೃತಿ ಸೌಂದರ್ಯ, ಕನ್ನಡ ಪ್ರೇಮ, ಸಮಾಜದ ಅಂಕುಡೊಂಕು, ನಾಡುನುಡಿ ವ್ಯಕ್ತಿಗಳಿಗೆ >>> ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣುತ್ತವೆ. ಶ್ರೀನಿವಾಸರ ಕಾವ್ಯ >>> ಸರಳವಾದುದುದು. ಸುಂದರವಾದುದು. ಅವರ ಪದ್ಯ ಸಾಹಿತ್ಯದಲ್ಲಿ ಚೆಲುವು, ಹಾಸ್ಯ ಹೆಚ್ಚಾಗಿದೆ. >>> ಗದ್ಯ ಪದ್ಯಗಳ ನಡುವಿನ ಮಡಿ ಮೈಲಿಗೆಯ ನಿರ್ಬಂಧವನ್ನು ತೆಗೆದುಹಾಕಿ ಕಾವ್ಯ ಬರೆದಿರುವುದು >>> ಅವರ ವೈಶಿಷ್ಟ್ಯ. ಶ್ರೀನಿವಾಸರ ಮೊದಲ ಭಾವಗೀತೆಗಳ ಸಂಗ್ರಹ ‘ಬಿನ್ನಹ’ 1922ರಲ್ಲಿ >>> ಪ್ರಕಟವಾಯಿತು. ಹೂವುಗಳು, ಕನ್ನೈದಿಲೆ, ನಾಲ್ವತ್ತರ ನಲುಗು, ಕೊಂಬು, ಕೋಗಿಲೆ ಮೊದಲಾದ >>> ಭಾವಗೀತೆಗಳು ವಿಶಿಷ್ಟವಾಗಿವೆ. ಕನ್ನಡ ನವೋದಯ ಕಾವ್ಯದಲ್ಲಿ ಶ್ರೀನಿವಾಸರ ಕಾವ್ಯಕ್ಕೆ >>> ಚಾರಿತ್ರಿಕ ಮಹತ್ವವಿದೆ. ಬಿನ್ನಹ, ಅರುಣ, ತಾವರೆ, ಮಲಾರ, ಸಂಕ್ರಾಂತಿ ಮುಂತಾದ ಕವನ >>> ಸಂಗ್ರಹಗಳಲ್ಲಿ ಭಾವಗೀತೆಗಳ ವೈವಿಧ್ಯವನ್ನು ಕಾಣಬಹುದು. >>> >>> ಕಥನ ಗೀತೆಗಳಲ್ಲಿ ಶ್ರೀನಿವಾಸರ ಸಾಧನೆ, ಸಿದ್ಧಿ ಗಮನಾರ್ಹ. ಗದ್ಯದಲ್ಲಾಗಲೀ, >>> ಪದ್ಯದಲ್ಲಾಗಲೀ ಕಥೆ ಹೇಳುವುದರಲ್ಲಿ ಒಂದೇ ರೀತಿಯ ಪರಿಣತಿ ಕಂಡುಬರುತ್ತದೆ. ಸರಳರಗಳೆಯನ್ನು >>> ಸಾರ್ಥಕವಾಗಿ ಬಳಸಿದ್ದಾರೆ. 1940ರಲ್ಲಿ ಪ್ರಕಟವಾದ ಗೌಡರ ಮಲ್ಲಿ, ಅನಂತರ ಬೆಳಕುಕಂಡ >>> ನವರಾತ್ರಿ, ಮೂಕನ ಮಕ್ಕಳು, ರಾಮನವಮಿ ಸಂಗ್ರಹಗಳಲ್ಲಿ ಶ್ರೀನಿವಾಸರ ಕಥನಗೀತೆಗಳು >>> ಅಡಕವಾಗಿವೆ. ಕನ್ನಡ ನವೋದಯದ ಕಾಲದಲ್ಲಿ ರಚನೆಯಾದ ಅವರ ಕಥನಗೀತೆಗಳಲ್ಲಿ ಚಾರಿತ್ರಿಕವಾದ, >>> ಸಾಹಿತ್ಯಕವಾದ, ಸುಸಂಸ್ಕೃತವಾದ ಮೌಲಿಕ ಗುಣಗಳಿವೆ. ಮದಲಿಂಗನ ಕಣಿವೆ, ಗೌಡರ ಮಲ್ಲಿ, >>> ಸೋಜಿಗದ ಹೊಳಲು, ದೇಶಾಚಾರ, ಗುಂಡುಸೂಜಿ ಮುಂತಾದ ಕಥನಗೀತೆಗಳು ಉತ್ತಮವಾಗಿವೆ. >>> >>> ಶ್ರೀನಿವಾಸರ ಕಾವ್ಯ ಪ್ರಕಾರದ ಆಚಾರ್ಯ ಕೃತಿ ‘ಶ್ರೀರಾಮಪಟ್ಟಾಭಿಷೇಕ’. ಸರಳ ರಗಳೆಯನ್ನು >>> ಸಹಜವಾಗಿ ದುಡಿಸಿಕೊಂಡಿರುವ ಗ್ರಂಥ. ಶ್ರೀರಾಮನ ಪಟ್ಟಾಭಿಷೇಕವನ್ನು ಕೇಂದ್ರವಾಗಿರಿಸಿ >>> ಸಂಪೂರ್ಣ ರಾಮಾಯಣದ ಕತೆಯನ್ನು ರೂಪಿಸಿರುವ ಬೃಹತ್ ಕೃತಿ. ಇದು ಶ್ರೀನಿವಾಸರ >>> ಮಹತ್ವಾಕಾಂಕ್ಷೆಯ ಕಾವ್ಯವೂ ಹೌದು. ಒಂಬತ್ತು ಸಾವಿರ ಸಾಲುಗಳಿಗೆ ಮಿಕ್ಕಿರುವ ಈ ದೀರ್ಘ >>> ಕಾವ್ಯದಲ್ಲಿ ಸಂಪ್ರದಾಯಬದ್ಧವಾದ ಹಾಗೂ ಹೊಸ ಆಯಾಮದ ಅಂಶಗಳನ್ನೊಳಗೊಂಡ ರಾಮಾಯಣದ ಕಥೆಯನ್ನು >>> ಕಾಣಬಹುದು. ‘ಶ್ರೀರಾಮಪಟ್ಟಾಭಿಷೇಕ’ ಕಾವ್ಯ 1972ರಲ್ಲಿ ಪ್ರಕಟವಾಯಿತು. >>> >>> ಮಾಸ್ತಿಯವರು ಹಲವು ನಾಟಕಗಳನ್ನು ಬರೆದಿದ್ದಾರೆ. 1923ರಲ್ಲಿ ಪ್ರಕಟವಾದ ‘ಶಾಂತಾ’ ಅವರ >>> ಮೊದಲ ನಾಟಕ. ‘ಮಂಜುಳಾ’ ಎಂಬುದು ಸಾಮಾಜಿಕ ನಾಟಕ. ಉಳಿದವು ಪುರಾಣ ಹಾಗೂ ಇತಿಹಾಸದಿಂದ >>> ಪ್ರೇರಣೆ ಪಡೆದಿವೆ. ಕಾಡುಕುರುಬರಿಗೆ ಸಂಬಂಧಿಸಿದ, ಐತಿಹಾಸಿಕ ಅಂಶಗಳನ್ನೊಳಗೊಂಡ >>> ‘ಕಾಕನಕೋಟೆ’ ಮಾಸ್ತಿಯವರ ಉತ್ತಮ ನಾಟಕ. ಗೌತಮ ಬುದ್ಧನ ಹೆಂಡತಿ ಯಶೋಧರೆಯ ಮಾನಸಿಕ >>> ತುಮುಲವನ್ನು ಪ್ರಧಾನವಾಗಿ ಚಿತ್ರಿಸಿರುವ ‘ಯಶೋಧರಾ’ ಅತ್ಯುತ್ತಮ ನಾಟಕ. ಮಹಾಕವಿ ಕಾಳಿದಾಸನ >>> ಬಗೆಗೆ ಇರುವ ಕಟ್ಟುಕತೆ, ಇತಿಹಾಸವನ್ನು ಬಳಸಿಕೊಂಡು ರಚಿಸಿರುವ ಏಳು ಅಂಕಗಳ ನಾಟಕ >>> ‘ಕಾಳಿದಾಸ’. ಇದಕ್ಕೆ 1983ರಲ್ಲಿ ‘ವರ್ಧಮಾನ ಪ್ರಶಸ್ತಿ’ ಸಂದಿತು. ಮಾಸ್ತಿಯವರ >>> ಸುಸಂಸ್ಕೃತ ಮನೋಧರ್ಮ ಅವರ ನಾಟಕ ರಚನೆಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಕನ್ನಡ ನಾಟಕ >>> ಕ್ಷೇತ್ರಕ್ಕೆ ಮಾಸ್ತಿಯವರ ನಾಟಕ ಕೃಷಿ ಸಾಕಷ್ಟು ಕಸುವು ತುಂಬಿದೆ. ಷೇಕ್ಸ್ ಪಿಯರ್ >>> ಮಹಾಕವಿಯ ಕೆಲವು ನಾಟಕಗಳನ್ನು ಚಂಡಮಾರುತ, ದ್ವಾದಶ ರಾತ್ರಿ, ಲಿಯರ್ ಮಹಾರಾಜ ಮೊದಲಾದ >>> ಹೆಸರುಗಳಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ಧಾರೆ. ಮಾಸ್ತಿಯವರ ಭಾಷಾಂತರ ನಾಟಕಗಳಿಂದ ಕನ್ನಡ >>> ನಾಟಕಸಾಹಿತ್ಯ ಗರಿಗಟ್ಟಿಕೊಳ್ಳಲು ಸಹಾಯಕವಾಗಿದೆ. >>> >>> ಮಾಸ್ತಿಯವರ ಆತ್ಮಕಥೆ ‘ಭಾವ’ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ‘ಭಾವ’ದಲ್ಲಿ ಅವರ >>> ಬದುಕಿನ ಮೂಲಧಾತುಗಳ ದಾಖಲೆಗಳಿವೆ. ನವರತ್ನ ರಾಮರಾವ್, ರವೀಂದ್ರನಾಥ ಠಾಗೂರರು, >>> ಶ್ರೀರಾಮಕೃಷ್ಣ ಎಂಬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ವೇದಗಳ ಕಾಲದಿಂದ ಬೆಳೆದುಬಂದ >>> ಧರ್ಮ, ಸಂಸ್ಕೃತಿ, ಪರಂಪರೆಗಳ ಅವಲೋಕನವಾದ ‘ಅಂತರಗಂಗೆ’; ವಾಲ್ಮೀಕಿ ರಾಮಾಯಣವನ್ನು ಕುರಿತ >>> ವಿಮರ್ಶಾತ್ಮಕ ಅಧ್ಯಯನವಾದ ‘ಆದಿಕವಿ ವಾಲ್ಮೀಕಿ’; ಅಧುನಿಕ ಕನ್ನಡ ಸಾಹಿತ್ಯದ ಪ್ರಾರಂಭದ >>> ಮುಖ್ಯ ಘಟ್ಟಗಳನ್ನು ವಿವೇಚಿಸುವ ‘ನಮ್ಮ ಹೊಸ ಸಾಹಿತ್ಯದ ಆರಂಭ’; ಹಿಂದೂ ಧರ್ಮದ >>> ಹಿನ್ನೆಲೆಯಲ್ಲಿ ಮೂಡಿರುವ ‘ಧರ್ಮಸಂರಕ್ಷಣೆ’; ಮಹಾಭಾರತ ಕಾವ್ಯಸಂಗ್ರಹವಾದ ‘ಭಾರತ ತೀರ್ಥ’ >>> ಗ್ರಂಥಗಳು ಮಾಸ್ತಿಯವರ ಪರಿಪಕ್ವ ಬದುಕಿನ, ಉದಾತ್ತ ಚಿಂತನೆಯ ವೈಚಾರಿಕ ಗ್ರಂಥಗಳಾಗಿವೆ. >>> ಭಾರತ ಮತ್ತು ಪಾಶ್ಚಾತ್ಯ ಕೃತಿಗಳು ವಿವೇಚನೆಯನ್ನೊಳಗೊಂಡ ‘ವಿಮರ್ಶೆ’ಗಳು, ನೂರಾರು >>> ‘ಪ್ರಸಂಗ’ಗಳು, ವಿಚಾರಸೂಕ್ತಿಗಳು, ಕನ್ನಡದ ಕೆಚ್ಚನ್ನು ಉತ್ತೇಜಿಸುವ ಲೇಖನಗಳು ಅವರಿಂದ >>> ಸೃಷ್ಟಿಯಾಗಿವೆ. ಕರ್ಣಾಟ ಭಾರತ ಕಥಾಮಂಜರಿ, ರವೀಂದ್ರ ಪ್ರಶಸ್ತಿ, ಸಂಭಾವನೆ, ಸರ್ ಎಂ. >>> ವಿಶ್ವೇಶ್ವರಯ್ಯ ಮೊದಲಾದ ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ. >>> >>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂಗ್ಲಿಷ್ ಭಾಷೆಯಲ್ಲೂ ಗ್ರಂಥಗಳನ್ನು >>> ರಚಿಸಿದ್ದಾರೆ. ತಮ್ಮ ಕೆಲವು ಕನ್ನಡ ಕೃತಿಗಳನ್ನು ಸ್ವತಃ ಇಂಗ್ಲಿಷಿಗೆ >>> ಭಾಷಾಂತರಿಸಿದ್ದಾರೆ. ಅವರ ಇಂಗ್ಲಿಷ್ ಭಾಷೆಯ ಬರಹ ಕೂಡಾ ಕನ್ನಡದಷ್ಟೇ ಆಕರ್ಷಕವಾಗಿದೆ. >>> >>> ಮಾಸ್ತಿಯವರ ಕೃತಿಗಳು ಸಂಖ್ಯೆಯಲ್ಲಿ, ಸತ್ವದಲ್ಲಿ, ಗುಣದಲ್ಲಿ, ಗಾತ್ರದಲ್ಲಿ, >>> ವೈವಿಧ್ಯದಲ್ಲಿ ದೊಡ್ಡವು. ಕತೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ಆತ್ಮಕತೆ, ಜೀವನ >>> ಚರಿತ್ರೆ, ಪ್ರಬಂಧ, ಜನಪದ, ಪತ್ರಿಕೋದ್ಯಮ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ 120 >>> ಗ್ರಂಥಗಳನ್ನು ಬರೆದಿದ್ದಾರೆ. ಇದರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿಯೂ 17 ಗ್ರಂಥಗಳನ್ನು >>> ರಚಿಸಿದ್ದಾರೆ. ಸುಮಾರು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೃಷ್ಟಿಸಿದ್ದಾರೆ. >>> ಅವರು ತಾವು ಸಾಹಿತಿಯಾದುದಲ್ಲದೆ ಹಲವರು ಮಹಾನೀಯರನ್ನು ಸಾಹಿತಿಗಳಾಗಲು ಸ್ಫೂರ್ತಿ >>> ನೀಡಿದ್ದಾರೆ. ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಹಲವರ >>> ಗ್ರಂಥಗಳನ್ನು ಪ್ರಕಟಿಸಿ, ಹಲವರಿಗೆ ನಾನಾ ರೀತಿಯಲ್ಲಿ ನೆರವು ನೀಡಿ ಬೆಂಬಲಿಸಿದ್ದಾರೆ. >>> ಕನ್ನಡದಲ್ಲಿ ಸಾಹಿತಿಗಳ ಪಡೆ ಸೃಷ್ಟಿಯಾಗಲು ಸಹಕರಿಸಿದ್ದಾರೆ. ಅವರ ಬದುಕು ಬರಹ ಹಲವು >>> ಕೃತಿಗಳಿಗೆ, ಕೃತಿಗಾರರಿಗೆ ಪ್ರೇರಣೆ ನೀಡಿದೆ. ಮಾಸ್ತಿಯವರನ್ನು ಕುರಿತು ಇತರರಿಂದ ಮೌಲಿಕ >>> ಗ್ರಂಥಗಳು ಬೆಳಕು ಕಂಡಿವೆ. >>> >>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಮಾತು ತಮಿಳು, ಕಾಲೇಜಿನಲ್ಲಿ ಓದಿದ್ದು >>> ಇಂಗ್ಲಿಷ್. ಬದುಕಿದ್ದು, ಬರೆದದ್ದು ಕನ್ನಡ. ಅವರು ಮೊದಲಿನಿಂದಲೂ ಕನ್ನಡದ ಪರವಾಗಿ >>> ದನಿಗೂಡಿಸಿದವರು. 1910ರ ಸುಮಾರಿನಲ್ಲಿ ಕನ್ನಡದಲ್ಲಿ ಮಾತಾಡುವುದಕ್ಕೆ, ಬರೆಯುವುದಕ್ಕೆ >>> ವಿದ್ಯಾವಂತರು ಹಿಂದುಮುಂದು ನೋಡುತ್ತಿದ್ದರು. ಅಂಥ ದಿನಗಳಲ್ಲಿ ಮಾಸ್ತಿಯವರು ಕನ್ನಡದಲ್ಲಿ >>> ಬರೆದರು. ಕನ್ನಡದ ಏಳಿಗೆಗೆ ಹೋರಾಡಿದರು. ಇದರಿಂದ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು >>> ಸಹಾಯವಾಯಿತು. ಮಾಸ್ತಿಯವರ ಮಾರ್ಗ ಹಲವರಿಗೆ ದಾರಿದೀಪವಾಯಿತು. ಕರ್ನಾಟಕ ಏಕೀಕರಣಕ್ಕೆ >>> ಅವರು ನಿಷ್ಠೆಯಿಂದ ದುಡಿದರು. ತಮ್ಮ ಉಪನ್ಯಾಸಗಳಿಂದ, ವೈಚಾರಿಕ ಬರಹಗಳಿಂದ ಜನರನ್ನು >>> ಎಚ್ಚರಿಸಿದರು. ಅವರಿಂದ ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರವಾಯಿತು. >>> >>> ಮಾಸ್ತಿಯವರು ಪತ್ರಿಕೊದ್ಯಮಿಯೂ ಹೌದು. 1944ರಿಂದ 1965ರವರೆಗೆ ‘ಜೀವನ’ >>> ಮಾಸಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದರು. ‘ಜೀವನ’ ಪತ್ರಿಕೆಯ ಮೂಲಕ ಅನೇಕ ಸಾಹಿತಿಗಳ >>> ಕೃತಿಗಳು ಬೆಳಕು ಕಂಡಿವೆ. ‘ಜೀವನ’ ಪತ್ರಿಕೆಯ ಸಂಪಾದಕೀಯದಲ್ಲಿ ಮೂಡಿದ ಸಾಹಿತ್ಯ, >>> ಸಂಸ್ಕೃತಿ, ಕಲೆ, ರಾಜಕೀಯ, ಧರ್ಮ, ದೇವರು, ಸಾಮಾಜಿಕ, ಆರ್ಥಿಕ ವಿಚಾರ ಮೊದಲಾದ ಹಲವು ಹತ್ತು >>> ವಿಷಯಗಳ ಬಗೆಗಿನ ಲೇಖನಗಳಲ್ಲಿ ಮಾಸ್ತಿಯವರ ಭಾವ ಮಿಂಚಿದೆ. ಈ ಬರಹಗಳು ‘ಜೀವನ ಸಂಪಾದಕೀಯ’ >>> ಎಂಬ ಹೆಸರಿನ ಗ್ರಂಥದಲ್ಲಿ ಲಭ್ಯವಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಮಾಸ್ತಿಯವರ ‘ಜೀವನ’ >>> ಮರೆಯಲಾಗದ ನೆನಪು. >>> >>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರಕಾರದ ಉನ್ನತ ಹುದ್ದೆಗಳಲ್ಲಿ, ವಿವಿಧ ಸ್ಥಳಗಳಲ್ಲಿ >>> ಅನುಭವ ಗಳಿಸಿದವರು. ಜನಸಾಮಾನ್ಯರ ಜನಜೀವನವನ್ನು ಹತ್ತಿರದಿಂದ ಗಮನಿಸಿದವರು. ನಮ್ಮ ಜನರ >>> ಆಚಾರ ವಿಚಾರ, ಸಂಸ್ಕೃತಿ, ಪರಂಪರೆ, ಬದುಕಿನ ರೀತಿ ನೀತಿ ಮೊದಲಾದವುಗಳ ಬಗೆಗೆ ಆಸಕ್ತಿ >>> ತಳೆದವರು. ಶುಚಿಯಾದ, ಆದರ್ಶವಾದ ಸಂಪ್ರದಾಯಕ್ಕೆ ನಿಷ್ಠೆ ತೋರಿದವರು. ರಾಜಮಹಾರಾಜರ >>> ಗೌರವಕ್ಕೆ ಪಾತ್ರರಾದವರು. ಬ್ರಿಟಿಷರ ಆಡಳಿತವನ್ನು, ಬ್ರಿಟಿಷ್ ಆಡಳಿತಗಾರರನ್ನು ಕಣ್ಣಾರೆ >>> ಕಂಡವರು. ಸಂಪ್ರದಾಯಬದ್ಧವಾದ ಮನೆತನದಲ್ಲಿ ಹುಟ್ಟಿ ಬೆಳೆದವರು. ದೊಡ್ಡವರನ್ನು, ದೊಡ್ಡ >>> ಬದುಕನ್ನು ನೋಡಿದವರು; ಅನುಸರಿಸಿದವರು. ತಮ್ಮಂತೆ ಇತರರೂ ಅನುಸರಿಸಲು ಆಶಿಸಿದವರು. ಜನರ >>> ಬದುಕು ದೊಡ್ಡದಾಗಲು ಹಾರೈಸಿದವರು. ಈ ಅಂಶಗಳಿಗೆ ಒತ್ತುಕೊಡುವ ವಸ್ತು, ಪಾತ್ರ, ಸನ್ನಿವೇಶ >>> ನಿರೂಪಣೆಗಳು ಮಾಸ್ತಿಯವರ ಕೃತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ. ಭಾರತ ದೇಶದಲ್ಲಿ >>> ಕಾಣಬಹುದಾದ, ಕಾಣಬೇಕಾದ ಪಾತ್ರಗಳು ಅವರವು. ಮಾಸ್ತಿಯವರಲ್ಲಿ ಆದರ್ಶ ಪಾತ್ರಗಳು ಅಧಿಕ. >>> ದುಷ್ಟರು, ಕ್ರೂರಿಗಳು, ಅಯೋಗ್ಯರು ಎನ್ನಬಹುದಾದ ಪಾತ್ರಗಳು ಕಡಿಮೆ. ಇದ್ದರೂ ಅವುಗಳ >>> ಬಗೆಗೆ ಇನ್ನಿಲ್ಲದ ಅನುಕಂಪ. ದುಷ್ಟತನವೂ ದೌರ್ಬಲ್ಯ ಎನ್ನುವುದು ಅವರ ಮನೋಧರ್ಮ. ಆದರ್ಶ >>> ಸ್ತ್ರೀ ಪಾತ್ರಗಳ ಬಗೆಗೆ ಮಾಸ್ತಿಯವರಿಗೆ ಅಪಾರ ಒಲವು. >>> >>> ಮಾಸ್ತಿಯವರ ಎಲ್ಲ ಕೃತಿಗಳಲ್ಲಿ ಸರಳತೆಗೆ ಮೊದಲ ಪಟ್ಟ. ಸಾಧಾರಣ ಮಾತುಗಳಿಂದ ಅಸಾಧಾರಣ >>> ಚಿತ್ರ ನಿರ್ಮಿಸುವ ಕಲೆ ಅವರದು. ಮಾಸ್ತಿಯವರಿಗೆ ಸಂದ ಗೌರವಗಳು ಅನೇಕ. ಇಂಥಹ ಹಿರಿಯರಿಗೆ >>> ಗೌರವ ಸಲ್ಲಿಸುವುದು ಆ ಗೌರವಕ್ಕೇ ಹಿರಿತನವಲ್ಲವೇ! >>> >>> ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕೂ ದೊಡ್ಡದು. ಅವರ ಬದುಕು ಒಂದು ಮಹಾಕೃತಿ. ಅವರ >>> ಬದುಕಿಗೂ, ಬರಹಕ್ಕೂ ಅಂತರ ಕಡಿಮೆ. ಬದುಕಿದಂತೆ ಬರೆಯಬೇಕು, ಬರೆದಂತೆ ಬದುಕಬೇಕು >>> ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ >>> ಕೀರ್ತಿ ಅವರದ್ದು. 1986ರಲ್ಲಿ ಅವರು ನಿಧನರಾದಾಗ ಅವರಿಗೆ 95 ವರ್ಷ ತುಂಬಿತ್ತು. >>> >>> ಗಾಂಧೀಬಜಾರಿನಲ್ಲಿ ಚಾಕೊಲೇಟು, ಪೆಪ್ಪರಮೆಂಟುಗಳನ್ನು ಮಕ್ಕಳಿಗಾಗಿ ಕೋಟಿನ ಜೇಬಿನಲ್ಲಿ >>> ತುಂಬಿಕೊಂಡು, ಬದುಕಿನ ಕಲೆಯನ್ನು, ನಯ ವಿನಯ, ಸೌಜನ್ಯ, ಸಂಸ್ಕೃತಿ, ಹಸನ್ಮುಖ ಪ್ರೀತಿ >>> ಸೊಬಗುಗಳನ್ನು ಸರ್ವಲೋಕಗಳಿಗೂ ಸಾಲುವಷ್ಟು ತಮ್ಮನ್ನೇ ಮಾದರಿಯಾಗಿರಿಸಿಕೊಂಡು >>> ನಡೆದಾಡುತ್ತಿದ್ದ ಈ ಹಿರಿಯ ಜೀವನವನ್ನು ಕಂಡ ಸೌಭಾಗ್ಯವನ್ನು ನೆನೆದಾಗ, ಅವರ ಬಳಿಯಲ್ಲಿ >>> ಸುಳಿದ ನಮ್ಮ ಸುಕೃತವನ್ನು ನೆನೆಸಿಕೊಂಡು ಹೃದಯ ಉಕ್ಕಿ ಬರುತ್ತದೆ. ಮಾಸ್ತಿಯಂತಹ ಇಂಥಹ >>> ಶ್ರೇಷ್ಠ ಆಸ್ತಿಗಳು ನಮ್ಮ ಉಳಿದ ಜೀವನದಲ್ಲೂ, ಮುಂದಿನ ಯುಗ ಯುಗಗಳ ಜೀವನದಲ್ಲೂ ಮರಳೀತೆ >>> ಎಂದು ಮಾಸ್ತಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟ ಆ ವಿಧಾತನ ಬಳಿ ಮೊರೆಯಿಡುವಂತಾಗುತ್ತಿದೆ. >>> >>> >>> ಪ್ರಕಾಶ ಗಾಯಕವಾಡ >>> >>> ಸಮೀರ ( ಕನ್ನಡ ಭಾಷಾ ಶಿಕ್ಷಕಿ >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
