thans sir/medam useful message

2017-06-07 18:26 GMT+05:30 Balappa Arjanal <[email protected]>:

> ಮೇಡಂ,ತಂಭಾಉಪಕಾರದಸಂಗತಿ,ದನ್ಯವಾದಗಳು,
>
> On 7 Jun 2017 1:37 p.m., "Nandini mahantesh" <[email protected]>
> wrote:
>
>> thank you madam
>>
>> 2017-06-06 19:58 GMT+05:30 Dinesha Poojary <[email protected]>:
>>
>>> ತುಂಬಾ ಉತ್ತಮವಾದ ಮಾಹಿತಿ.ಅಭಿನಂದನೆಗಳು ತಮಗೆ.
>>> On Jun 6, 2017 7:11 PM, "Sameera samee" <[email protected]> wrote:
>>>
>>>> ಮಾಸ್ತಿ ವೆಂಕಟೇಶ ಅಯ್ಯಂಗಾರ್
>>>>
>>>> ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
>>>> ಪ್ರಮುಖರು.  ಅವರು ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ
>>>> ಜನಿಸಿದರು.  ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ವಂತ ಪ್ರತಿಭೆಯಿಂದ 1907ರಲ್ಲಿ
>>>> ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ; 1909ರಲ್ಲಿ ಎಫ್. ಎ ಪರೀಕ್ಷೆಯಲ್ಲಿ ಪ್ರಥಮ
>>>> ಶ್ರೇಣಿಯಲ್ಲಿ ತೇರ್ಗಡೆಯಾದರು.  ಎಲ್ಲ ತರಗತಿಗಳಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ
>>>> ಪ್ರಥಮ ಸ್ಥಾನದ ಗಳಿಕೆ ನೀರು ಕುಡಿದಷ್ಟು ಸಲೀಸು.  1913ರಲ್ಲಿ ಮೈಸೂರು ಸಿವಿಲ್
>>>> ಪರೀಕ್ಷೆಯಲ್ಲಿ ಉತ್ತೀರ್ಣರಾದರು.  ಅದೇ ವರ್ಷ ಅಸಿಸ್ಟೆಂಟ್ ಕಮೀಷನರ್ ಆಗಿ ನೇಮಕಗೊಂಡರು.
>>>>  1930ರಲ್ಲಿ ಅವರಿಗೆ ಡೆಪ್ಯೂಟಿ ಕಮೀಷನರ್ ಹುದ್ದೆಗೆ ಭಡ್ತಿ ದೊರೆಯಿತು.  ಸರಕಾರದ ಹಲವು
>>>> ಉನ್ನತ ಹುದ್ದೆಗಳಲ್ಲಿ, ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದರು.  1943ರಲ್ಲಿ
>>>> ಸರಕಾರದ ಸೇವೆಯಿಂದ, ಸ್ವಾಪೇಕ್ಷಿತ ನಿವೃತ್ತಿ ಪಡೆದರು.  ಅವರ ಸರಕಾರೀ ಸೇವೆಯ ಅವಧಿ
>>>> ಸಾಕಷ್ಟು ದೀರ್ಘವಾದುದು; ವೈವಿಧ್ಯಮಯವಾದುದು.  ದೊರಕಿದ ಹುದ್ದೆಗೆ ಅಪಚಾರವಾಗದಂತೆ ದುಡಿದು
>>>> ದಕ್ಷ ಆಡಳಿತಗಾರರೆಂಬ ಮನ್ನಣೆಗೆ ಪಾತ್ರರಾದರು.  ಮಾಸ್ತಿಯವರ ರಾಜನಿಷ್ಠೆ
>>>> ಹೆಸರುವಾಸಿಯಾದುದು.  1942ರಲ್ಲಿ ಮೈಸೂರು ಮಹಾರಾಜರು ‘ರಾಜಸೇವಾ ಪ್ರಸಕ್ತ’ ಬಿರುದು ನೀಡಿ
>>>> ಮಾಸ್ತಿಯವರನ್ನು ಗೌರವಿಸಿದರು.  ಸರಕಾರಿ ನೌಕರಿಯ ಅನುಭವ ಅವರ ಸಾಹಿತ್ಯಕೃಷಿಗೆ ಬಹಳ
>>>> ಸ್ಫೂರ್ತಿ ನೀಡಿದೆ.
>>>>
>>>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ರಚನೆಗೆ
>>>> ಪ್ರಾರಂಭಿಸಿದರು.  1910-11ರ ಸುಮಾರಿನಲ್ಲಿ ‘ರಂಗನ ಮದುವೆ’ ಎಂಬ ಮೊದಲ ಸಣ್ಣ ಕಥೆಯನ್ನು
>>>> ಬರೆದರು.  ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ.  ಅವರ ಹೆಸರಿನ ಜೊತೆ ಇರುವ ಅವರ
>>>>  ಹುಟ್ಟೂರಿನ ಹೆಸರು  ‘ಮಾಸ್ತಿ’ ಅವರ   ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ.
>>>>  1920ರಲ್ಲಿ ‘ಕೆಲವು ಸಣ್ಣಕಥೆಗಳು’ ಎಂಬ ಪ್ರಥಮ ಪುಸ್ತಕ ಪ್ರಕಟವಾಯಿತು.  ಇದು ಮಾಸ್ತಿಯವರ
>>>> ಮೊದಲ ಪುಸ್ತಕವಷ್ಟೇ ಅಲ್ಲ, ಆಧುನಿಕ ಕನ್ನಡ ಸಾಹಿತ್ಯದ ವಿಶಿಷ್ಟವಾದ ಮೊದಲ ಪುಸ್ತಕವೂ ಹೌದು.
>>>>  ಮಾಸ್ತಿಯವರ ಸುಮಾರು 90 ಕಥೆಗಳು ಹಿಂದೆ  14 ಸಂಪುಟಗಳಲ್ಲಿ ಪ್ರಕಟಗೊಂಡಿದ್ದವು. ಇತ್ತೀಚಿನ
>>>>  ವರ್ಷಗಳಲ್ಲಿ  ಇವು   5 ಸಂಪುಟಗಳಲ್ಲಿ  ಪ್ರಕಟಗೊಂಡಿವೆ.    ಅವರು ಕನ್ನಡದ ಮೊದಲ
>>>> ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ.  ಕಥೆಗಳಿಗೂ
>>>> ಮಾಸ್ತಿಯವರಿಗೂ ಅವಿನಾ ಸಂಬಂಧ.  ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ
>>>> ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ.  ಅವರ ಕಥೆಗಳಲ್ಲಿ ಕಥಾಸಾಹಿತ್ಯದ ಅತ್ಯುತ್ತಮ ಅಂಶಗಳಿವೆ.
>>>>  ನಿಜಗಲ್ಲಿನ ರಾಣಿ, ಒಂದು ಹಳೆಯ ಕಥೆ, ಕಾಮನ ಹಬ್ಬದ ಒಂದು ಕಥೆ, ಮೊಸರಿನ ಮಂಗಮ್ಮ, ಜೋಗ್ಯೋರ
>>>> ಅಂಜಪ್ಪನ ಕೋಳಿ ಕಥೆ, ವೆಂಕಟಶಾಮಿಯ ಪ್ರಣಯ, ಕಲ್ಮಾಡಿಯ ಕೋಣ ಮೊದಲಾದವು ಶ್ರೇಷ್ಠ
>>>> ಕಥೆಗಳಾಗಿವೆ.  ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ ಸರಳ.  ಜೀವನದ ಅನುಭವ
>>>> ನಿಚ್ಚಳ.  ಕಥೆಯ ನಿರೂಪಣೆಗೆ ಅವರದ್ದೇ ಆದ ವಿಧಾನವಿದೆ.  ಸಂಗೀತಗಾರನೊಬ್ಬನ ಜೀವನವನ್ನು
>>>> ಆಧರಿಸಿರುವ ‘ಸುಬ್ಬಣ್ಣ’ ಎಂಬ ನೀಳ್ಗತೆ ಪ್ರಪಂಚದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವಂಥದು.
>>>>  ಇದು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಜರ್ಮನ್ ಭಾಷೆಗಳಿಗೂ ಅನುವಾದವಾಗಿವೆ.
>>>>  ಕುರುಡರಿಗಾಗಿ ಬ್ರೈಲ್ ಆವೃತ್ತಿಯೂ ಬಿಡುಗಡೆಯಾಗಿದೆ; ಹಲವು ಪುನರ್ ಮುದ್ರಣಕಂಡಿರುವ
>>>> ಜನಪ್ರಿಯ ಗ್ರಂಥವಾಗಿದೆ.
>>>>
>>>> ಮಾಸ್ತಿಯವರ ಕಥೆಗಳ ವಸ್ತು, ಪಾತ್ರ, ಘಟನೆ, ಅನುಭವ, ವಿನ್ಯಾಸಗಳ ಕ್ಷೇತ್ರ
>>>> ವಿಶಾಲವಾಗಿದೆ; ವಿವಿಧ ಮುಖಗಳಿಂದ ಕೂಡಿದೆ.  ಅವರ ಕಥಾ ನಿರೂಪಣೆ ಅನುಕರಣೀಯವಾದುದು.
>>>>  ಅವರಿಗೆ ಕಥಾ ನಿರೂಪಣೆ ಮುಖ್ಯ, ಘಟನೆಯಲ್ಲ.  ಮನುಷ್ಯ ಸ್ವಭಾವ ಮುಖ್ಯ ತಂತ್ರವಲ್ಲ.
>>>>  1968ರಲ್ಲಿ ಮಾಸ್ತಿಯವರ ‘ಸಣ್ಣಕಥೆ’ಗಳು (ಸಣ್ಣಕಥೆಗಳು 12-13ರ ಸಂಯುಕ್ತ ಸಂಪುಟ)
>>>> ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು.  ಆ ಸಂದರ್ಭದಲ್ಲಿ
>>>> ಮೈಸೂರಿನಲ್ಲಿ ಸಾರ್ವಜನಿಕರು ಅವರನ್ನು ಸನ್ಮಾನಿಸಿದರು.  ‘ಸಣ್ಣಕಥೆಗಳು’ ಎರಡನೇ ಸಂಪುಟ
>>>> ‘ಗುರುದಕ್ಷಿಣೆ’ ಎಂಬ ಹೆಸರಿನಲ್ಲಿ ತಮಿಳು ಭಾಷೆಗೆ ಭಾಷಾಂತರವಾಗಿದೆ.
>>>>
>>>> ಮಾಸ್ತಿಯವರ ಕಥಾಸಾಹಿತ್ಯದಲ್ಲಿ ಚೆನ್ನಬಸವನಾಯಕ ಮತ್ತು ಚಿಕ್ಕವೀರರಾಜೇಂದ್ರ
>>>> ಕಾದಂಬರಿಗಳು ಶಿಖರಪ್ರಾಯವಾಗಿವೆ.  ಇವು ಕ್ರಮವಾಗಿ 1949 ಮಾತು 1956ರಲ್ಲಿ ಪ್ರಕಟವಾಗಿವೆ.
>>>>  ಇವೆರಡೂ ಐತಿಹಾಸಿಕ ಕಾದಂಬರಿಗಳು.  ಕಾದಂಬರಿಯ ಶಿಲ್ಪ, ಆರಂಭ, ಬೆಳವಣಿಗೆ, ಮುಕ್ತಾಯ,
>>>> ಪರಿಣಾಮಗಳಲ್ಲಿ ಎರಡು ಕಾದಂಬರಿಗಳಿಗೂ ಸಾಮ್ಯವಿದೆ.  ಇವು ದುರಂತ ಕಾದಂಬರಿಗಳು.  ಬಿದನೂರಿನ
>>>> ನಾಯಕ ಮನೆತನದ ಕಥೆ ಚೆನ್ನಬಸವನಾಯಕ ಕಾದಂಬರಿಯ ವಸ್ತು.  ಮನೆತನದ ಅವ್ಯವಸ್ಥೆ, ರಾಣಿಯ ಕೆಟ್ಟ
>>>> ನಡತೆ, ತಾಯಿ ಮಕ್ಕಳ ಮೈಮನಸ್ಸು, ಅಕ್ರಮ ಸಂಬಂಧ, ಇತಿಹಾಸದ ಘಟನಾವಳಿಗಳು ಕಾದಂಬರಿಯಲ್ಲಿ
>>>> ಮುಖ್ಯವಾಗಿವೆ.  ಬಿದನೂರಿನ ಇತಿಹಾಸ ನಮ್ಮ ಜನಾಂಗದ ಭಾಗವಾಗಿ ವರ್ಣನೆಯಾಗಿದೆ.  ಭೂತಕಾಲದ
>>>> ಕತೆಯನ್ನು ವರ್ತಮಾನದೊಡನೆ ಬೆಸುಗೆ ಹಾಕಿ ಜೀವಂತಗೊಳಿಸುವ ಪ್ರಯತ್ನ ಕಾದಂಬರಿಯಲ್ಲಿ
>>>> ನಡೆದಿದೆ.  ಚೆನ್ನಬಸವನಾಯಕ ಕಾದಂಬರಿ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೂ
>>>> ಅನುವಾದವಾಗಿವೆ.
>>>>
>>>> ಕೊಡಗಿನ ರಾಜಕೀಯದ ದುರವಸ್ಥೆ, ಕೊನೆಯ ರಾಜನ ದುರಂತ ಚಿಕ್ಕವೀರರಾಜೇಂದ್ರ ಕಾದಂಬರಿಯ
>>>> ವಸ್ತು.  ರಾಜನ ಲಂಪಟತನ, ದುಷ್ಟ ಸ್ನೇಹ, ಅಧಿಕಾರ ಲಾಲಸೆ, ಕಾಮುಕತನ, ಪ್ರಜಾಹಿತ
>>>> ನಿರ್ಲಕ್ಷ್ಯ, ಸ್ವಾರ್ಥ, ಸ್ವೇಚ್ಛಾ ಪ್ರವೃತ್ತಿ, ಅದರಿಂದಾಗುವ ಅವನತಿ ಕಾದಂಬರಿಯಲ್ಲಿ
>>>> ಪ್ರಧಾನವಾಗಿದೆ.  ವೈಯಕ್ತಿಕ ಅಧಃಪತನ, ಐತಿಹಾಸಿಕ ಮುನ್ನಡೆಯ ಅನಿವಾರ್ಯತೆ ಏಕಕಾಲದಲ್ಲಿ
>>>> ಚಿತ್ರಿತವಾಗಿದೆ.  ಕಾದಂಬರಿಯಲ್ಲಿ ಸಾರ್ವಕಾಲಿಕವಾದ, ಶಾಶ್ವತವಾದ ಆಲೋಚನೆಯಿದೆ.  ಅಂದಿನ
>>>> ಕತೆಗೆ ಇಂದಿನ ಅರ್ಥ ತುಂಬಲು ಅವಕಾಶವಿದೆ.  ಕೊಡಗಿನ ಅಂದಿನ ಆಡಳಿತದ ಕತೆ ಸಮಕಾಲೀನ
>>>>  ಆಡಳಿತಕ್ಕೆ ಅನ್ವಯಿಸುವಂತಿದೆ.  ಕೊಡಗಿನ ಕೊನೆಯ ಅರಸ, ಚಿಕ್ಕವೀರರಾಜನ ದುರಂತ ಕಥೆ
>>>> ಕಣ್ಣಿಗೆ ಕಟ್ಟುವಂತೆ,  ಮನಕರಗುವಂತೆ ವರ್ಣನೆಯಾಗಿದೆ.
>>>>
>>>> ಚಿಕ್ಕವೀರರಾಜೇಂದ್ರ ಕಾದಂಬರಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿತು.
>>>>  ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಸಾಹಿತ್ಯ ಗ್ರಂಥವೆಂಬುದು ಪ್ರಶಸ್ತಿ ಆಯ್ಕೆಯ ಕಾರಣ.
>>>>  ಮಾಸ್ತಿಯವರ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ಜ್ಞಾನಪೀಠ ದೊಡ್ಡದೇನಲ್ಲ.  ಮಾಸ್ತಿಯವರಿಗೆ
>>>> ಬಂದ ಪ್ರಶಸ್ತಿ ಕನ್ನಡಕ್ಕೆ, ಕನ್ನಡಿಗರಿಗೆ, ಕನ್ನಡ ನಾಡಿಗೆ ಬಂದ ಪ್ರಶಸ್ತಿಯಾಗಿದೆ.
>>>>  ನ್ಯಾಷನಲ್ ಬುಕ್ ಟ್ರಸ್ಟ್ ಚಿಕ್ಕವೀರ ರಾಜೇಂದ್ರ ಕಾದಂಬರಿಯನ್ನು ಭಾರತದ ಎಲ್ಲ ಭಾಷೆಗಳಿಗೂ
>>>> ಅನುವಾದಿಸಲು ಕಾರ್ಯ ಕೈಗೊಂಡಿತು.
>>>>
>>>> ಮಾಸ್ತಿ ವೆಂಕಟೇಶ ಅಯ್ಯಂಗಾರ್  ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ.  ಅವರ
>>>> ಕಾವ್ಯಗಳಲ್ಲಿ ‘ಶ್ರೀನಿವಾಸ’ ದರ್ಶನ ಪ್ರಮುಖವಾಗಿದೆ.  ದೇವರ ಲೀಲೆ, ಆತ್ಮ ನಿವೇದನೆ,
>>>> ಪ್ರಕೃತಿ ಸೌಂದರ್ಯ, ಕನ್ನಡ ಪ್ರೇಮ, ಸಮಾಜದ ಅಂಕುಡೊಂಕು, ನಾಡುನುಡಿ ವ್ಯಕ್ತಿಗಳಿಗೆ
>>>> ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣುತ್ತವೆ.  ಶ್ರೀನಿವಾಸರ  ಕಾವ್ಯ
>>>> ಸರಳವಾದುದುದು.  ಸುಂದರವಾದುದು.  ಅವರ ಪದ್ಯ ಸಾಹಿತ್ಯದಲ್ಲಿ ಚೆಲುವು, ಹಾಸ್ಯ ಹೆಚ್ಚಾಗಿದೆ.
>>>>  ಗದ್ಯ ಪದ್ಯಗಳ ನಡುವಿನ ಮಡಿ ಮೈಲಿಗೆಯ ನಿರ್ಬಂಧವನ್ನು ತೆಗೆದುಹಾಕಿ ಕಾವ್ಯ ಬರೆದಿರುವುದು
>>>> ಅವರ ವೈಶಿಷ್ಟ್ಯ.  ಶ್ರೀನಿವಾಸರ ಮೊದಲ ಭಾವಗೀತೆಗಳ ಸಂಗ್ರಹ ‘ಬಿನ್ನಹ’ 1922ರಲ್ಲಿ
>>>> ಪ್ರಕಟವಾಯಿತು.  ಹೂವುಗಳು, ಕನ್ನೈದಿಲೆ, ನಾಲ್ವತ್ತರ ನಲುಗು, ಕೊಂಬು, ಕೋಗಿಲೆ ಮೊದಲಾದ
>>>> ಭಾವಗೀತೆಗಳು ವಿಶಿಷ್ಟವಾಗಿವೆ.  ಕನ್ನಡ ನವೋದಯ ಕಾವ್ಯದಲ್ಲಿ ಶ್ರೀನಿವಾಸರ ಕಾವ್ಯಕ್ಕೆ
>>>> ಚಾರಿತ್ರಿಕ ಮಹತ್ವವಿದೆ.  ಬಿನ್ನಹ, ಅರುಣ, ತಾವರೆ, ಮಲಾರ, ಸಂಕ್ರಾಂತಿ ಮುಂತಾದ ಕವನ
>>>> ಸಂಗ್ರಹಗಳಲ್ಲಿ ಭಾವಗೀತೆಗಳ ವೈವಿಧ್ಯವನ್ನು ಕಾಣಬಹುದು.
>>>>
>>>> ಕಥನ ಗೀತೆಗಳಲ್ಲಿ ಶ್ರೀನಿವಾಸರ ಸಾಧನೆ, ಸಿದ್ಧಿ ಗಮನಾರ್ಹ.  ಗದ್ಯದಲ್ಲಾಗಲೀ,
>>>> ಪದ್ಯದಲ್ಲಾಗಲೀ ಕಥೆ ಹೇಳುವುದರಲ್ಲಿ ಒಂದೇ ರೀತಿಯ ಪರಿಣತಿ ಕಂಡುಬರುತ್ತದೆ.  ಸರಳರಗಳೆಯನ್ನು
>>>> ಸಾರ್ಥಕವಾಗಿ ಬಳಸಿದ್ದಾರೆ.  1940ರಲ್ಲಿ ಪ್ರಕಟವಾದ ಗೌಡರ ಮಲ್ಲಿ, ಅನಂತರ ಬೆಳಕುಕಂಡ
>>>> ನವರಾತ್ರಿ, ಮೂಕನ ಮಕ್ಕಳು, ರಾಮನವಮಿ ಸಂಗ್ರಹಗಳಲ್ಲಿ ಶ್ರೀನಿವಾಸರ ಕಥನಗೀತೆಗಳು
>>>> ಅಡಕವಾಗಿವೆ.  ಕನ್ನಡ ನವೋದಯದ ಕಾಲದಲ್ಲಿ ರಚನೆಯಾದ ಅವರ ಕಥನಗೀತೆಗಳಲ್ಲಿ ಚಾರಿತ್ರಿಕವಾದ,
>>>> ಸಾಹಿತ್ಯಕವಾದ, ಸುಸಂಸ್ಕೃತವಾದ ಮೌಲಿಕ ಗುಣಗಳಿವೆ.  ಮದಲಿಂಗನ ಕಣಿವೆ, ಗೌಡರ ಮಲ್ಲಿ,
>>>> ಸೋಜಿಗದ ಹೊಳಲು, ದೇಶಾಚಾರ, ಗುಂಡುಸೂಜಿ ಮುಂತಾದ ಕಥನಗೀತೆಗಳು ಉತ್ತಮವಾಗಿವೆ.
>>>>
>>>> ಶ್ರೀನಿವಾಸರ ಕಾವ್ಯ ಪ್ರಕಾರದ ಆಚಾರ್ಯ ಕೃತಿ ‘ಶ್ರೀರಾಮಪಟ್ಟಾಭಿಷೇಕ’.  ಸರಳ
>>>> ರಗಳೆಯನ್ನು ಸಹಜವಾಗಿ ದುಡಿಸಿಕೊಂಡಿರುವ ಗ್ರಂಥ.  ಶ್ರೀರಾಮನ ಪಟ್ಟಾಭಿಷೇಕವನ್ನು
>>>> ಕೇಂದ್ರವಾಗಿರಿಸಿ ಸಂಪೂರ್ಣ ರಾಮಾಯಣದ ಕತೆಯನ್ನು ರೂಪಿಸಿರುವ ಬೃಹತ್ ಕೃತಿ.  ಇದು
>>>> ಶ್ರೀನಿವಾಸರ ಮಹತ್ವಾಕಾಂಕ್ಷೆಯ ಕಾವ್ಯವೂ ಹೌದು. ಒಂಬತ್ತು ಸಾವಿರ ಸಾಲುಗಳಿಗೆ ಮಿಕ್ಕಿರುವ ಈ
>>>> ದೀರ್ಘ ಕಾವ್ಯದಲ್ಲಿ ಸಂಪ್ರದಾಯಬದ್ಧವಾದ ಹಾಗೂ ಹೊಸ ಆಯಾಮದ  ಅಂಶಗಳನ್ನೊಳಗೊಂಡ ರಾಮಾಯಣದ
>>>> ಕಥೆಯನ್ನು ಕಾಣಬಹುದು.  ‘ಶ್ರೀರಾಮಪಟ್ಟಾಭಿಷೇಕ’ ಕಾವ್ಯ 1972ರಲ್ಲಿ ಪ್ರಕಟವಾಯಿತು.
>>>>
>>>> ಮಾಸ್ತಿಯವರು ಹಲವು ನಾಟಕಗಳನ್ನು ಬರೆದಿದ್ದಾರೆ.  1923ರಲ್ಲಿ ಪ್ರಕಟವಾದ ‘ಶಾಂತಾ’ ಅವರ
>>>> ಮೊದಲ ನಾಟಕ.  ‘ಮಂಜುಳಾ’ ಎಂಬುದು ಸಾಮಾಜಿಕ ನಾಟಕ.  ಉಳಿದವು ಪುರಾಣ ಹಾಗೂ ಇತಿಹಾಸದಿಂದ
>>>> ಪ್ರೇರಣೆ ಪಡೆದಿವೆ.  ಕಾಡುಕುರುಬರಿಗೆ ಸಂಬಂಧಿಸಿದ, ಐತಿಹಾಸಿಕ ಅಂಶಗಳನ್ನೊಳಗೊಂಡ
>>>> ‘ಕಾಕನಕೋಟೆ’ ಮಾಸ್ತಿಯವರ ಉತ್ತಮ ನಾಟಕ.  ಗೌತಮ ಬುದ್ಧನ ಹೆಂಡತಿ ಯಶೋಧರೆಯ ಮಾನಸಿಕ
>>>> ತುಮುಲವನ್ನು ಪ್ರಧಾನವಾಗಿ ಚಿತ್ರಿಸಿರುವ ‘ಯಶೋಧರಾ’ ಅತ್ಯುತ್ತಮ ನಾಟಕ.  ಮಹಾಕವಿ ಕಾಳಿದಾಸನ
>>>> ಬಗೆಗೆ ಇರುವ ಕಟ್ಟುಕತೆ, ಇತಿಹಾಸವನ್ನು ಬಳಸಿಕೊಂಡು ರಚಿಸಿರುವ ಏಳು ಅಂಕಗಳ ನಾಟಕ
>>>> ‘ಕಾಳಿದಾಸ’.  ಇದಕ್ಕೆ 1983ರಲ್ಲಿ ‘ವರ್ಧಮಾನ ಪ್ರಶಸ್ತಿ’ ಸಂದಿತು.  ಮಾಸ್ತಿಯವರ
>>>> ಸುಸಂಸ್ಕೃತ ಮನೋಧರ್ಮ ಅವರ ನಾಟಕ ರಚನೆಯಲ್ಲಿ ನಿಚ್ಚಳವಾಗಿ ಕಾಣುತ್ತದೆ.  ಕನ್ನಡ ನಾಟಕ
>>>> ಕ್ಷೇತ್ರಕ್ಕೆ ಮಾಸ್ತಿಯವರ ನಾಟಕ ಕೃಷಿ ಸಾಕಷ್ಟು ಕಸುವು ತುಂಬಿದೆ.  ಷೇಕ್ಸ್ ಪಿಯರ್
>>>> ಮಹಾಕವಿಯ ಕೆಲವು ನಾಟಕಗಳನ್ನು ಚಂಡಮಾರುತ, ದ್ವಾದಶ ರಾತ್ರಿ, ಲಿಯರ್ ಮಹಾರಾಜ ಮೊದಲಾದ
>>>> ಹೆಸರುಗಳಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ಧಾರೆ.  ಮಾಸ್ತಿಯವರ ಭಾಷಾಂತರ ನಾಟಕಗಳಿಂದ ಕನ್ನಡ
>>>> ನಾಟಕಸಾಹಿತ್ಯ ಗರಿಗಟ್ಟಿಕೊಳ್ಳಲು ಸಹಾಯಕವಾಗಿದೆ.
>>>>
>>>> ಮಾಸ್ತಿಯವರ ಆತ್ಮಕಥೆ ‘ಭಾವ’ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ.  ‘ಭಾವ’ದಲ್ಲಿ ಅವರ
>>>> ಬದುಕಿನ ಮೂಲಧಾತುಗಳ ದಾಖಲೆಗಳಿವೆ.  ನವರತ್ನ ರಾಮರಾವ್, ರವೀಂದ್ರನಾಥ ಠಾಗೂರರು,
>>>> ಶ್ರೀರಾಮಕೃಷ್ಣ ಎಂಬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.  ವೇದಗಳ ಕಾಲದಿಂದ ಬೆಳೆದುಬಂದ
>>>> ಧರ್ಮ, ಸಂಸ್ಕೃತಿ, ಪರಂಪರೆಗಳ ಅವಲೋಕನವಾದ ‘ಅಂತರಗಂಗೆ’; ವಾಲ್ಮೀಕಿ ರಾಮಾಯಣವನ್ನು ಕುರಿತ
>>>> ವಿಮರ್ಶಾತ್ಮಕ ಅಧ್ಯಯನವಾದ ‘ಆದಿಕವಿ ವಾಲ್ಮೀಕಿ’;  ಅಧುನಿಕ ಕನ್ನಡ ಸಾಹಿತ್ಯದ ಪ್ರಾರಂಭದ
>>>>  ಮುಖ್ಯ ಘಟ್ಟಗಳನ್ನು ವಿವೇಚಿಸುವ ‘ನಮ್ಮ ಹೊಸ ಸಾಹಿತ್ಯದ ಆರಂಭ’; ಹಿಂದೂ ಧರ್ಮದ
>>>> ಹಿನ್ನೆಲೆಯಲ್ಲಿ ಮೂಡಿರುವ ‘ಧರ್ಮಸಂರಕ್ಷಣೆ’;  ಮಹಾಭಾರತ ಕಾವ್ಯಸಂಗ್ರಹವಾದ ‘ಭಾರತ ತೀರ್ಥ’
>>>> ಗ್ರಂಥಗಳು ಮಾಸ್ತಿಯವರ ಪರಿಪಕ್ವ ಬದುಕಿನ, ಉದಾತ್ತ ಚಿಂತನೆಯ ವೈಚಾರಿಕ ಗ್ರಂಥಗಳಾಗಿವೆ.
>>>>  ಭಾರತ ಮತ್ತು ಪಾಶ್ಚಾತ್ಯ ಕೃತಿಗಳು ವಿವೇಚನೆಯನ್ನೊಳಗೊಂಡ ‘ವಿಮರ್ಶೆ’ಗಳು, ನೂರಾರು
>>>> ‘ಪ್ರಸಂಗ’ಗಳು, ವಿಚಾರಸೂಕ್ತಿಗಳು, ಕನ್ನಡದ ಕೆಚ್ಚನ್ನು ಉತ್ತೇಜಿಸುವ ಲೇಖನಗಳು ಅವರಿಂದ
>>>> ಸೃಷ್ಟಿಯಾಗಿವೆ.  ಕರ್ಣಾಟ ಭಾರತ ಕಥಾಮಂಜರಿ, ರವೀಂದ್ರ ಪ್ರಶಸ್ತಿ, ಸಂಭಾವನೆ, ಸರ್ ಎಂ.
>>>> ವಿಶ್ವೇಶ್ವರಯ್ಯ ಮೊದಲಾದ ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ.
>>>>
>>>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂಗ್ಲಿಷ್ ಭಾಷೆಯಲ್ಲೂ ಗ್ರಂಥಗಳನ್ನು
>>>> ರಚಿಸಿದ್ದಾರೆ.  ತಮ್ಮ ಕೆಲವು ಕನ್ನಡ ಕೃತಿಗಳನ್ನು ಸ್ವತಃ ಇಂಗ್ಲಿಷಿಗೆ
>>>> ಭಾಷಾಂತರಿಸಿದ್ದಾರೆ.  ಅವರ ಇಂಗ್ಲಿಷ್ ಭಾಷೆಯ ಬರಹ ಕೂಡಾ ಕನ್ನಡದಷ್ಟೇ ಆಕರ್ಷಕವಾಗಿದೆ.
>>>>
>>>> ಮಾಸ್ತಿಯವರ ಕೃತಿಗಳು ಸಂಖ್ಯೆಯಲ್ಲಿ, ಸತ್ವದಲ್ಲಿ, ಗುಣದಲ್ಲಿ, ಗಾತ್ರದಲ್ಲಿ,
>>>> ವೈವಿಧ್ಯದಲ್ಲಿ ದೊಡ್ಡವು. ಕತೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ಆತ್ಮಕತೆ, ಜೀವನ
>>>> ಚರಿತ್ರೆ, ಪ್ರಬಂಧ, ಜನಪದ, ಪತ್ರಿಕೋದ್ಯಮ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ 120
>>>> ಗ್ರಂಥಗಳನ್ನು ಬರೆದಿದ್ದಾರೆ.  ಇದರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿಯೂ 17 ಗ್ರಂಥಗಳನ್ನು
>>>> ರಚಿಸಿದ್ದಾರೆ.  ಸುಮಾರು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೃಷ್ಟಿಸಿದ್ದಾರೆ.
>>>>  ಅವರು ತಾವು ಸಾಹಿತಿಯಾದುದಲ್ಲದೆ ಹಲವರು ಮಹಾನೀಯರನ್ನು  ಸಾಹಿತಿಗಳಾಗಲು ಸ್ಫೂರ್ತಿ
>>>> ನೀಡಿದ್ದಾರೆ.  ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ.  ಹಲವರ
>>>> ಗ್ರಂಥಗಳನ್ನು ಪ್ರಕಟಿಸಿ, ಹಲವರಿಗೆ ನಾನಾ ರೀತಿಯಲ್ಲಿ ನೆರವು ನೀಡಿ ಬೆಂಬಲಿಸಿದ್ದಾರೆ.
>>>>  ಕನ್ನಡದಲ್ಲಿ ಸಾಹಿತಿಗಳ ಪಡೆ ಸೃಷ್ಟಿಯಾಗಲು ಸಹಕರಿಸಿದ್ದಾರೆ.  ಅವರ ಬದುಕು ಬರಹ ಹಲವು
>>>> ಕೃತಿಗಳಿಗೆ, ಕೃತಿಗಾರರಿಗೆ ಪ್ರೇರಣೆ ನೀಡಿದೆ.  ಮಾಸ್ತಿಯವರನ್ನು ಕುರಿತು ಇತರರಿಂದ ಮೌಲಿಕ
>>>> ಗ್ರಂಥಗಳು ಬೆಳಕು ಕಂಡಿವೆ.
>>>>
>>>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಮಾತು ತಮಿಳು, ಕಾಲೇಜಿನಲ್ಲಿ ಓದಿದ್ದು
>>>> ಇಂಗ್ಲಿಷ್.  ಬದುಕಿದ್ದು, ಬರೆದದ್ದು ಕನ್ನಡ.  ಅವರು ಮೊದಲಿನಿಂದಲೂ ಕನ್ನಡದ ಪರವಾಗಿ
>>>> ದನಿಗೂಡಿಸಿದವರು.  1910ರ ಸುಮಾರಿನಲ್ಲಿ ಕನ್ನಡದಲ್ಲಿ ಮಾತಾಡುವುದಕ್ಕೆ, ಬರೆಯುವುದಕ್ಕೆ
>>>> ವಿದ್ಯಾವಂತರು ಹಿಂದುಮುಂದು ನೋಡುತ್ತಿದ್ದರು.  ಅಂಥ ದಿನಗಳಲ್ಲಿ ಮಾಸ್ತಿಯವರು ಕನ್ನಡದಲ್ಲಿ
>>>> ಬರೆದರು.  ಕನ್ನಡದ ಏಳಿಗೆಗೆ ಹೋರಾಡಿದರು.  ಇದರಿಂದ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು
>>>> ಸಹಾಯವಾಯಿತು.  ಮಾಸ್ತಿಯವರ ಮಾರ್ಗ ಹಲವರಿಗೆ ದಾರಿದೀಪವಾಯಿತು.  ಕರ್ನಾಟಕ ಏಕೀಕರಣಕ್ಕೆ
>>>> ಅವರು ನಿಷ್ಠೆಯಿಂದ ದುಡಿದರು.  ತಮ್ಮ ಉಪನ್ಯಾಸಗಳಿಂದ, ವೈಚಾರಿಕ ಬರಹಗಳಿಂದ ಜನರನ್ನು
>>>> ಎಚ್ಚರಿಸಿದರು.  ಅವರಿಂದ ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರವಾಯಿತು.
>>>>
>>>> ಮಾಸ್ತಿಯವರು ಪತ್ರಿಕೊದ್ಯಮಿಯೂ ಹೌದು.  1944ರಿಂದ 1965ರವರೆಗೆ ‘ಜೀವನ’
>>>> ಮಾಸಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದರು.  ‘ಜೀವನ’ ಪತ್ರಿಕೆಯ ಮೂಲಕ ಅನೇಕ ಸಾಹಿತಿಗಳ
>>>> ಕೃತಿಗಳು ಬೆಳಕು ಕಂಡಿವೆ.  ‘ಜೀವನ’ ಪತ್ರಿಕೆಯ ಸಂಪಾದಕೀಯದಲ್ಲಿ ಮೂಡಿದ ಸಾಹಿತ್ಯ,
>>>> ಸಂಸ್ಕೃತಿ, ಕಲೆ, ರಾಜಕೀಯ, ಧರ್ಮ, ದೇವರು, ಸಾಮಾಜಿಕ, ಆರ್ಥಿಕ ವಿಚಾರ ಮೊದಲಾದ ಹಲವು ಹತ್ತು
>>>> ವಿಷಯಗಳ ಬಗೆಗಿನ ಲೇಖನಗಳಲ್ಲಿ ಮಾಸ್ತಿಯವರ ಭಾವ ಮಿಂಚಿದೆ.  ಈ ಬರಹಗಳು ‘ಜೀವನ ಸಂಪಾದಕೀಯ’
>>>> ಎಂಬ ಹೆಸರಿನ ಗ್ರಂಥದಲ್ಲಿ ಲಭ್ಯವಿದೆ.  ಕನ್ನಡ ಪತ್ರಿಕೋದ್ಯಮದಲ್ಲಿ ಮಾಸ್ತಿಯವರ ‘ಜೀವನ’
>>>> ಮರೆಯಲಾಗದ ನೆನಪು.
>>>>
>>>> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರಕಾರದ ಉನ್ನತ ಹುದ್ದೆಗಳಲ್ಲಿ, ವಿವಿಧ ಸ್ಥಳಗಳಲ್ಲಿ
>>>> ಅನುಭವ ಗಳಿಸಿದವರು.  ಜನಸಾಮಾನ್ಯರ ಜನಜೀವನವನ್ನು ಹತ್ತಿರದಿಂದ ಗಮನಿಸಿದವರು.  ನಮ್ಮ ಜನರ
>>>> ಆಚಾರ ವಿಚಾರ, ಸಂಸ್ಕೃತಿ, ಪರಂಪರೆ, ಬದುಕಿನ ರೀತಿ ನೀತಿ ಮೊದಲಾದವುಗಳ ಬಗೆಗೆ ಆಸಕ್ತಿ
>>>> ತಳೆದವರು.  ಶುಚಿಯಾದ, ಆದರ್ಶವಾದ ಸಂಪ್ರದಾಯಕ್ಕೆ ನಿಷ್ಠೆ ತೋರಿದವರು.  ರಾಜಮಹಾರಾಜರ
>>>> ಗೌರವಕ್ಕೆ ಪಾತ್ರರಾದವರು.  ಬ್ರಿಟಿಷರ ಆಡಳಿತವನ್ನು, ಬ್ರಿಟಿಷ್ ಆಡಳಿತಗಾರರನ್ನು ಕಣ್ಣಾರೆ
>>>> ಕಂಡವರು.  ಸಂಪ್ರದಾಯಬದ್ಧವಾದ ಮನೆತನದಲ್ಲಿ ಹುಟ್ಟಿ ಬೆಳೆದವರು.  ದೊಡ್ಡವರನ್ನು, ದೊಡ್ಡ
>>>> ಬದುಕನ್ನು ನೋಡಿದವರು; ಅನುಸರಿಸಿದವರು.  ತಮ್ಮಂತೆ ಇತರರೂ ಅನುಸರಿಸಲು ಆಶಿಸಿದವರು.  ಜನರ
>>>> ಬದುಕು ದೊಡ್ಡದಾಗಲು ಹಾರೈಸಿದವರು.  ಈ ಅಂಶಗಳಿಗೆ ಒತ್ತುಕೊಡುವ ವಸ್ತು, ಪಾತ್ರ, ಸನ್ನಿವೇಶ
>>>> ನಿರೂಪಣೆಗಳು ಮಾಸ್ತಿಯವರ ಕೃತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.  ಭಾರತ ದೇಶದಲ್ಲಿ
>>>> ಕಾಣಬಹುದಾದ, ಕಾಣಬೇಕಾದ ಪಾತ್ರಗಳು ಅವರವು.  ಮಾಸ್ತಿಯವರಲ್ಲಿ ಆದರ್ಶ ಪಾತ್ರಗಳು ಅಧಿಕ.
>>>>  ದುಷ್ಟರು, ಕ್ರೂರಿಗಳು, ಅಯೋಗ್ಯರು  ಎನ್ನಬಹುದಾದ ಪಾತ್ರಗಳು ಕಡಿಮೆ.  ಇದ್ದರೂ ಅವುಗಳ
>>>> ಬಗೆಗೆ ಇನ್ನಿಲ್ಲದ ಅನುಕಂಪ.  ದುಷ್ಟತನವೂ ದೌರ್ಬಲ್ಯ ಎನ್ನುವುದು ಅವರ ಮನೋಧರ್ಮ.  ಆದರ್ಶ
>>>> ಸ್ತ್ರೀ ಪಾತ್ರಗಳ ಬಗೆಗೆ ಮಾಸ್ತಿಯವರಿಗೆ ಅಪಾರ ಒಲವು.
>>>>
>>>> ಮಾಸ್ತಿಯವರ ಎಲ್ಲ ಕೃತಿಗಳಲ್ಲಿ ಸರಳತೆಗೆ ಮೊದಲ ಪಟ್ಟ.  ಸಾಧಾರಣ ಮಾತುಗಳಿಂದ ಅಸಾಧಾರಣ
>>>> ಚಿತ್ರ ನಿರ್ಮಿಸುವ ಕಲೆ ಅವರದು.  ಮಾಸ್ತಿಯವರಿಗೆ ಸಂದ ಗೌರವಗಳು ಅನೇಕ.  ಇಂಥಹ ಹಿರಿಯರಿಗೆ
>>>> ಗೌರವ ಸಲ್ಲಿಸುವುದು ಆ ಗೌರವಕ್ಕೇ ಹಿರಿತನವಲ್ಲವೇ!
>>>>
>>>> ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕೂ ದೊಡ್ಡದು.  ಅವರ ಬದುಕು ಒಂದು ಮಹಾಕೃತಿ.  ಅವರ
>>>> ಬದುಕಿಗೂ, ಬರಹಕ್ಕೂ ಅಂತರ ಕಡಿಮೆ.  ಬದುಕಿದಂತೆ ಬರೆಯಬೇಕು, ಬರೆದಂತೆ ಬದುಕಬೇಕು
>>>> ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ.  ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ
>>>> ಕೀರ್ತಿ ಅವರದ್ದು.  1986ರಲ್ಲಿ ಅವರು ನಿಧನರಾದಾಗ ಅವರಿಗೆ 95 ವರ್ಷ ತುಂಬಿತ್ತು.
>>>>
>>>> ಗಾಂಧೀಬಜಾರಿನಲ್ಲಿ ಚಾಕೊಲೇಟು, ಪೆಪ್ಪರಮೆಂಟುಗಳನ್ನು ಮಕ್ಕಳಿಗಾಗಿ ಕೋಟಿನ ಜೇಬಿನಲ್ಲಿ
>>>> ತುಂಬಿಕೊಂಡು, ಬದುಕಿನ ಕಲೆಯನ್ನು, ನಯ ವಿನಯ, ಸೌಜನ್ಯ, ಸಂಸ್ಕೃತಿ, ಹಸನ್ಮುಖ ಪ್ರೀತಿ
>>>> ಸೊಬಗುಗಳನ್ನು ಸರ್ವಲೋಕಗಳಿಗೂ ಸಾಲುವಷ್ಟು ತಮ್ಮನ್ನೇ ಮಾದರಿಯಾಗಿರಿಸಿಕೊಂಡು
>>>>  ನಡೆದಾಡುತ್ತಿದ್ದ ಈ ಹಿರಿಯ ಜೀವನವನ್ನು ಕಂಡ ಸೌಭಾಗ್ಯವನ್ನು ನೆನೆದಾಗ, ಅವರ ಬಳಿಯಲ್ಲಿ
>>>> ಸುಳಿದ ನಮ್ಮ ಸುಕೃತವನ್ನು ನೆನೆಸಿಕೊಂಡು ಹೃದಯ ಉಕ್ಕಿ ಬರುತ್ತದೆ.  ಮಾಸ್ತಿಯಂತಹ ಇಂಥಹ
>>>> ಶ್ರೇಷ್ಠ ಆಸ್ತಿಗಳು ನಮ್ಮ ಉಳಿದ ಜೀವನದಲ್ಲೂ, ಮುಂದಿನ ಯುಗ ಯುಗಗಳ ಜೀವನದಲ್ಲೂ ಮರಳೀತೆ
>>>> ಎಂದು ಮಾಸ್ತಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟ ಆ ವಿಧಾತನ ಬಳಿ ಮೊರೆಯಿಡುವಂತಾಗುತ್ತಿದೆ.
>>>>
>>>>
>>>> ಪ್ರಕಾಶ ಗಾಯಕವಾಡ
>>>>
>>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to