*ಗೋಡೆಗೆ ಹೊಡೆದ ಮೊಳೆಗಳು*
ಅದ್ಭುತವಾದ ಜೀವಿತ ಸತ್ಯ
ಒಬ್ಬ ತಂದೆ ತನ್ನ ಮಗನಿಗೆ ಕೆಲವು ಮೊಳೆಗಳನ್ನು ಕೊಟ್ಟು ನಿನಗೆ ದಿನಕ್ಕೆ ಎಷ್ಟು ಜನರ ಮೇಲೆ
ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡೆ ಎಂದು ಹೇಳುತ್ತಾನೆ.!
ಮೊದಲ ದಿನ 20, ಮರುದಿನ 15, ಮೂರನೆಯ ದಿನ 10 ಹೀಗೆ...ತನ್ನ ಕೈಯಲ್ಲಿ ಇರುವ
ಮೊಳೆಗಳೆಲ್ಲವನ್ನೂ ಗೋಡೆಗೆ ಹೊಡೆಯುತ್ತಾನೆ ಮಗ.ಮೊಳೆಗಳೆಲ್ಲ ಮುಗಿದ ನಂತರ ಮಗ ತಂದೆಯ
ಬಳಿಗೆ ಬಂದು *ಅಪ್ಪ ನೀನು ಕೊಟ್ಟ ಮೊಳೆಗಳೆಲ್ಲ ಮುಗಿದುಹೋದವು ಅನ್ನುತ್ತಾನೆ.*
*ಓ... ನಿನಗೆ ತುಂಬಾ ಜನರ ಮೇಲೆ ಕೋಪ ಇದೆ ಅಂತ ಆಯ್ತು....!?*ಸರಿ... *ನಾಳೆಯಿಂದ ದಿನವೂ
ಕೆಲವು ಮೊಳೆಗಳನ್ನು ಆ ಗೋಡೆಯಿಂದ ತೆಗೆದುಬಿಡು*ಎಂದು ತಂದೆ ತನ್ನ ಮಗನಿಗೆ ಹೇಳುತ್ತಾನೆ.
ತಂದೆ ಹೇಳಿದ ಹಾಗೇ ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನು ತೆಗೆಯುತ್ತಾನೆ ಮಗ.ಕೆಲವು
ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಡಬೇಕಾಯಿತು.
*ಏನಾಯ್ತೋ*? ಅಂತ ಕೇಳುತ್ತಾನೆ ಅಪ್ಪ ಮಗನಿಗೆ. *ನೀವು ಹೇಳಿದ ಹಾಗೇ ಮೊಳೆಗಳೆಲ್ಲವನ್ನು
ತೆಗೆದು ಬಿಟ್ಟೆ ಅಪ್ಪಾ*ಅನ್ನುತ್ತಾನೆ ಮಗ.
*ಮತ್ತೆ ಗೋಡೆ ಹೇಗಿದಿಯೋ?* ಕೇಳುತ್ತಾನೆ ತಂದೆ ಮಗನಿಗೆ.*ಮೊಳೆಗಳನ್ನೇನೋ
ತೆಗೆದುಬಿಟ್ಟೆ ಆದರೆ ಅದರಿಂದ ಗೋಡೆಗೆ ಆದ ರಂಧ್ರಗಳು ಹಾಗೇ ಇದ್ದಾವೆ ಅಪ್ಪ ಎಂದ ಮಗ.
ಆಗ ತಂದೆ ಮಗನಿಗೆ ನೋಡ್ದಾ....ಮೊಳೆ ಹೊಡೆಯುವಾಗ ಈಜಿ ಯಾಗಿ ಹೊಡೆದು ಬಿಟ್ಟೆ!...
ತೆಗೆಯುವಾಗ ತುಂಬಾ ಕಷ್ಟ ಪಟ್ಟೆ.ಮೊಳೆ ತೆಗೆದರೂ ಅದರಿಂದಾದ ರಂಧ್ರಗಳು ಹಾಗೇ
ಇವೆ....ಅಂದರೆ ನಮಗೆ ತುಂಬಾ ಜನರ ಮೇಲೆ ಕೋಪ ಬರುತ್ತೆ. ಆ ಕೋಪದಲ್ಲಿ ಅವರ ಮನಸ್ಸನ್ನು
ನೋಯಿಸುತ್ತೇವೆ(ಅಂದರೆ ಮೊಳೆ ಹೊಡೆಯುತ್ತೇವೆ) ನಂತರ ಸಾರಿ ಕೇಳುತ್ತೇವೆ(ಅಂದರೆ ಹೊಡೆದ
ಮೊಳೆಗಳನ್ನು ತೆಗೆದುಬಿಡುತ್ತೇವೆ) ಆದರೆ ಸಾರಿ ಹೇಳಿದ ಮಾತ್ರಕ್ಕೆ ಮನಸ್ಸಿಗೆ ಆದ ಗಾಯ
(ಗೋಡೆಗೆ ಆದ ರಂಧ್ರಗಳು) ಮಾಸುವುದಿಲ್ಲ.
*ಅದಕ್ಕೆ ಮಾತು ಬುಲೆಟ್ ನ ಹಾಗೆ ಮಾತನಾಡುವಾಗ ಯೋಚಿಸಿ ಮಾತನಾಡೋಣ ಇತರರನ್ನು ನೋಯಿಸದ ಹಾಗೆ
ಮಾತಾಡೋಣ ಪ್ರೀತಿಯಿಂದ ಮಾತಾಡೋಣ*
ಸಮೀರ ( ಕನ್ನಡ ಭಾಷಾ ಶಿಕ್ಷಕಿ
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.