ಶರಣಾರ್ಥಿ

 ಶರಣರ ನುಡಿ ಚೆನ್ನ
ಶರಣರ ನಡೆ ಚಿನ್ನ
ಶರಣರ ವಿಚಾರಗಳತಿ ಗಹನ
ಶರಣರ ಹಾದಿ ಸರ್ವಮಾನ್ಯ

 ಅಕ್ಕನಂತರಾಳದಿಂ ಹೊಮ್ಮಿದೆ
 ಕವಿತೆಯ ಸೊಬಗು
 ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
 ನುಡಿಯ ಬೆಡಗು

 ದಾಸೋಹದ ಹಿರಿಮೆಗೆ
ಬರೆದ ಹೊಸ ಭಾಷ್ಯ
ಕಾಯಕದ ಗರಿಮೆಗೆ
ಬುವಿಯಲ್ಲಿ ನವಲಾಸ್ಯ


  ಕಮ್ಮಾರ ಕುಂಬಾರ ಸಮಗಾರ
 ನೇಕಾರ ಮಾದಾರ ಪತ್ತಾರ ಹೂಗಾರ
ಎಲ್ಲರೂ ಒಂದೇ ಇಲ್ಲಿ ವಚನಕಾರ
ಅಶನ_ವಸನಾಕ್ಕಾಗಿ ಕಸುಬುದಾರ

  ಹಗಲೆಲ್ಲಾ ಬಿಡುವಿರದೆ
 ಕಾಯಕವ ಕುಟ್ಟಿ
ಇರುಳಿನಲ್ಲಿ ಸಡಗರದಿ
ವಚನಗಳ ಕಟ್ಟಿ

ಅನುಭಾವದ ಅಡುಗೆಯನ್ನು
ಜಗಕೆಲ್ಲಾ ಬಡಿಸಿ
ಸಹಪಂಕ್ತಿ ಭೋಜನದಿ
ಜಾತಿ_ಮತದ ಭೇದ ಅಳಿಸಿ

 ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
ಬಸವಾದಿ ಪ್ರಮಥರು ಭವದಕಡೆಗೆ!!
ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
ನವ ಮನ್ವಂತರಕೆ ನಾಂದಿಯನು ಹಾಡೆ

 ಬಸವರುದಿಸಿದುದು ಭುವನದ ಭಾಗ್ಯ
ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
ದುಡಿವ,ನೀಡುವ,ಅನುಭವ ಬರೆದಿಡುವ
 ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.

....... ಚಂದ್ರೇಗೌಡ ನಾರಮ್ನಳ್ಳಿ,8722199344
---------- Forwarded message ----------
From: "chandregowda m d" <[email protected]>
Date: Apr 3, 2018 9:19 PM
Subject: A poem for BASAVAJAYANTI
To: <[email protected]>
Cc:

ಶರಣಾರ್ಥಿ

 ಶರಣರ ನುಡಿ ಚೆನ್ನ
ಶರಣರ ನಡೆ ಚಿನ್ನ
ಶರಣರ ವಿಚಾರಗಳತಿ ಗಹನ
ಶರಣರ ಹಾದಿ ಸರ್ವಮಾನ್ಯ

 ಅಕ್ಕನಂತರಾಳದಿಂ ಹೊಮ್ಮಿದೆ
 ಕವಿತೆಯ ಸೊಬಗು
 ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
 ನುಡಿಯ ಬೆಡಗು

 ದಾಸೋಹದ ಹಿರಿಮೆಗೆ
ಬರೆದ ಹೊಸ ಭಾಷ್ಯ
ಕಾಯಕದ ಗರಿಮೆಗೆ
ಬುವಿಯಲ್ಲಿ ನವಲಾಸ್ಯ


  ಕಮ್ಮಾರ ಕುಂಬಾರ ಸಮಗಾರ
 ನೇಕಾರ ಮಾದಾರ ಪತ್ತಾರ ಹೂಗಾರ
ಎಲ್ಲರೂ ಒಂದೇ ಇಲ್ಲಿ ವಚನಕಾರ
ಅಶನ_ವಸನಾಕ್ಕಾಗಿ ಕಸುಬುದಾರ

  ಹಗಲೆಲ್ಲಾ ಬಿಡುವಿರದೆ
 ಕಾಯಕವ ಕುಟ್ಟಿ
ಇರುಳಿನಲ್ಲಿ ಸಡಗರದಿ
ವಚನಗಳ ಕಟ್ಟಿ

ಅನುಭಾವದ ಅಡುಗೆಯನ್ನು
ಜಗಕೆಲ್ಲಾ ಬಡಿಸಿ
ಸಹಪಂಕ್ತಿ ಭೋಜನದಿ
ಜಾತಿ_ಮತದ ಭೇದ ಅಳಿಸಿ

 ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
ಬಸವಾದಿ ಪ್ರಮಥರು ಭವದಕಡೆಗೆ!!
ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
ನವ ಮನ್ವಂತರಕೆ ನಾಂದಿಯನು ಹಾಡೆ

 ಬಸವರುದಿಸಿದುದು ಭುವನದ ಭಾಗ್ಯ
ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
ದುಡಿವ,ನೀಡುವ,ಅನುಭವ ಬರೆದಿಡುವ
 ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.

....... ಚಂದ್ರೇಗೌಡ ನಾರಮ್ನಳ್ಳಿ,8722199344

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to