ಒಂದು ಕವಿತೆ#ವಿದಾಯಒಲವ ದೀಪ ಹೊತ್ತಿಸಿಹೊರಟ ನೀನುಗಾಳಿಗಿಷ್ಟು ಮೆಲ್ಲ ಬೀಸೆಂದು ಹೇಳುಉರಿವ 
ಬತ್ತಿಗಿಷ್ಟು ಸಾವಧಾನದ ಪಾಠ ಹೇಳುಬರಿದೆ ಕಾಡುವೆಎಣ್ಣೆಯಿದು ಎಂದು ತೀರುವುದೋ...ಕರಗದಿರಲೆಂದು 
ಭಿನ್ನವಿಸು ಸಖಿ,ಕಾಡಿ ಕಾಡಿ ಹೋಗದಿರುಸುತ್ತ ಕತ್ತಲ ಕರಗಿಸಿದೀ ಹೊತ್ತಹಣತೆಯ ಮೈಗಂಟಿದ ನಿನ್ನ 
ಮೃದು ಬೆರಳ ಮೃದುಸ್ಪರ್ಷದ ಛಾಯೆನೋಡೆನ್ನ ಮುಗುಳು ನಗುತಿದೆಕಾಡಿಯೇ ಕೊಲ್ಲುವೆ...ಏಕೆ?ಅನಾಥವಾದ 
ಬೆಂಕಿ ಪಟ್ಟಣಮತ್ತುಅರೆ ಸುಟ್ಟು ಹೆಣವಾದ ಕಡ್ಡಿ ನೀ ನಡೆದತ್ತಲೇ ಕಣ್ನೆಟ್ಟು- 
ಬಿದ್ದಿವೆಕಾಡುವೆಯೇಕೆ  ಸುಮ್ಮನೆ?ಹಗಲು ಬೇವಾರ್ಸಿಯಾಗಿದೆ,ನಮ್ಮಿಬ್ಬರ ಹೊರುತ್ತಿದ್ದ ಕಲ್ಲು 
ಬೆಂಚಿನ ಎಡ ತುದಿ ಬಿಕ್ಕಳಿಸುತಿದೆಮಂದ ಬೆಳಕಿನ ಉರಿಯೂ ಸುಡು ಜ್ವಾಲೆ ಎನಿಸಿದೆಕಾಡಿದರೆ ನಿನಗೆ 
ಹಿತವೇ...?ಹಾಡ ಹೊರಟ ಹಾಡದು ಗಂಟಲ ಪಸೆಯಲ್ಲೇ ಗಿರಕಿ,ಚಾಚಿದ ತೋಳು ಬಿದ್ದು ಹೋಗೋ ಹವಣಿಕೆಯಲ್ಲಿ 
ಮೌನ ಮೌನಕಾಡಲೇಬೇಕಾ?ಹಾಡೊಂದು ಪದೇ ಪದೇ ಸತಾಯಿಸಿದಂತೆ  !   ಎಲ್ಲಾ ಮುಗಿದ ಮೇಲೆ ಬಂದು 
ಬಿಕ್ಕಳಿಸಿ ಹನಿಗಳುರುಳಿಸಿ ಬೇಲಿ ಹಾವಂತೆ ಸರಿಯೋಆ ಕ್ಷಣ ಬೇಡ...ಪ್ರಿಯೆ; ಕಣ್ಣ ಬೆಳಕು 
ಕಣ್ಣಲಿರುವಷ್ಟರಲ್ಲಿ,ಹಣತೆ ಕಣ್ಮುಚ್ಚುವಷ್ಟರಲ್ಲಿ ಬರುವೆಯಾದರೆ.....ಬಾ ಕಾಡದೆಕಣ್ಣ ಕವಿತೆಯದು 
ಕಾಪಿಡಲು ಖಾಲಿಬಟ್ಟಲುಗಳಿಲ್ಲ!ಇದ್ದಲ್ಲಿಯೇ ವಿದಾಯ ಹೇಳ ಹೊರಟ  ನಿನ್ನ ಪರಿಗೆ ದೀಪ 
ನಡುಗಿದೆ,ಶರಾಬಿಗೆ ಕೈ ಚಾಚಲಾರೆ!ಒಮ್ಮೆ ಬಂದು ನೋಡು ಹೊದ್ದ ಕತ್ತಲ ಸರಿಸಿ ಕವಿತೆಯಾಗುವೆ 
ನೆಟ್ಟಗಣ್ಣ ಮುಚ್ಚುವ ಮುನ್ನಉಸಿರ ಹಿಡಿದೇ  ಕಾಯುವೆ...ಕಾಡಬೇಡ ಬಾ;ವಿದಾಯದ ಹೊತ್ತು 
ದೂರವಿದೆ!ಸಂತೆಬೆನ್ನೂರು ಫೈಜ್ನಟ್ರಾಜ್Sent from my Samsung Galaxy smartphone.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/dj77pdrku02a5yvmk5oiaieb.1587227764204%40email.android.com.

Reply via email to