Nice article about password sir. Thanks for sharing this article. On May 12, 2016 8:38 PM, "HAREESHKUMAR K Agasanapura" <[email protected]> wrote:
> > http://googleweblight.com/?lite_url=http://www.ejnana.com/2016/05/password.html%3Fm%3D1&lc=en-IN&s=1&m=534&host=www.google.co.in&ts=1463065227&sig=APY536wEqqONUFWwsmefTJ7x3mRqrFvOSg > *ವಿಶ್ವ ಪಾಸ್‌ವರ್ಡ್ ದಿನ ವಿಶೇಷ: ನಿಮ್ಮ ಪಾಸ್‌ವರ್ಡ್ ಜೋಪಾನ!* > > ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ > ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು > ಪಾಸ್‌ವರ್ಡ್ ಬೇಕೇಬೇಕು. ವಿಶ್ವ ಪಾಸ್‌ವರ್ಡ್ ದಿನದಂದು (ಮೇ ೫) ಈ ಲೇಖನವನ್ನು > ಮರುಪ್ರಕಟಿಸುವ ಮೂಲಕ ನಾವು ಪಾಸ್‌ವರ್ಡ್ ಮಹತ್ವವನ್ನು ತಿಳಿಸುವ ಪ್ರಯತ್ನ > ಮಾಡುತ್ತಿದ್ದೇವೆ.. > > > *ಟಿ. ಜಿ. ಶ್ರೀನಿಧಿ* > > > <https://googleweblight.com/?lite_url=https://2.bp.blogspot.com/-wqwJhWkXiBo/VytYfH9DFKI/AAAAAAAAemY/RJxgR8XD_l49Kjhk_TE5rF5ohB_13ig0wCLcB/s1600/WPD16-GIF-Passwords102.gif&lc=en-IN&s=1&m=534&host=www.google.co.in&ts=1463065552&sig=APY536zTeafpCcD7M7sgrAkWzE8kwMQ5mQ> > > ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ > ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ > ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ > ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ > ರೂಪಿಸಿಕೊಂಡಿರುತ್ತಾರೆ. > > ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು > ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು! > > ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು. > ಆದರೆ ಅಂತರಜಾಲದ ಪ್ರಪಂಚದಲ್ಲಿ ಈ ಕತೆಯಲ್ಲಿ ನಡೆದಂತಹ ಸನ್ನಿವೇಶಗಳು ಈಗ ತೀರಾ > ಸಾಮಾನ್ಯವಾಗಿಬಿಟ್ಟಿವೆ. ಕತೆಯ ಆಲಿಬಾಬ ಕಳ್ಳರಿಂದ ಕದ್ದರೆ ಅಂತರಜಾಲದ ಖದೀಮರು > ಸಿಕ್ಕಸಿಕ್ಕವರನ್ನೆಲ್ಲ ದೋಚಲು ಹೊರಟಿದ್ದಾರೆ. > > ಇಂತಹ ಪರಿಸ್ಥಿತಿಯನ್ನು ತಂದಿಟ್ಟಿರುವುದು ಕೇವಲ ಒಂದು ಪದ ಎಂದರೆ ನಮಗೆ ಆಶ್ಚರ್ಯವೇನೂ > ಆಗಲಿಕ್ಕಿಲ್ಲ. ಏಕೆಂದರೆ ಜಾಲಜಗತ್ತಿನ ಅದೆಷ್ಟೋ ಬಾಗಿಲುಗಳನ್ನು ತೆರೆಯುವ ಪಾಸ್‌ವರ್ಡ್ ಎಂಬ > ಶಕ್ತಿಶಾಲಿ ಶಬ್ದ ಆಲಿಬಾಬ ಕತೆಯ ಸೇಸಮ್ಮನಂತೆಯೇ ತಾನೆ! > > ನಿಜ, ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ > ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ > ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು. > > ಕಂಪ್ಯೂಟರ್ ಪ್ರಪಂಚಕ್ಕೆ ಪಾಸ್‌ವರ್ಡುಗಳು ಪಾದಾರ್ಪಣೆ ಮಾಡಿದ್ದು ಸುಮಾರು ೧೯೬೦ರ > ಆಸುಪಾಸಿನಲ್ಲಿ. > ಕಂಪ್ಯೂಟರುಗಳ ಬಳಕೆ ಬಹಳ ಕಡಿಮೆಯಿದ್ದ ಆ ಕಾಲದಲ್ಲಿ ಪಾಸ್‌ವರ್ಡ್ ಸುರಕ್ಷತೆ ಅಂತಹ ದೊಡ್ಡ > ಸವಾಲೇನೂ ಆಗಿರಲಿಲ್ಲ ಅನಿಸುತ್ತದೆ. ಆ ಕಾಲದಲ್ಲಿ ಅಕಸ್ಮಾತ್ತಾಗಿ ಯಾವುದಾದರೂ ಪಾಸ್‌ವರ್ಡ್ > ಕಳುವಾದರೂ ಅದರಿಂದಾಗುವ ಹಾನಿ ಸೀಮಿತ ಪ್ರಮಾಣದ್ದಷ್ಟೆ ಆಗಿತ್ತು. > > ಹಾಗಾಗಿ ಕಂಪ್ಯೂಟರ್ ಸುರಕ್ಷತೆಯಲ್ಲಿ ಪಾಸ್‌ವರ್ಡ್‌ಗಳನ್ನು ಬಳಸುವ ಅಭ್ಯಾಸವೇ ವ್ಯಾಪಕವಾಗಿ > ಮುಂದುವರೆಯಿತು. ಮೇಜಿನ ಮೇಲಿನ ಕಂಪ್ಯೂಟರ್ ಬಳಸುವುದರಿಂದ ಪ್ರಾರಂಭಿಸಿ ಇಂಟರ್‌ನೆಟ್ > ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ ಇತ್ಯಾದಿಗಳವರೆಗೆ > ಎಲ್ಲೆಲ್ಲೂ ಪಾಸ್‌ವರ್ಡ್‌ಗಳದೇ ರಾಜ್ಯಭಾರವಾಯಿತು. > > ಮುಂದಿನ ವರ್ಷಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಿದಂತೆ ಅದರ ಮೇಲೆ ನಮ್ಮ ಅವಲಂಬನೆ > ಜಾಸ್ತಿಯಾಯಿತು; ಅವಲಂಬನೆ ಜಾಸ್ತಿಯಾದಂತೆ ಬಾಹ್ಯ ಪ್ರಪಂಚದ ನಮ್ಮ ಬದುಕಿಗೆ ಸಂಬಂಧಪಟ್ಟ > ಅದೆಷ್ಟೋ ವಿಷಯಗಳು ಕಂಪ್ಯೂಟರ್ ಪ್ರಪಂಚವನ್ನೂ ಸೇರಿಕೊಂಡವು. ಇದೆಲ್ಲದರ ಸುರಕ್ಷತೆಗೂ > ಪಾಸ್‌ವರ್ಡ್ ಒಂದೇ ಅಸ್ತ್ರವಾಗಿ ಮುಂದುವರೆಯಿತು; ಪಾಸ್‌ವರ್ಡ್ ಕಳುವಾದರೆ ಆಗಬಹುದಾದ ನಷ್ಟ > ಭಾರೀ ಪ್ರಮಾಣಕ್ಕೆ ಏರಿತು! > > ನಿಜ, ಒಮ್ಮೆ ಯೋಚಿಸಿ ನೋಡಿದರೆ ಕೇವಲ ಒಂದು ಪಾಸ್‌ವರ್ಡ್ ಮೇಲೆ ಅದೆಷ್ಟು ಮಹತ್ವದ > ಸಂಗತಿಗಳು ಅವಲಂಬಿತವಾಗಿರುತ್ತವೆ ಎನ್ನುವುದು ಗೊತ್ತಾಗುತ್ತದೆ. ನಮ್ಮ ಹಣಕಾಸಿನ ಪರಿಸ್ಥಿತಿ > ಬ್ಯಾಂಕ್ ಖಾತೆಯ ಆ ಒಂದು ಪಾಸ್‌ವರ್ಡನ್ನೇ ನೆಚ್ಚಿಕೊಂಡಿರುತ್ತದೆ. ಇಮೇಲ್ ಖಾತೆಯ > ಪಾಸ್‌ವರ್ಡ್ ಕಳ್ಳರ ಪಾಲಾದರೆ ನಮ್ಮ ಅದೆಷ್ಟೋ ಖಾಸಗಿ ಮಾಹಿತಿ ಸೋರಿಹೋಗುತ್ತದೆ; ಅಷ್ಟೇ > ಅಲ್ಲ, ಅದನ್ನು ಬಳಸಿಕೊಂಡವರು ನಮ್ಮನ್ನು, ನಮ್ಮ ಆಪ್ತರನ್ನು ವಂಚಿಸುವ ಸಾಧ್ಯತೆಯೂ > ಇರುತ್ತದೆ. ಇನ್ನು ಬದುಕಿನ ಘಟನೆಗಳನ್ನೆಲ್ಲ ದಾಖಲಿಸಿಟ್ಟುಕೊಳ್ಳುವ, ಪ್ರಪಂಚದೊಡನೆ > ಸ್ನೇಹಬೆಳೆಸುವ ಸಮಾಜ ಜಾಲಗಳ ಪಾಸ್‌ವರ್ಡ್ ಕೈಜಾರಿದರಂತೂ ಮರ್ಯಾದೆಯೇ ಮಣ್ಣುಪಾಲಾಗುವ > ಸನ್ನಿವೇಶ. > > ನಮ್ಮ ಪಾಸ್‌ವರ್ಡ್ ದುರ್ಬಳಕೆಯಾಗುವುದಾದರೂ ಹೇಗೆ ಎಂದು ನೋಡಲು ಹೊರಟರೆ ಅದಕ್ಕೆ ಅನೇಕ > ಕಾರಣಗಳು ಕಾಣಸಿಗುತ್ತವೆ. ಬಹುಶಃ ಸರಿಯಾದ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿಕೊಳ್ಳದ ನಮ್ಮ > ಸೋಮಾರಿತನ ಅಥವಾ ಉದಾಸೀನವನ್ನೇ ಇದರ ಮೊದಲ ಕಾರಣವೆಂದು ಕರೆಯಬಹುದೇನೋ. 'ಪಾಸ್‌ವರ್ಡ್', > '೧೨೩೪೫' ಮುಂತಾದ ಅತ್ಯಂತ ದುರ್ಬಲ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ನಮ್ಮ > ಮಾಹಿತಿಯ ಸುರಕ್ಷತೆಗೆ ನಾವೇ ಧಕ್ಕೆತರುತ್ತೇವೆ. ಯಾರದರೂ ನಮ್ಮ ಖಾತೆಯೊಳಕ್ಕೆ > ನುಸುಳಬೇಕೆಂದು ಪ್ರಯತ್ನಿಸಿದರೆ ಅವರು ಇಂತಹ ಪಾಸ್‌ವರ್ಡುಗಳನ್ನು ಬಹಳ ಸುಲಭವಾಗಿ > ಭೇದಿಸುತ್ತಾರೆ. > > ಇನ್ನೊಂದು ಕಾರಣ - ನಮ್ಮಲ್ಲಿ ಪರಿಣತ ಬಳಕೆದಾರರೆಂದುಕೊಂಡವರೂ ಮಾಡುವ ತಪ್ಪು - ಒಂದೇ > ಪಾಸ್‌ವರ್ಡನ್ನು ಹಲವಾರು ಕಡೆ ಬಳಸುವುದು. ಇಂತಹ ಸನ್ನಿವೇಶಗಳಲ್ಲಿ ಯಾವುದೇ ಒಂದು ಖಾತೆಯ > ಪಾಸ್‌ವರ್ಡ್ ಕಳ್ಳತನವಾದರೂ ಇತರ ಎಲ್ಲ ಖಾತೆಗಳ ಸುರಕ್ಷತೆಗೂ ಧಕ್ಕೆಯಾಗುವುದು ಗ್ಯಾರಂಟಿ! > > ನಮ್ಮ ಯಾವುದೇ ಖಾತೆಯ ಪಾಸ್‌ವರ್ಡ್ ಕಳುವಾಗದಂತೆ ನಾವು ಎಚ್ಚರವಹಿಸುತ್ತೇವೆ ಎಂದು > ಜಂಬಕೊಚ್ಚಿಕೊಳ್ಳುವಂತೆಯೂ ಇಲ್ಲ. ನಾವು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ > ಅಂತಲೇ ಅಂದುಕೊಳ್ಳೋಣ; ಆದರೆ ನಾವು ಬಳಸುವ ಜಾಲತಾಣದ ಮೇಲೆ ದುಷ್ಕರ್ಮಿಗಳ ಒಂದೇ ಒಂದು ದಾಳಿ > ಯಶಸ್ವಿಯಾದರೆ ನಮ್ಮ ಪಾಸ್‌ವರ್ಡುಗಳೆಲ್ಲ ಬೀದಿಗೆ ಬಂದಂತೆಯೇ ಲೆಕ್ಕ! > > ಇನ್ನು ಹಲವಾರು ತಾಣಗಳಲ್ಲಿ ಪಾಸ್‌ವರ್ಡ್ ಸುರಕ್ಷತೆಗೆ ಒಂದಷ್ಟು ವಿಶೇಷ ಕ್ರಮಗಳನ್ನು > ಕೈಗೊಂಡಿರುತ್ತಾರೆ. ಆದರೆ ಮರೆತ ಪಾಸ್‌ವರ್ಡುಗಳನ್ನು ಮತ್ತೆ ನೆನಪಿಸಲು ಅವರು ಒದಗಿಸುವ > ಸೌಲಭ್ಯಗಳು ಈ ವಿಶೇಷ ಕ್ರಮಗಳನ್ನೆಲ್ಲ ಒಂದೇ ಬಾರಿಗೆ ನಿರರ್ಥಕಗೊಳಿಸುವ ಆತಂಕವೂ ಇರುತ್ತದೆ. > ಗ್ರಾಹಕ ಸೇವಾ ವಿಭಾಗಕ್ಕೆ ಕರೆಮಾಡಿ ಪಾಸ್‌ವರ್ಡ್ ತಿಳಿದುಕೊಳ್ಳುವ ಸೌಲಭ್ಯವಂತೂ ಈ > ಅರ್ಥದಲ್ಲಿ ಬಹಳ ಅಪಾಯಕಾರಿ. ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಅಮ್ಮನ ಹೆಸರು, ಜನ್ಮದಿನ > ಮುಂತಾದ ಸುಲಭ ಪ್ರಶ್ನೆಗಳಿಗೆ ಉತ್ತರಿಸಿದ ಯಾರು ಬೇಕಾದರೂ ನಿಮ್ಮ ಪಾಸ್‌ವರ್ಡ್ > ತಿಳಿದುಕೊಂಡುಬಿಡುವ ಅಪಾಯ ಇಲ್ಲಿರುತ್ತದೆ. > > ಇನ್ನು ಫಿಶಿಂಗ್ ಬಗ್ಗೆಯಂತೂ ಹೇಳುವುದೇ ಬೇಡ. ಬ್ಯಾಂಕಿನ ಹೆಸರಿನಲ್ಲಿ, ಇಮೇಲ್ ಸೇವೆ > ಒದಗಿಸುವ ಸಂಸ್ಥೆಯ ಹೆಸರಿನಲ್ಲಿ, ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ - ಹೀಗೆ ಯಾವುದೋ > ನೆಪದಲ್ಲಿ ಬರುವ ನಕಲಿ ಸಂದೇಶಗಳು ಬಳಕೆದಾರರನ್ನು ಮೋಸಗೊಳಿಸಿ ಅವರ ಮಾಹಿತಿಯನ್ನು ಕದಿಯಲು > ಸದಾ ತುದಿಗಾಲಿನಲ್ಲೇ ಇರುತ್ತವೆ. ಸ್ಪೈವೇರ್‌ನಂತಹ ಕುತಂತ್ರಾಂಶಗಳೂ ನಮ್ಮ ಖಾಸಗಿ > ಮಾಹಿತಿಯನ್ನು ಕದಿಯಬಲ್ಲವು. > > ಒಟ್ಟಾರೆಯಾಗಿ, ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ > ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ ಕೀಲಿಕೈ ಎಂದೇ > ಕರೆಯಬಹುದು. ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ ಕಳೆದುಹೋದರೆ > ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ ಪ್ರಪಂಚದಲ್ಲಿರುವಂತೆ > ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ > ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ. > > ಹಾಗಾದರೆ ಕಂಪ್ಯೂಟರ್ ಪ್ರಪಂಚದಲ್ಲಿ ನಮ್ಮ ಸುರಕ್ಷತೆಗಾಗಿ ಪಾಸ್‌ವರ್ಡುಗಳನ್ನು > ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ > ನಾವು ಅನುಸರಿಸಬೇಕಾದ ಕ್ರಮಗಳೇನು? > > ಬೇರೆ ಯಾರೂ ಭೇದಿಸಲು ಸಾಧ್ಯವಾಗದಂತಹ ಪಾಸ್‌ವರ್ಡ್ ಆಯ್ದುಕೊಂಡುಬಿಟ್ಟರೆ ಸಮಸ್ಯೆಯೇ > ಇರುವುದಿಲ್ಲ, ನಿಜ. ಆದರೆ ಅಂತಹುದೊಂದು ಪಾಸ್‌ವರ್ಡನ್ನು ಎಲ್ಲಿಂದ ತರೋಣ? ಹಾಗಾಗಿಯೇ ನಾವು > ಅಭೇದ್ಯ ಪಾಸ್‌ವರ್ಡ್ ಹುಡುಕುವ ಯೋಚನೆಯನ್ನೆಲ್ಲ ಕೈಬಿಟ್ಟು ಇದ್ದುದರಲ್ಲೇ ಸುರಕ್ಷಿತವಾದ > ಮಾರ್ಗವನ್ನು ಅರಸಬೇಕು. > > ಯಾವ ಕಾರಣಕ್ಕೂ ಪಾಸ್‌ವರ್ಡ್‌ಗಳ ಮರುಬಳಕೆ ಮಾಡದಿರುವುದು ಈ ನಿಟ್ಟಿನಲ್ಲಿ ನಾವು > ಪಾಲಿಸಬೇಕಾದ ಮೊದಲ ನಿಯಮ. ಬೇರೆಬೇರೆ ಬೀಗಗಳಿಗೆ ಬೇರೆಬೇರೆ ಕೀಲಿಕೈಗಳಿರುವಂತೆಯೇ ಬೇರೆಬೇರೆ > ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳೇ ಇರಬೇಕು. ಮರುಬಳಕೆ ಮಾಡಿಯೇ ತೀರುತ್ತೇವೆ > ಎನ್ನುವವರು ಕನಿಷ್ಟಪಕ್ಷ ಇಮೇಲ್, ನೆಟ್‌ಬ್ಯಾಂಕಿಂಗ್, ಸೋಶಿಯಲ್ ನೆಟ್‌ವರ್ಕ್ > ತಾಣಗಳಲ್ಲಾದರೂ ಬೇರೆಬೇರೆ ಪಾಸ್‌ವರ್ಡುಗಳನ್ನು ಬಳಸುವುದು ಒಳ್ಳೆಯದು. ಒಂದೊಮ್ಮೆ ನಮ್ಮ > ಯಾವುದೋ ಒಂದು ಖಾತೆಯ ಪಾಸ್‌ವರ್ಡ್ ಕಳುವಾದರೂ ಇತರ ಖಾತೆಗಳು ಸುರಕ್ಷಿತವಾಗಿರುವಂತೆ > ನೋಡಿಕೊಳ್ಳಲು ಈ ಕ್ರಮ ಅನಿವಾರ್ಯವೂ ಹೌದು. > > ಹಾಗೆಯೇ ತೀರಾ ಸರಳ ಪದಗಳನ್ನು (ಉದಾ: ನಿಮ್ಮ ಹೆಸರು, ಊರಿನ ಹೆಸರು, ವೆಬ್‌ಸೈಟಿನದೇ > ಹೆಸರು, "ಪಾಸ್‌ವರ್ಡ್" ಇತ್ಯಾದಿ) ಪಾಸ್‌ವರ್ಡ್ ಆಗಿ ಆರಿಸಿಕೊಳ್ಳುವುದೂ ಒಳ್ಳೆಯ > ಅಭ್ಯಾಸವಲ್ಲ. ಹ್ಯಾಕರುಗಳಷ್ಟೇ ಏಕೆ, ನಿಮ್ಮ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುವ ಯಾರು > ಬೇಕಾದರೂ ಇಂತಹ ಪಾಸ್‌ವರ್ಡುಗಳನ್ನು ಊಹಿಸಬಲ್ಲರು. ಪಾಸ್‌ವರ್ಡಿನ ಉದ್ದ ತೀರಾ > ಕಡಿಮೆಯಿದ್ದರೂ ಕಷ್ಟವೇ. ಪಾಸ್‌ವರ್ಡ್ ಉದ್ದ ಕಡಿಮೆಯಿದ್ದಷ್ಟೂ ಪಾಸ್‌ವರ್ಡ್ ಚೋರರು ಬಳಸುವ > ಕುತಂತ್ರಾಂಶಗಳು ಅಂತಹ ಪಾಸ್‌ವರ್ಡುಗಳನ್ನು ಸುಲಭವಾಗಿ ಊಹಿಸುವ ಸಾಧ್ಯತೆ > ಜಾಸ್ತಿಯಿರುತ್ತದೆ. ಪಾಸ್‌ವರ್ಡ್‌ನಲ್ಲಿ ಅಂಕಿಗಳು ಮತ್ತು ವಿಶೇಷ ಚಿಹ್ನೆಗಳನ್ನು ಬಳಸುವ > ಮೂಲಕ ಕಳ್ಳರ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸಬಹುದು. ಅಕ್ಷರ, ಅಂಕಿ ಹಾಗೂ ವಿಶೇಷ > ಚಿಹ್ನೆಗಳ ಅರ್ಥರಹಿತ ಜೋಡಣೆಯನ್ನು ಪಾಸ್‌ವರ್ಡ್ ಆಗಿ ಬಳಸುವುದು ಆದಷ್ಟೂ ಒಳ್ಳೆಯದು. > > ಗ್ರಾಹಕರು ಪಾಸ್‌ವರ್ಡ್ ಚೋರರಿಂದ ಪಾರಾಗುವಲ್ಲಿ ವೆಬ್‌ಸೈಟುಗಳೂ ನೆರವಾಗಬೇಕಲ್ಲ, ಹಾಗಾಗಿ > ಅವು ಆಗಿಂದಾಗ್ಗೆ ಹೊಸ ಸುರಕ್ಷತಾ ಕ್ರಮಗಳನ್ನು ಪರಿಚಯಿಸುತ್ತಿರುತ್ತವೆ. ಇಂತಹ > ಕ್ರಮಗಳಲ್ಲೊಂದು, ಎರಡು ಹಂತದ ಸುರಕ್ಷತಾ ವ್ಯವಸ್ಥೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು > ನೆನಪಿಟ್ಟುಕೊಂಡಿರುವ ಜಾಲತಾಣಗಳು ನಿಮ್ಮ ಖಾತೆಯಲ್ಲಿ ಯಾವುದೇ ಸಂಶಯಾಸ್ಪದ ಚಟುವಟಿಕೆ > ಕಂಡುಬಂದರೂ ನಿಮಗೊಂದು ಎಸ್ಸೆಮ್ಮೆಸ್ ಕಳುಹಿಸುತ್ತವೆ. ನಿನ್ನೆಯವರೆಗೂ ನೀವು ನಾಗರಭಾವಿಯಿಂದ > ಲಾಗಿನ್ ಆಗುತ್ತಿದ್ದ ಖಾತೆಗೆ ಇದ್ದಕ್ಕಿದ್ದಂತೆ ಯಾರೋ ನೈಜೀರಿಯಾದಿಂದ ಲಾಗಿನ್ ಆಗುತ್ತಾರೆ > ಎಂದಿಟ್ಟುಕೊಳ್ಳಿ; ಅಂತಹ ಸಂದರ್ಭಗಳಲ್ಲಿ ಅದು ನಿಜಕ್ಕೂ ನೀವೋ ಅಲ್ಲವೋ ಎಂದು > ತಿಳಿದುಕೊಳ್ಳಲು ಆ ಜಾಲತಾಣ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸುತ್ತದೆ. > ಅಷ್ಟೇ ಅಲ್ಲ, ಆ ಎಸ್ಸೆಮ್ಮೆಸ್ಸಿನಲ್ಲಿರುವ ಗುಪ್ತ ಸಂಕೇತವನ್ನು ವೆಬ್‌ಸೈಟಿನಲ್ಲಿ > ದಾಖಲಿಸುವವರೆಗೂ ಲಾಗಿನ್ ಪ್ರಯತ್ನವನ್ನು ಮುಂದುವರೆಯಲು ಬಿಡುವುದಿಲ್ಲ. ಈ ವ್ಯವಸ್ಥೆಯನ್ನು > ನೂರಕ್ಕೆ ನೂರರಷ್ಟು ಸುರಕ್ಷಿತವೆಂದು ಕರೆಯಲಾಗುವುದಿಲ್ಲವಾದರೂ ಇದು ತಕ್ಕಮಟ್ಟಿಗೆ > ಪರಿಣಾಮಕಾರಿ ಎನ್ನುವುದಂತೂ ನಿಜ. > > ನೂರೆಂಟು ತಾಣಗಳಿಗೆ ನೂರೆಂಟು ಪಾಸ್‌ವರ್ಡುಗಳಿರುವಾಗ ಅವಷ್ಟನ್ನೂ ಮರೆಯದೆಯೇ > ನೆನಪಿಟ್ಟುಕೊಂಡಿರುತ್ತೇವೆ ಎನ್ನುವಂತಿಲ್ಲ. ನಿನ್ನೆಯಷ್ಟೇ ಬದಲಿಸಿದ ಪಾಸ್‌ವರ್ಡನ್ನು > ನೆನಪಿಟ್ಟುಕೊಳ್ಳುವ ಮೊದಲೇ ಮರೆತುಬಿಡುವ ಸಾಧ್ಯತೆಯೂ ಇದೆಯಲ್ಲ! ಹಾಗೆಯೇ ಬಹುಸಮಯದಿಂದ ಬಳಸದ > ತಾಣದ ಪಾಸ್‌ವರ್ಡೂ ನಮ್ಮ ನೆನಪಿನಲ್ಲಿ ಉಳಿಯುವುದು ಕಷ್ಟ. ಪಾಸ್‌ವರ್ಡು ಮರೆತುಹೋಗುತ್ತದೆ > ಎಂದು ಅದನ್ನು ಒಂದುಕಡೆ ಬರೆದಿಟ್ಟುಬಿಟ್ಟರೆ ಬರೆದಿಟ್ಟದ್ದು ಕಳೆಯುವ ಭಯ ಬೇರೆ. ಇದೆಲ್ಲ > ಗೊಂದಲದಲ್ಲಿ ಪಾಸ್‌ವರ್ಡುಗಳನ್ನು ಮರೆಯುವುದು ತೀರಾ ಸಾಮಾನ್ಯವಾದ್ದರಿಂದಲೇ ಮರೆತ > ಪಾಸ್‌ವರ್ಡನ್ನು ನೆನಪಿಸುವ ಸೌಲಭ್ಯ ಬಹುತೇಕ ಎಲ್ಲ ತಾಣಗಳಲ್ಲೂ ಇರುತ್ತದೆ. > > ಹೀಗೆ ಮರೆತ ಪಾಸ್‌ವರ್ಡನ್ನು ನೆನಪಿಸಬೇಕೆಂದರೆ ನಾವು ಮೊದಲೇ ನಿರ್ಧರಿಸಿದ ಸುರಕ್ಷತಾ > ಪ್ರಶ್ನೆಗೆ ಉತ್ತರಿಸಬೇಕಾದ್ದು ಅಗತ್ಯ. ಇಂತಹ ಪ್ರಶ್ನೆಗಳು ನಾನು ಓದಿದ ಮೊದಲ ಶಾಲೆ, > ನನ್ನಮ್ಮನ ಹೆಸರು, ನಾನು ಕೊಂಡ ಮೊದಲ ಕಾರು - ಹೀಗೆಲ್ಲ ಇರುವುದು ಸಾಮಾನ್ಯ. ಆದರೆ ಮೊದಲಿಗೆ > ನಮ್ಮ ಉತ್ತರವನ್ನು ಉಳಿಸಿಡುವಾಗ ಇಂತಹ ಪ್ರಶ್ನೆಗಳಿಗೆ ನೇರ ಉತ್ತರ ಕೊಡದಿರುವುದು > ಒಳ್ಳೆಯದು. ನಾನು ಓದಿದ್ದು ಇಂತಹ ಊರಿನ ಇಂತಹ ಶಾಲೆಯಲ್ಲಿ ಎನ್ನುವಂತಹ ವಿಷಯಗಳನ್ನೆಲ್ಲ > ನಾವೇ ಫೇಸ್‌ಬುಕ್-ಲಿಂಕ್ಡ್‌ಇನ್ ಇತ್ಯಾದಿಗಳಲ್ಲಿ ಹಾಕಿಟ್ಟುಬಿಟ್ಟಿರುತ್ತೇವಲ್ಲ, ಹಾಗಾಗಿ > ಇಂತಹ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೆ ಕೊಂಚ ವಿಚಿತ್ರವಾದ ಉತ್ತರಗಳನ್ನೇ > ದಾಖಲಿಸಿಡುವುದು ಒಳಿತು. > > ಇನ್ನು ಕೆಲ ತಾಣಗಳಲ್ಲಿ ಪಾಸ್‌ವರ್ಡ್ ಮರೆತಿದೆ ಎಂದಾಗ ಪಾಸ್‌ವರ್ಡನ್ನು ನಮ್ಮ ಇಮೇಲ್ > ವಿಳಾಸಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಇರುತ್ತದೆ. ಸಾಧ್ಯವಾದರೆ ಹೀಗೆ ಪಾಸ್‌ವರ್ಡುಗಳನ್ನು > ಪಡೆದುಕೊಳ್ಳಲೆಂದೇ ಪ್ರತ್ಯೇಕವಾದ ಇಮೇಲ್ ವಿಳಾಸವನ್ನು ಬಳಸುವುದು ಒಳ್ಳೆಯದು. ನಮ್ಮ > ದಿನನಿತ್ಯದ ಬಳಕೆಯ ಇಮೇಲ್ ವಿಳಾಸವನ್ನೇ ಇದಕ್ಕೂ ಬಳಸುವುದಾದರೆ ಆ ಇಮೇಲ್ ಖಾತೆ ಹ್ಯಾಕ್ ಆದ > ಸಂದರ್ಭದಲ್ಲಿ ನಮ್ಮ ಇತರ ಖಾತೆಗಳ ಸುರಕ್ಷತೆಗೂ ತೊಂದರೆಯಾಗುತ್ತದೆ. > > ಅದೆಲ್ಲ ಸರಿ, ಆದರೆ ನಮ್ಮ ಪಾಸ್‌ವರ್ಡ್ ಕದಿಯಲು ಪ್ರಯತ್ನಿಸುವವರಾದರೂ ಯಾರು? ಈ > ಪ್ರಶ್ನೆಗೆ ಉತ್ತರ ಏನು ಬೇಕಾದರೂ ಇರಬಹುದು. ತಮ್ಮ ತಾಂತ್ರಿಕ ನೈಪುಣ್ಯವನ್ನು > ಪರೀಕ್ಷಿಸಿಕೊಳ್ಳುವ ಜೋಶ್‌ನಲ್ಲಿರುವ ಕಿರಿಯರಾಗಲಿ, ಪಾಸ್‌ವರ್ಡ್ ಕದ್ದು > ದುಡ್ಡುಮಾಡಿಕೊಳ್ಳಬೇಕು ಎಂಬ ಏಕೈಕ ಉದ್ದೇಶವಿರುವ ದುಷ್ಟರಾಗಲಿ - ಪಾಸ್‌ವರ್ಡ್ ಕದಿಯುವವರು > ಯಾರೇ ಆದರೂ ನಮಗೆ ನಷ್ಟವಾಗುವುದಂತೂ ಗ್ಯಾರಂಟಿ. ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ > ಪಾಸ್‌ವರ್ಡು ಕಳುವಾದರೆ ಹಣಕಾಸಿನ ರೂಪದ ನಷ್ಟವಾಗುತ್ತದೆ ಎನ್ನುವುದು ನಮಗೆ ಈಗಾಗಲೇ > ಗೊತ್ತು. ಆದರೆ ಇಮೇಲ್ ಖಾತೆಯ ಪಾಸ್‌ವರ್ಡ್ ಕಳುವಾದರೂ ಹಣಕಾಸಿನ ನಷ್ಟವಾಗಬಹುದು! ನಿಮ್ಮ > ಇಮೇಲ್ ಪಾಸ್‌ವರ್ಡ್ ಕದ್ದವರು ನಾನು ಬೇರೆ ಊರಿಗೆ ಬಂದಿದ್ದೇನೆ, ನನ್ನ ಪರ್ಸು > ಕಳ್ಳತನವಾಗಿಬಿಟ್ಟಿದೆ, ಅರ್ಜೆಂಟಾಗಿ ನನಗೊಂದಷ್ಟು ಹಣ ಕಳಿಸು ಎಂದು ನಿಮ್ಮ ಮಿತ್ರರಿಗೆಲ್ಲ > ಮೆಸೇಜು ಕಳಿಸಿ ಅವರ ಖಾತೆಗೆ ಹಣ ತರಿಸಿಕೊಳ್ಳುವುದು ಅಂತಹ ಕಷ್ಟವೇನೂ ಆಗಲಾರದು ಅಲ್ಲವೆ? > > ಇದೆಲ್ಲ ಅಂಶಗಳನ್ನು ಗಮನಿಸಿದಾಗ ಪಾಸ್‌ವರ್ಡುಗಳು ಸಂಪೂರ್ಣ ಸುರಕ್ಷಿತವೇನಲ್ಲ ಎಂದೇ > ಹೇಳಬೇಕಾಗುತ್ತದೆ. ಹೀಗಿದ್ದರೂ ಪಾಸ್‌ವರ್ಡುಗಳ ಬದಲಿಗೆ ವಿಶ್ವಸನೀಯ ಪರ್ಯಾಯವನ್ನು > ರೂಪಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಪ್ರತಿಯೊಂದು ಬಳಕೆಗೂ ಹೊಸದೊಂದು ಪಾಸ್‌ವರ್ಡ್ > ನೀಡುವ ಓಟಿಪಿ (ಒನ್ ಟೈಮ್ ಪಾಸ್‌ವರ್ಡ್) ವ್ಯವಸ್ಥೆ ಸದ್ಯಕ್ಕೆ ಹಣಕಾಸು ವ್ಯವಹಾರಗಳಿಗಷ್ಟೆ > ಸೀಮಿತವಾಗಿದೆ. ಸೆಕ್ಯೂರ್ ಐಡಿ, ಬಯೋಮೆಟ್ರಿಕ್ಸ್ ಇತ್ಯಾದಿಗಳೆಲ್ಲ ಅಲ್ಲಲ್ಲಿ > ಬಳಕೆಯಾಗುತ್ತಿದ್ದರೂ ಅವು ಇನ್ನೂ ಪಾಸ್‌ವರ್ಡುಗಳ ಸ್ಥಳವನ್ನು ತುಂಬುವ ಮಟ್ಟಕ್ಕೆ > ಬೆಳೆದಿಲ್ಲ. ಹಾಗಾಗಿ ಸದ್ಯದ ಮಟ್ಟಿಗಂತೂ ನಾವು ನಮ್ಮ ಪಾಸ್‌ವರ್ಡುಗಳನ್ನು ಸುರಕ್ಷಿತವಾಗಿ > ಕಾಪಾಡಿಕೊಳ್ಳುವುದು ಖಂಡಿತಾ ಅನಿವಾರ್ಯ! > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
