Nice information about password, thank u sir
On 14 May 2016 7:11 pm, "mahadevaswamy nagappa" <[email protected]> wrote:

> Nice article about password sir.
>
> Thanks for sharing this article.
> On May 12, 2016 8:38 PM, "HAREESHKUMAR K Agasanapura" <
> [email protected]> wrote:
>
>>
>> http://googleweblight.com/?lite_url=http://www.ejnana.com/2016/05/password.html%3Fm%3D1&lc=en-IN&s=1&m=534&host=www.google.co.in&ts=1463065227&sig=APY536wEqqONUFWwsmefTJ7x3mRqrFvOSg
>> *ವಿಶ್ವ ಪಾಸ್‌ವರ್ಡ್ ದಿನ ವಿಶೇಷ: ನಿಮ್ಮ ಪಾಸ್‌ವರ್ಡ್ ಜೋಪಾನ!*
>>
>> ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ
>> ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು
>> ಪಾಸ್‌ವರ್ಡ್ ಬೇಕೇಬೇಕು. ವಿಶ್ವ ಪಾಸ್‌ವರ್ಡ್ ದಿನದಂದು (ಮೇ ೫) ಈ ಲೇಖನವನ್ನು
>> ಮರುಪ್ರಕಟಿಸುವ ಮೂಲಕ ನಾವು ಪಾಸ್‌ವರ್ಡ್ ಮಹತ್ವವನ್ನು ತಿಳಿಸುವ ಪ್ರಯತ್ನ
>> ಮಾಡುತ್ತಿದ್ದೇವೆ..
>>
>>
>> *ಟಿ. ಜಿ. ಶ್ರೀನಿಧಿ*
>>
>>
>> <https://googleweblight.com/?lite_url=https://2.bp.blogspot.com/-wqwJhWkXiBo/VytYfH9DFKI/AAAAAAAAemY/RJxgR8XD_l49Kjhk_TE5rF5ohB_13ig0wCLcB/s1600/WPD16-GIF-Passwords102.gif&lc=en-IN&s=1&m=534&host=www.google.co.in&ts=1463065552&sig=APY536zTeafpCcD7M7sgrAkWzE8kwMQ5mQ>
>>
>> ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ
>> ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ
>> ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ
>> ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ
>> ರೂಪಿಸಿಕೊಂಡಿರುತ್ತಾರೆ.
>>
>> ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು
>> ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು!
>>
>> ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು.
>> ಆದರೆ ಅಂತರಜಾಲದ ಪ್ರಪಂಚದಲ್ಲಿ ಈ ಕತೆಯಲ್ಲಿ ನಡೆದಂತಹ ಸನ್ನಿವೇಶಗಳು ಈಗ ತೀರಾ
>> ಸಾಮಾನ್ಯವಾಗಿಬಿಟ್ಟಿವೆ. ಕತೆಯ ಆಲಿಬಾಬ ಕಳ್ಳರಿಂದ ಕದ್ದರೆ ಅಂತರಜಾಲದ ಖದೀಮರು
>> ಸಿಕ್ಕಸಿಕ್ಕವರನ್ನೆಲ್ಲ ದೋಚಲು ಹೊರಟಿದ್ದಾರೆ.
>>
>> ಇಂತಹ ಪರಿಸ್ಥಿತಿಯನ್ನು ತಂದಿಟ್ಟಿರುವುದು ಕೇವಲ ಒಂದು ಪದ ಎಂದರೆ ನಮಗೆ ಆಶ್ಚರ್ಯವೇನೂ
>> ಆಗಲಿಕ್ಕಿಲ್ಲ. ಏಕೆಂದರೆ ಜಾಲಜಗತ್ತಿನ ಅದೆಷ್ಟೋ ಬಾಗಿಲುಗಳನ್ನು ತೆರೆಯುವ ಪಾಸ್‌ವರ್ಡ್ ಎಂಬ
>> ಶಕ್ತಿಶಾಲಿ ಶಬ್ದ ಆಲಿಬಾಬ ಕತೆಯ ಸೇಸಮ್ಮನಂತೆಯೇ ತಾನೆ!
>>
>> ನಿಜ, ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ
>> ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ
>> ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.
>>
>> ಕಂಪ್ಯೂಟರ್ ಪ್ರಪಂಚಕ್ಕೆ ಪಾಸ್‌ವರ್ಡುಗಳು ಪಾದಾರ್ಪಣೆ ಮಾಡಿದ್ದು ಸುಮಾರು ೧೯೬೦ರ
>> ಆಸುಪಾಸಿನಲ್ಲಿ.
>> ಕಂಪ್ಯೂಟರುಗಳ ಬಳಕೆ ಬಹಳ ಕಡಿಮೆಯಿದ್ದ ಆ ಕಾಲದಲ್ಲಿ ಪಾಸ್‌ವರ್ಡ್ ಸುರಕ್ಷತೆ ಅಂತಹ ದೊಡ್ಡ
>> ಸವಾಲೇನೂ ಆಗಿರಲಿಲ್ಲ ಅನಿಸುತ್ತದೆ. ಆ ಕಾಲದಲ್ಲಿ ಅಕಸ್ಮಾತ್ತಾಗಿ ಯಾವುದಾದರೂ ಪಾಸ್‌ವರ್ಡ್
>> ಕಳುವಾದರೂ ಅದರಿಂದಾಗುವ ಹಾನಿ ಸೀಮಿತ ಪ್ರಮಾಣದ್ದಷ್ಟೆ ಆಗಿತ್ತು.
>>
>> ಹಾಗಾಗಿ ಕಂಪ್ಯೂಟರ್ ಸುರಕ್ಷತೆಯಲ್ಲಿ ಪಾಸ್‌ವರ್ಡ್‌ಗಳನ್ನು ಬಳಸುವ ಅಭ್ಯಾಸವೇ
>> ವ್ಯಾಪಕವಾಗಿ ಮುಂದುವರೆಯಿತು. ಮೇಜಿನ ಮೇಲಿನ ಕಂಪ್ಯೂಟರ್ ಬಳಸುವುದರಿಂದ ಪ್ರಾರಂಭಿಸಿ
>> ಇಂಟರ್‌ನೆಟ್ ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ
>> ಇತ್ಯಾದಿಗಳವರೆಗೆ ಎಲ್ಲೆಲ್ಲೂ ಪಾಸ್‌ವರ್ಡ್‌ಗಳದೇ ರಾಜ್ಯಭಾರವಾಯಿತು.
>>
>> ಮುಂದಿನ ವರ್ಷಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಿದಂತೆ ಅದರ ಮೇಲೆ ನಮ್ಮ ಅವಲಂಬನೆ
>> ಜಾಸ್ತಿಯಾಯಿತು; ಅವಲಂಬನೆ ಜಾಸ್ತಿಯಾದಂತೆ ಬಾಹ್ಯ ಪ್ರಪಂಚದ ನಮ್ಮ ಬದುಕಿಗೆ ಸಂಬಂಧಪಟ್ಟ
>> ಅದೆಷ್ಟೋ ವಿಷಯಗಳು ಕಂಪ್ಯೂಟರ್ ಪ್ರಪಂಚವನ್ನೂ ಸೇರಿಕೊಂಡವು. ಇದೆಲ್ಲದರ ಸುರಕ್ಷತೆಗೂ
>> ಪಾಸ್‌ವರ್ಡ್ ಒಂದೇ ಅಸ್ತ್ರವಾಗಿ ಮುಂದುವರೆಯಿತು; ಪಾಸ್‌ವರ್ಡ್ ಕಳುವಾದರೆ ಆಗಬಹುದಾದ ನಷ್ಟ
>> ಭಾರೀ ಪ್ರಮಾಣಕ್ಕೆ ಏರಿತು!
>>
>> ನಿಜ, ಒಮ್ಮೆ ಯೋಚಿಸಿ ನೋಡಿದರೆ ಕೇವಲ ಒಂದು ಪಾಸ್‌ವರ್ಡ್ ಮೇಲೆ ಅದೆಷ್ಟು ಮಹತ್ವದ
>> ಸಂಗತಿಗಳು ಅವಲಂಬಿತವಾಗಿರುತ್ತವೆ ಎನ್ನುವುದು ಗೊತ್ತಾಗುತ್ತದೆ. ನಮ್ಮ ಹಣಕಾಸಿನ ಪರಿಸ್ಥಿತಿ
>> ಬ್ಯಾಂಕ್ ಖಾತೆಯ ಆ ಒಂದು ಪಾಸ್‌ವರ್ಡನ್ನೇ ನೆಚ್ಚಿಕೊಂಡಿರುತ್ತದೆ. ಇಮೇಲ್ ಖಾತೆಯ
>> ಪಾಸ್‌ವರ್ಡ್ ಕಳ್ಳರ ಪಾಲಾದರೆ ನಮ್ಮ ಅದೆಷ್ಟೋ ಖಾಸಗಿ ಮಾಹಿತಿ ಸೋರಿಹೋಗುತ್ತದೆ; ಅಷ್ಟೇ
>> ಅಲ್ಲ, ಅದನ್ನು ಬಳಸಿಕೊಂಡವರು ನಮ್ಮನ್ನು, ನಮ್ಮ ಆಪ್ತರನ್ನು ವಂಚಿಸುವ ಸಾಧ್ಯತೆಯೂ
>> ಇರುತ್ತದೆ. ಇನ್ನು ಬದುಕಿನ ಘಟನೆಗಳನ್ನೆಲ್ಲ ದಾಖಲಿಸಿಟ್ಟುಕೊಳ್ಳುವ, ಪ್ರಪಂಚದೊಡನೆ
>> ಸ್ನೇಹಬೆಳೆಸುವ ಸಮಾಜ ಜಾಲಗಳ ಪಾಸ್‌ವರ್ಡ್ ಕೈಜಾರಿದರಂತೂ ಮರ್ಯಾದೆಯೇ ಮಣ್ಣುಪಾಲಾಗುವ
>> ಸನ್ನಿವೇಶ.
>>
>> ನಮ್ಮ ಪಾಸ್‌ವರ್ಡ್ ದುರ್ಬಳಕೆಯಾಗುವುದಾದರೂ ಹೇಗೆ ಎಂದು ನೋಡಲು ಹೊರಟರೆ ಅದಕ್ಕೆ ಅನೇಕ
>> ಕಾರಣಗಳು ಕಾಣಸಿಗುತ್ತವೆ. ಬಹುಶಃ ಸರಿಯಾದ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿಕೊಳ್ಳದ ನಮ್ಮ
>> ಸೋಮಾರಿತನ ಅಥವಾ ಉದಾಸೀನವನ್ನೇ ಇದರ ಮೊದಲ ಕಾರಣವೆಂದು ಕರೆಯಬಹುದೇನೋ. 'ಪಾಸ್‌ವರ್ಡ್',
>> '೧೨೩೪೫' ಮುಂತಾದ ಅತ್ಯಂತ ದುರ್ಬಲ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ನಮ್ಮ
>> ಮಾಹಿತಿಯ ಸುರಕ್ಷತೆಗೆ ನಾವೇ ಧಕ್ಕೆತರುತ್ತೇವೆ. ಯಾರದರೂ ನಮ್ಮ ಖಾತೆಯೊಳಕ್ಕೆ
>> ನುಸುಳಬೇಕೆಂದು ಪ್ರಯತ್ನಿಸಿದರೆ ಅವರು ಇಂತಹ ಪಾಸ್‌ವರ್ಡುಗಳನ್ನು ಬಹಳ ಸುಲಭವಾಗಿ
>> ಭೇದಿಸುತ್ತಾರೆ.
>>
>> ಇನ್ನೊಂದು ಕಾರಣ - ನಮ್ಮಲ್ಲಿ ಪರಿಣತ ಬಳಕೆದಾರರೆಂದುಕೊಂಡವರೂ ಮಾಡುವ ತಪ್ಪು - ಒಂದೇ
>> ಪಾಸ್‌ವರ್ಡನ್ನು ಹಲವಾರು ಕಡೆ ಬಳಸುವುದು. ಇಂತಹ ಸನ್ನಿವೇಶಗಳಲ್ಲಿ ಯಾವುದೇ ಒಂದು ಖಾತೆಯ
>> ಪಾಸ್‌ವರ್ಡ್ ಕಳ್ಳತನವಾದರೂ ಇತರ ಎಲ್ಲ ಖಾತೆಗಳ ಸುರಕ್ಷತೆಗೂ ಧಕ್ಕೆಯಾಗುವುದು ಗ್ಯಾರಂಟಿ!
>>
>> ನಮ್ಮ ಯಾವುದೇ ಖಾತೆಯ ಪಾಸ್‌ವರ್ಡ್ ಕಳುವಾಗದಂತೆ ನಾವು ಎಚ್ಚರವಹಿಸುತ್ತೇವೆ ಎಂದು
>> ಜಂಬಕೊಚ್ಚಿಕೊಳ್ಳುವಂತೆಯೂ ಇಲ್ಲ. ನಾವು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ
>> ಅಂತಲೇ ಅಂದುಕೊಳ್ಳೋಣ; ಆದರೆ ನಾವು ಬಳಸುವ ಜಾಲತಾಣದ ಮೇಲೆ ದುಷ್ಕರ್ಮಿಗಳ ಒಂದೇ ಒಂದು ದಾಳಿ
>> ಯಶಸ್ವಿಯಾದರೆ ನಮ್ಮ ಪಾಸ್‌ವರ್ಡುಗಳೆಲ್ಲ ಬೀದಿಗೆ ಬಂದಂತೆಯೇ ಲೆಕ್ಕ!
>>
>> ಇನ್ನು ಹಲವಾರು ತಾಣಗಳಲ್ಲಿ ಪಾಸ್‌ವರ್ಡ್ ಸುರಕ್ಷತೆಗೆ ಒಂದಷ್ಟು ವಿಶೇಷ ಕ್ರಮಗಳನ್ನು
>> ಕೈಗೊಂಡಿರುತ್ತಾರೆ. ಆದರೆ ಮರೆತ ಪಾಸ್‌ವರ್ಡುಗಳನ್ನು ಮತ್ತೆ ನೆನಪಿಸಲು ಅವರು ಒದಗಿಸುವ
>> ಸೌಲಭ್ಯಗಳು ಈ ವಿಶೇಷ ಕ್ರಮಗಳನ್ನೆಲ್ಲ ಒಂದೇ ಬಾರಿಗೆ ನಿರರ್ಥಕಗೊಳಿಸುವ ಆತಂಕವೂ ಇರುತ್ತದೆ.
>> ಗ್ರಾಹಕ ಸೇವಾ ವಿಭಾಗಕ್ಕೆ ಕರೆಮಾಡಿ ಪಾಸ್‌ವರ್ಡ್ ತಿಳಿದುಕೊಳ್ಳುವ ಸೌಲಭ್ಯವಂತೂ ಈ
>> ಅರ್ಥದಲ್ಲಿ ಬಹಳ ಅಪಾಯಕಾರಿ. ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಅಮ್ಮನ ಹೆಸರು, ಜನ್ಮದಿನ
>> ಮುಂತಾದ ಸುಲಭ ಪ್ರಶ್ನೆಗಳಿಗೆ ಉತ್ತರಿಸಿದ ಯಾರು ಬೇಕಾದರೂ ನಿಮ್ಮ ಪಾಸ್‌ವರ್ಡ್
>> ತಿಳಿದುಕೊಂಡುಬಿಡುವ ಅಪಾಯ ಇಲ್ಲಿರುತ್ತದೆ.
>>
>> ಇನ್ನು ಫಿಶಿಂಗ್ ಬಗ್ಗೆಯಂತೂ ಹೇಳುವುದೇ ಬೇಡ. ಬ್ಯಾಂಕಿನ ಹೆಸರಿನಲ್ಲಿ, ಇಮೇಲ್ ಸೇವೆ
>> ಒದಗಿಸುವ ಸಂಸ್ಥೆಯ ಹೆಸರಿನಲ್ಲಿ, ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ - ಹೀಗೆ ಯಾವುದೋ
>> ನೆಪದಲ್ಲಿ ಬರುವ ನಕಲಿ ಸಂದೇಶಗಳು ಬಳಕೆದಾರರನ್ನು ಮೋಸಗೊಳಿಸಿ ಅವರ ಮಾಹಿತಿಯನ್ನು ಕದಿಯಲು
>> ಸದಾ ತುದಿಗಾಲಿನಲ್ಲೇ ಇರುತ್ತವೆ. ಸ್ಪೈವೇರ್‌ನಂತಹ ಕುತಂತ್ರಾಂಶಗಳೂ ನಮ್ಮ ಖಾಸಗಿ
>> ಮಾಹಿತಿಯನ್ನು ಕದಿಯಬಲ್ಲವು.
>>
>> ಒಟ್ಟಾರೆಯಾಗಿ, ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ
>> ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ
>> ಕೀಲಿಕೈ ಎಂದೇ ಕರೆಯಬಹುದು. ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ
>> ಕಳೆದುಹೋದರೆ ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ
>> ಪ್ರಪಂಚದಲ್ಲಿರುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು
>> ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.
>>
>> ಹಾಗಾದರೆ ಕಂಪ್ಯೂಟರ್ ಪ್ರಪಂಚದಲ್ಲಿ ನಮ್ಮ ಸುರಕ್ಷತೆಗಾಗಿ ಪಾಸ್‌ವರ್ಡುಗಳನ್ನು
>> ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ
>> ನಾವು ಅನುಸರಿಸಬೇಕಾದ ಕ್ರಮಗಳೇನು?
>>
>> ಬೇರೆ ಯಾರೂ ಭೇದಿಸಲು ಸಾಧ್ಯವಾಗದಂತಹ ಪಾಸ್‌ವರ್ಡ್ ಆಯ್ದುಕೊಂಡುಬಿಟ್ಟರೆ ಸಮಸ್ಯೆಯೇ
>> ಇರುವುದಿಲ್ಲ, ನಿಜ. ಆದರೆ ಅಂತಹುದೊಂದು ಪಾಸ್‌ವರ್ಡನ್ನು ಎಲ್ಲಿಂದ ತರೋಣ? ಹಾಗಾಗಿಯೇ ನಾವು
>> ಅಭೇದ್ಯ ಪಾಸ್‌ವರ್ಡ್ ಹುಡುಕುವ ಯೋಚನೆಯನ್ನೆಲ್ಲ ಕೈಬಿಟ್ಟು ಇದ್ದುದರಲ್ಲೇ ಸುರಕ್ಷಿತವಾದ
>> ಮಾರ್ಗವನ್ನು ಅರಸಬೇಕು.
>>
>> ಯಾವ ಕಾರಣಕ್ಕೂ ಪಾಸ್‌ವರ್ಡ್‌ಗಳ ಮರುಬಳಕೆ ಮಾಡದಿರುವುದು ಈ ನಿಟ್ಟಿನಲ್ಲಿ ನಾವು
>> ಪಾಲಿಸಬೇಕಾದ ಮೊದಲ ನಿಯಮ. ಬೇರೆಬೇರೆ ಬೀಗಗಳಿಗೆ ಬೇರೆಬೇರೆ ಕೀಲಿಕೈಗಳಿರುವಂತೆಯೇ ಬೇರೆಬೇರೆ
>> ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳೇ ಇರಬೇಕು. ಮರುಬಳಕೆ ಮಾಡಿಯೇ ತೀರುತ್ತೇವೆ
>> ಎನ್ನುವವರು ಕನಿಷ್ಟಪಕ್ಷ ಇಮೇಲ್, ನೆಟ್‌ಬ್ಯಾಂಕಿಂಗ್, ಸೋಶಿಯಲ್ ‌ನೆಟ್‌ವರ್ಕ್
>> ತಾಣಗಳಲ್ಲಾದರೂ ಬೇರೆಬೇರೆ ಪಾಸ್‌ವರ್ಡುಗಳನ್ನು ಬಳಸುವುದು ಒಳ್ಳೆಯದು. ಒಂದೊಮ್ಮೆ ನಮ್ಮ
>> ಯಾವುದೋ ಒಂದು ಖಾತೆಯ ಪಾಸ್‌ವರ್ಡ್ ಕಳುವಾದರೂ ಇತರ ಖಾತೆಗಳು ಸುರಕ್ಷಿತವಾಗಿರುವಂತೆ
>> ನೋಡಿಕೊಳ್ಳಲು ಈ ಕ್ರಮ ಅನಿವಾರ್ಯವೂ ಹೌದು.
>>
>> ಹಾಗೆಯೇ ತೀರಾ ಸರಳ ಪದಗಳನ್ನು (ಉದಾ: ನಿಮ್ಮ ಹೆಸರು, ಊರಿನ ಹೆಸರು, ವೆಬ್‌ಸೈಟಿನದೇ
>> ಹೆಸರು, "ಪಾಸ್‌ವರ್ಡ್" ಇತ್ಯಾದಿ) ಪಾಸ್‌ವರ್ಡ್ ಆಗಿ ಆರಿಸಿಕೊಳ್ಳುವುದೂ ಒಳ್ಳೆಯ
>> ಅಭ್ಯಾಸವಲ್ಲ. ಹ್ಯಾಕರುಗಳಷ್ಟೇ ಏಕೆ, ನಿಮ್ಮ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುವ ಯಾರು
>> ಬೇಕಾದರೂ ಇಂತಹ ಪಾಸ್‌ವರ್ಡುಗಳನ್ನು ಊಹಿಸಬಲ್ಲರು. ಪಾಸ್‌ವರ್ಡಿನ ಉದ್ದ ತೀರಾ
>> ಕಡಿಮೆಯಿದ್ದರೂ ಕಷ್ಟವೇ. ಪಾಸ್‌ವರ್ಡ್ ಉದ್ದ ಕಡಿಮೆಯಿದ್ದಷ್ಟೂ ಪಾಸ್‌ವರ್ಡ್ ಚೋರರು ಬಳಸುವ
>> ಕುತಂತ್ರಾಂಶಗಳು ಅಂತಹ ಪಾಸ್‌ವರ್ಡುಗಳನ್ನು ಸುಲಭವಾಗಿ ಊಹಿಸುವ ಸಾಧ್ಯತೆ
>> ಜಾಸ್ತಿಯಿರುತ್ತದೆ. ಪಾಸ್‌ವರ್ಡ್‌ನಲ್ಲಿ ಅಂಕಿಗಳು ಮತ್ತು ವಿಶೇಷ ಚಿಹ್ನೆಗಳನ್ನು ಬಳಸುವ
>> ಮೂಲಕ ಕಳ್ಳರ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸಬಹುದು. ಅಕ್ಷರ, ಅಂಕಿ ಹಾಗೂ ವಿಶೇಷ
>> ಚಿಹ್ನೆಗಳ ಅರ್ಥರಹಿತ ಜೋಡಣೆಯನ್ನು ಪಾಸ್‌ವರ್ಡ್‌ ಆಗಿ ಬಳಸುವುದು ಆದಷ್ಟೂ ಒಳ್ಳೆಯದು.
>>
>> ಗ್ರಾಹಕರು ಪಾಸ್‌ವರ್ಡ್ ಚೋರರಿಂದ ಪಾರಾಗುವಲ್ಲಿ ವೆಬ್‌ಸೈಟುಗಳೂ ನೆರವಾಗಬೇಕಲ್ಲ, ಹಾಗಾಗಿ
>> ಅವು ಆಗಿಂದಾಗ್ಗೆ ಹೊಸ ಸುರಕ್ಷತಾ ಕ್ರಮಗಳನ್ನು ಪರಿಚಯಿಸುತ್ತಿರುತ್ತವೆ. ಇಂತಹ
>> ಕ್ರಮಗಳಲ್ಲೊಂದು, ಎರಡು ಹಂತದ ಸುರಕ್ಷತಾ ವ್ಯವಸ್ಥೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು
>> ನೆನಪಿಟ್ಟುಕೊಂಡಿರುವ ಜಾಲತಾಣಗಳು ನಿಮ್ಮ ಖಾತೆಯಲ್ಲಿ ಯಾವುದೇ ಸಂಶಯಾಸ್ಪದ ಚಟುವಟಿಕೆ
>> ಕಂಡುಬಂದರೂ ನಿಮಗೊಂದು ಎಸ್ಸೆಮ್ಮೆಸ್ ಕಳುಹಿಸುತ್ತವೆ. ನಿನ್ನೆಯವರೆಗೂ ನೀವು ನಾಗರಭಾವಿಯಿಂದ
>> ಲಾಗಿನ್ ಆಗುತ್ತಿದ್ದ ಖಾತೆಗೆ ಇದ್ದಕ್ಕಿದ್ದಂತೆ ಯಾರೋ ನೈಜೀರಿಯಾದಿಂದ ಲಾಗಿನ್ ಆಗುತ್ತಾರೆ
>> ಎಂದಿಟ್ಟುಕೊಳ್ಳಿ; ಅಂತಹ ಸಂದರ್ಭಗಳಲ್ಲಿ ಅದು ನಿಜಕ್ಕೂ ನೀವೋ ಅಲ್ಲವೋ ಎಂದು
>> ತಿಳಿದುಕೊಳ್ಳಲು ಆ ಜಾಲತಾಣ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸುತ್ತದೆ.
>> ಅಷ್ಟೇ ಅಲ್ಲ, ಆ ಎಸ್ಸೆಮ್ಮೆಸ್ಸಿನಲ್ಲಿರುವ ಗುಪ್ತ ಸಂಕೇತವನ್ನು ವೆಬ್‌ಸೈಟಿನಲ್ಲಿ
>> ದಾಖಲಿಸುವವರೆಗೂ ಲಾಗಿನ್ ಪ್ರಯತ್ನವನ್ನು ಮುಂದುವರೆಯಲು ಬಿಡುವುದಿಲ್ಲ. ಈ ವ್ಯವಸ್ಥೆಯನ್ನು
>> ನೂರಕ್ಕೆ ನೂರರಷ್ಟು ಸುರಕ್ಷಿತವೆಂದು ಕರೆಯಲಾಗುವುದಿಲ್ಲವಾದರೂ ಇದು ತಕ್ಕಮಟ್ಟಿಗೆ
>> ಪರಿಣಾಮಕಾರಿ ಎನ್ನುವುದಂತೂ ನಿಜ.
>>
>> ನೂರೆಂಟು ತಾಣಗಳಿಗೆ ನೂರೆಂಟು ಪಾಸ್‌ವರ್ಡುಗಳಿರುವಾಗ ಅವಷ್ಟನ್ನೂ ಮರೆಯದೆಯೇ
>> ನೆನಪಿಟ್ಟುಕೊಂಡಿರುತ್ತೇವೆ ಎನ್ನುವಂತಿಲ್ಲ. ನಿನ್ನೆಯಷ್ಟೇ ಬದಲಿಸಿದ ಪಾಸ್‌ವರ್ಡನ್ನು
>> ನೆನಪಿಟ್ಟುಕೊಳ್ಳುವ ಮೊದಲೇ ಮರೆತುಬಿಡುವ ಸಾಧ್ಯತೆಯೂ ಇದೆಯಲ್ಲ! ಹಾಗೆಯೇ ಬಹುಸಮಯದಿಂದ ಬಳಸದ
>> ತಾಣದ ಪಾಸ್‌ವರ್ಡೂ ನಮ್ಮ ನೆನಪಿನಲ್ಲಿ ಉಳಿಯುವುದು ಕಷ್ಟ. ಪಾಸ್‌ವರ್ಡು ಮರೆತುಹೋಗುತ್ತದೆ
>> ಎಂದು ಅದನ್ನು ಒಂದುಕಡೆ ಬರೆದಿಟ್ಟುಬಿಟ್ಟರೆ ಬರೆದಿಟ್ಟದ್ದು ಕಳೆಯುವ ಭಯ ಬೇರೆ. ಇದೆಲ್ಲ
>> ಗೊಂದಲದಲ್ಲಿ ಪಾಸ್‌ವರ್ಡುಗಳನ್ನು ಮರೆಯುವುದು ತೀರಾ ಸಾಮಾನ್ಯವಾದ್ದರಿಂದಲೇ ಮರೆತ
>> ಪಾಸ್‌ವರ್ಡನ್ನು ನೆನಪಿಸುವ ಸೌಲಭ್ಯ ಬಹುತೇಕ ಎಲ್ಲ ತಾಣಗಳಲ್ಲೂ ಇರುತ್ತದೆ.
>>
>> ಹೀಗೆ ಮರೆತ ಪಾಸ್‌ವರ್ಡನ್ನು ನೆನಪಿಸಬೇಕೆಂದರೆ ನಾವು ಮೊದಲೇ ನಿರ್ಧರಿಸಿದ ಸುರಕ್ಷತಾ
>> ಪ್ರಶ್ನೆಗೆ ಉತ್ತರಿಸಬೇಕಾದ್ದು ಅಗತ್ಯ. ಇಂತಹ ಪ್ರಶ್ನೆಗಳು ನಾನು ಓದಿದ ಮೊದಲ ಶಾಲೆ,
>> ನನ್ನಮ್ಮನ ಹೆಸರು, ನಾನು ಕೊಂಡ ಮೊದಲ ಕಾರು - ಹೀಗೆಲ್ಲ ಇರುವುದು ಸಾಮಾನ್ಯ. ಆದರೆ ಮೊದಲಿಗೆ
>> ನಮ್ಮ ಉತ್ತರವನ್ನು ಉಳಿಸಿಡುವಾಗ ಇಂತಹ ಪ್ರಶ್ನೆಗಳಿಗೆ ನೇರ ಉತ್ತರ ಕೊಡದಿರುವುದು
>> ಒಳ್ಳೆಯದು. ನಾನು ಓದಿದ್ದು ಇಂತಹ ಊರಿನ ಇಂತಹ ಶಾಲೆಯಲ್ಲಿ ಎನ್ನುವಂತಹ ವಿಷಯಗಳನ್ನೆಲ್ಲ
>> ನಾವೇ ಫೇಸ್‌ಬುಕ್-ಲಿಂಕ್ಡ್‌ಇನ್ ಇತ್ಯಾದಿಗಳಲ್ಲಿ ಹಾಕಿಟ್ಟುಬಿಟ್ಟಿರುತ್ತೇವಲ್ಲ, ಹಾಗಾಗಿ
>> ಇಂತಹ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೆ ಕೊಂಚ ವಿಚಿತ್ರವಾದ ಉತ್ತರಗಳನ್ನೇ
>> ದಾಖಲಿಸಿಡುವುದು ಒಳಿತು.
>>
>> ಇನ್ನು ಕೆಲ ತಾಣಗಳಲ್ಲಿ ಪಾಸ್‌ವರ್ಡ್ ಮರೆತಿದೆ ಎಂದಾಗ ಪಾಸ್‌ವರ್ಡನ್ನು ನಮ್ಮ ಇಮೇಲ್
>> ವಿಳಾಸಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಇರುತ್ತದೆ. ಸಾಧ್ಯವಾದರೆ ಹೀಗೆ ಪಾಸ್‌ವರ್ಡುಗಳನ್ನು
>> ಪಡೆದುಕೊಳ್ಳಲೆಂದೇ ಪ್ರತ್ಯೇಕವಾದ ಇಮೇಲ್ ವಿಳಾಸವನ್ನು ಬಳಸುವುದು ಒಳ್ಳೆಯದು. ನಮ್ಮ
>> ದಿನನಿತ್ಯದ ಬಳಕೆಯ ಇಮೇಲ್ ವಿಳಾಸವನ್ನೇ ಇದಕ್ಕೂ ಬಳಸುವುದಾದರೆ ಆ ಇಮೇಲ್ ಖಾತೆ ಹ್ಯಾಕ್ ಆದ
>> ಸಂದರ್ಭದಲ್ಲಿ ನಮ್ಮ ಇತರ ಖಾತೆಗಳ ಸುರಕ್ಷತೆಗೂ ತೊಂದರೆಯಾಗುತ್ತದೆ.
>>
>> ಅದೆಲ್ಲ ಸರಿ, ಆದರೆ ನಮ್ಮ ಪಾಸ್‌ವರ್ಡ್ ಕದಿಯಲು ಪ್ರಯತ್ನಿಸುವವರಾದರೂ ಯಾರು? ಈ
>> ಪ್ರಶ್ನೆಗೆ ಉತ್ತರ ಏನು ಬೇಕಾದರೂ ಇರಬಹುದು. ತಮ್ಮ ತಾಂತ್ರಿಕ ನೈಪುಣ್ಯವನ್ನು
>> ಪರೀಕ್ಷಿಸಿಕೊಳ್ಳುವ ಜೋಶ್‌ನಲ್ಲಿರುವ ಕಿರಿಯರಾಗಲಿ, ಪಾಸ್‌ವರ್ಡ್ ಕದ್ದು
>> ದುಡ್ಡುಮಾಡಿಕೊಳ್ಳಬೇಕು ಎಂಬ ಏಕೈಕ ಉದ್ದೇಶವಿರುವ ದುಷ್ಟರಾಗಲಿ - ಪಾಸ್‌ವರ್ಡ್ ಕದಿಯುವವರು
>> ಯಾರೇ ಆದರೂ ನಮಗೆ ನಷ್ಟವಾಗುವುದಂತೂ ಗ್ಯಾರಂಟಿ. ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್
>> ಪಾಸ್‌ವರ್ಡು ಕಳುವಾದರೆ ಹಣಕಾಸಿನ ರೂಪದ ನಷ್ಟವಾಗುತ್ತದೆ ಎನ್ನುವುದು ನಮಗೆ ಈಗಾಗಲೇ
>> ಗೊತ್ತು. ಆದರೆ ಇಮೇಲ್ ಖಾತೆಯ ಪಾಸ್‌ವರ್ಡ್ ಕಳುವಾದರೂ ಹಣಕಾಸಿನ ನಷ್ಟವಾಗಬಹುದು! ನಿಮ್ಮ
>> ಇಮೇಲ್ ಪಾಸ್‌ವರ್ಡ್ ಕದ್ದವರು ನಾನು ಬೇರೆ ಊರಿಗೆ ಬಂದಿದ್ದೇನೆ, ನನ್ನ ಪರ್ಸು
>> ಕಳ್ಳತನವಾಗಿಬಿಟ್ಟಿದೆ, ಅರ್ಜೆಂಟಾಗಿ ನನಗೊಂದಷ್ಟು ಹಣ ಕಳಿಸು ಎಂದು ನಿಮ್ಮ ಮಿತ್ರರಿಗೆಲ್ಲ
>> ಮೆಸೇಜು ಕಳಿಸಿ ಅವರ ಖಾತೆಗೆ ಹಣ ತರಿಸಿಕೊಳ್ಳುವುದು ಅಂತಹ ಕಷ್ಟವೇನೂ ಆಗಲಾರದು ಅಲ್ಲವೆ?
>>
>> ಇದೆಲ್ಲ ಅಂಶಗಳನ್ನು ಗಮನಿಸಿದಾಗ ಪಾಸ್‌ವರ್ಡುಗಳು ಸಂಪೂರ್ಣ ಸುರಕ್ಷಿತವೇನಲ್ಲ ಎಂದೇ
>> ಹೇಳಬೇಕಾಗುತ್ತದೆ. ಹೀಗಿದ್ದರೂ ಪಾಸ್‌ವರ್ಡುಗಳ ಬದಲಿಗೆ ವಿಶ್ವಸನೀಯ ಪರ್ಯಾಯವನ್ನು
>> ರೂಪಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಪ್ರತಿಯೊಂದು ಬಳಕೆಗೂ ಹೊಸದೊಂದು ಪಾಸ್‌ವರ್ಡ್
>> ನೀಡುವ ಓಟಿಪಿ (ಒನ್ ಟೈಮ್ ಪಾಸ್‌ವರ್ಡ್) ವ್ಯವಸ್ಥೆ ಸದ್ಯಕ್ಕೆ ಹಣಕಾಸು ವ್ಯವಹಾರಗಳಿಗಷ್ಟೆ
>> ಸೀಮಿತವಾಗಿದೆ. ಸೆಕ್ಯೂರ್ ಐಡಿ, ಬಯೋಮೆಟ್ರಿಕ್ಸ್ ಇತ್ಯಾದಿಗಳೆಲ್ಲ ಅಲ್ಲಲ್ಲಿ
>> ಬಳಕೆಯಾಗುತ್ತಿದ್ದರೂ ಅವು ಇನ್ನೂ ಪಾಸ್‌ವರ್ಡುಗಳ ಸ್ಥಳವನ್ನು ತುಂಬುವ ಮಟ್ಟಕ್ಕೆ
>> ಬೆಳೆದಿಲ್ಲ. ಹಾಗಾಗಿ ಸದ್ಯದ ಮಟ್ಟಿಗಂತೂ ನಾವು ನಮ್ಮ ಪಾಸ್‌ವರ್ಡುಗಳನ್ನು ಸುರಕ್ಷಿತವಾಗಿ
>> ಕಾಪಾಡಿಕೊಳ್ಳುವುದು ಖಂಡಿತಾ ಅನಿವಾರ್ಯ!
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to