Sir yaradru cce Siddhartha 8 ,9,10 year plan kaluhisi ....... Good evening... On 15-May-2016 4:35 pm, "veerendra patil" <[email protected]> wrote:
> Nice information about password, thank u sir > On 14 May 2016 7:11 pm, "mahadevaswamy nagappa" <[email protected]> > wrote: > >> Nice article about password sir. >> >> Thanks for sharing this article. >> On May 12, 2016 8:38 PM, "HAREESHKUMAR K Agasanapura" < >> [email protected]> wrote: >> >>> >>> http://googleweblight.com/?lite_url=http://www.ejnana.com/2016/05/password.html%3Fm%3D1&lc=en-IN&s=1&m=534&host=www.google.co.in&ts=1463065227&sig=APY536wEqqONUFWwsmefTJ7x3mRqrFvOSg >>> *ವಿಶ್ವ ಪಾಸ್‌ವರ್ಡ್ ದಿನ ವಿಶೇಷ: ನಿಮ್ಮ ಪಾಸ್‌ವರ್ಡ್ ಜೋಪಾನ!* >>> >>> ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ >>> ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ >>> ಮೂಡಿಸಲು ಪಾಸ್‌ವರ್ಡ್ ಬೇಕೇಬೇಕು. ವಿಶ್ವ ಪಾಸ್‌ವರ್ಡ್ ದಿನದಂದು (ಮೇ ೫) ಈ ಲೇಖನವನ್ನು >>> ಮರುಪ್ರಕಟಿಸುವ ಮೂಲಕ ನಾವು ಪಾಸ್‌ವರ್ಡ್ ಮಹತ್ವವನ್ನು ತಿಳಿಸುವ ಪ್ರಯತ್ನ >>> ಮಾಡುತ್ತಿದ್ದೇವೆ.. >>> >>> >>> *ಟಿ. ಜಿ. ಶ್ರೀನಿಧಿ* >>> >>> >>> <https://googleweblight.com/?lite_url=https://2.bp.blogspot.com/-wqwJhWkXiBo/VytYfH9DFKI/AAAAAAAAemY/RJxgR8XD_l49Kjhk_TE5rF5ohB_13ig0wCLcB/s1600/WPD16-GIF-Passwords102.gif&lc=en-IN&s=1&m=534&host=www.google.co.in&ts=1463065552&sig=APY536zTeafpCcD7M7sgrAkWzE8kwMQ5mQ> >>> >>> ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ >>> ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ >>> ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ >>> ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ >>> ರೂಪಿಸಿಕೊಂಡಿರುತ್ತಾರೆ. >>> >>> ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ >>> ಗುಪ್ತಸಂಕೇತವನ್ನು ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು >>> ಶುರುಮಾಡಿದಳು! >>> >>> ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು. >>> ಆದರೆ ಅಂತರಜಾಲದ ಪ್ರಪಂಚದಲ್ಲಿ ಈ ಕತೆಯಲ್ಲಿ ನಡೆದಂತಹ ಸನ್ನಿವೇಶಗಳು ಈಗ ತೀರಾ >>> ಸಾಮಾನ್ಯವಾಗಿಬಿಟ್ಟಿವೆ. ಕತೆಯ ಆಲಿಬಾಬ ಕಳ್ಳರಿಂದ ಕದ್ದರೆ ಅಂತರಜಾಲದ ಖದೀಮರು >>> ಸಿಕ್ಕಸಿಕ್ಕವರನ್ನೆಲ್ಲ ದೋಚಲು ಹೊರಟಿದ್ದಾರೆ. >>> >>> ಇಂತಹ ಪರಿಸ್ಥಿತಿಯನ್ನು ತಂದಿಟ್ಟಿರುವುದು ಕೇವಲ ಒಂದು ಪದ ಎಂದರೆ ನಮಗೆ ಆಶ್ಚರ್ಯವೇನೂ >>> ಆಗಲಿಕ್ಕಿಲ್ಲ. ಏಕೆಂದರೆ ಜಾಲಜಗತ್ತಿನ ಅದೆಷ್ಟೋ ಬಾಗಿಲುಗಳನ್ನು ತೆರೆಯುವ ಪಾಸ್‌ವರ್ಡ್ ಎಂಬ >>> ಶಕ್ತಿಶಾಲಿ ಶಬ್ದ ಆಲಿಬಾಬ ಕತೆಯ ಸೇಸಮ್ಮನಂತೆಯೇ ತಾನೆ! >>> >>> ನಿಜ, ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು >>> ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ >>> ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು. >>> >>> ಕಂಪ್ಯೂಟರ್ ಪ್ರಪಂಚಕ್ಕೆ ಪಾಸ್‌ವರ್ಡುಗಳು ಪಾದಾರ್ಪಣೆ ಮಾಡಿದ್ದು ಸುಮಾರು ೧೯೬೦ರ >>> ಆಸುಪಾಸಿನಲ್ಲಿ. >>> ಕಂಪ್ಯೂಟರುಗಳ ಬಳಕೆ ಬಹಳ ಕಡಿಮೆಯಿದ್ದ ಆ ಕಾಲದಲ್ಲಿ ಪಾಸ್‌ವರ್ಡ್ ಸುರಕ್ಷತೆ ಅಂತಹ >>> ದೊಡ್ಡ ಸವಾಲೇನೂ ಆಗಿರಲಿಲ್ಲ ಅನಿಸುತ್ತದೆ. ಆ ಕಾಲದಲ್ಲಿ ಅಕಸ್ಮಾತ್ತಾಗಿ ಯಾವುದಾದರೂ >>> ಪಾಸ್‌ವರ್ಡ್ ಕಳುವಾದರೂ ಅದರಿಂದಾಗುವ ಹಾನಿ ಸೀಮಿತ ಪ್ರಮಾಣದ್ದಷ್ಟೆ ಆಗಿತ್ತು. >>> >>> ಹಾಗಾಗಿ ಕಂಪ್ಯೂಟರ್ ಸುರಕ್ಷತೆಯಲ್ಲಿ ಪಾಸ್‌ವರ್ಡ್‌ಗಳನ್ನು ಬಳಸುವ ಅಭ್ಯಾಸವೇ >>> ವ್ಯಾಪಕವಾಗಿ ಮುಂದುವರೆಯಿತು. ಮೇಜಿನ ಮೇಲಿನ ಕಂಪ್ಯೂಟರ್ ಬಳಸುವುದರಿಂದ ಪ್ರಾರಂಭಿಸಿ >>> ಇಂಟರ್‌ನೆಟ್ ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ >>> ಇತ್ಯಾದಿಗಳವರೆಗೆ ಎಲ್ಲೆಲ್ಲೂ ಪಾಸ್‌ವರ್ಡ್‌ಗಳದೇ ರಾಜ್ಯಭಾರವಾಯಿತು. >>> >>> ಮುಂದಿನ ವರ್ಷಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಿದಂತೆ ಅದರ ಮೇಲೆ ನಮ್ಮ ಅವಲಂಬನೆ >>> ಜಾಸ್ತಿಯಾಯಿತು; ಅವಲಂಬನೆ ಜಾಸ್ತಿಯಾದಂತೆ ಬಾಹ್ಯ ಪ್ರಪಂಚದ ನಮ್ಮ ಬದುಕಿಗೆ ಸಂಬಂಧಪಟ್ಟ >>> ಅದೆಷ್ಟೋ ವಿಷಯಗಳು ಕಂಪ್ಯೂಟರ್ ಪ್ರಪಂಚವನ್ನೂ ಸೇರಿಕೊಂಡವು. ಇದೆಲ್ಲದರ ಸುರಕ್ಷತೆಗೂ >>> ಪಾಸ್‌ವರ್ಡ್ ಒಂದೇ ಅಸ್ತ್ರವಾಗಿ ಮುಂದುವರೆಯಿತು; ಪಾಸ್‌ವರ್ಡ್ ಕಳುವಾದರೆ ಆಗಬಹುದಾದ ನಷ್ಟ >>> ಭಾರೀ ಪ್ರಮಾಣಕ್ಕೆ ಏರಿತು! >>> >>> ನಿಜ, ಒಮ್ಮೆ ಯೋಚಿಸಿ ನೋಡಿದರೆ ಕೇವಲ ಒಂದು ಪಾಸ್‌ವರ್ಡ್ ಮೇಲೆ ಅದೆಷ್ಟು ಮಹತ್ವದ >>> ಸಂಗತಿಗಳು ಅವಲಂಬಿತವಾಗಿರುತ್ತವೆ ಎನ್ನುವುದು ಗೊತ್ತಾಗುತ್ತದೆ. ನಮ್ಮ ಹಣಕಾಸಿನ ಪರಿಸ್ಥಿತಿ >>> ಬ್ಯಾಂಕ್ ಖಾತೆಯ ಆ ಒಂದು ಪಾಸ್‌ವರ್ಡನ್ನೇ ನೆಚ್ಚಿಕೊಂಡಿರುತ್ತದೆ. ಇಮೇಲ್ ಖಾತೆಯ >>> ಪಾಸ್‌ವರ್ಡ್ ಕಳ್ಳರ ಪಾಲಾದರೆ ನಮ್ಮ ಅದೆಷ್ಟೋ ಖಾಸಗಿ ಮಾಹಿತಿ ಸೋರಿಹೋಗುತ್ತದೆ; ಅಷ್ಟೇ >>> ಅಲ್ಲ, ಅದನ್ನು ಬಳಸಿಕೊಂಡವರು ನಮ್ಮನ್ನು, ನಮ್ಮ ಆಪ್ತರನ್ನು ವಂಚಿಸುವ ಸಾಧ್ಯತೆಯೂ >>> ಇರುತ್ತದೆ. ಇನ್ನು ಬದುಕಿನ ಘಟನೆಗಳನ್ನೆಲ್ಲ ದಾಖಲಿಸಿಟ್ಟುಕೊಳ್ಳುವ, ಪ್ರಪಂಚದೊಡನೆ >>> ಸ್ನೇಹಬೆಳೆಸುವ ಸಮಾಜ ಜಾಲಗಳ ಪಾಸ್‌ವರ್ಡ್ ಕೈಜಾರಿದರಂತೂ ಮರ್ಯಾದೆಯೇ ಮಣ್ಣುಪಾಲಾಗುವ >>> ಸನ್ನಿವೇಶ. >>> >>> ನಮ್ಮ ಪಾಸ್‌ವರ್ಡ್ ದುರ್ಬಳಕೆಯಾಗುವುದಾದರೂ ಹೇಗೆ ಎಂದು ನೋಡಲು ಹೊರಟರೆ ಅದಕ್ಕೆ ಅನೇಕ >>> ಕಾರಣಗಳು ಕಾಣಸಿಗುತ್ತವೆ. ಬಹುಶಃ ಸರಿಯಾದ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿಕೊಳ್ಳದ ನಮ್ಮ >>> ಸೋಮಾರಿತನ ಅಥವಾ ಉದಾಸೀನವನ್ನೇ ಇದರ ಮೊದಲ ಕಾರಣವೆಂದು ಕರೆಯಬಹುದೇನೋ. 'ಪಾಸ್‌ವರ್ಡ್', >>> '೧೨೩೪೫' ಮುಂತಾದ ಅತ್ಯಂತ ದುರ್ಬಲ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ನಮ್ಮ >>> ಮಾಹಿತಿಯ ಸುರಕ್ಷತೆಗೆ ನಾವೇ ಧಕ್ಕೆತರುತ್ತೇವೆ. ಯಾರದರೂ ನಮ್ಮ ಖಾತೆಯೊಳಕ್ಕೆ >>> ನುಸುಳಬೇಕೆಂದು ಪ್ರಯತ್ನಿಸಿದರೆ ಅವರು ಇಂತಹ ಪಾಸ್‌ವರ್ಡುಗಳನ್ನು ಬಹಳ ಸುಲಭವಾಗಿ >>> ಭೇದಿಸುತ್ತಾರೆ. >>> >>> ಇನ್ನೊಂದು ಕಾರಣ - ನಮ್ಮಲ್ಲಿ ಪರಿಣತ ಬಳಕೆದಾರರೆಂದುಕೊಂಡವರೂ ಮಾಡುವ ತಪ್ಪು - ಒಂದೇ >>> ಪಾಸ್‌ವರ್ಡನ್ನು ಹಲವಾರು ಕಡೆ ಬಳಸುವುದು. ಇಂತಹ ಸನ್ನಿವೇಶಗಳಲ್ಲಿ ಯಾವುದೇ ಒಂದು ಖಾತೆಯ >>> ಪಾಸ್‌ವರ್ಡ್ ಕಳ್ಳತನವಾದರೂ ಇತರ ಎಲ್ಲ ಖಾತೆಗಳ ಸುರಕ್ಷತೆಗೂ ಧಕ್ಕೆಯಾಗುವುದು ಗ್ಯಾರಂಟಿ! >>> >>> ನಮ್ಮ ಯಾವುದೇ ಖಾತೆಯ ಪಾಸ್‌ವರ್ಡ್ ಕಳುವಾಗದಂತೆ ನಾವು ಎಚ್ಚರವಹಿಸುತ್ತೇವೆ ಎಂದು >>> ಜಂಬಕೊಚ್ಚಿಕೊಳ್ಳುವಂತೆಯೂ ಇಲ್ಲ. ನಾವು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ >>> ಅಂತಲೇ ಅಂದುಕೊಳ್ಳೋಣ; ಆದರೆ ನಾವು ಬಳಸುವ ಜಾಲತಾಣದ ಮೇಲೆ ದುಷ್ಕರ್ಮಿಗಳ ಒಂದೇ ಒಂದು ದಾಳಿ >>> ಯಶಸ್ವಿಯಾದರೆ ನಮ್ಮ ಪಾಸ್‌ವರ್ಡುಗಳೆಲ್ಲ ಬೀದಿಗೆ ಬಂದಂತೆಯೇ ಲೆಕ್ಕ! >>> >>> ಇನ್ನು ಹಲವಾರು ತಾಣಗಳಲ್ಲಿ ಪಾಸ್‌ವರ್ಡ್ ಸುರಕ್ಷತೆಗೆ ಒಂದಷ್ಟು ವಿಶೇಷ ಕ್ರಮಗಳನ್ನು >>> ಕೈಗೊಂಡಿರುತ್ತಾರೆ. ಆದರೆ ಮರೆತ ಪಾಸ್‌ವರ್ಡುಗಳನ್ನು ಮತ್ತೆ ನೆನಪಿಸಲು ಅವರು ಒದಗಿಸುವ >>> ಸೌಲಭ್ಯಗಳು ಈ ವಿಶೇಷ ಕ್ರಮಗಳನ್ನೆಲ್ಲ ಒಂದೇ ಬಾರಿಗೆ ನಿರರ್ಥಕಗೊಳಿಸುವ ಆತಂಕವೂ ಇರುತ್ತದೆ. >>> ಗ್ರಾಹಕ ಸೇವಾ ವಿಭಾಗಕ್ಕೆ ಕರೆಮಾಡಿ ಪಾಸ್‌ವರ್ಡ್ ತಿಳಿದುಕೊಳ್ಳುವ ಸೌಲಭ್ಯವಂತೂ ಈ >>> ಅರ್ಥದಲ್ಲಿ ಬಹಳ ಅಪಾಯಕಾರಿ. ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಅಮ್ಮನ ಹೆಸರು, ಜನ್ಮದಿನ >>> ಮುಂತಾದ ಸುಲಭ ಪ್ರಶ್ನೆಗಳಿಗೆ ಉತ್ತರಿಸಿದ ಯಾರು ಬೇಕಾದರೂ ನಿಮ್ಮ ಪಾಸ್‌ವರ್ಡ್ >>> ತಿಳಿದುಕೊಂಡುಬಿಡುವ ಅಪಾಯ ಇಲ್ಲಿರುತ್ತದೆ. >>> >>> ಇನ್ನು ಫಿಶಿಂಗ್ ಬಗ್ಗೆಯಂತೂ ಹೇಳುವುದೇ ಬೇಡ. ಬ್ಯಾಂಕಿನ ಹೆಸರಿನಲ್ಲಿ, ಇಮೇಲ್ ಸೇವೆ >>> ಒದಗಿಸುವ ಸಂಸ್ಥೆಯ ಹೆಸರಿನಲ್ಲಿ, ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ - ಹೀಗೆ ಯಾವುದೋ >>> ನೆಪದಲ್ಲಿ ಬರುವ ನಕಲಿ ಸಂದೇಶಗಳು ಬಳಕೆದಾರರನ್ನು ಮೋಸಗೊಳಿಸಿ ಅವರ ಮಾಹಿತಿಯನ್ನು ಕದಿಯಲು >>> ಸದಾ ತುದಿಗಾಲಿನಲ್ಲೇ ಇರುತ್ತವೆ. ಸ್ಪೈವೇರ್‌ನಂತಹ ಕುತಂತ್ರಾಂಶಗಳೂ ನಮ್ಮ ಖಾಸಗಿ >>> ಮಾಹಿತಿಯನ್ನು ಕದಿಯಬಲ್ಲವು. >>> >>> ಒಟ್ಟಾರೆಯಾಗಿ, ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ >>> ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ >>> ಕೀಲಿಕೈ ಎಂದೇ ಕರೆಯಬಹುದು. ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ >>> ಕಳೆದುಹೋದರೆ ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ >>> ಪ್ರಪಂಚದಲ್ಲಿರುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು >>> ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ. >>> >>> ಹಾಗಾದರೆ ಕಂಪ್ಯೂಟರ್ ಪ್ರಪಂಚದಲ್ಲಿ ನಮ್ಮ ಸುರಕ್ಷತೆಗಾಗಿ ಪಾಸ್‌ವರ್ಡುಗಳನ್ನು >>> ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ >>> ನಾವು ಅನುಸರಿಸಬೇಕಾದ ಕ್ರಮಗಳೇನು? >>> >>> ಬೇರೆ ಯಾರೂ ಭೇದಿಸಲು ಸಾಧ್ಯವಾಗದಂತಹ ಪಾಸ್‌ವರ್ಡ್ ಆಯ್ದುಕೊಂಡುಬಿಟ್ಟರೆ ಸಮಸ್ಯೆಯೇ >>> ಇರುವುದಿಲ್ಲ, ನಿಜ. ಆದರೆ ಅಂತಹುದೊಂದು ಪಾಸ್‌ವರ್ಡನ್ನು ಎಲ್ಲಿಂದ ತರೋಣ? ಹಾಗಾಗಿಯೇ ನಾವು >>> ಅಭೇದ್ಯ ಪಾಸ್‌ವರ್ಡ್ ಹುಡುಕುವ ಯೋಚನೆಯನ್ನೆಲ್ಲ ಕೈಬಿಟ್ಟು ಇದ್ದುದರಲ್ಲೇ ಸುರಕ್ಷಿತವಾದ >>> ಮಾರ್ಗವನ್ನು ಅರಸಬೇಕು. >>> >>> ಯಾವ ಕಾರಣಕ್ಕೂ ಪಾಸ್‌ವರ್ಡ್‌ಗಳ ಮರುಬಳಕೆ ಮಾಡದಿರುವುದು ಈ ನಿಟ್ಟಿನಲ್ಲಿ ನಾವು >>> ಪಾಲಿಸಬೇಕಾದ ಮೊದಲ ನಿಯಮ. ಬೇರೆಬೇರೆ ಬೀಗಗಳಿಗೆ ಬೇರೆಬೇರೆ ಕೀಲಿಕೈಗಳಿರುವಂತೆಯೇ ಬೇರೆಬೇರೆ >>> ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳೇ ಇರಬೇಕು. ಮರುಬಳಕೆ ಮಾಡಿಯೇ ತೀರುತ್ತೇವೆ >>> ಎನ್ನುವವರು ಕನಿಷ್ಟಪಕ್ಷ ಇಮೇಲ್, ನೆಟ್‌ಬ್ಯಾಂಕಿಂಗ್, ಸೋಶಿಯಲ್ ನೆಟ್‌ವರ್ಕ್ >>> ತಾಣಗಳಲ್ಲಾದರೂ ಬೇರೆಬೇರೆ ಪಾಸ್‌ವರ್ಡುಗಳನ್ನು ಬಳಸುವುದು ಒಳ್ಳೆಯದು. ಒಂದೊಮ್ಮೆ ನಮ್ಮ >>> ಯಾವುದೋ ಒಂದು ಖಾತೆಯ ಪಾಸ್‌ವರ್ಡ್ ಕಳುವಾದರೂ ಇತರ ಖಾತೆಗಳು ಸುರಕ್ಷಿತವಾಗಿರುವಂತೆ >>> ನೋಡಿಕೊಳ್ಳಲು ಈ ಕ್ರಮ ಅನಿವಾರ್ಯವೂ ಹೌದು. >>> >>> ಹಾಗೆಯೇ ತೀರಾ ಸರಳ ಪದಗಳನ್ನು (ಉದಾ: ನಿಮ್ಮ ಹೆಸರು, ಊರಿನ ಹೆಸರು, ವೆಬ್‌ಸೈಟಿನದೇ >>> ಹೆಸರು, "ಪಾಸ್‌ವರ್ಡ್" ಇತ್ಯಾದಿ) ಪಾಸ್‌ವರ್ಡ್ ಆಗಿ ಆರಿಸಿಕೊಳ್ಳುವುದೂ ಒಳ್ಳೆಯ >>> ಅಭ್ಯಾಸವಲ್ಲ. ಹ್ಯಾಕರುಗಳಷ್ಟೇ ಏಕೆ, ನಿಮ್ಮ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುವ ಯಾರು >>> ಬೇಕಾದರೂ ಇಂತಹ ಪಾಸ್‌ವರ್ಡುಗಳನ್ನು ಊಹಿಸಬಲ್ಲರು. ಪಾಸ್‌ವರ್ಡಿನ ಉದ್ದ ತೀರಾ >>> ಕಡಿಮೆಯಿದ್ದರೂ ಕಷ್ಟವೇ. ಪಾಸ್‌ವರ್ಡ್ ಉದ್ದ ಕಡಿಮೆಯಿದ್ದಷ್ಟೂ ಪಾಸ್‌ವರ್ಡ್ ಚೋರರು ಬಳಸುವ >>> ಕುತಂತ್ರಾಂಶಗಳು ಅಂತಹ ಪಾಸ್‌ವರ್ಡುಗಳನ್ನು ಸುಲಭವಾಗಿ ಊಹಿಸುವ ಸಾಧ್ಯತೆ >>> ಜಾಸ್ತಿಯಿರುತ್ತದೆ. ಪಾಸ್‌ವರ್ಡ್‌ನಲ್ಲಿ ಅಂಕಿಗಳು ಮತ್ತು ವಿಶೇಷ ಚಿಹ್ನೆಗಳನ್ನು ಬಳಸುವ >>> ಮೂಲಕ ಕಳ್ಳರ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸಬಹುದು. ಅಕ್ಷರ, ಅಂಕಿ ಹಾಗೂ ವಿಶೇಷ >>> ಚಿಹ್ನೆಗಳ ಅರ್ಥರಹಿತ ಜೋಡಣೆಯನ್ನು ಪಾಸ್‌ವರ್ಡ್ ಆಗಿ ಬಳಸುವುದು ಆದಷ್ಟೂ ಒಳ್ಳೆಯದು. >>> >>> ಗ್ರಾಹಕರು ಪಾಸ್‌ವರ್ಡ್ ಚೋರರಿಂದ ಪಾರಾಗುವಲ್ಲಿ ವೆಬ್‌ಸೈಟುಗಳೂ ನೆರವಾಗಬೇಕಲ್ಲ, >>> ಹಾಗಾಗಿ ಅವು ಆಗಿಂದಾಗ್ಗೆ ಹೊಸ ಸುರಕ್ಷತಾ ಕ್ರಮಗಳನ್ನು ಪರಿಚಯಿಸುತ್ತಿರುತ್ತವೆ. ಇಂತಹ >>> ಕ್ರಮಗಳಲ್ಲೊಂದು, ಎರಡು ಹಂತದ ಸುರಕ್ಷತಾ ವ್ಯವಸ್ಥೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು >>> ನೆನಪಿಟ್ಟುಕೊಂಡಿರುವ ಜಾಲತಾಣಗಳು ನಿಮ್ಮ ಖಾತೆಯಲ್ಲಿ ಯಾವುದೇ ಸಂಶಯಾಸ್ಪದ ಚಟುವಟಿಕೆ >>> ಕಂಡುಬಂದರೂ ನಿಮಗೊಂದು ಎಸ್ಸೆಮ್ಮೆಸ್ ಕಳುಹಿಸುತ್ತವೆ. ನಿನ್ನೆಯವರೆಗೂ ನೀವು ನಾಗರಭಾವಿಯಿಂದ >>> ಲಾಗಿನ್ ಆಗುತ್ತಿದ್ದ ಖಾತೆಗೆ ಇದ್ದಕ್ಕಿದ್ದಂತೆ ಯಾರೋ ನೈಜೀರಿಯಾದಿಂದ ಲಾಗಿನ್ ಆಗುತ್ತಾರೆ >>> ಎಂದಿಟ್ಟುಕೊಳ್ಳಿ; ಅಂತಹ ಸಂದರ್ಭಗಳಲ್ಲಿ ಅದು ನಿಜಕ್ಕೂ ನೀವೋ ಅಲ್ಲವೋ ಎಂದು >>> ತಿಳಿದುಕೊಳ್ಳಲು ಆ ಜಾಲತಾಣ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸುತ್ತದೆ. >>> ಅಷ್ಟೇ ಅಲ್ಲ, ಆ ಎಸ್ಸೆಮ್ಮೆಸ್ಸಿನಲ್ಲಿರುವ ಗುಪ್ತ ಸಂಕೇತವನ್ನು ವೆಬ್‌ಸೈಟಿನಲ್ಲಿ >>> ದಾಖಲಿಸುವವರೆಗೂ ಲಾಗಿನ್ ಪ್ರಯತ್ನವನ್ನು ಮುಂದುವರೆಯಲು ಬಿಡುವುದಿಲ್ಲ. ಈ ವ್ಯವಸ್ಥೆಯನ್ನು >>> ನೂರಕ್ಕೆ ನೂರರಷ್ಟು ಸುರಕ್ಷಿತವೆಂದು ಕರೆಯಲಾಗುವುದಿಲ್ಲವಾದರೂ ಇದು ತಕ್ಕಮಟ್ಟಿಗೆ >>> ಪರಿಣಾಮಕಾರಿ ಎನ್ನುವುದಂತೂ ನಿಜ. >>> >>> ನೂರೆಂಟು ತಾಣಗಳಿಗೆ ನೂರೆಂಟು ಪಾಸ್‌ವರ್ಡುಗಳಿರುವಾಗ ಅವಷ್ಟನ್ನೂ ಮರೆಯದೆಯೇ >>> ನೆನಪಿಟ್ಟುಕೊಂಡಿರುತ್ತೇವೆ ಎನ್ನುವಂತಿಲ್ಲ. ನಿನ್ನೆಯಷ್ಟೇ ಬದಲಿಸಿದ ಪಾಸ್‌ವರ್ಡನ್ನು >>> ನೆನಪಿಟ್ಟುಕೊಳ್ಳುವ ಮೊದಲೇ ಮರೆತುಬಿಡುವ ಸಾಧ್ಯತೆಯೂ ಇದೆಯಲ್ಲ! ಹಾಗೆಯೇ ಬಹುಸಮಯದಿಂದ ಬಳಸದ >>> ತಾಣದ ಪಾಸ್‌ವರ್ಡೂ ನಮ್ಮ ನೆನಪಿನಲ್ಲಿ ಉಳಿಯುವುದು ಕಷ್ಟ. ಪಾಸ್‌ವರ್ಡು ಮರೆತುಹೋಗುತ್ತದೆ >>> ಎಂದು ಅದನ್ನು ಒಂದುಕಡೆ ಬರೆದಿಟ್ಟುಬಿಟ್ಟರೆ ಬರೆದಿಟ್ಟದ್ದು ಕಳೆಯುವ ಭಯ ಬೇರೆ. ಇದೆಲ್ಲ >>> ಗೊಂದಲದಲ್ಲಿ ಪಾಸ್‌ವರ್ಡುಗಳನ್ನು ಮರೆಯುವುದು ತೀರಾ ಸಾಮಾನ್ಯವಾದ್ದರಿಂದಲೇ ಮರೆತ >>> ಪಾಸ್‌ವರ್ಡನ್ನು ನೆನಪಿಸುವ ಸೌಲಭ್ಯ ಬಹುತೇಕ ಎಲ್ಲ ತಾಣಗಳಲ್ಲೂ ಇರುತ್ತದೆ. >>> >>> ಹೀಗೆ ಮರೆತ ಪಾಸ್‌ವರ್ಡನ್ನು ನೆನಪಿಸಬೇಕೆಂದರೆ ನಾವು ಮೊದಲೇ ನಿರ್ಧರಿಸಿದ ಸುರಕ್ಷತಾ >>> ಪ್ರಶ್ನೆಗೆ ಉತ್ತರಿಸಬೇಕಾದ್ದು ಅಗತ್ಯ. ಇಂತಹ ಪ್ರಶ್ನೆಗಳು ನಾನು ಓದಿದ ಮೊದಲ ಶಾಲೆ, >>> ನನ್ನಮ್ಮನ ಹೆಸರು, ನಾನು ಕೊಂಡ ಮೊದಲ ಕಾರು - ಹೀಗೆಲ್ಲ ಇರುವುದು ಸಾಮಾನ್ಯ. ಆದರೆ ಮೊದಲಿಗೆ >>> ನಮ್ಮ ಉತ್ತರವನ್ನು ಉಳಿಸಿಡುವಾಗ ಇಂತಹ ಪ್ರಶ್ನೆಗಳಿಗೆ ನೇರ ಉತ್ತರ ಕೊಡದಿರುವುದು >>> ಒಳ್ಳೆಯದು. ನಾನು ಓದಿದ್ದು ಇಂತಹ ಊರಿನ ಇಂತಹ ಶಾಲೆಯಲ್ಲಿ ಎನ್ನುವಂತಹ ವಿಷಯಗಳನ್ನೆಲ್ಲ >>> ನಾವೇ ಫೇಸ್‌ಬುಕ್-ಲಿಂಕ್ಡ್‌ಇನ್ ಇತ್ಯಾದಿಗಳಲ್ಲಿ ಹಾಕಿಟ್ಟುಬಿಟ್ಟಿರುತ್ತೇವಲ್ಲ, ಹಾಗಾಗಿ >>> ಇಂತಹ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೆ ಕೊಂಚ ವಿಚಿತ್ರವಾದ ಉತ್ತರಗಳನ್ನೇ >>> ದಾಖಲಿಸಿಡುವುದು ಒಳಿತು. >>> >>> ಇನ್ನು ಕೆಲ ತಾಣಗಳಲ್ಲಿ ಪಾಸ್‌ವರ್ಡ್ ಮರೆತಿದೆ ಎಂದಾಗ ಪಾಸ್‌ವರ್ಡನ್ನು ನಮ್ಮ ಇಮೇಲ್ >>> ವಿಳಾಸಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಇರುತ್ತದೆ. ಸಾಧ್ಯವಾದರೆ ಹೀಗೆ ಪಾಸ್‌ವರ್ಡುಗಳನ್ನು >>> ಪಡೆದುಕೊಳ್ಳಲೆಂದೇ ಪ್ರತ್ಯೇಕವಾದ ಇಮೇಲ್ ವಿಳಾಸವನ್ನು ಬಳಸುವುದು ಒಳ್ಳೆಯದು. ನಮ್ಮ >>> ದಿನನಿತ್ಯದ ಬಳಕೆಯ ಇಮೇಲ್ ವಿಳಾಸವನ್ನೇ ಇದಕ್ಕೂ ಬಳಸುವುದಾದರೆ ಆ ಇಮೇಲ್ ಖಾತೆ ಹ್ಯಾಕ್ ಆದ >>> ಸಂದರ್ಭದಲ್ಲಿ ನಮ್ಮ ಇತರ ಖಾತೆಗಳ ಸುರಕ್ಷತೆಗೂ ತೊಂದರೆಯಾಗುತ್ತದೆ. >>> >>> ಅದೆಲ್ಲ ಸರಿ, ಆದರೆ ನಮ್ಮ ಪಾಸ್‌ವರ್ಡ್ ಕದಿಯಲು ಪ್ರಯತ್ನಿಸುವವರಾದರೂ ಯಾರು? ಈ >>> ಪ್ರಶ್ನೆಗೆ ಉತ್ತರ ಏನು ಬೇಕಾದರೂ ಇರಬಹುದು. ತಮ್ಮ ತಾಂತ್ರಿಕ ನೈಪುಣ್ಯವನ್ನು >>> ಪರೀಕ್ಷಿಸಿಕೊಳ್ಳುವ ಜೋಶ್‌ನಲ್ಲಿರುವ ಕಿರಿಯರಾಗಲಿ, ಪಾಸ್‌ವರ್ಡ್ ಕದ್ದು >>> ದುಡ್ಡುಮಾಡಿಕೊಳ್ಳಬೇಕು ಎಂಬ ಏಕೈಕ ಉದ್ದೇಶವಿರುವ ದುಷ್ಟರಾಗಲಿ - ಪಾಸ್‌ವರ್ಡ್ ಕದಿಯುವವರು >>> ಯಾರೇ ಆದರೂ ನಮಗೆ ನಷ್ಟವಾಗುವುದಂತೂ ಗ್ಯಾರಂಟಿ. ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ >>> ಪಾಸ್‌ವರ್ಡು ಕಳುವಾದರೆ ಹಣಕಾಸಿನ ರೂಪದ ನಷ್ಟವಾಗುತ್ತದೆ ಎನ್ನುವುದು ನಮಗೆ ಈಗಾಗಲೇ >>> ಗೊತ್ತು. ಆದರೆ ಇಮೇಲ್ ಖಾತೆಯ ಪಾಸ್‌ವರ್ಡ್ ಕಳುವಾದರೂ ಹಣಕಾಸಿನ ನಷ್ಟವಾಗಬಹುದು! ನಿಮ್ಮ >>> ಇಮೇಲ್ ಪಾಸ್‌ವರ್ಡ್ ಕದ್ದವರು ನಾನು ಬೇರೆ ಊರಿಗೆ ಬಂದಿದ್ದೇನೆ, ನನ್ನ ಪರ್ಸು >>> ಕಳ್ಳತನವಾಗಿಬಿಟ್ಟಿದೆ, ಅರ್ಜೆಂಟಾಗಿ ನನಗೊಂದಷ್ಟು ಹಣ ಕಳಿಸು ಎಂದು ನಿಮ್ಮ ಮಿತ್ರರಿಗೆಲ್ಲ >>> ಮೆಸೇಜು ಕಳಿಸಿ ಅವರ ಖಾತೆಗೆ ಹಣ ತರಿಸಿಕೊಳ್ಳುವುದು ಅಂತಹ ಕಷ್ಟವೇನೂ ಆಗಲಾರದು ಅಲ್ಲವೆ? >>> >>> ಇದೆಲ್ಲ ಅಂಶಗಳನ್ನು ಗಮನಿಸಿದಾಗ ಪಾಸ್‌ವರ್ಡುಗಳು ಸಂಪೂರ್ಣ ಸುರಕ್ಷಿತವೇನಲ್ಲ ಎಂದೇ >>> ಹೇಳಬೇಕಾಗುತ್ತದೆ. ಹೀಗಿದ್ದರೂ ಪಾಸ್‌ವರ್ಡುಗಳ ಬದಲಿಗೆ ವಿಶ್ವಸನೀಯ ಪರ್ಯಾಯವನ್ನು >>> ರೂಪಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಪ್ರತಿಯೊಂದು ಬಳಕೆಗೂ ಹೊಸದೊಂದು ಪಾಸ್‌ವರ್ಡ್ >>> ನೀಡುವ ಓಟಿಪಿ (ಒನ್ ಟೈಮ್ ಪಾಸ್‌ವರ್ಡ್) ವ್ಯವಸ್ಥೆ ಸದ್ಯಕ್ಕೆ ಹಣಕಾಸು ವ್ಯವಹಾರಗಳಿಗಷ್ಟೆ >>> ಸೀಮಿತವಾಗಿದೆ. ಸೆಕ್ಯೂರ್ ಐಡಿ, ಬಯೋಮೆಟ್ರಿಕ್ಸ್ ಇತ್ಯಾದಿಗಳೆಲ್ಲ ಅಲ್ಲಲ್ಲಿ >>> ಬಳಕೆಯಾಗುತ್ತಿದ್ದರೂ ಅವು ಇನ್ನೂ ಪಾಸ್‌ವರ್ಡುಗಳ ಸ್ಥಳವನ್ನು ತುಂಬುವ ಮಟ್ಟಕ್ಕೆ >>> ಬೆಳೆದಿಲ್ಲ. ಹಾಗಾಗಿ ಸದ್ಯದ ಮಟ್ಟಿಗಂತೂ ನಾವು ನಮ್ಮ ಪಾಸ್‌ವರ್ಡುಗಳನ್ನು ಸುರಕ್ಷಿತವಾಗಿ >>> ಕಾಪಾಡಿಕೊಳ್ಳುವುದು ಖಂಡಿತಾ ಅನಿವಾರ್ಯ! >>> >>> -- >>> 1. If a teacher wants to join STF, visit >>> http://karnatakaeducation.org.in/KOER/en/index.php/Become_a_STF_groups_member >>> 2. For STF training, visit KOER - >>> http://karnatakaeducation.org.in/KOER/en/index.php >>> 4. For Ubuntu 14.04 installation, visit >>> http://karnatakaeducation.org.in/KOER/en/index.php/Kalpavriksha >>> 4. For doubts on Ubuntu, public software, visit >>> http://karnatakaeducation.org.in/KOER/en/index.php/Frequently_Asked_Questions >>> 5. Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Why_public_software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/mathssciencestf. >>> For more options, visit https://groups.google.com/d/optout. >>> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
