Very nice sir F.K.Bisalahalli am, ghs,hosahulihalli ranebennur tq haveri dist mob 9740112134 On 16 Jul 2016 7:04 pm, "HAREESHKUMAR K Agasanapura" <[email protected]> wrote:
> http://m.prajavani.net/article/2016_07_14/423603 > > *ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ* > > 14 Jul, 2016 > > ನಾಗೇಶ್ ಹೆಗಡೆ > > <https://www.facebook.com/sharer/sharer.php?u=http%3A%2F%2Fgoo.gl%2FfYSdF5> > <https://twitter.com/intent/tweet?text=%E0%B2%85%E0%B2%B5%E0%B2%AE%E0%B2%BE%E0%B2%A8%2C++%E0%B2%B8%E0%B3%8D%E0%B2%B5%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86+http%3A%2F%2Fgoo.gl%2FfYSdF5> > <https://plus.google.com/share?url=http%3A%2F%2Fgoo.gl%2FfYSdF5> > <http://www.pinterest.com/pin/find/?url=http%3A%2F%2Fgoo.gl%2FfYSdF5> > <http://www.linkedin.com/shareArticle?mini=true&title=%E0%B2%85%E0%B2%B5%E0%B2%AE%E0%B2%BE%E0%B2%A8%2C++%E0%B2%B8%E0%B3%8D%E0%B2%B5%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86+&url=http%3A%2F%2Fgoo.gl%2FfYSdF5> > > ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ನಾಲ್ಕೂ ಆತ್ಮಹತ್ಯೆಗಳಲ್ಲಿ ಕಂಡುಬಂದ ಒಂದು ಸಮಾನ ಅಂಶ > ಏನು ಗೊತ್ತೆ? ಅಪಮಾನ. ಹದಿನಾಲ್ಕರ ಹರೆಯದ ಹೈಸ್ಕೂಲ್ ವಿದ್ಯಾರ್ಥಿ ರೌನಕ್ ಬ್ಯಾನರ್ಜಿ > ಶಾಲೆಯಿಂದ ಬಂದವನೇ 19ನೇ ಅಂತಸ್ತಿನ ತನ್ನ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಪ್ರಾಣ > ಕಳೆದುಕೊಂಡ. > > ‘ಕಿಲಾಡಿ ಹುಡುಗರ ಒಂದಿಡೀ ತಂಡ ಪ್ರತಿದಿನವೂ ನನ್ನನ್ನು ಛೇಡಿಸಿ ಅವಮಾನ ಮಾಡುತ್ತಿದೆ. > ನನ್ನಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥದ ಚೀಟಿಯೊಂದು ಅವನ > ಬ್ಯಾಗಿನಲ್ಲಿತ್ತು. ಇನ್ನು, ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ ಮತ್ತು ಇನ್ನೊಬ್ಬ > ಡಿವೈಎಸ್‌ಪಿ ಎಂ.ಕೆ.ಗಣಪತಿ ಕೂಡ ತಮ್ಮ ಆತ್ಮಹತ್ಯೆಗೆ ಯಾವ ಸಂದರ್ಭಗಳು ಕಾರಣ ಎಂಬುದರ ದಾಖಲೆ > ಉಳಿಸಿಯೇ ನೇಣಿಗೆ ತಲೆ ಕೊಟ್ಟಿದ್ದಾರೆ. > > ರೌನಕ್ ಮಾದರಿಯಲ್ಲಿ ತನಗೆ ಅಪಮಾನವಾಗಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಮೇಲಿನವರ ಎದುರು > ತನಗೆ ಮುಖಭಂಗವಾಗಿದೆ, ತನ್ನ ವ್ಯಕ್ತಿತ್ವದ ಅವಹೇಳನವಾಗಿದೆ ಎಂಬುದರ ಬಗ್ಗೆ ಧಾರಾಳ > ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾರೆ. > > ಈ ಘಟನೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗಲೇ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ > ಓದುತ್ತಿದ್ದ 23ರ ಯುವತಿ ಸೋಫಿಯಾ ಜುಲೈ 10ರಂದು ತನ್ನ ಹಾಸ್ಟೆಲಿನಲ್ಲಿ ನೇಣು ಹಾಕಿಕೊಂಡಳು. > ಅವಳು ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸಂಗತಿ ಅಮ್ಮನಿಗೆ ಗೊತ್ತಾಗಿತ್ತು. > > ಮಾಧ್ಯಮಗಳ ವರದಿಯ ಪ್ರಕಾರ, ಮಗಳ ಶಿಕ್ಷಣ ಶುಲ್ಕವನ್ನು ಕಟ್ಟಲೆಂದು ಎರಡು ದಿನಗಳ ಹಿಂದೆ > ಕಾಲೇಜಿಗೆ ಬಂದ ಅಮ್ಮ ಎಲ್ಲ ವಿದ್ಯಾರ್ಥಿನಿಯರ ಎದುರು ಸೋಫಿಯಾಗೆ ಬೈದಿದ್ದಳು. ಅದನ್ನೇ > ಮನಸ್ಸಿಗೆ ಹಚ್ಚಿಕೊಂಡ ಯುವತಿ ಅದೆಷ್ಟು ಹಿಂಸೆಪಟ್ಟಳೊ, ಇಹಲೋಕ ತ್ಯಜಿಸಿದಳು. ಅಪಮಾನ > ಎಂಬುದು ಅಷ್ಟೊಂದು ತೀವ್ರವಾಗಿ ಮನಸ್ಸನ್ನು ಘಾಸಿ ಮಾಡುತ್ತದೆಯೆ? > > ಎಚ್ಚರವಿದ್ದಷ್ಟು ಹೊತ್ತೂ ನಮ್ಮ ಮನಸ್ಸು ನಾನಾ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತದೆ. > ಸಂತಸ, ಉದ್ವೇಗ, ಜಿಗುಪ್ಸೆ, ಕಾತರ, ಶಂಕೆ, ಚಿಂತೆ, ಉಮ್ಮಳ, ಅಪಮಾನ, ಹೆಮ್ಮೆ, ನಾಚಿಕೆ, > ದುಃಖ, ಭಯ, ಅಸೂಯೆ, ಲಜ್ಜೆ, ಕೋಪ, ಹತಾಶೆ, ಸಂತೃಪ್ತಿ ಹೀಗೆ ನಾನಾ ಬಗೆಯ ಭಾವನೆಗಳು > ಮಿದುಳಿನಲ್ಲಿ ಮೂಡುತ್ತಿರುತ್ತವೆ. ಕೆಲವು ಮೂಡುತ್ತವೆ, ಮತ್ತೆ ಹಾಗೇ ಮಾಯವಾಗುತ್ತವೆ. > > ಕೆಲವು ಘಟನೆಗಳನ್ನು ಮನಸ್ಸು ಮತ್ತೆ ಮತ್ತೆ ಮಥಿಸುತ್ತಿರುತ್ತದೆ. ಮನೋವಿಜ್ಞಾನಿಗಳ ಪ್ರಕಾರ > ಈ ಹತ್ತು ಹಲವು ಭಾವನೆಗಳಲ್ಲಿ ಅಪಮಾನವೇ ಎಲ್ಲಕ್ಕಿಂತ ಹೆಚ್ಚು ಹೊತ್ತು ಮನಸ್ಸಿನಲ್ಲಿ > ಕೂತಿರುತ್ತದೆ. ಮತ್ತೆ ಮತ್ತೆ ಮನಸ್ಸನ್ನು ಕಲಕುತ್ತಿರುತ್ತದೆ, ಕಾಡುತ್ತಿರುತ್ತದೆ. > ಪ್ರತೀಕಾರಕ್ಕೆ ಹಪಹಪಿಸುತ್ತದೆ. ಅದಕ್ಕೆ ಅವಕಾಶ ಇಲ್ಲದ ಸಂದರ್ಭದಲ್ಲಿ ಮನಸ್ಸು ಇಡೀ > ದೇಹವನ್ನೇ ದಂಡಿಸುತ್ತದೆ. ಆತ್ಮಘಾತುಕ ಕೃತ್ಯಕ್ಕೆ ದೇಹವನ್ನು ತಳ್ಳುತ್ತದೆ. > > ಅದನ್ನು ವಿಜ್ಞಾನಿಗಳೇ ಹೇಳಬೇಕೆಂದೇನಿಲ್ಲ. ನಾಲ್ಕು ಜನರ ಎದುರಿಗೆ ಆಗುವ ಅವಮಾನದ ನೋವು > ಎಷ್ಟೆಂಬುದು ನಮಗೂ ಗೊತ್ತಿದೆ. ವೈರಿಯ ದೇಹಕ್ಕೆ ಗಾಯ ಮಾಡುವುದಕ್ಕಿಂತ ಆತನ/ಆಕೆಯ ಮನಸ್ಸಿಗೆ > ಗಾಯ ಮಾಡಿದರೇ ಹೆಚ್ಚು ನೋವಾಗುತ್ತದೆ ಎಂಬುದು ಎಲ್ಲ ಸಮಾಜದ ಎಲ್ಲರಿಗೂ ಗೊತ್ತಿದೆ. > > ವೈರಿಯ ದೇಹವನ್ನು ಇರಿಯಲು ಬಳಸುವ ಶಸ್ತ್ರಾಸ್ತ್ರಗಳಿಗಿಂತ ಅದೆಷ್ಟೋ ಪಟ್ಟು ವೈವಿಧ್ಯಮಯ > ಶಸ್ತ್ರಗಳು ಬೈಗುಳಗಳ ರೂಪದಲ್ಲಿ ವಿಕಾಸಗೊಂಡಿವೆ (ಅದನ್ನು ನಾವು ಈಗಿನ ವಿಧಾನ ಸಭೆಯ > ಅಧಿವೇಶನದಲ್ಲಿ, ಅದರಲ್ಲೂ ಆತ್ಮಹತ್ಯೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲೇ ನೋಡುತ್ತಿದ್ದೇವೆ). > > ಮುಕ್ತ ಸಮಾಜದಲ್ಲಿ ಅಂಥ ‘ಹರಿತ ನಾಲಗೆ’ಗೆ ಪೂರಕವಾಗಿ ಚಪ್ಪಲು, ಮಸಿ, ಮೂತ್ರ, ಅರೆಮುಂಡನ, > ಕತ್ತೆ ಮೆರವಣಿಗೆಯೇ ಮುಂತಾದ ಅಷ್ಟೇನೂ ದೇಹಕ್ಕೆ ಅಪಾಯಕಾರಿಯಲ್ಲದ, ಆದರೆ ಆತ್ಮಗೌರವವನ್ನು > ಕ್ರೂರವಾಗಿ ಘಾಸಿಗೊಳಿಸಬಲ್ಲ ನಾನಾ ಬಗೆಯ ಶಸ್ತ್ರಗಳು ರೂಪುಗೊಂಡಿವೆ. > > ಈಗೀಗಂತೂ ವರದಿಯಾಗುವ ಬಹಳಷ್ಟು ಆತ್ಮಹತ್ಯೆ ಪ್ರಕರಣಗಳಿಗೆ ಅವಮಾನವೇ ಮುಖ್ಯ ಕಾರಣ > ಇದ್ದೀತೆಂದು ಯಾರೂ ತರ್ಕಿಸಬಹುದಾಗಿದೆ. ವರದಕ್ಷಿಣೆ ಪೀಡನೆಯಿಂದ ಹೆಣ್ಣುಮಗಳೊಬ್ಬಳು ಬೆಂಕಿ > ಹಚ್ಚಿಕೊಂಡು ಸಾವಪ್ಪಿದಳೆಂದು ದಾಖಲಾದರೂ ಯಾವುದೋ ಕ್ಷಣದಲ್ಲಿ ತನ್ನ ತವರಿನ ಪ್ರತಿಷ್ಠೆಗೆ > ಧಕ್ಕೆ ಬಂತೆಂದೋ, ತನ್ನ ಪ್ರೀತಿಯ ಅಪ್ಪನಿಗೆ ಅಪಮಾನ ಮಾಡಿದರೆಂದೋ ಮನಸ್ಸು ತೀರಾ > ಘಾಸಿಗೊಂಡಿರುತ್ತದೆ. > > ರೈತರ ಆತ್ಮಹತ್ಯೆಯಲ್ಲೂ ಸಾಲದ ಹೊರೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸ್ವಯಂ > ಪ್ರತಿಷ್ಠೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಎಂಥದ್ದೋ ಮಾತು ಯಾರದ್ದೋ ಬಾಯಿಂದ > ಬಂದಿದ್ದೇ ಮುಖ್ಯ ಕಾರಣ ಇದ್ದೀತು. ಇಷ್ಟಕ್ಕೂ ಅಪಮಾನ ಬೇರೆಯವರಿಂದಲೇ ಆಗಬೇಕಿಲ್ಲ. > ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಆತ್ಮಗೌರವವನ್ನು ತಾವೇ > ಅಪಮೌಲ್ಯಗೊಳಿಸಿಕೊಳ್ಳುತ್ತಾರೆ. ಆತ್ಮಹತ್ಯೆಯ ದಾರಿ ಹುಡುಕುತ್ತಾರೆ. > > ಕಳೆದ ಮಾರ್ಚ್ 1ರಂದು, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ನೇಹಾ ರೆಡ್ಡಿ ಎಂಬ > ಯುವತಿ ತನ್ನ ಬಾಯ್‌ಫ್ರೆಂಡ್ ಭೇಟಿಗೆ ಹೋಗಿ ಅದೆಂಥ ಅವಮಾನವಾಯಿತೊ, ಆತನ ಮನೆಯ ಛಾವಣಿಯಿಂದ > ಕೆಳಕ್ಕೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡಳು. ಅದೇ ತಿಂಗಳು 30ರಂದು ಬೆಂಗಳೂರಿನ ಕೇಂಬ್ರಿಜ್ > ಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಪಾರ್ಥಿಬನ್ ಎಂಬ ಹುಡುಗ ಮನೆಗೆ ಬಂದವನೇ ನೇಣು > ಹಾಕಿಕೊಂಡ. > > ‘ನಿಮ್ಮ ಮಗನಿಗೆ ಬೇರೆ ಯಾವುದಾದರೂ ಶಾಲೆಯನ್ನು ನೋಡಿಕೊಳ್ಳಿ. ಇಷ್ಟೊಂದು ವಿಷಯಗಳಲ್ಲಿ > ಫೇಲ್ ಆಗುವ ಆತ ನಮಗೆ ಬೇಡ’ ಎಂದು ಶಾಲೆಯವರು ಪಾಲಕರಿಗೆ ಬರೆದಿದ್ದ ಪತ್ರ ಆತನ > ಚೀಲದಲ್ಲಿತ್ತು. > > ಇವೆಲ್ಲ ಅವಮಾನದ ಮೇಲ್ನೋಟಗಳಾದವು. ಆದರೆ ಅವಮಾನಿತ ಮಿದುಳಲ್ಲಿ ಏನಾಗುತ್ತದೆ ಎಂಬ ಚಿತ್ರಣ > ಬೇಕಲ್ಲ? ಅವಮಾನವೇ ಅತಿ ಕ್ರೂರ ಮನೋದಂಡನೆ ಹೌದೆ ಅಲ್ಲವೇ ಎಂಬುದನ್ನು ಅಳೆದು ನೋಡಬೇಕಲ್ಲ? > ಆಮ್‌ಸ್ಟರ್ಡಾಮ್ ವಿಶ್ವವಿದ್ಯಾಲಯದ ಇಬ್ಬರು ಮನೋವಿಜ್ಞಾನಿಗಳು ಅದನ್ನು ಅಳೆಯಲು ಹೊರಟರು. > > ಪ್ರಯೋಗಕ್ಕೆ ತಲೆಯೊಡ್ಡಲು ಬಂದ ಯುವಕ, ಯುವತಿಯರ ತಲೆಗೆ ಇಇಜಿ ಬಿಲ್ಲೆಗಳನ್ನು ಅಂಟಿಸಿ > ಕೈಗೆ ಕತೆ ಪುಸ್ತಕ ಕೊಟ್ಟರು. ಕತೆಯಲ್ಲಿ ಬರುವ ವ್ಯಕ್ತಿ ತಾನೇ ಎಂದು ಪರಿಗಣಿಸಿ ಮನಸ್ಸು > ಕೊಟ್ಟು ಓದಲು ಹೇಳಿದರು. ದುಃಖ, ನಿರಾಸೆ, ಅವಮಾನ, ಕೋಪ ಬರುವಂಥ ವಿವಿಧ ಸನ್ನಿವೇಶಗಳು > ಕತೆಗಳಲ್ಲಿದ್ದವು. > > ಉದಾ: ಅಂತರ್ಜಾಲದಲ್ಲಿ ಪರಿಚಯಗೊಂಡು ಪರಸ್ಪರ ಪ್ರೇಮಿಗಳಾದ ಇಬ್ಬರು ಕೊನೆಗೂ > ಭೇಟಿಯಾಗುತ್ತಾರೆ. ಮೊದಲ ನೋಟದಲ್ಲೇ ನಿರಾಸೆಯಾಗಿ ಮುಖ ತಿರುಗಿಸಿ, ಒಂದೂ ಮಾತಾಡದೆ ಹಠಾತ್ > ಆತ ಹೊರಟು ಹೋದಾಗ ಇವಳಿಗೆ ತೀವ್ರ ಮುಖಭಂಗವಾಗುತ್ತದೆ. > > ಅದು ಒಂದು ಕತೆಯಾದರೆ, ಅಮ್ಮನಿಗೆ ಬೈದು ಊಟವನ್ನು ಅರ್ಧಕ್ಕೇ ಬಿಟ್ಟು ಏಳುವಾಗ ಅಮ್ಮ > ಹಠಾತ್ತಾಗಿ ಅಳುವ ಕತೆ ಇನ್ನೊಂದು. ಹೀಗೆ ತನ್ಮಯರಾಗಿ ಕತೆ ಓದುತ್ತಿದ್ದವರ ಮಿದುಳಿನಲ್ಲಿ > ಉಕ್ಕುವ ವಿದ್ಯುತ್ ಕಾಂತೀಯ ತರಂಗಗಳನ್ನು ವಿಜ್ಞಾನಿಗಳು ಆಲೇಖದ ರೂಪದಲ್ಲಿ > ದಾಖಲಿಸಿಕೊಳ್ಳುತ್ತಿದ್ದರು. ಕೊನೆಯಲ್ಲಿ ಇಇಜಿ ಸ್ಕ್ಯಾನ್‌ನಲ್ಲಿ ಮೂಡಿದ ರೇಖೆಗಳನ್ನು > ವಿಶ್ಲೇಷಣೆ ಮಾಡಿದರು. ಅವಮಾನದ ಸಂದರ್ಭಗಳಲ್ಲೇ ಮಿದುಳು ಎಲ್ಲಕ್ಕಿಂತ ತೀವ್ರ > ವಿಹ್ವಲತೆಯನ್ನು ದಾಖಲಿಸಿತ್ತು. > > ಏಕೆ ಹೀಗಾಗುತ್ತದೆ? ದೇಹಕ್ಕೆ ಗಾಯವಾದರೆ ಅದರ ನೆನಪು ಆಗಾಗ ಬರುತ್ತದೆ ನಿಜ; ಆದರೆ ಹಳೆಯ > ನೋವು ಮರುಕಳಿಸುವುದಿಲ್ಲ. ಆದರೆ ಅವಮಾನದ ವಿಷಯ ಹಾಗಲ್ಲ.ಅದರ ನೆನಪು ಹಸಿಯಾಗಿದ್ದಷ್ಟು > ಹೊತ್ತೂ ನೋವಿನ ತೀವ್ರತೆ ಅಷ್ಟೇ ಇರುತ್ತದೆ. ಅಥವಾ ಅಂಥದ್ದೇ ಬೇರೆ ಘಟನೆಗಳನ್ನು ತಳಕು > ಹಾಕಿಕೊಂಡು ನೋವು ಹೆಚ್ಚಲೂಬಹುದು. > > ವಿದ್ಯಾರ್ಥಿ ರೌನಕ್‌ಗೆ ಇಂದಿನ ಅವಮಾನದ ಜೊತೆ ನಿನ್ನೆಯ, ಮೊನ್ನೆಯ ಅವಮಾನಗಳೂ ಒಟ್ಟಾಗಿ > ನುಗ್ಗಿ ತೀವ್ರತೆಯನ್ನು ಹೆಚ್ಚಿಸಿದ ಹಾಗೆ. ದೈಹಿಕ ಗಾಯದಲ್ಲಿ ಹೀಗಾಗುವುದಿಲ್ಲ. ಅಗಲಿಕೆಯ > ದುಃಖದಲ್ಲೂ ಹೀಗಾಗುವುದಿಲ್ಲ ಏಕೆಂದರೆ ಅಲ್ಲಿ ಸ್ವಯಂ ಪ್ರತಿಷ್ಠೆಯ ಪ್ರಶ್ನೆ ಬರುವುದಿಲ್ಲ. > ಮಿದುಳು ತನ್ನ ವ್ಯಕ್ತಿತ್ವದ ಒಂದು ಬಿಂಬ > ವನ್ನು ತಾನೇ ಸೃಷ್ಟಿ ಮಾಡಿಕೊಂಡಿರುತ್ತದೆ. > > ಬದುಕುಳಿಯುವ ಹೋರಾಟದಲ್ಲಿ, ಪೈಪೋಟಿಯಲ್ಲಿ ಆತ್ಮಪ್ರತಿಷ್ಠೆಯ ಈ ಬಿಂಬವೇ ದೇಹ ಮತ್ತು > ಮನಸ್ಸಿಗೆ ಸೂಕ್ತ ಚಾಲನೆ ಕೊಡುತ್ತಿರುತ್ತದೆ. ಅವಮಾನ ಆದಾಗ ಈ ಬಿಂಬಕ್ಕೇ ಧಕ್ಕೆ ಬರುತ್ತದೆ. > ಕೆಲವು ಮಿದುಳುಗಳು ಸೇಡಿನ ಕಿಡಿ ಹೊಮ್ಮಿಸಿ, ಫೂಲನ್ ದೇವಿಯ ಹಾಗೆ ಸಡ್ಡು ಹೊಡೆಯಬಹುದು. > ಅಳ್ಳೆದೆಯ ನತದೃಷ್ಟರ ಮಿದುಳು ಮಾತ್ರ ಈ ಬಿಂಬವನ್ನೇ ಹೊಸಕಿ ಹಾಕಲು ಸಜ್ಜಾಗುತ್ತದೆ. > > ಹಾಗಿದ್ದರೆ ದಿನದಿನವೂ ಅವಮಾನಕ್ಕೆ ತುತ್ತಾಗುವ ದಲಿತರು, ಮಾಣಿಗಳು, ಪೇದೆಗಳು, ಅಷ್ಟೇಕೆ- > ರಾಜಕೀಯ ಮುಖಂಡರು ಹೇಗೆ ಏಗುತ್ತಾರೆ? ಅವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಅಥವಾ > ಬಂಡೆದ್ದು ಹೋರಾಡುವುದೂ ಇಲ್ಲ; ಏಕೆಂದರೆ ಅವರು ಅವಮಾನವನ್ನು ಅಂತರ್ಗತ > ಮಾಡಿಕೊಳ್ಳುವುದಿಲ್ಲ. ಅಂದರೆ, ಅಪಮಾನ > ವನ್ನು ತಟ್ಟಿಸಿಕೊಳ್ಳುವುದಿಲ್ಲ ಅಥವಾ ಬಯ್ಗುಳಗಳು ಅವಮಾನಕಾರಿ ಎಂದು ಅವರಿಗೆ > ಅನ್ನಿಸುವುದೇ ಇಲ್ಲ. > > ಏಕೆಂದರೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರುವಷ್ಟರಮಟ್ಟಿಗೆ ಅವರ ಪ್ರತಿಷ್ಠೆಯ ಬಿಂಬ > ಪೆಡಸಾಗಿರುವುದಿಲ್ಲ. ಆದರೆ ಕುಸುಮ ಕೋಮಲವಾಗಿ ತಮ್ಮ ಬಿಂಬವನ್ನು ಕಾಪಾಡಿಕೊಂಡು ಬರುವವರ > ಸ್ಥಿತಿ ಹಾಗಿರುವುದಿಲ್ಲ. ಅಂಥ ಸೂಕ್ಷ್ಮ ಸಂವೇದನೆ ಇರುವವರು ಹೇಗೆ ಅವಮಾನವನ್ನು > ಎದುರಿಸಬೇಕು ಎಂಬುದರ ಬಗ್ಗೆ ಹತ್ತಾರು ಉಪಾಯಗಳನ್ನು ಮನೋ > ವಿಜ್ಞಾನಿಗಳು ಸೂಚಿಸುತ್ತಾರೆ. > > ಮೋಹನದಾಸ ಗಾಂಧಿಗೆ ಯಾರೂ ಸೂಚಿಸಿರಲಿಲ್ಲ. ದಕ್ಷಿಣ ಆಫ್ರಿಕದಲ್ಲಿ ರೈಲಿನಿಂದ ದಬ್ಬಿಸಿಕೊಂಡ > ಆ ಘಟನೆ ಭಾರತದಲ್ಲಿ ಬ್ರಿಟಿಷರ ಆಧಿಪತ್ಯದ ಶವ ಪೆಟ್ಟಿಗೆಗೆ ಬಿದ್ದ ಮೊದಲ ಮೊಳೆ > ಎನ್ನಿಸಿಕೊಂಡಿತು. ಇಂದಿರಾ ಗಾಂಧಿಯವರನ್ನು ಪ್ರಧಾನಿ ಪಟ್ಟಕ್ಕೆ ಅರ್ಹಳಲ್ಲದ ‘ಗೂಂಗಿ > ಗುಡಿಯಾ’ (ಮೊದ್ದು ಬೊಂಬೆ) ಎಂದು ಯಾರೆಲ್ಲ ಹಂಗಿಸಿದರು. ಅಂಥ ಅವಮಾನವನ್ನೇ ಯಶಸ್ಸಿನ > ಮೆಟ್ಟಿಲಾಗಿ ಮಾಡಿಕೊಂಡವರ ಚೇತೋಹಾರಿ ಕತೆಗಳು ಎಷ್ಟೊಂದಿಲ್ಲ?ಅವಮಾನ, ಹೆಮ್ಮೆ, ಆತ್ಮಗೌರವ > ಎಂಬುದು ವ್ಯಕ್ತಿಗಷ್ಟೇ ಸೀಮಿತವಾಗಿಲ್ಲ. > > ಒಂದೊಂದು ಸಮುದಾಯಕ್ಕೂ ಅದರದ್ದೇ ಪ್ರತಿಷ್ಠೆಯ ಬಿಂಬಗಳಿರುತ್ತವೆ. ಒಂದು ಗ್ರಾಮ, ಒಂದು > ಕೋಮು, ಒಂದು ಭಾಷೆ, ಒಂದು ಧರ್ಮ, ಒಂದು ದೇಶ ಏಕತ್ರವಾಗಿ ತನ್ನ ಬಿಂಬವನ್ನು > ರೂಪಿಸಿಕೊಂಡಿರುತ್ತದೆ. > > ಖಾಪ್ ಪಂಚಾಯತ್ ಎನ್ನಿ, ‘ಮರಾಠಿ ಮಾನುಸ್’ ಎನ್ನಿ, ‘ರಾಜಪೂತ್ ರಕ್ತ’ ಎನ್ನಿ, ಅಂಥ > ಅಭಿಮಾನವನ್ನು ಪೋಷಿಸುವ, ಅದಕ್ಕಾಗಿ ರಕ್ತ ಹರಿಸುವ, ಸಮೂಹ ಸನ್ನಿ ಸೃಷ್ಟಿಸುವ, ಅಂಥ > ಬಿಂಬಕ್ಕೆ ಘಾಸಿಯಾದಾಗ ಯುದ್ಧ ಸಾರಿ, ಪ್ರತೀಕಾರಕ್ಕೆ ಹೊರಟು ಅಮಾಯಕರನ್ನು ಬಲಿಹಾಕಿದ > ಸಂದರ್ಭಗಳು ಚರಿತ್ರೆಯ ಪುಟಗಳಲ್ಲಿ ಅದ್ದಿಬಿದ್ದಿವೆ. > > ಅವಮಾನ ನುಂಗಿಕೊಳ್ಳುವುದೂ ಒಂದು ಕಲೆಯೇ. ಚೀನೀಯರು ತಮಗಿಂತ ಕೆಳಗಿನವರ ಜೊತೆ > ವ್ಯವಹರಿಸುವಾಗ ಕೆಳಗಿನವರು ತಗ್ಗಿನಲ್ಲಿ ಕೂತಿರಬೇಕು. ಸಮಬಲರು ಮಾತ್ರ ಸಮಾನ ಎತ್ತರದಲ್ಲಿ > ಕೂತಿರಬೇಕು. ಇದು ಅಲ್ಲಿನ ಸಂಪ್ರದಾಯ. ಕ್ರಿ.ಶ. 1900ರಲ್ಲಿ ಚೀನೀಯರು ಪಾಶ್ಚಾತ್ಯರ > ವಿರುದ್ಧ ದಂಗೆ ಎದ್ದು ಕೊನೆಗೆ ತಾವೇ ಸೋತು ಸುಣ್ಣವಾಗಿ ದಾಳಿಕೋರರ ಜೊತೆಗೆ ಒಂದು > ಒಪ್ಪಂದಕ್ಕೆ ಬರುತ್ತಾರೆ. > > ಅದು ‘ಬಾಕ್ಸರ್ ದಂಗೆ’ ಎಂತಲೇ ಪ್ರಸಿದ್ಧಿ ಪಡೆದಿದೆ. ಭಾರೀ ಅವಮಾನಕಾರಿ ಎನಿಸುವ > ಒಪ್ಪಂದಕ್ಕೆ ಸಹಿ ಹಾಕಲೇಬೇಕಾದ ಅನಿವಾರ್ಯತೆ ಚೀನೀಯರಿಗೆ ಬರುತ್ತದೆ. ಆದರೆ ಚೀನಾದವರು > ಮಾತ್ರ ತಾವೇ ಗೆದ್ದೆವೆಂದು ಹೇಳುತ್ತಾರೆ. ಏಕೆಂದರೆ ಆ ಒಪ್ಪಂದಕ್ಕೆ ಸಹಿ ಮಾಡುವಾಗ > ವಿದೇಶಿಯರು ಕೂರಬೇಕಾದ ಆಸನಗಳ ಕಾಲುಗಳ ತಳಭಾಗವನ್ನು ಅವರಿಗೆ ಗೊತ್ತಾಗದಂತೆ ಗರಗಸದಲ್ಲಿ > ಅರ್ಧ ಇಂಚು ಕತ್ತರಿಸಿದ್ದರಂತೆ. > > ತಗ್ಗಿನಲ್ಲಿ ಕೂತು ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ವಿದೇಶೀಯರದ್ದೇ ಮರ್ಯಾದೆ ಹೋಯಿತೆಂದು > ಚೀನೀಯರು ಈಗಲೂ ಭಾವಿಸುತ್ತಾರೆ. ಮೊನ್ನೆ ಚೀನೀಯರಿಗೆ ಮತ್ತೆ ಅಪಮಾನವಾಗಿದೆ. ದಕ್ಷಿಣ ಚೀನಾ > ಸಮುದ್ರದ ಭೂಭಾಗದ ಮೇಲೆ ಅವರಿಗೆ ಹಕ್ಕಿಲ್ಲ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಹೇಳಿದೆ. ಈಗ > ಚೀನೀಯರು ಮತ್ತೆ ಅದೆಂಥ ಗರಗಸ ಹುಡುಕುತ್ತಾರೊ ನೋಡಬೇಕು. > > ವೈಯಕ್ತಿಕ ಅವಮಾನದ ವಿಷಯ ಚರ್ಚೆಗೆ ಬಂದಾಗ, ರಾಜಕೀಯ ಮನೋವಿಜ್ಞಾನ ತಜ್ಞ ಆಶಿಶ್ ನಂದಿ ತಮ್ಮ > ಅಪ್ಪನ ಕುರಿತು ಒಂದು ಚಂದದ ಕತೆ ಹೇಳುತ್ತಾರೆ. ಅವರ ಅಪ್ಪ (ಕ್ರಿಶ್ಚಿಯನ್ ಆಗಿದ್ದರೂ) > ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಶಾಲೆಯಲ್ಲಿ ಓದುತ್ತಿದ್ದಾಗ > ಮೇಷ್ಟ್ರು ಕೇಳಿದ ಪ್ರಶ್ನೆಗೆ ಬೇರೆ ಯಾರೂ ಉತ್ತರಿಸದಿದ್ದಾಗ ‘ಹೇ ಮ್ಲೇಚ್ಛಾ ನೀನೇ ಹೇಳು!’ > ಎಂದು ನಂದಿಗೆ ಆಜ್ಞಾಪಿಸುತ್ತಿದ್ದರಂತೆ. > > ‘ಮ್ಲೇಚ್ಛ’ ಎಂದರೆ ಭಾರೀ ಅಪಮಾನಕರ ಬೈಗುಳ ಆಗಿದ್ದರೂ ಈ ಹುಡುಗ ತುಸುವೂ ಬೇಸರಿಸದೆ ಸರಿಯಾದ > ಉತ್ತರವನ್ನು ಹೇಳುತ್ತಿದ್ದರಂತೆ. ಬೈದವನೂ ಖುಷ್, ಬೈಸಿಕೊಂಡವನೂ ಖುಷ್. ಶಾಲಾ ಮಕ್ಕಳಿರಲಿ, > ಪೊಲೀಸ್ ಅಧಿಕಾರಿಯಿರಲಿ, ತೀರ ಅವಮಾನದ ಸಂದರ್ಭದಲ್ಲಿ ಹೇಗೆ ತಮ್ಮನ್ನು ತಾವೇ ನಿಭಾಯಿಸಬೇಕು > ಎಂಬ ಬಗ್ಗೆ ಪಠ್ಯಗಳಲ್ಲಿ, ಸೇವಾ ನಿಯಮಗಳಲ್ಲಿ ಸೂಕ್ತ ಮನೋವೈಜ್ಞಾನಿಕ ಸೂತ್ರಗಳನ್ನು > ಅಳವಡಿಸಬೇಕು. ಅಳವಡಿಸಬೇಕೆಂದು ಮೇಲಿನವರಿಗೆ ಸಲಹೆ ಕೊಡುವವರು ಕೂಡ ಎಂಥ ಬೈಗುಳವನ್ನೂ > ಅವಮಾನವನ್ನೂ ಸಹಿಸಲು ಸಮರ್ಥರೇ ಆಗಿರಬೇಕು. > > Hareeshkumar K > GHS HUSKURU > MALAVALLI TQ > MANDYA DT > MOB 9880328224 > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
