Very useful sir On Jul 17, 2016 6:46 AM, "Hrushi Harsha" <[email protected]> wrote:
> Very good arrival sir. thank u . > On Jul 16, 2016 7:04 PM, "HAREESHKUMAR K Agasanapura" < > [email protected]> wrote: > >> http://m.prajavani.net/article/2016_07_14/423603 >> >> *ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ* >> >> 14 Jul, 2016 >> >> ನಾಗೇಶ್ ಹೆಗಡೆ >> >> >> <https://www.facebook.com/sharer/sharer.php?u=http%3A%2F%2Fgoo.gl%2FfYSdF5> >> <https://twitter.com/intent/tweet?text=%E0%B2%85%E0%B2%B5%E0%B2%AE%E0%B2%BE%E0%B2%A8%2C++%E0%B2%B8%E0%B3%8D%E0%B2%B5%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86+http%3A%2F%2Fgoo.gl%2FfYSdF5> >> <https://plus.google.com/share?url=http%3A%2F%2Fgoo.gl%2FfYSdF5> >> <http://www.pinterest.com/pin/find/?url=http%3A%2F%2Fgoo.gl%2FfYSdF5> >> <http://www.linkedin.com/shareArticle?mini=true&title=%E0%B2%85%E0%B2%B5%E0%B2%AE%E0%B2%BE%E0%B2%A8%2C++%E0%B2%B8%E0%B3%8D%E0%B2%B5%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86+&url=http%3A%2F%2Fgoo.gl%2FfYSdF5> >> >> ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ನಾಲ್ಕೂ ಆತ್ಮಹತ್ಯೆಗಳಲ್ಲಿ ಕಂಡುಬಂದ ಒಂದು ಸಮಾನ ಅಂಶ >> ಏನು ಗೊತ್ತೆ? ಅಪಮಾನ. ಹದಿನಾಲ್ಕರ ಹರೆಯದ ಹೈಸ್ಕೂಲ್ ವಿದ್ಯಾರ್ಥಿ ರೌನಕ್ ಬ್ಯಾನರ್ಜಿ >> ಶಾಲೆಯಿಂದ ಬಂದವನೇ 19ನೇ ಅಂತಸ್ತಿನ ತನ್ನ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಪ್ರಾಣ >> ಕಳೆದುಕೊಂಡ. >> >> ‘ಕಿಲಾಡಿ ಹುಡುಗರ ಒಂದಿಡೀ ತಂಡ ಪ್ರತಿದಿನವೂ ನನ್ನನ್ನು ಛೇಡಿಸಿ ಅವಮಾನ ಮಾಡುತ್ತಿದೆ. >> ನನ್ನಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥದ ಚೀಟಿಯೊಂದು ಅವನ >> ಬ್ಯಾಗಿನಲ್ಲಿತ್ತು. ಇನ್ನು, ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ ಮತ್ತು ಇನ್ನೊಬ್ಬ >> ಡಿವೈಎಸ್‌ಪಿ ಎಂ.ಕೆ.ಗಣಪತಿ ಕೂಡ ತಮ್ಮ ಆತ್ಮಹತ್ಯೆಗೆ ಯಾವ ಸಂದರ್ಭಗಳು ಕಾರಣ ಎಂಬುದರ ದಾಖಲೆ >> ಉಳಿಸಿಯೇ ನೇಣಿಗೆ ತಲೆ ಕೊಟ್ಟಿದ್ದಾರೆ. >> >> ರೌನಕ್ ಮಾದರಿಯಲ್ಲಿ ತನಗೆ ಅಪಮಾನವಾಗಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಮೇಲಿನವರ ಎದುರು >> ತನಗೆ ಮುಖಭಂಗವಾಗಿದೆ, ತನ್ನ ವ್ಯಕ್ತಿತ್ವದ ಅವಹೇಳನವಾಗಿದೆ ಎಂಬುದರ ಬಗ್ಗೆ ಧಾರಾಳ >> ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾರೆ. >> >> ಈ ಘಟನೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗಲೇ, ಬೆಂಗಳೂರಿನ ಪ್ರೆಸಿಡೆನ್ಸಿ >> ಕಾಲೇಜಿನಲ್ಲಿ ಓದುತ್ತಿದ್ದ 23ರ ಯುವತಿ ಸೋಫಿಯಾ ಜುಲೈ 10ರಂದು ತನ್ನ ಹಾಸ್ಟೆಲಿನಲ್ಲಿ ನೇಣು >> ಹಾಕಿಕೊಂಡಳು. ಅವಳು ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸಂಗತಿ ಅಮ್ಮನಿಗೆ >> ಗೊತ್ತಾಗಿತ್ತು. >> >> ಮಾಧ್ಯಮಗಳ ವರದಿಯ ಪ್ರಕಾರ, ಮಗಳ ಶಿಕ್ಷಣ ಶುಲ್ಕವನ್ನು ಕಟ್ಟಲೆಂದು ಎರಡು ದಿನಗಳ ಹಿಂದೆ >> ಕಾಲೇಜಿಗೆ ಬಂದ ಅಮ್ಮ ಎಲ್ಲ ವಿದ್ಯಾರ್ಥಿನಿಯರ ಎದುರು ಸೋಫಿಯಾಗೆ ಬೈದಿದ್ದಳು. ಅದನ್ನೇ >> ಮನಸ್ಸಿಗೆ ಹಚ್ಚಿಕೊಂಡ ಯುವತಿ ಅದೆಷ್ಟು ಹಿಂಸೆಪಟ್ಟಳೊ, ಇಹಲೋಕ ತ್ಯಜಿಸಿದಳು. ಅಪಮಾನ >> ಎಂಬುದು ಅಷ್ಟೊಂದು ತೀವ್ರವಾಗಿ ಮನಸ್ಸನ್ನು ಘಾಸಿ ಮಾಡುತ್ತದೆಯೆ? >> >> ಎಚ್ಚರವಿದ್ದಷ್ಟು ಹೊತ್ತೂ ನಮ್ಮ ಮನಸ್ಸು ನಾನಾ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತದೆ. >> ಸಂತಸ, ಉದ್ವೇಗ, ಜಿಗುಪ್ಸೆ, ಕಾತರ, ಶಂಕೆ, ಚಿಂತೆ, ಉಮ್ಮಳ, ಅಪಮಾನ, ಹೆಮ್ಮೆ, ನಾಚಿಕೆ, >> ದುಃಖ, ಭಯ, ಅಸೂಯೆ, ಲಜ್ಜೆ, ಕೋಪ, ಹತಾಶೆ, ಸಂತೃಪ್ತಿ ಹೀಗೆ ನಾನಾ ಬಗೆಯ ಭಾವನೆಗಳು >> ಮಿದುಳಿನಲ್ಲಿ ಮೂಡುತ್ತಿರುತ್ತವೆ. ಕೆಲವು ಮೂಡುತ್ತವೆ, ಮತ್ತೆ ಹಾಗೇ ಮಾಯವಾಗುತ್ತವೆ. >> >> ಕೆಲವು ಘಟನೆಗಳನ್ನು ಮನಸ್ಸು ಮತ್ತೆ ಮತ್ತೆ ಮಥಿಸುತ್ತಿರುತ್ತದೆ. ಮನೋವಿಜ್ಞಾನಿಗಳ >> ಪ್ರಕಾರ ಈ ಹತ್ತು ಹಲವು ಭಾವನೆಗಳಲ್ಲಿ ಅಪಮಾನವೇ ಎಲ್ಲಕ್ಕಿಂತ ಹೆಚ್ಚು ಹೊತ್ತು >> ಮನಸ್ಸಿನಲ್ಲಿ ಕೂತಿರುತ್ತದೆ. ಮತ್ತೆ ಮತ್ತೆ ಮನಸ್ಸನ್ನು ಕಲಕುತ್ತಿರುತ್ತದೆ, >> ಕಾಡುತ್ತಿರುತ್ತದೆ. ಪ್ರತೀಕಾರಕ್ಕೆ ಹಪಹಪಿಸುತ್ತದೆ. ಅದಕ್ಕೆ ಅವಕಾಶ ಇಲ್ಲದ ಸಂದರ್ಭದಲ್ಲಿ >> ಮನಸ್ಸು ಇಡೀ ದೇಹವನ್ನೇ ದಂಡಿಸುತ್ತದೆ. ಆತ್ಮಘಾತುಕ ಕೃತ್ಯಕ್ಕೆ ದೇಹವನ್ನು ತಳ್ಳುತ್ತದೆ. >> >> ಅದನ್ನು ವಿಜ್ಞಾನಿಗಳೇ ಹೇಳಬೇಕೆಂದೇನಿಲ್ಲ. ನಾಲ್ಕು ಜನರ ಎದುರಿಗೆ ಆಗುವ ಅವಮಾನದ ನೋವು >> ಎಷ್ಟೆಂಬುದು ನಮಗೂ ಗೊತ್ತಿದೆ. ವೈರಿಯ ದೇಹಕ್ಕೆ ಗಾಯ ಮಾಡುವುದಕ್ಕಿಂತ ಆತನ/ಆಕೆಯ ಮನಸ್ಸಿಗೆ >> ಗಾಯ ಮಾಡಿದರೇ ಹೆಚ್ಚು ನೋವಾಗುತ್ತದೆ ಎಂಬುದು ಎಲ್ಲ ಸಮಾಜದ ಎಲ್ಲರಿಗೂ ಗೊತ್ತಿದೆ. >> >> ವೈರಿಯ ದೇಹವನ್ನು ಇರಿಯಲು ಬಳಸುವ ಶಸ್ತ್ರಾಸ್ತ್ರಗಳಿಗಿಂತ ಅದೆಷ್ಟೋ ಪಟ್ಟು ವೈವಿಧ್ಯಮಯ >> ಶಸ್ತ್ರಗಳು ಬೈಗುಳಗಳ ರೂಪದಲ್ಲಿ ವಿಕಾಸಗೊಂಡಿವೆ (ಅದನ್ನು ನಾವು ಈಗಿನ ವಿಧಾನ ಸಭೆಯ >> ಅಧಿವೇಶನದಲ್ಲಿ, ಅದರಲ್ಲೂ ಆತ್ಮಹತ್ಯೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲೇ ನೋಡುತ್ತಿದ್ದೇವೆ). >> >> ಮುಕ್ತ ಸಮಾಜದಲ್ಲಿ ಅಂಥ ‘ಹರಿತ ನಾಲಗೆ’ಗೆ ಪೂರಕವಾಗಿ ಚಪ್ಪಲು, ಮಸಿ, ಮೂತ್ರ, ಅರೆಮುಂಡನ, >> ಕತ್ತೆ ಮೆರವಣಿಗೆಯೇ ಮುಂತಾದ ಅಷ್ಟೇನೂ ದೇಹಕ್ಕೆ ಅಪಾಯಕಾರಿಯಲ್ಲದ, ಆದರೆ ಆತ್ಮಗೌರವವನ್ನು >> ಕ್ರೂರವಾಗಿ ಘಾಸಿಗೊಳಿಸಬಲ್ಲ ನಾನಾ ಬಗೆಯ ಶಸ್ತ್ರಗಳು ರೂಪುಗೊಂಡಿವೆ. >> >> ಈಗೀಗಂತೂ ವರದಿಯಾಗುವ ಬಹಳಷ್ಟು ಆತ್ಮಹತ್ಯೆ ಪ್ರಕರಣಗಳಿಗೆ ಅವಮಾನವೇ ಮುಖ್ಯ ಕಾರಣ >> ಇದ್ದೀತೆಂದು ಯಾರೂ ತರ್ಕಿಸಬಹುದಾಗಿದೆ. ವರದಕ್ಷಿಣೆ ಪೀಡನೆಯಿಂದ ಹೆಣ್ಣುಮಗಳೊಬ್ಬಳು ಬೆಂಕಿ >> ಹಚ್ಚಿಕೊಂಡು ಸಾವಪ್ಪಿದಳೆಂದು ದಾಖಲಾದರೂ ಯಾವುದೋ ಕ್ಷಣದಲ್ಲಿ ತನ್ನ ತವರಿನ ಪ್ರತಿಷ್ಠೆಗೆ >> ಧಕ್ಕೆ ಬಂತೆಂದೋ, ತನ್ನ ಪ್ರೀತಿಯ ಅಪ್ಪನಿಗೆ ಅಪಮಾನ ಮಾಡಿದರೆಂದೋ ಮನಸ್ಸು ತೀರಾ >> ಘಾಸಿಗೊಂಡಿರುತ್ತದೆ. >> >> ರೈತರ ಆತ್ಮಹತ್ಯೆಯಲ್ಲೂ ಸಾಲದ ಹೊರೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸ್ವಯಂ >> ಪ್ರತಿಷ್ಠೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಎಂಥದ್ದೋ ಮಾತು ಯಾರದ್ದೋ ಬಾಯಿಂದ >> ಬಂದಿದ್ದೇ ಮುಖ್ಯ ಕಾರಣ ಇದ್ದೀತು. ಇಷ್ಟಕ್ಕೂ ಅಪಮಾನ ಬೇರೆಯವರಿಂದಲೇ ಆಗಬೇಕಿಲ್ಲ. >> ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಆತ್ಮಗೌರವವನ್ನು ತಾವೇ >> ಅಪಮೌಲ್ಯಗೊಳಿಸಿಕೊಳ್ಳುತ್ತಾರೆ. ಆತ್ಮಹತ್ಯೆಯ ದಾರಿ ಹುಡುಕುತ್ತಾರೆ. >> >> ಕಳೆದ ಮಾರ್ಚ್ 1ರಂದು, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ನೇಹಾ ರೆಡ್ಡಿ ಎಂಬ >> ಯುವತಿ ತನ್ನ ಬಾಯ್‌ಫ್ರೆಂಡ್ ಭೇಟಿಗೆ ಹೋಗಿ ಅದೆಂಥ ಅವಮಾನವಾಯಿತೊ, ಆತನ ಮನೆಯ ಛಾವಣಿಯಿಂದ >> ಕೆಳಕ್ಕೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡಳು. ಅದೇ ತಿಂಗಳು 30ರಂದು ಬೆಂಗಳೂರಿನ ಕೇಂಬ್ರಿಜ್ >> ಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಪಾರ್ಥಿಬನ್ ಎಂಬ ಹುಡುಗ ಮನೆಗೆ ಬಂದವನೇ ನೇಣು >> ಹಾಕಿಕೊಂಡ. >> >> ‘ನಿಮ್ಮ ಮಗನಿಗೆ ಬೇರೆ ಯಾವುದಾದರೂ ಶಾಲೆಯನ್ನು ನೋಡಿಕೊಳ್ಳಿ. ಇಷ್ಟೊಂದು ವಿಷಯಗಳಲ್ಲಿ >> ಫೇಲ್ ಆಗುವ ಆತ ನಮಗೆ ಬೇಡ’ ಎಂದು ಶಾಲೆಯವರು ಪಾಲಕರಿಗೆ ಬರೆದಿದ್ದ ಪತ್ರ ಆತನ >> ಚೀಲದಲ್ಲಿತ್ತು. >> >> ಇವೆಲ್ಲ ಅವಮಾನದ ಮೇಲ್ನೋಟಗಳಾದವು. ಆದರೆ ಅವಮಾನಿತ ಮಿದುಳಲ್ಲಿ ಏನಾಗುತ್ತದೆ ಎಂಬ ಚಿತ್ರಣ >> ಬೇಕಲ್ಲ? ಅವಮಾನವೇ ಅತಿ ಕ್ರೂರ ಮನೋದಂಡನೆ ಹೌದೆ ಅಲ್ಲವೇ ಎಂಬುದನ್ನು ಅಳೆದು ನೋಡಬೇಕಲ್ಲ? >> ಆಮ್‌ಸ್ಟರ್ಡಾಮ್ ವಿಶ್ವವಿದ್ಯಾಲಯದ ಇಬ್ಬರು ಮನೋವಿಜ್ಞಾನಿಗಳು ಅದನ್ನು ಅಳೆಯಲು ಹೊರಟರು. >> >> ಪ್ರಯೋಗಕ್ಕೆ ತಲೆಯೊಡ್ಡಲು ಬಂದ ಯುವಕ, ಯುವತಿಯರ ತಲೆಗೆ ಇಇಜಿ ಬಿಲ್ಲೆಗಳನ್ನು ಅಂಟಿಸಿ >> ಕೈಗೆ ಕತೆ ಪುಸ್ತಕ ಕೊಟ್ಟರು. ಕತೆಯಲ್ಲಿ ಬರುವ ವ್ಯಕ್ತಿ ತಾನೇ ಎಂದು ಪರಿಗಣಿಸಿ ಮನಸ್ಸು >> ಕೊಟ್ಟು ಓದಲು ಹೇಳಿದರು. ದುಃಖ, ನಿರಾಸೆ, ಅವಮಾನ, ಕೋಪ ಬರುವಂಥ ವಿವಿಧ ಸನ್ನಿವೇಶಗಳು >> ಕತೆಗಳಲ್ಲಿದ್ದವು. >> >> ಉದಾ: ಅಂತರ್ಜಾಲದಲ್ಲಿ ಪರಿಚಯಗೊಂಡು ಪರಸ್ಪರ ಪ್ರೇಮಿಗಳಾದ ಇಬ್ಬರು ಕೊನೆಗೂ >> ಭೇಟಿಯಾಗುತ್ತಾರೆ. ಮೊದಲ ನೋಟದಲ್ಲೇ ನಿರಾಸೆಯಾಗಿ ಮುಖ ತಿರುಗಿಸಿ, ಒಂದೂ ಮಾತಾಡದೆ ಹಠಾತ್ >> ಆತ ಹೊರಟು ಹೋದಾಗ ಇವಳಿಗೆ ತೀವ್ರ ಮುಖಭಂಗವಾಗುತ್ತದೆ. >> >> ಅದು ಒಂದು ಕತೆಯಾದರೆ, ಅಮ್ಮನಿಗೆ ಬೈದು ಊಟವನ್ನು ಅರ್ಧಕ್ಕೇ ಬಿಟ್ಟು ಏಳುವಾಗ ಅಮ್ಮ >> ಹಠಾತ್ತಾಗಿ ಅಳುವ ಕತೆ ಇನ್ನೊಂದು. ಹೀಗೆ ತನ್ಮಯರಾಗಿ ಕತೆ ಓದುತ್ತಿದ್ದವರ ಮಿದುಳಿನಲ್ಲಿ >> ಉಕ್ಕುವ ವಿದ್ಯುತ್ ಕಾಂತೀಯ ತರಂಗಗಳನ್ನು ವಿಜ್ಞಾನಿಗಳು ಆಲೇಖದ ರೂಪದಲ್ಲಿ >> ದಾಖಲಿಸಿಕೊಳ್ಳುತ್ತಿದ್ದರು. ಕೊನೆಯಲ್ಲಿ ಇಇಜಿ ಸ್ಕ್ಯಾನ್‌ನಲ್ಲಿ ಮೂಡಿದ ರೇಖೆಗಳನ್ನು >> ವಿಶ್ಲೇಷಣೆ ಮಾಡಿದರು. ಅವಮಾನದ ಸಂದರ್ಭಗಳಲ್ಲೇ ಮಿದುಳು ಎಲ್ಲಕ್ಕಿಂತ ತೀವ್ರ >> ವಿಹ್ವಲತೆಯನ್ನು ದಾಖಲಿಸಿತ್ತು. >> >> ಏಕೆ ಹೀಗಾಗುತ್ತದೆ? ದೇಹಕ್ಕೆ ಗಾಯವಾದರೆ ಅದರ ನೆನಪು ಆಗಾಗ ಬರುತ್ತದೆ ನಿಜ; ಆದರೆ ಹಳೆಯ >> ನೋವು ಮರುಕಳಿಸುವುದಿಲ್ಲ. ಆದರೆ ಅವಮಾನದ ವಿಷಯ ಹಾಗಲ್ಲ.ಅದರ ನೆನಪು ಹಸಿಯಾಗಿದ್ದಷ್ಟು >> ಹೊತ್ತೂ ನೋವಿನ ತೀವ್ರತೆ ಅಷ್ಟೇ ಇರುತ್ತದೆ. ಅಥವಾ ಅಂಥದ್ದೇ ಬೇರೆ ಘಟನೆಗಳನ್ನು ತಳಕು >> ಹಾಕಿಕೊಂಡು ನೋವು ಹೆಚ್ಚಲೂಬಹುದು. >> >> ವಿದ್ಯಾರ್ಥಿ ರೌನಕ್‌ಗೆ ಇಂದಿನ ಅವಮಾನದ ಜೊತೆ ನಿನ್ನೆಯ, ಮೊನ್ನೆಯ ಅವಮಾನಗಳೂ ಒಟ್ಟಾಗಿ >> ನುಗ್ಗಿ ತೀವ್ರತೆಯನ್ನು ಹೆಚ್ಚಿಸಿದ ಹಾಗೆ. ದೈಹಿಕ ಗಾಯದಲ್ಲಿ ಹೀಗಾಗುವುದಿಲ್ಲ. ಅಗಲಿಕೆಯ >> ದುಃಖದಲ್ಲೂ ಹೀಗಾಗುವುದಿಲ್ಲ ಏಕೆಂದರೆ ಅಲ್ಲಿ ಸ್ವಯಂ ಪ್ರತಿಷ್ಠೆಯ ಪ್ರಶ್ನೆ ಬರುವುದಿಲ್ಲ. >> ಮಿದುಳು ತನ್ನ ವ್ಯಕ್ತಿತ್ವದ ಒಂದು ಬಿಂಬ >> ವನ್ನು ತಾನೇ ಸೃಷ್ಟಿ ಮಾಡಿಕೊಂಡಿರುತ್ತದೆ. >> >> ಬದುಕುಳಿಯುವ ಹೋರಾಟದಲ್ಲಿ, ಪೈಪೋಟಿಯಲ್ಲಿ ಆತ್ಮಪ್ರತಿಷ್ಠೆಯ ಈ ಬಿಂಬವೇ ದೇಹ ಮತ್ತು >> ಮನಸ್ಸಿಗೆ ಸೂಕ್ತ ಚಾಲನೆ ಕೊಡುತ್ತಿರುತ್ತದೆ. ಅವಮಾನ ಆದಾಗ ಈ ಬಿಂಬಕ್ಕೇ ಧಕ್ಕೆ ಬರುತ್ತದೆ. >> ಕೆಲವು ಮಿದುಳುಗಳು ಸೇಡಿನ ಕಿಡಿ ಹೊಮ್ಮಿಸಿ, ಫೂಲನ್ ದೇವಿಯ ಹಾಗೆ ಸಡ್ಡು ಹೊಡೆಯಬಹುದು. >> ಅಳ್ಳೆದೆಯ ನತದೃಷ್ಟರ ಮಿದುಳು ಮಾತ್ರ ಈ ಬಿಂಬವನ್ನೇ ಹೊಸಕಿ ಹಾಕಲು ಸಜ್ಜಾಗುತ್ತದೆ. >> >> ಹಾಗಿದ್ದರೆ ದಿನದಿನವೂ ಅವಮಾನಕ್ಕೆ ತುತ್ತಾಗುವ ದಲಿತರು, ಮಾಣಿಗಳು, ಪೇದೆಗಳು, ಅಷ್ಟೇಕೆ- >> ರಾಜಕೀಯ ಮುಖಂಡರು ಹೇಗೆ ಏಗುತ್ತಾರೆ? ಅವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಅಥವಾ >> ಬಂಡೆದ್ದು ಹೋರಾಡುವುದೂ ಇಲ್ಲ; ಏಕೆಂದರೆ ಅವರು ಅವಮಾನವನ್ನು ಅಂತರ್ಗತ >> ಮಾಡಿಕೊಳ್ಳುವುದಿಲ್ಲ. ಅಂದರೆ, ಅಪಮಾನ >> ವನ್ನು ತಟ್ಟಿಸಿಕೊಳ್ಳುವುದಿಲ್ಲ ಅಥವಾ ಬಯ್ಗುಳಗಳು ಅವಮಾನಕಾರಿ ಎಂದು ಅವರಿಗೆ >> ಅನ್ನಿಸುವುದೇ ಇಲ್ಲ. >> >> ಏಕೆಂದರೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರುವಷ್ಟರಮಟ್ಟಿಗೆ ಅವರ ಪ್ರತಿಷ್ಠೆಯ ಬಿಂಬ >> ಪೆಡಸಾಗಿರುವುದಿಲ್ಲ. ಆದರೆ ಕುಸುಮ ಕೋಮಲವಾಗಿ ತಮ್ಮ ಬಿಂಬವನ್ನು ಕಾಪಾಡಿಕೊಂಡು ಬರುವವರ >> ಸ್ಥಿತಿ ಹಾಗಿರುವುದಿಲ್ಲ. ಅಂಥ ಸೂಕ್ಷ್ಮ ಸಂವೇದನೆ ಇರುವವರು ಹೇಗೆ ಅವಮಾನವನ್ನು >> ಎದುರಿಸಬೇಕು ಎಂಬುದರ ಬಗ್ಗೆ ಹತ್ತಾರು ಉಪಾಯಗಳನ್ನು ಮನೋ >> ವಿಜ್ಞಾನಿಗಳು ಸೂಚಿಸುತ್ತಾರೆ. >> >> ಮೋಹನದಾಸ ಗಾಂಧಿಗೆ ಯಾರೂ ಸೂಚಿಸಿರಲಿಲ್ಲ. ದಕ್ಷಿಣ ಆಫ್ರಿಕದಲ್ಲಿ ರೈಲಿನಿಂದ >> ದಬ್ಬಿಸಿಕೊಂಡ ಆ ಘಟನೆ ಭಾರತದಲ್ಲಿ ಬ್ರಿಟಿಷರ ಆಧಿಪತ್ಯದ ಶವ ಪೆಟ್ಟಿಗೆಗೆ ಬಿದ್ದ ಮೊದಲ >> ಮೊಳೆ ಎನ್ನಿಸಿಕೊಂಡಿತು. ಇಂದಿರಾ ಗಾಂಧಿಯವರನ್ನು ಪ್ರಧಾನಿ ಪಟ್ಟಕ್ಕೆ ಅರ್ಹಳಲ್ಲದ ‘ಗೂಂಗಿ >> ಗುಡಿಯಾ’ (ಮೊದ್ದು ಬೊಂಬೆ) ಎಂದು ಯಾರೆಲ್ಲ ಹಂಗಿಸಿದರು. ಅಂಥ ಅವಮಾನವನ್ನೇ ಯಶಸ್ಸಿನ >> ಮೆಟ್ಟಿಲಾಗಿ ಮಾಡಿಕೊಂಡವರ ಚೇತೋಹಾರಿ ಕತೆಗಳು ಎಷ್ಟೊಂದಿಲ್ಲ?ಅವಮಾನ, ಹೆಮ್ಮೆ, ಆತ್ಮಗೌರವ >> ಎಂಬುದು ವ್ಯಕ್ತಿಗಷ್ಟೇ ಸೀಮಿತವಾಗಿಲ್ಲ. >> >> ಒಂದೊಂದು ಸಮುದಾಯಕ್ಕೂ ಅದರದ್ದೇ ಪ್ರತಿಷ್ಠೆಯ ಬಿಂಬಗಳಿರುತ್ತವೆ. ಒಂದು ಗ್ರಾಮ, ಒಂದು >> ಕೋಮು, ಒಂದು ಭಾಷೆ, ಒಂದು ಧರ್ಮ, ಒಂದು ದೇಶ ಏಕತ್ರವಾಗಿ ತನ್ನ ಬಿಂಬವನ್ನು >> ರೂಪಿಸಿಕೊಂಡಿರುತ್ತದೆ. >> >> ಖಾಪ್ ಪಂಚಾಯತ್ ಎನ್ನಿ, ‘ಮರಾಠಿ ಮಾನುಸ್’ ಎನ್ನಿ, ‘ರಾಜಪೂತ್ ರಕ್ತ’ ಎನ್ನಿ, ಅಂಥ >> ಅಭಿಮಾನವನ್ನು ಪೋಷಿಸುವ, ಅದಕ್ಕಾಗಿ ರಕ್ತ ಹರಿಸುವ, ಸಮೂಹ ಸನ್ನಿ ಸೃಷ್ಟಿಸುವ, ಅಂಥ >> ಬಿಂಬಕ್ಕೆ ಘಾಸಿಯಾದಾಗ ಯುದ್ಧ ಸಾರಿ, ಪ್ರತೀಕಾರಕ್ಕೆ ಹೊರಟು ಅಮಾಯಕರನ್ನು ಬಲಿಹಾಕಿದ >> ಸಂದರ್ಭಗಳು ಚರಿತ್ರೆಯ ಪುಟಗಳಲ್ಲಿ ಅದ್ದಿಬಿದ್ದಿವೆ. >> >> ಅವಮಾನ ನುಂಗಿಕೊಳ್ಳುವುದೂ ಒಂದು ಕಲೆಯೇ. ಚೀನೀಯರು ತಮಗಿಂತ ಕೆಳಗಿನವರ ಜೊತೆ >> ವ್ಯವಹರಿಸುವಾಗ ಕೆಳಗಿನವರು ತಗ್ಗಿನಲ್ಲಿ ಕೂತಿರಬೇಕು. ಸಮಬಲರು ಮಾತ್ರ ಸಮಾನ ಎತ್ತರದಲ್ಲಿ >> ಕೂತಿರಬೇಕು. ಇದು ಅಲ್ಲಿನ ಸಂಪ್ರದಾಯ. ಕ್ರಿ.ಶ. 1900ರಲ್ಲಿ ಚೀನೀಯರು ಪಾಶ್ಚಾತ್ಯರ >> ವಿರುದ್ಧ ದಂಗೆ ಎದ್ದು ಕೊನೆಗೆ ತಾವೇ ಸೋತು ಸುಣ್ಣವಾಗಿ ದಾಳಿಕೋರರ ಜೊತೆಗೆ ಒಂದು >> ಒಪ್ಪಂದಕ್ಕೆ ಬರುತ್ತಾರೆ. >> >> ಅದು ‘ಬಾಕ್ಸರ್ ದಂಗೆ’ ಎಂತಲೇ ಪ್ರಸಿದ್ಧಿ ಪಡೆದಿದೆ. ಭಾರೀ ಅವಮಾನಕಾರಿ ಎನಿಸುವ >> ಒಪ್ಪಂದಕ್ಕೆ ಸಹಿ ಹಾಕಲೇಬೇಕಾದ ಅನಿವಾರ್ಯತೆ ಚೀನೀಯರಿಗೆ ಬರುತ್ತದೆ. ಆದರೆ ಚೀನಾದವರು >> ಮಾತ್ರ ತಾವೇ ಗೆದ್ದೆವೆಂದು ಹೇಳುತ್ತಾರೆ. ಏಕೆಂದರೆ ಆ ಒಪ್ಪಂದಕ್ಕೆ ಸಹಿ ಮಾಡುವಾಗ >> ವಿದೇಶಿಯರು ಕೂರಬೇಕಾದ ಆಸನಗಳ ಕಾಲುಗಳ ತಳಭಾಗವನ್ನು ಅವರಿಗೆ ಗೊತ್ತಾಗದಂತೆ ಗರಗಸದಲ್ಲಿ >> ಅರ್ಧ ಇಂಚು ಕತ್ತರಿಸಿದ್ದರಂತೆ. >> >> ತಗ್ಗಿನಲ್ಲಿ ಕೂತು ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ವಿದೇಶೀಯರದ್ದೇ ಮರ್ಯಾದೆ ಹೋಯಿತೆಂದು >> ಚೀನೀಯರು ಈಗಲೂ ಭಾವಿಸುತ್ತಾರೆ. ಮೊನ್ನೆ ಚೀನೀಯರಿಗೆ ಮತ್ತೆ ಅಪಮಾನವಾಗಿದೆ. ದಕ್ಷಿಣ ಚೀನಾ >> ಸಮುದ್ರದ ಭೂಭಾಗದ ಮೇಲೆ ಅವರಿಗೆ ಹಕ್ಕಿಲ್ಲ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಹೇಳಿದೆ. ಈಗ >> ಚೀನೀಯರು ಮತ್ತೆ ಅದೆಂಥ ಗರಗಸ ಹುಡುಕುತ್ತಾರೊ ನೋಡಬೇಕು. >> >> ವೈಯಕ್ತಿಕ ಅವಮಾನದ ವಿಷಯ ಚರ್ಚೆಗೆ ಬಂದಾಗ, ರಾಜಕೀಯ ಮನೋವಿಜ್ಞಾನ ತಜ್ಞ ಆಶಿಶ್ ನಂದಿ >> ತಮ್ಮ ಅಪ್ಪನ ಕುರಿತು ಒಂದು ಚಂದದ ಕತೆ ಹೇಳುತ್ತಾರೆ. ಅವರ ಅಪ್ಪ (ಕ್ರಿಶ್ಚಿಯನ್ ಆಗಿದ್ದರೂ) >> ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಶಾಲೆಯಲ್ಲಿ ಓದುತ್ತಿದ್ದಾಗ >> ಮೇಷ್ಟ್ರು ಕೇಳಿದ ಪ್ರಶ್ನೆಗೆ ಬೇರೆ ಯಾರೂ ಉತ್ತರಿಸದಿದ್ದಾಗ ‘ಹೇ ಮ್ಲೇಚ್ಛಾ ನೀನೇ ಹೇಳು!’ >> ಎಂದು ನಂದಿಗೆ ಆಜ್ಞಾಪಿಸುತ್ತಿದ್ದರಂತೆ. >> >> ‘ಮ್ಲೇಚ್ಛ’ ಎಂದರೆ ಭಾರೀ ಅಪಮಾನಕರ ಬೈಗುಳ ಆಗಿದ್ದರೂ ಈ ಹುಡುಗ ತುಸುವೂ ಬೇಸರಿಸದೆ >> ಸರಿಯಾದ ಉತ್ತರವನ್ನು ಹೇಳುತ್ತಿದ್ದರಂತೆ. ಬೈದವನೂ ಖುಷ್, ಬೈಸಿಕೊಂಡವನೂ ಖುಷ್. ಶಾಲಾ >> ಮಕ್ಕಳಿರಲಿ, ಪೊಲೀಸ್ ಅಧಿಕಾರಿಯಿರಲಿ, ತೀರ ಅವಮಾನದ ಸಂದರ್ಭದಲ್ಲಿ ಹೇಗೆ ತಮ್ಮನ್ನು ತಾವೇ >> ನಿಭಾಯಿಸಬೇಕು ಎಂಬ ಬಗ್ಗೆ ಪಠ್ಯಗಳಲ್ಲಿ, ಸೇವಾ ನಿಯಮಗಳಲ್ಲಿ ಸೂಕ್ತ ಮನೋವೈಜ್ಞಾನಿಕ >> ಸೂತ್ರಗಳನ್ನು ಅಳವಡಿಸಬೇಕು. ಅಳವಡಿಸಬೇಕೆಂದು ಮೇಲಿನವರಿಗೆ ಸಲಹೆ ಕೊಡುವವರು ಕೂಡ ಎಂಥ >> ಬೈಗುಳವನ್ನೂ ಅವಮಾನವನ್ನೂ ಸಹಿಸಲು ಸಮರ್ಥರೇ ಆಗಿರಬೇಕು. >> >> Hareeshkumar K >> GHS HUSKURU >> MALAVALLI TQ >> MANDYA DT >> MOB 9880328224 >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
