Very good arrival sir. thank u .
On Jul 16, 2016 7:04 PM, "HAREESHKUMAR K Agasanapura" <[email protected]>
wrote:

> http://m.prajavani.net/article/2016_07_14/423603
>
> *ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ*
>
> 14 Jul, 2016
>
> ನಾಗೇಶ್ ಹೆಗಡೆ
>
> <https://www.facebook.com/sharer/sharer.php?u=http%3A%2F%2Fgoo.gl%2FfYSdF5>
> <https://twitter.com/intent/tweet?text=%E0%B2%85%E0%B2%B5%E0%B2%AE%E0%B2%BE%E0%B2%A8%2C++%E0%B2%B8%E0%B3%8D%E0%B2%B5%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86+http%3A%2F%2Fgoo.gl%2FfYSdF5>
> <https://plus.google.com/share?url=http%3A%2F%2Fgoo.gl%2FfYSdF5>
> <http://www.pinterest.com/pin/find/?url=http%3A%2F%2Fgoo.gl%2FfYSdF5>
> <http://www.linkedin.com/shareArticle?mini=true&title=%E0%B2%85%E0%B2%B5%E0%B2%AE%E0%B2%BE%E0%B2%A8%2C++%E0%B2%B8%E0%B3%8D%E0%B2%B5%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86+&url=http%3A%2F%2Fgoo.gl%2FfYSdF5>
>
> ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ನಾಲ್ಕೂ ಆತ್ಮಹತ್ಯೆಗಳಲ್ಲಿ ಕಂಡುಬಂದ ಒಂದು ಸಮಾನ ಅಂಶ
> ಏನು ಗೊತ್ತೆ? ಅಪಮಾನ. ಹದಿನಾಲ್ಕರ ಹರೆಯದ ಹೈಸ್ಕೂಲ್ ವಿದ್ಯಾರ್ಥಿ ರೌನಕ್ ಬ್ಯಾನರ್ಜಿ
> ಶಾಲೆಯಿಂದ ಬಂದವನೇ 19ನೇ ಅಂತಸ್ತಿನ ತನ್ನ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಪ್ರಾಣ
> ಕಳೆದುಕೊಂಡ.
>
> ‘ಕಿಲಾಡಿ ಹುಡುಗರ ಒಂದಿಡೀ ತಂಡ ಪ್ರತಿದಿನವೂ ನನ್ನನ್ನು ಛೇಡಿಸಿ ಅವಮಾನ ಮಾಡುತ್ತಿದೆ.
> ನನ್ನಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥದ ಚೀಟಿಯೊಂದು ಅವನ
> ಬ್ಯಾಗಿನಲ್ಲಿತ್ತು. ಇನ್ನು, ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ ಮತ್ತು ಇನ್ನೊಬ್ಬ
> ಡಿವೈಎಸ್‌ಪಿ ಎಂ.ಕೆ.ಗಣಪತಿ ಕೂಡ ತಮ್ಮ ಆತ್ಮಹತ್ಯೆಗೆ ಯಾವ ಸಂದರ್ಭಗಳು ಕಾರಣ ಎಂಬುದರ ದಾಖಲೆ
> ಉಳಿಸಿಯೇ ನೇಣಿಗೆ ತಲೆ ಕೊಟ್ಟಿದ್ದಾರೆ.
>
> ರೌನಕ್ ಮಾದರಿಯಲ್ಲಿ ತನಗೆ ಅಪಮಾನವಾಗಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಮೇಲಿನವರ ಎದುರು
> ತನಗೆ ಮುಖಭಂಗವಾಗಿದೆ, ತನ್ನ ವ್ಯಕ್ತಿತ್ವದ ಅವಹೇಳನವಾಗಿದೆ ಎಂಬುದರ ಬಗ್ಗೆ ಧಾರಾಳ
> ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾರೆ.
>
> ಈ ಘಟನೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗಲೇ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ
> ಓದುತ್ತಿದ್ದ 23ರ ಯುವತಿ ಸೋಫಿಯಾ ಜುಲೈ 10ರಂದು ತನ್ನ ಹಾಸ್ಟೆಲಿನಲ್ಲಿ ನೇಣು ಹಾಕಿಕೊಂಡಳು.
> ಅವಳು ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸಂಗತಿ ಅಮ್ಮನಿಗೆ ಗೊತ್ತಾಗಿತ್ತು.
>
> ಮಾಧ್ಯಮಗಳ ವರದಿಯ ಪ್ರಕಾರ, ಮಗಳ ಶಿಕ್ಷಣ ಶುಲ್ಕವನ್ನು ಕಟ್ಟಲೆಂದು ಎರಡು ದಿನಗಳ ಹಿಂದೆ
> ಕಾಲೇಜಿಗೆ ಬಂದ ಅಮ್ಮ ಎಲ್ಲ ವಿದ್ಯಾರ್ಥಿನಿಯರ ಎದುರು ಸೋಫಿಯಾಗೆ ಬೈದಿದ್ದಳು. ಅದನ್ನೇ
> ಮನಸ್ಸಿಗೆ ಹಚ್ಚಿಕೊಂಡ ಯುವತಿ ಅದೆಷ್ಟು ಹಿಂಸೆಪಟ್ಟಳೊ, ಇಹಲೋಕ ತ್ಯಜಿಸಿದಳು. ಅಪಮಾನ
> ಎಂಬುದು ಅಷ್ಟೊಂದು ತೀವ್ರವಾಗಿ ಮನಸ್ಸನ್ನು ಘಾಸಿ ಮಾಡುತ್ತದೆಯೆ?
>
> ಎಚ್ಚರವಿದ್ದಷ್ಟು ಹೊತ್ತೂ ನಮ್ಮ ಮನಸ್ಸು ನಾನಾ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತದೆ.
> ಸಂತಸ, ಉದ್ವೇಗ, ಜಿಗುಪ್ಸೆ, ಕಾತರ, ಶಂಕೆ, ಚಿಂತೆ, ಉಮ್ಮಳ, ಅಪಮಾನ, ಹೆಮ್ಮೆ, ನಾಚಿಕೆ,
> ದುಃಖ, ಭಯ, ಅಸೂಯೆ, ಲಜ್ಜೆ, ಕೋಪ, ಹತಾಶೆ, ಸಂತೃಪ್ತಿ ಹೀಗೆ ನಾನಾ ಬಗೆಯ ಭಾವನೆಗಳು
> ಮಿದುಳಿನಲ್ಲಿ ಮೂಡುತ್ತಿರುತ್ತವೆ. ಕೆಲವು ಮೂಡುತ್ತವೆ, ಮತ್ತೆ ಹಾಗೇ ಮಾಯವಾಗುತ್ತವೆ.
>
> ಕೆಲವು ಘಟನೆಗಳನ್ನು ಮನಸ್ಸು ಮತ್ತೆ ಮತ್ತೆ ಮಥಿಸುತ್ತಿರುತ್ತದೆ. ಮನೋವಿಜ್ಞಾನಿಗಳ ಪ್ರಕಾರ
> ಈ ಹತ್ತು ಹಲವು ಭಾವನೆಗಳಲ್ಲಿ ಅಪಮಾನವೇ ಎಲ್ಲಕ್ಕಿಂತ ಹೆಚ್ಚು ಹೊತ್ತು ಮನಸ್ಸಿನಲ್ಲಿ
> ಕೂತಿರುತ್ತದೆ. ಮತ್ತೆ ಮತ್ತೆ ಮನಸ್ಸನ್ನು ಕಲಕುತ್ತಿರುತ್ತದೆ, ಕಾಡುತ್ತಿರುತ್ತದೆ.
> ಪ್ರತೀಕಾರಕ್ಕೆ ಹಪಹಪಿಸುತ್ತದೆ. ಅದಕ್ಕೆ ಅವಕಾಶ ಇಲ್ಲದ ಸಂದರ್ಭದಲ್ಲಿ ಮನಸ್ಸು ಇಡೀ
> ದೇಹವನ್ನೇ ದಂಡಿಸುತ್ತದೆ. ಆತ್ಮಘಾತುಕ ಕೃತ್ಯಕ್ಕೆ ದೇಹವನ್ನು ತಳ್ಳುತ್ತದೆ.
>
> ಅದನ್ನು ವಿಜ್ಞಾನಿಗಳೇ ಹೇಳಬೇಕೆಂದೇನಿಲ್ಲ. ನಾಲ್ಕು ಜನರ ಎದುರಿಗೆ ಆಗುವ ಅವಮಾನದ ನೋವು
> ಎಷ್ಟೆಂಬುದು ನಮಗೂ ಗೊತ್ತಿದೆ. ವೈರಿಯ ದೇಹಕ್ಕೆ ಗಾಯ ಮಾಡುವುದಕ್ಕಿಂತ ಆತನ/ಆಕೆಯ ಮನಸ್ಸಿಗೆ
> ಗಾಯ ಮಾಡಿದರೇ ಹೆಚ್ಚು ನೋವಾಗುತ್ತದೆ ಎಂಬುದು ಎಲ್ಲ ಸಮಾಜದ ಎಲ್ಲರಿಗೂ ಗೊತ್ತಿದೆ.
>
> ವೈರಿಯ ದೇಹವನ್ನು ಇರಿಯಲು ಬಳಸುವ ಶಸ್ತ್ರಾಸ್ತ್ರಗಳಿಗಿಂತ ಅದೆಷ್ಟೋ ಪಟ್ಟು ವೈವಿಧ್ಯಮಯ
> ಶಸ್ತ್ರಗಳು ಬೈಗುಳಗಳ ರೂಪದಲ್ಲಿ ವಿಕಾಸಗೊಂಡಿವೆ (ಅದನ್ನು ನಾವು ಈಗಿನ ವಿಧಾನ ಸಭೆಯ
> ಅಧಿವೇಶನದಲ್ಲಿ, ಅದರಲ್ಲೂ ಆತ್ಮಹತ್ಯೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲೇ ನೋಡುತ್ತಿದ್ದೇವೆ).
>
> ಮುಕ್ತ ಸಮಾಜದಲ್ಲಿ ಅಂಥ ‘ಹರಿತ ನಾಲಗೆ’ಗೆ ಪೂರಕವಾಗಿ ಚಪ್ಪಲು, ಮಸಿ, ಮೂತ್ರ, ಅರೆಮುಂಡನ,
> ಕತ್ತೆ ಮೆರವಣಿಗೆಯೇ ಮುಂತಾದ ಅಷ್ಟೇನೂ ದೇಹಕ್ಕೆ ಅಪಾಯಕಾರಿಯಲ್ಲದ, ಆದರೆ ಆತ್ಮಗೌರವವನ್ನು
> ಕ್ರೂರವಾಗಿ ಘಾಸಿಗೊಳಿಸಬಲ್ಲ ನಾನಾ ಬಗೆಯ ಶಸ್ತ್ರಗಳು ರೂಪುಗೊಂಡಿವೆ.
>
> ಈಗೀಗಂತೂ ವರದಿಯಾಗುವ ಬಹಳಷ್ಟು ಆತ್ಮಹತ್ಯೆ ಪ್ರಕರಣಗಳಿಗೆ ಅವಮಾನವೇ ಮುಖ್ಯ ಕಾರಣ
> ಇದ್ದೀತೆಂದು ಯಾರೂ ತರ್ಕಿಸಬಹುದಾಗಿದೆ. ವರದಕ್ಷಿಣೆ ಪೀಡನೆಯಿಂದ ಹೆಣ್ಣುಮಗಳೊಬ್ಬಳು ಬೆಂಕಿ
> ಹಚ್ಚಿಕೊಂಡು ಸಾವಪ್ಪಿದಳೆಂದು ದಾಖಲಾದರೂ ಯಾವುದೋ ಕ್ಷಣದಲ್ಲಿ ತನ್ನ ತವರಿನ ಪ್ರತಿಷ್ಠೆಗೆ
> ಧಕ್ಕೆ ಬಂತೆಂದೋ, ತನ್ನ ಪ್ರೀತಿಯ ಅಪ್ಪನಿಗೆ ಅಪಮಾನ ಮಾಡಿದರೆಂದೋ ಮನಸ್ಸು ತೀರಾ
> ಘಾಸಿಗೊಂಡಿರುತ್ತದೆ.
>
> ರೈತರ ಆತ್ಮಹತ್ಯೆಯಲ್ಲೂ ಸಾಲದ ಹೊರೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸ್ವಯಂ
> ಪ್ರತಿಷ್ಠೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಎಂಥದ್ದೋ ಮಾತು ಯಾರದ್ದೋ ಬಾಯಿಂದ
> ಬಂದಿದ್ದೇ ಮುಖ್ಯ ಕಾರಣ ಇದ್ದೀತು. ಇಷ್ಟಕ್ಕೂ ಅಪಮಾನ ಬೇರೆಯವರಿಂದಲೇ ಆಗಬೇಕಿಲ್ಲ.
> ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಆತ್ಮಗೌರವವನ್ನು ತಾವೇ
> ಅಪಮೌಲ್ಯಗೊಳಿಸಿಕೊಳ್ಳುತ್ತಾರೆ. ಆತ್ಮಹತ್ಯೆಯ ದಾರಿ ಹುಡುಕುತ್ತಾರೆ.
>
> ಕಳೆದ ಮಾರ್ಚ್ 1ರಂದು, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ನೇಹಾ ರೆಡ್ಡಿ ಎಂಬ
> ಯುವತಿ ತನ್ನ ಬಾಯ್‌ಫ್ರೆಂಡ್ ಭೇಟಿಗೆ ಹೋಗಿ ಅದೆಂಥ ಅವಮಾನವಾಯಿತೊ, ಆತನ ಮನೆಯ ಛಾವಣಿಯಿಂದ
> ಕೆಳಕ್ಕೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡಳು. ಅದೇ ತಿಂಗಳು 30ರಂದು ಬೆಂಗಳೂರಿನ ಕೇಂಬ್ರಿಜ್
> ಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಪಾರ್ಥಿಬನ್ ಎಂಬ ಹುಡುಗ ಮನೆಗೆ ಬಂದವನೇ ನೇಣು
> ಹಾಕಿಕೊಂಡ.
>
> ‘ನಿಮ್ಮ ಮಗನಿಗೆ ಬೇರೆ ಯಾವುದಾದರೂ ಶಾಲೆಯನ್ನು ನೋಡಿಕೊಳ್ಳಿ. ಇಷ್ಟೊಂದು ವಿಷಯಗಳಲ್ಲಿ
> ಫೇಲ್ ಆಗುವ ಆತ ನಮಗೆ ಬೇಡ’ ಎಂದು ಶಾಲೆಯವರು ಪಾಲಕರಿಗೆ ಬರೆದಿದ್ದ ಪತ್ರ ಆತನ
> ಚೀಲದಲ್ಲಿತ್ತು.
>
> ಇವೆಲ್ಲ ಅವಮಾನದ ಮೇಲ್ನೋಟಗಳಾದವು. ಆದರೆ ಅವಮಾನಿತ ಮಿದುಳಲ್ಲಿ ಏನಾಗುತ್ತದೆ ಎಂಬ ಚಿತ್ರಣ
> ಬೇಕಲ್ಲ? ಅವಮಾನವೇ ಅತಿ ಕ್ರೂರ ಮನೋದಂಡನೆ ಹೌದೆ ಅಲ್ಲವೇ ಎಂಬುದನ್ನು ಅಳೆದು ನೋಡಬೇಕಲ್ಲ?
> ಆಮ್‌ಸ್ಟರ್ಡಾಮ್ ವಿಶ್ವವಿದ್ಯಾಲಯದ ಇಬ್ಬರು ಮನೋವಿಜ್ಞಾನಿಗಳು ಅದನ್ನು ಅಳೆಯಲು ಹೊರಟರು.
>
> ಪ್ರಯೋಗಕ್ಕೆ ತಲೆಯೊಡ್ಡಲು ಬಂದ ಯುವಕ, ಯುವತಿಯರ ತಲೆಗೆ ಇಇಜಿ ಬಿಲ್ಲೆಗಳನ್ನು ಅಂಟಿಸಿ
> ಕೈಗೆ ಕತೆ ಪುಸ್ತಕ ಕೊಟ್ಟರು. ಕತೆಯಲ್ಲಿ ಬರುವ ವ್ಯಕ್ತಿ ತಾನೇ ಎಂದು ಪರಿಗಣಿಸಿ ಮನಸ್ಸು
> ಕೊಟ್ಟು ಓದಲು ಹೇಳಿದರು. ದುಃಖ, ನಿರಾಸೆ, ಅವಮಾನ, ಕೋಪ ಬರುವಂಥ ವಿವಿಧ ಸನ್ನಿವೇಶಗಳು
> ಕತೆಗಳಲ್ಲಿದ್ದವು.
>
> ಉದಾ: ಅಂತರ್ಜಾಲದಲ್ಲಿ ಪರಿಚಯಗೊಂಡು ಪರಸ್ಪರ ಪ್ರೇಮಿಗಳಾದ ಇಬ್ಬರು ಕೊನೆಗೂ
> ಭೇಟಿಯಾಗುತ್ತಾರೆ. ಮೊದಲ ನೋಟದಲ್ಲೇ ನಿರಾಸೆಯಾಗಿ ಮುಖ ತಿರುಗಿಸಿ, ಒಂದೂ ಮಾತಾಡದೆ ಹಠಾತ್
> ಆತ ಹೊರಟು ಹೋದಾಗ ಇವಳಿಗೆ ತೀವ್ರ ಮುಖಭಂಗವಾಗುತ್ತದೆ.
>
> ಅದು ಒಂದು ಕತೆಯಾದರೆ, ಅಮ್ಮನಿಗೆ ಬೈದು ಊಟವನ್ನು ಅರ್ಧಕ್ಕೇ ಬಿಟ್ಟು ಏಳುವಾಗ ಅಮ್ಮ
> ಹಠಾತ್ತಾಗಿ ಅಳುವ ಕತೆ ಇನ್ನೊಂದು. ಹೀಗೆ ತನ್ಮಯರಾಗಿ ಕತೆ ಓದುತ್ತಿದ್ದವರ ಮಿದುಳಿನಲ್ಲಿ
> ಉಕ್ಕುವ ವಿದ್ಯುತ್ ಕಾಂತೀಯ ತರಂಗಗಳನ್ನು ವಿಜ್ಞಾನಿಗಳು ಆಲೇಖದ ರೂಪದಲ್ಲಿ
> ದಾಖಲಿಸಿಕೊಳ್ಳುತ್ತಿದ್ದರು. ಕೊನೆಯಲ್ಲಿ ಇಇಜಿ ಸ್ಕ್ಯಾನ್‌ನಲ್ಲಿ ಮೂಡಿದ ರೇಖೆಗಳನ್ನು
> ವಿಶ್ಲೇಷಣೆ ಮಾಡಿದರು. ಅವಮಾನದ ಸಂದರ್ಭಗಳಲ್ಲೇ ಮಿದುಳು ಎಲ್ಲಕ್ಕಿಂತ ತೀವ್ರ
> ವಿಹ್ವಲತೆಯನ್ನು ದಾಖಲಿಸಿತ್ತು.
>
> ಏಕೆ ಹೀಗಾಗುತ್ತದೆ? ದೇಹಕ್ಕೆ ಗಾಯವಾದರೆ ಅದರ ನೆನಪು ಆಗಾಗ ಬರುತ್ತದೆ ನಿಜ; ಆದರೆ ಹಳೆಯ
> ನೋವು ಮರುಕಳಿಸುವುದಿಲ್ಲ. ಆದರೆ ಅವಮಾನದ ವಿಷಯ ಹಾಗಲ್ಲ.ಅದರ ನೆನಪು ಹಸಿಯಾಗಿದ್ದಷ್ಟು
> ಹೊತ್ತೂ ನೋವಿನ ತೀವ್ರತೆ ಅಷ್ಟೇ ಇರುತ್ತದೆ. ಅಥವಾ ಅಂಥದ್ದೇ ಬೇರೆ ಘಟನೆಗಳನ್ನು ತಳಕು
> ಹಾಕಿಕೊಂಡು ನೋವು ಹೆಚ್ಚಲೂಬಹುದು.
>
> ವಿದ್ಯಾರ್ಥಿ ರೌನಕ್‌ಗೆ ಇಂದಿನ ಅವಮಾನದ ಜೊತೆ ನಿನ್ನೆಯ, ಮೊನ್ನೆಯ ಅವಮಾನಗಳೂ ಒಟ್ಟಾಗಿ
> ನುಗ್ಗಿ ತೀವ್ರತೆಯನ್ನು ಹೆಚ್ಚಿಸಿದ ಹಾಗೆ. ದೈಹಿಕ ಗಾಯದಲ್ಲಿ ಹೀಗಾಗುವುದಿಲ್ಲ. ಅಗಲಿಕೆಯ
> ದುಃಖದಲ್ಲೂ ಹೀಗಾಗುವುದಿಲ್ಲ ಏಕೆಂದರೆ ಅಲ್ಲಿ ಸ್ವಯಂ ಪ್ರತಿಷ್ಠೆಯ ಪ್ರಶ್ನೆ ಬರುವುದಿಲ್ಲ.
> ಮಿದುಳು ತನ್ನ ವ್ಯಕ್ತಿತ್ವದ ಒಂದು ಬಿಂಬ
> ವನ್ನು ತಾನೇ ಸೃಷ್ಟಿ ಮಾಡಿಕೊಂಡಿರುತ್ತದೆ.
>
> ಬದುಕುಳಿಯುವ ಹೋರಾಟದಲ್ಲಿ, ಪೈಪೋಟಿಯಲ್ಲಿ ಆತ್ಮಪ್ರತಿಷ್ಠೆಯ ಈ ಬಿಂಬವೇ ದೇಹ ಮತ್ತು
> ಮನಸ್ಸಿಗೆ ಸೂಕ್ತ ಚಾಲನೆ ಕೊಡುತ್ತಿರುತ್ತದೆ. ಅವಮಾನ ಆದಾಗ ಈ ಬಿಂಬಕ್ಕೇ ಧಕ್ಕೆ ಬರುತ್ತದೆ.
> ಕೆಲವು ಮಿದುಳುಗಳು ಸೇಡಿನ ಕಿಡಿ ಹೊಮ್ಮಿಸಿ, ಫೂಲನ್ ದೇವಿಯ ಹಾಗೆ ಸಡ್ಡು ಹೊಡೆಯಬಹುದು.
> ಅಳ್ಳೆದೆಯ ನತದೃಷ್ಟರ ಮಿದುಳು ಮಾತ್ರ ಈ ಬಿಂಬವನ್ನೇ ಹೊಸಕಿ ಹಾಕಲು ಸಜ್ಜಾಗುತ್ತದೆ.
>
> ಹಾಗಿದ್ದರೆ ದಿನದಿನವೂ ಅವಮಾನಕ್ಕೆ ತುತ್ತಾಗುವ ದಲಿತರು, ಮಾಣಿಗಳು, ಪೇದೆಗಳು, ಅಷ್ಟೇಕೆ-
> ರಾಜಕೀಯ ಮುಖಂಡರು ಹೇಗೆ ಏಗುತ್ತಾರೆ? ಅವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಅಥವಾ
> ಬಂಡೆದ್ದು ಹೋರಾಡುವುದೂ ಇಲ್ಲ; ಏಕೆಂದರೆ ಅವರು ಅವಮಾನವನ್ನು ಅಂತರ್ಗತ
> ಮಾಡಿಕೊಳ್ಳುವುದಿಲ್ಲ. ಅಂದರೆ, ಅಪಮಾನ
> ವನ್ನು ತಟ್ಟಿಸಿಕೊಳ್ಳುವುದಿಲ್ಲ ಅಥವಾ ಬಯ್ಗುಳಗಳು ಅವಮಾನಕಾರಿ ಎಂದು ಅವರಿಗೆ
> ಅನ್ನಿಸುವುದೇ ಇಲ್ಲ.
>
> ಏಕೆಂದರೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರುವಷ್ಟರಮಟ್ಟಿಗೆ ಅವರ ಪ್ರತಿಷ್ಠೆಯ ಬಿಂಬ
> ಪೆಡಸಾಗಿರುವುದಿಲ್ಲ. ಆದರೆ ಕುಸುಮ ಕೋಮಲವಾಗಿ ತಮ್ಮ ಬಿಂಬವನ್ನು ಕಾಪಾಡಿಕೊಂಡು ಬರುವವರ
> ಸ್ಥಿತಿ ಹಾಗಿರುವುದಿಲ್ಲ. ಅಂಥ ಸೂಕ್ಷ್ಮ ಸಂವೇದನೆ ಇರುವವರು ಹೇಗೆ ಅವಮಾನವನ್ನು
> ಎದುರಿಸಬೇಕು ಎಂಬುದರ ಬಗ್ಗೆ ಹತ್ತಾರು ಉಪಾಯಗಳನ್ನು ಮನೋ
> ವಿಜ್ಞಾನಿಗಳು ಸೂಚಿಸುತ್ತಾರೆ.
>
> ಮೋಹನದಾಸ ಗಾಂಧಿಗೆ ಯಾರೂ ಸೂಚಿಸಿರಲಿಲ್ಲ. ದಕ್ಷಿಣ ಆಫ್ರಿಕದಲ್ಲಿ ರೈಲಿನಿಂದ ದಬ್ಬಿಸಿಕೊಂಡ
> ಆ ಘಟನೆ ಭಾರತದಲ್ಲಿ ಬ್ರಿಟಿಷರ ಆಧಿಪತ್ಯದ ಶವ ಪೆಟ್ಟಿಗೆಗೆ ಬಿದ್ದ ಮೊದಲ ಮೊಳೆ
> ಎನ್ನಿಸಿಕೊಂಡಿತು. ಇಂದಿರಾ ಗಾಂಧಿಯವರನ್ನು ಪ್ರಧಾನಿ ಪಟ್ಟಕ್ಕೆ ಅರ್ಹಳಲ್ಲದ ‘ಗೂಂಗಿ
> ಗುಡಿಯಾ’ (ಮೊದ್ದು ಬೊಂಬೆ) ಎಂದು ಯಾರೆಲ್ಲ ಹಂಗಿಸಿದರು. ಅಂಥ ಅವಮಾನವನ್ನೇ ಯಶಸ್ಸಿನ
> ಮೆಟ್ಟಿಲಾಗಿ ಮಾಡಿಕೊಂಡವರ ಚೇತೋಹಾರಿ ಕತೆಗಳು ಎಷ್ಟೊಂದಿಲ್ಲ?ಅವಮಾನ, ಹೆಮ್ಮೆ, ಆತ್ಮಗೌರವ
> ಎಂಬುದು ವ್ಯಕ್ತಿಗಷ್ಟೇ ಸೀಮಿತವಾಗಿಲ್ಲ.
>
> ಒಂದೊಂದು ಸಮುದಾಯಕ್ಕೂ ಅದರದ್ದೇ ಪ್ರತಿಷ್ಠೆಯ ಬಿಂಬಗಳಿರುತ್ತವೆ. ಒಂದು ಗ್ರಾಮ, ಒಂದು
> ಕೋಮು, ಒಂದು ಭಾಷೆ, ಒಂದು ಧರ್ಮ, ಒಂದು ದೇಶ ಏಕತ್ರವಾಗಿ ತನ್ನ ಬಿಂಬವನ್ನು
> ರೂಪಿಸಿಕೊಂಡಿರುತ್ತದೆ.
>
> ಖಾಪ್ ಪಂಚಾಯತ್ ಎನ್ನಿ, ‘ಮರಾಠಿ ಮಾನುಸ್’ ಎನ್ನಿ, ‘ರಾಜಪೂತ್ ರಕ್ತ’ ಎನ್ನಿ, ಅಂಥ
> ಅಭಿಮಾನವನ್ನು ಪೋಷಿಸುವ, ಅದಕ್ಕಾಗಿ ರಕ್ತ ಹರಿಸುವ, ಸಮೂಹ ಸನ್ನಿ ಸೃಷ್ಟಿಸುವ, ಅಂಥ
> ಬಿಂಬಕ್ಕೆ ಘಾಸಿಯಾದಾಗ ಯುದ್ಧ ಸಾರಿ, ಪ್ರತೀಕಾರಕ್ಕೆ ಹೊರಟು ಅಮಾಯಕರನ್ನು ಬಲಿಹಾಕಿದ
> ಸಂದರ್ಭಗಳು ಚರಿತ್ರೆಯ ಪುಟಗಳಲ್ಲಿ ಅದ್ದಿಬಿದ್ದಿವೆ.
>
> ಅವಮಾನ ನುಂಗಿಕೊಳ್ಳುವುದೂ ಒಂದು ಕಲೆಯೇ. ಚೀನೀಯರು ತಮಗಿಂತ ಕೆಳಗಿನವರ ಜೊತೆ
> ವ್ಯವಹರಿಸುವಾಗ ಕೆಳಗಿನವರು ತಗ್ಗಿನಲ್ಲಿ ಕೂತಿರಬೇಕು. ಸಮಬಲರು ಮಾತ್ರ ಸಮಾನ ಎತ್ತರದಲ್ಲಿ
> ಕೂತಿರಬೇಕು. ಇದು ಅಲ್ಲಿನ ಸಂಪ್ರದಾಯ. ಕ್ರಿ.ಶ. 1900ರಲ್ಲಿ ಚೀನೀಯರು ಪಾಶ್ಚಾತ್ಯರ
> ವಿರುದ್ಧ ದಂಗೆ ಎದ್ದು ಕೊನೆಗೆ ತಾವೇ ಸೋತು ಸುಣ್ಣವಾಗಿ ದಾಳಿಕೋರರ ಜೊತೆಗೆ ಒಂದು
> ಒಪ್ಪಂದಕ್ಕೆ ಬರುತ್ತಾರೆ.
>
> ಅದು ‘ಬಾಕ್ಸರ್ ದಂಗೆ’ ಎಂತಲೇ ಪ್ರಸಿದ್ಧಿ ಪಡೆದಿದೆ. ಭಾರೀ ಅವಮಾನಕಾರಿ ಎನಿಸುವ
> ಒಪ್ಪಂದಕ್ಕೆ ಸಹಿ ಹಾಕಲೇಬೇಕಾದ ಅನಿವಾರ್ಯತೆ ಚೀನೀಯರಿಗೆ ಬರುತ್ತದೆ. ಆದರೆ ಚೀನಾದವರು
> ಮಾತ್ರ ತಾವೇ ಗೆದ್ದೆವೆಂದು ಹೇಳುತ್ತಾರೆ. ಏಕೆಂದರೆ ಆ ಒಪ್ಪಂದಕ್ಕೆ ಸಹಿ ಮಾಡುವಾಗ
> ವಿದೇಶಿಯರು ಕೂರಬೇಕಾದ ಆಸನಗಳ ಕಾಲುಗಳ ತಳಭಾಗವನ್ನು ಅವರಿಗೆ ಗೊತ್ತಾಗದಂತೆ ಗರಗಸದಲ್ಲಿ
> ಅರ್ಧ ಇಂಚು ಕತ್ತರಿಸಿದ್ದರಂತೆ.
>
> ತಗ್ಗಿನಲ್ಲಿ ಕೂತು ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ವಿದೇಶೀಯರದ್ದೇ ಮರ್ಯಾದೆ ಹೋಯಿತೆಂದು
> ಚೀನೀಯರು ಈಗಲೂ ಭಾವಿಸುತ್ತಾರೆ. ಮೊನ್ನೆ ಚೀನೀಯರಿಗೆ ಮತ್ತೆ ಅಪಮಾನವಾಗಿದೆ. ದಕ್ಷಿಣ ಚೀನಾ
> ಸಮುದ್ರದ ಭೂಭಾಗದ ಮೇಲೆ ಅವರಿಗೆ ಹಕ್ಕಿಲ್ಲ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಹೇಳಿದೆ. ಈಗ
> ಚೀನೀಯರು ಮತ್ತೆ ಅದೆಂಥ ಗರಗಸ ಹುಡುಕುತ್ತಾರೊ ನೋಡಬೇಕು.
>
> ವೈಯಕ್ತಿಕ ಅವಮಾನದ ವಿಷಯ ಚರ್ಚೆಗೆ ಬಂದಾಗ, ರಾಜಕೀಯ ಮನೋವಿಜ್ಞಾನ ತಜ್ಞ ಆಶಿಶ್ ನಂದಿ ತಮ್ಮ
> ಅಪ್ಪನ ಕುರಿತು ಒಂದು ಚಂದದ ಕತೆ ಹೇಳುತ್ತಾರೆ. ಅವರ ಅಪ್ಪ (ಕ್ರಿಶ್ಚಿಯನ್ ಆಗಿದ್ದರೂ)
> ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಶಾಲೆಯಲ್ಲಿ ಓದುತ್ತಿದ್ದಾಗ
> ಮೇಷ್ಟ್ರು ಕೇಳಿದ ಪ್ರಶ್ನೆಗೆ ಬೇರೆ ಯಾರೂ ಉತ್ತರಿಸದಿದ್ದಾಗ ‘ಹೇ ಮ್ಲೇಚ್ಛಾ ನೀನೇ ಹೇಳು!’
> ಎಂದು ನಂದಿಗೆ ಆಜ್ಞಾಪಿಸುತ್ತಿದ್ದರಂತೆ.
>
> ‘ಮ್ಲೇಚ್ಛ’ ಎಂದರೆ ಭಾರೀ ಅಪಮಾನಕರ ಬೈಗುಳ ಆಗಿದ್ದರೂ ಈ ಹುಡುಗ ತುಸುವೂ ಬೇಸರಿಸದೆ ಸರಿಯಾದ
> ಉತ್ತರವನ್ನು ಹೇಳುತ್ತಿದ್ದರಂತೆ. ಬೈದವನೂ ಖುಷ್, ಬೈಸಿಕೊಂಡವನೂ ಖುಷ್. ಶಾಲಾ ಮಕ್ಕಳಿರಲಿ,
> ಪೊಲೀಸ್ ಅಧಿಕಾರಿಯಿರಲಿ, ತೀರ ಅವಮಾನದ ಸಂದರ್ಭದಲ್ಲಿ ಹೇಗೆ ತಮ್ಮನ್ನು ತಾವೇ ನಿಭಾಯಿಸಬೇಕು
> ಎಂಬ ಬಗ್ಗೆ ಪಠ್ಯಗಳಲ್ಲಿ, ಸೇವಾ ನಿಯಮಗಳಲ್ಲಿ ಸೂಕ್ತ ಮನೋವೈಜ್ಞಾನಿಕ ಸೂತ್ರಗಳನ್ನು
> ಅಳವಡಿಸಬೇಕು. ಅಳವಡಿಸಬೇಕೆಂದು ಮೇಲಿನವರಿಗೆ ಸಲಹೆ ಕೊಡುವವರು ಕೂಡ ಎಂಥ ಬೈಗುಳವನ್ನೂ
> ಅವಮಾನವನ್ನೂ ಸಹಿಸಲು ಸಮರ್ಥರೇ ಆಗಿರಬೇಕು.
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to