Harish sir you are doing very good job. Very enthusiastic and admirable work .Please keep it up. Thank you a lot 🙏👍🙏🙏
# ಶಿವಪ್ರಸನ್ನ.ಕೆ.ವಿ. *7411174354, 7411174356 ಬಾಲಕಿಯರ ಸ.ಪ.ಪೂ.ಕಾಲೇಜು-ವಿಭಜಿತ. ಹಾಸನ. 2017-09-29 2:34 GMT+05:30 Hareeshkumar K <[email protected]>: > http://m.vijaykarnataka.com/edit-oped/columns/sudhindra- > haldodderi/articleshow/60834818.cms > ನೆಟ್ ನೋಟ: ಪ್ರಳಯದ ಸುದ್ದಿಯೆಂಬ ಠುಸ್ ಪಟಾಕಿ > Updated Sep 27, 2017, 04:00 AM IST > AAA > [image: ನೆಟ್ ನೋಟ: ಪ್ರಳಯದ ಸುದ್ದಿಯೆಂಬ ಠುಸ್ ಪಟಾಕಿ] > > - > - > - > - > - > - > > ** ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ* > > ''ಎಲ್ಲಾ ಬೋಗಸ್ ಅಂತೀರಲ್ಲಾ, ಇದಕ್ಕೇನು ಹೇಳ್ತೀರಿ?,'' ಎಂದು ಭಾನುವಾರ ಪತ್ರಕರ್ತ > ಮಿತ್ರರೊಬ್ಬರು ಪತ್ರದ ಪ್ರತಿಯೊಂದನ್ನು ನನ್ನ ಮೊಬೈಲಿಗೆ ಕಳುಹಿಸಿದ್ದರು. ಪಾರಮಾನಸ > ವಿಜ್ಞಾನದಿಂದ ಭೂಮಿ ಹಾಗೂ ಬಾಹ್ಯಾಕಾಶವನ್ನು ಅಳೆಯುವ ಸಂಶೋಧನಾ ಸಂಸ್ಥೆಯೊಂದರ ನಿರ್ದೇಶಕರು > ಪ್ರಧಾನಮಂತ್ರಿಗಳಿಗೆ ಬರೆದ ಪತ್ರವದು. ಕಳೆದ ಆಗಸ್ಟ್ 20ರಂದು ಈ ಸಂಸ್ಥೆಯು ಪಾರಮಾನಸಿಕ > ಜ್ಞಾನದಿಂದ ಗ್ರಹಿಸಿದ ಮಾಹಿತಿಯ ಪ್ರಕಾರ ಇದೇ ವರ್ಷದ ಡಿಸೆಂಬರ್ 31ರಂದು ಹಿಂದೂ ಮಹಾಸಾಗರದ > ತಳದಲ್ಲಿ ಭಾರಿ ಭೂಕಂಪನವಾಗಲಿದೆ! ಭಾರತ, ಚೀನಾ, ಪಾಕಿಸ್ತಾನ, ಜಪಾನ್ ಸೇರಿದಂತೆ ಏಷಿಯಾ > ಖಂಡದ ಹನ್ನೊಂದು ರಾಷ್ಟ್ರದ ಭೂಪಟವನ್ನೇ ಬದಲಾಯಿಸಬಲ್ಲಷ್ಟು ಶಕ್ತಿ ಅದರಿಂದ > ಬಿಡುಗಡೆಯಾಗಲಿದೆ. ಸುಮಾರು 120ರಿಂದ 180 ಕಿಲೋಮೀಟರ್‌ನಷ್ಟು (ಅಗಲವೊ, ಎತ್ತರವೊ, ಉದ್ದವೋ > ಗೊತ್ತಿಲ್ಲ ? ) 'ಸೀಶ್ಮಾ' ಎಂಬ ಹೆಸರಿನ ಪ್ರಭಾವಶಾಲಿ ನೀರಿನಲೆ ಮಹಾಸಾಗರದ ತೀರವನ್ನು > ಅಪ್ಪಳಿಸಲಿದೆ. ಜತೆಗೆ ಇಡೀ ತೀರ ಪ್ರದೇಶದಲ್ಲಿ ಸುನಾಮಿಯೂ ಬಂದೆರಗಬಹುದು. ಸುನಾಮಿ > ಮುನ್ಸೂಚಕಗಳು, ಹವಾಮಾನ ರೇಡಾರ್‌ಗಳು, ಭೂಪರಿವೀಕ್ಷ ಣಾ ಉಪಗ್ರಹಗಳು, ಅಗಾಧ ಶಕ್ತಿಯ > ಸೂಪರ್ ಕಂಪ್ಯೂಟರುಗಳು ಕಂಡುಹಿಡಿಯಲಾಗದ ವಿದ್ಯಮಾನವನ್ನು ಕೇರಳದ ತಿರುವನಂತಪುರದ > ಲೆಟರ್‌ಹೆಡ್ 'ಸಂಶೋಧನಾ(?)' ಸಂಸ್ಥೆಯೊಂದು ಪತ್ತೆಹಚ್ಚಿದೆ. ಈ ಕುರಿತಂತೆ ಸಂಸ್ಥೆಯು ಬರೆದ > ಪತ್ರ ಪ್ರಧಾನಮಂತ್ರಿಯವರನ್ನು ಮುಟ್ಟುವ ಮೊದಲೇ ಫೇಸ್‌ಬುಕ್ ಮೆಸೆಂಜರ್, ವಾಟ್ಸ್ > ಆ್ಯಪ್, ಟ್ವಿಟರ್ ಸೋಶಿಯಲ್ ಮೀಡಿಯಾಗಳ ಮೂಲಕ ಜಗಜ್ಜಾಹೀರಾಗಿದೆ. ಪ್ರಸಾರದ > ತುರ್ತಿನಲ್ಲಿರುವವರು ಕೇವಲ ಜನಸಾಮಾನ್ಯರಷ್ಟೇ ಅಲ್ಲ. ವಿಜ್ಞಾನ-ತಂತ್ರಜ್ಞಾನವನ್ನು (ಒಂದು > ಕಾಲದಲ್ಲಿ) ಅರೆದು ಕುಡಿದ ಮಹಾ ಮಹಿಮರಿದ್ದಾರೆ. ಈ ಹಿಂದೆ ನನ್ನೊಟ್ಟಿಗೆ ಐ.ಐ.ಟಿ.ಯಲ್ಲಿ > ಎಂಜಿನಿಯರಿಂಗ್ ಕಲಿತವರು ಇದೇ ಪತ್ರದ ಪ್ರತಿಯೊಂದನ್ನು ನನಗೆ ಕಳುಹಿಸಿದ್ದಾರೆ. > ಡಿ.ಆರ್.ಡಿ.ಓ.ದಲ್ಲಿ ನನ್ನ ಸಹೋದ್ಯೋಗಿ ಆಗಿದ್ದವರೂ ಅದನ್ನು ನನ್ನೊಂದಿಗೆ > ಹಂಚಿಕೊಂಡಿದ್ದಾರೆ. > > ಇನ್ನೇನು ಕಳೆದ ಶನಿವಾರ ಪ್ರಳಯ ಆಗಿಯೇ ಬಿಡುತ್ತದೆ ಎಂದು ಕಾದಿದ್ದ ವಿಘ್ನಸಂತೋಷಿಗಳಿಗೆ > ನಿರಾಶೆಯಾಗಿದೆ. ಅದಕ್ಕೆಂದೇ ಜನರನ್ನು ಒಂದಷ್ಟು ಕಾಲ ಚಟುವಟಿಕೆಯಿಂದಿಟ್ಟಿರಲು ಡಿಸೆಂಬರ್ > 31ರ ಹೊಸ ಪ್ರಳಯದ ಪಾರಮಾನಸಿಕ ಜ್ಞಾನವನ್ನು ಹಬ್ಬಿಸುತ್ತಿದ್ದಾರೆ. ಅಮೆರಿಕದಲ್ಲಿ ಖಗ್ರಾಸ > ಸೂರ್ಯಗ್ರಹಣವಾದ ಮೂವತ್ಮೂರು ದಿನಗಳೊಳಗೆ 'ನಿಬಿರು' ಕ್ಷುದ್ರಗ್ರಹ ಅಥವಾ 'ಪ್ಲಾನೆಟ್ > ಎಕ್ಸ್' ಗ್ರಹ ಭೂಮಿಗೆ ಬಂದಪ್ಪಳಿಸಬಹುದು ಎಂದು ಬೂಸಿ ಬಿಟ್ಟಿದ್ದ ಪ್ರಳಯಾಂತಕನೊಬ್ಬ, ಇದೀಗ > ಮುಳುಗಡೆಗೆ ಹೊಸ ದಿನಾಂಕವೊಂದನ್ನು (ಅಕ್ಟೋಬರ್ 21) ನಿಗದಿ ಮಾಡಿದ್ದಾನೆ. ಅಂದು > ಆರಂಭವಾಗುವ (ಮಹಾ)ಯುದ್ಧ ಸತತವಾಗಿ ಏಳು ವರ್ಷಗಳ ಕಾಲ ನಡೆದು, ಇಡೀ ಜಗತ್ತೇ ಅನಾಹುತದತ್ತ > ಜಾರುತ್ತದೆಂದಿದ್ದಾನೆ. ಬೈಬಲ್ ಗ್ರಂಥದಲ್ಲಿ ಈ ಬಗ್ಗೆ ಎಲ್ಲ ಉಲ್ಲೇಖಗಳಿವೆ ಎಂದೂ ಬೊಗಳೆ > ಬಿಟ್ಟಿದ್ದಾನೆ. > > ಈ ಬಗೆಯ ಸುದ್ದಿಗಳಿಗೆ ಸದಾ ಹಾತೊರೆಯುವ ನಮ್ಮ 24 -7 ಕನ್ನಡ ಸುದ್ದಿ ಟೀವಿ ಚಾನೆಲ್‌ಗಳು > 'ಜಗತ್ತು ಉಳಿಯತ್ತಾ?', 'ಮುಂದಿನ ಪ್ರಳಯಕ್ಕೆ ನಾವೂ ನೀವಾ ಆಗ್ತೀವಾ ಸಾಕ್ಷಿ?', 'ಗಡಗಡ > ನಡುಗುತ್ತಿರುವ ನಾಸಾ ವಿಜ್ಞಾನಿಗಳು ಇಷ್ಟು ದಿನ ಸುಮ್ಮನಿದ್ದದ್ದೇಕೆ?' ಎಂದು > ಬೊಬ್ಬಿರಿಯುತ್ತಿವೆ. ಹೆಂಗಳೆಯರ ಕಣ್ಣುಗಳಲ್ಲಿ ಧಾರಾಕಾರ ಕಣ್ಣೀರು ಸುರಿಸುವ > ಧಾರಾವಾಹಿಗಳನ್ನೇ ಬಂಡವಾಳ ಮಾಡಿಕೊಂಡಿರುವ ಮನರಂಜನಾ (?) ಟೀವಿ ಚಾನೆಲ್‌ಗಳಿಗೆ ಪೈಪೋಟಿ > ನೀಡಲು ಸುದ್ದಿ ಚಾನೆಲ್‌ಗಳು 'ಭೀತಿ'ಯನ್ನೇ ಒಂದು 'ವಾಣಿಜ್ಯ ಸರಕನ್ನಾಗಿ'ಸಿಕೊಂಡಿವೆ. > ಯಾವುದೋ ದೇಶದಲ್ಲಿ ಹಿಡಿಯುವ ಪಾಶ್ರ್ವ ಗ್ರಹಣಗಳಿಂದ ಹಿಡಿದು ಮಂಗಳವಾರದಂದೇ ಬಂದ ಸಂಕಷ್ಟ ಹರ > ಚತುರ್ಥಿಯ ಫಲಾಫಲಗಳನ್ನು ಪೈಪೋಟಿಗೆ ಬಿದ್ದು ಬಿತ್ತರಿಸುತ್ತವೆ. ಈ ಪ್ರಸಂಗಗಳನ್ನು > ವಿಶೇಷವಾಗಿ ಪ್ರಸ್ತಾಪಿಸುವುದಕ್ಕೆ ಕಾರಣಗಳಿವೆ. ಜಗತ್ತಿನ ನಾಲ್ಕೈದು ಪ್ರಮುಖ ರಾಷ್ಟ್ರಗಳ > ಸಾಲಿನಲ್ಲಿ ದೇಶವನ್ನು ತಂದು ನಿಲ್ಲಿಸಿರುವ ಬಾಹ್ಯಾಕಾಶ ತಂತ್ರಜ್ಞಾನ - ಅದು > ತಂದುಕೊಟ್ಟಿರುವ ಮೊಬೈಲ್ ಫೋನು, ಬಹುಚಾನೆಲ್‌ಗಳ ಟೀವಿ ಹಾಗೂ ಇಂಟರ್‌ನೆಟ್ ? ಇವುಗಳ > ಮೂಲಕ ಜನ್ಮಾಂತರದ ಮೌಢ್ಯವನ್ನು, ಪ್ರಳಯಾಂತಕ ಭವಿಷ್ಯವನ್ನು ಹಾಗೂ ಲೈಂಗಿಕ ಕ್ರೌರ್ಯದ > ಮನರಂಜನೆಯನ್ನು ಕ್ಷ ಣಾರ್ಧದಲ್ಲಿ ಸುಲಭವಾಗಿ ಪಸರಿಸಲು ಇಂದು ಸುಲಭ ಸಾಧ್ಯವಾಗಿದೆ. ಯಾವ ಯಾವ > ಗ್ರಹಗಳು ನಿಮಗೆ ಯಾವ ಅವಧಿಯಲ್ಲಿ ಕಾಟ ಕೊಡಲು ಸಿದ್ಧವಾಗಿವೆಯೆಂದು ಇಂಗ್ಲಿಷ್ ವರ್ಷದ > ಆರಂಭ, ಸಂಕ್ರಾಂತಿ, ಯುಗಾದಿ ಹಾಗೂ ದೀವಳಿಗೆಯ ವಿಶೇಷ ದಿನಗಳಂದು ಫರ್ಮಾನುಗಳು > ಹೊರಬೀಳುತ್ತವೆ. ಇನ್ನು ಸಂಖ್ಯಾ ಶಾಸ್ತ್ರಜ್ಞರ ಕಲ್ಪನೆಗಳಿಗೆ ಲೆಕ್ಕವೇ ಇಲ್ಲ. ಹುಟ್ಟಿದ > ದಿನ, ತಿಂಗಳು, ವರ್ಷಗಳನ್ನು ಕೂಡಿ ಬಂದ ಉತ್ತರದ ಸಂಖ್ಯೆಯನ್ನು ಒಂದಕ್ಕೊಂದು ಕೂಡಿ ನಿಮ್ಮ > ಅದೃಷ್ಟ ಸಂಖ್ಯೆಗೆ ಅದು ತಾಳೆಯಾಗುತ್ತದೆಯೇ ಎಂದು ಪರಿಶೀಲಿಸುತ್ತಾರೆ. ಇನ್ನೂ ಒಂದು ಹೆಜ್ಜೆ > ಮುಂದೆ ಹೋದವರು ಇಂಗ್ಲಿಷ್ ವರ್ಣಮಾಲೆಯಲ್ಲಿ ನಿಮ್ಮ ಹೆಸರಿನ ಅಕ್ಷ ರಗಳು ಯಾವ > ಅನುಕ್ರಮದಲ್ಲಿ ಬರುತ್ತದೆಯೋ ಅದಕ್ಕೊಂದು ಸಂಖ್ಯೆ ನೀಡಿ, ಅವುಗಳೆಲ್ಲವನ್ನೂ ಕೂಡಿ, ಮತ್ತೆ > ಕೂಡಿ ಮ್ಯಾಜಿಕ್ ಸಂಖ್ಯೆಯೊಂದನ್ನು ನಿಮಗೆ ಲಗತ್ತಿಸಿ ಅದು ನಿಮ್ಮ ರಾಶಿ-ನಕ್ಷ ತ್ರಕ್ಕೆ > ಸರಿ ಹೊಂದುವುದೋ ಇಲ್ಲವೋ ಎಂದು ತನಿಖೆ ಮಾಡಿಕೊಡುತ್ತಾರೆ. ಎಲೆಕ್ಷ ನ್ ಹತ್ತಿರ ಬಂದರೆ > ಯಡ್ಯೂರಪ್ಪ, ಈಶ್ವರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ, ಆಂಜನೇಯ, ಪರಮೇಶ್ವರ್, > ಡಿ.ಕೆ.ಶಿವಕುಮಾರ್ ಅವರ ಹುಟ್ಟಿದ ದಿನಾಂಕಗಳ ಜೊತೆಗೆ ಅವರ ಜನ್ಮರಾಶಿಯನ್ನು ಸ್ವಯಂಘೋಷಿತ > ಲೆಕ್ಕಾಚಾರಶಾಸ್ತ್ರಜ್ಞರಿಗೆ ಕೊಟ್ಟು, ಯಾರಿಗೆ 'ರಾಜ ಯೋಗ'ವಿದೆ, ಮತ್ಯಾರಿಗೆ 'ಅಮರ > ಯೋಗ'ವಿದೆ ಎಂಬುದನ್ನು ತಿಳಿಸಿ ವೀಕ್ಷ ಕರನ್ನು 'ಮಂಗ' ಮಾಡುತ್ತಾರೆ. ಬ್ರಹ್ಮಾಂಡವನ್ನೇ > ಅರಗಿಸಿಕೊಂಡ ಕಂಟಕರಂತೂ 'ಚೂಡೀದಾರ್ ಹಾಕ್ಕೊಂಡ್ರೆ ಸೆರ್ವಿಕಲ್ ಕ್ಯಾನ್ಸರ್ ಬರೋದು > ಗ್ಯಾರಂಟಿ' ಎಂದು ಘಂಟಾಘೋಷವಾಗಿ ನಿಮ್ಮ ಮಿದುಳನ್ನು ಕಲಿಸಿಹಾಕಿಬಿಡ್ತಾರೆ. ಉಳಿದಂತೆ > ಫುಟ್‌ಪಾತ್‌ನಲ್ಲಿ ಕವಡೆ ಹಾಕುತ್ತಿದ್ದವರೂ 'ಲ್ಯಾಪ್‌ಟಾಪ್ ಕಂಪ್ಯೂಟರ್' > ಮುಂದಿಟ್ಟುಕೊಂಡು, ನೀವು ಪ್ರಶ್ನೆ ಕೇಳಿದ ಸಮಯ, ನಿಮ್ಮ ಹುಟ್ಟಿದ ದಿನಾಂಕ, ಊರಿನ > ಅಕ್ಷಾಂಶ-ರೇಖಾಂಶ ಎಲ್ಲಾ ಕಲಸು ಮೇಲೋಗರಕ್ಕೆ ಒಂದು ವ್ಯಾಖ್ಯಾನ ನೀಡಿ, ಯಾವ ರತ್ನದ > ಉಂಗುರವನ್ನು, ಯಾವ ಬೆರಳಿಗೆ ಹಾಕಿಕೊಂಡು, ಯಾರ ಜಪ ಮಾಡಿದರೆ ನಿಮಗೆ ಉದ್ಯೋಗ, ವಿವಾಹ, > ಮಕ್ಕಳು, ಮನೆ ಭಾಗ್ಯ, ರೋಗ ನಿವಾರಣೆಯಾಗುತ್ತವೆಯೆಂಬ ಸುಲಭ ಪರಿಹಾರಗಳನ್ನು ನೀಡುವ > ಪಂಡಿತರಂತೆ ಪೋಸು ಕೊಡುತ್ತಾರೆ. ಬೇಕಿದ್ದರೆ ಯಾವ ಅಂಗಡಿಯಲ್ಲಿ ಯಾವ ಉಂಗುರ ಖರೀದಿಸುವುದು > ಉತ್ತಮ ಎಂಬ ಕನ್ಸಲ್ಟೇಶನ್ ನೀಡುತ್ತಾರೆ. > > ಅದ್ಯಾವ ಗಳಿಗೆಯಲ್ಲಿ ಈ 'ವಾಟ್ಸಪ್' ಅನ್ನೋ ಸೌಲಭ್ಯ ಬಂತೋ, ದುರದೃಷ್ಟದ ದಿನಗಳು > ನಮ್ಮನ್ನು ಸತತವಾಗಿ ಕಾಡುತ್ತಿವೆ. ಪುಕ್ಕಟೆ ಎಸ್ಸೆಮ್ಮೆಸ್‌ಗಳ ಮೂಲಕ ಹಳಸಲು ಜೋಕುಗಳ > ಚಿತ್ರಾನ್ನ ಬಡಿಸುತ್ತಿದ್ದವರೆಲ್ಲರೂ ಜಾಗೃತಗೊಂಡಿದ್ದಾರೆ. ದಿನಕ್ಕೊಂದು ಗೀಗಾಬೈಟ್ > ಇಂಟರ್‌ನೆಟ್ ಸೌಲಭ್ಯವನ್ನು 'ಜಿಯೋ' ಕಂಪನಿ ಕೊಟ್ಟ ಮೇಲಂತೂ ವೀಡಿಯೋ ಹಾವಳಿ ಹೆಚ್ಚಾಗಿದೆ. > 'ಬಿ.ಬಿ.ಸಿ. ವರದಿ ಮಾಡಿದೆ. ನಾಸಾ ವೆಬ್‌ಸೈಟಲ್ಲಿ ಬೇಕಿದ್ರೆ ನೋಡಿ. ಇಂಥ ಗ್ರಹದಿಂದ ಹೊರಟ > ವಿಕಿರಣ ಇಷ್ಟು ಹೊತ್ತಿಗೆ ಭೂಮಿಯನ್ನು ಅಪ್ಪಳಿಸುತ್ತದೆ. ಮಕ್ಕಳನ್ನು ಆಚೆ ಕಳುಹಿಸಬೇಡಿ' > ಎಂಬ ಸುಳ್ಳು ಸಂದೇಶ ಒಬ್ಬರ ಮೊಬೈಲ್ ಫೋನಿಗೆ ಬಂದರೆ ಸಾಕು. ಅದನ್ನು ಪೂರ್ತಿ ಓದದೆಯೇ > ನೂರು ಜನರಿಗೆ ನೂರಕ್ಕೂ ಕಡಿಮೆ ನಿಮಿಷದಲ್ಲಿ ರವಾನಿಸಲು ಹೊರಡುತ್ತಾರೆ, 'ರೇಡಿಯೇಶನ್' > ಹಾಗೆಲ್ಲಾ ಇಷ್ಟು ದೂರ ಬರೋಕ್ಕೆ ಸಾಧ್ಯವಿಲ್ಲವೆಂದು ವಿಜ್ಞಾನ ತಿಳಿದ ಎಂಜಿನಿಯರಿಂಗ್ > ವಿದ್ಯಾರ್ಥಿಗಳು. ದೊಡ್ಡ, ದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗ ಮಾಡೋ > ಬ್ರಿಲಿಯಂಟ್ ಜನರೂ 'ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಿಸಿಕೊಂಡ ಎರಡು ತಲೆಯ ಹಾವಿನ ಬೋಗಸ್ > ಡಿಜಿಟಲ್ ಚಿತ್ರವನ್ನು' ಹತ್ತು ಜನರಿಗೆ ರವಾನಿಸಿ 'ಸರ್ಪ ಸಂಸ್ಕಾರ ದೋಷ'ವನ್ನು > ಪರಿಹರಿಸಿಕೊಂಡು ಬಿಡುತ್ತಾರೆ. ಪ್ರತಿಯಾಗಿ ಅವರ ಮಿತ್ರರು 'ಕಣ್ಣು ಮಿಟುಕಿಸುವ ಶಿರಡಿ > ಸಾಯಿಬಾಬ ಚಿತ್ರ', 'ಗಣೇಶ್‌ಜಿ, ಹನುಮಾನ್‌ಜಿ'ಗಳ ಚಿತ್ರ, ಸಹಸ್ರನಾಮ, ಪುಣ್ಯಕತೆ, ಹರಿಕತೆ, > ಉಪಕತೆಗಳನ್ನು ಕ್ಷ ಣಾರ್ಧದಲ್ಲಿಯೇ ಹಂಚುತ್ತಾ ಹೊರಡುತ್ತಾರೆ. ಉಳಿದಂತೆ, 'ಇದು > ಮೈಕ್ರೋಸಾಫ್ಟು, ಹಾಟ್‌ಮೇಯ್ಲ್, ಯಾಹೂ, ಜೀಮೇಯ್ಲ್ ... ಕಂಪನಿಗಳು ನಡೆಸುತ್ತಿರುವ > ಸಮೀಕ್ಷೆ. ಇದರಲ್ಲಿ ಭಾಗಿಯಾಗೋ ಪ್ರತಿ ಸಾವಿರದ ವ್ಯಕ್ತಿಗೆ ಒಂದು ಲ್ಯಾಪ್‌ಟಾಪ್ > ಕಂಪ್ಯೂಟರ್ ಇಲ್ಲವೆ ಸ್ಮಾರ್ಟ್ ಫೋನ್ ಕೊಡುಗೆಯಾಗಿ ಬರತ್ತೆ. ಮೇಯ್ಲ್ ಅನ್ನು ಮರು > ರವಾನಿಸಿ' ಅನ್ನೋ ಪತ್ರ ಇ-ಮೇಲ್ ಖಾತೆಗೆ ಬಂದೊಡನೆಯೆ ಉನ್ನತ, ಮಹೋನ್ನತ, ಅತ್ಯುನ್ನತ > ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಕಂಪನಿಗಳ 'ವಿಜ್ಞಾನ ಕಲಿತವರು' ಚಕಚಕನೆ ಪರಿಚಿತ > ನೂರು ಜನರಿಗೆ ಫಾರ್‌ವರ್ಡ್ ಮಾಡುತ್ತಾರೆ. ಥೇಟ್, 'ಸಂಗವ್ವಕ್ಕನ ಮುದ್ದಿನ ಸೊಸಿ, ಬಸಿರಾದ > ಸುದ್ದಿ'ಯ ರೀತಿ ಕಾಳಗಿಚ್ಚಿನಂತೆ ಅದು ಊರ ತುಂಬೆಲ್ಲಾ ಹಬ್ಬುತ್ತದೆ. > > ನಮ್ಮ ಸಾಧನೆ, ಕೇವಲ ವಿಜ್ಞಾನ ಕಲಿಯುವುದಷ್ಟೇ ಅಲ್ಲ, ಉತ್ತಮ ಅಂಕಗಳನ್ನು ಪಡೆದು, ಉನ್ನತ > ಪದವಿಗಳನ್ನು ಗಳಿಸಿ, ಪರಮೋಚ್ಛ ಉದ್ಯೋಗ ಹಿಡಿಯುವುದಷ್ಟೇ ಅಲ್ಲ, ಅವೆಲ್ಲವನ್ನೂ ಮೀರಿ > ಸಮುದಾಯದ ಪ್ರಗತಿಯತ್ತ ಸಾಗಬೇಕು. ಬುರುಡೆ ಸಂಗತಿಗಳನ್ನು ಯಾವ ವಿವೇಚನೆಯೂ ಇಲ್ಲದೆ > ಹಂಚುತ್ತಾ ಹೋಗುವ ಚಟವನ್ನು ಬಿಡಬೇಕು. ನಮ್ಮ ಸಂಪರ್ಕ ಸೌಕರ್ಯವು ವಿಜ್ಞಾನ ಕಲಿಯಲು, ಅರಿಯಲು > ಅವಕಾಶವಿರದವರನ್ನು ಜಾಗೃತಗೊಳಿಸುವಂತಾಗಬೇಕು. ಪ್ರಳಯವಾಗುವುದು ದಿಟವೇ ಆದಲ್ಲಿ, ಅದನ್ನು > ತಪ್ಪಿಸುವುದು ನಿಮ್ಮ ಟೀವಿ ಚಾನೆಲ್‌ಗಳ ಸ್ವಯಂಘೋಷಿತ ಗುರುಗಳೂ ಸೇರಿದಂತೆ ಯಾರಿಗೂ > ಸಾಧ್ಯವಿಲ್ಲ. ಇಂತದೊಂದು ಎಚ್ಚರಿಕೆಯಿಂದ ನಮಗೆ ಬಂದ ಮಾಹಿತಿಯನ್ನು ಹಂಚಿಕೊಳ್ಳುವುದು ಲೇಸು. > ಮೌಢ್ಯಬಿತ್ತುವ ಟೀವಿ ಕಾರ್ಯಕ್ರಮಗಳು ಯಾವುದೇ ಸಮಯದಲ್ಲಿ ಬಿತ್ತರವಾದರೂ ಚಕ್ಕೆಂದು ಆರಿಸಿ, > ಮನೆಮಂದಿಯನ್ನು, ವಿಶೇಷವಾಗಿ ಮಕ್ಕಳನ್ನು ಬೇರೆ ಉಪಯುಕ್ತ ಕಾರ್ಯಕ್ರಮಗಳತ್ತ ಗಮನ ಹರಿಸುವಂತೆ > ಮಾಡಿ. > Hareeshkumar K > GHS Huskuru > Malavalli TQ > Mandya Dt > 9880328224 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
